Categories
ರಾಜ್ಯ

ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್…!!

ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್…!!
– ಇನ್ನು ಮುಂದೆ ಪ್ರತಿ ತಿಂಗಳು ಇಂದಿರಾ ಆಹಾರ ಕಿಟ್ ವಿತರಣೆ
– ಜು. 2ರ ಸಂಪುಟ ಸಭೆಯಲ್ಲಿ ನಿರ್ಧಾರ

NAMMUR EXPRESS NEWS
ಉಚಿತ ಅನ್ನಭಾಗ್ಯ ಯೋಜನೆಯಿಂದ ಮನೆಮಾತಾಗಿರುವ ಕರ್ನಾಟಕ ಸರ್ಕಾರ ಇದೀಗ ಅನ್ನಭಾಗ್ಯ ಯೋಜನೆಯಡಿ ಹೆಚ್ಚುವರಿ 5 ಕೆಜಿ ಅಕ್ಕಿಯನ್ನು ನೀಡುವ ಬದಲಾಗಿ ಇಂದಿರಾ ಆಹಾರ ಕಿಟ್‌ ನೀಡಲು ಉದ್ದೇಶಿಸಿದೆ. ಹೀಗಾಗಿ ಪ್ರತಿ ತಿಂಗಳು ಇನ್ನು ಪಡಿತರದ ಜೊತೆ ಪೌಷ್ಟಿಕಾಂಶಯುಕ್ತ ಆಹಾರ ಪದಾರ್ಥಗಳಾದ ಸಕ್ಕರೆ, ತೊಗರಿಬೇಳೆ, ಗೋಧಿ ಮತ್ತಿತರ ದಿನಬಳಕೆಯ ಆಹಾರ ಪದಾರ್ಥಗಳು ಉಚಿತವಾಗಿ ಲಭ್ಯವಾಗಲಿವೆ. ಈ ಯೋಜನೆಗೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ದೊರೆಯುವುದೊಂದೇ ಬಾಕಿ ಇದ್ದು, ಶೀಘ್ರವೇ ಜನ ಸಾಮಾನ್ಯರಿಗೆ ಇಂದಿರಾ ಆಹಾರ ಕಿಟ್‌ ಲಭ್ಯವಾಗಲಿದೆ.

ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಬಿಪಿಎಲ್‌ ಕಾರ್ಡ್‌ ಹೊಂದಿರುವ ಪ್ರತಿಯೊಬ್ಬರಿಗೂ ಅನ್ನ ಭಾಗ್ಯ ಯೋಜನೆಯಡಿ 10 ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡುತ್ತಿದೆ. ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಕೇಂದ್ರ ಸರ್ಕಾರವು ಒದಗಿಸುವ 5 ಕೆಜಿ ಅಕ್ಕಿಯ ಜೊತೆಗೆ ರಾಜ್ಯ ಸರ್ಕಾರ ಹೆಚ್ಚುವರಿಯಾಗಿ 5 ಕೆಜಿ ಅಕ್ಕಿಯನ್ನು ಸೇರಿಸಿ ಒಟ್ಟು 10 ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡುತ್ತಿದೆ. ಈ ಮುನ್ನ ಅಕ್ಕಿಯ ಅಭಾವ ಇದ್ದ ಕಾರಣಕ್ಕೆ ಫಲಾನುಭವಿಗಳ ಖಾತೆಗೆ 175 ರೂ.ಗಳನ್ನು ಜಮಾ ಮಾಡಲಾಗುತ್ತಿತ್ತು. ಬಳಿಕ ಅಕ್ಕಿಯ ದರ ಇಳಿಕೆ ಆದ ಹಿನ್ನೆಲೆಯಲ್ಲಿ ಕಳೆದ ಕೆಲವು ತಿಂಗಳಿನಿಂದ ಹಣದ ಬದಲಾಗಿ ಉಚಿತ ಅಕ್ಕಿಯನ್ನು ನೀಡಲಾಗುತ್ತಿದೆ. ಇದೀಗ ಅನ್ನ ಭಾಗ್ಯ ಯೋಜನೆಯ ಫಲಾನುಭವಿಗಳಿಗೆ ಪೌಷ್ಟಕಾಂಶಯುಕ್ತ ಆಹಾರ ಪದಾರ್ಥಗಳನ್ನು ಒಳಗೊಂಡ ಇಂದಿರಾ ಆಹಾರ ಕಿಟ್‌ಗಳನ್ನು ನೀಡಲು ಸರ್ಕಾರ ಉದ್ದೇಶಿಸಿದೆ. ಈ ಯೋಜನೆಯಡಿ ಒಂದು ಕುಟುಂಬಕ್ಕೆ ಒಂದು ಇಂದಿರಾ ಆಹಾರ ಕಿಟ್‌ ಅನ್ನು ನೀಡುವ ಸಾಧ್ಯತೆ ಇದೆ.

– ಇಂದಿರಾ ಆಹಾರ ಕಿಟ್‌ ಯೋಜನೆಯ ಉದ್ದೇಶವೇನು?

ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ, ಅನ್ನ ಭಾಗ್ಯ ಯೋಜನೆಯು ಪ್ರಸ್ತುತ ಪ್ರತಿ ಬಿಪಿಎಲ್‌ ಪಡಿತರ ಚೀಟಿ ಹೊಂದಿರುವವರಿಗೆ ತಿಂಗಳಿಗೆ 10 ಕೆಜಿ ಅಕ್ಕಿಯನ್ನು ನೀಡುತ್ತದೆ. ಕೇಂದ್ರ ಸರ್ಕಾರವು ಒದಗಿಸುವ 5 ಕೆಜಿ ಅಕ್ಕಿಯ ಜೊತೆಗೆ ರಾಜ್ಯ ಸರ್ಕಾರವು ನೀಡುವ ಇನ್ನೂ ಐದು ಕೆಜಿ ಅಕ್ಕಿಯನ್ನು ಸೇರಿಸಿ ಎರಡೂ ಉಚಿತವಾಗಿ ನೀಡಲಾಗುತ್ತಿದೆ. ಆದಾಗ್ಯೂ, ಇತ್ತೀಚಿನ ಮೌಲ್ಯಮಾಪನಗಳು ಕೆಲವು ಕುಟುಂಬಗಳು ತಾವು ನಿಜವಾಗಿ ಸೇವಿಸುವುದಕ್ಕಿಂತ ಹೆಚ್ಚು ಅಕ್ಕಿಯನ್ನು ಪಡೆಯುತ್ತಿವೆ ಎಂದು ಬಹಿರಂಗಪಡಿಸುತ್ತವೆ, ಇದು ಹೆಚ್ಚುವರಿ ದಾಸ್ತಾನು ಅಕ್ರಮವಾಗಿ ವ್ಯಾಪಾರವಾಗಲು ಕಾರಣವಾಗುತ್ತದೆ. ಬಿಪಿಎಲ್ ಕುಟುಂಬಗಳಿಗೆ ಪೌಷ್ಟಿಕಾಂಶ-ಭರಿತ ಅಗತ್ಯ ವಸ್ತುಗಳನ್ನು ಒದಗಿಸುವುದು ಮತ್ತು ಹೆಚ್ಚುವರಿ ಅಕ್ಕಿಯ ದುರುಪಯೋಗದ ಬಗ್ಗೆ ಕಾಳಜಿಗಳನ್ನು ಪರಿಹರಿಸುವುದು ಇದರ ಉದ್ದೇಶವಾಗಿದೆ. ಜೊತೆಗೆ ಕೇವಲ ಅಕ್ಕಿಯೊಂದೇ ನೀಡುತ್ತಿರುವುದರಿಂದ ಬಡವರಿಗೆ ಇತರ ಆಹಾರ ಪದಾರ್ಥಗಳನ್ನು ಅಂಗಡಿಗಳಿಂದ ಹೆಚ್ಚಿನ ದುಡ್ಡುಕೊಟ್ಟು ಖರೀದಿಸಬೇಕಾದ ಅನಿವಾರ್ಯತೆ ಇದೆ. ಅನ್ನಭಾಗ್ಯ ಯೋಜನೆಯ ಫಲಾನುಭವಿಗಳಿಗೆ ವಿತರಿಸುತ್ತಿರುವ ಹೆಚ್ಚುವರಿ ಅಕ್ಕಿ ಕಾಳಸಂತೆಯಲ್ಲಿ ಮಾರಾಟ ಮಾಡುವುದನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ.

– ಇಂದಿರಾ ಆಹಾರ ಕಿಟ್‌ನಲ್ಲಿ ಏನೇನು ಇರುತ್ತದೆ?

ಪ್ರಸ್ತಾವಿತ ಇಂದಿರಾ ಕಿಟ್‌ನಲ್ಲಿ ಗೋಧಿ, ಸಕ್ಕರೆ, ಉಪ್ಪು, ತೊಗರಿ ಬೇಳೆ, ಅಡುಗೆ ಎಣ್ಣೆ, ಚಹಾ ಪುಡಿ, ಕಾಫಿ ಪುಡಿ ನೀಡಲು ಉದ್ದೇಶಿಸಲಾಗಿದೆ. ಅದರಂತೆ ಕಿಟ್‌ನಲ್ಲಿ ಈ ಕೆಳಗಿನ ಪ್ರಮಾಣದಲ್ಲಿ ಆಹಾರ ಪದಾರ್ಥಗಳು ಇರವಲಿವೆ.

2 ಕೆಜಿ ಗೋಧಿ
1 ಕೆಜಿ ತೊಗರಿ ಬೇಳೆ
1 ಲೀಟರ್ ಅಡುಗೆ ಎಣ್ಣೆ
1 ಕೆಜಿ ಸಕ್ಕರೆ
1 ಕೆಜಿ ಉಪ್ಪು
100 ಗ್ರಾಂ ಚಹಾ ಪುಡಿ
50 ಗ್ರಾಂ ಕಾಫಿ ಪುಡಿ

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.