Categories
ಸಿನಿಮಾ

ರಶ್ಮಿಕಾ ಮಂದಣ್ಣ ಹಣಕ್ಕೆ ಕನ್ನ ಹಾಕಿದ ಮ್ಯಾನೇಜರ್!

  • 80 ಲಕ್ಷ ಕದ್ದುಕೊಂಡು ನಾಪತ್ತೆ: ಏನಿದು ಘಟನೆ..?
  • ಕೆಲಸದಿಂದ ವಜಾ ಮಾಡಿ.. ರಶ್ಮಿಕಾ ಮಾಡಿದ್ದೇನು ಗೊತ್ತಾ?

ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಭಾರತೀಯ ಸಿನಿಮಾದಲ್ಲಿ ಈಗ ಬಹು ಬೇಡಿಕೆಯ ನಟಿ. ಈಗ ರಶ್ಮಿಕಾ ಮಂದಣ್ಣ ಅವರ ಹೆಸರು ಮತ್ತಷ್ಟು ವೈರಲ್ ಆಗುತ್ತಿದೆ.
ಹೌದು. ರಶ್ಮಿಕಾ ಅವರ ಕೆಲಸಗಳನ್ನು ನೋಡಿಕೊಳ್ಳುತ್ತಿದ್ದ ಮ್ಯಾನೇಜರ್ ನಟಿಯ ಲಕ್ಷಾಂತರ ಹಣ ದೋಚಿದ್ದಾರೆ. ಇದೀಗ ಮ್ಯಾನೇಜರ್ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ.
ನಟಿಯ ಬರೋಬ್ಬರಿ 80 ಲಕ್ಷ ರೂಪಾಯಿ ಹಣವನ್ನು ಮ್ಯಾನೇಜರ್ ಕಬಳಿಸಿದ್ದಾನೆ. ಹೀಗಾಗಿ ಮ್ಯಾನೇಜರ್‌ನನ್ನು ಕೆಲಸದಿಂದ ತೆಗೆದು ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಈ ಬಗ್ಗೆ ರಶ್ಮಿಕಾ ಮಂದಣ್ಣ ಯಾವುದೇ ಮಾಹಿತಿ ನೀಡಿಲ್ಲ.
ರಶ್ಮಿಕಾ ಮಂದಣ್ಣ ಅವರು ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ನಟಿ ಈಗಾಗಲೇ ಸಿದ್ದಾರ್ಥ್ ಮಲ್ಹೋತ್ರಾ ಹಾಗೂ ಅಮಿತಾಭ್ ಬಚ್ಚನ್ ಜೊತೆ ತೆರೆ ಹಂಚಿಕೊಂಡಿದ್ದಾರೆ. ರಣಬೀರ್ ಕಪೂರ್ ಗೆ ನಾಯಕಿಯಾಗಿ ‘ಅನಿಮಲ್’ ಚಿತ್ರದಲ್ಲಿ, ಅಲ್ಲದೆ, ಅಲ್ಲು ಅರ್ಜುನ್ ‘ಪುಷ್ಪ 2’ಚಿತ್ರಕ್ಕೆ ಬಣ್ಣ ಹಚ್ಚಲಿದ್ದಾರೆ. ನಿತಿನ್ -ರಶ್ಮಿಕಾ ಕಾಂಬಿನೇಷನ್ನ ಹೊಸ ಸಿನಿಮಾ ಕೂಡ ಮೂಡಿಬರುತ್ತಿದೆ. ವಿಕ್ಕಿ ಕೌಶಲ್ ಜೊತೆ ಸಿನಿಮಾ ಮಾಡುತ್ತಿದ್ದಾರೆ. ಛತ್ರಪತಿ ಶಿವಾಜಿ ಸೊಸೆಯ ಪಾತ್ರದಲ್ಲಿ ರಶ್ಮಿಕಾ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.
ಕನ್ನಡ ರಕ್ಷಿತ್ ಶೆಟ್ಟಿ ನಟನೆಯ ರಿಷಬ್ ಶೆಟ್ಟಿ ನಿರ್ದೇಶಕರಾಗಿದ್ದ ಕಿರಿಕ್ ಪಾರ್ಟಿ ಮೂಲಕ ಎಂಟ್ರಿಯಾದ ನಟಿ ಈಗ ಬಹು ಬೇಡಿಕೆಯ ನಟಿಯಾಗಿದ್ದಾರೆ. 18 ಸಿನಿಮಾ ಬಿಡುಗಡೆ ಆಗಿದ್ದು ಉತ್ತಮ ಸ್ಪಂದನೆ ಸಿಕ್ಕಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.