Categories
ಉದ್ಯೋಗ ಸುದ್ದಿ

ಶಿಕ್ಷಕ ಹುದ್ದೆ ಆಕಾಂಕ್ಷಿಗಳಿಗೆ ಭರ್ಜರಿ ಸುದ್ದಿ..!

ಶಿಕ್ಷಕ ಹುದ್ದೆ ಆಕಾಂಕ್ಷಿಗಳಿಗೆ ಭರ್ಜರಿ ಸುದ್ದಿ..!

– 10 ಸಾವಿರ ಶಿಕ್ಷಕರ ನೇಮಕಾತಿ

NAMMUR EXPRESS NEWS
ಬೆಂಗಳೂರು: ರಾಜ್ಯದ ಸರ್ಕಾರಿ ಶಾಲೆಗಳಲ್ಲಿ 10,000 ಶಿಕ್ಷಕರ ನೇಮಕಾತಿ ಮಾಡಿಕೊಳ್ಳಲು ಶಿಕ್ಷಣ ಇಲಾಖೆ ನಿರ್ಧರಿಸಿದೆ. ಈ ಕುರಿತಾಗಿ ಅನುಮತಿ ಕೋರಿ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈಗಾಗಲೇ ಶಿಕ್ಷಣ ಇಲಾಖೆ ನೇಮಕಾತಿಗೆ ಸಂಬಂಧಿಸಿದ ಪ್ರಕ್ರಿಯೆ ಆರಂಭಿಸಿದ್ದು, ಹಣಕಾಸು ಇಲಾಖೆ ಅನುಮತಿ ನೀಡಿದ ಕೂಡಲೇ ಅಧಿಸೂಚನೆ ಹೊರಬೀಳಲಿದೆ.
ರಾಜ್ಯದ ಪ್ರಾಥಮಿಕ ಶಾಲೆಗಳಿಗೆ 35,000 ಪ್ರೌಢಶಾಲೆಗಳಲ್ಲಿ 10,000 ಸೇರಿ 45 ಸಾವಿರ ಅತಿಥಿ ಶಿಕ್ಷಕರ ನೇಮಕಾತಿಗೆ ಶಿಕ್ಷಣ ಇಲಾಖೆ ವತಿಯಿಂದ ಅನುಮತಿ ನೀಡಲಾಗಿದೆ. ಪ್ರಸಕ್ತ ಶೈಕ್ಷಣಿಕ ವರ್ಷಕ್ಕೆ ಅನುಗುಣವಾಗಿ ಅತಿಥಿ ಶಿಕ್ಷಕರ ನೇಮಕಾತಿ ಮಾಡಿಕೊಳ್ಳಲಾಗುವುದು. ರಾಜ್ಯದ ಪ್ರಾಥಮಿಕ ಶಾಲೆಗಳಲ್ಲಿ ಕನಿಷ್ಠ 50,000, ಪ್ರೌಢಶಾಲೆಗಳಲ್ಲಿ ಕನಿಷ್ಠ 5000 ಶಿಕ್ಷಕರ ಕೊರತೆ ಇದೆ. ಶಿಕ್ಷಣ ಇಲಾಖೆ ಹೊಸದಾಗಿ 10 ಸಾವಿರ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಕೈಗೊಳ್ಳಲಿದೆ.

Categories
ಉದ್ಯೋಗ ಸುದ್ದಿ

ಅಂಚೆ ಇಲಾಖೆಯಲ್ಲಿ 30,000ಕ್ಕೂ ಹೆಚ್ಚು ಉದ್ಯೋಗ

ಅಂಚೆ ಇಲಾಖೆಯಲ್ಲಿ 30,000ಕ್ಕೂ ಹೆಚ್ಚು ಉದ್ಯೋಗ

– ಜುಲೈ 15 ರಿಂದ ಅರ್ಜಿ ಸಲ್ಲಿಕೆ ಆರಂಭ
– ಏನಿದು ಉದ್ಯೋಗ? ಅರ್ಜಿ ಹೇಗೆ..?

NAMMUR EXPRESS NEWS
ನವದೆಹಲಿ : ಉದ್ಯೋಗಾಕಾಂಕ್ಷಿಗಳಿಗೆ ಭಾರತೀಯ ಅಂಚೆ ಇಲಾಖೆಯು ಭರ್ಜರಿ ಸಿಹಿಸುದ್ದಿ ನೀಡಿದ್ದು, ಅಂಚೆ ಇಲಾಖೆಯಲ್ಲಿ 30,000 ಕ್ಕೂ ಹೆಚ್ಚು ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದ್ದು, ವಿವರವಾದ ಅಧಿಸೂಚನೆಯನ್ನು ಇಂದಿನಿಂದ ಕೆಲವು ದಿನಗಳ ನಂತರ ಜುಲೈ 15, 2024 ರಂದು ಬಿಡುಗಡೆ ಮಾಡಲಾಗುವುದು. ಈ ದಿನದಿಂದ ನೋಂದಣಿ ಕೂಡ ಪ್ರಾರಂಭವಾಗಲಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಲಿಂಕ್ ಸಕ್ರಿಯವಾದ ನಂತರ ಅರ್ಜಿ ಸಲ್ಲಿಸಬಹುದು.

ಇಂಡಿಯಾ ಪೋಸ್ಟ್ ಜಿಡಿಎಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು, ನೀವು ಅಧಿಕೃತ ವೆಬೈಟ್ಟೆ ಹೋಗಬೇಕು. ಭಾರತೀಯ ಅಂಚೆ ಇಲಾಖೆಯ ಅಧಿಕೃತ ವೆಬೈಟ್ indiapostgdsonline.gov.in ನಲ್ಲಿ ನೀವು ಅರ್ಜಿ ಸಲ್ಲಿಸುವುದು ಮಾತ್ರವಲ್ಲದೆ ಈ ಹುದ್ದೆಗಳ ಬಗ್ಗೆ ವಿವರವಾದ ಮಾಹಿತಿಯನ್ನು ಸಹ ಪಡೆಯಬಹುದು. ಮುಖಪುಟವನ್ನು ತೆರೆದಾಗ, ನೀವು ವಿವಿಧ ವೃತ್ತಗಳಿಗೆ ವಿಭಿನ್ನ ಲಿಂಕ್ಗಳನ್ನು ನೋಡುತ್ತೀರಿ. ನೀವು ಅರ್ಜಿ ಸಲ್ಲಿಸಲು ಬಯಸುವ ವೃತ್ತದ ಮೇಲೆ ಕ್ಲಿಕ್ ಮಾಡಿ, ನಂತರ ಮುಂದಿನ ಪ್ರಕ್ರಿಯೆಯನ್ನು ಪ್ರಾರಂಭಿಸಿ. ನೋಂದಣಿ ಲಿಂಕ್ ಇನ್ನೂ ತೆರೆದಿಲ್ಲ, ಜುಲೈ 15 ರಿಂದ ಅರ್ಜಿಗಳು ಪ್ರಾರಂಭವಾಗುತ್ತವೆ. ಪ್ರಸ್ತುತ, ಈ ಖಾಲಿ ಹುದ್ದೆಗಳಿಗೆ ಮಾತ್ರ ಕಿರು ನೋಟಿಸ್‌ ನೀಡಲಾಗುತ್ತದೆ.

ಯಾರು ಅರ್ಜಿ ಸಲ್ಲಿಸಬಹುದು?

ಇಂಡಿಯಾ ಪೋಸ್ಟ್ ಜಿಡಿಎಸ್‌ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು, ಅಭ್ಯರ್ಥಿಯು ಮಾನ್ಯತೆ ಪಡೆದ ಮಂಡಳಿಯಿಂದ 10 ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು. ಇದರೊಂದಿಗೆ, ಅವನು ಹತ್ತನೇ ತರಗತಿಯಲ್ಲಿ ಒಂದು ಮಾತೃಭಾಷೆಯನ್ನು ಅಧ್ಯಯನ ಮಾಡಿರಬೇಕು. ಅಭ್ಯರ್ಥಿಯು ಕಂಪ್ಯೂಟ‌ರ್ ಜ್ಞಾನವನ್ನು ಹೊಂದಿರಬೇಕು ಮತ್ತು ಬೈಸಿಕಲ್ ಸವಾರಿ ಮಾಡುವುದು ಹೇಗೆ ಎಂದು ತಿಳಿದಿರಬೇಕು. 18 ರಿಂದ 40 ವರ್ಷದೊಳಗಿನ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ ನಿಯಮಗಳ ಪ್ರಕಾರ ವಯಸ್ಸಿನ ಸಡಿಲಿಕೆ ಇರುತ್ತದೆ.

ಕೊನೆಯ ದಿನಾಂಕ ಯಾವುದು?

ಈ ಹುದ್ದೆಗಳ ವಿವರವಾದ ಅಧಿಸೂಚನೆಯನ್ನು ಇನ್ನೂ ಬಿಡುಗಡೆ ಮಾಡಿಲ್ಲ. ಆಗ ಮಾತ್ರ ಖಾಲಿ ಹುದ್ದೆಗಳ ಸಂಖ್ಯೆಯಿಂದ ಕೊನೆಯ ದಿನಾಂಕದವರೆಗೆ ಸರಿಯಾದ ಮಾಹಿತಿ ಲಭ್ಯವಾಗುತ್ತದೆ. ಪ್ರಸ್ತುತ, 30 ಸಾವಿರಕ್ಕೂ ಹೆಚ್ಚು ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದು ಅಂದಾಜಿಸಲಾಗಿದೆ ಮತ್ತು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಆಗಸ್ಟ್ ಆಗಿರಬಹುದು.

ಆಯ್ಕೆಯನ್ನು ಹೇಗೆ ಮಾಡಲಾಗುತ್ತದೆ?

ಮೆರಿಟ್ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. 10 ನೇ ತರಗತಿಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಅಭ್ಯರ್ಥಿಗಳ ಮೆರಿಟ್ ಅನ್ನು ಸಿದ್ಧಪಡಿಸಲಾಗುತ್ತದೆ. ಶಾರ್ಟ್ಲಿಸ್ಟ್ ಮಾಡಿದ ಅಭ್ಯರ್ಥಿಗಳನ್ನು ದಾಖಲೆ ಪರಿಶೀಲನೆಗೆ ಕರೆಯಲಾಗುತ್ತದೆ. ದಿವಾ ಸುತ್ತನ್ನು ಸಹ ತೆರವುಗೊಳಿಸಿದ ನಂತರ, ಅಭ್ಯರ್ಥಿಯ ಆಯ್ಕೆಯು ಅಂತಿಮವಾಗಿರುತ್ತದೆ.

Categories
ಉದ್ಯೋಗ ಸುದ್ದಿ ಬೆಂಗಳೂರು

ಪೊಲೀಸ್ ಹುದ್ದೆ ಆಕಾಂಕ್ಷಿಗಳಿಗೆ ಸಿಹಿ ಸುದ್ದಿ..!

ಪೊಲೀಸ್ ಹುದ್ದೆ ಆಕಾಂಕ್ಷಿಗಳಿಗೆ ಸಿಹಿ ಸುದ್ದಿ..!

– 1500 ಪೊಲೀಸರ ನೇರ ನೇಮಕಾತಿ

NAMMUR EXPRESS NEWS
ಬೆಂಗಳೂರು: ರಾಜ್ಯ ಪೊಲೀಸ್‌ ಇಲಾಖೆ ಕೆಎಸ್ ಆರ್ ಪಿ, ಆರ್ ಪಿಸಿ ವಿಭಾಗದಲ್ಲಿ ಖಾಲಿ ಇರುವ 1500 ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಿಕೊಳ್ಳಲು ಸರ್ಕಾರ ಅನುಮತಿ ನೀಡಿದೆ.

2023 -24ನೇ ಸಾಲಿನಲ್ಲಿ ಕೆ.ಎಸ್.ಆ‌ರ್.ಪಿ., ಆರ್.ಪಿ.ಸಿ. (ಪುರುಷರು, ಮಹಿಳೆಯರು) 1,500 ಹುದ್ದೆಗಳ ನೇಮಕಾತಿ ನಡೆಯುತ್ತಿದ್ದು, ಕ್ರೀಡಾಪಟುಗಳಿಗೆ ಶೇಕಡ 2ರಷ್ಟು ಕಲ್ಯಾಣ ಕರ್ನಾಟಕೇತರ ಒಟ್ಟು 30 ಹುದ್ದೆಗಳು, ಸಿಆರ್ಪಿಸಿ ಕಲ್ಯಾಣ ಕರ್ನಾಟಕ 614 ಹುದ್ದೆಗಳಲ್ಲಿ 12 ಹುದ್ದೆಗಳನ್ನು ಕ್ರೀಡಾಪಟುಗಳಿಗೆ ಶೇ.2 ರಷ್ಟ ರಂತೆ ಮೀಸಲಾಗಿದೆ. ಇನ್ನುಳಿದ 1470 ಆರ್.ಪಿ.ಸಿ. ಕಲ್ಯಾಣ ಕರ್ನಾಟಕೇತರ ಮತ್ತು ಕಲ್ಯಾಣ ಕರ್ನಾಟಕ 602 ಆರ್.ಪಿ.ಸಿ. ಹುದ್ದೆಗಳಿಗೆ ನೇರ ಮತ್ತು ಸಮತಲ ವರ್ಗೀಕರಣದಡಿ ನೇಮಕಾತಿಗೆ ಸರ್ಕಾರ ಆದೇಶಿಸಿದೆ.

Categories
ಉದ್ಯೋಗ ಸುದ್ದಿ ತೀರ್ಥಹಳ್ಳಿ ಶಿಕ್ಷಣ

ಸರ್ಕಾರಿ ಡಿಗ್ರಿ ಕಾಲೇಜಲ್ಲಿ ಪ್ರಥಮ ವೃತ್ತಿ ಮಾರ್ಗದರ್ಶನ ಕಾರ್ಯಗಾರ

ಸರ್ಕಾರಿ ಡಿಗ್ರಿ ಕಾಲೇಜಲ್ಲಿ ಪ್ರಥಮ ವೃತ್ತಿ ಮಾರ್ಗದರ್ಶನ ಕಾರ್ಯಗಾರ

– ಉದ್ಯೋಗ ಬಯಸುವ ಪ್ರತಿಯೊಬ್ಬ ಪದವೀಧರರು ಆರಂಭದಲ್ಲೇ ಎಡವುತ್ತಾರೆ
– ಕೌಶಲ್ಯ ಇದ್ದರೆ ಮಾತ್ರ ಈಗ ಉದ್ಯೋಗ

NAMMUR EXPRESS NEWS
ತೀರ್ಥಹಳ್ಳಿ : ಬಾಳೇಬೈಲು ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹಳೆಯ ವಿದ್ಯಾರ್ಥಿಗಳ ಸಂಘ, ಚಾಣಕ್ಯ ವಿಶ್ವವಿದ್ಯಾಲಯ ಬೆಂಗಳೂರು ಇವರ ಸಹಯೋಗದಲ್ಲಿ ವೃತ್ತಿ ಮಾರ್ಗದರ್ಶನ ಕಾರ್ಯಗಾರ ನಡೆಯಿತು.

ಉದ್ಯೋಗ ಅರಸುವ ಪ್ರತಿಯೊಬ್ಬ ಪದವೀಧರರು ಆರಂಭದಲ್ಲೇ ಎಡವುತ್ತಾರೆ. ಕೌಶಲ್ಯದ ಜೊತೆಗೆ ವೃತ್ತಿ ಜೀವನ ನಿರ್ವಹಿಸಲು ವೈಯಕ್ತಿಕ ವರ್ಚಸ್ಸು ಹಿಗ್ಗಿಸಿಕೊಳ್ಳಬೇಕು ಎಂದು ಉಪನ್ಯಾಸ ಪ್ರಶಾಂತ್ ಕುಮಾರ್ ಹೆಚ್.ಪಿ. ಹೇಳಿದರು.
ವಿದ್ಯಾರ್ಥಿಗಲ್ಲಿ ಕೌಶಲ್ಯಗಳು ಇದ್ದಾಗಲೂ ಸಂದರ್ಶನದ ವೇಳೆ ಭಯ, ಹೆದರಿಕೆ, ಅಂಜಿಕೆ ಮುಂತಾದ ಅನೇಕ ಸಮಸ್ಯೆಗಳಿಂದ ಕೆಲಸ ಲಭಿಸುವುದಿಲ್ಲ. ಹೀಗಾಗಿ ವಿದ್ಯಾರ್ಥಿ ಜೀವನದಲ್ಲೇ ವೃತ್ತಿ ಬದುಕು ನಿರ್ವಹಿಸಲು ಸಿದ್ಧರಾಗಬೇಕು. ಕೇವಲ ಪಠ್ಯ ಓದು ಮಾತ್ರ ಸಾಲದು. ಸಮಾಜದಲ್ಲಿ ಆಗುವ ಬದಲಾವಣೆಗಳ ಬಗ್ಗೆ ನಿರಂತರ ತಿಳುವಳಿಕೆ ಪಡೆಯುತ್ತಿರಬೇಕು ಎಂದು ಸಲಹೆ ನೀಡಿದರು.

ರೆಸ್ಯೂಮೆ, ಸಿವಿ ತಯಾರಿಸುವಾಗ ಜಾಣ್ಮೆ ಅಳವಡಿಸಿಕೊಳ್ಳಬೇಕು. ಶೈಕ್ಷಣಿಕ, ವೈಯಕ್ತಿಕ ವಿವರಗಳನ್ನು ಅಚ್ಚುಕಟ್ಟಾಗಿ ಹಾಕಬೇಕು. ಸಂದರ್ಶನದ ವೇಳೆ ಗಮನ ಸೆಳೆಯುವಂತೆ ಕುಳಿತುಕೊಳ್ಳಬೇಕು ಎಂದು ಪ್ರಾತ್ಯಕ್ಷಿಕೆ ಮೂಲಕ ತಿಳಿಸಿಕೊಟ್ಟರು.
“ಜೀವನದ ಶೈಲಿಯನ್ನು ರೂಪಿಸಿಕೊಂಡು ಅಂತಿಮ ವಿದ್ಯಾರ್ಥಿಗಳು ಪ್ರಾಯೋಗಿಕ ಬದುಕಿಗೆ ತಯಾರಾಗಬೇಕು. ಚಟುವಟಿಕೆ ಜೀವನ ಭವಿಷ್ಯ ನಿರ್ಮಿಸುತ್ತದೆ” ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಹೆಚ್.ಡಿ. ಧರ್ಮಣ್ಣ ಹೇಳಿದರು.
ಚಾಣಕ್ಯ ವಿಶ್ಯವಿದ್ಯಾಲಯದ ಉಪನ್ಯಾಸಕ ವೆಂಕಟೇಶ್ ಕೆ. ಮುದೂರು, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರಸನ್ನ ಕುಮಾರ್ ಹೆಚ್.ಸಿ., ಪ್ರಮುಖರಾದ ಪ್ರದೀಪ್, ಮವೀಶ, ಸುನಿಲ್ ಕುಮಾರ್, ಅಮಿತ್, ಸಚಿನ್, ಕವಿರಾಜ್ ಇದ್ದರು.

Categories
ಉದ್ಯೋಗ ಸುದ್ದಿ ಬೆಂಗಳೂರು

ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್..!

ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್..!
– ಬ್ಯಾಕ್ ಲಾಗ್‌ ಹುದ್ದೆಗಳ ಭರ್ತಿಗೆ ರಾಜ್ಯ ಸರ್ಕಾರ ಗ್ರೀನ್‌ ಸಿಗ್ನಲ್‌!

NAMMUR EXPRESS NEWS
ಬೆಂಗಳೂರು : ರಾಜ್ಯ ಸರ್ಕಾರವು ಉದ್ಯೋಗಾಕಾಂಕ್ಷಿಗಳಿಗೆ ಸಿಹಿಸುದ್ದಿ ನೀಡಿದ್ದು, ಬ್ಯಾಕ್‌ಲಾಗ್‌ ಹುದ್ದೆಯನ್ನು ಭರ್ತಿ ಮಾಡುವಂತೆ ಕೋರಿರುವ ಮನವಿಗೆ ಸ್ಪಂದಿಸಿದ್ದು, ನೇಮಕಾತಿಗೆ ಗ್ರೀನ್ ಸಿಗ್ನಲ್ ನೀಡಿದೆ.

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಶ್ರೀ. ಕೃಷ್ಣಮೂರ್ತಿ ಇವರು ಉಲ್ಲೇಖ- 1ರನ್ನಯ ಬ್ಯಾಕ್‌ಲಾಗ್ ಹುದ್ದೆಗಳನ್ನು ಕಾಲಮಿತಿಯಲ್ಲಿ ಭರ್ತಿ ಮಾಡಲು ಕ್ರಮಕೈಗೊಳ್ಳುವಂತೆ ಸೂಚಿಸಿದ್ದರು ಯಾವುದೇ ಬ್ಯಾಕ್ ಲಾಗ್‌ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸದೇ ಇದ್ದು ಈ ಸಂಬಂಧ ಬ್ಯಾಕ್‌ಲಾಗ್‌ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಬೇಕೆಂದು ಕೋರಿರುತ್ತೀರಿ.

ಪರಿಶೀಲಿಸಲಾಗಿ ಉಲ್ಲೇಖ(2)ರ ಸರ್ಕಾರದ ಅಧಿಸೂಚನೆಯಂತೆ, ಸರ್ಕಾರದ ವಿವಿಧ ಇಲಾಖೆಗಳು/ ನಿಗಮಗಳು/ ಮಂಡಳಿಗಳು/ ವಿಶ್ವವಿದ್ಯಾಲಯಗಳು/ ಸಹಕಾರ ಸಂಸ್ಥೆಗಳು/ ಅನುದಾನಿತ ಶೈಕ್ಷಣಿಕ ಸಂಸ್ಥೆಗಳಲ್ಲಿ ಖಾಲಿ ಇರುವ ವರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಬ್ಯಾಕ್‌ಲಾಗ್ ಹುದ್ದೆಗಳನ್ನು ಭರ್ತಿ ಮಾಡಲು ನೇಮಕಾತಿ ಪ್ರಾಧಿಕಾರಿಗಳಿಂದಲೇ ಅಧಿಸೂಚನೆ / ಪ್ರಕಟಣೆಯನ್ನು ಹೊರಡಿಸಬೇಕಾಗಿರುತ್ತದೆ. ಈ ಸಂಬಂಧವಾಗಿ, ಮಾನ್ಯ ಸಚಿವ ಸಂಪುಟದ ಉಪ ಸಮಿತಿ ಸಭೆಗಳಲ್ಲಿ ಅನುಸೂಚಿತ ಜಾತಿಗಳು ಮತ್ತು ಅನೂಸೂಚಿತ ಪಂಗಡಗಳ ಕಲ್ಯಾಣ ಸಮಿತಿ ಸಭೆಗಳಲ್ಲಿ ಮಾನ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಸಮಾಜ ಕಲ್ಯಾಣ ಇಲಾಖೆ, ಬೆಂಗಳೂರು ರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಗಳಲ್ಲಿ ಹಾಗೂ ಆಯುಕ್ತರು, ಸಮಾಜ ಕಲ್ಯಾಣ ಇಲಾಖೆ, ಬೆಂಗಳೂರು ರವರ ಅದ ಕ್ಷತೆಯಲ್ಲಿ ನಡೆದ ಸಭೆಗಳಲ್ಲಿ ಉಲ್ಲೇಖ(3)ರ ವಿವಿಧ ದಿನಾಂಕಗಳ ಈ ಕಛೇರಿ ವತ್ರಗಳಲ್ಲಿ ಸರ್ಕಾರದ ವಿವಿಧ ಇಲಾಖೆಗಳು/ ನಿಗಮಗಳು/ ಮಂಡಳಿಗಳು/ ವಿಶ್ವವಿದ್ಯಾಲಯಗಳು/ ಸಹಕಾರ ಸಂಸ್ಥೆಗಳು/ ಅನುದಾನಿತ ಶೈಕ್ಷಣಿಕ ಸಂಸ್ಥೆಗಳಲ್ಲಿ ಖಾಲಿ ಇರುವ ಬ್ಯಾಕ್‌ಲಾಗ್ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡುವಂತೆ ಸಂಬಂಧಪಟ್ಟ ಸಕ್ಷಮ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿರುತ್ತದೆ ಎಂಬ ಅಂಶವನ್ನು ಈ ಮೂಲಕ ತಿಳಿಸಿದೆ.

Categories
ಉದ್ಯೋಗ ಸುದ್ದಿ

ಕೆನರಾ ಬ್ಯಾಂಕಿನಲ್ಲಿ ವಿವಿಧ ಉದ್ಯೋಗ: ಯಾರು ಅರ್ಜಿ ಹಾಕಬಹುದು?

ಕೆನರಾ ಬ್ಯಾಂಕಿನಲ್ಲಿ ವಿವಿಧ ಉದ್ಯೋಗ: ಯಾರು ಅರ್ಜಿ ಹಾಕಬಹುದು?
– ಅರ್ಜಿ ಸಲ್ಲಿಸುವುದು ಹೇಗೆ?..ಎಷ್ಟು ಸಂಬಳ..?

NAMMUR EXPRESS NEWS
ಕೆನರಾ ಬ್ಯಾಂಕ್ ಅಕೌಂಟ್ಸ್ ಮತ್ತು ಅಡ್ಮಿನಿಸ್ಟ್ರೇಷನ್ ಸೆಕ್ರೆಟರಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಆಯ್ಕೆಯಾದ ಅಭ್ಯರ್ಥಿಗಳು ಕೆನರಾ ಬ್ಯಾಂಕಿನ ಲೆಕ್ಕಪತ್ರ ಮತ್ತು ಆಡಳಿತ ಪ್ರಕ್ರಿಯೆಯನ್ನು ನೋಡಿಕೊಳ್ಳುತ್ತಾರೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 28 ವರ್ಷ, ಎಸ್ಸಿ/ಎಸ್ಟಿ ಅಭ್ಯರ್ಥಿಗಳಿಗೆ 25 ವರ್ಷ, ಇತರೆ ವರ್ಗದ ಅಭ್ಯರ್ಥಿಗಳಿಗೆ 25 ವರ್ಷ ವಯೋಮಿತಿ ನಿಗದಿ ಮಾಡಲಾಗಿದೆ. ಅಭ್ಯರ್ಥಿಗಳು ಬಿ. ಕಾಂ ಪದವಿ ಪಡೆದಿರಬೇಕು. ಕಂಪ್ಯೂಟರ್ ಜ್ಞಾನದ ಅಗತ್ಯವಿದೆ ಮತ್ತು ಅಕೌಂಟಿಂಗ್ ಸಾಫ್ಟ್ವೇರ್ ಜ್ಞಾನದೊಂದಿಗೆ ಖಾತೆಗಳು ಮತ್ತು ಸಾಮಾನ್ಯ ಆಡಳಿತವನ್ನು ನಿರ್ವಹಿಸುವಲ್ಲಿ ಕನಿಷ್ಠ 2 ವರ್ಷಗಳ ಅನುಭವವನ್ನು ನಿರೀಕ್ಷಿಸಲಾಗಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ ಸುಮಾರು 30,000 ರೂ. ಹೆಚ್ಚುವರಿಯಾಗಿ, ಉದ್ಯೋಗಿಗಳು ಉತ್ತಮ ಸವಲತ್ತುಗಳು ಮತ್ತು ಇತರ ಪ್ರಯೋಜನಗಳನ್ನು ಪಡೆಯುತ್ತಾರೆ.

ಅರ್ಜಿ ಸಲ್ಲಿಸುವುದು ಹೇಗೆ?

1. ಕೆನರಾ ಬ್ಯಾಂಕ್ ಅಧಿಕೃತ ವೆಬ್ಸೈಟ್ https://canarabank.com/pages/Recruitment ಭೇಟಿ ನೀಡಿ ಮತ್ತು ನೇಮಕಾತಿ ವಿಭಾಗದ ಅಡಿಯಲ್ಲಿ, ಅಪ್ಲಿಕೇಶನ್ ಡೌನ್ಲೋಡ್ ಮಾಡಿ
2. ಸರಿಯಾದ ವಿವರಗಳೊಂದಿಗೆ ಅರ್ಜಿ ನಮೂನೆಯನ್ನು ಪೂರ್ಣಗೊಳಿಸಿ
3. ನಿಮ್ಮ ಫೋಟೋ ಮತ್ತು ಸಹಿ ಸೇರಿದಂತೆ ಶೈಕ್ಷಣಿಕ ಪ್ರಮಾಣಪತ್ರಗಳು ಮತ್ತು ಅನುಭವದ ಪುರಾವೆಗಳಂತಹ ಎಲ್ಲಾ ಅಗತ್ಯ ದಾಖಲೆಗಳನ್ನು ಲಗತ್ತಿಸಿ.
4. ಎಸ್ಸಿ/ಎಸ್ಟಿ ಅಭ್ಯರ್ಥಿಗಳಿಗೆ 300 ರೂ. ಇತರೆ ಅಭ್ಯರ್ಥಿಗಳಿಗೆ 500 ರೂ. ನಿಮ್ಮ ನಿಯೋಜಿತ ಅರ್ಜಿ ಶುಲ್ಕವನ್ನು ಪಾವತಿಸಿ.
5. ನಂತರ ಬೆಂಗಳೂರಿನಲ್ಲಿ ಪಾವತಿಸಬೇಕಾದ “ಕೆನರಾ ಬ್ಯಾಂಕ್ ವೆಂಚರ್ ಕ್ಯಾಪಿಟಲ್ ಫಂಡ್ ಲಿಮಿಟೆಡ್” ಹೆಸರಿನಲ್ಲಿ ಡಿಮ್ಯಾಂಡ್ ಡ್ರಾಫ್ಟ್.
6. ಭರ್ತಿ ಮಾಡಿದ ಫಾರ್ಮ್ ಮತ್ತು ದಾಖಲೆಗಳನ್ನು ಈ ಕೆಳಗಿನ ವಿಳಾಸಕ್ಕೆ ಕಳುಹಿಸಿ.

ಕೆನರಾಬ್ಯಾಂಕ್ ವೆಂಚರ್ ಕ್ಯಾಪಿಟಲ್ ಫಂಡ್ ಲಿಮಿಟೆಡ್ (ಸಿವಿಸಿಎಫ್‌ಎಲ್), ಬೆಂಗಳೂರು – 560004 ಅಭ್ಯರ್ಥಿಗಳು 12 ತಿಂಗಳ ಪ್ರೊಬೇಷನರಿ ಅವಧಿಯನ್ನು ಪೂರ್ಣಗೊಳಿಸಬೇಕಾಗುತ್ತದೆ. ಆಸಕ್ತ ಅಭ್ಯರ್ಥಿಗಳು ಜೂನ್ 30, 2024ರೊಳಗೆ ಅರ್ಜಿ ಸಲ್ಲಿಸಬೇಕು. ಅಭ್ಯರ್ಥಿಗಳನ್ನು ಶೈಕ್ಷಣಿಕ ಅರ್ಹತೆ ಮತ್ತು ಅನುಭವದ ಆಧಾರದ ಮೇಲೆ ಶಾರ್ಟ್ಲಿಸ್ಟ್ ಮಾಡಲಾಗುತ್ತದೆ; ಅಂತಿಮ ಆಯ್ಕೆಯನ್ನು ಮುಖಾಮುಖಿ ಮಾಡಲಾಗುವುದು.

Categories
ಉದ್ಯೋಗ ಸುದ್ದಿ ಬೆಂಗಳೂರು ರಾಜ್ಯ

ಹೊರ ಗುತ್ತಿಗೆ ನೇಮಕಾತಿಯಲ್ಲೂ ಮಹಿಳಾ ಮೀಸಲಾತಿ!

ಹೊರ ಗುತ್ತಿಗೆ ನೇಮಕಾತಿಯಲ್ಲೂ ಮಹಿಳಾ ಮೀಸಲಾತಿ!
– ಶೇ.33ರಷ್ಟು ಮಹಿಳೆಯರನ್ನು ನೇಮಕಕ್ಕೆ ಸೂಚನೆ
– ಸರ್ಕಾರದ ಮಹತ್ವದ ಆದೇಶ: ಮಹಿಳೆಯರಿಗೆ ಗುಡ್ ನ್ಯೂಸ್

NAMMUR EXPRESS NEWS
ಬೆಂಗಳೂರು : ಹೊರಗುತ್ತಿಗೆ ನೇಮಕಾತಿಯಲ್ಲಿಯೂ ಮೀಸಲಾತಿ ಕಡ್ಡಾಯಗೊಳಿಸಲಾಗಿದೆ. ರಾಜ್ಯ ಸರ್ಕಾರದಿಂದ ಈ ಕುರಿತಾಗಿ ಅಧಿಕೃತ ಆದೇಶ ಹೊರಡಿಸಲಾಗಿದೆ. ವಾಹನ ಚಾಲಕರು, ಡೇಟಾ ಎಂಟ್ರಿ ಆಪರೇಟರ್, ಸ್ವಚ್ಛತಾ ಸಿಬ್ಬಂದಿ, ಗ್ರೂಪ್ ಡಿ ಹುದ್ದೆಗಳ ಹೊರಗುತ್ತಿಗೆ ನೇಮಕದಲ್ಲಿ ಮೀಸಲಾತಿ ಕಡ್ಡಾಯಗೊಳಿಸಲಾಗಿದೆ. ಇದರ ಅನ್ವಯ ಶೇಕಡ 33 ರಷ್ಟು ಮಹಿಳೆಯರನ್ನು ನೇಮಕ ಮಾಡಿಕೊಳ್ಳಬೇಕಿದೆ. ಈ ಮೂಲಕ ಹೊರಗುತ್ತಿಗೆಯಲ್ಲೂ ಮೀಸಲಾತಿ ಕಡ್ಡಾಯಗೊಳಿಸಿ ಸರ್ಕಾರದಿಂದ ಮಹತ್ವದ ಆದೇಶ ಹೊರಡಿಸಲಾಗಿದೆ.

Categories
ಉದ್ಯೋಗ ಸುದ್ದಿ ಮಾಹಿತಿ

ಉದ್ಯೋಗ ಸಿಗಬೇಕಾದ್ರೆ ಆಗ್ಬೇಕು ಆಲ್ ರೌಂಡರ್!

ಯೂತ್ ಕಾರ್ನರ್
ಉದ್ಯೋಗ ಸಿಗಬೇಕಾದ್ರೆ ಆಗ್ಬೇಕು ಆಲ್ ರೌಂಡರ್!
– ಉದ್ಯೋಗ ಪಡೆಯಲು ಏನೇನು ಅರ್ಹತೆ ಬೇಕು.?
– ಸರ್ಕಾರಿ ಉದ್ಯೋಗ ಪಡೆಯೋದು ಹೇಗೆ..?
– ಯುವ ಜನತೆ ಉದ್ಯೋಗ ಪಡೆಯುವುದು ಸುಲಭ ಇಲ್ಲ

NAMMUR EXPRESS NEWS
ಉದ್ಯೋಗ ದೇಶದ ದೊಡ್ಡ ಸಮಸ್ಯೆ ಆಗಿ ಮಾರ್ಪಡುತ್ತಿದೆ. ಓದಿದರೂ ಬೆಲೆ ಇಲ್ಲ ಎಂಬ ಮಾತು ಎಲ್ಲೆಡೆ ಕೇಳಿ ಬರುತ್ತಿದೆ. ಆದರೆ ಇದು ಡಿಜಿಟಲ್ ಜಮಾನ. ಇಲ್ಲಿ ಕೌಶಲ್ಯ ಇದ್ದವರಿಗೆ ಅವಕಾಶ. ಬರೀ ಓದಿನ ಅಂಕದ ಚೌಕಟ್ಟು ಕೂಡ ಕೆಲವೊಮ್ಮೆ ಕೆಲಸಕ್ಕೆ ಬರುವುದಿಲ್ಲ.!

ಸರ್ಕಾರಿ ಉದ್ಯೋಗ ಪಡೆಯುವುದು ಕನಸು

ಸರ್ಕಾರಿ ಉದ್ಯೋಗ ಎಂದರೆ ಅದೇನೋ ಎಲ್ಲರಿಗೂ ಸೇಫ್ ಎಂಬ ಮನೋಭಾವನೆ. ಜೀವನದ ಅಮೂಲ್ಯವಾದ ಸಂಪತ್ತನ್ನು ಮತ್ತು ಜೀವನಕ್ಕೆ ಬೇಕಾದ ಅತ್ಯಮೂಲ್ಯ ವಸ್ತು ಒಂದು ಸಿಕ್ಕ ಹಾಗೆ. ಸರ್ಕಾರಿ ಸ್ಥಾನಗಳಲ್ಲಿ ಅಧಿಕಾರವನ್ನು ಹೊಂದಿದ್ದು, ಸ್ಥಿರವಾದ ಸಂಬಳದಿಂದ ಬೆಂಬಲಿತವಾದ ಆರಾಮದಾಯಕ ಜೀವನವನ್ನು ಖಾತ್ರಿಗೊಳಿಸುತ್ತದೆ. 60 ವರ್ಷ ವಯಸ್ಸಿನವರೆಗೆ ಉದ್ಯೋಗ ಭದ್ರತೆ ಖಾತರಿಯೊಂದಿಗೆ, ವ್ಯಕ್ತಿಗಳು ವಿವಿಧ ಪ್ರಯೋಜನಗಳು, ಭತ್ಯೆಗಳು ಮತ್ತು ಸರ್ಕಾರಿ ರಜಾದಿನಗಳನ್ನು ಆನಂದಿಸುತ್ತಾರೆ. ಸರ್ಕಾರಿ ಹುದ್ದೆಗಳ ಸ್ಪರ್ಧೆಯು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ, ಆದರೆ ಅವಕಾಶ ಮಾತ್ರ ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಕೊಟ್ಟಂತಾಗಿದೆ.

ಸರ್ಕಾರಿ ಉದ್ಯೋಗ ಪಡೆಯುವುದು ಹೇಗೆ?

ಉದ್ಯೋಗ ಹುಡುಕುತ್ತಿದ್ದರೆ, ಮೊದಲು ಕೇಂದ್ರ ಸರ್ಕಾರಿ ಉದ್ಯೋಗ ಅಥವಾ ರಾಜ್ಯ ಸರ್ಕಾರಿ ಉದ್ಯೋಗವನ್ನು ಮುಂದುವರಿಸಲು ಬಯಸುತ್ತೀರಾ ಎಂದು ನಿರ್ಧರಿಸಿ. ನಂತರ, ನೀವು ಆಸಕ್ತಿ ಹೊಂದಿರುವ ನಿರ್ದಿಷ್ಟ ಸ್ಥಾನ ಅಥವಾ ಕ್ಷೇತ್ರವನ್ನು ನಿರ್ಧರಿಸಿ. ಆಯ್ಕೆ ಮಾಡಿದ ಪೋಸ್ಟ್ ಅರ್ಹತೆಗಳು ಮತ್ತು ಆಯ್ಕೆ ಪ್ರಕ್ರಿಯೆಗಳೊಂದಿಗೆ ಆಯ್ಕೆಯು ಸ್ಪರ್ಧಾತ್ಮಕ ನೇಮಕಾತಿ ಪರೀಕ್ಷೆಯನ್ನು ಒಳಗೊಂಡಿದ್ದರೆ, ಪರೀಕ್ಷೆಯ ಪಠ್ಯಕ್ರಮದ ಬಗ್ಗೆ ಜ್ಞಾನವನ್ನು ಪಡೆದುಕೊಳ್ಳಿ. ಅಗತ್ಯ ಮಾಹಿತಿ ಮತ್ತು ಪುಸ್ತಕಗಳನ್ನು ಸಂಗ್ರಹಿಸಿ ಮತ್ತು ನಿಮ್ಮ ಓದುವಿಕೆಯನ್ನು ಪ್ರಾರಂಭಿಸಿ. ನಿಮ್ಮ ಆಸಕ್ತಿಯ ಆ ಸದರಿ ಹುದ್ದೆಗೆ ಅಥವಾ ಯಾವುದೇ ಸರ್ಕಾರಿ ಹುದ್ದೆಗೆ ಅಧಿಸೂಚನೆ ಹೊರಡಿಸಿದಾಗ ಅರ್ಜಿ ಸಲ್ಲಿಸಿ, ಪರೀಕ್ಷೆ ಬರೆಯಿರಿ.

ಖಾಸಗಿ ಉದ್ಯೋಗ ಪಡೆಯುವುದು ಹೇಗೆ?

ಉದ್ಯೋಗವನ್ನು ಖಾತ್ರಿಪಡಿಸಿಕೊಳ್ಳುವುದು ಶೈಕ್ಷಣಿಕ ಅರ್ಹತೆಗಳನ್ನು ಮೀರಿದೆ. ಉದ್ಯೋಗದಾತರು ಸಾಮಾನ್ಯವಾಗಿ ಕೌಶಲ್ಯಗಳು, ಗುಣಲಕ್ಷಣಗಳು ಮತ್ತು ಅನುಭವಗಳ ಸಂಯೋಜನೆಯನ್ನು ಹುಡುಕುತ್ತಾರೆ. ನಿಮ್ಮ ಅಧ್ಯಯನದ ಜೊತೆಗೆ ನಿಮ್ಮ ಉದ್ಯೋಗಾವಕಾಶವನ್ನು ಹೆಚ್ಚಿಸುವ ಕೆಲವು ಗುಣಗಳು ಈಗ ಕಡ್ಡಾಯ.

ವಾಕ್ ಸಾಮರ್ಥ್ಯ (Communication Skill)

ವೃತ್ತಿಪರ ಜಗತ್ತಿನಲ್ಲಿ ಲಿಖಿತ ಮತ್ತು ಮೌಖಿಕ ಎರಡೂ ಪರಿಣಾಮಕಾರಿ ಸಂವಹನ ಹಾಗೂ ನಿರ್ಣಾಯಕವಾಗಿದೆ. ಸ್ಪಷ್ಟ ಅಭಿವ್ಯಕ್ತಿ ಮತ್ತು ಆಲೋಚನೆಗಳನ್ನು ತಿಳಿಸುವ ಸಾಮರ್ಥ್ಯವು ಹೆಚ್ಚು ಮೌಲ್ಯಯುತವಾಗಿದೆ.

ಹೊಂದಿಕೊಳ್ಳುವಿಕೆ (Adaptability)

ಉದ್ಯೋಗದಾತರು ಹೊಸ ಸವಾಲುಗಳು, ತಂತ್ರಜ್ಞಾನಗಳು ಮತ್ತು ಕೆಲಸದ ವಾತಾವರಣಕ್ಕೆ ಹೊಂದಿಕೊಳ್ಳುವ ಅಭ್ಯರ್ಥಿಗಳನ್ನು ಮೆಚ್ಚುತ್ತಾರೆ.

ನಮ್ಯತೆ (Flexibility)

ಹೊಸ ಆಲೋಚನೆಗಳು, ಕಾರ್ಯಗಳು ಅಥವಾ ಯೋಜನೆಗಳಲ್ಲಿನ ಬದಲಾವಣೆಗಳಿಗೆ ಮುಕ್ತವಾಗಿರುವುದು ನಮ್ಯತೆಯನ್ನು ಪ್ರದರ್ಶಿಸುತ್ತದೆ, ಕ್ರಿಯಾತ್ಮಕ ಕೆಲಸದ ವಾತಾವರಣದಲ್ಲಿ ಹೆಚ್ಚು ಬೇಡಿಕೆಯಿರುವ ಲಕ್ಷಣವಾಗಿದೆ.

ಸಮಸ್ಯೆ-ಪರಿಹರಿಸುವ ಕೌಶಲ್ಯಗಳು (Problem-Solving Skills)

ವಿಮರ್ಶಾತ್ಮಕವಾಗಿ ಯೋಚಿಸುವ ಮತ್ತು ಸಮಸ್ಯೆಗಳನ್ನು ಸಮರ್ಥವಾಗಿ ಪರಿಹರಿಸುವ ವ್ಯಕ್ತಿಗಳನ್ನು ಉದ್ಯೋಗದಾತರು ಗೌರವಿಸುತ್ತಾರೆ.

ನೆಟ್ವರ್ಕಿಂಗ್ (Networking)

ವೃತ್ತಿಪರ ಸಂಬಂಧಗಳನ್ನು ನಿರ್ಮಿಸುವುದು ಅವಕಾಶಗಳಿಗೆ ಬಾಗಿಲು ತೆರೆಯುತ್ತದೆ. ಉದ್ಯಮದ ಈವೆಂಟ್ಗಳಿಗೆ ಹಾಜರಾಗಿ, ವೃತ್ತಿಪರರೊಂದಿಗೆ ಸಂಪರ್ಕ ಸಾಧಿಸಿ ಮತ್ತು ನಿಮ್ಮ ನೆಟ್ವರ್ಕ್ ಅನ್ನು ವಿಸ್ತರಿಸಲು ಆನೈನ್ ಪ್ಲಾಟ್ಸಾರ್ಮ್ಗಳನ್ನು ಬಳಸಿ.

ನೆನಪಿಡಿ, ನಿಮ್ಮ ಶೈಕ್ಷಣಿಕ ಸಾಧನೆಗಳ ಜೊತೆಗೆ ಈ ಗುಣಗಳ ಸಂಯೋಜನೆಯನ್ನು ಪ್ರದರ್ಶಿಸುವುದು ನಿಮ್ಮ ಉದ್ಯೋಗಾವಕಾಶವನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ ಮತ್ತು ಉದ್ಯೋಗದಲ್ಲಿ ನಿಮ್ಮನ್ನು ಎದ್ದು ಕಾಣುವಂತೆ ಮಾಡುತ್ತದೆ.

ಶ್ರಮ ಮತ್ತು ನಂಬಿಕೆ

ಯಾವುದೇ ಉದ್ಯಮ, ಕಂಪನಿ, ಸಂಸ್ಥೆಯ ಯಶಸ್ಸು ಆ ವ್ಯವಸ್ಥೆಯಲ್ಲಿ ಕೆಲಸ ಮಾಡುವವರ ಶ್ರಮ, ಕಾಳಜಿ, ನಂಬಿಕೆ, ನಿರ್ಧರಿತ ಗುರಿ ಮುಟ್ಟುವುದರ ಮೇಲೆ ನಿಂತಿದೆ. ಇಲ್ಲಿ ಎಲ್ಲರ ಮನಸ್ಥಿತಿ ಒಂದೇ ಇದ್ದಲ್ಲಿ ಏನನ್ನಾದರೂ ಸಾಧಿಸಬಹುದು. ಹಾಗಾಗಿ ಅಂತವರಿಗೆ ಅವಕಾಶ ಹೆಚ್ಚು.

ಕೌಶಲ್ಯ ಇದ್ದವರಿಗೆ ಕೆಲಸ ಗ್ಯಾರಂಟಿ!

ಕೌಶಲ್ಯ ಇದ್ದವರಿಗೆ ಕೆಲಸ ಗ್ಯಾರಂಟಿ ಯಾರು ಯಶಸ್ವಿ ವೃತ್ತಿಜೀವನದ ಹಾದಿಯನ್ನು ಹೊಂದಬೇಕೆಂದು ಇಚ್ಛಿಸುತ್ತಾರೋ ಅವರು ಕೇವಲ ಔಪಚಾರಿಕ ಶಿಕ್ಷಣಕ್ಕಿಂತ ಹೆಚ್ಚಿನದನ್ನು ಒಳಗೊಂಡಿರುತ್ತಾರೆ. ಇಂದಿನ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ವೃತ್ತಿಪರ ಜಗತ್ತಿನಲ್ಲಿ ಕೌಶಲ್ಯ ಹೊಂದಿದವರಿಗೆ ಅವಕಾಶದ ಬಾಗಿಲು ತೆಗೆದಿರುತ್ತದೆ. ವೃತ್ತಿಜೀವನಕ್ಕೆ ಪ್ರಮುಖವಾದ ನಿರ್ದಿಷ್ಟ ಕೌಶಲ್ಯಗಳನ್ನು ಅನ್ವೇಷಿಸುವಾಗ, ಪರಿಣಾಮಕಾರಿ ಸಂವಹನ, ಸಮಸ್ಯೆ-ಪರಿಹರಿಸುವುದು, ವಿಮರ್ಶಾತ್ಮಕ ಚಿಂತನೆ, ನಾಯಕತ್ವ, ತಂಡದ ಕೆಲಸ ಮತ್ತು ತಾಂತ್ರಿಕ ಪ್ರಾವೀಣ್ಯತೆಯು ವೃತ್ತಿಪರ ಯಶಸ್ಸಿನ ತಳಹದಿಯನ್ನು ರೂಪಿಸುತ್ತದೆ. ಕೌಶಲ್ಯ ವೃತ್ತಿಜೀವನದ ನವೀಕರಣಕ್ಕೆ ದಾರಿ ತೋರಿಸುತ್ತವೆ.

ತಾಂತ್ರಿಕ ಪ್ರಾವೀಣ್ಯತೆಯು ವೃತ್ತಿಜೀವನ!

ವೃತ್ತಿಪರ ಬೆಂಬಲ ವ್ಯವಸ್ಥೆಯನ್ನು ರಚಿಸಲು, ಮಾರ್ಗದರ್ಶನ ಮತ್ತು ಹೊಸ ಅವಕಾಶಗಳಿಗೆ ಬಾಗಿಲು ತೆರೆಯಲು ನೆಟ್ವರ್ಕಿಂಗ್ ಮತ್ತು ಸಂಬಂಧ-ನಿರ್ಮಾಣ ಕೌಶಲ್ಯಗಳು ಅತ್ಯಗತ್ಯ. ಸಮಯ ನಿರ್ವಹಣೆ ಮತ್ತು ಸ್ಥಿತಿಸ್ಥಾಪಕತ್ವವು ಸಮಾನವಾಗಿ ನಿರ್ಣಾಯಕವಾಗಿದೆ. ತಾಂತ್ರಿಕ ಪ್ರಾವೀಣ್ಯತೆಯು ವೃತ್ತಿಜೀವನಕ್ಕೆ ಆವಶ್ಯಕವಾಗಿದೆ. ಹೊಸ ತಂತ್ರಾಂಶಗಳನ್ನು ಸ್ವೀಕರಿಸಲು ಸಿದ್ಧತೆ ಹೊಂದಿರುವ ವ್ಯಕ್ತಿಗಳು ತಮ್ಮ ವೃತ್ತಿಜೀವನವನ್ನು ನವೀಕರಿಸುವಲ್ಲಿ ಸುಲಭವಾಗಿ ಮುನ್ನಡೆಯಬಹುದು. ಕೌಶಲ್ಯ, ಜ್ಞಾನ, ಶ್ರಮ, ನಂಬಿಕೆ, ಗುರಿ ಇದ್ದಲ್ಲಿ ಯಶಸ್ವಿ ವೃತ್ತಿಜೀವನವನ್ನು ನೀವೂ ಸಾಧಿಸಬಹುದು. ಎಲ್ಲರಿಗೂ ಬೆಸ್ಟ್ ಆಫ್ ಲಕ್.

ಲೇಖನ: ಲಿಶನ್ ಗೌಡ

Categories
ಉದ್ಯೋಗ ಸುದ್ದಿ ಮೈಸೂರು

ಮೈಸೂರಿನಲ್ಲಿ ಸರ್ಕಾರಿ ಉದ್ಯೋಗ ನೇಮಕಾತಿ..!

ಮೈಸೂರಿನಲ್ಲಿ ಸರ್ಕಾರಿ ಉದ್ಯೋಗ ನೇಮಕಾತಿ..!
– ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
– ಅರ್ಜಿ ಸಲ್ಲಿಕೆ ಹೇಗೆ? ಇಲ್ಲಿದೆ ಮಾಹಿತಿ

NAMMUR EXPRESS NEWS
ಮೈಸೂರು: ಅರಮನೆ ನಗರಿ ಮೈಸೂರಿನಲ್ಲಿ ಸರ್ಕಾರ ಉದ್ಯೋಗ ಅವಕಾಶ ಇದೆ. ಇಲ್ಲಿ ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆಯಿಂದ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ. ಅರ್ಹರಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆಯಲ್ಲಿ ಒಟ್ಟು 2 ಪ್ರಾಜೆಕ್ಟ್ ಅಸೋಸಿಯೇಟ್-I ಹುದ್ದೆಗಳು ಖಾಲಿ ಇವೆ. ಸರ್ಕಾರಿ ಉದ್ಯೋಗ ಪಡೆಯಲು ಇಚ್ಚಿಸುವ ಅಭ್ಯರ್ಥಿಗಳು ಈ ಕೂಡಲೇ ಅರ್ಜಿ ಸಲ್ಲಿಸಬೇಕು. ಮೇ 15 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದ್ದು, ಆಸಕ್ತರು ಕೂಡಲೇ ಆನ್‌ಲೈನ್‌ ನಲ್ಲಿ ಅರ್ಜಿ ಸಲ್ಲಿಸಬೇಕು ಎಂದು ಸಂಸ್ಥೆಯು ಅಧಿಸೂಚನೆಯಲ್ಲಿ ಮಾಹಿತಿ ನೀಡಿದೆ.

ನೇಮಕಾತಿ ವಿವರ ಹೀಗಿದೆ

ಸಂಸ್ಥೆ ಹೆಸರು: CFTRI
ಹುದ್ದೆ ಹೆಸರು: ಪ್ರಾಜೆಕ್ಟ್ ಅಸೋಸಿಯೇಟ್-I
ಒಟ್ಟು ಹುದ್ದೆ: ಎರಡು
ಮಾಸಿಕ ವೇತನ: 25,000 ರೂಪಾಯಿ
ಪೋಸ್ಟಿಂಗ್: ಮೈಸೂರು
ಅರ್ಜಿ ಸಲ್ಲಿಕೆ ಕೊನೆ ದಿನ: 2024 ಮೇ 15.

ಶೈಕ್ಷಣಿಕ ಅರ್ಹತೆ:

ಆಸಕ್ತ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಇಲ್ಲವೇ ಮಂಡಳಿಯಲ್ಲಿ ಬಯೋಕೆಮಿಸ್ಟ್ರಿ/ಬಯೋಟೆಕ್ನಾಲಜಿ/ ಮೈಕ್ರೋಬಯಾಲಜಿಯಲ್ಲಿ ಎಂ.ಎಸ್ಸಿ, ಎಂ.ಟೆಕ್ ಪೂರ್ಣಗೊಳಿಸಿರುವುದು ಕಡ್ಡಾಯ ಎಂದು ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆ ಅಧಿಸೂಚನೆ ಮಾಹಿತಿ ನೀಡಿದೆ.

ವಯೋಮಿತಿ ವಿವರ:

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು ನಿಯಮಾನುಸಾರ ಇರಬೇಕೆಂದು ತಿಳಿಸಲಾಗಿದೆ. ಇನ್ನು ಜಾತಿ ಮೀಸಲಾತಿ ಅನುಗುಣವಾಗಿ ಅಭ್ಯರ್ಥಿಗಳಿಗೆ ವಯಸ್ಸಿನ ಮಿತಿ ಸ್ವಲ್ಪ ಸಡಿಲಿಕೆ ಸಿಗಲಿದೆ ಎಂದು ಕೇಂದ್ರೀಯ ಆಹಾರ ತಾಂತ್ರಿಕ ಸಂಸ್ಥೆ ಹೇಳಿದೆ.

ಆಯ್ಕೆ ಪ್ರಕ್ರಿಯೆಯ ಮಾಹಿತಿ :

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಯಾವುದೇ ಪರೀಕ್ಷೆ ಇಲ್ಲ. ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುವುದು. ಆಯ್ಕೆ ಆಗುವವರಿಗೆ ಮಾಸಿಕ 25,000 ರೂಪಾಯಿ ವೇತನ ಸಹಿತ ಮೈಸೂರಿನಲ್ಲಿ ಪೋಸ್ಟಿಂಗ್ ನೀಡಲಾಗುವುದು. ಅರ್ಜಿ ಸಲ್ಲಿಸುವ ಯಾವುದೇ ವರ್ಗದ ಅಭ್ಯರ್ಥಿಗಳಿಗೂ ಅರ್ಜಿ ಶುಲ್ಕ ನಿಗದಿ ಮಾಡಲಾಗಿಲ್ಲ. ಉಚಿತವಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹದು.

ಅರ್ಜಿ ಸಲ್ಲಿಕೆ ಹೇಗೆ?

ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಿದೆ. ಅದಕ್ಕಾಗಿ ನೀವು ಇಲ್ಲಿ ನೀಡಲಾಗಿರುವ ಅಧಿಕೃತ ಜಾಲತಾಣದ cftri.res.in ಲಿಂಕ್ ಮೇಲೆ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಬಹುದು. ಕೊನೆಯ ದಿನಾಂಕ ಮೇ 05ರವರೆಗೂ ಕಾಯದೇ ಈ ಕೂಡಲೇ ಅರ್ಜಿ ಹಾಕಬೇಕು.

Categories
ಉದ್ಯೋಗ ಸುದ್ದಿ

ಅಗ್ನಿವೀರರ ಆಯ್ಕೆ: ಅರ್ಜಿ ಸಲ್ಲಿಸೋದು ಹೇಗೆ?

ಅಗ್ನಿವೀರರ ಆಯ್ಕೆ: ಅರ್ಜಿ ಸಲ್ಲಿಸೋದು ಹೇಗೆ?
– ಏ.22ರಿಂದ ಆರಂಭವಾಗಿ ಮೇ 3ರ ತನಕ ವಿವಿಧ ದಿನಗಳಲ್ಲಿ ನೇಮಕ
– ಮಂಗಳೂರು ಸೇನಾ ಕಚೇರಿ ವಲಯದಿಂದ ಪ್ರಕ್ರಿಯೆ

NAMMUR EXPRESS NEWS
ಭಾರತೀಯ ಸೇನೆಯು ಅಗ್ನಿವೀರರ ನೇಮಕಾತಿಗೆ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಏ.22ರಿಂದ ನೇಮಕ ರ್ಯಾಲಿಗಳು ನಡೆಯಲಿವೆ. ದೇಶದ ವಿವಿಧ ಸೇನಾ ವಲಯ ಕಚೇರಿಗಳು ನೇಮಕಾತಿ ಪ್ರಕ್ರಿಯೆಗಳನ್ನು ನಡೆಸುತ್ತಿದ್ದು, ರಾಜ್ಯದಲ್ಲಿ ಮಂಗಳೂರು ಸೇನಾ ಕಚೇರಿ ನಡೆಸುವ ರ್ಯಾಲಿಗೆ ವೇಳಾಪಟ್ಟಿ ಪ್ರಕಟಿಸಲಾಗಿದೆ. ಏ.22ರಿಂದ ಮೇ 3ರ ತನಕ ವಿವಿಧ ದಿನಗಳಲ್ಲಿ ನೇಮಕ ಪ್ರಕ್ರಿಯೆಗಳು ನಡೆಯಲಿವೆ. ಪ್ರತಿ ದಿನವೂ ಬೇರೆ ಬೇರೆ ಸಮಯದಲ್ಲಿ ವರದಿ ಮಾಡಿಕೊಳ್ಳಲು ತಿಳಿಸಲಾಗಿದೆ. ಈ ಸಮಯಕ್ಕೆ ಸರಿಯಾಗಿ ಅಭ್ಯರ್ಥಿಗಳು ಸ್ಥಳದಲ್ಲಿ ಹಾಜರಿರಲು ಸೂಚಿಸಲಾಗಿದೆ.

ಮಂಗಳೂರು ಸೇನಾ ಕಚೇರಿ ವಲಯದಿಂದ ನಡೆಯುವ ರ್ಯಾಲಿಯಲ್ಲಿ ಬಾಗಲಕೋಟೆ, ವಿಜಯಪುರ, ಧಾರವಾಡ, ಉತ್ತರಕನ್ನಡ, ದಕ್ಷಿಣ ಕನ್ನಡ, ಉಡುಪಿ, ದಾವಣಗೆರೆ, ಗದಗ, ಹಾವೇರಿ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಯ ಅಭ್ಯರ್ಥಿಗಳು ಭಾಗವಹಿಸಬಹುದಾಗಿದೆ. ಈ ನೇಮಕಾತಿಗೆ ಕಳೆದ ಫೆಬ್ರವರಿ 23ರಿಂದ ಮಾರ್ಚ್ 22ರ ತನಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಟೆಕ್ನಿಕಲ್, ಜನರಲ್ ಡ್ಯೂಟಿ, ಆಫೀಸ್ ಅಸಿಸ್ಟೆಂಟ್/ಸ್ಟೋರ್ ಕೀಪರ್ ಹಾಗೂ ಟ್ರೇಡ್ಸ್‌ಮನ್ ಹುದ್ದೆಗಳ ನೇಮಕಾತಿಗೆ ಈ ರ್ಯಾಲಿ ನಡೆಯಲಿದೆ. ವಿವರಗಳಿಗೆ: https://joinindianarmy.nic.in