Categories
ಡೆಲ್ಲಿ

ಕಾಡಾನೆ ದಾಳಿ ಪ್ರಕರಣ: ಕೇಂದ್ರ ಸರ್ಕಾರ ಎಂಟ್ರಿ..?

ಕಾಡಾನೆ ದಾಳಿ ಪ್ರಕರಣ: ಕೇಂದ್ರ ಸರ್ಕಾರ ಎಂಟ್ರಿ..?
– ಮಲೆನಾಡ ಸಮಸ್ಯೆ ಬಗ್ಗೆ ಕೇಂದ್ರ ಸಚಿವರಿಗೆ ಸಂಸದ ಕೋಟಾ ಮನವಿ
* ಆನೆ ದೊಡ್ಡಿ ನಿರ್ಮಾಣಕ್ಕೆ ಕೇಂದ್ರ ಸಚಿವರಿಗೆ ಮನವಿ ಸಲ್ಲಿಸಿದ ಸಂಸದ
* ಮಾನವ ಪ್ರಾಣಿ ಸಂಘರ್ಷದಿಂದ ಜನ ಜೀವನಕ್ಕೆ ತೊಂದರೆ ಮನವರಿಕೆ

NAMMMUR EXPRESS NEWS
ದೆಹಲಿ: ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಅದರಲ್ಲೂ ಮಲೆನಾಡು ಭಾಗದಲ್ಲಿ ಹೆಚ್ಚಾಗಿರುವ ಕಾಡುಪ್ರಾಣಿಗಳ ಉಪಟಳ, ಕಾಡಾನೆ ದಾಳಿಯಿಂದ 5 ಜನ ಮೃತಪಟ್ಟ ಪ್ರಕರಣಗಳಿಗೆ ಸಂಬಂಧಿಸಿದಂತೆ ಉಡುಪಿ-ಚಿಕ್ಕಮಗಳೂರು ಸಂಸದ ಕೋಟಾ ಶ್ರೀನಿವಾಸ ಪೂಜಾರಿಯವರು ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವ ಭೂಪೇಂದ್ರ ಯಾದವ್‌ರವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ.
ಶೃಂಗೇರಿ ಹಾಗೂ ಮೂಡಿಗೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಇತ್ತೀಚಿಗೆ ಕಾಡಾನೆ ದಾಳಿಯಿಂದ 5 ಜನ ಬಲಿಯಾಗಿದ್ದು,ಕಳೆದೊಂದು ವಾರದಲ್ಲೇ ಬಾಳೆಹೊನ್ನೂರಿನಲ್ಲಿ ಅನಿತಾ ಮತ್ತು ಸುಬ್ಬೇಗೌಡ ಎಂಬ ಇಬ್ಬರು ಮೃತರಾಗಿದ್ದಾರೆ. ದಿನನಿತ್ಯ ಮಾನವ ಪ್ರಾಣಿ ಸಂಘರ್ಷದಿಂದ ಮಲೆನಾಡಿನಲ್ಲಿ ಜನಜೀವನಕ್ಕೆ ತೀವ್ರ ತೊಂದರೆಯಾಗಿದೆ. ಆನೆಗಳ ಸಂತತಿ ವೇಗವಾಗಿ ಬೆಳೆಯುತ್ತಿದ್ದು,ಕಾಡಾನೆಗಳು ರೈತಾಪಿ ವರ್ಗದ ಬೆಳೆ ಮಾತ್ರವಲ್ಲದೇ,ಕೃಷಿ ಕಾರ್ಯದಲ್ಲಿ ನಿರತರಾಗಿರುವ ಕಾರ್ಮಿಕರ ಮೇಲೆ ದಾಳಿ ಮಾಡಿ ಹತ್ಯೆ ಮಾಡುತ್ತಿವೆ.ಈ ಹಿನ್ನೆಲೆಯಲ್ಲಿ ಕಾಡುಪ್ರಾಣಿಗಳ ಹಾವಳಿ ಅದರಲ್ಲೂ ಕಾಡಾನೆ ದಾಳಿಯಿಂದ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಒಟ್ಟಾಗಿ ಇಂತಹ ಸಂಕಷ್ಟದ ಸಮಯದಲ್ಲಿ ಆನೆಗಳ ನಿಯಂತ್ರಣ ಹಾಗೂ ಆನೆ ದೊಡ್ಡಿಗಳ ನಿರ್ಮಾಣದ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಬೇಕು ಈ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿಯವರಿಗೆ ಸಲಹೆ ನೀಡಿ ಸೂಕ್ತ ವರದಿ ಪಡೆದು ಜಂಟಿ ಕಾರ್ಯ ಯೋಜನೆ ತಯಾರಿಸಿ ಕಾಡಾನೆಗಳ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಮನವಿಯಲ್ಲಿ ಉಲ್ಲೇಖಿಸಲಾಗಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.