ಈ ಸಲ ಜ.15 ಕ್ಕೆ ಶಬರಿಮಲೆ ಜ್ಯೋತಿ ದರ್ಶನ..!
– ರಾಜ್ಯದ ಮೂಲೆ ಮೂಲೆಯಿಂದ ಭಕ್ತರ ಭೇಟಿ
– ಅಯ್ಯಪ್ಪ ಮಾಲೆ ಧರಿಸಿದ ಭಕ್ತರ ಕಾತುರ
– ರಾಜ್ಯದ ದೇವಾಲಯಗಳಲ್ಲೂ ಸಂಕ್ರಾಂತಿ ಸಂಭ್ರಮ
NAMMUR EXPRESS NEWS
ಬೆಂಗಳೂರು: ಸಂಕ್ರಾಂತಿ ಈ ವರ್ಷ ಜನವರಿ 15ಕ್ಕೆ ಸಂಕ್ರಾಂತಿ ಬಂದಿದ್ದು, ಜನವರಿ 15ರಂದು ಶಬರಿಮಲೆಯಲ್ಲಿ ಜ್ಯೋತಿ ದರ್ಶನವಾಗಲಿದೆ. ಹೀಗಾಗಿ ರಾಜ್ಯದಿಂದ ಲಕ್ಷಾಂತರ ಮಂದಿ ಭಕ್ತರು ಅಯ್ಯಪ್ಪ ಮಾಲೆ dರಿಸಿ ಈಗ ಶಬರಿಮಲೆ ಕಡೆ ಹೊರಟಿದ್ದಾರೆ. ಇನ್ನು ಕೆಲವರು ಈಗಾಗಲೇ ತೆರಳಿದ್ದು ಅಲ್ಲಿ ದೇವರ ದರ್ಶನ ಪಡೆದು ಜನವರಿ 15ರಂದು ಜ್ಯೋತಿ ನೋಡಿ ವಾಪಸ್ ಬರಲು ಸಿದ್ಧತೆ ನಡೆಸಿದ್ದಾರೆ. ಇತ್ತೀಚಿನ ಕೆಲವು ವರ್ಷಗಳಲ್ಲಿ ಜನವರಿ 14ಕ್ಕೆ ಎಲ್ಲೆಡೆ ಸಂಕ್ರಾಂತಿಯನ್ನು ಆಚರಣೆ ಮಾಡಲಾಗುತ್ತಿದ್ದು ಆದರೆ ಈ ಬಾರಿ ಜನವರಿ 15ರಂದು ಸಂಕ್ರಾಂತಿಯನ್ನು ಆಚರಣೆ ಮಾಡಲಾಗಿದೆ. ರಾಜ್ಯದ ಪ್ರಸಿದ್ಧ ದೇವಾಲಯಗಳಲ್ಲಿ ಕೂಡ ಜ.15ಕ್ಕೆ ಸಂಕ್ರಾಂತಿ ನಡೆಯುತ್ತಿದೆ. ವಾರದ ಅಂತ್ಯಕ್ಕೆ ಸಂಕ್ರಾಂತಿ ಬಂದಿರುವುದರಿಂದ ಪ್ರವಾಸಿ ತಾಣಗಳಲ್ಲಿ ಜನ ತುಂಬಿ ಹೋಗಿದ್ದಾರೆ.