Categories
death ಅಪಘಾತ ರಾಜ್ಯ

ದೆಹಲಿಯಲ್ಲಿ ಉಗ್ರರ ಅಟ್ಟಹಾಸ: ಮೂವರು ಡಾಕ್ಟರ್ ಅರೆಸ್ಟ್!

ದೆಹಲಿಯಲ್ಲಿ ಉಗ್ರರ ಅಟ್ಟಹಾಸ: ಮೂವರು ಡಾಕ್ಟರ್ ಅರೆಸ್ಟ್!
– 13 ಮಂದಿ ಜನರ ಬಲಿ ಪಡೆದ ಕಾರು ಬಾಂಬ್ ಸ್ಫೋಟ
– ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ ಘಟನೆ: ಎಲ್ಲೆಡೆ ಸಂತಾಪ

ಪ್ರಾಣ ತೆತ್ತ ಜೀವಗಳಿಗೆ ಭಾವಪೂರ್ಣ ಶ್ರದ್ದಾಂಜಲಿ

NAMMUR EXPRESS NEWS
ನವ ದೆಹಲಿ: ನವ ದೆಹಲಿಯಲ್ಲಿ ಉಗ್ರರು ಅಟ್ಟಹಾಸ ಮೆರೆದಿದ್ದಾರೆ. ಇಡೀ ದೇಶವೇ ಬೆಚ್ಚಿ ಬಿದ್ದಿದೆ. ಉಗ್ರರು ನಡೆಸಿದ ಕಾರ್ ಬಾಂಬ್ ಸ್ಪೋಟಿಸಿದ್ದು 13 ಜನ ಬಲಿ ಆಗಿದ್ದಾರೆ.
ನವ ದೆಹಲಿ ಮೆಟ್ರೋ ನಿಲ್ದಾಣದ ಒಳಭಾಗದ ಗಾಜುಗಳು ಸ್ಫೋಟದಿಂದಾಗಿ ಪುಡಿಪುಡಿಯಾಗಿವೆ. ಘಟನಾ ಸ್ಥಳದಲ್ಲಿ ಸುಮಾರು 22ಕ್ಕೂ ಹೆಚ್ಚು ವಾಹನಗಳು, ಬೈಕ್‌ಗಳು ಮತ್ತು ಸುತ್ತಮುತ್ತಲ ಅಂಗಡಿಗಳು ತೀವ್ರವಾಗಿ ಹಾನಿಗೊಳಗಾಗಿವೆ. ಈ ಘಟನೆಯಲ್ಲಿ 13 ಮಂದಿ ಸಾವನ್ನಪ್ಪಿದ್ದು, ಅನೇಕರು ಗಾಯಗೊಂಡಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಜೈಷೆ ಮಹಮದ್ ಸಂಘಟನೆ ಸೇರಿದ ಪುಲ್ವಾಮ ದಾಳಿ ಮಾಡಿದ ಕಾರು ಮಾದರಿ ದಾಳಿ ಇದಾಗಿದ್ದು, ಫಾರಿದಾಬಾದಿನ ಮೂವರು ವೈದ್ಯರಾದ
ಡಾ. ಅದೀಲ್ ಅಹ್ಮದ್, ಡಾ. ಮುಜಾಮಿಲ್ ಶಕೀಲ್, ಡಾ. ಶಾಹಿನ್ ಎಂಬ ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.
ಸ್ಫೋಟದಲ್ಲಿ ವಾಹನ, ಆಟೋ ಸೇರಿದಂತೆ ಹಲವು ವಾಹನಗಳು ಧಗಧಗಿಸಿವೆ. ಕಾರ್‌ನಲ್ಲಿ ಸ್ಫೋಟಕಗಳನ್ನು ಸಾಗಿಸುವಾಗ ಸಂಭವಿಸಿರಬಹುದು ಎಂದು ದೆಹಲಿ ಪೊಲೀಸರು ಮೇಲ್ನೋಟಕ್ಕೆ ಶಂಕಿಸಿದ್ದಾರೆ.
ಇನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಗಾಯಾಳುಗಳನ್ನು ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ. ಎನ್‌ಐಎ, ಎನ್‌ಎಸ್‌ಜಿ ಮತ್ತು ಬಾಂಬ್ ಸ್ಕ್ವಾಡ್ ತಂಡಗಳು ಸ್ಥಳದಲ್ಲಿ ಪರಿಶೀಲನೆ ನಡೆಸಿವೆ.

ಘಟನೆ ನಡೆದಿದ್ದು ಹೇಗೆ?

ದೆಹಲಿ ಮೆಟ್ರೋ ನಿಲ್ದಾಣದ ಗೇಟ್‌ ನಂಬರ್‌ 1 ರಲ್ಲಿ ನಿಂತಿದ್ದ ಕಾರು ಏಕಾಏಕಿ ಸ್ಫೋಟವಾಗಿತ್ತು. ಸ್ಫೋಟದ ತೀವ್ರತೆಗೆ ಹಲವು ವಾಹನಗಳು ಹೊತ್ತಿ ಉರಿದಿವೆ. ಕಾರು, ಗೂಡ್ಸ್‌ ವಾಹನ, ಆಟೋ ಸೇರಿದಂತೆ ಹಲವು ವಾಹನಗಳು ಧಗಧಗಿಸಿವೆ. ಕಾರ್‌ನಲ್ಲಿ ಸ್ಫೋಟಕಗಳನ್ನು ಸಾಗಿಸುವಾಗ ಸಂಭವಿಸಿರಬಹುದು ಎಂದು ದೆಹಲಿ ಪೊಲೀಸರು ಮೇಲ್ನೋಟಕ್ಕೆ ಶಂಕಿಸಿದ್ದಾರೆ.
ದೆಹಲಿಯ ಸುಭಾಷ್ ಮಾರ್ಗದ ಟ್ರಾಫಿಕ್ ಸಿಗ್ನಲ್ ಸ್ಫೋಟಗೊಂಡ ಕಾರಿನ (ಸಂಖ್ಯೆ HR 26, 7674) ಸುಳಿವು ಪತ್ತೆಯಾಗಿದ್ದು, ಹರಿಯಾಣ ಮೂಲದ ಸಲ್ಮಾನ್ ಎಂಬಾತನನ್ನ ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ.
ಪೊಲೀಸರ ಪ್ರಾಥಮಿಕ ವಿಚಾರಣೆ ವೇಳೆ ತಾನು ಮೊಹಮ್ಮದ್ ನದೀಮ್ ಅನ್ನೋರಿಗೆ ಕಾರು ಮಾರಾಟ ಮಾಡಿರುವುದಾಗಿ ಸಲ್ಮಾನ್ ಹೇಳಿದ್ದಾನೆ. ಸದ್ಯ ವಶಕ್ಕೆ ಪಡೆದಿರುವ ದೆಹಲಿ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಘಟನೆ ಬಗ್ಗೆ ಸಾರ್ವಜನಿಕವಾಗಿ ಆಕ್ರೋಶ ವ್ಯಕ್ತವಾಗುತ್ತಿದೆ.

Categories
death Uncategorized ಮಲ್ನಾಡ್

ಹಸೆಮಣೆ ಏರಬೇಕಿದ್ದ ಯುವತಿ ಇಂದು ಹೃದಯಾಘಾತಕ್ಕೆ ಬಲಿ

ಹಸೆಮಣೆ ಏರಬೇಕಿದ್ದ ಯುವತಿ ಇಂದು ಹೃದಯಾಘಾತಕ್ಕೆ ಬಲಿ

* ಲೋ ಬ್ಲಡ್ ಪ್ರಷರ್ ಹಾಗೂ ಹೃದಯಾಘಾತದಿಂದ ಸಾವು ಶಂಕೆ
* ಶುಕ್ರವಾರ ನಡೆಯಬೇಕಿದ್ದ ಮದುವೆ,ವಿಧಿಯ ಕ್ರೂರ ಅಟ್ಟಹಾಸ

NAMMMUR EXPRESS NEWS
ಅಜ್ಜಂಪುರ: ವೈವಾಹಿಕ ಜೀವನಕ್ಕೆ ಪಾದಾರ್ಪಣೆ ಮಾಡಲು ಸಜ್ಜಾಗಿದ್ದ ಯುವತಿಯೊಬ್ಬಳು ಅಕಾಲಿಕವಾಗಿ ಮರಣಹೊಂದಿದ ಹೃದಯವಿದ್ರಾವಕ ಘಟನೆ ಅಜ್ಜಂಪುರ ತಾಲೂಕಿನಲ್ಲಿ ನಡೆದಿದೆ. ಮದುವೆಗೆ ಕೇವಲ ಒಂದು ದಿನ ಬಾಕಿ ಇರುವಾಗ, ಸೊಲ್ಲಾಪುರ ಗ್ರಾಮದ ಶೃತಿ(24)ಅವರು ಅಕಸ್ಮಿಕವಾಗಿ ಮೃತಪಟ್ಟಿದ್ದಾರೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಶೃತಿ ಅವರಿಗೆ ಲೋ ಬ್ಲಡ್ ಪ್ರೆಶರ್ ಹಾಗೂ ಹೃದಯಾಘಾತ ಉಂಟಾಗಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.

* ಶುಕ್ರವಾರ ನಡೆಯಬೇಕಿದ್ದ ಮದುವೆಗೆ,ವಿಧಿಯ ಕ್ರೂರ ಅಟ್ಟಹಾಸ
ಶೃತಿ ಅವರ ಮದುವೆ ತರೀಕೆರೆ ಪಟ್ಟಣದ ದಿಲೀಪ್ ಎಂಬ ಯುವಕನೊಂದಿಗೆ ನಾಳೆ (ಶುಕ್ರವಾರ) ನಡೆಯಬೇಕಿತ್ತು. ಮದುವೆ ಸಿದ್ಧತೆಗಳು ಜೋರಾಗಿ ನಡೆಯುತ್ತಿದ್ದಾಗಲೇ ಈ ದುರ್ಘಟನೆ ನಡೆದಿದ್ದು, ಮನೆಯವರಲ್ಲಿ ಹಾಗೂ ಸಂಬಂಧಿಕರ ವಲಯದಲ್ಲಿ ಆಘಾತದ ಅಲೆ ಹರಡಿದೆ.ಮದುವೆ ಸಂಭ್ರಮದ ಮನೆಯನ್ನು ಕ್ಷಣಾರ್ಧದಲ್ಲಿ ಸೂತಕದ ವಾತಾವರಣ ಆವರಿಸಿದ್ದು, ಕಣ್ಣೀರಿನಲ್ಲಿ ಶೃತಿ ಅವರ ಅಂತ್ಯ ಸಂಸ್ಕಾರಗಳು ನೆರವೇರಲಿದೆ.
ಘಟನೆಯ ಕುರಿತು ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಗ್ರಾಮಸ್ಥರು ಹಾಗೂ ಬಂಧುಬಳಗದವರು ಈ ದುರ್ಘಟನೆಯಿಂದ ನೋವು ವ್ಯಕ್ತಪಡಿಸುತ್ತಿದ್ದು, “ಮದುವೆ ದಿನಕ್ಕೂ ಮುನ್ನವೇ ಇಂತಹ ದುರಂತ ಸಂಭವಿಸಿರುವುದು ವಿಧಿಯ ಕ್ರೂರ ಅಟ್ಟಹಾಸ ಎಂದು ಕಣ್ಣೀರಿಟ್ಟಿದ್ದಾರೆ.

Categories
death Uncategorized ತೀರ್ಥಹಳ್ಳಿ ಮಲ್ನಾಡ್ ಶಿವಮೊಗ್ಗ

ವೃದ್ಧೆ ಜೀವ ತೆಗೆದ ನಾಗರ ಹಾವು..ಸರ್ಕಾರವೂ ಕಾರಣ!

ವೃದ್ಧೆ ಜೀವ ತೆಗೆದ ನಾಗರ ಹಾವು..ಸರ್ಕಾರವೂ ಕಾರಣ!
* ನದಿ ದಾಟಲು ಆಗದೆ ಹಾವು ಕಚ್ಚಿ ಅಸುನೀಗಿದ ವೃದ್ದೆ
* ಈ ಸಾವಿಗೆ ನಾಗರ ಹಾವು ಮಾತ್ರ ಅಲ್ಲ, ಆಡಳಿತವೂ ಹೊಣೆ!

NAMMUR EXPRESS NEWS
ತೀರ್ಥಹಳ್ಳಿ: ಕೋಣಂದೂರು ಸಮೀಪದ ಆಲಸೆ ಗ್ರಾಮದಲ್ಲಿ ಇತ್ತೀಚಿಗೆ ಕಪ್ಪೆಯನ್ನು ಬೆನ್ನಟ್ಟಿ ಬಂದ ನಾಗರಹಾವು ತಾನು ಹೊಂಚು ಹಾಕಿದ ಬೇಟೆ ತಪ್ಪಿಸಿಕೊಂಡಿತು ಎಂಬ ಸಿಟ್ಟಿನಲ್ಲಿ ಜಾನಕಮ್ಮ(85)ಎಂಬ ವೃದ್ದೆಯ ಜೀವವನ್ನೇ ಕಿತ್ತುಕೊಂಡ ಘಟನೆ ನಡೆದಿದೆ. ಒಂದು ಕಡೆ ಅಜ್ಜಿಯ ಜೀವ ಹೋಗಲು ಹಾವು ಕಾರಣ ಆದ್ರೆ ಮತ್ತೊಂದು ಕಡೆ ಈ ಗ್ರಾಮಕ್ಕೆ ಸರ್ಕಾರ ಮೂಲಭೂತ ಸೌಲಭ್ಯ ಕೊಡದ ಆಡಳಿತ ಕೂಡ ಈ ಸಾವಿಗೆ ಕಾರಣವಾಗಿದೆ.
ಹಾವು ಕಚ್ಚಿದ ತಕ್ಷಣ ಸ್ಥಳೀಯರು ವೃದ್ದೆಯನ್ನು ಹೊತ್ತು ಕೊಂಡು ಸ್ವಲ್ಪ ದೂರ ಗೌರಿ ಹೊಳೆ ಎಂಬ ಹೊಳೆಯಲ್ಲಿ ನಡೆದು ಕೊಂಡೆ ಅವರನ್ನು ಕೋಣಂದೂರು ಆಸ್ಪತ್ರೆಗೆ ದಾಖಲಿಸಿದರೂ, ಕೋಣಂದೂರಿನಿಂದ ತೀರ್ಥಹಳ್ಳಿಗೆ ಕರೆದುಕೊಂಡು ಹೋಗುವ ಮಾರ್ಗ ಮಧ್ಯದಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಜಾನಕಮ್ಮ ಅವರು ಪ್ರಾಣ ಬಿಟ್ಟಿದ್ದಾರೆ. ಅಚ್ಚರಿಯ ಸಂಗತಿ ಎಂದರೆ ನಾಗರಹಾವು ಮರುದಿನವೂ ಅದೇ ಜಾಗದಲ್ಲಿ ಮತ್ತೆ ಕಾಣಿಸಿಕೊಂಡಿದೆ. ತಕ್ಷಣ ಉರಗ ತಜ್ಞರನ್ನು ಕರೆಸಿ ನಾಗರ ಹಾವನ್ನು ಹಿಡಿಸಿದ್ದಾರೆ.

ಗ್ರಾಮದ ಜನರ ಗೋಳುಕೇಳೋರಿಲ್ಲ..!

ಅಲಸೆ ಗ್ರಾಮದಲ್ಲಿ ಸುಮಾರು 15 ಮನೆಗಳಿದ್ದು ಆಲಸೆ ಗ್ರಾಮದಲ್ಲಿ ಪ್ರಖ್ಯಾತ ಧಾರ್ಮಿಕ ಕ್ಷೇತ್ರವಾದ ಚಂಡಿಕೇಶ್ವರಿ ದೇವಿ ನೆಲೆಸಿರುವ ಪುಣ್ಯಕ್ಷೇತ್ರವಾಗಿದೆ, ದಿನದಲ್ಲಿ ನೂರಾರು ಭಕ್ತರು ಭೇಟಿ ನೀಡುತ್ತಾರೆ ಆದರೆ ಇಲ್ಲಿನ ಕೆಲವು ಮನೆಗಳ ಪರಿಸ್ಥಿತಿ ಕರುಣಾಜನಕ ಮನೆಯ ಬಳಿ ಹರಿಯುವ ಸಣ್ಣ ನದಿ ಮತ್ತು ಅಲ್ಲಿ ನಿರ್ಮಾಣವಾಗದ ಕಾಲು ಸಂಕ (ಕಾಲುವೆ ಸೇತುವೆ) ಕಾರಣದಿಂದ ಗ್ರಾಮವು ದ್ವೀಪದಂತಾದ ಪರಿಸ್ಥಿತಿಯಲ್ಲಿ ಸಿಲುಕಿದೆ. ಮಳೆ ಬಂದರೆ ಹೊರಗೆ ಹೋಗುವುದು ಕಷ್ಟ, ತುರ್ತು ಸಂದರ್ಭದಲ್ಲಿ ಆಸ್ಪತ್ರೆಗೆ ತಲುಪಲು ಜನರು ಜೀವ ಪಣಕ್ಕಿಡಬೇಕಾದ ಪರಿಸ್ಥಿತಿ ಉಂಟಾಗಿದೆ. ಸರ್ಕಾರ, ಶಾಸಕರು, ಅಧಿಕಾರಿಗಳು ಕಣ್ಮುಚ್ಚಿಕೊಂಡಿದ್ದಾರೆ. ರಸ್ತೆಯೂ ಇಲ್ಲ, ಸೇತುವೆಯೂ ಇಲ್ಲ. ಸೌಲಭ್ಯಗಳ ಕೊರತೆಯಿಂದ ವೃದ್ದೆಯ ಜೀವ ಹೋದರೂ ಯಾವ ಅಧಿಕಾರಿಗಳು ತಲೆ ಕೆಡಿಸಿಕೊಂಡಿಲ್ಲ. ಈ ಬಗ್ಗೆ ಗ್ರಾಮಸ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜನರ ಕಣ್ಣೀರು ಒರೆಸಬೇಕಾದ ಸರ್ಕಾರವೇ ಕಾಣದಂತೆ ನಡೆದುಕೊಳ್ಳುತ್ತಿರುವ ಈ ನಿರ್ಲಕ್ಷ್ಯ, ಈಗ ಜನರ ಕೋಪಕ್ಕೆ ಕಾರಣವಾಗಿದೆ. ಊರಿನಲ್ಲಿ ಭಯದ ವಾತಾವರಣದ ಜೊತೆಗೆ ಸಿಟ್ಟು, ಬೇಸರ ಮತ್ತು ಪ್ರಶ್ನೆಗಳ ಮಳೆ ಮುಂದಿನ ಬಾರಿ ಮತ ಕೇಳಲು ಬರುವ ರಾಜಕಾರಣಿಗಳಿಗೆ ಶಾಪ ಆಗಲಿದೆ. ಯಾವುದೇ ಸರ್ಕಾರ ಬಂದರೂ ಈ ಗ್ರಾಮದ ಜನರ ಸಣ್ಣ ಬೇಡಿಕೆ ಕೂಡ ಈಡೇರಿಲ್ಲ. ಅಧಿಕಾರಿಗಳು ತಕ್ಷಣ ಗಮನಿಸಬೇಕು. ಇಲ್ಲವಾದಲ್ಲಿ ಮತ್ತಷ್ಟು ಸಮಸ್ಯೆ ಬಿಗಡಾಯಿಸಲಿದೆ.

Categories
death ತೀರ್ಥಹಳ್ಳಿ ಮಲ್ನಾಡ್ ಶಿವಮೊಗ್ಗ

ಕೋಣಂದೂರಿನ ಹಿರಿಯ ಮುಖಂಡ ಹುಲ್ಲತ್ತಿ ಗಿರಿರಾಜ್ ಗೌಡ್ರು ವಿಧಿವಶ

ಕೋಣಂದೂರಿನ ಹಿರಿಯ ಮುಖಂಡ ಹುಲ್ಲತ್ತಿ ಗಿರಿರಾಜ್ ಗೌಡ್ರು ವಿಧಿವಶ
– ತೀರ್ಥಹಳ್ಳಿ ತಾಲೂಕಿಗೆ ಅಪೂರ್ವ ಕೊಡುಗೆ ನೀಡಿದ್ದ ಸಮಾಜ ಜೀವಿ
• ಅ.1ರಂದು ಕೋಣಂದೂರಿನಲ್ಲಿ ಅಂತ್ಯಕ್ರಿಯೆ: ಗಣ್ಯರ ಸಂತಾಪ

NAMMUR EXPRESS NEWS
ಕೋಣಂದೂರು /ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಿನ ಪ್ರಮುಖ ನಾಯಕರಲ್ಲಿ ಒಬ್ಬರಾಗಿದ್ದ ಹುಲ್ಲತ್ತಿ ಗಿರಿರಾಜ್ ಗೌಡ್ರು ಅವರು ಅನಾರೋಗ್ಯ ಕಾರಣದಿಂದ ನಿಧನರಾಗಿದ್ದಾರೆ. ಇವರಿಗೆ ಸುಮಾರು 80 ವರ್ಷ ವಯಸ್ಸಾಗಿತ್ತು. ಕೋಣಂದೂರು ಪಂಚಾಯತ್ ಪ್ರಧಾನರಾಗಿ, ಕೋಣಂದೂರು ಗಣಪತಿ ಸಂಘದ ಅಧ್ಯಕ್ಷರಾಗಿ ಸುಮಾರು 40 ವರ್ಷಗಳ ಕಾಲ ಗಣೇಶೋತ್ಸವವನ್ನು ನಡೆಸಿದ್ದರು. ಕೋಣಂದೂರು ಎನ್. ಇ. ಎಸ್ ಸಂಸ್ಥೆಯ ಪ್ರಮುಖರಾಗಿ, ಸಮಾಜ ಸೇವಕರಾಗಿ, ಸಂಘ ಸಂಸ್ಥೆಗಳ ಮಾರ್ಗದರ್ಶಕರಾಗಿ ಕೆಲಸ ಮಾಡಿದ್ದರು.

ಕೋಣಂದೂರು ಗ್ರಾಮ ಪಂಚಾಯಿತಿಗೆ ಇವರು ಹಾಗೂ ಇವರ ತಂದೆ ಸೇರಿ ಸುಮಾರು 5 ಎಕರೆ ಜಾಗವನ್ನು ದಾನವಾಗಿ ನೀಡಿದ್ದರು. ರೋಟರಿ ಕ್ಲಬ್ ಗೆ ಸುಮಾರು 70ರಿಂದ 80 ಲಕ್ಷ ವೆಚ್ಚದ ನಿವೇಶನವನ್ನು ನೀಡಿದರು. ಇವರ ಸರಳ ಸಜ್ಜನಿಕೆ, ಸರಳ ವ್ಯಕ್ತಿತ್ವದ ಬಡವರ ಪರ ದನಿಯಾಗಿದ್ದ ನಾಯಕ ಇದೀಗ ನಿಧನರಾಗಿದ್ದು ತೀರ್ಥಹಳ್ಳಿಯ ಅನೇಕ ನಾಯಕರು ಇವರ ಸಾವಿಗೆ ಕಂಬನಿ ಮಿಡಿದಿದ್ದಾರೆ. ಜೊತೆಗೆ ಅತ್ಯಂತ ಸರಳ ಸಜ್ಜನಿಕೆಯ ಅಪಾರ ಸ್ನೇಹಿತರನ್ನು ಹೊಂದಿದ್ದ ಹುಲ್ಲತ್ತಿ ಗಿರಿರಾಜ್ ಗೌಡ್ರು ಅವರ ನಿಧನ ಈಗ ತುಂಬಲಾರದ ನಷ್ಟವಾಗಿದೆ. ಇವರಿಗೆ ಎರಡು ಗಂಡು, ಒಂದು ಹೆಣ್ಣು ಮಕ್ಕಳಿದ್ದು, ಮೊಮ್ಮಕ್ಕಳನ್ನು ಹಾಗೂ ಕುಟುಂಬವನ್ನು ಅಗಲಿದ್ದಾರೆ.

 

ಅಕ್ಟೋಬರ್ 1ನೇ ತಾರೀಕು ಹುಲ್ಲತ್ತಿ ಕೋಣಂದೂರಿನಲ್ಲಿ ಬೆಳಗ್ಗೆ 9 ಗಂಟೆಗೆ ಅಂತ್ಯಕ್ರಿಯೆ ನಡೆಯಲಿದೆ. ಇವರ ಸಾವಿಗೆ ಶಾಸಕ ಆರಗ ಜ್ಞಾನೇಂದ್ರ, ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಸಹಕಾರಿ ನಾಯಕ ಮಂಜುನಾಥ್ ಗೌಡ, ಒಕ್ಕಲಿಗ ಸಂಘದ ನಿರ್ದೇಶಕ ಸಿರಿಬೈಲ್ ಧರ್ಮೇಶ್, ಸ್ಥಳೀಯ ಮುಖಂಡರಾದ ಮಂಗಳ ಗೋಪಿ, ಕಂಪನಗದ್ದೆ ಸುರೇಶ್ ಸೇರಿದಂತೆ ಅನೇಕರು ಸಂತಾಪ ವ್ಯಕ್ತಪಡಿಸಿದ್ದಾರೆ.

ಅಗಲಿದ ಹಿರಿಯ ನಾಯಕನಿಗೆ ನಮ್ಮೂರ ಎಕ್ಸ್ಪ್ರೆಸ್ ಶ್ರದ್ಧಾಂಜಲಿಯನ್ನು ಅರ್ಪಿಸುತ್ತದೆ.

 

 

Categories
death ತೀರ್ಥಹಳ್ಳಿ ಮಲ್ನಾಡ್ ಮಾಹಿತಿ ಸುದ್ದಿ ರಾಜ್ಯ ಶಿವಮೊಗ್ಗ

ಪ್ರೇಯಸಿ ನೀರಿಗೆ ತಳ್ಳಿ ತಾನೂ ಜೀವ ಬಿಟ್ಟ ಪ್ರಿಯಕರ..!

ಪ್ರೇಯಸಿ ನೀರಿಗೆ ತಳ್ಳಿ ತಾನೂ ಜೀವ ಬಿಟ್ಟ ಪ್ರಿಯಕರ..!
– ಭದ್ರಾ ಕಾಲುವೆಗೆ ತಳ್ಳಿ ಪ್ರಿಯಕರನಿಂದಲೇ ಪ್ರೇಯಸಿಯ ಕೊಲೆ!
– ಯುವತಿ ಸಾವಿನ ಸುತ್ತ ಇದೀಗ ನೂರಾರು ಅನುಮಾನ

NAMMUR EXPRESS NEWS
ಭದ್ರಾವತಿ : ಮದುವೆ ವಿಚಾರವಾಗಿ ಪ್ರೇಮಿಗಳ ನಡುವೆ ಗಲಾಟೆ ನಡೆದಿದೆ. ಈ ವೇಳೆ ಭದ್ರಾ ಕಾಲುವೆಗೆ ಪ್ರೇಯಸಿಯನ್ನು ತಳ್ಳಿ ಪ್ರಿಯಕರ ಹತ್ಯೆಗೈಯ್ದಿದ್ದಾನೆ. ಮೋಸದಿಂದ ಪ್ರಿಯತಮೆಯನ್ನು ಕರೆದೋಯ್ದು ಕೊಲೆ ಮಾಡಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಯಕ್ಕುಂದದಲ್ಲಿ ನಡೆದಿದೆ. ಮಂಗಳವಾರ ಭದ್ರಾ ಕಾಲುವೆಯಲ್ಲಿ ಯುವತಿ ಸ್ವಾತೀ ಶವ ಪತ್ತೆಯಾಗಿದೆ. ತೆರೇನಹಳ್ಳಿಯ ಸ್ವಾತಿ ಹಾಗೂ ಸೂರ್ಯ ನಡುವೆ ಪ್ರೇಮಾಂಕುರವಾಗಿತ್ತು. ಇಬ್ಬರ ಮದುವೆಗೆ ಯುವತಿ ಸ್ವಾತಿ ಪೋಷಕರು ವಿರೋಧ ವ್ಯಕ್ತಪಡಿಸಿದ್ದಾರೆ. ವಿರೋಧ ಇದ್ದರೂ ಕೂಡ ಸ್ವಾತಿಗೆ ಮದುವೆಯಾಗಲು ಸೂರ್ಯ ಕಾಟ ಕೊಟ್ಟಿದ್ದಾನೇ.

ಸೆಪ್ಟೆಂಬರ್ 21ರಂದು ಪ್ರಿಯಕರ ಸೂರ್ಯ ಸ್ವಾತಿಯನ್ನು ಕರೆದುಕೊಂಡು ಹೋಗಿದ್ದಾನೆ. ಮಂಗಳವಾರ ಸಂಜೆ ಭದ್ರಾ ಕಾಲುವೆಯಲ್ಲಿ ಸ್ವಾತಿಯ ಮೃತ ದೇಹ ಪತ್ತೆಯಾಗಿದೆ. ಯುವತಿ ಸಾವಿನ ಸುತ್ತ ಇದೀಗ ನೂರಾರು ಅನುಮಾನಗಳು ಹುಟ್ಟಿಕೊಂಡಿವೆ. ಮದುವೆ ವಿಚಾರಕ್ಕೆ ಸೂರ್ಯ ಮತ್ತು ಸ್ವಾತಿ ನಡುವೆ ಗಲಾಟೆ ಆಗಿದೆ. ಸೆಪ್ಟೆಂಬರ್ 21ರಂದು ಪ್ರಿಯಕರ ಸೂರ್ಯ ಮತ್ತು ಪ್ರೇಯಸಿ ಸ್ವಾತಿ ಗಲಾಟೆ ಮಾಡಿಕೊಂಡಿದ್ದಾರೆ. ಯುವತಿ ಸ್ವಾತಿ ಡಿಗ್ರಿ ಎರಡನೇ ವರ್ಷ ಓದುತ್ತಿದ್ದಳು. ಸ್ವಾತಿಯನ್ನು ಸೂರ್ಯ ಮೋಸದಿಂದ ಕರೆದುಕೊಂಡು ಹೋಗಿದ್ದಾನೆ ಎಂದು ಸೆಪ್ಟೆಂಬರ್ 23 ರಂದು ಭದ್ರಾವತಿ ಠಾಣೆಗೆ ಸ್ವಾತಿ ಪೋಷಕರು ದೂರು ನೀಡಿದ್ದಾರೆ. ಸೆ.21ರಂದು ಸ್ವಾತಿಯನ್ನು ಸೂರ್ಯ ಮನೆಯಿಂದ ಭದ್ರಾ ಕಾಲುವೆಗೆ ಕರೆದೊಯ್ದು ಅಲ್ಲಿಂದ ತಳ್ಳಿ ಕೊಲೆ ಮಾಡಿರುವ ಆರೋಪ ಮಾಡಲಾಗಿದೆ. ಮಂಗಳವಾರ ಸಂಜೆ ಯುವತಿಯ ಶವ ಪತ್ತೆಯಾಗಿದೆ. ಸ್ವಾತಿ ಕುಟುಂಬಸ್ಥರಿಂದ ಸೂರ್ಯ ಕೊಲೆಗೆ ಕುಮ್ಮಕ್ಕು ಹಿನ್ನಲೆ ಆತನ ತಂದೆ ಸ್ವಾಮಿ ಮೇಲೆ ಸೆ. 23 ರಂದು ಭದ್ರಾವತಿ ಠಾಣೆಗೆ ದೂರು ನೀಡಿದ್ದರು. ಸದ್ಯ ಭದ್ರಾವತಿ ಗ್ರಾಮಾಂತರ ಪೊಲೀಸರು ಎ1 ಸೂರ್ಯ ಮತ್ತು ಎ2 ಸ್ವಾಮಿ ವಿರುದ್ಧ ಕೊಲೆ ಕೇಸ್ ದಾಖಲಿಸಿ, ಈಗಾಗಲೇ ಇಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

Categories
death ಉಡುಪಿ ಕರಾವಳಿ ಚಿಕ್ಕಮಗಳೂರು ತೀರ್ಥಹಳ್ಳಿ ಬೆಂಗಳೂರು ಮಂಗಳೂರು ಮಲ್ನಾಡ್ ರಾಜಕೀಯ ರಾಜ್ಯ ಶಿವಮೊಗ್ಗ

ಕನ್ನಡದ ಖ್ಯಾತ ಸಾಹಿತಿ ಎಸ್.ಎಲ್.ಭೈರಪ್ಪ ಇನ್ನಿಲ್ಲ!

ಕನ್ನಡದ ಖ್ಯಾತ ಸಾಹಿತಿ ಎಸ್.ಎಲ್.ಭೈರಪ್ಪ ಇನ್ನಿಲ್ಲ!
– ಕನ್ನಡದ ಖ್ಯಾತ ಕಾದಂಬರಿಕಾರ ಇನ್ನು ನೆನಪು ಮಾತ್ರ
– 94 ವರ್ಷ ವಯಸ್ಸಿಗೆ ಇಹಲೋಕ ತ್ಯಜಿಸಿದ ಸಾಧಕ

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಕನ್ನಡಕ್ಕೆ ಮೊದಲ ಸರಸ್ವತಿ ಸಮ್ಮಾನ ಪ್ರಶಸ್ತಿಯನ್ನು ತಂದುಕೊಟ್ಟ ಕನ್ನಡದ ಖ್ಯಾತ ಕಾದಂಬರಿಕಾರರಾದ ಎಸ್.ಎಲ್. ಭೈರಪ್ಪ ಅವರು ವಯೋಸಹಜ ಕಾಯಿಲೆಯಿಂದ ಬುಧವಾರ ಬೆಂಗಳೂರಿನ ರಾಜಾಜಿನಗರದ ಆಸ್ಪತ್ರೆಯಲ್ಲಿ ನಿಧನನರಾಗಿದ್ದಾರೆ.

ವಂಶವೃಕ್ಷ, ನಾಯಿ ನೆರಳು, ಗ್ರಹಣ, ಕವಲು, ಯಾನ, ಉತ್ತರಕಾಂಡ ಸೇರಿದಂತೆ ಇಪ್ಪತ್ತೇಳಕ್ಕೂ ಹೆಚ್ಚು ಕಾದಂಬರಿಗಳನ್ನು ಮತ್ತು ಅವ್ವ ಎನ್ನುವ ಸಣ್ಣ ಕಥೆಯನ್ನು ರಚಿಸುವ ಮೂಲಕ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದರು. ಇವರ ಪುಸ್ತಕಗಳು ಭಾರೀ ಸಂಚಲನ ಸೃಷ್ಟಿ ಮಾಡಿದ್ದವು.ಇದೀಗ ಅವರ ಸಾವಿಗೆ ಎಲ್ಲೆಡೆ ಸಂತಾಪ ವ್ಯಕ್ತವಾಗುತ್ತಿದೆ.

ಭಾವ ಪೂರ್ಣ ಶ್ರದ್ಧಾಂಜಲಿ