ಕೇರಳ: ಭಾರತದ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾಗಿರುವ ಶಬರಿಮಲೆ ಅಯ್ಯಪ್ಪ ಸ್ವಾಮಿಯ ದೇವಾಲಯದ ವಾರ್ಷಿಕ ಮಂಡಲ ಪೂಜೆಯು ನವೆಂಬರ್ 16ರ ಸೋಮವಾರದಿಂದ ಪ್ರಾರಂಭಗೊಂಡಿದ್ದು, ಅಂದು ಸಂಜೆ 5:೦೦ ಗಂಟೆಯಿಂದ ದೇವಸ್ಥಾನದ ಬಾಗಿಲನ್ನು ತೆರೆಯಲಿದ್ದು, ಶಬರಿಮಲೆ ಯಾತ್ರೆಯನ್ನು ಕೈಗೊಳ್ಳುವ ಭಕ್ತಾದಿಗಳಿಗೆ ಅಯ್ಯಪ್ಪ ಸ್ವಾಮಿಯ ದರ್ಶನಕ್ಕೆ ಅವಕಾಶವನ್ನು ಕಲ್ಪಿಸಿಕೊಡಲಾಗಿದೆ. ಮೊದಲ ದಿನವಾದ ನವೆಂಬರ್ 16ರ ಸೋಮವಾರದಂದು ಸಂಜೆ ಬಾಗಿಲು ತೆರೆದೊಡನೆ ಕೇವಲ ದೇವರಿಗೆ ದೀಪ ಹಚ್ಚಿ ಇಡಲಾಗುತ್ತದೆ ಹೊರತು, ಯಾವುದೇ ರೀತಿಯ ವಿಶೇಷ ಪೂಜೆಗಳು ನಡೆಯುವುದಿಲ್ಲ. ನವೆಂಬರ್ 17ರ ಮಂಗಳವಾರದಂದು ಬೆಳಗಿನ ಜಾವ 3:೦0ಗಂಟೆಗೆ ದೇವಾಲಯದ ಬಾಗಿಲನ್ನು ತೆರೆದು ನೂತನವಾಗಿ ನೇಮಕಗೊಂಡಿರುವ ಪ್ರಧಾನ ಅರ್ಚಕರ ನೇತೃತ್ವದಲ್ಲಿ ಗಣಪತಿ ಹೋಮ, ತುಪ್ಪಾಭಿಷೇಕ ಸೇರಿದಂತೆ ಪ್ರತಿದಿನದ ಪೂಜೆಗಳು ಅಧಿಕೃತವಾಗಿ ನೆರವೇರಲಿದೆ. ಈ ಹಿನ್ನೆಲೆಯಲ್ಲಿ ಭಕ್ತಾದಿಗಳಿಗೆ ಅಯ್ಯಪ್ಪ ಸ್ವಾಮಿಯ ದರ್ಶನ ಸುಲಭವಾಗಿ ದೊರಕುವಂತೆ ಮಾಡುವ ಸಲುವಾಗಿ ಕೇರಳ ಸರ್ಕಾರ ಮತ್ತು ತಿರುವಾಂಕೂರು ದೇವಸ್ವಂ ಮಂಡಳಿಯು ವರ್ಚುವಲ್ ಕ್ಯೂ, ಸ್ಪಾಟ್ ಬುಕ್ಕಿಂಗ್, ಭದ್ರತೆ, ವೈದ್ಯಕೀಯ ಸೌಲಭ್ಯ ಮತ್ತು ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಿಕೊಡಲಾಗಿದೆ.
Categories
ಶಬರಿಮಲೆ ಅಯ್ಯಪ್ಪ ಸ್ವಾಮಿ ಭಕ್ತರಿಗೆ ಪ್ರವೇಶ – ನವೆಂಬರ್ 16ರಿಂದ ಭಕ್ತರಿಗೆ ಪ್ರವೇಶ – ವರ್ಚುವಲ್ ಕ್ಯೂ, ಸ್ಪಾಟ್ ಬುಕ್ಕಿಂಗ್, ಭದ್ರತೆ, ವೈದ್ಯಕೀಯ ಸೌಲಭ್ಯ