ಜೂ.27ಕ್ಕೆ ಥಿಯೇಟರ್‌ಗೆ “ತಿಮ್ಮನ ಮೊಟ್ಟೆಗಳು” ಸಿನೆಮಾ!
– ರಕ್ಷಿತ್ ತೀರ್ಥಹಳ್ಳಿ ನಿರ್ದೇಶನದ ಚಿತ್ರ
– ಪ್ರಕೃತಿ-ಮನುಷ್ಯನ ನಡುವಿನ ಸೂಕ್ಷ್ಮ ಕಥೆ
– ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ನೋಡಿ ಪ್ರೋತ್ಸಾಹಿಸಿ..!
NAMMUR EXPRESS NEWS
ಬೆಂಗಳೂರು: ರಕ್ಷಿತ್ ತೀರ್ಥಹಳ್ಳಿ ಬರೆದ ‘ಕಾಡಿನ ನೆಂಟರು’ ಕಥಾ ಸಂಕಲನದಿಂದ ಆಯ್ದ ಒಂದು ಕಥೆಯೇ “ತಿಮ್ಮನ ಮೊಟ್ಟೆಗಳು” ಈಗ ಸಿನಿಮಾವಾಗಿದ್ದು, ಜೂ.27ರಂದು ರಾಜ್ಯಾದ್ಯಂತ ತೆರೆಕಾಣುತ್ತಿದೆ.
ಪ್ರಕೃತಿ ಮತ್ತು ಮನುಷ್ಯನ ನಡುವಿನ ಸೂಕ್ಷ್ಮ ಸಂವೇದನೆಗಳನ್ನೊಳಗೊಂಡ ಈ ಚಿತ್ರದ ಪ್ರಮುಖ ಪಾತ್ರವರ್ಗದಲ್ಲಿ ಕೇಶವ್ ಗುತ್ತಳಿಕೆ, ಸುಚೇಂದ್ರ ಪ್ರಸಾದ್, ಆಶಿಕಾ ಸೋಮಶೇಖರ್, ಶೃಂಗೇರಿ ರಾಮಣ್ಣ, ಪ್ರಗತಿ ಪ್ರಭು, ರಘು ರಾಮನಕೊಪ್ಪ, ಮಾಸ್ಟರ್ ಹರ್ಷ, ವಿನಯ್ ಕಣಿವೆ, ಪೃಥ್ವಿರಾಜ್ ಕೊಪ್ಪ, ಪ್ರಾಣೇಶ್ ಕೂಳೆಗದ್ದೆ ಸೇರಿ ಮೊದಲಾದವರಿದ್ದಾರೆ. ಪ್ರವೀಣ್ ಎಸ್ ಅವರ ಕ್ಯಾಮರಾ ಕೈಚಳಕ, ಕೆಂಪರಾಜು ಬಿ ಎಸ್ ಅವರ ಸಂಕಲನ ಹಾಗೂ ಹೇಮಂತ್ ಜೋಯಿಷ್ ಅವರ ಸಂಗೀತ ಸಂಯೋಜನೆ ಈ ಚಿತ್ರಕ್ಕಿದೆ.
ಶ್ರೀಕೃಷ್ಣ ಪ್ರೊಡಕ್ಸನ್ಸ್ ಬ್ಯಾನರ್ ಅಡಿಯಲ್ಲಿ ಆದರ್ಶ್ ಅಯ್ಯಂಗಾರ್ ನಿರ್ಮಿಸಿರುವ ಚೊಚ್ಚಲ ಚಿತ್ರವಿದು. ರಕ್ಷಿತ್ ತೀರ್ಥಹಳ್ಳಿ ಅವರೇ ಬರೆದ ‘ಕಾಡಿನ ನೆಂಟರು’ ಕಥಾ ಸಂಕಲನದಿಂದ ಆಯ್ದ ಒಂದು ಕಥೆಯೇ “ತಿಮ್ಮನ ಮೊಟ್ಟೆಗಳು”. ಇದೇ ಜೂನ್ 27ರಂದು ರಾಜ್ಯಾದ್ಯಂತ ತೆರೆಕಾಣುತ್ತಿದೆ. ಈ ಸಿನಿಮಾ ಎಷ್ಟರ ಮಟ್ಟಿಗೆ ಗೆಲುವು ಕಾಣಲಿದೆ ಅನ್ನೋದು ಈ ವಾರಾಂತ್ಯ ಗೊತ್ತಾಗಲಿದೆ.
ಹೊಂಬಣ್ಣ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಭರವಸೆ ಮೂಡಿಸಿರುವ ರಕ್ಷಿತ್ ತೀರ್ಥಹಳ್ಳಿ ಅವರ ಬರವಣಿಗೆ ಮತ್ತು ನಿರ್ದೇಶನದಲ್ಲಿ ‘ತಿಮ್ಮನ ಮೊಟ್ಟೆಗಳು’ ಚಿತ್ರ ರೆಡಿಯಾಗಿದೆ. ಟ್ರೇಲರ್ನಿಂದಲೇ ಸಿನಿಪ್ರಿಯರಲ್ಲಿ ಕುತೂಹಲ ಮೂಡಿಸಿರುವ ಚಿತ್ರ ಈಗಾಗಲೇ ಹಲವು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲೂ ಪ್ರದರ್ಶನಗೊಂಡು ಪ್ರಶಂಸೆಯೊಂದಿಗೆ ಪ್ರಶಸ್ತಿಯನ್ನೂ ಗಳಿಸಿದೆ.
ಇತ್ತೀಚೆಗೆ ಅಮೆರಿಕದ ಡಾಲಸ್ನಲ್ಲಿ ಈ ಚಿತ್ರದ ಪ್ರೀಯರ್ ಶೋ ನಡೆದಿತ್ತು. ಅಲ್ಲಿನ ಜನರು “ತಿಮ್ಮನ ಮೊಟ್ಟೆಗಳು” ಚಿತ್ರ ವೀಕ್ಷಿಸಿ ಫಿದಾ ಆಗಿದ್ದಾರೆ. ಇಲ್ಲೂ ಕೂಡಾ ನಮ್ಮ ಚಿತ್ರ ಯಶಸ್ವಿಯಾಗಲಿದೆ ಎಂಬ ಭರವಸೆ ಚಿತ್ರತಂಡದ್ದು.
ಮನುಷ್ಯನ ನಂಬಿಕೆ ಹಾಗೂ ಆಚರಣೆಗಳ ಮೇಲೆ ಕೇಂದ್ರೀಕೃತವಾಗಿರುವ ಈ ಸಿನಿಮಾದ ಶೂಟಿಂಗ್ ಚಿಕ್ಕಮಗಳೂರು ಹಾಗೂ ಶಿವಮೊಗ್ಗದ ಸುತ್ತಲಿನ ಹಲವು ಸುಂದರ ಪ್ರದೇಶಗಳಲ್ಲಿ ನಡೆದಿದೆ.
ಪ್ರಕೃತಿ ಹಾಗೂ ಮನುಷ್ಯನ ನಡುವಿನ ಸೂಕ್ಷ್ಮ ಸಂವೇದನೆಯನ್ನೊಳಗೊಂಡ ಚಿತ್ರವು ಮಲೆನಾಡಿನ ಜನರ ನಂಬಿಕೆ, ಹಲವು ವಿಷೇಶಗಳನ್ನು ಹೊತ್ತು ತರುತ್ತಿದ್ದು,ಚಿತ್ರ ತಂಡ ಒಂದು ವಿಭಿನ್ನ ಪ್ರಯತ್ನಕ್ಕೆ ಕೈಹಾಕಿದೆ. ಎಲ್ಲರೂ ಕುಂಟುಂಬ ಸಮೇತರಾಗಿ ಚಿತ್ರಮಂದಿರಕ್ಕೆ ಬಂದು ಚಿತ್ರ ವೀಕ್ಷಿಸಿ ಪ್ರೋತ್ಸಾಹಿಸಬೇಕಾಗಿ ಚಿತ್ರ ತಂಡ ಮನವಿ ಮಾಡಿದೆ.
