Categories
ಬೆಂಗಳೂರು

ಭೂಮಿ, ನಿವೇಶನ, ಸ್ಥಿರಾಸ್ತಿಗಳ ಮೌಲ್ಯ ಸದ್ಯದಲ್ಲೇ ದುಬಾರಿ!

ಭೂಮಿ, ನಿವೇಶನ, ಸ್ಥಿರಾಸ್ತಿಗಳ ಮೌಲ್ಯ ಸದ್ಯದಲ್ಲೇ ದುಬಾರಿ!
– ದರ ಪರಿಷ್ಕರಣೆಗೆ ಮುಂದಾದ ರಾಜ್ಯ ಸರ್ಕಾರ
– ಅಸ್ತಿ ಕೊಳ್ಳೋದು ಇನ್ನು ಕಷ್ಟ ಕಷ್ಟ

NAMMUR EXPRESS NEWS
ಬೆಂಗಳೂರು: ರಾಜ್ಯದಲ್ಲಿ ಭೂಮಿ, ನಿವೇಶನ, ಕಟ್ಟಡ ಸೇರಿ ಸ್ಥಿರಾಸ್ತಿಗಳ ಮೌಲ್ಯ ಸದ್ಯದಲ್ಲೇ ದುಬಾರಿಯಾಗಲಿದ್ದು, ಆಸ್ತಿ ಮಾರ್ಗಸೂಚಿ ದರ ಪರಿಷ್ಕರಣೆಗೆ ರಾಜ್ಯ ಸರ್ಕಾರ ಮುಂದಾಗಿದೆ. ಮಾರುಕಟ್ಟೆ ಮೌಲ್ಯ ಹಾಗೂ ಮಾರ್ಗಸೂಚಿ ದರ ನಡುವೆ ಹೆಚ್ಚಿರುವ ಅಂತರ ತಗ್ಗಿಸಲು ಆಸ್ತಿಗಳ ಮೌಲ್ಯ ಪರಿಷ್ಕರಣೆ ಸಿದ್ಧತಾ ಕಾರ್ಯ ಪೂರ್ಣಗೊಂಡಿದ್ದು, ಭಾನುವಾರ ಪರಿಷ್ಕೃತ ಮಾರ್ಗಸೂಚಿ ದರ ಕರಡು ಪ್ರಕಟವಾಗಲಿದೆ.ಈ ಮೂಲಕ ಸ್ಥಿರಾಸ್ತಿ ಮೌಲ್ಯವನ್ನು ಸರಾಸರಿ ಶೇಕಡಾ 30 ರಷ್ಟು ಹೆಚ್ಚಳ ಮಾಡಲಾಗುತ್ತಿದೆ. ಬೆಂಗಳೂರು ಸುತ್ತಮುತ್ತ ಮಾರ್ಗಸೂಚಿ ದರ ಗರಿಷ್ಠ ಪ್ರಮಾಣದಲ್ಲಿ ನಿಗದಿಯಾಗಿದೆ.

ಬಿಬಿಎಂಪಿ ಹೊಸದಾಗಿ ಸೇರ್ಪಡೆಯಾಗಿರುವ ಪ್ರದೇಶಗಳು ಸೇರಿ ಕೆಲವು ಆಯ್ದ ಕಡೆಗಳಲ್ಲಿ ಶೇಕಡಾ 90 ರಷ್ಟು ಮಾರ್ಗಸೂಚಿ ಹೆಚ್ಚಳ ಮಾಡುವ ಸಾಧ್ಯತೆ ಇದೆ. ಈ ಮೂಲಕ ಭೂಮಿ ಮೌಲ್ಯ ದುಪ್ಪಟ್ಟಾಗಲಿದೆ.

ಇದನ್ನೂ ಓದಿ : ಮೊರಾಕೋದಲ್ಲಿ ಭಾರಿ ಭೂಕಂಪಕ್ಕೆ 296 ಮಂದಿ ಬಲಿ!

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.