Categories
ಕರಾವಳಿ ಕ್ರಿಕೆಟ್

ಕರಾವಳಿಯ ಈ ಹುಡುಗ ಇದ್ದಾಗ ಭಾರತ ತಂಡ ಚಾಂಪಿಯನ್!

ಕರಾವಳಿಯ ಈ ಹುಡುಗ ಇದ್ದಾಗ ಭಾರತ ತಂಡ ಚಾಂಪಿಯನ್!
– ಭಾರತ ಕ್ರಿಕೆಟ್ ತಂಡದ ಕಾಯಕಯೋಗಿ ರಾಘವೇಂದ್ರ ದಿವಗಿ
– ಸ್ಟಾರ್ ಆಟಗಾರರಿಗೆ ನೆಟ್ ಸಾಥ್ ನೀಡುವ ರಿಯಲ್ ಹೀರೋ

NAMMUR EXPRESS NEWS
ನವ ದೆಹಲಿ: ಭಾರತ ಚಾಂಪಿಯನ್ ಟ್ರೊಫಿ ಗೆದ್ದಿದೆ. ಇಡೀ ವಿಶ್ವದಲ್ಲಿ ರೋಹಿತ್ ಪಡೆ ತನ್ನ ಪರಾಕ್ರಮ ಮೆರೆದಿದೆ. ಇದೀಗ ಭಾರತದ ತಂಡದ ರಿಯಲ್ ಹೀರೋ ಆಗಿ ಕರಾವಳಿ ಯ ರಾಘವೇಂದ್ರ ದಿವಗಿ ಬಗ್ಗೆಯೂ ಎಲ್ಲೆಡೆ ಮೆಚ್ಚುಗೆ ಮಾತು ಕೇಳಿ ಬರುತ್ತಿವೆ.
ಅಷ್ಟಕ್ಕೂ ಯಾರು ಈ ರಾಘವೇಂದ್ರ ದಿವಗಿ ಭಾರತ ತಂಡಕ್ಕೆ ಯಾರು? ಬೌಲರ್, ಬ್ಯಾಟ್ಸಮನ್, ಕೋಚ್… ಖಂಡಿತಾ ಅಲ್ಲ. ಆದ್ರೂ ಈತ ಇಡೀ ತಂಡಕ್ಕೆ ಪ್ರೇರಣೆ.
ಕಳೆದ 14 ವರ್ಷಗಳಲ್ಲಿ ಭಾರತ ತಂಡಕ್ಕೆ ರಕ್ತವನ್ನೇ ಬಸಿದ ಶ್ರಮಜೀವಿ ಅವನು. ಬ್ಯಾಟ್ಸ್’ಮನ್’ಗಳನ್ನು ಜಗತ್ತು ಮೆಚ್ಚಿದ ಪರಾಕ್ರಮಿಗಳನ್ನಾಗಿ ಮಾಡಿದ ಪರಿಶ್ರಮಿ ಅವನು. ಹೌದು. ಸುದರ್ಶನ್ ಎಂಬ ಅವರ ಸ್ನೇಹಿತ ಹೇಳುವಂತೆ ರಾಘವೇಂದ್ರ ಅವರು ಮೊದಲು ಕರ್ನಾಟಕ ರಣಜಿ ಕ್ರಿಕೆಟ್ ಅಲ್ಲಿ ಬ್ಯಾಟ್ಸಮನ್ ಪ್ರಾಕ್ಟೀಸ್ ವೇಳೆ ಬಾಲ್ ಎಸೆಯುವ ಕೆಲಸ ಮಾಡು ತ್ತಿದ್ದರು. ಅದೂ ಸ್ಯಾಲರಿ ಇಲ್ಲದೆ..!. ಬಳಿಕ ಅವರ ಪ್ರಾಮಾಣಿಕತೆ ಮೆಚ್ಚಿ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯು ಭಾರತ ತಂಡಕ್ಕೆ ನೆಟ್ ಪ್ರಾಕ್ಟೀಸ್ ಕೆಲಸಕ್ಕೆ ನಿಯೋಜನೆ ಮಾಡುತ್ತದೆ. ಅಲ್ಲಿಂದ ಇಲ್ಲಿವರೆಗೂ ಭಾರತದ ಸ್ಟಾರ್ ಬ್ಯಾಟ್ಸ್ ಮನ್ ಗಳ ನೆಚ್ಚಿನ ವ್ಯಕ್ತಿ ರಾಘು.
ಚಾಂಪಿಯನ್ಸ್ ಟ್ರೋಫಿ ಗೆದ್ದ ಬೆನ್ನಲ್ಲೇ ಭಾರತ ತಂಡದ ಆಟಗಾರರೆಲ್ಲಾ ಅವನ ಜೊತೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಕೆ.ಎಲ್ ರಾಹುಲ್ ಅಂತೂ ಚಾಂಪಿಯನ್ಸ್’ಗೆ ಐಸಿಸಿ ಕೊಟ್ಟ ಬ್ಲೇಸರ್ ಅನ್ನು ಅವನಿಗೆ ತೊಡಿಸಿ ಗೌರವ ಸಲ್ಲಿಸಿದ್ದಾನೆ. ವಿರಾಟ್ ಕೊಹ್ಲಿ ಪತ್ನಿಯನ್ನೂ ಜೊತೆಗೆ ನಿಲ್ಲಿಸಿ ಫೋಟೋಗೆ ಪೋಸ್ ಕೊಟ್ಟಿದ್ದಾನೆ.ಸಾಮಾನ್ಯವಾಗಿ ಇನ್ನೊಬ್ಬರ ಬಗ್ಗೆ ಅಷ್ಟಾಗಿ ತಲೆ ಕೆಡಿಸಿಕೊಳ್ಳದ ಕ್ರಿಕೆಟಿಗರು ಆ ವ್ಯಕ್ತಿಯನ್ನು ಅತ್ಯಂತ ಗೌರವದಿಂದ ಕಾಣುತ್ತಾರೆ. ಪ್ರೀತಿ, ಅಭಿಮಾನದ ಕಣ್ಣುಗಳಿಂದ ನೋಡುತ್ತಾರೆ.
ಭಾರತ ಕ್ರಿಕೆಟ್ ತಂಡದ ಬೆನ್ನೆಲುಬು. ಅವರು ಭಾರತ ಕ್ರಿಕೆಟ್ ತಂಡದ ಆಧಾರಸ್ಥಂಭ ಎಂದಿದ್ದರು ರವಿ ಶಾಸ್ತ್ರಿ. ‘’ಅವನು ಭಾರತ ಕ್ರಿಕೆಟ್ ತಂಡದ ಪಾಲಿಗೆ ಉಸಿರು’’ ಎಂದಿದ್ದರು ಸುನಿಲ್ ಗವಾಸ್ಕರ್.
ನಿಜ.. ಅವನಿಲ್ಲದೆ ಭಾರತ ಕ್ರಿಕೆಟ್ ತಂಡವೇ ಇಲ್ಲ ಎನ್ನುವಷ್ಟರ ಮಟ್ಟಿಗೆ ತಂಡಕ್ಕೆ ಎಲ್ಲವೂ ಆಗಿ ಹೋಗಿದ್ದಾನೆ. ಹೆಸರು ರಾಘವೇಂದ್ರ ದಿವಗಿ.
ರಾಘವೇಂದ್ರ ಕಳೆದ 14 ವರ್ಷಗಳಿಂದ ಭಾರತ ತಂಡದ ಉಸಿರೇ ಆಗಿ ಹೋಗಿದ್ದಾನೆ. ಅವನು ತಂಡದ ಥ್ರೋಡೌನ್ ಸ್ಪೆಷಲಿಸ್ಟ್. ಅವನ ಕಾರಣಕ್ಕೆ ಭಾರತ ತಂಡದ ಬ್ಯಾಟ್ಸ್’ಮನ್’ಗಳಿಗೆ ಗುಣಮಟ್ಟದ ಅಭ್ಯಾಸ ಸಿಗುತ್ತಿದೆ. ವಿರಾಟ್ ಕೊಹ್ಲಿಯಂಥಾ ದಿಗ್ಗಜನೇ ರಾಘು ಬಗ್ಗೆ ಅಂತರಾಷ್ಟ್ರೀಯ ವೇದಿಕೆಗಳಲ್ಲಿ ಹತ್ತಾರು ಬಾರಿ ಮಾತನಾಡಿದ್ದಾರೆ.
ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಇಂಗ್ಲೆಂಡ್, ದಕ್ಷಿಣ ಆಫ್ರಿಕಾದ ಕ್ರಿಕೆಟಿಗರು, ಕೋಚ್’ಗಳು ರಾಘವೇಂದ್ರನನ್ನು ‘ಲೆಜೆಂಡ್’ ಎಂದೇ ಮಾತನಾಡಿಸುತ್ತಾರೆ.

ಹೋಟೆಲ್ ಬಾಗಿಲಲ್ಲೇ ನಿಲ್ಲಿಸಿದ್ದ ಪೊಲೀಸ್ ಪಡೆ!

ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಭಾರತ ತಂಡ ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿಯನ್ನಾಡಿತ್ತು. ಸರಣಿಯ ಮೊದಲ ಪಂದ್ಯಕ್ಕಾಗಿ ನಾಗ್ಪುರಕ್ಕೆ ಬಂದಿಳಿದಾಗ ನಾಗ್ಪುರದಲ್ಲಿ ತಂಡದ ಜೊತೆ ಹೋಟೆಲ್’ಗೆ ತೆರಳುತ್ತಿದ್ದಾಗ.. ಇವನ್ಯಾರೋ ಆಗಂತುಕನೆಂದು ಹೋಟೆಲ್ ಬಾಗಿಲಲ್ಲೇ ಪೊಲೀಸ್ ಅಧಿಕಾರಿಯೊಬ್ಬ ರಾಘವೇಂದ್ರನನ್ನು ತಡೆಯುತ್ತಾನೆ. ಬೇರೆಯವರಾಗಿದ್ದರೆ ಆ ಅಧಿಕಾರಿಗೆ ದಬಾಯಿಸುತ್ತಿದ್ದರೋ ಏನೋ..
ರಾಘವೇಂದ್ರ ಒಂದು ಮಾತೂ ಆಡದೆ ಸುಮ್ಮನೆ ನಿಂತಿದ್ದ.. ಕೊನೆಗೆ ಅವರೇ ಸತ್ಯ ಅರಿತು ಕಳುಹಿಸಿ ಕೊಟ್ಟಿದ್ದರು. ನಂತರ ಆ ಪೊಲೀಸ್ ಅಧಿಕಾರಿಗೆ ಅದೇನನ್ನಿಸಿತೋ ಏನೋ.. ರಾಘವೇಂದ್ರನನ್ನು ಹೊಟೇಲ್’ನಲ್ಲಿ ವೈಯಕ್ತಿಕವಾಗಿ ಭೇಟಿ ಮಾಡಿ ‘ನನ್ನನ್ನು ಕ್ಷಮಿಸಿ’ ಎಂದಿದ್ದ. ತನ್ನನ್ನು ತಡೆದಾಗಲೂ ಸಹನೆಯಿಂದ ನಿಂತಿದ್ದ ರಾಘವೇಂದ್ರನ ನಡವಳಿಕೆ ಆ ಅಧಿಕಾರಿಗೆ ಅಚ್ಚರಿ ತರಿಸಿತ್ತು. ಹಾಗಾಗಿಯೇ ಹೇಳಿದ್ದು ರಾಘು ಓರ್ವ ಕಾಯಕಯೋಗಿ ಅಂತ.

ಸಚಿನ್ ತೆಂಡೂಲ್ಕರ್ ಅವರ ಮೆಚ್ಚಿನ ಹುಡುಗ ಈ ಕುಮುಟಾ ಪ್ರತಿಭೆ!

ಭಾರತ ತಂಡಕ್ಕೆ ಕಳೆದ 14 ವರ್ಷ ಗಳಿಂದ ಸೇವೆ ಸಲ್ಲಿಸುತ್ತಿರುವ ರಾಘು ಅನ್ನು ಸಚಿನ್, ಕೊಯ್ಲಿ, ದ್ರಾವಿಡ್, ರೋಹಿತ್ ಸೇರಿ ತಂಡದ ಎಲ್ಲರೂ ಇಷ್ಟಪಡುತ್ತಾರೆ. T20 ವರ್ಲ್ಡ್ ಕಪ್ ಗೆಲುವಲ್ಲಿ ರಾಘವೇಂದ್ರ ಅವರ ಸೇವೆ ಕೂಡ ಇದೆ. ಕರ್ನಾಟಕದ ಉತ್ತರ ಕನ್ನಡ ಜಿಲ್ಲೆ ಕುಮಟಾ ಮೂಲದ ರಾಘು ಮನೆ ಬಿಟ್ಟಾಗ ಇದ್ದಿದ್ದು ಕೇವಲ 19 ರೂ. ಇಂದು ದೇಶದ ಹೆಮ್ಮೆಯ ವ್ಯಕ್ತಿ ಆಗಿದ್ದಾನೆ.

Categories
ಕ್ರಿಕೆಟ್

ಸೂರ್ಯ ಕುಮಾರ್​ ಇಂಡಿಯಾ ಕ್ಯಾಪ್ಟನ್: ಕಾಪು ಮಾರಿಯಮ್ಮ ಕೃಪೆ!?

ಸೂರ್ಯ ಕುಮಾರ್​ ಇಂಡಿಯಾ ಕ್ಯಾಪ್ಟನ್: ಕಾಪು ಮಾರಿಯಮ್ಮ ಕೃಪೆ!?

– ಮಾರಿಯಮ್ಮನ ಆಶೀರ್ವಾದ ಪಡೆದಿದ್ದ ದಂಪತಿ
– ಟಿ20 ಸರಣಿಗೆ ಸೂರ್ಯಕುಮಾರ್​ ನಾಯಕನಾಗಿ ಆಯ್ಕೆ
– ಜು.8ರಂದು ಕಾಪು ಶ್ರೀ ಹೊಸ ಮಾರಿಗುಡಿಯಲ್ಲಿ ವಿಶೇಷ ಪೂಜೆ

NAMMUR EXPRESS NEWS

ಮುಂಬಯಿ: ಟೀಮ್​ ಇಂಡಿಯಾದ ಹಾರ್ಡ್​ ಹಿಟ್ಟರ್​ ಸೂರ್ಯಕುಮಾರ್​ ಯಾದವ್ ಇದೀಗ ಇಂಡಿಯಾ ಕ್ಯಾಪ್ಟನ್ ಆಗಿ ಆಯ್ಕೆ ಆಗಿದ್ದಾರೆ.ಮೂಲತಃ ಕರಾವಳಿ ಮೂಲದ ಸೂರ್ಯಕುಮಾರ್ ಪತ್ನಿ​ ದೇವಿಶಾ ಶೆಟ್ಟಿ ಜತೆಗೂಡಿ ಜುಲೈ 8ರಂದು ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿದ್ದರು. ಈ ಸಂದರ್ಭ ದೇವಸ್ಥಾನದ ಅರ್ಚಕರು “ಸೂರ್ಯಕುಮಾರ್​ ಅವರಿಗೆ ನಾಯಕರಾಗುವ ಭಾಗ್ಯ ದೊರಕಲಿ” ಎಂದು ಹಾರೈಸಿ ಪ್ರಸಾದ ನೀಡಿದ್ದರು. ಇದೀಗ ಶ್ರೀಲಂಕಾ ವಿರುದ್ಧದ ಟಿ20 ಸರಣಿಗೆ ಸೂರ್ಯಕುಮಾರ್​ ನಾಯಕನಾಗಿ ಆಯ್ಕೆಯಾಗಿದ್ದಾರೆ. ಅಲ್ಲದೆ ಟಿ20ಗೆ ಖಾಯಂ ನಾಯಕನಾಗಿ ಮುಂದುವರಿಯಲಿದ್ದಾರೆ ಎನ್ನಲಾಗಿದೆ.

ಸೂರ್ಯ ಅವರಿಗೆ ನಾಯಕತ್ವ ಒಲಿದದ್ದು ಕಾಪು ಮಾರಿಗುಡಿಯ ಮಾರಿಯಮ್ಮ ದೇವಿಯ ಆಶೀರ್ವಾದದಿಂದಲೇ ಎಂದು ಕೆಲ ನೆಟ್ಟಗರು ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯಪಟ್ಟಿದ್ದಾರೆ. ಹೊಸ ಮಾರಿಗುಡಿಯ ಮಾರಿಯಮ್ಮ ದೇವಿಯ ದರ್ಶನ ಪಡೆದಿದ್ದ ಸೂರ್ಯಕುಮಾರ್​ ಮುಖಮಂಟಪದ ಶಿಲಾಸ್ತಂಭ ಸಹಿತ ಸ್ವರ್ಣ ಗದ್ದುಗೆಗೆ ಸ್ವರ್ಣ ಸಮರ್ಪಿಸಿದ್ದರು. ಇದೇ ವೇಳೆ ಸೂರ್ಯ ಪತ್ನಿ, ನೂತನ ದೇಗುಲ ಉದ್ಘಾಟನೆಯ ವೇಳೆ ಬಿಡುವುದ್ದರೆ ಸೂರ್ಯ ಖಂಡಿತವಾಗಿಯೂ ಇಲ್ಲಿಗೆ ಬರಲಿದ್ದಾರೆ ಎಂದು ಹೇಳಿದ್ದರು. ದೇವಿಶಾ ಶೆಟ್ಟಿ ಅವರು ಉಡುಪಿಯ ಕಾಪು ಮೂಲದವರಾಗಿದ್ದಾರೆ. ಸದ್ಯ ಮುಂಬೈನಲ್ಲೇ ನೆಲೆಸಿದ್ದಾರೆ.

ಕಳೆದ ಒಂದು ವರ್ಷಗಳಿಂದ ರೋಹಿತ್​ ಬಳಿಕ ಹಾರ್ದಿಕ್‌ ಪಾಂಡ್ಯರನ್ನೇ ಭವಿಷ್ಯದ ನಾಯಕ ಎಂದು ಬಿಂಬಿಸಲಾಗಿತ್ತು. ಆದರೆ, ಲಂಕಾ ಸರಣಿಗೆ ಸೂರ್ಯಕುಮಾರ್​ಗೆ ನಾಯಕತ್ವ ನೀಡಲಾಗಿದೆ. ಸೂರ್ಯಕುಮಾರ್‌ ಯಾದವ್​ ಕಳೆದ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ನಾಯಕನಾಗಿ ತಂಡವನ್ನು ಮುನ್ನಡೆಸಿ ಸರಣಿ ಗೆದ್ದಿದ್ದರು. ಸೂರ್ಯಕುಮಾರ್ ಯಾದವ್ ಕಾರ್ಯವೈಖರಿ ಬಗ್ಗೆಯೂ ಬಿಸಿಸಿಐ ಹಾಗೂ ಆಯ್ಕೆ ಸಮಿತಿಗೆ ಸಮಾಧಾನವಿದ್ದು, ಅವರನ್ನೇ ನಾಯಕನನ್ನಾಗಿ ಮುಂದುವರಿಸುವ ಸಾಧ್ಯತೆ ಅಧಿಕವಾಗಿದೆ.

ಟಿ20 ತಂಡ: ಸೂರ್ಯಕುಮಾರ್ ಯಾದವ್ (ನಾಯಕ), ಶುಭಮನ್ ಗಿಲ್ (ಉಪ ನಾಯಕ), ಯಶಸ್ವಿ ಜೈಸ್ವಾಲ್, ರಿಂಕು ಸಿಂಗ್, ರಿಯಾನ್ ಪರಾಗ್, ರಿಷಭ್ ಪಂತ್ (ವಿ.ಕೀ ), ಸಂಜು ಸ್ಯಾಮ್ಸನ್ (ವಿ.ಕೀ), ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯಿ , ಅರ್ಶದೀಪ್​ ಸಿಂಗ್, ಖಲೀಲ್ ಅಹ್ಮದ್, ಮೊಹಮ್ಮದ್​ ಸಿರಾಜ್

Categories
ಕ್ರಿಕೆಟ್

ಟಿ 20 ಕ್ರಿಕೆಟ್’ಗೆ ನಿವೃತ್ತಿ ಘೋಷಿಸಿದ ಕೊಹ್ಲಿ, ರೋಹಿತ್, ಜಡೇಜಾ

ಟಿ 20 ಕ್ರಿಕೆಟ್’ಗೆ ನಿವೃತ್ತಿ ಘೋಷಿಸಿದ ಕೊಹ್ಲಿ, ರೋಹಿತ್, ಜಡೇಜಾ

ಭಾರತ ರತ್ನಗಳಿಗೆ ಜೈ ಹೋ..!

ನವದೆಹಲಿ : ಬಾರ್ಬಡೋಸ್ನ ಕೆನ್ಸಿಂಗ್ಟನ್ ಓವರ್ ನಲ್ಲಿ ದಕ್ಷಿಣ ಆಫ್ರಿಕಾವನ್ನು 7 ರನ್ ಅಂತರದಿಂದ ಸೋಲಿಸುವ ಮೂಲಕ ಭಾರತವು ಟಿ 20 ವಿಶ್ವಕಪ್ 2024 ಅನ್ನು ಗೆದ್ದ ನಂತರ ಭಾರತದ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಭಾರತದ ಪ್ರಮುಖ ಆಲ್ರೌಂಡರ್ ರವೀಂದ್ರ ಜಡೇಜಾ ಟಿ 20 ಅಂತರರಾಷ್ಟ್ರೀಯ ಪಂದ್ಯಗಳಿಂದ ನಿವೃತ್ತಿ ಘೋಷಿಸಿದ್ದಾರೆ. ಟಿ 20 ಅಂತರರಾಷ್ಟ್ರೀಯ ವೃತ್ತಿಜೀವನದ ಉತ್ತುಂಗವಾಗಿದೆ. ನೆನಪುಗಳು, ಹರ್ಷೋದ್ಗಾರಗಳು ಮತ್ತು ಅಚಲ ಬೆಂಬಲಕ್ಕಾಗಿ ಧನ್ಯವಾದಗಳು ತಿಳಿಸಿದ್ದಾರೆ.

ಭಾರತದ ಮೂರು ರತ್ನಗಳಿಗೆ ನಮ್ಮ ನಮನಗಳು

Categories
ಕ್ರಿಕೆಟ್

ಐಪಿಎಲ್ ಚಾಂಪಿಯನ್ ಕೆಕೆಆರ್ ತಂಡಕ್ಕೆ ಎಷ್ಟು ಹಣ ಸಿಕ್ತು?

ಐಪಿಎಲ್ ಚಾಂಪಿಯನ್ ಕೆಕೆಆರ್ ತಂಡಕ್ಕೆ ಎಷ್ಟು ಹಣ ಸಿಕ್ತು?
– 46.5 ಕೋಟಿ ಬಹುಮಾನದ ಮೊತ್ತ ಪಡೆದ ಕೋಲ್ಕೊತ್ತಾ ತಂಡ
– ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ 6.50 ಕೋಟಿ
– ಯಾವ ತಂಡಕ್ಕೆ ಎಷ್ಟು ಹಣ?.. ಈವರೆಗೆ ಗೆದ್ದಿದ್ದು ಯಾರು ಯಾರು?

NAMMUR EXPRESS NEWS
ಸಮರ್ಥ ಪ್ರದರ್ಶನ ನೀಡಿದ ಕೋಲ್ಕೊತಾ ನೈಟ್​ ರೈಡರ್ಸ್ ತಂಡ ಐಪಿಎಲ್​ 2024ರ ಆವೃತ್ತಿಯ ಟ್ರೋಫಿ ಗೆದ್ದಿದೆ. ಫೈನಲ್​ ಪಂದ್ಯದಲ್ಲಿ ಎದುರಾಳಿ ಸನ್​ರೈಸರ್ಸ್​ ಹೈದರಾಬಾದ್ ವಿರುದ್ಧ 8 ವಿಕೆಟ್​ಗಳ ಗೆಲುವು ಸಾಧಿಸಿ ಮೂರನೇ ಬಾರಿಗೆ ಚಾಂಪಿಯನ್ ಆಗಿದೆ. ಈ ಹಿಂದೆ 2012 ಹಾಗೂ 2104ರಲ್ಲಿ ಗೌತಮ್ ಗಂಭೀರ್ ಅವರ ನಾಯಕತ್ವದಲ್ಲಿ ಈ ತಂಡ ಚಾಂಪಿಯನ್ ಆಗಿತ್ತು. ಇದೀಗ ಅವರದ್ದೇ ಕೋಚಿಂಗ್​ನಲ್ಲಿ ತಂಡ ಟ್ರೋಫಿ ಗೆದ್ದಿರುವುದು ವಿಶೇಷ ಎನಿಸಿದೆ. ಕೆಕೆಆರ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್​ ತಂಡಗಳ ಬಳಿಕ (ಐದು ಬಾರಿ ಚಾಂಪಿಯನ್ ಪಟ್ಟ) ಐಪಿಎಲ್​ನ ಅತ್ಯಂತ ಯಶಸ್ವಿ ತಂಡ ಎನಿಸಿಕೊಂಡಿದೆ ಕೆಕೆಆರ್​​.

ಟಾಸ್​ ಗೆದ್ದು ಮೊದಲು ಬ್ಯಾಟ್ ಮಾಡಿದ ಎಸ್​ಆರ್​ಎಚ್ ತಂಡ 18.3 ಓವರ್​ಗಳಲ್ಲಿ 114 ರನ್​ಗಳಿಗೆ ಆಲ್​ಔಟ್ ಆಯಿತು. ಪ್ರತಿಯಾಗಿ ಬ್ಯಾಟ್​ ಮಾಡಿದ ಕೆಕೆಆರ್ ತಂಡ 10.3 ಓವರ್​ಗಳಲ್ಲಿ 2 ವಿಕೆಟ್​ ನಷ್ಟಕ್ಕೆ. 114 ರನ್ ಬಾರಿಸಿ ಸುಲಭ ಗೆಲವು ತನ್ನದಾಗಿಸಿಕೊಂಡಿತು. ಕೆಕೆಆರ್ ಪರ ವೆಂಕಟೇಶ್ ಅಯ್ಯರ್​ (52) ರನ್​ ಬಾರಿಸಿ ಗೆಲುವಿಗೆ ಕೊಡುಗೆ ಕೊಟ್ಟರು.ಆರಂಭಿಕ ಬ್ಯಾಟರ್​ ರಹ್ಮನುಲ್ಲಾ ಗುರ್ಬಜ್​ 39 ರನ್ ಬಾರಿಸಿದರು. ಈ ಕೆಳಗೆ ಚಾಂಪಿಯನ್ ತಂಡ ಹಾಗೂ ಪ್ಲೇಆಫ್​ಗೇರಿದ ಇತರ ತಂಡಗಳು ಗೆದ್ದ ಬಹುಮಾನ ಮೊತ್ತದ ವಿವರ ನೀಡಲಾಗಿದೆ.

46.5 ಕೋಟಿ ಬಹುಮಾನದ ಮೊತ್ತ!

ಐಪಿಎಲ್​ 2024ರ ಒಟ್ಟು ಬಹುಮಾನದ ಮೊತ್ತ 46.5 ಕೋಟಿ ರೂಪಾಯಿ. ಮಾರ್ಚ್​ 22ರಿಂದ ಆರಂಭವಾದ ಐಪಿಎಲ್​ ಮೆಗಾ ಟೂರ್ನಿ, 65 ದಿನಗಳ ಕಾಲ ನಂತರ ಅಂದರೆ ಮೇ 26ರ ಭಾನುವಾರಕ್ಕೆ ಅಂತ್ಯವಾಗಿದೆ. ಫೈನಲ್​​ ಪಂದ್ಯದಲ್ಲಿ ಗೆದ್ದು ಚಾಂಪಿಯನ್​ ಆದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ 20 ಕೋಟಿ ಸಿಗಲಿದೆ. ಅಂತೆಯೇ ಫೈನಲ್‌ನಲ್ಲಿ ಸೋತು 2ನೇ ಸ್ಥಾನ ಪಡೆದ ಸನ್​ರೈಸರ್ಸ್ ಹೈದರಾಬಾದ್ ತಂಡ 13 ಕೋಟಿ ರೂಪಾಯಿ ಜೇಬಿಗಿಳಿಸಿದೆ. 3ನೇ ಸ್ಥಾನ ಪಡೆದ ರಾಜಸ್ಥಾನ್ ರಾಯಲ್ಸ್​ ತಂಡ 7 ಕೋಟಿ ರೂಪಾಯಿ ದೊರಕಿದೆ. ಇನ್ನು 4ನೇ ಸ್ಥಾನ ಪಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು 6.50 ಕೋಟಿ ಪಡೆದಿದೆ.

ಐಪಿಎಲ್​ ಗೆದ್ದ ತಂಡಗಳು!

ಮುಂಬೈ ಇಂಡಿಯನ್ಸ್​​ ಐದು ಬಾರಿ ಚಾಂಪಿಯನ್​ (2013, 2015, 2017, 2019, 2020)
ಚೆನ್ನೈ ಸೂಪರ್ ಕಿಂಗ್ಸ್​ ನಾಲ್ಕು ಬಾರಿ ಚಾಂಪಿಯನ್​ (2010, 2011, 2018, 2021, 2023)
ಕೋಲ್ಕತ್ತಾ ನೈಟ್​ ರೈಡರ್ಸ್​ 3 ಬಾರಿ ಚಾಂಪಿಯನ್​ (2012, 2014, 2024)
ರಾಜಸ್ಥಾನ​ ರಾಯಲ್ಸ್​​​ ಒಂದು ಬಾರಿ ಚಾಂಪಿಯನ್​ (2008)
ಡೆಕ್ಕನ್​ ಚಾರ್ಜರ್ಸ್​​ ಒಂದು ಬಾರಿ ಚಾಂಪಿಯನ್​ (2009)
ಸನ್​​ರೈಸರ್ಸ್​ ಹೈದರಾಬಾದ್​ ಒಂದು ಬಾರಿ ಚಾಂಪಿಯನ್​ (2016)
ಗುಜರಾತ್​ ಟೈಟಾನ್ಸ್​ ಒಂದು ಬಾರಿ ಚಾಂಪಿಯನ್​ (2022)

ಐಪಿಎಲ್ ಅಲ್ಲಿ ಪ್ರಶಸ್ತಿ ಗೆಲ್ಲದ ತಂಡಗಳು:

ರಾಯಲ್​ ಚಾಲೆಂಜರ್ಸ್ ಬೆಂಗಳೂರು (3 ಬಾರಿ ರನ್ನರ್​ಅಪ್​)
ಪಂಜಾಬ್​ ಕಿಂಗ್ಸ್​ (1 ಬಾರಿ ರನ್ನರ್​​ಅಪ್​)
ಡೆಲ್ಲಿ ಕ್ಯಾಪಿಟಲ್ಸ್​ (1 ಬಾರಿ ರನ್ನರ್​ಅಪ್​​)
ಲಕ್ನೋ ಸೂಪರ್ ಜೈಂಟ್ಸ್​​​ (ಎಲಿಮಿನೇಟರ್​​ ಹಂತ)

Categories
ಕರಾವಳಿ ಕ್ರಿಕೆಟ್

ರೋಗಿಗಳಿಗೆ ಸಹಾಯ ಮಾಡಲು ಕ್ರಿಕೆಟ್ ಪಂದ್ಯ!

ರೋಗಿಗಳಿಗೆ ಸಹಾಯ ಮಾಡಲು ಕ್ರಿಕೆಟ್ ಪಂದ್ಯ!
– ಬಜ್ಪೆ: ಸ್ಪೋರ್ಟಿಂಗ್ ಕ್ಲಬ್ ಸಹಯೋಗದಲ್ಲಿ ವಿಶೇಷ ಪಂದ್ಯಾಟ
– ಅನೇಕ ಸಂಘ ಸಂಸ್ಥೆಗಳ ಸಾಥ್: ಸೇವಕರಿಗೆ ಸನ್ಮಾನ

NAMMUR EXPRESS NEWS
ಬಜ್ಪೆ: ಸ್ಪೋರ್ಟಿಂಗ್ ಕ್ಲಬ್ ಬಜ್ಪೆ ರೋಗಿಗಳ ಸಹಾಯಾರ್ಥವಾಗಿ ಹಮ್ಮಿಕೊಂಡ ಮೂರೂ ದಿನಗಳ ಕ್ರಿಕೆಟ್ ಟೂರ್ನಮೆಂಟ್ ಅತ್ಯಂತ ಯಶಸ್ವಿಯಾಯಿತು. ಸಮಾರೋಪ ಸಮಾರಂಭದಲ್ಲಿ ಕ್ಲಬ್ ಅಧ್ಯಕ್ಷರಾದ ರಿಯಾಜ್ , ಕಾರ್ಯದರ್ಶಿಯರಾದ ತಾಷಿನ್ , ಮುಲ್ಕಿ ಮೂಡಬಿದ್ರೆ ಕಾಂಗ್ರೆಸ್ ಐಟಿ ಸೆಲ್ ಅಧ್ಯಕ್ಷರಾದ ನಿಸಾರ್ ಕರಾವಳಿ , ಬಜ್ಪೆ ನಾಗರಿಕರ ಹಿತರಕ್ಷಣಾ ವೇದಿಕೆಯ ಸಂಚಾಲಕರಾದ ಸಿರಾಜ್ ಬಜ್ಪೆ , ಹನೀಫ್ ಹಿಲ್ ಟಾಪ್ , ಖಾದರ್ ಏರ್ಪೋರ್ಟ್ , ಇಸ್ಮಾಯಿಲ್ ಇಂಜಿನಿಯರ್ , ಅಖ್ತರ್ ಬ್ರೈಟ್ , ನಜೀರ್ ಕಿನ್ನಿಪದವು , ಅನ್ವರ್ , ಅಲ್ತಾಫ್ ಜರಿ , ಸಾಲಿಯಾನ್ , ಕೆಲ್ವಿನ್ , ಹಮಬ್ಬ ಜರಿ , ಅಝರ್ , ರಹೀಮ್ , ಜಮಾಲ್ , ಕಮಾಲ್ ಮುಂತಾದವರು ಭಾಗವಹಿಸಿ , ಆಟಗಾರರನ್ನು ಶುಭ ಹಾರೈಸಿದರು.

ಸಾಮಾಜಿಕ ಕಾರ್ಯಕರ್ತ , ಕರಾವಳಿ ಟೀಮ್ ನ ಸಂಸ್ಥಾಪಕರು , ನನ್ನ್ಡೋ ಪೆಂಗಲೋ ಕಣ್ಣ್ ಡೊ ತನ್ನಿ ಒರೆಸುವ ಟ್ರಸ್ಟ್ ಅಧ್ಯಕ್ಷ , N F C ಚಾರಿಟೇಬಲ್ ಟ್ರಸ್ಟ್ ನ ಉಪಾಧ್ಯಕ್ಷ , ಹಿದಾಯತುಲ್ ದಫ್ ಕಮಿಟಿ ಅಧ್ಯಕ್ಷ , ಮತ್ತು ಹಲವಾರು ಸಂಘ ಸಂಸ್ಥೆಯಲ್ಲಿ ಗುರಿತಿಸಿ ಕೊಂಡ , ರೋಗಿಗಳ ಪಾಲಿನ ಆಶಾಕಿರಣ ನಿಸಾರ್ ಕರಾವಳಿ ಅವರನ್ನು ಸನ್ಮಾನಿಸಲಾಯಿತು .

Categories
ಕ್ರಿಕೆಟ್ ಬೆಂಗಳೂರು ರಾಜ್ಯ

ಅಂತೂ ಆರ್.ಸಿ ಬಿಯ ಹೊಸ ಅಧ್ಯಾಯ

ಅಂತೂ ಆರ್.ಸಿ ಬಿಯ ಹೊಸ ಅಧ್ಯಾಯ
– ಹಾಲಿ ಚಾಂಪಿಯನ್​ ಚೆನ್ನೈ ಸೋಲಿಸಿ ಪ್ಲೇ ಆಫ್​ಗೆ
– ಕೊಹ್ಲಿ ಆಟಕ್ಕೆ ಅಭಿಮಾನಿಗಳು ಫಿದಾ

NAMMUR EXPREES NEWS
ಬೆಂಗಳೂರು: ಸತತ ಸೋಲಿಗೆ ಸಿಲುಕಿ ಇನ್ನೇನು ಟೂರ್ನಿಯಿಯಿಂದ ಹೊರಬೀಳಬೇಕು ಎನ್ನುವಷ್ಟರಲ್ಲಿ ಪುಟಿದೆದ್ದ ಆರ್​ಸಿಬಿ ಇದೀಗ ಯಾರೂ ಊಹಿಸಿದ, ಪವಾಡ ಸಂಭವಿಸಿದ ರೀತಿಯಲ್ಲಿ 4ನೇ ತಂಡವಾಗಿ ಪ್ಲೇ ಆಫ್​ಗೆ ಅಧಿಕೃತ ಎಂಟ್ರಿ ಕೊಟಿದೆ.
ಪ್ಲೇ ಆಫ್​ ಪ್ರವೇಶಕ್ಕೆ ಗೆಲ್ಲಲೇ ಬೇಕಿದ್ದ ಪಂದ್ಯದಲ್ಲಿ ಹಾಲಿ ಚಾಂಪಿಯನ್​ ಚೆನ್ನೈ ಸೂಪರ್​ ಕಿಂಗ್ಸ್​ ವಿರುದ್ಧ 27 ರನ್​ ಗಳ ಗೆಲುವು ಸಾಧಿಸಿ ಈ ಅಭೂತಪೂರ್ವ ಸಾಧನೆ ಮಾಡಿದೆ. ಒಂದೊಮ್ಮೆ ಚೆನ್ನೈ 201 ರನ್​ ಬಾರಿಸುತ್ತಿದ್ದರೂ ಆರ್​ಸಿಬಿ ಪ್ಲೇ ಆಫ್​ನಿಂದ ಹೊರ ಬೀಳುತ್ತಿತ್ತು.

ಚಿನ್ನಸ್ವಾಮಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಮಳೆ ಪೀಡಿತ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ ಆಹ್ವಾನ ಪಡೆದ ಆರ್​ಸಿಬಿ ವಿರಾಟ್​ ಕೊಹ್ಲಿ ಮತ್ತು ಫಾಫ್​ ಡುಪ್ಲೆಸ್​ ಮೊದಲ ವಿಕೆಟ್​ಗೆ ನಿರ್ಮಿಸಿದ ಭದ್ರ ಅಡಿಪಾಯದ ನೆರವಿನಿಂದ ನಿಗದಿತ 20 ಓವರ್​ಗಳಲ್ಲಿ 5 ವಿಕೆಟ್​ ನಷ್ಟಕ್ಕೆ 218 ರನ್​ ಬಾರಿಸಿತು. ಜವಾಬಿತ್ತ ಚೆನ್ನೈ ಈ ಬೃಹತ್​ ಮೊತ್ತವನ್ನು ಬೆನ್ನಟ್ಟಿದ ಚೆನ್ನೈ ಹಲವು ಏರಿಳಿತ ಕಂಡು ಕೊನೆಗೆ ತನ್ನ ಪಾಲಿನ ಆಟದಲ್ಲಿ 7 ವಿಕೆಟ್​ಗೆ 191 ರನ್​ ಗಳಿಸಲಷ್ಟೇ ಶಕ್ತವಾಗಿ ಸೋಲಿಗೆ ಶರಣಾಯಿತು. ಜತೆಗೆ ಟೂರ್ನಿಯಿಂದಲೂ ಹೊರಬಿದ್ದು ಮಾಜಿ ಚಾಂಪಿಯನ್​ ಎನಿಸಿಕೊಂಡಿತು.

ದೊಡ್ಡ ಮೊತ್ತವನ್ನು ಬೆನ್ನಟ್ಟಲು ಆರಂಭಿಸಿದ ಚೆನ್ನೈಗೆ ಆಲ್​ರೌಂಡರ್​ ಗ್ಲೆನ್​ ಮ್ಯಾಕ್ಸ್​ವೆಲ್​ ಮೊದಲ ಎಸೆತದಲ್ಲೇ ಆಘಾತವಿಕ್ಕಿದರು. ನಾಯಕ ಋತುರಾಜ್​ ಗಾಯಕ್ವಾಡ್​​ ಅವರನ್ನು ಶೂನ್ಯಕ್ಕೆ ಔಟ್​ ಮಾಡಿದರು. ಈ ಆಘಾತದಿಂದ ಚೇತರಿಸಿಕೊಳ್ಳುವ ಮುನ್ನವೇ ಚೆನ್ನೈ ಡೇಂಜಸರ್​ ಬ್ಯಾಟರ್​ ಡೇರಿಯಲ್​ ಮಿಚೆಲ್(4)​ ಅವರ ವಿಕೆಟ್​ ಕೂಡ ಕಳೆದುಕೊಂಡಿತು. ಆರ್​ಸಿಬಿ ಪಾಳಯದಲ್ಲಿ ಎಲ್ಲಿಲ್ಲದ ಸಂಭ್ರಮ ಮನೆ ಮಾಡಿತು. ಆದರೆ ಈ ಸಂಭ್ರಮ ಹೆಚ್ಚು ಹೊತ್ತು ಸಾಗಲಿಲ್ಲ. ಮೂರನೇ ವಿಕೆಟ್​ಗೆ ರಹಾನೆ ಮತ್ತು ರಚಿನ್ ರವೀಂದ್ರ​ ಸೇರಿಕೊಂಡು ಉತ್ತಮ ಜತೆಯಾಟವೊಂದನ್ನು ಸಂಘಟಿಸಿ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು. ಉಭಯ ಆಟಗಾರರ ಈ ಬ್ಯಾಟಿಂಗ್​ನಿಂದ ತಂಡಕ್ಕೆ 10 ಸರಾಸರಿಯಲ್ಲಿ ರನ್​ ಹರಿದುಬಂತು. ಉತ್ತಮವಾಗಿ ಆಡುತ್ತಿದ್ದ ಈ ಜೋಡಿಯನ್ನು ಫರ್ಗುಸನ್​ ಕೊನೆಗೂ ಬೇರ್ಪಡಿಸಿದರು.

33 ರನ್​ ಗಳಿಸಿದ ವೇಳೆ ರಹಾನೆ ವಿಕೆಟ್​ ಕಳೆದುಕೊಂಡರು. ರಹಾನೆ ಮತ್ತು ರಚಿನ್​ ಸೇರಿಕೊಂಡು ಮೂರನೇ ವಿಕೆಟ್​ಗೆ 66 ರನ್​ ಒಟ್ಟುಗೂಡಿಸಿದರು. ಕರ್ನಾಟಕ ಮೂಲದವರೇ ಆದ ನ್ಯೂಜಿಲ್ಯಾಂಡ್​ ಆಟಗಾರ ರಚಿನ್​ ರವೀಂದ್ರ ಅರ್ಧಶತಕ ಬಾರಿಸುವ ಮೂಲಕ ಕನ್ನಡಿಗರಿಗೇ ಕಂಟಕವಾಗುವ ಸೂಚನೆ ನೀಡಿದರು. ಆದರೆ ಇವರ ಬ್ಯಾಟಿಂಗ್​ ಅಬ್ಬರಕ್ಕೆ ಸ್ವಪ್ನಿಲ್ ಸಿಂಗ್​ ಬ್ರೇಕ್​ ಹಾಕಿದರು. ಮ್ಯಾಕ್ಸ್​ವೆಲ್​ ಓವರ್​ನಲ್ಲಿ ಜೀವದಾನ ಪಡೆದರೂ ಕೂಡ ಇದೇ ಓವರ್​ನಲ್ಲಿ ಇಲ್ಲದ ರನ್​ ಕದಿಯಲು ಹೋಗಿ ರನೌಟ್​ ಬಲೆಗೆ ಬಿದ್ದರು. ರಚಿನ್​ 37 ಎಸೆತಗಳಿಂದ 61 ರನ್(5 ಬೌಂಡರಿ, 3 ಸಿಕ್ಸರ್​) ಬಾರಿಸಿದರು. ಈ ವಿಕೆಟ್​ ಪತನದ ಬಳಿಕ ಶಿವಂ ದುಬೆ(7) ವಿಕೆಟ್​ ಕೂಡ ಬಿತ್ತು.

ಮತ್ತೆ ಮಿನುಗಿದ ರವೀಂದ್ರ ಜಡೇಜಾ ಮತ್ತು ಧೋನಿ

ರವೀಂದ್ರ ಜಡೇಜಾ ಮತ್ತು ಧೋನಿ ಸೇರಿಕೊಂಡು 201 ರನ್​ ಬಾರಿಸಲು ಶಕ್ತಿ ಮೀರಿ ಪ್ರಯತ್ನಪಟ್ಟರೂ ಕೂಡ ಇದು ಸಾಧ್ಯವಾಗಲಿಲ್ಲ. ಧೋನಿ ಕ್ರೀಸ್​ನಲ್ಲಿ ಇರುತ್ತಿದ್ದರೆ ಚೆನ್ನೈಗೆ ಗೆಲುವು ಖಚಿತವಾಗಿರುತ್ತಿತ್ತು. 6 ಎಸೆತಗಳಲ್ಲಿ 17 ರನ್​ ಬೇಕಿದ್ದಾಗ ಧೋನಿ ಯಶ್​ ದಯಾಳ್​ ಅವರ ಮೊದಲ ಎಸೆತವನ್ನೇ ಸ್ಟೇಡಿಯಂನಿಂದ ಹೊರಗೆಡೆ ಬಾರಿಸಿ 6 ರನ್​ ಕಲೆಹಾಕಿದರು. ಈ ಸಿಕ್ಸರ್​ 110 ಮೀಟರ್​ ದೂರಕ್ಕೆ ಸಿಡಿಯಿತು. ಆದರೆ ಮುಂದಿನ ಎಸೆತದಲ್ಲಿಯೂ ಧೋನಿ ಸಿಕ್ಸರ್​ ಬಾರಿಸುವ ಪ್ರಯತ್ನದಲ್ಲಿ ಬೌಂಡರಿ ಲೈನ್​ನಲ್ಲಿ ಕ್ಯಾಚ್​ ನೀಡಿ ವಿಕೆಟ್​ ಕಳೆದುಕೊಂಡರು. ಇಲ್ಲಿಗೆ ಚೆನ್ನೈ ಸೋಲು ಕೂಡ ಖಚಿತಗೊಂಡಿತು. ಅಂತಿಮ 2 ಎಸೆತದಲ್ಲಿ 10 ರನ್​ ಗಳಿಸುವ ಯತ್ನದಲ್ಲಿ ಜಡೇಜಾ ವಿಫಲರಾದರು. ಧೋನಿ 13 ಎಸೆತಗಳಿಂದ 25 ರನ್​ ಚಚ್ಚಿದರು.

18ರಂದು ಆಡಿದ್ದ ಎಲ್ಲಾ ಪಂದ್ಯ ಗೆದ್ದ ಆರ್​ಸಿಬಿ

ಆರ್​ಸಿಬಿಗೆ ಮೇ 18 ಎನ್ನುವುದು ಬಹಳ ಅದೃಷ್ಟದ ದಿನವಾಗಿತ್ತು. ಹೌದು, ಇದುವರೆಗಿನ ಐಪಿಎಲ್​ ಇತಿಹಾಸದಲ್ಲಿ ಆರ್​ಸಿಬಿ ಈ ದಿನದಂದು ಆಡಿದ ಎಲ್ಲ ಪಂದ್ಯಗಳನ್ನು ಗೆದ್ದಿತ್ತು. ಹೀಗಾಗಿ ಇಂದು ಕೂಡ ಆರ್​ಸಿಬಿ ಗೆಲುವು ಸಾಧಿಸಬಹುದು ಎನ್ನುವುದು ಅಭಿಮಾನಿಗಳ ಬಲವಾದ ನಂಬಿಕೆಯಾಗಿತ್ತು. ಅದರಂತೆ ಆರ್​ಸಿಬಿ ಗೆಲುವು ಸಾಧಿಸಿ ಅಭಿಮಾನಿಗಳ ನಂಬಿಕೆಯನ್ನು ಉಳಿಸಿಕೊಂಡಿದೆ. ಮೇ 18ರಂದು ಆರ್​ಸಿಬಿ ವಿರುದ್ಧ ಚೆನ್ನೈ 3ನೇ ಸೋಲಿಗೆ ತುತ್ತಾಯಿತು.

Categories
ಕ್ರಿಕೆಟ್ ಹೊಸನಗರ

ಮೆಕೇರಿ ಕ್ರಿಕೆಟ್ ಲೀಗ್ ಸೀಸನ್ 4 ಎಮ್ ಸಿ ಎಲ್ 2024 

ಮೆಕೇರಿ ಕ್ರಿಕೆಟ್ ಲೀಗ್ ಸೀಸನ್ 4 ಎಮ್ ಸಿ ಎಲ್ 2024 
– ಮೇ 11 ಮತ್ತು ಮೇ 12 ರಂದು ಯಶಸ್ವಿಯಾಗಿ ಮುಕ್ತಾಯಗೊಂಡಿದೆ
– ಹೊಸನಗರ ತಾ. ಸಿರಿಮನೆ ಕ್ರೀಡಾಂಗಣದಲ್ಲಿ ಆಯೋಜನೆಗೊಂಡಿತು

NAMMUR EXPRESS NEWS
ಹೊಸನಗರ: ಹೊಸನಗರ ತಾಲೂಕಿನ ಸಿರಿಮನೆ ಕ್ರೀಡಾಂಗಣ ಮೇಕೇರಿಯಲ್ಲಿ ದಿನಾಂಕ : 11-05-2024 ರ ಶನಿವಾರ ಮತ್ತು 12-05-2024ರ ಭಾನುವಾರ ಮೇಕೆರಿ ಕ್ರಿಕೆಟ್ ಲೀಗ್ ಪಂದ್ಯಾವಳಿ ಯಶಸ್ವಿಯಾಗಿ ಮುಕ್ತಾಯಗೊಂಡಿದೆ . ಮೇ 11ರ ಶನಿವಾರ ಬೆಳಗ್ಗೆ 7 ಗಂಟೆಗೆ ರಾಷ್ಟ್ರೀಯ ಅಥ್ಲೆಟಿಕ್ ಚಾಂಪಿಯನ್ ದೀಕ್ಷಾ ಗಿಣಿಕಲ್ ಹಾಗೂ ನಗರ ಠಾಣೆ ಸಬ್ ಇನ್ಸ್ಪೆಕ್ಟರ್ ರಮೇಶ್ ರವರು ಕಾರ್ಯಕ್ರಮವನ್ನು ಉದ್ಘಾಟಿಸಿದ್ದು ಯಡೂರು ಗ್ರಾಮ ಪಂಚಾಯತ್ ಸದಸ್ಯರು ಶೇಷಾದ್ರಿ ಟಿ ಎಂ, ವಿನಾಯಕ ಸೇವಾ ಸಮಿತಿ ಅಧ್ಯಕ್ಷರು ಮಂಜುನಾಥ್ ಎಂ ಓ ಹಾಗೂ ಎಂ ಎಲ್ ಸಿ ಕ್ರಿಕೆಟ್ ನಲ್ಲಿ ಭಾಗವಹಿಸುವ 12 ತಂಡಗಳ ಮಾಲೀಕರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.

ಬಹುಮಾನ ವಿತರಣೆ ಮತ್ತು ಸಮಾರೋಪ ಸಮಾರಂಭವು ದಿನಾಂಕ:12-05-2024 ರ ಸಂಜೆ 6 ಗಂಟೆಗೆ ಈಶ ಕ್ರಿಕೆಟರ್ಸ್ ಅಧ್ಯಕ್ಷರಾದ ಅಂಕಿತ್ ಮೇಕೆರಿ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಅರ್ಜುನ್ ಸಿರಿಮನೆ ಅವರು ವೇದಿಕೆ ಯಲ್ಲಿ ಸ್ವಾಗತ ಭಾಷಣ ನಡೆಸಿಕೊಟ್ಟ ರು.ಈ ಯಶಸ್ವಿಗೆ ಕಾರಣಕರ್ತರಾದ 12 ತಂಡದ ಮಾಲಿಕರು,ಆಟಗಾರರು,ದಾನಿಗಳು, ಗ್ರಾಮಸ್ಥರು ಹಾಗೂ ಆಯೋಜಕರು ಮಿತ್ರರಿಗು ಧನ್ಯವಾದಗಳು. ಕಿಶೋರ್ ಶೆಟ್ಟಿ ಮೇಲಿನ ಬೈಸೆ ಇವರು ವಂದನಾರ್ಪಣೆ ಮಾಡಿದರು. ಮುಖ್ಯ ಅತಿಥಿಗಳಾಗಿ ಶಾಸಕರು ಆರಗ ಜ್ಞಾನೇಂದ್ರ, ಗ್ರಾಮ ಪಂಚಾಯತ್ ಸದಸ್ಯರು ಶೇಷಾದ್ರಿ ಟಿ ಎಂ, ಬಿಜೆಪಿ ಮುಖಂಡರು ದಿನೇಶ್ ವಾಟಗದ್ದೆ, ನ್ಯಾಯವಾದಿಗಳು ಶಶಾಂಕ್ ಕೆ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರು ಸತೀಶ್ ಹೆಚ್ ಡಿ ಆಗಮಿಸಿದ್ದರು.

ಪ್ರಶಾಂತ್ ಕುಕ್ಕೆ, ಹಾಲ್ಗದ್ದೆ ಉಮೇಶ್, ಪೂರ್ಣೇಶ್ ಮಲೆಬೈಲ್, ಸುರೇಂದ್ರ ಯಡೂರ್, ಮೇಘರಾಜ್ ಉಪಸ್ಥಿತರಿದ್ದರು. ಮೆಕೇರಿ ಕ್ರಿಕೆಟ್ ಲೀಗ್ 2024 – ಸೀಸನ್ 4 ನ ಪ್ರಥಮ ಬಹುಮಾನ ಪಡೆದ ಮುರುಳಿ ಬ್ರಿಗೇಡ್ ತಂಡ ದ್ವಿತೀಯ ಬಹುಮಾನ ಪಡೆದ ಆರ್ ಆರ್ ಬ್ರದರ್ಸ್ ತಂಡದವರಿಗೆ, ತೃತೀಯ ಸ್ಥಾನ ಪಡೆದ SGRP ಲೆಜೆಂಡ್ಸ್ ತಂಡದವರಿಗೆ, ನೇಚರ್ ಕಿಂಗ್ಸ್ ತಂಡದವರಿಗೆ ಅಭಿನಂದನೆಗಳು, ಸರಿ ಸುಮಾರು 50 ದಿನಗಳಿಂದ ನಮ್ಮೊಂದಿಗೆ ಇದ್ದು ಸಹಕರಿಸಿದ ಎಲ್ಲ ಆಟಗಾರರಿಗೆ ಧನ್ಯವಾದಗಳು.

ವೇದಿಕೆ ಮೇಲೆ SSLC ಅಲ್ಲಿ 625 ಕ್ಕೆ 620 ಅಂಕ ಪಡೆದು ಹೊಸನಗರ ತಾಲೂಕಿಗೆ ಕೀರ್ತಿ ತಂದಿರುವ ನಿಹಾಲ್ ಹಾಗೂ ಸತೀಶ್ ಶೆಟ್ಟಿಕೊಪ್ಪ ನಿವೃತ್ತ ಎ. ಎಸ್. ಐ ಆರಕ್ಷಕ ಇಲಾಖೆ ಇವರನ್ನು ಸನ್ಮಾನಿಸಲಾಯಿತು.

ಅಂಕಿತ್ ಮೇಕೇರಿ ಅಧ್ಯಕ್ಷರು ಈಶ ಕ್ರಿಕೆಟರ್ಸ್ ಮೇಕೇರಿ ಕವರಿ

Categories
ಕ್ರಿಕೆಟ್ ತೀರ್ಥಹಳ್ಳಿ ಮಲ್ನಾಡ್ ಹೊಸನಗರ

ಮೇಕೇರಿ ಕ್ರಿಕೇಟ್ ಲೀಗ್ ಸೀಸನ್ 4 ಎಮ್ ಸಿ ಎಲ್ …!

ಮೇಕೇರಿ ಕ್ರಿಕೇಟ್ ಲೀಗ್ ಸೀಸನ್ 4 ಎಮ್ ಸಿ ಎಲ್ …!
– ಮೇ 11 ರ ಶನಿವಾರ ಬೆಳಗ್ಗೆ ಉದ್ಘಾಟನೆ
– ಹೊಸನಗರ ತಾ. ಸಿರಿಮನೆ ಕ್ರೀಡಾಂಗಣದಲ್ಲಿ ಆಯೋಜನೆ
– ಯೂಟ್ಯೂಬ್ ನಲ್ಲಿ ಪಂದ್ಯಾವಳಿಯ ನೇರ ಪ್ರಸಾರ

NAMMUR EXPRESS NEWS
ಹೊಸನಗರ: ಹೊಸನಗರ ತಾಲೂಕಿನ ಸಿರಿಮನೆ ಕ್ರೀಡಾಂಗಣ ಮೇಕೇರಿಯಲ್ಲಿ ದಿನಾಂಕ : 11-05-2024 ರ ಶನಿವಾರ ಮತ್ತು 12-05-2024ರ ಭಾನುವಾರ ಮೇಕೆರಿ ಕ್ರಿಕೆಟ್ ಲೀಗ್ ಸೀಸನ್ 4 ಎಮ್ ಸಿ ಎಲ್ ಪಂದ್ಯಾವಳಿ ನಡೆಯಲಿದೆ. ಮೇ 11ರ ಶನಿವಾರ ಬೆಳಗ್ಗೆ 7 ಗಂಟೆಗೆ ರಾಷ್ಟ್ರೀಯ ಅಥ್ಲೆಟಿಕ್ ಚಾಂಪಿಯನ್ ದೀಕ್ಷಾ ಗಿಣಿಕಲ್ ಹಾಗೂ ನಗರ ಠಾಣೆ ಸಬ್ ಇನ್ಸ್ಪೆಕ್ಟರ್ ರಮೇಶ್ ರವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಯಡೂರು ಗ್ರಾಮ ಪಂಚಾಯತ್ ಸದಸ್ಯರು ಶೇಷಾದ್ರಿ ಟಿ ಎಂ, ವಿನಾಯಕ ಸೇವಾ ಸಮಿತಿ ಅಧ್ಯಕ್ಷರು ಮಂಜುನಾಥ್ ಎಂ ಓ ಹಾಗೂ ಎಂ ಎಲ್ ಸಿ ಕ್ರಿಕೆಟ್ ನಲ್ಲಿ ಭಾಗವಹಿಸುವ 12 ತಂಡಗಳ ಮಾಲೀಕರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.

ಬಹುಮಾನ ವಿತರಣೆ ಮತ್ತು ಸಮರೂಪ ಸಮಾರಂಭವು ದಿನಾಂಕ: 12-05-2024 ರ ಸಂಜೆ 6 ಗಂಟೆಗೆ ಈಶಾ ಕ್ರಿಕೆಟರ್ಸ್ ಅಧ್ಯಕ್ಷರಾದ ಅಂಕಿತ್ ಮೇಕೆರಿ ರವರ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ಶಾಸಕರು ಆರಗ ಜ್ಞಾನೇಂದ್ರ, ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷರು ಡಾ. ಆರ್‌ಎಂ ಮಂಜುನಾಥ್ ಗೌಡ್ರು, ಮಾಜಿ ಶಾಸಕರು ಕಿಮ್ಮನೆ ರತ್ನಾಕರ್, ಗ್ರಾಮ ಪಂಚಾಯತ್ ಅಧ್ಯಕ್ಷರು ಪ್ರಕಾಶ್, ಗ್ರಾಮ ಪಂಚಾಯತ್ ಸದಸ್ಯರು ಶೇಷಾದ್ರಿ ಟಿ ಎಂ, ತಾಲೂಕು ಪಂಚಾಯತ್ ಸದಸ್ಯರು ಮಂಜುನಾಥ್, ಬಿಜೆಪಿ ಮುಖಂಡರು ದಿನೇಶ್ ಮಾಟಗದ್ದೆ, ನ್ಯಾಯವಾದಿಗಳು ಶಶಾಂಕ್ ಕೆ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರು ಸತೀಶ್ ಹೆಚ್ ಡಿ ಆಗಮಿಸಲಿದ್ದಾರೆ.

ವಿಶೇಷ ಅಹ್ವಾನಿತಾರಾಗಿ ತಾಲೂಕು ದಂಡಾಧಿಕಾರಿ ರಶ್ಮಿ ಹೆಚ್ ಜೆ, ಪೊಲೀಸ್ ವರಿಷ್ಠಾಧಿಕಾರಿ ಗಜಾನನ ವಾಮನ ಸುತಾರ, ಬಿ ಟಿವಿ ವರದಿಗಾರರು ವಿಕಾಸ್ ಗೌಡ ಆಗಮಿಸಲಿದ್ದಾರೆ. ಕೆ ಎಸ್ ಸಿ ಎ ತೀರ್ಪುಗಾರರಿಂದ ಪಂದ್ಯಾವಳಿಯ ಅಂಪೈರಿಂಗ್ ನಡೆಯಲಿದೆ. ನಾಡಿನಾದ್ಯಂತ ತಮ್ಮ ಕಂಚಿನ ಕಂಠದಿಂದ ಪ್ರೇಕ್ಷಕರ ಮನ ಗೆದ್ದಿರುವ ಸುಂದರೇಶ್ ಉಳುಕೊಪ್ಪ ಹಾಗೂ ಅವಿನಾಶ್, ಯಡೂರು ಹಾಗೂ ಅಭಿ ಮಾಸ್ತಿಕಟ್ಟೆ ಇವರು ವೀಕ್ಷಕರ ವಿವರಣೆಕಾರರಾಗಿ ಭಾಗವಹಿಸಲಿದ್ದಾರೆ.

ಈ ಪಂದ್ಯಾವಳಿಯು ಬಿ ಎಸ್ ಎನ್ ಎಲ್ ಇಲಾಖೆಯ ಸಹಯೋಗದೊಂದಿಗೆ www.youtube.com/msports ನಲ್ಲಿ ನೇರ ಪ್ರಸಾರವಾಗಲಿದೆ.

ಶ್ರೀ ಗಣೇಶ್ ಮತ್ತು ಸಹನಾ ದಂಪತಿಗಳ ಪುತ್ರ ನಿಹಾಲ್ ರವರು ಸರ್ಕಾರಿ ಪ್ರೌಢಶಾಲೆ ಯಡೂರು ನಲ್ಲಿ SSLC ಓದುತ್ತಿದ್ದು ಇವರು ಈ ಬಾರಿ 625 ಕ್ಕೆ 620 ಅಂಕಗಳನ್ನು ಗಳಿಸಿ ಶಾಲೆಗೆ ಹಾಗೆ ನಮ್ಮ ತಾಲ್ಲೂಕಿಗೆ ಕೀರ್ತಿ ತಂದಿರುತ್ತಾರೆ..ಇವರಿಗೆ ಟೀಮ್ ಎಂ ಸಿ ಎಲ್ ಹಾಗೂ ಈಶ ಕ್ರಿಕರ್ಟಸ್ ವತಿಯಿಂದ ಸನ್ಮಾನ ಕಾರ್ಯಕ್ರಮವಿರುತ್ತದೆ…

 

Categories
ಕ್ರಿಕೆಟ್

ಟಿ20 ವಿಶ್ವಕಪ್‌ಗೆ ಭಾರತ ತಂಡ ಪ್ರಕಟ: ರಾಹುಲ್ ಔಟ್!

ಟಿ20 ವಿಶ್ವಕಪ್‌ಗೆ ಭಾರತ ತಂಡ ಪ್ರಕಟ: ರಾಹುಲ್ ಔಟ್!
– ರೋಹಿತ್‌ ಶರ್ಮಾ ನಾಯಕ, ಉಪ ನಾಯಕನಾಗಿ ಹಾರ್ದಿಕ್ ಪಾಂಡ್ಯ
– ಯಾರಿಗೆ ಅವಕಾಶ? ಯಾರಿಗೆ ಅವಕಾಶ ಸಿಗಲಿಲ್ಲ?

NAMMUR EXPRESS NEWS
2024ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಗೆ 15 ಆಟಗಾರರ ಭಾರತ ತಂಡವನ್ನು ಮಂಗಳವಾರ ಬಿಸಿಸಿಐ ಪ್ರಕಟಿಸಿದೆ. ನಿರೀಕ್ಷೆಯಂತೆ ಭಾರತ ತಂಡವನ್ನು ರೋಹಿತ್‌ ಶರ್ಮಾ ಮುನ್ನಡೆಸಲಿದ್ದು, ಉಪ ನಾಯಕನಾಗಿ ಹಾರ್ದಿಕ್ ಪಾಂಡ್ಯ ಆಯ್ಕೆಯಾಗಿದ್ದಾರೆ. ರಾಜಸ್ಥಾನ್‌ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್‌ ಹಾಗೂ ಯುಜ್ವೇಂದ್ರ ಚಹಲ್ ಅವರು ಭಾರತ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಆದರೆ ಕನ್ನಡಿಗ ಕೆಎಲ್‌ ರಾಹುಲ್‌ ಅವರು ತಂಡದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ.

2024ರ ಐಸಿಸಿ ಟಿ20 ವಿಶ್ವಕಪ್‌ಗೆ ಭಾರತ ತಂಡ ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ (ಉಪನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿ.ಕೀ), ಸಂಜು ಸ್ಯಾಮ್ಸನ್ (ವಿ.ಕೀ), ಶಿವಂ ದುಬೆ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲ್‌ದೀಪ್ ಯಾದವ್, ಯುಜ್ವೇಂದ್ರ ಚಹಲ್ , ಅರ್ಷದೀಪ್ ಸಿಂಗ್, ಜಸ್‌ಪ್ರೀತ್‌ ಬುಮ್ರಾ, ಮೊಹಮ್ಮದ್ ಸಿರಾಜ್.
ಮೀಸಲು ಆಟಗಾರರು: ಶುಭಮನ್ ಗಿಲ್, ರಿಂಕು ಸಿಂಗ್, ಖಲೀಲ್ ಅಹ್ಮದ್ ಮತ್ತು ಆವೇಶ್ ಖಾನ್