ಡಿಕೆಶಿಗೆ ಹಿನ್ನಡೆ – ರಾಮನಗರ ಜಿಲ್ಲೆ ಹೆಸರು ಶಿಫಾರಸ್ಸು ತಿರಸ್ಕರಿಸಿದ ಕೇಂದ್ರ
* ಬೆಂಗಳೂರು ದಕ್ಷಿಣ ಎಂದು ಮರುನಾಮಕರಣಕ್ಕೆ ಶಿಫಾರಸ್ಸು
* ಪ್ರಸ್ತಾವನೆ ತಿರಸ್ಕರಿಸಿದ್ದು ಒಳ್ಳೆಯದ್ದು – ಅಶ್ವಥ್ ನಾರಾಯಣ್
NAMMUR EXPRESS NEWS
ಬೆಂಗಳೂರು: ಡಿ.ಸಿ.ಎಂ ಡಿ.ಕೆ ಶಿವಕುಮಾರ್ ಅವರಿಗೆ ಹಿನ್ನಡೆಯಾಗಿದೆ. ರಾಮನಗರ ಜಿಲ್ಲೆಯ ಹೆಸರನ್ನ ಬದಲಾವಣೆ ಮಾಡಿ ಬೆಂಗಳೂರು ದಕ್ಷಿಣ ಎಂದು ಹೆಸರಿಡಲು ಮುಂದಾಗಿದ್ರು, ಅಲ್ಲೇ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಹ ಸಲ್ಲಿಸಲಾಗಿತ್ತು. ಆದ್ರೆ ಕೇಂದ್ರ ಸರ್ಕಾರ ಈ ಪ್ರಸ್ತಾವನೆಯನ್ನ ತಿರಸ್ಕರಿಸಿದೆ. ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಶಾಸಕ ಅಶ್ವಥ್ ನಾರಾಯಣ್, ರಾಮನಗರ ಹೆಸರು ಬದಲಾವಣೆಯ ಶಿಫಾರಸ್ಸು ತಿರಸ್ಕರಿಸಿದ್ದು ಒಳ್ಳೆಯ ಸುದ್ದಿ. ರಾಮನಗರ ಜಿಲ್ಲೆ ರಾಮನಗರವಾಗಿಯೇ ಉಳಿಯಬೇಕು. ಕೆಲವರು, ರಿಯಲ್ ಎಸ್ಟೇಟ್ ಹೆಸರಲ್ಲಿ ಮಾರಾಟ ಮಾಡಬೇಕು. ಅನ್ನೋದು ದುರುದ್ದೇಶ ಹೊಂದಿದ್ದರು. ಮೂಲಭೂತ ಸೌಕರ್ಯ ಆದ್ಯತೆ ನೀಡದೆ ಹೆಸರು ಬದಲಾಯಿಸಲು ಹೊರಟಿದ್ದರು. ಸರ್ಕಾರ ವ್ಯಾಪಾರ ದೃಷ್ಟಿಯಿಂದ ಹೆಸರು ಬದಲಾವಣೆ ಮಾಡೋದಕ್ಕೆ ಹೊರಟಿದೆ. ಇದು ರಾಮನಗರ ಜಿಲ್ಲೆಗೆ ಮಾಡಿದ ಅವಮಾನ. ನಮ್ಮ ಇಚ್ಛೆ ರಾಮನಗರ ಜಿಲ್ಲೆ ರಾಮನಗರವಾಗಿಯೇ ಇರಬೇಕು ಅನ್ನೋದು ಎಂದು ತಿಳಿಸಿದರು.