Categories
ಕರಾವಳಿ ಜ್ಯೋತಿಷ್ಯ ಮಂಗಳೂರು ಮಾಹಿತಿ ಮಾಹಿತಿ ಸುದ್ದಿ ರಾಜ್ಯ ಹಬ್ಬಗಳು

ನವರಾತ್ರಿಯ ಎರಡನೆಯ ದಿನ..”ಬ್ರಹ್ಮಚಾರಿಣಿಯ ಆರಾಧನೆಯ ಮಹತ್ವ ಮತ್ತು ಪೌರಾಣಿಕ ಕಥೆ..!

ನವರಾತ್ರಿಯ ಎರಡನೆಯ ದಿನ..”ಬ್ರಹ್ಮಚಾರಿಣಿಯ ಆರಾಧನೆಯ ಮಹತ್ವ ಮತ್ತು ಪೌರಾಣಿಕ ಕಥೆ..!

ನವರಾತ್ರಿಯ ಮೊದಲನೆಯ ದಿನ ಶೈಲಪುತ್ರಿಯನ್ನು ಆರಾಧಿಸಲ್ಪಟ್ಟರೆ, ಎರಡನೆಯ ದಿನ ಬ್ರಹ್ಮಚಾರಿಣಿ ದೇವಿಯನ್ನು ಪೂಜಿಸಲಾಗುತ್ತದೆ. “ಬ್ರಹ್ಮಚಾರಿಣಿ” ಎಂಬ ಹೆಸರು ಎರಡು ಪದಗಳಿಂದ ಉತ್ಪತ್ತಿಯಾಗಿದೆ. *ಇಲ್ಲಿ “ಬ್ರಹ್ಮ” ಎಂದರೆ ತಪಸ್ಸು, “ಚಾರಿಣಿ” ಎಂದರೆ ಕಟ್ಟಾ ಸ್ತ್ರೀ ಅನುಯಾಯಿ ಎಂಬರ್ಥವನ್ನು ಕೊಡುತ್ತದೆ.

ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564.

ಬ್ರಹ್ಮಚಾರಿಣಿ ಎಂಬ ಪದವು ಸೌಮ್ಯಳೂ, ಶಾಂತ ಸ್ವಭಾವದವಳಾಗಿದ್ದು, ಆತ್ಮವಿಶ್ವಾಸವನ್ನು ವೃದ್ಧಿಸುವಳು. ಹಾಗೆಯೇ ದೇವಿಯ ಕಾರ್ಯಗಳ ಮೂಲಕ ಮೋಕ್ಷವನ್ನು ಸಿದ್ಧಿಸಿಕೊಳ್ಳಬಹುದು. ಈಕೆಯು ಕೈಯಲ್ಲಿ ಗುಲಾಬಿ ಹೂವನ್ನು ಧರಿಸಿದ್ದು, ಅದರ ಜೊತೆಗೆ ಒಂದು ಕೈಯಲ್ಲಿ ಜಪಮಾಲೆ ಹಾಗೂ ಮತ್ತೊಂದು ಕೈಯಲ್ಲಿ ಕಮಂಡಲವನ್ನು ಹಿಡಿದುಕೊಂಡಿರುವಳು. ಶ್ವೇತವಸ್ತ್ರಧಾರಿಣಿಯಾಗಿರುವ ಮಲ್ಲಿಗೆ ಪ್ರಿಯಳೂ ಆಗಿರುವ ಬ್ರಹ್ಮಚಾರಿಣಿಯು ತನ್ನ ಭಕ್ತರಿಗೆ ಸಂತೋಷ ಮತ್ತು ಜ್ಞಾನವನ್ನು ನೀಡುವಳು. ಇವಳು ಕುಜ ಗ್ರಹದ ಅಧಿಪತಿಯೂ ಹೌದು. ಇವಳ ಆರಾಧನೆಯಿಂದ ಅದೃಷ್ಟವೂ ಒದಗುವುದರ ಜೊತೆಗೆ ನಮ್ಮ ಮಾನಸಿಕ ಕ್ಷೋಭೆಯನ್ನು ಪರಿಹರಿಸಿ ನೆಮ್ಮದಿಯನ್ನು ದಯಪಾಲಿಸುವಳು. ಹಾಗೆಯೇ ಇವಳ ಆರಾಧನೆಯು ತಪಸ್ಸಿಗೆ ಸಮವಾಗಿದ್ದು ನಮ್ಮ ಆತ್ಮದೊಳಗಿನ ದುರ್ಗುಣಗಳು ಅವನತಿಯನ್ನು ಕಾಣಲು ಆರಂಭವಾಗಿ ಸದ್ಗುಣಗಳು ಮತ್ತು ಉದಾತ್ತವಾದ ಮನೋಭಾವನೆ ಬೆಳೆಯಲು ಆರಂಭವಾಗುತ್ತದೆ. ನಮ್ಮ ಯಶಸ್ಸಿಗೆ ತೊಡಕಾಗಿರುವ ಎಲ್ಲಾ ಬಗೆಯ ತೊಡಕುಗಳು ನಿವಾರಣೆಯಾಗಿ ಮನಸ್ಸಿಗೆ ಮತ್ತು ನಾವು ಮಾಡಲ್ಪಡುವ ಎಲ್ಲಾ ಕಾರ್ಯಗಳಲ್ಲಿಯೂ ಶಾಂತಿ ನೆಮ್ಮದಿ ದೊರಕುತ್ತದೆ.

“ಬ್ರಹ್ಮಚಾರಿಣಿಯ ಪೌರಾಣಿಕ ಕಥೆ :-“

ದಕ್ಷ ಮಹಾರಾಜನ ಮಗಳು ಸತಿದೇವಿಯು ಯಜ್ಞಕುಂಡದ ಅಗ್ನಿಗೆ ಆಹುತಿಯಾದ ನಂತರ, ರಾಜನಾದ ಹಿಮಪರ್ವತನ ಮಗಳಾಗಿ ಪಾರ್ವತಿಯಾಗಿ ಜನಿಸುವಳು. ಇವಳನ್ನು “ಹೇಮವತಿ” ಎಂದೂ ಕೂಡಾ ಕರೆಯಲಾಗುತ್ತದೆ. ಪಾರ್ವತಿ ದೇವಿಯು ಮಹಾಶಿವನನ್ನು ವಿವಾಹವಾಗಲು ನಿರ್ಧರಿಸುವಳು. ಇವಳ ಈ ನಿರ್ಧಾರವನ್ನು ಇವಳ ಹೆತ್ತವರು ನಿರಾಕರಿಸಿ ಅವಳ ಬಯಕೆಯನ್ನು ನಿರುತ್ಸಾಹಗೊಳಿಸುವರು. ಇದರಿಂದ ಕಂಗಲಾದ ಇವಳು ನಾರದರ ಸೂಚನೆಯಂತೆ ಮಹಾರುದ್ರನನ್ನು ಒಲಿಸುವ ಸಲುವಾಗಿ ಸುಮಾರು 5000 ವರ್ಷಗಳ ಕಾಲ ಘೋರವಾದ ತಪಸ್ಸನ್ನು ಆಚರಿಸುವಳು. ಈ ಕಠಿಣವೆನಿಸಿದ ತಪ್ಪಸ್ಸಿನಿಂದ ಇವಳಿಗೆ “ತಪಶ್ಚಾರಿಣೀ” ಎಂಬ ಹೆಸರು ಬಂದಿತು. ತಪಶ್ಚಾರಿಣೀ ಎಂಬ ಪದಕ್ಕೆ ಅರ್ಥಾತ್ “ಬ್ರಹ್ಮಚಾರಿಣಿ” ಎಂಬ ಹೆಸರು ಇದೆ. ಇವಳು ಘೋರವಾದ ತಪಸ್ಸನ್ನು ಆಚರಿಸುವ ಸಮಯದಿ ಕೇವಲ ಹೂವು, ಹಣ್ಣು ಮತ್ತು ಎಲೆಗಳನ್ನು ಆಹಾರವಾಗಿ ಸೇವಿಸುತ್ತಿದ್ದಳು. ಎಲೆಯನ್ನು ಸಂಸ್ಕೃತ ಭಾಷೆಯಲ್ಲಿ “ಪರ್ಣ”ವೆಂದು ಕರೆಯಲಾಗುತ್ತದೆ. ಆದ್ದರಿಂದ ಬ್ರಹ್ಮಚಾರಿಣಿ ದೇವಿಯನ್ನು “ಅರ್ಪಣಾ” ಎಂದು ಕರೆಯುತ್ತೇವೆ.

ಅದೇ ಸಮಯದಲ್ಲಿ ದೇವತೆಗಳು ಶಿವನನ್ನು ಸಂಪರ್ಕಿಸಿ ತಮಗೆ ತಾರಾಕಾಸುರನಿಂದುಂಟಾಗುತ್ತಿರುವ ತೊಂದರೆಗಳನ್ನು ಸ್ಪಷ್ಟವಾಗಿ ವಿವರಿಸಿ ಹೇಳುವರು. ಈ ಕಾರಣವನ್ನು ಮುಂದಿಟ್ಟುಕೊಂಡು ದೇವತೆಗಳು ಮಹಾಶಿವನು ಪಾರ್ವತಿ ದೇವಿಯನ್ನು ವಿವಾಹವಾಗುವಂತೆ ಮಾಡಲು ಕಾಮದೇವರಲ್ಲಿ ಪ್ರಾರ್ಥಿಸುವರು. ಏಕೆಂದರೆ, ಶಿವನ ಮಗುವಿನಿಂದ ಮಾತ್ರ ಕೊಲ್ಲಲ್ಪಡುವ ವರವನ್ನು ಪಡೆದುಕೊಂಡಿರುವ ತಾರಕಾಸುರನೆಂಬ ಅಸುರನ ಸಂಹಾರ ಮಾಡುವ ಸಲುವಾಗಿ ದೇವತೆಗಳು ಶಿವ ಮತ್ತು ಪಾರ್ವತಿಯನ್ನು ಒಂದು ಮಾಡುವ ಸದುದ್ಧೇಶದಿಂದ ಕಾಮದೇವರ ಬಳಿ ಶಿವನ ಮನದಲ್ಲಿ ಪಾರ್ವತಿ ದೇವಿಯ ಮೇಲೆ ಕಾಮ ಅಥವಾ ಬಯಕೆ ಮೂಡುವಂತೆ ಕೋರಿಕೊಳ್ಳುವರು. ದೇವತೆಗಳ ಕೋರಿಕೆಯನ್ನು ಈಡೇರಿಸುವ ಸಲುವಾಗಿ ಕಾಮ ದೇವನು ಶಿವನನ್ನು ತಲುಪಿ ಬಯಕೆಯ ಬಾಣವನ್ನು ಹಾರಿಸುವನು. ಈ ಕ್ಷಣದಿ ಕುಪಿತಗೊಂಡ ಶಿವನು ತನ್ನ ಹಣೆಯ ಮೂರನೆಯ ಕಣ್ಣನ್ನು ತೆರೆದು ಕಾಮ ದೇವನನ್ನು ಬೂದಿಯಾಗಿಸುವನು.

ಆದರೆ, ಪಾರ್ವತಿ ದೇವಿಯು ಈ ಎಲ್ಲಾ ಘಟನೆಗಳಿಂದ ವಿಚಲಿತಗೊಳ್ಳದೇ ತನ್ನ ಭರವಸೆಯನ್ನು ಅಥವಾ ಶಿವನನ್ನು ಗೆಲ್ಲುವ ಸಂಕಲ್ಪವನ್ನು ಕಳೆದುಕೊಳ್ಳುವುದಿಲ್ಲ. ಹೇಗಾದರೂ ಮಾಡಿ ಶಿವನನ್ನು ಒಲಿಸುವ ಉದ್ದೇಶದಿಂದ ಪಾರ್ವತಿಯು ಶಿವನಂತೆ ಪರ್ವತಗಳಲ್ಲಿ ವಾಸಿಸಲು ಪ್ರಾರಂಭಿಸುವಳು. ಮಾತ್ರವಲ್ಲ, ಶಿವನಂತೆ ತಪಸ್ವಿ ಮತ್ತು ಯೋಗಿನಿಯೂ ಆಗುವಳು. ಪಾರ್ವತಿ ದೇವಿಯ ಈ ಎಲ್ಲಾ ಅಂಶಗಳು ಬ್ರಹ್ಮಚಾರಿಣಿ ದೇವಿಯೆಂದು ಪುರಾಣಗಳಿಂದ ಪರಿಗಣಿಸಲ್ಪಟ್ಟಿದೆ. ಪಾರ್ವತಿ ದೇವಿಯ ತಪಸ್ವಿತನವು ಶಿವನ ಗಮನವನ್ನು ಸೆಳೆದು ಆತನ ಆಸಕ್ತಿಯನ್ನು ಜಾಗೃತಗೊಳಿಸುತ್ತದೆ. ಈ ಸಂದರ್ಭದಲ್ಲಿ ಪಾರ್ವತಿಯ ಮೇಲೆ ಮೋಹ ಬಂದ ಶಿವನು ಸಂನ್ಯಾಸಿಯ ಮಾರು ವೇಷ ರೂಪದಲ್ಲಿ ಪಾರ್ವತಿ ದೇವಿಯನ್ನು ಭೇಟಿಯಾಗುವನು. ಈ ಕ್ಷಣದಲ್ಲಿ ಪಾರ್ವತಿಯ ತಪಸ್ಸನ್ನು ನಿರುತ್ಸಾಹಗೊಳಿಸಲು ಪ್ರಯತ್ನಿಸಿದರೂ ಶಿವನು ಅಂತಿಮವಾಗಿ ವಿಫಲನಾಗಿ ಪಾರ್ವತಿ ದೇವಿಯ ಇಚ್ಛೆಯಂತೆ ಅವಳ ಅಖಂಡ ಭಕ್ತಿಯೆಂಬ ನಿಷ್ಠೆಗೆ ಪರವಶನಾಗಿ ಶಿವನು ಪಾರ್ವತಿ ದೇವಿಯನ್ನು ಮದುವೆಯಾಗುತ್ತಾನೆ.

ಲೇಖನ: ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564
ಧಾರ್ಮಿಕಚಿಂತಕರು,ಜೋತಿಷ್ಯರು ,ಸಲಹೆಗಾರರು,
ಸಂಶೋಧಕರು. ಹಾಗು ಬರಹಗಾರರು✍


Categories
ಕರಾವಳಿ ಜ್ಯೋತಿಷ್ಯ ತೀರ್ಥಹಳ್ಳಿ ದಿನ ರಾಶಿ ಭವಿಷ್ಯ ಮಲ್ನಾಡ್ ಮಾಹಿತಿ ಮಾಹಿತಿ ಸುದ್ದಿ ರಾಜ್ಯ ಹಬ್ಬಗಳು

ನವರಾತ್ರಿ ದೇವಿಯ ಒಂಭತ್ತು ಸ್ವರೂಪದ ಮಹತ್ವ, ಮತ್ತದರ ಲಾಭ ದೇವಿಯ ಈ ಸ್ವರೂಪವನ್ನು ಪೂಜಿಸುವುದರಿಂದ ಸಕಲ ಇಷ್ಟಾರ್ಥಗಳು ಸಿದ್ಧಿಸುತ್ತವೆ..

ನವರಾತ್ರಿ ದೇವಿಯ ಒಂಭತ್ತು ಸ್ವರೂಪದ ಮಹತ್ವ, ಮತ್ತದರ ಲಾಭ ದೇವಿಯ ಈ ಸ್ವರೂಪವನ್ನು ಪೂಜಿಸುವುದರಿಂದ ಸಕಲ ಇಷ್ಟಾರ್ಥಗಳು ಸಿದ್ಧಿಸುತ್ತವೆ..

 

  • ನವರಾತ್ರಿಯ ಒಂಭತ್ತು ದಿನಗಳು ದೇವಿಯ ಒಂಭತ್ತು ಸ್ವರೂಪಗಳ ಆರಾಧನೆಯಾಗಿರುತ್ತದೆ. ದೇವಿಯ ಪ್ರತಿಯೊಂದು ಸ್ವರೂಪದ ಆರಾಧನೆಯಿಂದ ವಿಶಿಷ್ಟ ಫಲಗಳನ್ನು ಪಡೆಯಬಹುದಾಗಿದೆ.
  • ದೇವಿಯ ಸ್ವರೂಪಗಳನ್ನು ಅತ್ಯಂತ ಶ್ರದ್ಧೆಯಿಂದ ಆರಾಧಿಸಿದರೆ ಸಕಲ ಇಷ್ಟಾರ್ಥಗಳು ಸಿದ್ಧಿಸುತ್ತವೆ. ಹಾಗಾಗಿ ದೇವಿಯ ಒಂಭತ್ತು ಸ್ವರೂಪಗಳ ಬಗ್ಗೆ ಮತ್ತು ಅದರ ಮಹತ್ವದ ಬಗ್ಗೆ ತಿಳಿಯೋಣ…

ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564

ನವರಾತ್ರಿಯಲ್ಲಿ ದೇವಿಯು ಅವತಾರವೆತ್ತಿದ ಒಂಭತ್ತು
ಸ್ವರೂಪಗಳನ್ನು ಆರಾಧಿಸಲಾಗುತ್ತದೆ. ದುಷ್ಟರನ್ನು ಸಂಹರಿಸಲು ಅವತಾರ ತಾಳಿದ ಜಗನ್ಮಾತೆಯ ಒಂಭತ್ತು ಸ್ವರೂಪಗಳಿಗೆ ಅದರದ್ದೇ ಆದ ಮಹತ್ವವಿದೆ.

ಮಾತೆಯ ಸ್ವರೂಪಗಳನ್ನು ಆರಾಧಿಸುವುದರಿಂದ
ಸಕಲ ಸಂಕಷ್ಟಗಳು ದೂರವಾಗಿ ಸುಖ-ಶಾಂತಿ, ನೆಮ್ಮದಿಯನ್ನು ಕಾಣಬಹುದಾಗಿದೆ.
ನವರಾತ್ರಿಯ ಒಂಭತ್ತು ದಿನಗಳು ದೇವಿಯನ್ನು ಭಕ್ತಿಯಿಂದ ಆರಾಧಿಸಿದಲ್ಲಿ, ಅಂಥವರ ಮನಸ್ಸು ಶರೀರದ ಬೇರೆ ಬೇರೆ ಚಕ್ರಗಳಲ್ಲಿ ಸ್ಥಿತವಾಗುತ್ತದೆ. ದೇವಿಯ ಒಂಭತ್ತು ಸ್ವರೂಪಗಳ ಬಗ್ಗೆ ತಿಳಿಯೋಣ..
.

ಶೈಲಪುತ್ರಿ
ನವರಾತ್ರಿಯ ಮೊದಲನೇ ದಿನ ಘಟಸ್ಥಾಪನೆಯ ಜೊತೆಗೆ ಶೈಲಪುತ್ರಿ
ಸ್ವರೂಪವನ್ನು ಪೂಜಿಸಲಾಗುತ್ತದೆ. ಹಿಮಾಲಯ ರಾಜನ
ಪುತ್ರಿಯಾದ ಕಾರಣ ಈ ದೇವಿಯನ್ನು ಶೈಲಪುತ್ರಿ ಎಂದು
ಕರೆಯಲಾಗುತ್ತದೆ. ಶೈಲಪುತ್ರಿಯು ವೃಷಭವನ್ನೇರಿ ಬರುತ್ತಾಳೆ ಮತ್ತು
ಎಡಗೈಯಲ್ಲಿ ಕಮಲ, ಬಲಗೈಯಲ್ಲಿ ತ್ರಿಶೂಲವನ್ನು ಹಿಡಿದಿರುತ್ತಾಳೆ.
ನವರಾತ್ರಿಯ ಮೊದಲ ದಿನ ದೇವಿಯ ಆರಾಧಕರ ಮನಸ್ಸು
ಮೂಲಾಧಾರ ಚಕ್ರದಲ್ಲಿ ಸ್ಥಿತವಾಗಿರುತ್ತದೆ.

ಬ್ರಹ್ಮಚಾರಿಣಿ
ನವರಾತ್ರಿಯ ಎರಡನೇ ದಿನ ದೇವಿ ಬ್ರಹ್ಮಚಾರಿಣಿಯನ್ನು
ಪೂಜಿಸಲಾಗುತ್ತದೆ. ತಪಸ್ಸನ್ನು ಕಟ್ಟುನಿಟ್ಟಾಗಿ ಆಚರಿಸಿರುವ
ಕಾರಣದಿಂದ ಬ್ರಹ್ಮಚಾರಿಣಿ ಎಂದು ಕರೆಯಲಾಗುತ್ತದೆ.
ತೇಜೋಮಯ ಸ್ವರೂಪವುಳ್ಳ ದೇವಿಯು ಬಲಗೈಯಲ್ಲಿ
ಕಮಂಡಲವನ್ನು, ಎಡಗೈಯಲ್ಲಿ ಜಪಮಾಲೆಯನ್ನು ಹಿಡಿದು
ಭವ್ಯರೂಪದಲ್ಲಿ ಕಂಗೊಳಿಸುತ್ತಾಳೆ. ನವರಾತ್ರಿಯ ಎರಡನೇ ದಿನ
ದೇವಿಯ ಆರಾಧಕರ ಮನಸ್ಸು ಸ್ವಾಧಿಷ್ಟಾನ ಚಕ್ರದಲ್ಲಿ
ಸ್ಥಿತವಾಗಿರುತ್ತದೆ.

ಚಂದ್ರಘಂಟಾ
ಚಂದ್ರಘಂಟಾ ದೇವಿಯನ್ನು ನವರಾತ್ರಿಯ ಮೂರನೇ ದಿನ
ಪೂಜಿಸಲಾಗುತ್ತದೆ. ಹಣೆಯಲ್ಲಿ ಅರ್ಧಚಂದ್ರಾಕೃತಿಯನ್ನು
ಧರಿಸಿರುವ ಕಾರಣ ಚಂದ್ರಘಂಟಾ ಎಂದು ಕರೆಯುತ್ತಾರೆ. ಈ
ದೇವಿಯ ಘಂಟೆಯ ಧ್ವನಿಯಿಂದ ದುಷ್ಟಶಕ್ತಿಗಳೆಲ್ಲ ಹೆದರಿ
ನಾಶವಾಗುತ್ತವೆ. ಸಿಂಹದ ಮೇಲೇರಿ ಬರುವ ದೇವಿಯ ಶರೀರವು
ಸ್ವರ್ಣದಂತೆ ಕಂಗೊಳಿಸುತ್ತದೆ. ನವರಾತ್ರಿಯ ಮೂರನೇ ದಿನ
ದೇವಿಯ ಆರಾಧಕರ ಮನಸ್ಸು ಮಣಿಪುರ ಚಕ್ರದಲ್ಲಿ
ಸ್ಥಿತವಾಗಿರುತ್ತದೆ.

ಕೂಷ್ಮಾಂಡಾ
ನವರಾತ್ರಿಯ ನಾಲ್ಕನೇ ದಿನ ದೇವಿಯ ಕೂಷ್ಮಾಂಡಾ ಸ್ವರೂಪವನ್ನು
ಪೂಜಿಸಲಾಗುತ್ತದೆ. ಸೃಷ್ಟಿಯಲ್ಲಿ ಎಲ್ಲೆಡೆ ಅಂಧಕಾರವಿದ್ದ
ಸಮಯದಲ್ಲಿ ತನ್ನ ಮಂದಹಾಸದಿಂದ ಬ್ರಹ್ಮಾಂಡವನ್ನು
ರಚಿಸಿರುತ್ತಾಳೆ ಎಂದು ಹೇಳಲಾಗುತ್ತದೆ. ಹಾಗಾಗಿ ದೇವಿಯ ಈ
ಸ್ವರೂಪವನ್ನು ಕೂಷ್ಮಾಂಡಾ ಎಂದು ಕರೆಯುತ್ತಾರೆ. ನವರಾತ್ರಿಯ
ನಾಲ್ಕನೇ ದಿನ ದೇವಿಯ ಆರಾಧಕರ ಮನಸ್ಸು ಅನಾಹತ ಚಕ್ರದಲ್ಲಿ
ಸ್ಥಿತವಾಗಿರುತ್ತದೆ.

ಸ್ಕಂದಮಾತಾ
ನವರಾತ್ರಿಯ ಐದನೇ ದಿನ ದೇವಿ ದುರ್ಗೆಯನ್ನು ಸ್ಕಂದಮಾತೆಯ
ಸ್ವರೂಪದಲ್ಲಿ ಪೂಜಿಸಲಾಗುತ್ತದೆ. ನಾಲ್ಕು ಭುಜವುಳ್ಳ ತಾಯಿಯ
ಬಲಬದಿಯ ಮೇಲಿನ ಭುಜದಿಂದ ಪುತ್ರ ಸ್ಕಂದನನ್ನು
ಹಿಡಿದಿರುತ್ತಾಳೆ. ಕೆಳಗಿನ ಭುಜದಲ್ಲಿ ಕಮಲವನ್ನು, ಎಡಬದಿಯ ಮೇಲಿನ ಭುಜದಲ್ಲಿ ಆಶೀರ್ವಾದ ಮುದ್ರೆಯನ್ನು, ಕೆಳಗಿನ ಭುಜದಲ್ಲಿ
ಕಮಲವನ್ನು ಹಿಡಿದಿರುತ್ತಾಳೆ. ಈ ಸ್ವರೂಪದ ಆರಾಧನೆಯಿಂದ
ಸಕಲ ಸುಖವನ್ನು ಪಡೆಯಬಹುದಾಗಿದೆ. ನವರಾತ್ರಿಯ ಐದನೇ ದಿನ
ದೇವಿಯ ಆರಾಧಕರ ಮನಸ್ಸು ವಿಶುದ್ಧ ಚಕ್ರದಲ್ಲಿ ಸ್ಥಿತವಾಗಿರುತ್ತದೆ.

ಪಂಡಿತ್ ಜ್ಞಾನೇಶ್ವರ್ ರಾವ್ ಪ್ರಧಾನ ಅರ್ಚಕರು ಹಾಗೂ ಮಾಂತ್ರಿಕರು 8548998564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತುಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢ ಗುಪ್ತಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ ಜನವಶ, ಶತ್ರುನಾಶ, ಸ್ತ್ರೀ– ಪುರುಷ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಅಮ್ಮನವರ ವಿಶೇಷ ಪೂಜಾದೈವಿಕ ವಿಧಿವಿಧಾನದಿಂದ ಪರಿಹಾರ ತಿಳಿಸುತ್ತಾರೆ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564

ಕಾತ್ಯಾಯನಿ
ನವರಾತ್ರಿಯ ಆರನೇ ದಿನ ದೇವಿಯ ಕಾತ್ಯಾಯನಿ ಸ್ವರೂಪವನ್ನು
ಪೂಜಿಸಲಾಗುತ್ತದೆ. ಕಾತ್ಯಾಯನ ಋಷಿಯ ಆಶ್ರಮದಲ್ಲಿ
ಜನ್ಮತಾಳಿದ ಕಾರಣ ಕಾತ್ಯಾಯನಿ ಎಂದು ಕರೆಯಲಾಗುತ್ತದೆ.
ನವರಾತ್ರಿಯ ಆರನೇ ದಿನ ದೇವಿಯ ಆರಾಧಕರ ಮನಸ್ಸು ಆಜ್ಞಾ ಚಕ್ರದಲ್ಲಿ ಸ್ಥಿತವಾಗಿರುತ್ತದೆ. ಈ ದಿನದಂದು ಆರಾಧಕರು ಅಲೌಕಿಕ ತೇಜಸ್ಸನ್ನು ಹೊಂದುತ್ತಾರೆ.

ಕಾಳರಾತ್ರಿ
ನವರಾತ್ರಿಯ ಏಳನೇ ದಿನ ದೇವಿಯ ಕಾಳರಾತ್ರಿ ಸ್ವರೂಪವನ್ನು ಪೂಜಿಸಲಾಗುತ್ತದೆ. ಈ ದೇವಿಯ ಸ್ವರೂಪ ಅತ್ಯಂತ ಭಯಾನಕವಾಗಿದ್ದರೂ, ಈಕೆಯ ಆರಾಧನೆಯಿಂದ ಶುಭಫಲವನ್ನು
ಪಡೆಯಬಹುದಾಗಿದೆ. ನಕಾರಾತ್ಮಕ ಶಕ್ತಿಯನ್ನು ದೂರ ಮಾಡುವ ದೇವಿಯ ಈ ಸ್ವರೂಪ ಜಗತ್ತಿಗೆ ಕಲ್ಯಾಣಕಾರಿ ಎಂದು ಹೇಳಲಾಗುತ್ತದೆ. ನವರಾತ್ರಿಯ ಏಳನೇ ದಿನ ದೇವಿಯ ಆರಾಧಕರ ಮನಸ್ಸು ಸಹಸ್ರಾರ ಚಕ್ರದಲ್ಲಿ ಸ್ಥಿತವಾಗಿರುತ್ತದೆ.

ಪಂಡಿತ್ ಜ್ಞಾನೇಶ್ವರ್ ರಾವ್ ಪ್ರಧಾನ ಅರ್ಚಕರು ಹಾಗೂ ಮಾಂತ್ರಿಕರು 8548998564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತುಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢ ಗುಪ್ತಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ ಜನವಶ, ಶತ್ರುನಾಶ, ಸ್ತ್ರೀ– ಪುರುಷ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಅಮ್ಮನವರ ವಿಶೇಷ ಪೂಜಾದೈವಿಕ ವಿಧಿವಿಧಾನದಿಂದ ಪರಿಹಾರ ತಿಳಿಸುತ್ತಾರೆ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564

ಮಹಾಗೌರಿ
ನವರಾತ್ರಿಯ ಎಂಟನೇ ದಿನ ದೇವಿಯ ಮಹಾಗೌರಿ ಸ್ವರೂಪವನ್ನು
ಪೂಜಿಸಲಾಗುತ್ತದೆ. ಮಹಾಗೌರಿ ಸ್ವರೂಪವನ್ನು ಪೂಜಿಸುವುದರಿಂದ
ಸಮಸ್ತ ಪಾಪಗಳ ನಾಶವಾಗುತ್ತದೆ. ಮಹಾಗೌರಿ ಸ್ವರೂಪವನ್ನು ಅನ್ನಪೂರ್ಣೆ ಎಂದು ಸಹ ಕರೆಯಲಾಗುತ್ತದೆ. ನವರಾತ್ರಿಯ ಎಂಟನೇ ದಿನ ದೇವಿಯ ಆರಾಧಕರ ಮನಸ್ಸು ಸೋಮ ಚಕ್ರದಲ್ಲಿ ಸ್ಥಿತವಾಗಿರುತ್ತದೆ.

*ಸಿದ್ಧಿಧಾತ್ರಿ
ನವರಾತ್ರಿಯ ನವಮಿಯ ಅಂದರೆ ಒಂಭತ್ತನೇ ದಿನ ದೇವಿಯ ಸಿದ್ಧಿಧಾತ್ರಿ ಸ್ವರೂಪವನ್ನು ಪೂಜಿಸಲಾಗುತ್ತದೆ. ಸಮಸ್ತ ಕಾರ್ಯಗಳಿಗೆ ಸಿದ್ಧಿಯನ್ನು ಪ್ರಧಾನ ಮಾಡುವ ಸ್ವರೂಪವಾಗಿದೆ. ದೇವಿಯ ಈ ಸ್ವರೂಪವನ್ನು ಪೂಜಿಸುವುದರಿಂದ ಸಕಲ ಇಷ್ಟಾರ್ಥಗಳು
ಸಿದ್ಧಿಸುತ್ತವೆ.

Categories
dasara ಕಾರ್ಯಕ್ರಮಗಳು ತೀರ್ಥಹಳ್ಳಿ ದೈವಿಕ ಮಲ್ನಾಡ್ ಮಾಹಿತಿ ಸುದ್ದಿ ಶಿವಮೊಗ್ಗ ಹಬ್ಬಗಳು

ರಾಮೇಶ್ವರ ದೇವಸ್ಥಾನದಲ್ಲಿ ನವರಾತ್ರಿ ವಿಶೇಷ ಪೂಜೆ..!

ರಾಮೇಶ್ವರ ದೇವಸ್ಥಾನದಲ್ಲಿ ನವರಾತ್ರಿ ವಿಶೇಷ ಪೂಜೆ..!
– 9 ದಿನಗಳ ಕಾಲ ಧಾರ್ಮಿಕ ಕಾರ್ಯಕ್ರಮ: ದೇಗುಲದಲ್ಲಿ ವಿಶೇಷ ಅಲಂಕಾರ
– ಕುಶಾವತಿ ಪಾರ್ಕ್ ಅಲ್ಲಿ ಸ್ವಚ್ಛತೆ: ಸರ್ವರಿಗೂ ಸ್ವಾಗತ
– ಇದೇ ಮೊದಲ ಬಾರಿಗೆ ಯುವ, ಮಹಿಳಾ ದಸರಾಗೆ ಸಜ್ಜು

NAMMUR EXPRESS NEWS
ತೀರ್ಥಹಳ್ಳಿ: ಪುರಾಣ ಪ್ರಸಿದ್ಧ ತೀರ್ಥರಾಜಪುರದ ಶ್ರೀರಾಮೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಅನಾದಿಕಾಲದಿಂದಲೂ ಸಹ ವಿಶೇಷವಾದಂತಹ ನವರಾತ್ರಿ ಉತ್ಸವವನ್ನು ಹಾಗೂ ವಿಜಯ ದಶಮಿ ದಿನದಂದು ವೈಭವದ ದಸರಾ ಮೆರವಣಿಗೆ ಉತ್ಸವ ಮೂರ್ತಿಯ ಸಲುವಾಗಿ ದಸರಾ ಮೆರವಣಿಗೆ ಮಾಡಲು ಆಯೋಜನೆ ಮಾಡಲಾಗಿದೆ.

ಶ್ರೀ ಸ್ವಾಮಿಗೆ ರುದ್ರಾಭಿಷೇಕ, ವಿಶೇಷ ಪೂಜೆ ಸಂಜೆ 6 ಗಂಟೆಯಿಂದ ಅಮ್ಮನವರ ಇತ್ಯರ್ಥವಾಗಿ ಸಪ್ತಶತಿ ಪಾರಾಯಣ ಕುಂಕುಮಾರ್ಚನೆ ಇತ್ಯಾದಿ ಸೇವೆಗಳು ವಿಶೇಷವಾಗಿ ನಡೆಯುತ್ತದೆ. ಒಂಬತ್ತು ದಿನಗಳ ಕಾಲ ಈ ಎಲ್ಲಾ ಕಾರ್ಯಕ್ರಮದ ನಂತರ ವಿಜಯದಶಮಿಯ ದಿನದಂದು ದುರ್ಗಾ ಹೋಮ ಭಗವತಿಗೆ ಅತ್ಯಂತ ಪ್ರಿಯವಾದ ಪರಮಾನ್ನವನ್ನು ಅಗ್ನಿಪೂರಕವಾಗಿ ಆಹುತಿ ಕೊಟ್ಟು ಸಂತುಷ್ಟವಾದ ವಿಶೇಷವಾದ ದುರ್ಗಾ ಹೋಮವನ್ನು ಆಯೋಜಿಸಲಾಗಿದೆ. ಈ ಎಲ್ಲಾ ಕಾರ್ಯಕ್ರಮಗಳು ಸಹ ಈ ವರ್ಷ ಭಕ್ತಾದಿಗಳು ಹಾಗೂ ವ್ಯವಸ್ಥಾಪನ ಸಮಿತಿ, ದಸರಾ ಉತ್ಸವ ಸಮಿತಿಯ ವತಿಯಿಂದ ವಿಶಿಷ್ಟವಾದ ರೀತಿಯಲ್ಲಿ ಆಚರಣೆ ಮಾಡಬೇಕೆಂದು ಈ ಕಾರ್ಯಕ್ರಮ ಈಗಾಗಲೇ ಚಾಲನೆಗೊಂಡಿದೆ.

ಶ್ರೀರಾಮೇಶ್ವರ ತೀರ್ಥರಾಜಪುರದ ಪುರದೊಡೆಯ ಎಂಬುದು ಜನಜನಿತವಾಗಿದೆ. ಈ ನವರಾತ್ರಿ ಉತ್ಸವ ಎಂಬುದು ತಾಲೂಕಿನ ಪ್ರಧಾನ ದೇವಸ್ಥಾನಗಳಲ್ಲಿ ನಡೆಯುವುದು ರಾಜನ ಕಾಲದಿಂದಲೂ ರಾಜನ ಆಶ್ರಯದಲ್ಲಿ ನಡೆಯುತ್ತಿತ್ತು. ರಾಮೇಶ್ವರದಲ್ಲಿ ಅಮ್ಮನವರ ಸಹಿತವಾದ ಈಶ್ವರನ ಸಾನಿಧ್ಯದಲ್ಲಿ ನಡೆಯುತ್ತಿರುವುದು ತುಂಬಾ ವಿಶೇಷ. ಎಲ್ಲಾ ಭಕ್ತರು ಸಹ ಈ ಸೇವೆಯಲ್ಲಿ ಪಾಲ್ಗೊಳ್ಳಬೇಕು ಎಂದು ವ್ಯವಸ್ಥಾಪನ ಸಮಿತಿ, ತಾಲೂಕು ಮುಜರಾಯಿ ಇಲಾಖೆ, ದಸರಾ ಉತ್ಸವ ಸಮಿತಿಯವರು ಭಕ್ತರಲ್ಲಿ ವಿನಂತಿಸಿಕೊಂಡಿದ್ದಾರೆ. ಈ ಕಾರ್ಯಕ್ರಮ ಅತ್ಯಂತ ವಿಜೃಂಭಣೆಯಿಂದ ನಡೆದು ಭಕ್ತರಿಗೆ ಸನ್ಮಂಗಲ ಉಂಟು ಮಾಡಿ ರಾಮೇಶ್ವರನ ಪೂರ್ಣ ಅನುಗ್ರಹ ಎಲ್ಲರಿಗೂ ದೊರೆಯಲಿ ಹಾಗೂ ಎಲ್ಲರೂ ಕೂಡ ಇದರಲ್ಲಿ ಭಾಗವಹಿಸಬೇಕೆಂದು ವ್ಯವಸ್ಥಾಪನ ಸಮಿತಿ ಹಾಗೂ ದಸರಾ ಸಮಿತಿಯವರು ಕೋರಿದ್ದಾರೆ.
ಸೆ. 22ರಂದು ಸಾವಿರಾರು ಭಕ್ತರು ರಾಮೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ಬಳಿಕ ಅನ್ನ ಪ್ರಸಾದ ಸ್ವೀಕರಿಸಿದರು.

ಮಲೆನಾಡ ಸಮಸ್ತ ಭಕ್ತರನ್ನು ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ವಿಶ್ವನಾಥ ಶೆಟ್ಟಿ ಹಾಗೂ ದಸರಾ ಸಮಿತಿ ಸಂಚಾಲಕರಾದ ಸಂದೇಶ್ ಜವಳಿ, ಅಮರ ನಾಥ ಶೆಟ್ಟಿ ಸೇರಿ ಎಲ್ಲಾ ಸಮಿತಿ ಸದಸ್ಯರು ಸರ್ವರನ್ನು ಸ್ವಾಗತಿಸಿದ್ದಾರೆ.
ಇದೇ ಮೊದಲ ಬಾರಿಗೆ ಯುವ, ಮಹಿಳಾ ದಸರಾಗೆ ಸಜ್ಜಾಗಿದೆ. ವಿವಿಧ ಆಟೋಟ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.

ಕುಶಾವತಿ ಪಾರ್ಕ್ ಅಲ್ಲಿ ಸ್ವಚ್ಛತೆ: ಸೆಲ್ಫಿ ಪಾಯಿಂಟ್

ತೀರ್ಥಹಳ್ಳಿ ಕುಶಾವತಿ ಪಾರ್ಕ್ ಅಲ್ಲಿ ದಸರಾ ಸಭಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಹೀಗಾಗಿ ಅಲ್ಲಿ ಪಟ್ಟಣ ಪಂಚಾಯತ್ ಸದಸ್ಯರು, ವಿವಿಧ ಸಂಘ ಸಂಸ್ಥೆಗಳ ಸದಸ್ಯರು, ಭಕ್ತರು ಸೇರಿ ಸ್ವಚ್ಛತೆ ಕಾರ್ಯ ಮಾಡಿದ್ದಾರೆ. ಪಟ್ಟಣ ಪಂಚಾಯತ್ ಅಧ್ಯಕ್ಷ ಆಸಾದಿ ಅವರ ನೇತೃತ್ವದಲ್ಲಿ ಪಟ್ಟಣ ಪಂಚಾಯತ್ ವತಿಯಿಂದ ಐ ಲವ್ ಯೂ ತೀರ್ಥಹಳ್ಳಿ ಕಲ್ಲಿನ ಬೋರ್ಡ್ ಹಾಕಲಾಗಿದೆ.

Categories
ಕಾರ್ಯಕ್ರಮಗಳು ಚಿಕ್ಕಮಗಳೂರು ತೀರ್ಥಹಳ್ಳಿ ಮಲ್ನಾಡ್ ರಾಜ್ಯ ಶಿವಮೊಗ್ಗ ಹಬ್ಬಗಳು

ಇಂದಿನಿಂದ ಶೃಂಗೇರಿ ಶಾರದಾ ಶರನ್ನವರಾತ್ರಿ ಆರಂಭ

ಇಂದಿನಿಂದ ಶೃಂಗೇರಿ ಶಾರದಾ ಶರನ್ನವರಾತ್ರಿ ಆರಂಭ

* ಮೊದಲ ದಿನ ಹಂಸವಾಹಿನಿ ಬ್ರಾಹ್ಮಿ ಅಲಂಕಾರದಲ್ಲಿ ಶ್ರೀಶಾರದೆ
* 9 ದಿನಗಳು ಯಾವೆಲ್ಲ ಅಲಂಕಾರದಲ್ಲಿ ಶಾರದೆ ದರ್ಶನ ?

NAMMMUR EXPRESS NEWS
ಶೃಂಗೇರಿ: ಜಗತ್ಪ್ರಸಿದ್ಧ ಶೃಂಗೇರಿ ಶ್ರೀಶಾರದಾ ಶರನ್ನವರಾತ್ರಿಗೆ ಚಾಲನೆ ದೊರೆತಿದೆ. ನವರಾತ್ರಿಆರಂಭಕ್ಕೂ ಮುನ್ನ ನಿನ್ನೆಯ ದಿನ ಮಹಾಭಿಷೇಕ ನಡೆದು ತಾಯಿ ಶ್ರೀಶಾರದೆಗೆ ಜಗತ್ಪ್ರಸೂತಿಕ ಅಲಂಕಾರ ಮಾಡಲಾಗಿತ್ತು. ನವರಾತ್ರಿಯ ಮೊದಲ ದಿನವಾದ ಇಂದು ಶ್ರೀಶಾರದೆಯು ಹಂಸವಾಹನಾಲಂಕಾರಿ ಬ್ರಾಹ್ಮೀಯಾಗಿ ದರ್ಶನ ನೀಡುತ್ತಿದ್ದಾಳೆ. ನವರಾತ್ರಿಯ ಮೊದಲೆರಡು ದಿನಗಳಲ್ಲಿ ಹಂಸವಾಹನಾಲಂಕಾರ ಇರಲಿದ್ದು ಉಳಿದ ದಿನ ಯಾವ ಯಾವ ಅಲಂಕಾರವಿರುತ್ತದೆ ಎಂಬ ಮಾಹಿತಿ ಇಲ್ಲಿದೆ.

   ನವರಾತ್ರಿಯಲ್ಲಿ ಶ್ರೀಶಾರದೆಗೆ ಯಾವೆಲ್ಲಾ ಅಲಂಕಾರವಿರುತ್ತದೆ
1. ಶ್ರೀ ಶಾರದಾಂಬ ಮಹಾಭಿಷೇಕ, ಜಗತ್ಮಸೂತಿ ಅಲಂಕಾರ
2. ಶ್ರೀ ಶಾರದಾ ಪ್ರತಿಷ್ಠೆ, ಹಂಸವಾಹನಾಲಂಲಕಾರ (ಬ್ರಾಹೀ)
3. ಹಂಸವಾಹನಾಲಂಕಾರ (ಬ್ರಾಹ್ಮೀ)
4. ವೃಷಭವಾಹನಾಲಂಕಾರ (ಮಾಹೇಶ್ವರೀ)
5. ಮಯೂರವಾಹನಾಲಂಕಾರ (ಕೌಮಾರೀ)
6. ಗರುಡವಾಹನಾಲಂಕಾರ (ವೈಷ್ಣವೀ)
7. ಇಂದ್ರಾಂಣಿ ಅಲಂಕಾರ ( ಅಂದು ಶತಚಂಡೀಯಾಗದ ಪ್ರಯುಕ್ತ ಶಾಲಾಪ್ರವೇಶ, ಪುರಶ್ಚರಣಾರಂಭ)
8. ಮೋಹಿನಿ ಅಲಂಕಾರ
9. ಮೂಲ ನಕ್ಷತ್ರ ಸರಸ್ವತ್ಯಾವಾಹನೆ, ವೀಣಾಶಾರದಾಲಂಕಾರ
10. ರಾಜರಾಜೇಶ್ವರೀ ಅಲಂಕಾರ
11. ಮಹಾನವಮೀ – ಸಿಂಹವಾಹನಾಲಂಕಾರ (ಚಾಮುಂಡಾ)ಶತಚಂಡೀಯಾಗದ ಪೂರ್ಣಾಹುತಿ,         ಗಜಾಶ್ವಪೂಜೆ
12. ವಿಜಯದಶಮೀ – ಗಜಲಕ್ಷ್ಮೀ ಅಲಂಕಾರ
13. ವಿಜಯದಶಮೀ – ಗಜಲಕ್ಷ್ಮೀ ಅಲಂಕಾರ (ಸಂಜೆ ವಿಜಯೋತ್ಸವ,ಶಮೀಪೂಜೆ)
14. ಗಜಲಕ್ಷ್ಮೀ ಅಲಂಕಾರ ( ಮಹಾರಥೋತ್ಸವ ಮತ್ತು ಜಗದ್ಗುರುಗಳ ಅಡ್ಡಪಲ್ಲಕ್ಕಿ ಉತ್ಸವ)

Categories
dasara ಕಾರ್ಯಕ್ರಮಗಳು ಚಿಕ್ಕಮಗಳೂರು ತೀರ್ಥಹಳ್ಳಿ ಮಲ್ನಾಡ್ ಮಾಹಿತಿ ಸುದ್ದಿ ಶಿವಮೊಗ್ಗ ಹಬ್ಬಗಳು

ಕೊರೆಕಲ್ಲು ಶ್ರೀಚಾಮುಂಡೇಶ್ವರಿ ದೇವಸ್ಥಾನಲ್ಲಿ ನವರಾತ್ರಿ ಉತ್ಸವ

ಕೊರೆಕಲ್ಲು ಶ್ರೀಚಾಮುಂಡೇಶ್ವರಿ ದೇವಸ್ಥಾನಲ್ಲಿ ನವರಾತ್ರಿ ಉತ್ಸವ

* ಸೆ.22 ರಿಂದ ಅ.02 ರವರೆಗೆ ಅದ್ದೂರಿ ದಸರಾ,ವಿಶೇಷ ಪೂಜೆ
* ಸೆ.23 ರಿಂದ ಅ.01 ರವರೆಗೆ ಪವಿತ್ರ ಶ್ರೀಮದ್ ಭಾಗವತ ಪ್ರವಚನ ಸಪ್ತಾಹ ಹಾಗೂ ಭಗವದ್ಗೀತಾ ಜ್ಞಾನ ಯಜ್ಞ

NAMMMUR EXPRESS NEWS
ಶೃಂಗೇರಿ: ತಾಲೂಕಿನ ಶ್ರೀಚಾಮುಂಡೇಶ್ವರಿ ಅಮ್ಮನವರ ದೇವಸ್ಥಾನ,ಕೊರೆಕಲ್ಲು ಇಲ್ಲಿ ಸೆ.22 ರಿಂದ ಅ.02 ವರೆಗೆ ನಡೆಯಲಿರುವ ಅದ್ದೂರಿ ನವರಾತ್ರಿ ಉತ್ಸವದ ಪ್ರಯುಕ್ತ ವಿಶೇಷ ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ನವರಾತ್ರಿ ಅಂಗವಾಗಿ ಈ ಬಾರಿ ವಿಶೇಶವಾಗಿ ಪರಮ ಮಂಗಳಕರವಾದ ಶ್ರೀಮದ್ ಭಾಗವತ ಪ್ರವಚನ ಸಪ್ತಾಹ ಹಾಗೂ ಶ್ರೀಮದ್ ಭಗವದ್ಗೀತಾ ಜ್ಞಾನ ಯಜ್ಞಾ ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮವು ಸೆ.23 ರಿಂದ ಅ.01 ರವರೆಗೆ ಪ್ರತಿದಿನ ಮಧ್ಯಾಹ್ನ 3 ಗಂಟೆಯಿಂದ ಭಜನೆ ನಡೆಯಲಿದ್ದು, ಸಂಜೆ 4 ಗಂಟೆಯಿಂದ ಉಳುವೆ ಗಿರೀಶ್ ಭಟ್ ಅವರಿಂದ ಉಪನ್ಯಾಸ ಕಾರ್ಯಕ್ರಮ ಪ್ರತಿದಿನ ನೆರವೇರಲಿದೆ. ಸೆ.26 ರಂದು ಶ್ರೀಮದ್ ಭಾಗವತ ಪ್ರವಚನ ಸಪ್ತಾಹದಲ್ಲಿ ಶ್ರೀಕೃಷ್ಣಾವತಾರ ಹಿನ್ನೆಲೆ ಕುರಿತಂತೆ ಶ್ರೀಶಾಂಕರ ತತ್ವ ಪ್ರಸಾರ ಅಭಿಯಾನ ದಕ್ಷಿಣಾಮ್ನಾಯ ಶೃಂಗೇರಿ ಶ್ರೀಶಾರದಾ ಪೀಠದ ರಾಜ್ಯ ಸಂಚಾಲಕರಾದ ಶ್ರೀ ತೇಜಶಂಕರ ಸೋಮಯಾಜಿಯವರಿಂದ ಪ್ರವಚನ ನಡೆಯಲಿದೆ.
ದೇವಸ್ಥಾನದಲ್ಲಿ ನಡೆಯುವ ಈ ಎಲ್ಲಾ ವಿಶೇಷ ಕಾರ್ಯಕ್ರಮದಲ್ಲಿ ಭಕ್ತಾಧಿಗಳು ಪಾಲ್ಗೊಳ್ಳುವಂತೆ ಸಮಿತಿ ಕೋರಿದೆ.

Categories
dasara ತೀರ್ಥಹಳ್ಳಿ ಮಲ್ನಾಡ್ ಶಿವಮೊಗ್ಗ ಹಬ್ಬಗಳು

ತೀರ್ಥಹಳ್ಳಿಯಲ್ಲಿ ದಸರಾ ಸಂಭ್ರಮದ ರಂಗು ಶುರು!

ತೀರ್ಥಹಳ್ಳಿಯಲ್ಲಿ ದಸರಾ ಸಂಭ್ರಮದ ರಂಗು ಶುರು!
– ತೀರ್ಥಹಳ್ಳಿ ಕೊಪ್ಪ ಸರ್ಕಲ್ ನಲ್ಲಿ ಉಗ್ರ ನರಸಿಂಹನ ಅವತಾರ
– ತೀರ್ಥಹಳ್ಳಿ ರಾಮೇಶ್ವರ ದೇವಸ್ಥಾನ, ಮಾರಿಕಾಂಬಾ ದೇಗುಲದಲ್ಲಿ ಜನವೋ ಜನ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯಲ್ಲಿ ದಸರಾ ಸಂಭ್ರಮ ಶುರುವಾಗಿದೆ. ಒಂದು ಕಡೆ ರಾಮೇಶ್ವರ ದೇವಸ್ಥಾನದಲ್ಲಿ ದಸರಾ ಶುರುವಾಗಿದೆ. ಮಾರಿಕಾಂಬಾ ದೇವಾಲಯದಲ್ಲಿ ವಿಶೇಷ ಪೂಜೆ ನಡೆಯುತ್ತಿದೆ.
ಇನ್ನು ವಿಶೇಷ ಎಂಬಂತೆ ತೀರ್ಥಹಳ್ಳಿಯ ಕೊಪ್ಪ ಸರ್ಕಲ್ ನಲ್ಲಿ ಉಗ್ರ ನರಸಿಂಹನ ಮಹಾದ್ವಾರ ನಿರ್ಮಾಣ ಆಗಿದೆ. “ಹಿರಣ್ಯಾಕ್ಷ ಸಂಹಾರಕ ಶ್ರೀ ನರಸಿಂಹ ಸ್ವಾಮಿ”ಯ ರೂಪದಲ್ಲಿ ಮಹಾದ್ವಾರ ನಿರ್ಮಿಸಲಾಗಿದೆ. ಪಟ್ಟಣದ ಪ್ರಮುಖ ಯುವ ಮುಖಂಡರಲ್ಲರೂ ಸೇರಿ ಈ ಮಹಾದ್ವಾರವನ್ನು ನಿರ್ಮಾಣ ಮಾಡಿದ್ದಾರೆ. ಈ ದ್ವಾರ ಜನರ ಆಕರ್ಷಣೆ ಗೆ ಕಾರಣವಾಗಿದೆ.
ಕುಶಾವತಿ ಪಾರ್ಕ್ ಅಲ್ಲಿ ದಸರಾ ವಿಶೇಷ ಕಾರ್ಯಕ್ರಮಕ್ಕೆ ವೇದಿಕೆ ಸಜ್ಜುಗೊಳ್ಳುತ್ತಿದೆ. ವಿಶೇಷ ಮೆರವಣಿಗೆಗೆ ಈಗಾಗಲೇ ತಯಾರಿ ಆಗಿದೆ.

Categories
ತೀರ್ಥಹಳ್ಳಿ ಮಲ್ನಾಡ್ ಮಾಹಿತಿ ಸುದ್ದಿ ರಾಜ್ಯ ಶಿವಮೊಗ್ಗ ಸಾಗರ ಹಬ್ಬಗಳು ಹೊಸನಗರ

ಸಿಗಂದೂರಲ್ಲಿ ನವರಾತ್ರಿ ಸಂಭ್ರಮ ಶುರು!

ಸಿಗಂದೂರಲ್ಲಿ ನವರಾತ್ರಿ ಸಂಭ್ರಮ ಶುರು!
– ಸೆ. 22ರಿಂದ ಚೌಡಮ್ಮ ದೇವಾಲಯದಲ್ಲಿ ನವರಾತ್ರಿ ರಂಗು
– 9 ದಿನವೂ ವಿವಿಧ ಅಲಂಕಾರ: ಸಾವಿರಾರು ಭಕ್ತರ ಆಗಮನ

NAMMUR EXPRESS NEWS
ಸಾಗರ: ನಾಡಿನ ಪ್ರಸಿದ್ಧ ಶಕ್ತಿ ದೇವತೆ ಸಾಗರ ತಾಲ್ಲೂಕಿನ ಸಿಗಂದೂರು ಚೌಡಮ್ಮ ದೇವಸ್ಥಾನದಲ್ಲಿ ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 2ರ ವರೆಗೆ ನವರಾತ್ರಿ ಉತ್ಸವ ನೆಡೆಯಲಿದೆ ಎಂದು ದೇವಳ ಆಡಳಿತ ಮಂಡಳಿ ತಿಳಿಸಿದೆ.

ಪ್ರತಿದಿನ ಮುಂಜಾನೆ ದೇವಿಗೆ ಪ್ರಾತಕಾಲ ಪೂಜೆ, ತೈಲಾಭಿಷೇಕ, ಶೈಲಪುತ್ರಿ ಆರಾಧನೆ, ಶುದ್ದಿ ಪುಣ್ಯಾಹ,ಗಣಹೋಮ, ಕುಂಕುಮಾರ್ಚನೆ, ಪಂಚಾಮೃತ ಅಭಿಷೇಕ, ವಿವಿಧ ಧ್ರವ್ಯಗಳಿಂದ ಅಭಿಷೇಕ, ಮಹಾಭಿಷೇಕ, ಅಲಂಕಾರ ಪೂಜೆ ನೆಡೆಯಲಿದೆ. ನವರಾತ್ರಿ ಉತ್ಸವದ ಪ್ರಯುಕ್ತ ದೇವಿಗೆ ಪ್ರತಿನಿತ್ಯ ದುರ್ಗಾ ಹವನ, ಚಂಡಿಕಾ ಹೋಮ, ನವಚಂಡಿಕಾ ಹೋಮ, ಗುರುಗಳ ಆರಾಧನೆ ನೆಡೆಯಲಿದೆ. ಪ್ರತಿನಿತ್ಯ ಮಧ್ಯಾಹ್ನ 12:30ಕ್ಕೆ ನೈವೇದ್ಯ, ರಾತ್ರಿ 7:30 ರಿಂದ ದೀಪೋತ್ಸವ, 8ರಿಂದ ಅಷ್ಟಾವಧಾನ ಸೇವೆ, ಮಹಾ ಮಂಗಳಾರತಿ ನೆಡೆಯಲಿದೆ. ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳು ಅನುವಂಶಿಕ ಧರ್ಮಾಧಿಕಾರಿ ಎಸ್ ರಾಮಪ್ಪನವರ ನೇತೃತ್ವದಲ್ಲಿ ನಡೆಯಲಿದೆ.

ನವರಾತ್ರಿ ಉತ್ಸವದ ಹಿನ್ನೆಲೆಯಲ್ಲಿ ಪ್ರತಿದಿನ ಸಾಂಸ್ಕೃತಿಕ ಕಾರ್ಯಕ್ರಮಗಳು ನೆಡೆಯಲಿದೆ. ನವರಾತ್ರಿ ಸಂದರ್ಭದಲ್ಲಿ ಭಕ್ತಾದಿಗಳಿಗೆ ವಸತಿ, ದರ್ಶನ, ನಿತ್ಯ ಪೂಜೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ದೇವಸ್ಥಾನದ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಎಚ್ ಆರ್ ತಿಳಿಸಿದ್ದಾರೆ.

Categories
ಹಬ್ಬಗಳು

ಗಣಪತಿ ಬಂದ ಗಣೇಶ..!

ಗಣಪತಿ ಬಂದ ಗಣೇಶ..!
– ಎಲ್ಲರೂ ಪೂಜಿಸುವ ಗಣೇಶನಿಗೆ ಜೈ
– ಪ್ರತಿ ಮನೆ ಮನೆಯಲ್ಲೂ ಹಬ್ಬದ ಸಂಭ್ರಮ

NAMMUR EXPRESS NEWS
ಪ್ರಥಮ ಪೂಜಿತ ಅಷ್ಟೇ ಅಲ್ಲದೆ, ಎಲ್ಲರ ಪಾಲಿನ ಪ್ರೀತಿಯ ದೇವರು ಗಣಪತಿ. ಅದರಲ್ಲೂ ಮಕ್ಕಳಿಗೆ ಗಣೇಶ ಎಂದರೆ ಒಂದು ರೀತಿ ಸ್ನೇಹಿತನ ಹಾಗೆ. ತಂದೆ ತಾಯಿಗಳು ತಮ್ಮ ಮಕ್ಕಳ ತುಂಟಾಟದಲ್ಲಿ ಕೃಷ್ಣನನ್ನು ಕಾಣುವಂತೆ, ತಿಂಡಿ ತಿನಿಸುಗಳ ವಿಚಾರಕ್ಕೆ ಬಂದಾಗ ಮಕ್ಕಳಲ್ಲಿ ಗಣೇಶನನ್ನು ಕಾಣುವುದು ಸಹಜ.
ಮೂರ್ತಿಗಳಲ್ಲಿ ಮತ್ತು ಇಂದಿನ ಆಧುನಿಕ ತಂತ್ರಜ್ಞಾನದಲ್ಲಿ ವಿವಿಧ ಬಗೆಯ ಗಣೇಶನನ್ನು ಮತ್ತು ಆತನ ಕಾರ್ಯವೈಖರಿಗಳನ್ನು ನೋಡುವುದೇ ಒಂದು ಸೊಗಸು. ಅಂತಹ ಕಡೆಗಳಲ್ಲಿ ಆತ ದೇವರಾಗುವ ಬದಲು, ನಮ್ಮನಿಮ್ಮೆಲ್ಲರಂತೆ ಒಬ್ಬ ಸಾಮಾನ್ಯ ವ್ಯಕ್ತಿಯಾಗಿ ಕಣ್ಣಿಗೆ ಗೋಚರಿಸುತ್ತಾನೆ. ಅದಕ್ಕಾಗಿಯೇ ಪುಟಾಣಿ ಮಕ್ಕಳಿಗೆ ಮೂಷಿಕವಾಹನನನ್ನು ಕಂಡರೆ ಎಲ್ಲಿಲ್ಲದ ಪ್ರೀತಿ. ಇಂತಹ ಮುದ್ದು ಗಣಪನ ಆಗಮನಕ್ಕಾಗಿ ಎಲ್ಲೆಡೆ ಪೂಜೆಗಿಂತ ಹೆಚ್ಚಾಗಿ, ತಿಂಡಿ ತಿನಿಸುಗಳ ತಯಾರಿ ಭರದಿಂದ ಸಾಗಿದೆ.‌
ಗಣೇಶ ಚತುರ್ಥಿ ಎನ್ನುವುದು ಒಂದರ್ಥದಲ್ಲಿ ಗಣಪತಿಯ ಹುಟ್ಟುಹಬ್ಬವೆಂದೇ ಹೇಳಬಹುದು. ಒಂದೊಂದು ಕಥೆಗಳಲ್ಲಿ ಒಂದೊಂದು ರೀತಿಯಲ್ಲಿ ಗಣೇಶನನ್ನು ಬಿಂಬಿಸಲಾಗಿದೆ. ಯಾಜ್ಞವಲ್ಕ್ಯ ಸ್ಮೃತಿಯ ಪ್ರಕಾರ ಗಣಪತಿಯ ತಾಯಿ ಅಂಬಿಕೆ. ಇನ್ನೊಂದು ಕಥೆಯ ಪ್ರಕಾರ ಪಾರ್ವತಿಯ ಮೈಯಿಂದ ಜನಿಸಿದವನು ಈ ಗಣೇಶ. ಮತ್ತೊಂದು ಕಥೆಯಲ್ಲಿ ಗಣಪತಿಯು ಸ್ವರ್ಣಗೌರಿಯ ಮಾನಸ ಪುತ್ರ ಎನಿಸಿಕೊಂಡಿದ್ದಾನೆ. ಇನ್ನು ಜನಪದರ ಪ್ರಕಾರ ಗಣೇಶ ಚತುರ್ಥಿಯ ರೀತಿಯೇ ವಿಭಿನ್ನ. ‘ ಶಿವನು ಭಿಕ್ಷಕ್ಕೆ ಬಂದ ನೀಡು ಬಾರೆ’ ಎಂಬ ಜನಪದ ಗೀತೆಯಲ್ಲಿ ಕೊನೆಯದಾಗಿ ಒಂದು ಸಾಲು ಬರುತ್ತದೆ ‘ಗೌರಿ ಮನಸ ಬಿಟ್ಟಿರಲಾರನಂತೆ ಕಾಣೆ’ ಎಂದು ಶಿವನು ತನ್ನ ಮಡದಿಯ ಮೇಲೆ ಇಟ್ಟಿರುವ ಮೋಹವನ್ನು ಕುರಿತು ಈ ರೀತಿ ತಿಳಿಸಲಾಗಿದೆ. ಆ ಸಾಲಿಗೂ ಈ ಹಬ್ಬಕ್ಕೂ ಒಂದು ರೀತಿಯಲ್ಲಿ ಅವಿನಾಭಾವ ಸಂಬಂಧವಿದೆ ಎಂದೇ ಹೇಳಬಹುದು. ಏಕೆಂದರೆ ಕೈಲಾಸದಿಂದ ತನ್ನ ತವರುಮನೆಗೆ ಹೋಗಿ ಬರುವುದಾಗಿ ಗೌರಿಯು ಭೂಲೋಕಕ್ಕೆ ಆಗಮಿಸುತ್ತಾಳೆ. ಆಗ ಶಿವನು ವಿರಹ ವೇದನೆಯಿಂದ ಬಳಲುತ್ತಾನೆ. ಆಕೆಯನ್ನು ಕ್ಷಣ ಕೂಡ ಬಿಟ್ಟಿರುವುದು ಶಿವನಿಂದ ಸಾಧ್ಯವಾಗುವುದಿಲ್ಲ. ಮರುದಿನ ತನ್ನ ಮುದ್ದಿನ ಮಗನಾದ ಗಣೇಶನನ್ನು ಕರೆದು, ತಾಯಿಯನ್ನು ಮರಳಿ ಕರೆತರುವಂತೆ ಹೇಳಿ ಭೂಲೋಕಕ್ಕೆ ಕಳುಹಿಸಿಕೊಡುತ್ತಾನೆ. ಗಣಪತಿಯು ತನ್ನ ಅಜ್ಜಿಯ ಮನೆಗೆ ಸಂತೋಷ ಮತ್ತು ಸಂಭ್ರಮದಿಂದ ಆಗಮಿಸುತ್ತಾನೆ. ಮುದ್ದಿನ ಮತ್ತು ಆಹಾರಪ್ರಿಯ ಮೊಮ್ಮಗನ ಆಗಮನದಿಂದ ಗೌರಿಯ ತವರುಮನೆಯ ಸಂಭ್ರಮ ಇಮ್ಮಡಿಸುತ್ತದೆ. ಮೊಮ್ಮಗ ಬಯಸಿದ ಎಲ್ಲಾ ರೀತಿಯ ತಿಂಡಿ ತಿನಿಸುಗಳನ್ನು ಮಾಡಿ, ಬಡಿಸಿ ಆತನನ್ನು ತೃಪ್ತಿಪಡಿಸುತ್ತಾರೆ. ಜೊತೆಗೆ ಅಕ್ಕಪಕ್ಕದ ಮನೆಯವರು ತಮ್ಮ ಮನೆಗೆ ಆಹ್ವಾನಿಸಿ, ತಿಂಡಿಪೋತ ಗಣೇಶನಿಗೆ ವಿವಿಧ ಬಗೆಯ ಪದಾರ್ಥಗಳನ್ನು ತಿನ್ನಿಸಿ, ಸಂತೋಷಪಡಿಸುತ್ತಾರೆ. ಉಂಡು ತಿಂದು ಖುಷಿಪಟ್ಟ ಗಣಪತಿಯು ಬಳಿಕ ತನ್ನ ತಾಯಿಯನ್ನು ಕರೆದುಕೊಂಡು ಕೈಲಾಸಕ್ಕೆ ತೆರಳುತ್ತಾನೆ ಎನ್ನುವುದಾಗಿದೆ. ಹೀಗಾಗಿ ಭೂಲೋಕದ ಮುದ್ದಿನ ಮಗುವಿನ ಆಗಮನಕ್ಕಾಗಿ ಎಲ್ಲೆಡೆ ಸಂಭ್ರಮದ ತಯಾರಿ ನಡೆಯುತ್ತದೆ ಎನ್ನುವುದು ವಾಡಿಕೆ. ಮಗಳು ಮತ್ತು ಆಕೆಯ ಮಗುವನ್ನು ಮರಳಿ ಕಳುಹಿಸಿಕೊಡುವಾಗ ನೋವುಂಟಾಗುವುದು ಸಹಜ. ಅದೇ ರೀತಿಯ ಭಾವ ಗಣೇಶನನ್ನು ಕಳುಹಿಸಿಕೊಡುವಾಗ ಎಲ್ಲರ ಮನದಲ್ಲೂ ಉಂಟಾಗುವುದನ್ನು ಕಾಣಬಹುದಾಗಿದೆ. ಹಬ್ಬದ ಆಚರಣೆಯ ರೀತಿ, ಸಂಪ್ರದಾಯ ಮತ್ತು ಮಹತ್ವ ಏನೇ ಇದ್ದರೂ, ಸಾಮಾನ್ಯ ಮನುಷ್ಯರ ಪಾಲಿಗೆ ಹೆಚ್ಚಾಗಿ ಆಪ್ತವಾಗುವುದು ಈ ರೀತಿಯ ಸಂಗತಿ ಎಂದೇ ಹೇಳಬಹುದು. ದೇವರನ್ನು ಮನುಷ್ಯನ ಭಾವನೆಗಳಿಗೆ ಪೂರಕವಾಗಿ ನೋಡುವ ರೀತಿಯೇ ವಿಭಿನ್ನ.

ಸಮಸ್ತ ಜನತೆಗೆ ಗಣೇಶ ಹಬ್ಬದ ಶುಭಾಶಯಗಳು 

Categories
ಹಬ್ಬಗಳು

ಗೌರಿ ಹಬ್ಬದ ಸಂಭ್ರಮ.. ಸಡಗರ..!

ಗೌರಿ ಹಬ್ಬದ ಸಂಭ್ರಮ.. ಸಡಗರ..!
– ಮನೆ ಮನೆಯಲ್ಲಿ ಆಚರಣೆ ಸಿದ್ಧತೆ ಜೋರು
– ಗೌರಿ ಹಬ್ಬದ ವಿಶೇಷ ಏನು? ಆಚರಣೆ ಹೇಗೆ?

NAMMUR EXPRESS NEWS
ಗೌರಿ ಎಂಬ ಹೆಸರು ಹೆಣ್ಣು ಮಕ್ಕಳಲ್ಲಿ ಒಂದು ರೀತಿಯ ಭಕ್ತಿ ಪ್ರೀತಿಯ ಜೊತೆಗೆ ಸಂಭ್ರಮವನ್ನು ತಂದುಕೊಡುತ್ತದೆ. ಈ ಬಾರಿಯ ಗೌರಿ ಹಬ್ಬ ದೇವಿಯ ವಾರವಾದ ಮಂಗಳವಾರದಂದು ಬಂದಿರುವುದು ಮತ್ತೊಂದು ವಿಶೇಷ. ಗೌರಿ ಪೂಜೆಗೆ ಹೆಣ್ಣು ಮಕ್ಕಳು ಸಡಗರದಿಂದ ತಯಾರಿ ನಡೆಸುತ್ತಿದ್ದಾರೆ.
ಗೌರಿಯನ್ನು ಭಕ್ತಿಯಿಂದ, ಪ್ರೀತಿಯಿಂದ ಪೂಜಿಸಿ, ಆರಾಧಿಸಿದರೆ ಮುತ್ತೈದೆತನ ಶಾಶ್ವತವಾಗಿರುವಂತೆ ಮತ್ತು ಯುವತಿಯರಿಗೆ ಶಿವನ ಅರ್ಧನಾರೀಶ್ವರ ಸ್ವರೂಪನಾದ ಅಂದರೆ ಹೆಣ್ಣನ್ನು ತನ್ನ ಸಮಾನವಾಗಿ ಕಾಣುವ ಉತ್ತಮ ಗುಣವುಳ್ಳ, ಹೃದಯವಂತ ಪತಿಯಾಗಿ ದೊರೆಯುವಂತೆ ಮಾಡುತ್ತಾಳೆ ಎನ್ನುವ ಅಗಾಧ ನಂಬಿಕೆ ಇದೆ. ಪಾರ್ವತಿಯು ತಪಸ್ಸನ್ನು ಕೈಗೊಂಡು, ರುದ್ರ ಸ್ವರೂಪಿಯಾದ ಶಿವನನ್ನು ತನ್ನ ಪ್ರೀತಿಗೆ ಮಣಿಸಿ ತನ್ನ ಕೈ ಹಿಡಿಯುವಂತೆ ಮಾಡುತ್ತಾಳೆ. ಪಾರ್ವತಿಯ ಪ್ರೀತಿಗೆ ಸೋತ ಶಿವನು, ಭೂಲೋಕಕ್ಕೆ ಬಂದು ಆಕೆಯನ್ನು ಪರಿಣಯಿಸಿ, ತನ್ನ ನಿವಾಸವಾದ ಕೈಲಾಸಕ್ಕೆ ಕರೆದುಕೊಂಡು ಹೋಗುತ್ತಾನೆ. ಪ್ರತಿ ವರ್ಷ ಗೌರಿಯು ಒಂದು ಬಾರಿ ಭೂಲೋಕಕ್ಕೆ ಬಂದು ಹೋಗುತ್ತಾಳೆ ಎನ್ನಲಾಗಿದೆ. ಇನ್ನು ಜನಪದರು ಗೌರಿಯನ್ನು ನೋಡುವ ರೀತಿಯೇ ಬೇರೆ. ಅವರ ಪಾಲಿಗೆ ಗೌರಿ ದೇವರಲ್ಲ, ಬದಲಿಗೆ ನಮ್ಮಂತೆ ಓರ್ವ ಸಾಮಾನ್ಯ ಹೆಣ್ಣು. ಗೌರಿಯು ಭೂಲೋಕದ ಮನೆಮಗಳು. ಪತಿಯಾದ ಶಿವನು ನೆಲೆನಿಂತಿರುವ ಅಂದರೆ ಗಂಡನ ಮನೆಯಾದ ಕೈಲಾಸದಿಂದ, ಭೂಲೋಕ ಎಂಬ ತವರುಮನೆಗೆ ಬಂದು ಬಾಗಿನ ಪಡೆದುಕೊಂಡು ಹೋಗುತ್ತಾಳೆ ಎನ್ನುವುದು ಇವರ ಮಾತು. ಹೆಣ್ಣು ಮಕ್ಕಳು ವರ್ಷಕ್ಕೊಮ್ಮೆ ತವರು ಮನೆಗೆ ಹೋಗಿ, ಹಿಂತಿರುಗುವಾಗ ಉಡಿ, ಬಾಗಿನ ತೆಗೆದುಕೊಂಡು ಹೋಗುವಂತೆ, ಗೌರಿಯು ಭೂಲೋಕದಲ್ಲಿರುವ ತನ್ನ ತವರಿಗೆ ಪ್ರತಿ ವರ್ಷ ಬಂದು ಬಾಗಿನ ತೆಗೆದುಕೊಂಡು ಹೋಗುತ್ತಾಳೆ ಎನ್ನುತ್ತಾರೆ ಜನಪದರು. ಈ ಕಾರಣದಿಂದಾಗಿ ಗೌರಿ ಹಬ್ಬ ಎನ್ನುವುದು ವಿವಾಹಿತ ಮಹಿಳೆಯರ ಪಾಲಿಗೆ ತವರು ಮನೆ ಹಬ್ಬವಾಗಿದೆ.
ಗಂಡನ ಮನೆಯಲ್ಲಿದ್ದೇ ಬಾಗಿನದ ಪೂಜೆಯನ್ನು ನೆರವೇರಿಸಿದರೂ ಕೂಡ, ಅವರಿಗೆ ತವರುಮನೆಯಿಂದ ಸೀರೆ, ರವಿಕೆ ಕಣ, ಅರಿಶಿಣ, ಕುಂಕುಮ, ಹೂವು, ಬಳೆ, ಹಣ, ಒಡವೆಗಳು ಬಾಗಿನದ ರೂಪದಲ್ಲಿ ತಂದೆ ಅಥವಾ ಅಣ್ಣ ತಮ್ಮಂದಿರ ಮೂಲಕ ಬರುವುದನ್ನು ನೋಡಬಹುದಾಗಿದೆ. ಹಬ್ಬದ ನಂತರ ಹೆಣ್ಣು ಮಕ್ಕಳು ತವರಿಗೆ ಬಂದು ತಾಯಿಗೆ ಮತ್ತು ತನಗಿಂತ ಹಿರಿಯರಾಗಿರುವ ಕುಟುಂಬದಲ್ಲಿನ ಮಹಿಳೆಯರಿಗೆ ಬಾಗಿನ ನೀಡಿ ಆಶೀರ್ವಾದ ಪಡೆದುಕೊಂಡು ಸಹ ಹೋಗುತ್ತಾರೆ. ಇನ್ನು ಗೌರಿ ಹಬ್ಬಕ್ಕೂ ಗಂಗೆ ಗೌರಿ ಜಗಳಕ್ಕೂ ನಂಟಿದೆ ಎನ್ನಲಾಗಿದೆ. ಒಮ್ಮೆ ಗಂಗೆ ಗೌರಿಯರ ನಡುವೆ ಯಾವುದೋ ಕಾರಣಕ್ಕೆ ಕಲಹ ಏರ್ಪಡುತ್ತದೆ. ಆಗ ಗೌರಿಯು ಮುಟ್ಟಾಗಿರುತ್ತಾಳೆ. ಕೋಪದಲ್ಲಿದ್ದ ಗಂಗೆಯು ಗೌರಿಗೆ ಮೈ ತೊಳೆದುಕೊಳ್ಳಲು, ಆಕೆಯ ಮಕ್ಕಳಿಗೆ ಅಡುಗೆ ಮಾಡಿ ಹಾಕಲು, ಶಿವನ ಪೂಜೆಗೆ ನೀರಿಲ್ಲದಂತೆ ಮಾಡುತ್ತಾಳೆ. ಆಗ ಗೌರಿಯು ಗಂಗೆಗೆ ಆಕೆಯ ಮೂಲವನ್ನು ತಿಳಿಸಿ ನಿಂದಿಸುತ್ತಾಳೆ, ಅದೇ ರೀತಿ ಗಂಗೆಯು ಗೌರಿಯನ್ನು ನಿಂದಿಸುತ್ತಾಳೆ. ಇಬ್ಬರ ಜಗಳದ ನಡುವೆ ರಾಜಿ ಸಂಧಾನಕ್ಕೆ ಬಂದ ಶಿವನು, ಇಬ್ಬರ ಶ್ರೇಷ್ಠತೆಯನ್ನು ಮನವರಿಕೆ ಮಾಡಿ, ಗಂಗೆಯು ಭೂಲೋಕದಲ್ಲಿ ಜಾತ್ರೆಯ ಸಮಯದಲ್ಲಿ ಮಾರಿಯ ರೂಪದಲ್ಲಿ ಮಾಂಸಾಹಾರ ನೈವೇದ್ಯ ಸ್ವೀಕರಿಸಿ, ಪೂಜಿತಳಾಗುವಂತೆ ಮತ್ತು ಪಾರ್ವತಿಯು ಭೂಲೋಕದಲ್ಲಿ ಭಾದ್ರಪದ ಮಾಸದಲ್ಲಿ ಗೌರಿ ಎಂಬ ಹೆಸರಿನಲ್ಲಿ ಸಿಹಿ ಪದಾರ್ಥದ ನೈವೇದ್ಯ ಸ್ವೀಕರಿಸಿ ಭೂಲೋಕದಲ್ಲಿ ಪೂಜಿತಳಾಗುವಂತೆ ಹರಸಿದನು ಎಂಬ ಉಲ್ಲೇಖ ಕೂಡ ಇದೆ.

Categories
ಹಬ್ಬಗಳು

ಸಹೋದರ ಸಹೋದರಿಯರ ಹಬ್ಬ ರಕ್ಷಾ ಬಂಧನ!

ಸಹೋದರ ಸಹೋದರಿಯರ ಹಬ್ಬ ರಕ್ಷಾ ಬಂಧನ!
– ರಾಖಿ ಹಬ್ಬ ಆಚರಣೆಯಲ್ಲಿ ಯುವ ಸಮುದಾಯ
– ಸಹೋದರತ್ವ ಸಾರುವ ಹಬ್ಬದ ವಿಶೇಷ ಏನು..?

NAMMUR EXPRESS NEWS
ಬಂತು ಬಂತು ರಕ್ಷಾ ಬಂಧನ ಹಬ್ಬ. ಪ್ರತಿವರ್ಷ ಶ್ರಾವಣ ಮಾಸದ ಹುಣ್ಣಿಮೆಯಂದು ರಕ್ಷಾ ಬಂಧನ ಮತ್ತು ನೂಲು ಹುಣ್ಣಿಮೆ ಎಂಬ ಹೆಸರಿನಲ್ಲಿ ಆಚರಿಸಲಾಗುತ್ತದೆ.‌ ಇದಕ್ಕೆ ಒಂದು ಪೌರಾಣಿಕ ಮತ್ತು ಐತಿಹಾಸಿಕ ಹಿನ್ನೆಲೆ ಇದೆ. ಸಹೋದರ ಸಹೋದರಿಯ ಹಬ್ಬವಾಗಿ. ಬಳಿಕ ಕೆಲವು ಸಮುದಾಯದವರು ಇದನ್ನು ಉಪಕರ್ಮ ಎಂದು ಪದ್ಧತಿಯ ಪ್ರಕಾರ ಪುರುಷರು ಮಾತ್ರ ಆಚರಿಸುತ್ತಾರೆ.
ಮಹಾಭಾರತ ಕಾಲದಲ್ಲಿ ತನ್ನನ್ನು ಸದಾ ಕಾಪಾಡುತ್ತಿದ್ದ ಕೃಷ್ಣನಿಗೆ, ದ್ರೌಪತಿಯು ಅವನ ಮಣಿಕಟ್ಟಿನ ಮೇಲೆ ರಕ್ಷಣಾತ್ಮಕ ದಾರವನ್ನು ಕಟ್ಟಿದ್ದಳು ಎಂಬ ಪೌರಾಣಿಕ ಹಿನ್ನೆಲೆ ಇದ್ದರೆ, ಮತ್ತೊಂದು ವಿಶೇಷವೆಂದರೆ ಧಾರ್ಮಿಕ ಮೇರೆಯನ್ನು ಮತ್ತು ರಕ್ತ ಸಂಬಂಧವನ್ನು ಸಹ ಮೀರಿ ಈ ಹಬ್ಬವನ್ನು ಆಚರಿಸಲಾಗುತ್ತದೆ ಎನ್ನುವುದಕ್ಕೆ ಐತಿಹಾಸಿಕ ಹಿನ್ನೆಲೆಯೊಂದಿಗೆ. ಅದೇನೆಂದರೆ ಚಿತ್ತೂರಿನ ರಾಣಿ ಕರ್ಣಾವತಿ ತನ್ನ ರಕ್ಷಣೆಗಾಗಿ ಮೊಘಲ್ ಚಕ್ರವರ್ತಿಯಾದ ಹುಮಾಯೂನ್ ಗೆ ರಾಖಿಯನ್ನು ಕಳುಹಿಸಿದ್ದಳು ಎಂಬ ಉಲ್ಲೇಖವಿದೆ. ಹಿಂದಿನ ಕಾಲದಲ್ಲಿ ಸಾಮಾನ್ಯ ನೂಲನ್ನು ಅಕ್ಕ ತನ್ನ ತಮ್ಮನ ಕೈಗೆ, ತಂಗಿಯು ತನ್ನ ಅಣ್ಣನ ಕೈಗೆ ತನಗೆ ಸದಾ ರಕ್ಷಕನಾಗಿರುವಂತೆ ಹಂಬಲಿಸಿ ಕಟ್ಟುವುದು ವಾಡಿಕೆಯಾಗಿತ್ತು. ಆದರೆ ಕಾಲ ಮುಂದುವರೆದಂತೆಲ್ಲ ಅದರಲ್ಲೂ ಬಣ್ಣ ಬಣ್ಣದ ವೈವಿಧ್ಯಮಯ ಶೈಲಿಯ ರಾಖಿಗಳು ಮಾರುಕಟ್ಟೆಗಳಲ್ಲಿ ಮತ್ತು ಆನ್ ಲೈನ್ ಗಳಲ್ಲಿ ಲಭ್ಯವಾಗುತ್ತಿದೆ.‌
ಮುಂಚೆ ಸಾಧಾರಣವಾಗಿದ್ದ ಮತ್ತು ಕೆಲವರು ಮಾತ್ರ ಆಚರಿಸುತ್ತಿದ್ದ ಈ ಹಬ್ಬವು, ಇಂದು ವೈಭವೀಕರಣಕ್ಕಾಗಿಯೂ ಸಹ ಆಚರಿಸುವಂತಾಗಿದೆ. ತನಗೆ ರಾಖಿ ಕಟ್ಟಿದ ಅಕ್ಕ ಅಥವಾ ತಂಗಿಗೆ, ಅಣ್ಣ ಅಥವಾ ತಮ್ಮನು ಹಣ, ಇಲ್ಲವೇ ಬೇರೆ ಬೇರೆ ವಸ್ತುಗಳನ್ನು ಉಡುಗೊರೆಯಾಗಿ ನೀಡುವುದು ಮತ್ತೊಂದು ವಿಶೇಷ. ಇದಕ್ಕಾಗಿ ಸಹೋದರಿಯರು ಕುತೂಹಲದಿಂದ ಕಾಯುತ್ತಿರುತ್ತಾರೆ.
ಇನ್ನು ವಿವಾಹಗೊಂಡು ಬೇರೆ ಬೇರೆ ಊರುಗಳಲ್ಲಿ ವಾಸವಾಗಿರುವ ಸಹೋದರಿಯರು, ತಮ್ಮ ಸಹೋದರರಿಗೆ ಅಂಚೆಯ ಮೂಲಕ ರಾಖಿಯನ್ನು ಅಂದರೆ ರಕ್ಷಾ ಬಂಧನವನ್ನು ಕಳುಹಿಸಿಕೊಡುವುದು ಸಹ ರೂಢಿ ಇದೆ. ಇನ್ನು ಇತ್ತೀಚಿನ ದಿನಗಳಲ್ಲಿ ಶಾಲಾ ಕಾಲೇಜುಗಳಲ್ಲಿ ಹುಡುಗಿಯರು ತಮ್ಮ ಸಹಪಾಠಿಗಳಾದ ಹುಡುಗರನ್ನು ಸಹೋದರರಂತೆ ಕಾಣಬೇಕೆಂದು ಬಯಸಿ, ರಾಕಿ ಕಟ್ಟಲು ಹೋಗುವುದು, ಹುಡುಗರು ಅದನ್ನು ನಿರಾಕರಿಸಿ ಗಲಾಟೆ ಎಬ್ಬಿಸುವ, ಇಲ್ಲವೇ ಅಡಗಿ ಕೂರುವ, ಓಡಿ ಹೋಗುವಂತಹ ಹಾಸ್ಯ ಸನ್ನಿವೇಶಗಳು ಕಂಡುಬರುವುದು ಸಹಜವಾಗಿದೆ. ಈ ಹಬ್ಬವು ನೂಲಿನದಾದ್ದರಿಂದ ಅದನ್ನು ಹೋಲುವ ಶ್ಯಾವಿಗೆಯನ್ನು ಅಂದರೆ ಒತ್ತು ಶ್ಯಾವಿಗೆ ಅಥವಾ ಶ್ಯಾವಿಗೆ ಪಾಯಸ ಈ ರೀತಿಯ ಪದಾರ್ಥಗಳನ್ನು ಸಿದ್ಧಪಡಿಸಿ ಊಟದ ಸಮಯದಲ್ಲಿ ಸೇವಿಸುವ ಪದ್ಧತಿ ಕೂಡ ಕೆಲವು ಕಡೆ ಚಾಲ್ತಿಯಲ್ಲಿದೆ. ಈಗಾಗಲೇ ಎಲ್ಲೆಡೆ ರಕ್ಷಾ ಬಂಧನ ಸಂಭ್ರಮ ಕಾಣುತ್ತಿದೆ. ಅಂಗಡಿಗಳಲ್ಲಿ ವ್ಯಾಪಾರ ಕೂಡ ಜೋರಾಗಿದೆ. ಮನೆ ಮನೆಯಲ್ಲಿ ಅಣ್ಣ ತಂಗಿಯರ ಹಬ್ಬ ನಡೆಯುತ್ತಿದೆ.

ಸಮಸ್ತ ಸಹೋದರಿಯರಿಗೆ ರಕ್ಷಾ ಬಂಧನದ ಶುಭಾಶಯಗಳು