Categories
ತೀರ್ಥಹಳ್ಳಿ

ತೀರ್ಥಹಳ್ಳಿಯಿಂದ ಶಬರಿ ಮಾಲೆ ಧರಿಸಿ ಹೊರಟ ಭಕ್ತರು!

ತೀರ್ಥಹಳ್ಳಿಯಿಂದ ಶಬರಿ ಮಾಲೆ ಧರಿಸಿ ಹೊರಟ ಭಕ್ತರು!
– ವಳಗೇರಿ ಶ್ರೀನಿವಾಸ್ ಅವರ ಮನೆಯಲ್ಲಿ ಇರುಮುಡಿ
– ಉದಯ್ ಗುರು ಸ್ವಾಮಿ ನೇತೃತ್ವದಲ್ಲಿ 13ಕ್ಕೂ ಮಂದಿ ಮಾಲಾ ಧಾರಣೆ

NAMMUR EXPRESS NEWS
ತೀರ್ಥಹಳ್ಳಿ : ಜನವರಿ 15ಕ್ಕೆ ಈ ಬಾರಿ ಶಬರಿಮಲೆಯಲ್ಲಿ ಅಯ್ಯಪ್ಪ ಸ್ವಾಮಿ ದರ್ಶನದ ಜೊತೆಗೆ ಜ್ಯೋತಿ ಕಾಣಲಿದೆ. ಈ ಸಂದರ್ಭವನ್ನು ಲಕ್ಷಾಂತರ ಭಕ್ತರು ಕಣ್ತುಂಬಿಕೊಳ್ಳಲು ಕಾತರರಾಗಿದ್ದಾರೆ. ಈ ನಡುವೆ ಅಯ್ಯಪ್ಪ ಮಾಲೆ ಧರಿಸಿ ಅನೇಕ ಭಕ್ತರು ವ್ರತವನ್ನು ಮಾಡುತ್ತಿದ್ದಾರೆ. ಈಗಾಗಲೇ ಅನೇಕರು ಶಬರಿಮಲೆ ಮಾಲೆ ಹಾಕಿ ದೇವಸ್ಥಾನಕ್ಕೆ ಹೋಗಿ ದೇವರ ದರ್ಶನ ಪಡೆದುಕೊಂಡು ಬಂದಿದ್ದಾರೆ. ತೀರ್ಥಹಳ್ಳಿ ತಾಲೂಕಿನ ವಳಗೇರಿ ಶ್ರೀನಿವಾಸ್ ಅವರ ಮನೆಯಲ್ಲಿ ಸುಮಾರು 13 ಮಂದಿ ಪೂಜೆ ನಡೆಸಿ ವಿಶೇಷವಾಗಿ ಮಾಲಾ ಧಾರಣೆ ಮಾಡಿ ಅಯ್ಯಪ್ಪ ದರ್ಶನಕ್ಕೆ ತೆರಳಿದ್ದಾರೆ.

ಶನಿವಾರ ಇರುಮುಡಿಯನ್ನು ಕಟ್ಟಿ ಪೂಜೆ ಶನಿವಾರ ಸಿ ಕೆ ರಸ್ತೆ ಸಮೀಪದ ವಳಗೇರಿಯಲ್ಲಿ ನಡೆಯಿತು.ಮೇಗರವಳ್ಳಿ ಉದಯ ಗುರು ಸ್ವಾಮಿ ನೇತೃತ್ವದಲ್ಲಿ ಸ್ಥಳ ವಳಗೇರಿ ಶ್ರೀನಿವಾಸ್ ಸ್ವಾಮಿ ಮನೆ 13 ಮಾಲೆ ಧಾರಿಗಳು ಇರುಮುಡಿ ಕಟ್ಟಿ ಹೊರಟಿದ್ದಾರೆ. ಗುರು ಸ್ವಾಮಿಗಳು 32 ವರ್ಷದ ಯಾತ್ರೆಯಲ್ಲಿ 4 ಬಾರಿ ತೀರ್ಥಹಳ್ಳಿಪಾದ ಯಾತ್ರೆ ಶಬರಿಮಲೆಗೆ ತೆರಳಿದ್ದರು. ಶ್ರೀನಿವಾಸ್ ವಳಗೇರಿ, ಸುನಿಲ್ ಕುಡುಮಲ್ಲಿಗೆ, ಮದನ್ ಮೇಗರವಳ್ಳಿ, ಶ್ರೀನಂದ್ ದಬ್ಬಣಗದ್ದೆ, ಪೂರ್ಣೇಶ್ ಕೆಳಕೇರಿ, ಲಿಂಗಪ್ಪ ಹಿರೇತೋಟ, ಅಕ್ಷಯ್ ಸ್ವಾಮಿ ವಳಗೇರಿ, ಅಂಕುಶ್ ವಳಗೇರಿ, ಸುನಿಲ್ ಡಿಸೋಜ, ವಿನಯ್ ಮೇಗರವಳ್ಳಿ, ಚಂದ್ರಶೇಖರ ಹಿರೇತೋಟ, ಮಂಜುನಾಥ್ ಉಡುಪಿ ಮಾಲೆ ಧರಿಸಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.