Categories
ಬೆಂಗಳೂರು ಮಾಹಿತಿ ಶಿಕ್ಷಣ

ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ಫಲಿತಾಂಶ ಪ್ರಕಟ

ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ಫಲಿತಾಂಶ ಪ್ರಕಟ
– karresults.nic.in ನಲ್ಲಿ ಪೂರಕ ಪರೀಕ್ಷೆ ಫಲಿತಾಂಶ
– 50,478 ವಿದ್ಯಾರ್ಥಿಗಳು ಉತ್ತೀರ್ಣ: ಎರಡನೇ ಬಾರಿ ಫೇಲ್ ಆದವರೇ ಹೆಚ್ಚು!

NAMMUR EXPRESS NEWS
ಬೆಂಗಳೂರು: 2023ನೇ ಸಾಲಿನ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯ ಫಲಿತಾಂಶವು ಮಂಗಳವಾರ ಪ್ರಕಟವಾಗಿದೆ.
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಜಾಲತಾಣವಾದ https://karresults.nic.in ನಲ್ಲಿ ಪೂರಕ ಪರೀಕ್ಷೆ ಫಲಿತಾಂಶ ಪ್ರಕಟವಾಗಿದೆ.
2023ನೇ ಸಾಲಿನ ದ್ವಿತೀಯ ಪಿಯುಸಿ ಪೂಕರ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದೆ. ಪರೀಕ್ಷೆಗೆ ಹಾಜರಾದ ಒಟ್ಟು 1,57,756 ವಿದ್ಯಾರ್ಥಿಗಳ ಪೈಕಿ 50,478 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಮಧ್ಯಾಹ್ನ 3 ಗಂಟೆಗೆ ಕಾಲೇಜುಗಳಲ್ಲಿ ಫಲಿತಾಂಶ ಲಗತ್ತಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಫಲಿತಾಂಶ ನೋಡೋದು ಹೇಗೆ?

ಪೂರಕ ಪರೀಕ್ಷೆಗಳಿಗೆ ಹಾಜರಾದ ವಿದ್ಯಾರ್ಥಿಗಳು ತಮ್ಮ ಫಲಿತಾಂಶಗಳನ್ನು ಅಧಿಕೃತ ವೆಬ್ ಸೈಟ್ ನಿಂದ karresults.nic.in ಪರಿಶೀಲಿಸಲು ಸಾಧ್ಯವಾಗುತ್ತದೆ.
ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯ ಫಲಿತಾಂಶವನ್ನು ವಿದ್ಯಾರ್ಥಿಗಳು ಮಂಡಳಿಯ ಜಾಲತಾಣ
https://karresults.nic.in ನಲ್ಲಿ ವೀಕ್ಷಿಸಬಹುದಾಗಿದೆ. ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಗೆ ಹಾಜರಾತಿ ಕೊರತೆಯಿಂದ ವಾರ್ಷಿಕ ಪರೀಕ್ಷೆಗೆ ಹಾಜರಾಗದ ವಿದ್ಯಾರ್ಥಿಗಳಿಗೂ ಇದೇ ಮೊದಲ ಬಾರಿಗೆ ಅವಕಾಶವನ್ನು ನೀಡಿತ್ತು.
ಫಲಿತಾಂಶ ನೋಡಲು https://kseab.karnataka.gov.in/
ಅಥವಾ https://karresults.nic.in
https://karresults.nic.in ವೆಬ್ ಸೈಟ್ ಲಿಂಕ್ ನೋಡಬಹುದಾಗಿದೆ. ವಿದ್ಯಾರ್ಥಿಗಳು ಅಧಿಕೃತ ವೆಬ್‌ಸೈಟ್‌ಗೆ ಹೋಗಿ ಫಲಿತಾಂಶ ನೋಡಬಹುದು.

Categories
ಉದ್ಯೋಗ ಸುದ್ದಿ ಬೆಂಗಳೂರು ಮಾಹಿತಿ

ಪಿಡಿಒ ಆಗ್ಬೇಕಾ?..ಹೊಸ ನೇಮಕಾತಿ ಶುರು!.. ಇಲ್ಲಿದೆ ವಿವರ..!

ಪಿಡಿಒ ಆಗ್ಬೇಕಾ?..ಹೊಸ ನೇಮಕಾತಿ ಶುರು!.. ಇಲ್ಲಿದೆ ವಿವರ..!
– ಪಿಡಿಒ ಹುದ್ದೆ ನೇಮಕಾತಿಗೆ ಶೀಘ್ರದಲ್ಲಿ ಅಧಿಸೂಚನೆ
– ಪಿಡಿಒ ಹುದ್ದೆ ನೇಮಕಾತಿಗೆ ಮುಂದಾದ ರಾಜ್ಯ ಸರ್ಕಾರ

NAMMUR EXPRESS NEWS
ಬೆಂಗಳೂರು: ಪಿಡಿಒ ಆಗ್ಬೇಕಾ?..ಹೊಸ ನೇಮಕಾತಿ ಶುರುವಾಗಲಿದ್ದು, ಪಿಡಿಒ ಹುದ್ದೆ ನೇಮಕಾತಿಗೆ ಶೀಘ್ರದಲ್ಲಿ ಅಧಿಸೂಚನೆ ಹೊರ ಬೀಳಲಿದೆ.
ಪಿಡಿಒ ಹುದ್ದೆ ನೇಮಕಾತಿಗೆ ಮುಂದಾದ ರಾಜ್ಯ ಸರ್ಕಾರ,  ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ ಇಲಾಖೆಯು (ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ-RDPR) ರಾಜ್ಯದ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಖಾಲಿ ಇರುವ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ), ಗ್ರಾಮ ಪಂಚಾಯತಿ ಕಾರ್ಯದರ್ಶಿ (ಗ್ರೇಡ್-1) ಮತ್ತು ಪಂಚಾಯತಿ ಕಾರ್ಯದರ್ಶಿ (ಗ್ರೇಡ್-II) ಮತ್ತು ದ್ವಿತೀಯ ದರ್ಜೆ ಲೆಕ್ಕ ಸಹಾಯಕರು ಹುದ್ದೆಗಳ ನೇಮಕಕ್ಕೆ ಮುಂದಾಗಿದ್ದು, ಸದ್ಯವೇ ನೇಮಕಾತಿ (PDO ನೇಮಕಾತಿ 2023) ಅಧಿಸೂಚನೆ ಹೊರಬೀಳಲಿದೆ.

ಪಿಡಿಒ ಮತ್ತು ಕಾರ್ಯದರ್ಶಿ ಹುದ್ದೆಗಳು ಖಾಲಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಅಭಿವೃದ್ಧಿಕೆಲಸವಾಗುತ್ತಿಲ್ಲ ಎಂಬ ದೂರಿರುವ ಸರ್ಕಾರವು ಆದಷ್ಟು ಬೇಗ ಈ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲು ಮುಂದಾಗಿದ್ದರೆ, ಯಾವ ಗ್ರಾಮ ಪಂಚಾಯಿತಿಗಳಲ್ಲಿ ಎಷ್ಟು ಹುದ್ದೆಗಳು ಖಾಲಿ ಇವೆ ಎಂಬ ಮಾಹಿತಿಯನ್ನು ಈಗ ಸಂಗ್ರಹಿಸಲಾಗುತ್ತಿದೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಪಂಚಾಯತ್ ರಾಜ್ ಆಯುಕ್ತಾಲಯದ ನಿರ್ದೇಶಕರು ಈ ಸಂಬಂಧ 15 ರಂದು ರಾಜ್ಯದ ಎಲ್ಲ ಜಿಲ್ಲಾಪಂಚಾಯತಿಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು (ಸಿಐಒ) ಪತ್ರ ಬರೆದಿದ್ದು ಖಾಲಿ ಹುದ್ದೆಗಳ ಮಾಹಿತಿ ತುರ್ತಾಗಿ ಅಂದರೆ ಜೂನ್ 17 ರಂದು ಸಂಜೆ 4 ಗಂಟೆಗೆ ಕಳುಹಿಸುವಂತೆ ಕೋರಿದ್ದಾರೆ. ಈ ಮಾಹಿತಿ ಬಂದಕೂಡಲೇ ಖಾಲಿ ಹುದ್ದೆಗಳ ಸಂಖ್ಯೆಯನ್ನು ನೋಡಿಕೊಂಡು ಇಲಾಖೆಯು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಿದೆ. ಸರ್ಕಾರ ಕೂಡಲೇ ಅನುಮತಿ ನೀಡುವ ಭರವಸೆ ನೀಡಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಎಷ್ಟು ಹುದ್ದೆಗಳಿಗೆ ನೇಮಕ ಮಾಡಬಹುದು?

ಈ ಹಿಂದಿನ ಬಿಜೆಪಿ ಸರ್ಕಾರವು 570 ಪಂಚಾಯತಿ ಅಭಿವೃದ್ಧಿಅಧಿಕಾರಿ (ಪಿಡಿಒ) ನೇಮಕಕ್ಕೆ ಮುಂದಾಗಿತ್ತು. ಕಳೆದ ಫೆಬ್ರುವರಿಯಲ್ಲಿನಡೆದ ವಿಧಾನಸಭಾ ಅಧಿವೇಶನದಲ್ಲಿ ಈ ಸಂಬಂಧ ಕೇಳಿದ ಪ್ರಶ್ನೆಗೆಉತ್ತರಿಸಿದ ಸರ್ಕಾರ ಈ ನೇಮಕಕ್ಕೆ ಆದಷ್ಟು ಬೇಗನೇ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿತ್ತು. ಆದರೆ ಈ ನೇಮಕ ಪ್ರಕ್ರಿಯೆ ಆರಂಭವಾಗಿಯೇ ಇಲ್ಲ.
ಕಳೆದ ವರ್ಷದ ಸರ್ಕಾರದ ವರದಿ ಪ್ರಕಾರವೇ ರಾಜ್ಯದಲ್ಲಿ 851 ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಹುದ್ದೆ 390 ಗ್ರಾಮ ಪಂಚಾಯತಿ ಕಾರ್ಯದರ್ಶಿ (ಗ್ರೇಡ್-1) ಹುದ್ದೆ ಮತ್ತು 697 ಗ್ರಾಮ ಪಂಚಾಯತಿ ಕಾರ್ಯದರ್ಶಿ (ಗ್ರೇಡ್-1) ಹುದ್ದೆಗಳು ಖಾಲಿ ಇವೆ. ಈ ಸಂಖ್ಯೆ ಇನ್ನಷ್ಟು ಹೆಚ್ಚಿರುವ ಸಾಧ್ಯತೆಗಳಿವೆ.

2016 ರಲ್ಲಿ 815 ಪಿಡಿಒ ಮತ್ತು 809 ಗ್ರಾಮ ಪಂಚಾಯತಿ ಕಾರ್ಯದರ್ಶಿಗಳ ಹುದ್ದೆಗೆ ನೇಮಕಗೊಂಡಿದ್ದು ಬಿಟ್ಟರೆ ಕಳೆದ ಆರು ವರ್ಷಗಳಿಂದ ಮತ್ತೆ ನೇಮಕಾತಿ ನಡೆದಿಲ್ಲ. ಹೀಗಾಗಿ ಖಾಲಿ ಇರುವ ಹುದ್ದೆಗಳ ಸಂಖ್ಯೆ ಹೆಚ್ಚಿದ್ದು, ಎಲ್ಲ ಹುದ್ದೆಗಳಿಗೆ ಒಮ್ಮೆ ನೇಮಕವಾಗುವುದು ಅನುಮಾನ ಎಂದು ಹೇಳಲಾಗುತ್ತಿದೆ. 2016ರಲ್ಲಿ ನಡೆದ ನೇಮಕ ಪ್ರಕ್ರಿಯೆಯಲ್ಲಿ 4,96,873 ಅಭ್ಯರ್ಥಿಗಳು ಭಾಗವಹಿಸಿದ್ದರು. 3,62,899 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.

ಯಾರಿಗೆಲ್ಲಾ ಅವಕಾಶ?

ಅಂಗೀಕೃತಗೊಂಡ ವಿಶ್ವವಿದ್ಯಾಲಯದಿಂದ ಪದವಿ ಅಥವಾ ತತ್ಸಮಾನ ಶಿಕ್ಷಣ ಪಡೆದಿರುವ ಅಭ್ಯರ್ಥಿಗಳು ಪಿಡಿಯೊ ಮತ್ತು ಗ್ರಾಮ ಪಂಚಾಯತಿ ಕಾರ್ಯದರ್ಶಿ (ಗ್ರೇಡ್-1) ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಗ್ರಾಮ ಪಂಚಾಯತಿ ಕಾರ್ಯದರ್ಶಿ (ಗ್ರೇಡ್-II) ಮತ್ತು ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ಹುದ್ದೆಗಳಿಗೆ ದ್ವಿತೀಯ ಪಿಯುಸಿ ಓದಿದ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಬಹುದು.
ಅಭ್ಯರ್ಥಿಗಳ ಕನಿಷ್ಠ ವಯೋಮಿತಿ 18 ವರ್ಷ ಮತ್ತು ಗರಿಷ್ಠ 35 ವರ್ಷ. ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಮತ್ತು ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ಮೂರು ವರ್ಷ ವಯೋಮಿತಿ ಸಡಿಲಿಕೆ ಇರಲಿದೆ

ವೇತನ ಎಷ್ಟು?

  • ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ (ಪಿಡಿಒ) ಹುದ್ದೆಯ ವೇತನ: 37,900-70,850
  • ಗ್ರಾಮ ಪಂಚಾಯತಿ ಕಾರ್ಯದರ್ಶಿ (ಗ್ರೇಡ್-1) ಹುದ್ದೆಯ ವೇತನ: 27,650-52,650
  • ಗ್ರಾಮ ಪಂಚಾಯತಿ ಕಾರ್ಯದರ್ಶಿ (ಗ್ರೇಡ್-1) ಹುದ್ದೆಯ ವೇತನ: 21,400-42,000
  • ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ಹುದ್ದೆಯ ವೇತನ ಶ್ರೇಣಿ: ರೂ. 21,400-42,000

ನೇಮಕ ಹೇಗೆ?

ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಭಾಗವಹಿಸಿದ ಶೇಕಡಾವಾರು ಅಂಕ ಆಧಾರದಲ್ಲಿ ಆಯ್ಕೆಮಾಡಿಕೊಳ್ಳುತ್ತಾರೆ. ಈ ಯಾವ ಹುದ್ದೆಗಳಿಗೆ ಈ ಹಿಂದೆ ಪಿಡಿಯೋ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುವಾಗ ಸ್ಪರ್ಧಾತ್ಮಕ ಪರೀಕ್ಷೆಯು ಎರಡು ಪ್ರಶ್ನೆ ಪತ್ರಿಕೆಗಳನ್ನು ಒಳಗೊಂಡಿತ್ತು. ಪ್ರಶ್ನೆ ಪತ್ರಿಕೆ-1 ಸಾಮಾನ್ಯ ಜ್ಞಾನಕ್ಕೆ ಸಂಬಂಧಿಸಿದ್ದಾಗಿರುತ್ತಿತ್ತು. ಇದರಲ್ಲಿ ಒಟ್ಟು ನೂರು ಪ್ರಶ್ನೆಗಳಿರಲಿದ್ದು, 200 ಅಂಕಗಳಿಗೆ ಈ ಪರೀಕ್ಷೆ ನಡೆಯುತ್ತಿತ್ತು. ಪತ್ರಿಕೆ-2 ಸಹ ನೂರು ಪ್ರಶ್ನೆಗಳಿರಲಿದ್ದು, 200 ಅಂಕಗಳಿಗೆ ನಡೆಯುತ್ತಿತ್ತು. ಆದರೆ ಈ ಬಾರಿ ಬದಲಾವಣೆ ಮಾಡುವ ಸಾಧ್ಯತೆಗಳಿವೆ.

2016ರಲ್ಲಿ ನೇಮಕವಾದ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಇ) ನಡೆಸಿತು. ಆದರೆ ಈ ಬಾರಿ ಲೋಕಸೇವಾ ಆಯೋಗಕ್ಕೆ (ಕೆಪಿಎಸ್‌ಸಿ) ಈ ನೇಮಕವನ್ನು ಕರ್ನಾಟಕ ವಹಿಸುವ ಸಾಧ್ಯತೆಗಳಿವೆ. ಹೀಗೆ ಮಾಡಿದಲ್ಲಿ ಆಯೋಗವು ಗ್ರೂಪ್ “ಸಿ” ಹುದ್ದೆಗಳ ನೇಮಕಕ್ಕೆ ನಡೆಸುವ ರೀತಿಯಲ್ಲಿಯೇ ಈ ಹುದ್ದೆಗಳಿಗೆ ಪರೀಕ್ಷೆ ನಡೆಸಲಾಗುವುದು. ಗ್ರೂಪ್ ಸಿ ಹುದ್ದೆಗಳಿಗೆ 200 ಅಂಕಗಳಿಗೆ ಬದಲಾಗಿ ನೂರು ಅಂಕಗಳಿಗೆ ಪರೀಕ್ಷೆ ನಡೆಯುತ್ತಿದೆ. ನೇಮಕ ಪ್ರಕ್ರಿಯೆಯಲ್ಲಿ 4,96,873 ಅಭ್ಯರ್ಥಿಗಳು ಭಾಗವಹಿಸಿದ್ದರು. 3,62,899 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.

Categories
ಮಾಹಿತಿ ರಾಜ್ಯ

ಆಧಾರ್‌ ಉಚಿತ ಅಪ್ಡೇಟ್‌: 3 ತಿಂಗಳು ವಿಸ್ತರಣೆ

  • ಜೂನ್ 14 ಉಚಿತ ಅಪ್ಡೇಟ್ ಮಾಡಲು ಕೊನೆ ದಿನ ಆಗಿತ್ತು
  • ಆಧಾರ್ ಕಾರ್ಡ್ ಅಪ್‌ಡೇಟ್‌ ಮಾಡುವುದು ಹೇಗೆ?

ನವದೆಹಲಿ: ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಉಚಿತ ಆಧಾರ್ ನವೀಕರಣವನ್ನು ಜೂನ್ 14 ರಿಂದ ಸೆಪ್ಟೆಂಬರ್ 14, 2023 ರವರೆಗೆ ವಿಸ್ತರಿಸಿದೆ. ಅದರಂತೆ ಆಧಾರ್ ಆನ್‌ಲೈನ್ ನವೀಕರಣವು ಮುಂದಿನ 3 ತಿಂಗಳವರೆಗೆ ವಿಸ್ತರಣೆಯನ್ನು ಹೊಂದಿದೆ. ಮಾರ್ಚ್‌ 15, 2023 ರಿಂದ ನಿಮ್ಮ ಗುರುತಿನ ಪುರಾವೆ ಮತ್ತು ವಿಳಾಸದ ಪುರಾವೆಗಳನ್ನು ಆನ್‌ಲೈನ್‌ನಲ್ಲಿ ಉಚಿತವಾಗಿ ಅಪ್‌ಲೋಡ್ ಮಾಡಬಹುದು ಮತ್ತು ಅಪ್‌ಲೋಡ್ ಮಾಡಬಹುದು. ಈ ಮೊದಲು ದಿನಾಂಕ ಜೂನ್ 14, 2023 ಆಗಿತ್ತು. ಇದೀಗ ದೇಶದ ನಾಗರಿಕರಿಗಾಗಿ ಅವಧಿ ವಿಸ್ತರಣೆ ಮಾಡಲಾಗಿದೆ.
ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ವೆಬ್‌ಸೈಟ್ ಪ್ರಕಾರ, “ಜನಸಂಖ್ಯಾ ಮಾಹಿತಿಯ ನಿಖರತೆಗಾಗಿ ದಯವಿಟ್ಟು ಆಧಾರ್ ಅನ್ನು ನವೀಕರಿಸಿ. ಅದನ್ನು ನವೀಕರಿಸಲು, ನಿಮ್ಮ ಗುರುತಿನ ಪುರಾವೆ ಮತ್ತು ವಿಳಾಸದ ದಾಖಲೆಗಳ ಪುರಾವೆಗಳನ್ನು ಅಪ್‌ಲೋಡ್ ಮಾಡಬೇಕು. ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಪ್ರಕಾರ, ಭಾರತೀಯರನ್ನು ಆನ್‌ಲೈನ್‌ನಲ್ಲಿ ಮಾಡಲು, ಉಚಿತ ಆಧಾರ್ ಕಾರ್ಡ್ ನವೀಕರಣ ದಿನಾಂಕವನ್ನು ಇನ್ನೂ ಮೂರು ತಿಂಗಳವರೆಗೆ ವಿಸ್ತರಿಸಲಾಗಿದೆ.
ಆದರೆ, ಆಧಾರ್ ಕೇಂದ್ರದಿಂದ ಆಫ್‌ಲೈನ್ ನವೀಕರಣಕ್ಕೆ 50 ರೂಪಾಯಿ ವೆಚ್ಚವಾಗುತ್ತದೆ. ಗಮನಾರ್ಹವಾಗಿ, ಕೆಲವು ಸಮಯದ ಹಿಂದೆ ಯುಐಡಿಎಐ ಒಬ್ಬರ ಆಧಾರ್ ಕಾರ್ಡ್ 10 ವರ್ಷಕ್ಕಿಂತ ಹಳೆಯದಾಗಿದ್ದರೆ ಮತ್ತು ಒಮ್ಮೆಯೂ ನವೀಕರಿಸದಿದ್ದರೆ, ಅದನ್ನು ಶೀಘ್ರದಲ್ಲೇ ಹೊಸ ಬಯೋಮೆಟ್ರಿಕ್ ಮಾಹಿತಿಯೊಂದಿಗೆ ನವೀಕರಿಸಬೇಕು ಎಂದು ಘೋಷಿಸಿತು. ಆದರೆ, ಇದು ಕಡ್ಡಾಯವಾಗಿಲ್ಲ ಎಂದು ಹೇಳಿದೆ.

Categories
ಮಾಹಿತಿ

ರಕ್ತದಾನ ಮಾಡಿ ಜೀವ ಉಳಿಸೋಣ – ಯಾರು ರಕ್ತದಾನ ಮಾಡಬಹುದು ?

ರಕ್ತದಾನ ಮಾಡಿ ಜೀವ ಉಳಿಸೋಣ!
– ಇಂದು ವಿಶ್ವ ರಕ್ತದಾನಿಗಳ ದಿನ: ರಕ್ತದಾನಿಗಳಿಗೆ ಸಲಾಂ
– ಯಾರು ರಕ್ತದಾನ ಮಾಡಬಹುದು?

NAMMUR EXPRESS NEWS
ದಾನಗಳಲ್ಲೇ ಶ್ರೇಷ್ಠ ದಾನ ‘ರಕ್ತದಾನ’!. ಒಂದು ಯೂನಿಟ್ ರಕ್ತದಿಂದ ನಾಲ್ವರ ಜೀವ ಉಳಿಸಬಹುದಾಗಿದೆ. ಇಂತಹ ಮಹತ್ವದ ಕಾರ್ಯದ ಕುರಿತು ಜನರಲ್ಲಿ ಜಾಗೃತಿ ಮತ್ತು ಅರಿವು ಮೂಡಿಸಲು ಪ್ರತಿ ವರ್ಷ ಜೂ. 14 ರಂದು ವಿಶ್ವ ರಕ್ತ ದಾನಿಗಳ ದಿನ ಆಚರಿಸಲಾಗುತ್ತಿದೆ. ಈ ದಿನದಂದು ಸಮಸ್ತ ರಕ್ತದಾನಿಗಳಿಗೆ ನಮನಗಳು.
ರಕ್ತದಾನಕ್ಕೆ ಕೈ ಜೋಡಿಸಿ ಜೀವ ಉಳಿಸೋಣ’ ಎಂಬ ಘೋಷವಾಕ್ಯದೊಂದಿಗೆ ಸರ್ಕಾರ, ರಕ್ತನಿಧಿಗಳು ಹಾಗೂ ಸಂಘ-ಸಂಸ್ಥೆಗಳು ರಾಜ್ಯಾದ್ಯಂತ ರಕ್ತದಾನ ಶಿಬಿರಗಳನ್ನು ಆಯೋಜಿಸಿವೆ.
ಜತೆಗೆ ರಕ್ತದಾನಿಗಳನ್ನು ಪ್ರೋತ್ಸಾಹಿಸಲು ಅತಿ ಹೆಚ್ಚು ಬಾರಿ ರಕ್ತದಾನ ಮಾಡಿರುವವರನ್ನು ಗುರುತಿಸಿ ಗೌರವಿಸುವ ಕಾರ್ಯವೂ ನಡೆಯುತ್ತಿದೆ.

ಇಂಟರ್‌ನ್ಯಾಷನಲ್ ಫೆಡರೇಷನ್ ಆಫ್ ರೆಡ್ ಕ್ರಾಸ್ ಮತ್ತು ರೆಡ್ ಕ್ರೆಸೆಂಟ್ ಸೊಸೈಟಿ ಇಂಟರ್‌ನ್ಯಾಷನಲ್ ಫೆರಡೇಷನ್ ಆಫ್ ಬ್ಲಡ್ ಡೋನರ್ ಆರ್ಗನೈಸೇಷನ್ ಮತ್ತು ಇಂಟರ್‌ನ್ಯಾಷನಲ್ ಸೊಸೈಟಿ ಆಫ್ ಬ್ಲಡ್ ಟ್ರಾನ್ಸ್ಪ್ಯೂಷನ್ ಸಹಯೋಗದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು ವಿಶ್ವ ರಕ್ತದಾನಿಗಳ ದಿನವನ್ನು ಘೋಷಿಸಿದೆ. ರಕ್ತದಾನಿಗಳನ್ನು ಪ್ರೇರೇಪಿಸಲು ಪ್ರತಿ ವರ್ಷ ಜ. 12ರಂದು ಯುವ ರಕ್ತದಾನಿಗಳ ದಿನ, ಜೂ. 14ರಂದು ವಿಶ್ವ ರಕ್ತದಾನಿಗಳ ದಿನ ಹಾಗೂ ಭಾರತದಲ್ಲಿ ಅ. 1ರಂದು ರಾಷ್ಟ್ರೀಯ ರಕ್ತದಾನ ದಿನ ಆಚರಿಸಲಾಗುತ್ತದೆ.9.75 ಲಕ್ಷ ಯೂನಿಟ್ ರಕ್ತ ಸಂಗ್ರಹ: ರಾಜ್ಯದಲ್ಲಿ ಅಂದಾಜು 8.08 ಕೋಟಿ ಜನಸಂಖ್ಯೆ ಇದ್ದು, ಇದರಲ್ಲಿ ಶೇ.1ರಷ್ಟು ಜನರಿಗೆ ರಕ್ತದ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಪ್ರಸಕ್ತ ಸಾಲಿಗೆ ನಿಗದಿತ ಗುರಿ 8,08,529ಗಿಂತ ಹೆಚ್ಚುವರಿಯಾಗಿ 9,75,785 ಲಕ್ಷ ಯೂನಿಟ್ ರಕ್ತ ಸಂಗ್ರಹಿಸುವ ಮೂಲಕ ಶೇ. 121 ಪ್ರಗತಿ ಸಾಧಿಸಿದೆ. ರಾಜ್ಯದಲ್ಲಿ 248 ರಕ್ತ ನಿಧಿಗಳಿದ್ದು, ಜನರು ತಮ್ಮ ಹತ್ತಿರದ ರಕ್ತ ನಿಧಿಗಳಿಗೆ ಸ್ವಯಂ ಪ್ರೇರಿತರಾಗಿ ತೆರಳಿ ರಕ್ತದಾನ ಮಾಡಬಹುದಾಗಿದೆ.

ಯಾರು ರಕ್ತದಾನ ಮಾಡಬಹುದು?

18 ರಿಂದ 65 ವರ್ಷದೊಳಗಿನ ಪ್ರತಿಯೊಬ್ಬ ಆರೋಗ್ಯವಂತ ವ್ಯಕ್ತಿ ಕನಿಷ್ಠ 45 ಕೆ.ಜಿ. ದೇಹದ ತೂಕ ಇರುವವರು 350 ಎಂಎಲ್ ಹಾಗೂ 55 ಕೆ.ಜಿ.ಗಿಂತ ಅಧಿಕ ತೂಕ ಇರುವವರು 450 ಎಂಎಲ್ ರಕ್ತದಾನ ಮಾಡಬಹುದಾಗಿದೆ. ದಾನಿಗಳ ಹಿಮೋಗ್ಲೋಬಿನ್ (ಎಚ್ ಬಿ) ಪ್ರಮಾಣ ಕನಿಷ್ಠ 12.5 ಇರಬೇಕು. ಒಂದು ಯೂನಿಟ್ ರಕ್ತದಿಂದ ನಾಲ್ಕು ಜೀವಗಳನ್ನು ಉಳಿಸಬಹುದಾಗಿದೆ.

ಯಾರು ರಕ್ತದಾನ ಮಾಡಬಾರದು?

ಅನಾರೋಗ್ಯ ಹೊಂದಿರುವವರು, ನಿಯಮಿತ ಹಾಗೂ ನಿರಂತರ ಔಷಧ ಸೇವಿಸುವವರು, ಎಚ್‌ಐವಿ/ಏಡ್ಸ್, ಕ್ಯಾನ್ಸರ್ ರೋಗಿಗಳು, ಹೃದ್ರೋಗಿಗಳು, ಲಿವರ್ ಮತ್ತು ಕಿಡ್ನಿ ಸಮಸ್ಯೆ ಹೊಂದಿರುವವರು, ಗರ್ಭಿಣಿಯರು, ಹೆಪಟೈಟಿಸ್ ಬಿ ಸೋಂಕಿತರು, ಸಾಂಕ್ರಾಮಿಕ ರೋಗಿಗಳು, ಮಾದಕ ವ್ಯಸನಿಗಳು, ಕಡಿಮೆ ತೂಕ ಹೊಂದಿರುವವರು ಹಾಗೂ ಹಿಮೋಗ್ಲೋಬಿನ್ ಕೊರತೆ ಇರುವವರು ರಕ್ತದಾನ ಮಾಡುವಂತಿಲ್ಲ.

ರಕ್ತದಾನದ ಉಪಯೋಗಗಳು

ರಕ್ತದಾನ ಮಾಡುವುದರಿಂದ ದಾನಿಯ ದೇಹದಲ್ಲಿ ಹೊಸ ರಕ್ತ ಉತ್ಪತ್ತಿ ಆಗುತ್ತದೆ. ಇದರಿಂದ ಉತ್ತಮ ಆರೋಗ್ಯ ಹೊಂದಬಹುದಾಗಿದೆ. ದಾನಿಯ ಕಾರ್ಯತತ್ಪರತೆ ಹಾಗೂ ಜ್ಞಾನಪಶಕ್ತಿ ಹೆಚ್ಚುತ್ತದೆ. ದೇಹದಲ್ಲಿ ಕೊಬ್ಬಿನ ಅಂಶ ಕಡಿಮೆ ಆಗಿ ಹೃದಯಘಾತ ಆಗುವುದನ್ನು ಶೇ. 80 ಕಡಿಮೆ ಮಾಡುತ್ತದೆ. ರಕ್ತದ ಒತ್ತಡ, ಮಧುಮೇಹದಂತಹ ರೋಗಗಳು ತಡೆಯಲು ರಕ್ತದಾನ ಸಹಕಾರಿಯಾಗಿದೆ. ಆದರೆ, ಒಮ್ಮೆ ರಕ್ತದಾನ ಮಾಡಿದರೆ ಮುಂದಿನ ಮೂರು ತಿಂಗಳ ಕಾಲ ದಾನ ಮಾಡಬಾರದು ಎನ್ನುತ್ತಾರೆ ವೈದ್ಯರು.
‘ರಕ್ತವನ್ನು ಕೃತಕವಾಗಿ ಸೃಷ್ಟಿಸಲು ಸಾಧ್ಯವಾಗಿಲ್ಲ. ಹಾಗಾಗಿ 18-65 ವರ್ಷದೊಳಗಿನ ಪ್ರತಿಯೊಬ್ಬ ಆರೋಗ್ಯವಂತ ವ್ಯಕ್ತಿಯೂ ತಪ್ಪದೇ ರಕ್ತದಾನ ಮಾಡಬೇಕು. ಯುವ ಜನರು ತಮ್ಮ 18 ವರ್ಷ ಹುಟ್ಟುಹಬ್ಬವನ್ನು ಸ್ಮರಣೀಯವಾಗಿಸಿಕೊಳ್ಳುವ ನಿಟ್ಟಿನಲ್ಲಿ ಆ ದಿನದಂದು ಹಾಗೂ ನಂತರದಲ್ಲಿ ಸ್ವಯಂಪ್ರೇರಿತವಾಗಿ ರಕ್ತದಾನ ಮಾಡುವ ಮೂಲಕ ಇತರರ ಜೀವದಾನಕ್ಕೆ ನೆರವಾಗಬೇಕು.

Categories
Uncategorized ಮಾಹಿತಿ ರಾಜ್ಯ

ಜನರೇ ಇದು ಪ್ರಮುಖ ಸುದ್ದಿ…ಆಧಾರ್ ಕಾರ್ಡ್ ಅಪ್ಡೇಟ್ ಗೆ ಅವಕಾಶ!

Categories
ಮಾಹಿತಿ

2,000 ರೂ. ನೋಟು ಬದಲಾವಣೆ ಏನು ಎತ್ತ!?

  • ಒಮ್ಮೆಗೆ 10 ನೋಟು ಬದಲಾಯಿಸಿಕೊಳ್ಳಬಹುದು
  • ಬದಲಾಯಿಸುವುದು ಹೇಗೆ?.. ಇಲ್ಲಿದೆ ಮಾಹಿತಿ

NAMMUR EXPRESS NEWS
ಹೊಸದಿಲ್ಲಿ:
2,000 ರೂ. ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂದೆಗೆದುಕೊಂಡ ಬಳಿಕ ಈ ಕುರಿತು ಹಲವು ಗೊಂದಲಕಾರಿ ಮಾಹಿತಿಗಳು ಹರಿದಾಡುತ್ತಿವೆ. ಇದು 2016ರ ನೋಟ್ ಬ್ಯಾನ್ ಮಾದರಿಯ ಕ್ರಮ ಎಂದು ಕೆಲವರು ತಪ್ಪಾಗಿ ಭಾವಿಸಿದ್ದಾರೆ. ನೋಟ್ ಬ್ಯಾನ್‌ಗೂ ಚಲಾವಣೆಯಿಂದ ಹಿಂದೆಗೆದುಕೊಳ್ಳುವುದಕ್ಕೂ ವ್ಯತ್ಯಾಸವಿದೆ. ಅಲ್ಲದೆ ಸದ್ಯ 2,000 ರೂ. ನೋಟು ಚಲಾವಣೆ ಬಹಳ ಕಡಿಮೆಯಾಗಿರುವುದರಿಂದ ಜನರಿಗೆ ಈ ನೋಟುಗಳನ್ನು ಹಿಂದೆಗೆದುಕೊಳ್ಳುವುದರಿಂದ ಹೆಚ್ಚು ಸಮಸ್ಯೆಯಾಗುವುದಿಲ್ಲ. 2,000 ನೋಟುಗಳನ್ನು ಬ್ಯಾಂಕ್‌ಗಳಲ್ಲಿ ಬದಲಾಯಿಸಿಕೊಳ್ಳಲು ಮುಂಬರುವ ಸೆ.30ರ ತನಕ ಸಮಯ ಇದೆ ಎಂದು ಆರ್‌ಬಿಐ ಪ್ರಕಟಣೆ ತಿಳಿಸಿದೆ.

ಬದಲಾಯಿಸುವುದು ಹೇಗೆ?

ಸಾರ್ವಜನಿಕರು ತಮ್ಮ ಬಳಿ 2,000 ರೂ. ಮುಖಬೆಲೆಯ ನೋಟುಗಳಿದ್ದರೆ ಅದನ್ನು ಬ್ಯಾಂಕ್ ಖಾತೆಗೆ ಜಮೆ ಮಾಡಬಹುದು. ಯಾವುದೇ ಬ್ಯಾಂಕ್ ಬ್ಯಾಂಚ್‌ಗೆ ಹೋಗಿ ಹಣ ಡಿಪಾಸಿಟ್ ಮಾಡಲು ಅವಕಾಶ ಇರುತ್ತದೆ. 2016ರ ನೋಟ್ ಬ್ಯಾನ್ ಸಂದರ್ಭದಲ್ಲಿ ಇದ್ದ ನಿಯಮಗಳನ್ನು ಈಗ ಮಾಡಲಾಗುತ್ತಿಲ್ಲ. 2,000 ರೂ. ನೋಟುಗಳನ್ನು ಡೆಪಾಸಿಟ್ ಮಾಡಲು ಯಾವುದೇ ದಾಖಲೆ ಕೊಡಬೇಕಿಲ್ಲ. ಈ ನೋಟನ್ನು ಅಮಾನ್ಯ ಮಾಡಲಾಗಿಲ್ಲ. ಚಲಾವಣೆಯಿಂದ ಹಿಂಪಡೆಯಲಾಗಿದೆ ಅಷ್ಟೇ. ಈ ನೋಟುಗಳ ವಿನಿಮಯಕ್ಕೆ ಸರ್ಕಾರ ಕೊಟ್ಟಿರುವ ಕಾಲಾವಕಾಶ ಮುಗಿದ ಬಳಿಕ ಈ ನೋಟು ಅಸಿಂಧುಗೊಳ್ಳಬಹುದಾ ಎಂಬ ಮಾಹಿತಿ ತಿಳಿದಿಲ್ಲ.

ಒಮ್ಮೆಗೆ 20,000 ಡಿಪಾಸಿಟ್

ಸಾರ್ವಜನಿಕರು ಒಮ್ಮೆಗೆ 20,000 ರೂ. ಮೊತ್ತದ ನೋಟುಗಳನ್ನು ವಿನಿಮಯ ಮಾಡಿಕೊಳ್ಳಲು ಅವಕಾಶ ಇದೆ. ಅಂದರೆ 2,000 ರೂ. ಮುಖಬೆಲೆಯ 10 ನೋಟುಗಳನ್ನು ಮಾತ್ರ ಎಕ್ಸ್‌ಚೇಂಜ್ ಮಾಡಬಹುದು.
ಬ್ಯಾಂಕ್ ಖಾತೆ ಹೊಂದಿಲ್ಲದಿದ್ದರೂ ಕೂಡ ಯಾವುದೇ ಬ್ಯಾಂಕ್ ಕಚೇರಿಗೆ ಹೋಗಿ ಏಕಕಾಲದಲ್ಲಿ 2,000 ರೂ. ಮುಖಬೆಲೆಯ 10 ನೋಟುಗಳನ್ನು ವಿನಿಯಮ ಮಾಡಿಕೊಳ್ಳಬಹುದು.

ಹಿಂಪಡೆಯಲು ಕಾರಣ ಏನು?

ಈಗ ಚಲಾವಣೆಯಲ್ಲಿರುವ 2,000 ರೂ. ಮುಖಬೆಲೆಯ ನೋಟುಗಳಲ್ಲಿ ಶೇ. 89ರಷ್ಟು ನೋಟುಗಳನ್ನು 2017ರ ಮಾರ್ಚ್‌ಗೆ ಮುಂಚೆ ಮುದ್ರಿಸಿ ಬಿಡುಗಡೆ ಮಾಲಾಗಿದೆ. ಇವುಗಳ ಕಾಲಾವಧಿ 4-5 ವರ್ಷ ಮಾತ್ರ. ಹೀಗಾಗಿ, ಈ ನೋಟುಗಳನ್ನು ಹಿಂಪಡೆಯಲಾಗುತ್ತಿದೆ. 2,000 ರೂ ಮುಖಬೆಲೆಯ ನೋಟುಗಳು ಹೆಚ್ಚು ಚಲಾವಣೆಯಲ್ಲಿ ಇಲ್ಲ. ಜನರ ಹಣ ವಹಿವಾಟಿನ ಅಗತ್ಯಕ್ಕೆ ಬೇರೆ ಕರೆನ್ಸಿಗಳು ಸಾಕಷ್ಟು ಇದೆ. ಎಟಿಎಂಗಳಲ್ಲಿ 2,000 ರೂ. ಕರೆನ್ಸಿ ನೋಟು ಸಿಗುವುದಿಲ್ಲ.

ಜನರ ಬಳಿಯೂ 2000 ನೋಟು ಇಲ್ಲ!

2018ರ ಮಾರ್ಚ್ 31ರಲ್ಲಿ 2,000 ರೂ ಮುಖಬೆಲೆಯ ನೋಟುಗಳ ಒಟ್ಟು ಮೌಲ್ಯ 6.73 ಲಕ್ಷ ಕೋಟಿ ರೂ ಇತ್ತು. ಎಲ್ಲಾ ಕರೆನ್ಸಿ ನೋಟುಗಳ ಒಟ್ಟು ಮೊತ್ತದ ಶೇ. 37.3 ರಷ್ಟು ನೋಟುಗಳು 2,000 ರೂ ಮುಖಬೆಲೆಯದ್ದಾಗಿದ್ದವು. ಈ ಸಂಖ್ಯೆಯು 2023ಮಾರ್ಚ್ 31ಕ್ಕೆ ಶೇ.10.8ಕ್ಕೆ ಬಂದಿಳಿದಿದೆ. ಜನರು ಕೂಡ 2,000 ರೂ ನೋಟಿನ ಚಲಾವಣೆಯನ್ನೂ ತೀರಾ ಕಡಿಮೆ ಮಾಡಿದ್ದಾರೆ. 500 ರೂ ಮುಖಬೆಲೆಯ ನೋಟುಗಳಿಗೆ ಹೆಚ್ಚು ಬೇಡಿಕೆ ಇದೆ. ಈಗ ಮೊಬೈಲ್‌ನಲ್ಲಿ ಪೇಮೆಂಟ್ ಆಪ್ ಗಳು ಮೂಲಕ ಸುಲಭವಾಗಿ ವಹಿವಾಗಿ ವಹಿವಾಟು ನಡೆಯುತ್ತಿದೆ. ಆನ್‌ಲೈನ್ ಕರೆನ್ಸಿ ಬಳಕೆ ದಾಖಲೆ ಪ್ರಮಾಣದಲ್ಲಿ ಹೆಚ್ಚಿರುವುದರಿಂದ ಯಾರಿಗೂ ನಗದು ಒಯ್ಯುವ ಅಗತ್ಯ ಕಾಣಿಸುವುದಿಲ್ಲ.

Categories
ಬೆಂಗಳೂರು ಮಾಹಿತಿ

80 ವರ್ಷ ಮೇಲ್ಪಟ್ಟವರಿಗೆ, ವಿಶೇಷ ಚೇತನರಿಗೆ ಮತದಾನ

  • ವಿಧಾನ ಸಭಾ ಮತದಾನ ಶುರುವಾಯ್ತು!
  • 80 ವರ್ಷ ಮೇಲ್ಪಟ್ಟವರಿಗೆ, ವಿಶೇಷ ಚೇತನರಿಗೆ ಮತದಾನ
  • ಮೇ.10 ರಂದು ಕಾರ್ಮಿಕರಿಗೆ ವೇತನ ಸಹಿತ ರಜೆ
  • ಮೇ.2ರಿಂದ 4ರವರೆಗೆ ಸರ್ಕಾರಿ ನೌಕರರ ಅಂಚೆ ಮತದಾನ

NAMMUR EXPRESS NEWS
ಬೆಂಗಳೂರು : ಕರ್ನಾಟಕ ವಿಧಾನಸಭಾ ಚುನಾವಣೆಗೆ ಏಪ್ರಿಲ್ 29ರ ಶನಿವಾರದಿಂದ ಮತದಾನ ಆರಂಭಗೊಳ್ಳಲಿದೆ.
ಹೌದು.80 ವರ್ಷ ಮೇಲ್ಪಟ್ಟವರಿಗೆ, ವಿಶೇಷ ಚೇತನರಿಗೆ ಮನೆಯಿಂದಲೇ ಮತದಾನಕ್ಕೆ ಅವಕಾಶ ನೀಡಲಾಗಿದೆ. ಹೀಗಾಗಿ ಬ್ಯಾಲೆಟ್ ಪೇಪರ್ ವೋಟಿಂಗ್ ಪ್ರಕ್ರಿಯೆ ಆರಂಭಗೊಳ್ಳಲಿದೆ.
ಈಗಾಗಲೇ ಈ ಬಗ್ಗೆ ಚುನಾವಣಾ ಆಯೋಗದಿಂದ ಮಾಹಿತಿ ಬಿಡುಗಡೆ ಮಾಡಲಾಗಿದೆ. ಏಪ್ರಿಲ್ 29ರಿಂದ ಮೇ.6ರವರೆಗೆ 80 ವರ್ಷ ಮೇಲ್ಪಟ್ಟವರಿಗೆ, ಅಂಗವಿಕಲರು ಹಾಗೂ ವಿಕಲಚೇತನರಿಗೆ ಚುನಾವಣಾ ಸಿಬ್ಬಂದಿಗಳು ಬ್ಯಾಲೆಟ್ ಪೇಪರ್ ನೀಡುವ ಮೂಲಕ ಮತದಾನ ಪ್ರಕ್ರಿಯೆಯನ್ನು ನಡೆಸಲಿದ್ದಾರೆ ಎಂದಿದೆ.
ಅಂದಹಾಗೇ ರಾಜ್ಯದಲ್ಲಿ 12.15 ಲಕ್ಷದಷ್ಟು 80 ವರ್ಷ ಮೇಲ್ಪಟ್ಟವರಿದ್ದಾರೆ. ಅವರಿಗೆಲ್ಲ ಇಂದಿನಿಂದ ಮನೆ ಮನೆಗೆ ತೆರಳಿ ಚುನಾವಣಾ ಸಿಬ್ಬಂದಿಗಳು ಬ್ಯಾಲೆಟ್ ಪೇಪರ್ ನೀಡಿ, ಮತದಾನ ಪ್ರಕ್ರಿಯೆಯನ್ನು ನಡೆಸಲಿದ್ದಾರೆ.
ಬೆಂಗಳೂರಿನಲ್ಲಿ 80 ವರ್ಷ ಮೇಲ್ಪಟ್ಟವರ ಸಂಖ್ಯೆ 2 ಲಕ್ಷಕ್ಕೂ ಹೆಚ್ಚು ಮಂದಿ ಇದ್ದಾರೆ. ಇವರಲ್ಲಿ 9,152 ಮಂದಿ ಮತದಾರರು ಮನೆಯಿಂದಲೇ ಬ್ಯಾಲೆಟ್ ಪೇಪರ್ ವೋಟಿಂಗ್ ಮಾಡಲಿದ್ದಾರೆ.

ಬ್ಯಾಲೆಟ್ ಪೇಪರ್ ವೋಟಿಂಗ್ ಹೇಗೆ ನಡೆಯಲಿದೆ?

ಆರಂಭಗೊಳ್ಳುತ್ತಿರುವಂತ ಬ್ಯಾಲೆಟ್ ಪೇಪರ್ ವೋಟಿಂಗ್ ಅಂದ್ರೆ ಏನು ಅನ್ನೋದು ಅನೇಕರಿಗೆ ಕುತೂಹಲವಾಗಿದೆ. ಇದೊಂದು ಗೌಪ್ಯ ಮತದಾನದ ವ್ಯವಸ್ಥೆಯಾಗಿದೆ. ಸ್ಥಳೀಯ ಪೊಲೀಸರು ಹಾಗೂ ಚುನಾವಣಾ ಸಿಬ್ಬಂದಿಗಳ ಸಮ್ಮುಖದಲ್ಲಿ ಹಿರಿಯ ನಾಗರೀಕರು, ಅಂಗವಿಕಲರಿಗೆ ಬ್ಯಾಲೆಟ್ ಪೇಪರ್ ನಲ್ಲಿ ಮತ ಚಲಾಯಿಸಲು ನೀಡಲಾಗುತ್ತದೆ.
ಚುನಾವಣಾ ಸಿಬ್ಬಂದಿ ನೀಡುವಂತ ಬ್ಯಾಲೆಟ್ ಪೇಪರ್ ನಲ್ಲಿ 80 ವರ್ಷ ಮೇಲ್ಪಟ್ಟವರು ಹಾಗೂ ವಿಶೇಷ ಚೇತನರು ತಮ್ಮ ಮತವನ್ನು ಗೌಪ್ಯವಾಗಿ ಚಲಾಯಿಸಿ, ಮತಪೆಟ್ಟಿಗೆಯಲ್ಲಿ ಹಾಕಲಿದ್ದಾರೆ. ಈ ಮತಪೆಟ್ಟಿಗೆಯನ್ನು ಮತದಾನದ ನಂತ್ರ ಸ್ಟ್ರಾಂಗ್ ರೂಮ್ ನಲ್ಲಿ ಇರಿಸಲಾಗುತ್ತದೆ. ಮೇ.13ರ ಮತಏಣಿಕೆಯಂದು, ಈ ಮತಗಳನ್ನು ಏಣಿಕೆ ಮಾಡಲಾಗುತ್ತದೆ.

ಮೇ.10 ರಂದು ಕಾರ್ಮಿಕರಿಗೆ ವೇತನ ಸಹಿತ ರಜೆ

ಭಾರತ ಚುನಾವಣಾ ಆಯೋಗವು ಮೇ.10 ಬುಧವಾರದಂದು ಕರ್ನಾಟಕ ವಿಧಾನ ಸಭೆ ಸಾರ್ವತ್ರಿಕ ಚುನಾವಣೆಯ ಮತದಾನಕ್ಕೆ ನಿಗಧಿಪಡಿಸಿದೆ. ಸದರಿ ದಿನದಂದು ರಾಜ್ಯಾದ್ಯಂತ ಎಲ್ಲಾ ಕಾರ್ಖಾನೆಗಳು, ಅಂಗಡಿಗಳು, ವಾಣಿಜ್ಯ ಸಂಸ್ಥೆಗಳು ಹಾಗೂ ಇತರೆ ಸಂಸ್ಥೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ 1951ರ ಪ್ರಜಾ ಪ್ರತಿನಿಧಿ ಕಾಯ್ದೆ, ಸೆಕ್ಷನ್ 135 (ಬಿ) ರಡಿ ಹಾಗೂ ಕೈಗಾರಿಕಾ ಸಂಸ್ಥೆಗಳ (ರಾಷ್ಟ್ರೀಯ ಮತ್ತು ಹಬ್ಬದ ರಜೆಗಳು) ಕಾಯ್ದೆ-1963 ಕಲಂ 3 (ಎ)ರನ್ವಯ ಅರ್ಹ ಮತದಾರರಿಗೆ ವೇತನ ಸಹಿತ ರಜೆ ಘೋಷಿಸಿ ಸಂವಿಧಾನಾತ್ಮಕ ಹಕ್ಕಾದ ಮತವನ್ನು ಚಲಾಯಿಸುವುದಕ್ಕಾಗಿ ಎಲ್ಲಾ ಮಾಲೀಕರು, ನಿಯೋಜಕರು ಅನುವು ಮಾಡಿ ಕೊಡಬೇಕಾಗುತ್ತದೆ.
ಆದ್ದರಿಂದ ಚುನಾವಣೆ ನಡೆಯುವ ಕ್ಷೇತ್ರಗಳ ವ್ಯಾಪ್ತಿಯ ಎಲ್ಲಾ ಕಾರ್ಖಾನೆಗಳು, ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ಮಾಲೀಕರು ಮೇ.10 ರಂದು ಕಾಯ್ದೆಯನ್ವಯ ಅರ್ಹ ಕಾರ್ಮಿಕರು ಮತದಾನ ಮಾಡಲು ಅನುಕೂಲವಾಗುವಂತೆ ವೇತನ ಸಹಿತ ರಜೆ ನೀಡುವಂತೆ ತಿಳಿಸಲಾಗಿದೆ. ತಪ್ಪಿದಲ್ಲಿ ಸಂಬಂಧಪಟ್ಟ ಸಂಸ್ಥೆ, ನಿಯೋಜಕರ ವಿರುದ್ಧ ನಿಯಮಾನುಸಾರ ಕಾನೂನು ಕ್ರಮ ಜರುಗಿಸಲಾಗುವುದೆಂದು ಕಾರ್ಮಿಕ ಇಲಾಖೆಯ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೇ.2ರಿಂದ 4ರವರೆಗೆ ಅಂಚೆ ಮತದಾನ

ಕರ್ನಾಟಕ ವಿಧಾನಸಭಾ ಚುನಾವಣೆಗೆ ಮೇ.10ರಂದು ಮತದಾನ ನಡೆಯಲಿದೆ. ಅದಕ್ಕೂ ಮೊದಲು ಅಗತ್ಯಸೇವೆಯಡಿ ಕರ್ತವ್ಯ ನಿರ್ವಹಿಸುತ್ತಿರುವವರು, ಚುನಾವಣಾ ಕರ್ತವ್ಯ ನಿರತರಿಗೆ ಮೂರು ದಿನ ಅಂಚೆ ಮತದಾನಕ್ಕೆ ಅವಕಾಶ ನೀಡಲಾಗಿದೆ. ಅಂದು ಮತದಾನಕ್ಕೆ ಹಾಜರಾಗುವಂತ ಅಧಿಕಾರಿ, ಸಿಬ್ಬಂದಿಗಳಿಗೆ ವೇತನ ಸಹಿತ ರಜೆ ಘೋಷಣೆ ಮಾಡಲಾಗಿದೆ. ಈ ಸಂಬಂಧ ಸಹಾಯಕ ಮುಖ್ಯ ಚುನಾವಣಾಧಿಕಾರಿಗಳು ಎಲ್ಲಾ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳಿಗೆ ಆದೇಶ ಹೊರಡಿಸಿದ್ದಾರೆ. ಕರ್ನಾಟಕ ಸಾರ್ವತ್ರಿಕ ಚುನಾವಣೆಗಳು 2023ರ ಹಿನ್ನಲೆಯಲ್ಲಿ ಅಗತ್ಯ ಸೇವೆಗಳು ಎಂದು ಗುರುತಿಸಲಾದ ಇಲಾಖೆಗಳ ವಿವರಗಳನ್ನು ಸರ್ಕಾರದಿಂದ ಪಡೆಯಲಾಗಿತ್ತು. ಸದರಿ ಇಲಾಖೆಗಳನ್ನು ಅಗತ್ಯಸೇವೆಗಳ ಇಲಾಖೆಗಳು ಗುರುತಿಸಿ ಅಧಿಸೂಚನೆ ಹೊರಡಿಸಲಾಗಿರುತ್ತದೆ ಎಂದಿದ್ದಾರೆ.


ಭಾರತ ಚುನಾವಣಾ ಆಯೋಗವು ಈ ರೀತಿ ಅಗತ್ಯ ಸೇವೆಗಳ ಇಲಾಖೆ ಎಂದು ಗುರುತಿಸಲಾದ ಇಲಾಖೆಗಳ ಅಧಿಕಾರಿ, ಸಿಬ್ಬಂದಿಗಳಿಗೆ ಅಂಚೆ ಮತಪತ್ರದ ಮೂಲಕ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ. ಅಗತ್ಯ ಸೇವೆಗಳ ಇಲಾಖೆಗಳಡಿ ಬರುವ ಗೈರು ಹಾಜರಿ ಮತದಾರರಿಗೆ ( AVES) ಪೋಸ್ಟಲ್ ವೋಟಿಂಗ್ ಸೆಂಟರ್ ( PVC) ಯನ್ನು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಏಕ ಮಾದರಿಯಾಗಿ ದಿನಾಂಕ 02-05-2023 ರಿಂದ 04-05-2023ರವರೆಗೆ ಬೆಳಿಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ತೆರೆಯಲು ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ.
ಅಗತ್ಯ ಸೇವೆಗಳ ಇಲಾಖೆಗಳಡಿ ಬರುವ ಅಧಿಕಾರಿ, ಸಿಬ್ಬಂದಿಗಳು ಮತದಾನ ಮಾಡಲು ಅನುವಾಗುವಂತೆ ದಿನಾಂಕ 02-05-2023 ರಿಂದ 04-05-2023ರ ದಿನಾಂಕಗಳಂದು ಮತದಾನ ಮಾಡಲು ತೆರಳಿದ ದಿನದಂದು ವೇತನ ಸಹಿತ ರಜೆ ನೀಡುವಂತೆ ಸಂಬಂಧ ಪಟ್ಟ ಎಲ್ಲಾ ಇಲಾಖೆಯ ಮುಖ್ಯಸ್ಥರಿಗೆ ಸೂಚಿಸುವಂತೆ, ಆದೇಶ ಹೊರಡಿಸುವಂತೆ ಜಿಲ್ಲಾಧಿಕಾರಿಗಳಿಗೆ ನಿರ್ದೇಶಿಸಿದ್ದಾರೆ.

Categories
ಮಾಹಿತಿ

ಮೊಬೈಲ್ ಬಳಕೆದಾರರಿಗೆ ಇನ್ನು ಕಿರಿಕಿರಿ ಇಲ್ಲ!

  • ಮೇ.1ರಿಂದ ಫೇಕ್ ಕಾಲ್, ಮೆಸೇಜ್ ಬಂದ್
  • ಟೆಲಿಕಾಂ ನೀತಿ ಬದಲಾವಣೆ ಮಾಡಿದ ಟ್ರಾಯ್

NAMMUR EXPRESS NEWS
ನವದೆಹಲಿ : ನಕಲಿ ಕರೆಗಳು, ನಕಲಿ ಮೆಸೇಜ್ ಕಿರಿಕಿರಿ ಅನುಭವಿಸಿದ ಮೊಬೈಲ್ ಬಳಕೆದಾರರ ಸಮಸ್ಯೆಗೆ ಕೊನೆಗೂ ಪರಿಹಾರ ಸಿಕ್ಕಿದೆ. ಟ್ರಾಯ್ ಇದೀಗ ಟೆಲಿಕಾಂ ನೀತಿಯಲ್ಲಿ ಮಹತ್ವದ ಬದಲಾವಣೆ ಮಾಡಿದೆ. ಮೇ.1 ರಿಂದ ಮೊಬೈಲ್ ಬಳಕೆದಾರರಿಗೆ ಈ ರೀತಿಯ ಯಾವುದೇ ಅನಗತ್ಯ ಕರೆ, ಅನಗತ್ಯ ಮೆಸೇಜ್ ಬರುವುದಿಲ್ಲ. ಈ ಫೇಕ್ ಕಾಲ್ ಹಾಗೂ ಮೆಸೇಜ್‌ಗೆ ಟ್ರಾಯ್ ಕಡಿವಾಣ ಹಾಕಿದೆ. ಮೊಬೈಲ್ ಬಳಕೆದಾರರು ಪ್ರತಿನಿತ್ಯ ಲೋನ್, ಬಂಪರ್ ಬಹುಮಾನ ಸೇರಿದಂತೆ ಹಲವು ಅನಗತ್ಯ ಕರೆ ಹಾಗೂ ಸಂದೇಶಗಳಿಂದ ಹೈರಾಣಾಗುತ್ತಿದ್ದವರಿಗೆ ಟ್ರಾಯ್ ಸಿಹಿ ಸುದ್ದಿ ನೀಡಿದೆ.
ಮೊಬೈಲ್‌ಗಳಿಗೆ ಬರುವ ಅನಗತ್ಯ ಮೆಸೇಜ್‌ಗಳಿಗೆ ಕಡಿವಾಣ ಹಾಕುವಂತೆ ಟೆಲಿಕಾಂ ಆಪರೇಟರ್‌ಗಳಿಗೆ ನಿಯಂತ್ರಕ ಸಂಸ್ಥೆ ಟ್ರಾಯ್ ಗುರುವಾರ ಸೂಚನೆ ನೀಡಿದೆ. ಮೇ.01 ರಿಂದ ಟೆಲಿಕಾಂ ಕಂಪನಿಗಳು ಅನಗತ್ಯ ಕಾಲ್ ಹಾಗೂ ಸಂದೇಶ ಫಿಲ್ಟರ್ ಮಾಡಲಿದೆ. ಇದರಿಂದಾಗಿ ಗ್ರಾಹಕರಿಗೆ ಅನಗತ್ಯ ಮೆಸೇಜ್‌ಗಳಿಂದ ಉಂಟಾಗುವ ಕಿರಿಕಿಯಿಂದ ಮುಕ್ತಿ ಸಿಗಲಿದೆ. ಟೆಲಿಕಾಂ ಕಂಪನಿಗಳಿಂದ ನೀಡಲಾಗಿರುವ ಎಲ್ಲಾ ಹೆಡ್ಡರ್(ನೋಂದಣಿಯಾದ ಬಳಿಕ ನೀಡಲಾಗುವ ವಿಶೇಷ ನಂಬರ್ ಹಾಗೂ ಅಕ್ಷರಗಳ ಗುಚ್ಛಗಳು ಮತ್ತು ಮೆಸೇಜ್ ಟೆಂಪ್ಲೇಟ್‌ಗಳನ್ನು ಪರಿಶೀಲನೆ ನಡೆಸಲಿದೆ. ಜಿಯೋ, ಎರ್ಟೆಲ್ ಸೇರಿದಂತೆ ಟೆಲಿಕಾಂ ಕಂಪನಿಗಳು ಆರ್ಟಿಫೀಶಿಯಲ್ ಇಂಟೆಲೆಜೆನ್ಸಿ ಮೊರೆ ಹೋಗಿದೆ. ಅನಗತ್ಯ ಕರೆ ಹಾಗೂ ಸಂದೇಶ ನಿಯಂತ್ರಣಕ್ಕೆ ಎಐ ಮೂಲಕ ಕಾರ್ಯನಿರ್ವಹಿಸಲು ಮುಂದಾಗಿದೆ. ಈಗಾಗಲೇ ಟೆಲಿಕಾಂ ಕಂಪನಿಗಳು ಆರ್ಟಿಫೀಶಿಯಲ್ ಇಂಟೆಲೆಜೆನ್ಸಿ ಮೂಲಕ ಫೇಕ್ ಕಾಲ್ ಹಾಗೂ ಫೇಕ್ ಮೆಸೇಜ್‌ಗೆ ಕಡಿವಾಣ ಹಾಕಲಿದೆ.

ಅಪರಿಚಿತ ಕಾಲರ್‌ಗಳ ಹೆಸರೂ ಗೊತ್ತಾಗುತ್ತೆ!

ಅಪರಿಚಿತ ನಂಬರ್, ಸ್ಪಾಮ್ ಅಥವಾ ಅನಪೇಕ್ಷಿತ ಕರೆಗಳ ಸಮಸ್ಯೆಯನ್ನು ನಿವಾರಿಸಲು ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಹೊಸ ಮಾರ್ಗ ಕಂಡು ಹಿಡಿದಿದೆ. ಫೋನ್‌ನಲ್ಲಿ ಸೇವ್ ಆಗಿರದ ನಂಬರ್‌ಗಳಿಂದ ಯಾರಾದರೂ ಕರೆ ಮಾಡಿದರೆ ಕರೆ ಮಾಡಿದ ವ್ಯಕ್ತಿಯ ಹೆಸರು ನಿಮ್ಮ ಮೊಬೈಲ್‌ನಲ್ಲಿ ಕಂಡುಬರುವಂತೆ ಮಾಡುವ ಹೊಸ ಉಪಕ್ರಮವನ್ನು ಟ್ರಾಯ್ ಶೀಘ್ರವೇ ಜಾರಿಗೆ ತರಲು ಸಜ್ಜಾಗಿದೆ.
ಟೆಲಿಕಾಂ ಆಪರೇಟರ್ ಬಳಿ ಲಭ್ಯವಿರುವ ಕೆವೈಸಿ (ನಿಮ್ಮ ಗ್ರಾಹಕರನ್ನು ತಿಳಿಯಿರಿ ದಾಖಲೆಯನ್ನು ಆಧರಿಸಿ ಕರೆ ಮಾಡಿದವರ ಹೆಸರನ್ನು ತಿಳಿಯುವಂತೆ ಮಾಡಲಾಗುತ್ತದೆ. ಈ ಉಪಕ್ರಮ ಜಾರಿಗೆ ಬಂದಾಗ ಮೊಬೈಲ್‌ನಲ್ಲಿ ಅಪರಿಚಿತ ನಂಬರ್‌ಗಳ ಬದಲು ಕರೆ ಮಾಡುತ್ತಿರುವವರ ಹೆಸರು ಕಾಣಿಸಲಿದೆ.
ಪ್ರಸ್ತುತ ಇಂತಹ ಸೌಲಭ್ಯವನ್ನು ಪಡೆಯಲು ಜನರು ಟ್ರೂ ಕಾಲರ್’ನಂತಹ ಆಪ್‌ಗಳಿಗೆ ಮೊರೆ ಹೋಗಬೇಕಾಗುತ್ತದೆ. ಇಂತಹ ಆಯಪ್‌ಗಳು ಮಾಹಿತಿಯನ್ನು ಕ್ರೌಡ್‌ಸೋರ್ಸಿಂಗ್ ವಿಧಾನದ ಮೂಲಕ ಸಂಗ್ರಹಿಸುವುದರಿಂದ ಅವು ಅಧಿಕೃತವಾಗಿವೆ ಎನ್ನಲು ಸಾಧ್ಯವಾಗಿಲ್ಲ. ಆದರೆ ಕೆವೈಸಿ ಡೇಟಾಗಳು ಸಂಪೂರ್ಣವಾಗಿ ಅಧಿಕೃತ ಹಾಗೂ ನಂಬಲು ಅರ್ಹವಾಗಿರುತ್ತವೆ. ಒಂದು ವೇಳೆ ಕೆವೈಸಿ ಸರಿಯಾಗಿ ಮಾಡಿಸದಿದ್ದರೆ ಫೋನ್‌ನಲ್ಲಿ ಹೆಸರು ಕಂಡುಬರುವುದಿಲ್ಲ. ಹೀಗಾಗಿ ಟ್ರಾಯ್‌ನ ಈ ಹೊಸ ಉಪಕ್ರಮದಿಂದಾಗಿ ಟೆಲಿಕಾಂ ಸೇವೆ ಪೂರೈಕೆದಾರರು ಕೆವೈಸಿ ಪ್ರಕ್ರಿಯೆಯನ್ನು ಸರಿಯಾಗಿ ನಿರ್ವಹಿಸುತ್ತಿದ್ದಾರೆಯೇ ಎಂಬುದರ ಬಗ್ಗೆಯೂ ಅಧಿಕಾರಿಗಳು ಪರಿಶೀಲನೆ ನಡೆಸಬಹುದಾಗಿದೆ.

Categories
ಬೆಂಗಳೂರು ಮಾಹಿತಿ ರಾಜ್ಯ

ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್!

  • ವೇತನ ಹೆಚ್ಚಳ ಜಾರಿಗೆ ಅನುದಾನ: ಆರ್ಥಿಕ ಇಲಾಖೆಯಿಂದ ಸೂಚನೆ

NAMMUR EXPRESS NEWS
ಬೆಂಗಳೂರು : ರಾಜ್ಯ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ ಸಿಕ್ಕಿದ್ದು, ಈಗಾಗಲೇ ರಾಜ್ಯ ಸರ್ಕಾರ ಆದೇಶಿಸಿರುವ ಶೇ.17 ರಷ್ಟು ವೇತನ ಹೆಚ್ಚಳವು ಏಪ್ರಿಲ್ 1ರಿಂದಲೇ ಜಾರಿಗೆ ಬಂದಿದೆ. ಈ ವೇತನ ಹೆಚ್ಚಿಸಲು ಅಗತ್ಯವಾಗಿರುವ ಅನುದಾನಕ್ಕೆ ಸಂಬಂಧಿಸಿದಂತೆ ವಿವಿಧ ಇಲಾಖೆಗಳಿಗೆ ಆರ್ಥಿಕ ಇಲಾಖೆಯು ಅಗತ್ಯ ಸೂಚನೆ ನೀಡಿದೆ.
ವೇತನ ಹೆಚ್ಚಳ ಮಾಡುವಂತೆ ಕಳೆದ ಮಾರ್ಚ್ 1 ರಂದು ಸರ್ಕಾರಿ ನೌಕರರು ಮುಷ್ಕರ ನಡೆಸಿದ ವೇಳೆ ನೌಕರರ ಹೋರಾಟಕ್ಕೆ ಮಣಿದ ರಾಜ್ಯ ಸರ್ಕಾರವು ಶೇ. 17 ರಷ್ಟು ವೇತನ ಹೆಚ್ಚಳ ಮಾಡಿ ಅಧಿಕೃತ ಆದೇಶ ಹೊರಡಿಸಿತ್ತು. ಏಪ್ರಿಲ್ 1 ರಿಂದ ಇದು ಜಾರಿಗೆ ಬರಲಿದೆ ಎಂದು ಪ್ರಕಟಿಸಲಾಗಿತ್ತು.
ಆದರೆ ‘ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆ ಏಪ್ರಿಲ್ ತಿಂಗಳ ವೇತನದಲ್ಲಿಯೇ ಈ ಹೆಚ್ಚಳ ಜಾರಿಗೆ ಬರುತ್ತದೆಯೇ ಎಂಬುದರ ಕುರಿತು ನೌಕರರಲ್ಲಿ ಸಣ್ಣ ಆತಂಕವೂ ಇತ್ತು. ಇದೀಗ ಆ ಆತಂಕ ದೂರವಾಗಿದೆ.


‘ಪ್ರಸ್ತುತ ರಾಜ್ಯ ಸರ್ಕಾರಿ ನೌಕರರ ಬೇಡಿಕೆಗಳ ಹಿನ್ನಲೆಯಲ್ಲಿ ಸರ್ಕಾರದ ನೀತಿ ನಿರ್ಣಯದಂತೆ 7ನೇ ರಾಜ್ಯ ವೇತನ ಆಯೋಗದ ಅಂತಿಮ ವರದಿಯನ್ನು ಕಾಯ್ದಿರಿಸಿ, ರಾಜ್ಯ ಸರ್ಕಾರಿ ನೌಕರರಿಗೆ, ಸ್ಥಳೀಯ ಸಂಸ್ಥೆಗಳ ಮತ್ತು ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರಿಗೆ ಹಾಗೂ ವಿಶ್ವವಿದ್ಯಾನಿಲಯಗಳ ಬೋಧಕೇತರ ಸಿಬ್ಬಂದಿಗಳಿಗೆ ಮಧ್ಯಂತರ ಪರಿಹಾರವನ್ನು ಮಂಜೂರು ಮಾಡಲು ಸರ್ಕಾರವು ನಿರ್ಧರಿಸಿರುತ್ತದೆ” ಎಂದು ಅಂದು ಸರ್ಕಾರದ ಆದೇಶದಲ್ಲಿ ಹೇಳಲಾಗಿತ್ತು.
ಏಪ್ರಿಲ್ ತಿಂಗಳಿನಿಂದಲೇ ಶೇ.17 ತಾತ್ಕಾಲಿಕ ಪರಿಹಾರವಾಗಿ ವೇತನವನ್ನು ಹೆಚ್ಚಿಸಲು 2023-24 ನೇ ಸಾಲಿನ ಬಜೆಟ್ನಲ್ಲಿ ಉದ್ದೇಶಿತ ಶೀರ್ಷಿಕೆಯಡಿಯಲ್ಲಿ ಯಾವುದೇ ಬೇಡಿಕೆಯಡಿ ಅನುದಾನವನ್ನು ಒದಗಿಸಲಾಗಿರಲಿಲ್ಲ. ಹೀಗಾಗಿ ವೇತನವನ್ನು ಹೇಗೆ ಹೆಚ್ಚಿಸಬೇಕೆಂದು ಆರ್ಥಿಕ ಇಲಾಖೆಯು ಎಲ್ಲ ಇಲಾಖೆಗಳಿಗೆ ಸುತ್ತೋಲೆಯಲ್ಲಿ ಮಾರ್ಗದರ್ಶನ ಮಾಡಿದೆ.


ವೇತನ ಹೆಚ್ಚಳ ಮಾಡಲು ಅಗತ್ಯವಾಗಿರುವ ಅನುದಾನವನ್ನು ಇತರೆ ಭತ್ಯೆಗಾಗಿ ಒದಗಿಸಲಾಗಿರುವ ಅನುದಾನದಿಂದ ಪಡೆದು ಹೆಚ್ಚಳ ಮಾಡಬೇಕು. ಅನುದಾನದಲ್ಲಿ ಕೊರತೆಯಾದಲ್ಲಿ ವಿವಿಧ ಬೇಡಿಕೆಗಳಡಿ ಖಾಲಿ ಹುದ್ದೆಗಳಿಗಾಗಿ ಒದಗಿಸಿರುವ ಅನುದಾನದಿಂದ ಪುನರ್ವಿನಿಯೋಗ ಮಾಡಲಾಗುವುದು ಎಂದು ಎಲ್ಲ ಇಲಾಖೆಗಳಿಗೆ ತಿಳಿಸಲಾಗಿದೆ. ಈ ವೇತನ ಹೆಚ್ಚಳವು ಸರ್ಕಾರಿ ನೌಕರ ಮೂಲ ವೇತನದ ಮೇಲೆ 17% ಆಗಿರುತ್ತದೆ.

Categories
ಮಾಹಿತಿ

ಪಾನ್ ಕಾರ್ಡ್- ಆಧಾರ್ ಕಾರ್ಡ್ ಲಿಂಕ್ ಉಚಿತ ಸುಳ್ಳು!

  • ಸಾರ್ವಜನಿಕರಿಗೆ ಸ್ಪಷ್ಟನೆ ನೀಡಿದ ಕೇಂದ್ರ ಸರ್ಕಾರ
  • ನಕಲಿ ಆಪ್ ಲಿಂಕ್ ನಂಬಿ ಹಣ ಕಳೆದುಕೊಳ್ಳಬೇಡಿ!

ಪಾನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಲಿಂಕ್ ಮಾಡಲು ಮಾರ್ಚ್ 31ರ ಒಳಗಾಗಿ ಆಧಾರ್ ಹಾಗೂ ಪಾನ್ ಕಾರ್ಡ್ ಲಿಂಕ್ ಮಾಡುವಂತೆ ಕೇಂದ್ರ ಸರ್ಕಾರ ಸೂಚನೆ ನೀಡಿತ್ತು. ಇದಾದ ಬಳಿಕ ಜೂನ್ 30ರವರೆಗೆ ಗಡುವನ್ನು ವಿಸ್ತರಿಸಲಾಗಿದೆ. ಪಾನ್‌ಗೆ ಆಧಾರ್ ಕಾರ್ಡ್ ಲಿಂಕ್ ಮಾಡಲು 1000 ರೂಪಾಯಿ ದಂಡ ಪಾವತಿ ಮಾಡಬೇಕಿದೆ.
ಕೇಂದ್ರ ಸರ್ಕಾರ ಈ ರೀತಿ ಪಾನ್ ಕಾರ್ಡ್‌ಗೆ ಆಧಾರ್ ಲಿಂಕ್ ಮಾಡೋಕೆ 1000 ರೂಪಾಯಿ ದಂಡ ವಿಧಿಸುತ್ತಿರೋದು ಸಾರ್ವಜನಿಕವಾಗಿ ಆಕ್ರೋಶಕ್ಕೆ ಕಾರಣವಾಗಿದೆ. ಹೀಗಾಗಿ 1000 ರೂಪಾಯಿ ದಂಡ ವಿಧಿಸಿರುವ ಸರ್ಕಾರದ ನಡೆ ವಿರುದ್ಧ ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ.
ಈ ಎಲ್ಲದರ ನಡುವೆ ಆಧಾರ್ ಹಾಗೂ ಪಾನ್ ಲಿಂಕ್ ಮಾಡಲು ಈ ಹಿಂದೆ ವಿಧಿಸಲಾಗುತ್ತಿದ್ದ 1000 ರೂಪಾಯಿ ದಂಡವನ್ನು ಈಗ ತೆಗೆದು ಹಾಕಲಾಗಿದ್ದು ಉಚಿತ ಲಿಂಕ್‌ಗೆ ಅವಕಾಶ ನೀಡಲಾಗಿದೆ ಎಂಬ ಸುದ್ದಿ ಎಲ್ಲೆಡೆ ವೈರಲ್ ಆಗ್ತಿದೆ. ಈ ಲಿಂಕ್‌ನ ಮೂಲಕ ನೀವು ಆಧಾರ್ -ಪಾನ್ ಲಿಂಕ್ ಮಾಡಿದಲ್ಲಿ ನಿಮಗೆ ದಂಡ ಪಾವತಿ ಮಾಡುವ ಅಗತ್ಯವಿಲ್ಲ ಎಂದು ಹೇಳಲಾಗುತ್ತಿದೆ. ಈ ಮಾತನ್ನು ನಂಬಿ ಲಿಂಕ್ ಓಪನ್ ಮಾಡಿದ ಅನೇಕರು ಖಾತೆಯಲ್ಲಿದ್ದ ಹಣ ಕಳೆದುಕೊಳ್ತಿದ್ದಾರೆ.
ಅಂದಹಾಗೆ ಇದೊಂದು ಸುಳ್ಳು ಸುದ್ದಿಯಾಗಿದ್ದು ಈ ರೀತಿಯ ಯಾವುದೇ ವಿನಾಯಿತಿಯನ್ನು ನೀಡಲಾಗಿಲ್ಲ ಎಂದು ಸರ್ಕಾರ ಈಗಾಗಲೇ ಸ್ಪಷ್ಟನೆ ನೀಡಿದೆ. ಈವರೆಗೆ ಆಧಾರ್ ಕಾರ್ಡ್ – ಪಾನ್ ಕಾರ್ಡ್ ಲಿಂಕ್ ಮಾಡದವರು ಜೂನ್ 30ರ ಒಳಗಾಗಿ 1000 ರೂಪಾಯಿ ದಂಡ ಪಾವತಿ ಮಾಡಿ ಲಿಂಕ್ ಮಾಡುವುದು ಕಡ್ಡಾಯವಾಗಿದೆ.