ಡಾ.ಆರತಿ ಕೃಷ್ಣ ಅವರಿಗೆ ವಿಶೇಷ ಗೌರವ
– ವಿಶ್ವ ಒಕ್ಕಲಿಗರ ವೀರ ವನಿತೆ ರತ್ನ ಪ್ರಶಸ್ತಿ ಪ್ರದಾನ
– ಕಾಂಗ್ರೆಸ್ ಪ್ರಚಾರ ಸಮಿತಿಗೆ ಕಿಮ್ಮನೆ, ಮುರೊಳ್ಳಿ
NAMMUR EXPRESS NEWS
ಬೆಂಗಳೂರು: ದುಬೈ ಒಕ್ಕಲಿಗರ ಸಂಘದಿಂದ ಅನಿವಾಸಿ ಭಾರತೀಯ ಸಮಿತಿ ಉಪಾಧ್ಯಕ್ಷರಾದ ಡಾ ಆರತಿ ಕೃಷ್ಣರವರಿಗೆ ವಿಶ್ವ ಒಕ್ಕಲಿಗರ ವೀರ ವನಿತೆ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಶ್ರೀ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಸಚಿವ ಚೆಲುವರಾಯಸ್ವಾಮಿ, ಇಸ್ರೋ ಮಾಜಿ ಅಧ್ಯಕ್ಷ ಎಸ್ ಸೋಮನಾಥ್, ದುಬೈ ಒಕ್ಕಲಿಗರ ಸಂಘದ ಅಧ್ಯಕ್ಷೆ ಡಾ ರಶ್ಮಿ ನಂದಕಿಶೋರ್, ಒಕ್ಕಲಿಗರ ಡೈರೆಕ್ಟರಿ ಟ್ರಸ್ಟ್‌ನ ಕೆ ಟಿ ಚಂದ್ರು ಉಪಸ್ಥಿತರಿದ್ದರು.
ಕಾಂಗ್ರೆಸ್ ಪ್ರಚಾರ ಸಮಿತಿಗೆ ಕಿಮ್ಮನೆ, ಮುರೊಳ್ಳಿ
– ಕಿಮ್ಮನೆ ಅವರಿಗೆ ಉಪಾಧ್ಯಕ್ಷ ಸ್ಥಾನ, ಸಂಯೋಜಕರಾಗಿ ಮುರೊಳ್ಳಿ
ಆಲ್ ಇಂಡಿಯಾ ಕಾಂಗ್ರೆಸ್ ಕಮಿಟಿ ಕರ್ನಾಟಕ ಕಾಂಗ್ರೆಸ್ ಪ್ರಚಾರ ಸಮಿತಿಯನ್ನು ಘೋಷಣೆ ಮಾಡಿದೆ. ಈ ಸಮಿತಿಯಲ್ಲಿ ಸಹ ಅಧ್ಯಕ್ಷರಾಗಿ ಎಲ್ ಹನುಮಂತಯ್ಯ ಆಯ್ಕೆ ಆಗಿದ್ದಾರೆ. ಉಪಾಧ್ಯಕ್ಷರಾಗಿ ರಾಣಿ ಸತೀಶ್, ಕಿಮ್ಮನೆ ರತ್ನಾಕರ್, ಜೆ ಆರ್ ಲೋಬೋ, ಎಂ ಶಿವಣ್ಣ, ಜಲಜಾ ನಾಯಕ್, ವೀಣಾ ಅಚ್ಚಯ್ಯ, ಜೆ.ಡಿ ನಾಯಕ್, ಜಿ ಮಂಜುನಾಥ್, ಭೀಮಣ್ಣ ಮೇಟಿ, ಅಬ್ದುಲ್ ಮುನೀರ್ ಆಯ್ಕೆ ಆಗಿದ್ದು,
ಮುಖ್ಯ ಸಂಯೋಜಕರಾಗಿ ಪ್ರಕಾಶ್ ಕೆ ರಾಥೋಡ್ ಮಾಜಿ ವಿಧಾನ ಪರಿಷತ್ ಸದಸ್ಯರು, ಸಿ.ಎಸ್ ದ್ವಾರಕಾನಾಥ್, ಸುಧೀರ್ ಮುರೋಳ್ಳಿ, ಪ್ರಸಾದ್ ಬಾಬು, ಕೃಪಾ ಆಳ್ವಾ, ಆದರ್ಶ ಯಲ್ಲಪ್ಪ, ಎಸ್ ನಾರಾಯಣ್, ಯೋಗೀಶ್ವರಿ ವಿಜಯ್, ಜಾನ್ವಿ ಕಲ್ಗುಂಡಿ ಕೆ. ಪಿ, ಶರಣಪ್ಪ ಕೋಟಗಿ, ಶಂಭು ಶೆಟ್ಟಿ, ವಸಂತ್ ಲಾಡ್ವ ಇವರು ಆಯ್ಕೆಯಾಗಿದ್ದಾರೆ. ಮಲೆನಾಡ ಇಬ್ಬರಿಗೆ ರಾಜ್ಯ ಕಾಂಗ್ರೆಸ್ ಅಲ್ಲಿ ಮಹತ್ವದ ಹುದ್ದೆ ಸಿಕ್ಕಿದೆ. ಈ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಅಧಿಕೃತ ಪ್ರಕಟಣೆ ಹೊರಡಿಸಿದೆ.
