ಬಂಡಿಪೋರಾದಲ್ಲಿ ಲಷ್ಕರ್ ಕಮಾಂಡರ್ ಮಟಾಷ್ !
* ಲಷ್ಕರ್ ಕಮಾಂಡರ್ ಅಲ್ತಾಫ್ ಲಲ್ಲಿಯ ಬೇಟೆಯಾಡಿದ ಸೇನೆ
* ಪಾಕ್ ಉಗ್ರರಿಗೆ ಸಹಕರಿಸಿದ ಉಗ್ರರಿಬ್ಬರ ಮನೆಗಳು ಧ್ವಂಸ
NAMMMUR EXPRESS NEWS
ಕಾಶ್ಮೀರ: ಪಹಲ್ಗಾಮ್ ಉಗ್ರರ ದಾಳಿಗೆ ಪ್ರತೀಕಾರದ ಆಟ ಆರಂಭಿಸಿರುವ ಭಾರತಕ್ಕೆ ಬಂಡಿಪೋರಾದಲ್ಲಿ ಮೊದಲ ಯಶಸ್ಸು ದೊರಕಿದೆ. LeT ಕಮಾಂಡರ್ ಅಲ್ತಾಫ್ ಲಲ್ಲಿಯನ್ನು ಭಾರತೀಯ ಸೇನೆ ರಣಬೇಟೆಯಾಡಿದೆ.
ಈ ಮೊದಲು ಪಾಕ್ ಉಗ್ರರಿಗೆ ಸಹಾಯ ಮಾಡಿದ್ದ ಹಾಗೂ 2018ರಲ್ಲಿ ಪಾಕಿಸ್ಥಾನಕ್ಕೆ ಹೋಗಿ ತರಬೇತಿ ಪಡೆದು ಬಂದಿದ್ದ ಉಗ್ರರಾದ ಆಸಿಫ್ ಮತ್ತು ಆದಿಲ್ರ ದಕ್ಷಿಣ ಕಾಶ್ಮೀರದ ಅನಂತನಾಗ್ನಲ್ಲಿನ ಮನೆಗಳನ್ನು ಧ್ವಂಸ ಮಾಡಲಾಗಿದೆ.
ಭಾರತದ ಈ ದಾಳಿಗೆ ಪತರುಗುಟ್ಟಿರುವ ಪಾಕಿಸ್ಥಾನ ತನ್ನ ಸೇನೆಯ ಸಹಾಯದಿಂದ ಉಗ್ರರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.







