Categories
ಉದ್ಯೋಗ ಸುದ್ದಿ ತೀರ್ಥಹಳ್ಳಿ

ತೀರ್ಥಹಳ್ಳಿಯಲ್ಲಿ ಉದ್ಯೋಗ ಅವಕಾಶ

ತೀರ್ಥಹಳ್ಳಿಯಲ್ಲಿ ಉದ್ಯೋಗ ಅವಕಾಶ
– ಶಿಕ್ಷಕರು, ಉಪನ್ಯಾಸಕರು ಸೇರಿ ವಿವಿಧ ಹುದ್ದೆ

NAMMUR EXPRESS JOB NEWS
ತೀರ್ಥಹಳ್ಳಿ ತಾಲೂಕು ಒಕ್ಕಲಿಗರ ಸಂಘದ ಸಹ್ಯಾದ್ರಿ ಶಿಕ್ಷಣ ಸಂಸ್ಥೆ ತೀರ್ಥಹಳ್ಳಿ ಕುಶಾವತಿ ಇಲ್ಲಿ ಹಲವು ಉದ್ಯೋಗ ಲಭ್ಯವಿದೆ.

ಸಹ್ಯಾದ್ರಿ ಕಾಂಪೋಸಿಟ್ ಜೂನಿಯರ್ ಕಾಲೇಜು ಸಹ್ಯಾದ್ರಿ ಸೆಂಟ್ರಲ್ [ICSE] ಮತ್ತು ಸಹ್ಯಾದ್ರಿ ರಾಜ್ಯ, ತೀರ್ಥಹಳ್ಳಿಗೆ ಈ ಕೆಳಗಿನ ಶಿಕ್ಷಕರ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಕ್ರ.ಸಂಖ್ಯೆ ಖಾಲಿ ಹುದ್ದೆ ಪೋಸ್ಟ್‌ಗಳು ವಿದ್ಯಾರ್ಹತೆ ನಿರ್ದಿಷ್ಟತೆ

01 ಇಂಗ್ಲಿಷ್ 03 ಬಿ ಎ , ಬಿ .ಎಡ್ /ಎಮ್ ಎ , ಬಿ .ಎಡ್ ಇಂಗ್ಲಿಷ್ ಮೇಜರ್

02 ಜೀವಶಾಸ್ತ್ರ 01 ಬಿ .ಎಸ್ ಸಿ , ಬಿ .ಎಡ್ /ಎಂ. ಎಸ್ ಸಿ , ಬಿ .ಎಡ್

ಎಂ. ಎಸ್ ಸಿ ಸಸ್ಯಶಾಸ್ತ್ರ ಅಥವಾ ಪ್ರಾಣಿಶಾಸ್ತ್ರ ಬಿ .ಎಸ್ ಸಿ ಸಿಬಿಝೆಡ್

03 ವಿಜ್ಞಾನ 02 ಬಿ .ಎಸ್ ಸಿ , ಬಿ .ಎಡ್ , ಎಂ .ಎಸ್ ಸಿ , ಬಿ .ಎಡ್, ಬಿ.ಎಸ್ಸಿ, ಪಿಸಿಎಂ

04 ಗಣಿತಶಾಸ್ತ್ರ 01 ಎಂ.ಎಸ್ಸಿ, ಬಿ.ಎಡ್
M.Sc ಗಣಿತ

05 ಸಮಾಜ ವಿಜ್ಞಾನ 02 ಬಿಎ, ಬಿ.ಎಡ್/ಎಂಎ, ಬಿ.ಎಡ್
ಪದವಿಯಲ್ಲಿ ಭೂಗೋಳ/ಇತಿಹಾಸ

06 ಕಂಪ್ಯೂಟರ್ 01 ಕಂಪ್ಯೂಟರ್ ನಲ್ಲಿ ಬಿ.ಎಸ್ಸಿ/ಎಂ.ಎಸ್ಸಿ ವಿಜ್ಞಾನ

07 ನರ್ಸರಿ ಶಿಕ್ಷಕ 02 ಎನ್.ಟಿ.ಟಿ

08 ಅಟೆಂಡರ್ಸ್, ಪುರುಷ 1, ಮಹಿಳೆ 1

ಆಸಕ್ತ ಅಭ್ಯರ್ಥಿಗಳು ಬೆಳಿಗ್ಗೆ 10:30 ಗಂಟೆಗೆ ಎಲ್ಲಾ ಮೂಲಗಳೊಂದಿಗೆ ವಾಕ್-ಇನ್-ಇಂಟರ್‌ವ್ಯೂಗೆ ಹಾಜರಾಗಬಹುದು. 12/04/2024 ಶುಕ್ರವಾರದಂದು ಸಹ್ಯಾದ್ರಿ ಶಾಲೆಯಲ್ಲಿ, ಕುಶಾವತಿ ತೀರ್ಥಹಳ್ಳಿ. ಶಿಕ್ಷಕರ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಇಂಗ್ಲಿಷ್‌ನಲ್ಲಿ ತರಗತಿಯನ್ನು ನೀಡಬೇಕು. ಹಾಸ್ಟೆಲ್ ಸೌಲಭ್ಯವಿದೆ.

ಸಂಪರ್ಕ ಸಂಖ್ಯೆ : 9448238500, 9449699049, 9448171131, 9449455135, 9480765888, 9448309494
08181-227314, 228035, 228810

Categories
ಉದ್ಯೋಗ ಸುದ್ದಿ ಮಾಹಿತಿ ರಾಜ್ಯ

ಪದವೀಧರರಿಗೆ ಗುಡ್‌ನ್ಯೂಸ್‌

ಪದವೀಧರರಿಗೆ ಗುಡ್‌ನ್ಯೂಸ್‌
-ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ನಲ್ಲಿ ನೇಮಕಾತಿ
– 93 ಬ್ಯಾಂಕ್‌ ಸಹಾಯಕ ಹುದ್ದೆಗೆ ಅರ್ಜಿ ಸಲ್ಲಿಸಿ

NAMMUR EXPRESS NEWS
ಬೆಂಗಳೂರು: ಬೆಂಗಳೂರಿನಲ್ಲೇ ಉದ್ಯೋಗ ಹೊಂದಬೇಕು ಎನ್ನುವ ಕನಸು ಕಾಣುವವರಿಗೆ ಇಲ್ಲಿದೆ ಸುವರ್ಣಾವಕಾಶ. ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ನಿಯಮಿತದ ಬೆಂಗಳೂರು ಕಚೇರಿಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. 93 ಬ್ಯಾಂಕ್‌ ಸಹಾಯಕ ಹುದ್ದೆ ಇದಾಗಿದ್ದು, ಆಸಕ್ತರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಕೊನೆಯ ದಿನ ಏಪ್ರಿಲ್‌ 6 .

– ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ

ಸಾಮಾನ್ಯ 85, ಕಲ್ಯಾಣ ಕರ್ನಾಟಕ ವ್ಯಾಪ್ತಿಗೆ 8 ಹುದ್ದೆಗಳಿವೆ. ಅಭ್ಯರ್ಥಿಗಳು ಅಂಗೀಕೃತ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ ಪಡೆದಿರಬೇಕು. ಸಾಮಾನ್ಯ ಮತ್ತು ಹಿಂದುಳಿದ ವರ್ಗಗಳ ಅಭ್ಯರ್ಥಿಗಳು ಭಾಷಾ ವಿಷಯಗಳು ಸೇರಿದಂತೆ ಕ್ರೋಢೀಕೃತ ಶೇ. 55ರಷ್ಟು ಅಂಕ ಹಾಗೂ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು ಮತ್ತು ಅಂಗವಿಕಲ ಅಭ್ಯರ್ಥಿಗಳು ಕನಿಷ್ಠ ಶೇ. 50ರಷ್ಟು ಅಂಕಗಳೊಂದಿಗೆ ತೇರ್ಗಡೆಯಾಗಿರಬೇಕು.

– ವಯೋಮಿತಿ

ಅಭ್ಯರ್ಥಿಗಳ ಕನಿಷ್ಠ ವಯಸ್ಸು 18 ವರ್ಷ ಮತ್ತು ಗರಿಷ್ಠ ವಯಸ್ಸು 35 ವರ್ಷ. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಲಭ್ಯ. ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ-Iರ ಅಭ್ಯರ್ಥಿಗಳಿಗೆ 5 ವರ್ಷ, ಇತರ ಹಿಂದುಳಿದ ಜಾತಿ, ಹಿಂದುಳಿದ ವರ್ಗಗಳ ಅಂದರೆ ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ 3 ವರ್ಷ ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷಗಳ ರಿಯಾಯಿತಿ ಇದೆ.

– ಅರ್ಜಿ ಶುಲ್ಕ

ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ-1ರ ಅಭ್ಯರ್ಥಿಗಳು 500 ರೂ. + ಜಿಎಸ್‌ಟಿ, ಸಾಮಾನ್ಯ ವರ್ಗ ಮತ್ತು ಇತರ ಹಿಂದುಳಿದ ಜಾತಿ, ಹಿಂದುಳಿದ ವರ್ಗಗಳ ಅಂದರೆ ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳು 1,000 ರೂ. + ಜಿಎಸ್‌ಟಿಯನ್ನು ಅರ್ಜಿ ಶುಲ್ಕವಾಗಿ ಪಾವತಿಸಬೇಕು.

– ಆಯ್ಕೆ ವಿಧಾನ ಮತ್ತು ಮಾಸಿಕ ವೇತನ

ಅರ್ಜಿ ಪರಿಶೀಲನೆಯ ನಂತರ ಅರ್ಹ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ನಡೆಸಲಾಗುತ್ತದೆ. ಬಳಿಕ ಮೌಖಿಕ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದವರಿಗೆ 28,425 ರೂ.- 87,125 ರೂ. ಮಾಸಿಕ ವೇತನ ಸಿಗಲಿದೆ. ಗಮನಿಸಿ ಅಭ್ಯರ್ಥಿಯ ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರವನ್ನು ಒಂದು ಹಾಳೆಯ ಮೇಲಿಟ್ಟು ಆದರ ಕೆಳಗೆ ಕಪ್ಪು ಶಾಹಿಯ ಸ್ಕೆಚ್/ ಮಾರ್ಕರ್ ಪೆನ್‌ನಲ್ಲಿ ಸಹಿಯನ್ನು ಸ್ಕ್ಯಾನ್ ಮಾಡಿ ಅರ್ಜಿ ಜತೆಗೆ ಅಪ್‌ಲೋಡ್‌ ಮಾಡಬೇಕು. ಭಾವಚಿತ್ರ ಹಾಗೂ ಸಹಿಯನ್ನು ಅಪ್‌ಲೋಡ್‌ ಮಾಡದ ಅರ್ಜಿಗಳನ್ನು ತಿರಸ್ಕರಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

Categories
ಉದ್ಯೋಗ ಸುದ್ದಿ ಮಾಹಿತಿ

ರೈಲ್ವೆಯಲ್ಲಿ ಮತ್ತೆ 4,660 ಹುದ್ದೆ: ನೀವೂ ಅರ್ಜಿ ಹಾಕಬಹುದು!

ರೈಲ್ವೆಯಲ್ಲಿ ಮತ್ತೆ 4,660 ಹುದ್ದೆ: ನೀವೂ ಅರ್ಜಿ ಹಾಕಬಹುದು!
– 4,208 ಕಾನ್ಸ್‌ಟೆಬಲ್, 452 ಸಬ್ ಇನ್ಸ್‌ಪೆಕ್ಟ‌ರ್ ಹುದ್ದೆ
– ಅರ್ಜಿ ಸಲ್ಲಿಕೆ ಕೊನೆ ದಿನಾಂಕ ಯಾವಾಗ…?

NAMMUR EXPRESS NEWS
ಭಾರತೀಯ ರೈಲ್ವೆಯು ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಮತ್ತೊಂದು ಅಧಿಸೂಚನೆ ಹೊರಡಿಸಿದೆ. ಈ ಮೂಲಕ ವರ್ಷದಲ್ಲಿ ಮೂರನೇ ಅಧಿಸೂಚನೆ ಹೊರಡಿಸುವ ಮೂಲಕ ಹುದ್ದೆಗಳ ಭರ್ತಿಗೆ ಅರ್ಹರಿಂದ ಅರ್ಜಿ ಆಹ್ವಾನಿಸಿದೆ. ಕೇಂದ್ರ ಸರ್ಕಾರಿ ಉದ್ಯೋಗ ಪಡೆಯಲು ಬಯಸುವ ಅಭ್ಯರ್ಥಿಗಳು ಈ ಅವಕಾಶ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಲಾಗಿದ್ದು, ನೇಮಕಾತಿ ಸಂಪೂರ್ಣ ವಿವರ ಈ ಕೆಳಕಂಡಂತಿದೆ. ಭಾರತೀಯ ರೈಲ್ವೆ ಇಲಾಖೆ ವ್ಯಾಪ್ತಿಯಲ್ಲಿ ರೈಲ್ವೆಯ ರಕ್ಷಣಾ ಸಿಬ್ಬಂದಿ ಪಡೆಯ ರೈಲ್ವೆ ಸಬ್‌ಇನ್ಸ್‌ಪೆಕ್ಟ‌ರ್, ರೈಲ್ವೆ ಕಾನ್ಸ್‌ಟೇಬಲ್‌ ಸೇರಿ ಒಟ್ಟು 4660 ಖಾಲಿ ಹುದ್ದೆಗಳ ಭರ್ತಿಗೆ ಅರ್ಹರಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಅಲ್ಲದೆ ಆರ್‌ಆರ್‌ಬಿ ಆರ್‌ಪಿಎಫ್‌ನ ಎಸ್‌ಐ, ಕಾನ್ಸ್‌ಟೇಬಲ್ ಹುದ್ದೆಗಳ ಕುರಿತು ಆಸಕ್ತಿ ಇರುವವರು ಈ ಕೆಳಕಂಡ ಮಾಹಿತಿಯಲ್ಲಿ ತಿಳಿಯಬಹುದಾಗಿದೆ.

ನೇಮಕಾತಿ ವಿವರ:

ಸಂಸ್ಥೆ ಹೆಸರು: ಭಾರತೀಯ ರೈಲ್ವೆ
ಹುದ್ದೆ ಹೆಸರು: ಆರ್‌ಪಿಎಫ್ ಸಬ್ ಇನ್ಸ್‌ಪೆಕ್ಟ‌ರ್, ಆರ್‌ಪಿಎಸ್‌ ಕಾನ್ಸ್‌ಟೇಬಲ್‌
ರೈಲ್ವೆ ಸಬ್ ಇನ್ಸ್‌ಪೆಕ್ಟ‌ರ್ ಹುದ್ದೆಗಳ ಸಂಖ್ಯೆ: 452
ರೈಲ್ವೆ ಕಾನ್ಸ್‌ಟೇಬಲ್ ಹುದ್ದೆಗಳ ಸಂಖ್ಯೆ: 4208
ಖಾಲಿ ಹುದ್ದೆ ಒಟ್ಟು ಸಂಖ್ಯೆ: 4660
ಮಾಸಿಕ ವೇತನ: 21700 ರಿಂದ 35,400 ರೂಪಾಯಿ
ಅರ್ಜಿ ಸಲ್ಲಿಕೆ ಕೊನೆ ದಿನಾಂಕ: ಏಪ್ರಿಲ್ 1
ಪೋಸ್ಟಿಂಗ್‌- ದೇಶದ ರೈಲ್ವೆ ಇಲಾಖೆ ವ್ಯಾಪ್ತಿಯಲ್ಲಿ ಎಲ್ಲಿಯಾದರೂ

ವಿದ್ಯಾರ್ಹತೆ : ಸಬ್‌ಇನ್ಸ್‌ಪೆಕ್ಟ‌ರ್ ಹುದ್ದೆಗೆ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ ಪೂರ್ಣಗೊಳಿಸಿರಬೇಕು.
ಕಾನ್ಸ್‌ಟೇಬಲ್‌ ಹುದ್ದೆಗೆ ಅಭ್ಯರ್ಥಿಗಳು ಅಂಗೀಕೃತ ಶಿಕ್ಷಣ ಸಂಸ್ಥೆಗಳಿಂದ 10ನೇ ತರಗತಿ ಅಥವಾ ತತ್ಸಮಾನ ಪರೀಕ್ಷೆ ಉತ್ತೀರ್ಣಗೊಳಿಸಿರಬೇಕು ಎಂದು ಅಧಿಸೂಚನೆ ನೀಡಲಾಗಿದೆ.
ವಯೋಮಿತಿ : ಸಬ್‌ಇನ್ಸ್‌ಪೆಕ್ಟರ್ ಹುದ್ದೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಮುಂದಿನ ಜುಲೈ 01ಕ್ಕೆ 20-28 ವರ್ಷವಾಗಿರಬೇಕು. ಉಳಿದಂತೆ ಕಾನ್ಸ್‌ಟೇಬಲ್ ಹುದ್ದೆಯ ಅಭ್ಯರ್ಥಿಗಳಿಗೆ ಅದೇ ದಿನಾಂಕಕ್ಕೆ 18-28 ವರ್ಷ ವಯಸ್ಸಾಗಿರಬೇಕು.
ಅರ್ಜಿ ಶುಲ್ಕ : ಸಾಮಾನ್ಯ ಅಭ್ಯರ್ಥಿಗಳು, ಒಬಿಸಿ
ಅಭ್ಯರ್ಥಿಗಳಿಗೆ ಶುಲ್ಕ: 500 ರೂ. ಎಸ್‌ಸಿ, ಎಸ್‌ಟಿ, ಮಾಜಿ ಸೈನಿಕ, ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕ: 250 ರೂ.

ಪ್ರಮುಖ ದಿನಾಂಕಗಳು

ಆನ್‌ಲೈನ್ ಅಪ್ಲಿಕೇಶನ್‌ ಸ್ವೀಕಾರ ಆರಂಭಿಕ ದಿನಾಂಕ: 15-04-2024
ಆನ್‌ಲೈನ್ ಅಪ್ಲಿಕೇಶನ್ ಸಲ್ಲಿಸಲು ಕೊನೆ ದಿನಾಂಕ: 14-05-2024
ಈ ಮೇಲಿನ ಹುದ್ದೆಗಳಿಗೆ ಅರ್ಜಿ ಲಿಂಕ್ ಅನ್ನು 2024ರ ಏಪ್ರಿಲ್ 15 ರಂದು ಆಯಾ ರೈಲ್ವೆ ವಲಯಗಳ ಪ್ರಾದೇಶಿಕ ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಲಾಗಿದೆ. ಅಭ್ಯರ್ಥಿಗಳು ಅಧಿಸೂಚನೆಯನ್ನು ಲಿಂಕ್ ಗೆ ಭೇಟಿ www.rrbbnc.gov.in ಪಡೆದುಕೊಳ್ಳಬೇಕು.

Categories
ಉದ್ಯೋಗ ಸುದ್ದಿ ಬೆಂಗಳೂರು ರಾಜ್ಯ

ಅಂಚೆ ಇಲಾಖೆಯಲ್ಲಿ 55,000 ಉದ್ಯೋಗ!

ಅಂಚೆ ಇಲಾಖೆಯಲ್ಲಿ 55,000 ಉದ್ಯೋಗ!
– 10ನೇ ಕ್ಲಾಸ್ ಆದವರಿಗೆ 81,000 ರೂ.ವರೆಗೆ ವೇತನ
– ಯಾರಿಗೆ ಸಿಗುತ್ತೆ ಕೆಲಸ…!.. ಇಲ್ಲಿದೆ ಡೀಟೇಲ್ಸ್

NAMMUR EXPRESS NEWS
ಭಾರತೀಯ ಅಂಚೆ ಇಲಾಖೆಯಲ್ಲಿ ಉದ್ಯೋಗ ಅವಕಾಶ 55,000 ಪೋಸ್ಟ್ ಮ್ಯಾನ್ ಮತ್ತು ಇತರ ವರ್ಗಗಳ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. 10ನೇ ತರಗತಿ ಪೂರ್ಣಗೊಳಿಸಿದ ಅಭ್ಯರ್ಥಿಗಳು 81,000 ರೂ.ವರೆಗೆ ವೇತನ ಪಡೆಯುವ ಅವಕಾಶವಿದೆ. ಅಂಚೆ ಇಲಾಖೆ ದೂರಸಂಪರ್ಕ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಪ್ರಸ್ತುತ ಭಾರತದಾದ್ಯಂತ ಹೆಚ್ಚಿನ ಸಂಖ್ಯೆಯ ಹುದ್ದೆಗಳು ಖಾಲಿಯಿದ್ದೆ ಹಾಗಾಗಿ ರಾಜ್ಯವಾರು ಭಾರತದಾದ್ಯಂತ ವಾರ್ಷಿಕವಾಗಿ 50,000 ಕ್ಕೂ ಹೆಚ್ಚು ಜನರನ್ನು ನೇಮಿಸಿಕೊಳ್ಳಲಾಗುತ್ತದೆ. ಈ ರೀತಿಯಾಗಿ, 2024ರ ನೇಮಕಾತಿ ವಿವರಗಳನ್ನು ಬಿಡುಗಡೆ ಮಾಡಲಾಗಿದೆ. 2024 ರಲ್ಲಿ ಅಂಚೆ ಇಲಾಖೆಯಲ್ಲಿ ಒಟ್ಟು 5 ವಿಭಾಗಗಳಿಗೆ ನೇಮಕಾತಿ ನಡೆಸಲಾಗುವುದು ಅವುಗಳೆಂದರೆ ಪೋಸ್ಟಲ್ ಅಸಿಸ್ಟೆಂಟ್, ಸಾರ್ಟಿಂಗ್ ಅಸಿಸ್ಟೆಂಟ್, ಪೋಸ್ಟ್ ಮ್ಯಾನ್, ಮೇಲ್ ಕಾರ್ಡ್ ಮತ್ತು ಮಲ್ಟಿ ಟಾಸ್ಕಿಂಗ್ ಸ್ಟಾಫ್ ಎಂಬ 5 ವಿಭಾಗಗಳಲ್ಲಿ

ವಯೋಮಿತಿಯ ವಿವರ ಇಲ್ಲಿದೆ :

ಒಟ್ಟು 55,000 ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಈ ತಿಂಗಳು ಅಧಿಕೃತವಾಗಿ ಘೋಷಣೆ ಮಾಡುವ ಸಾಧ್ಯತೆಯಿದೆ. ಪೋಸ್ಟಲ್ ಅಸಿಸ್ಟೆಂಟ್, ಸಾರ್ಟಿಂಗ್ ಅಸಿಸ್ಟೆಂಟ್, ಪೋಸ್ಟ್ ಮ್ಯಾನ್ ಮತ್ತು ಮೇಲ್ ಗಾರ್ಡ್ ಹುದ್ದೆಗಳಿಗೆ 18 ರಿಂದ 27 ವರ್ಷ ವಯೋಮಿತಿ ನಿಗದಿ ಮಾಡಲಾಗಿದೆ. 18 ರಿಂದ 25 ವರ್ಷ ವಯಸ್ಸಿನ ಮಲ್ಟಿ ಟಾಸ್ಕಿಂಗ್ ಸಿಬ್ಬಂದಿ ಎಸ್ಸಿ/ಎಸ್ಪಿ ಅಭ್ಯರ್ಥಿಗಳಿಗೆ 5 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಅಂಗವಿಕಲ ಅಭ್ಯರ್ಥಿಗಳಿಗೆ 10 ರಿಂದ 15 ವರ್ಷ ವಯೋಮಿತಿ ಸಡಿಲಿಕೆ ಇರುತ್ತದೆ.

Categories
ಉದ್ಯೋಗ ಸುದ್ದಿ ಬೆಂಗಳೂರು ರಾಜ್ಯ

ಪ್ರತಿ ವರ್ಷ ಇನ್ನು ಉದ್ಯೋಗ ಮೇಳ!

ಪ್ರತಿ ವರ್ಷ ಇನ್ನು ಉದ್ಯೋಗ ಮೇಳ!
– ರಾಜ್ಯ, ಜಿಲ್ಲಾ ಮಟ್ಟದಲ್ಲಿ ಆಯೋಜನೆ; ಸಿಎಂ ಘೋಷಣೆ!
– ತರಬೇತಿ ಕೇಂದ್ರಗಳ ಸ್ಥಾಪನೆ ಭರವಸೆ

NAMMUR EXPRESS NEWS
ಬೆಂಗಳೂರು: ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ ಕಲ್ಪಿ ಸುವ ಉದ್ದೇಶದಿಂದ ಪ್ರತಿ ವರ್ಷ ರಾಜ್ಯ ಮತ್ತು ಜಿಲ್ಲಾ ಮಟ್ಟದ ಉದ್ಯೋಗ ಮೇಳ ಆಯೋಜಿಸಲಾಗುವುದು ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ಮೂಲಕ “ಯುವ ಸಮೃದ್ಧಿ ಸಮ್ಮೇಳನ – 2024” ಅಡಿ ಉದ್ಯೋಗ ಮೇಳ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಉದ್ಯೋಗ ಮೇಳದಲ್ಲಿ 1,10,000ಕ್ಕೂ ಅಧಿಕ ಉದ್ಯೋಗವಕಾಶಗಳಿದ್ದು, 600ಕ್ಕೂ ಅಧಿಕ ಪ್ರತಿಷ್ಠಿತ ಖಾಸಗಿ ಕಂಪನಿಗಳು ಭಾಗವಹಿಸಿವೆ. ಈ ಸರ್ಕಾರದ ಅವಧಿವರೆಗೆ ಕೌಶಲ್ಯಾಧಾರಿತ ತರಬೇತಿಯೊಂದಿಗೆ ಉದ್ಯೋಗ ಮೇಳಗಳನ್ನು ನಿರಂತರವಾಗಿ ಆಯೋಜಿಸುವ ಗುರಿಯನ್ನು ಹಾಕಿಕೊಳ್ಳಲಾಗಿದೆ.

ಪ್ರಸ್ತುತ ರಾಜ್ಯ ಮಟ್ಟದಲ್ಲಿ ಉದ್ಯೋಗ ಮೇಳವನ್ನು ವರ್ಷಕ್ಕೆ ಒಮ್ಮೆ ಆಯೋಜಿಸಲಾಗುವುದರ ಜತೆಗೆ ಜಿಲ್ಲಾ ಮಟ್ಟದಲ್ಲಿಯೂ ಆಯೋಜಿಸಲು ತೀರ್ಮಾನಿಸಲಾಗಿದೆ. ಈ ಬಗ್ಗೆ ಕೌಶಲ್ಯ ಅಭಿವೃದ್ಧಿ ನಿಗಮವು ಪ್ರಕಟಣೆ ಮೂಲಕ ತಿಳಿಸಿದ್ದು, ಯೋಜನೆಯ ಗುರಿ ಹಾಗೂ ಕಾರ್ಯಯೋಜನೆ ಬಗ್ಗೆ ವಿವರಿಸಿದೆ. 8ನೇ ತರಗತಿಯಿಂದ 12ನೇ ತರಗತಿಯವರೆಗಿನ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗಾಗಿ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮವನ್ನು ನಡೆಸುವ ಬಗ್ಗೆಯೂ ತಿಳಿಸಲಾಗಿದೆ. ಇ – ಕೌಶಲ್ಯ ಲರ್ನಿಂಗ್ ಮ್ಯಾನೇಜ್ಮೆಂಟ್ ಸಿಸ್ಟಮ್ (ಎಲ್.ಎಂ.ಎಸ್) ಭವಿಷ್ಯದ ಕೌಶಲ್ಯಗಳು ಮತ್ತು ಉದಯೋನ್ಮುಖ ತಂತ್ರಜ್ಞಾನಗಳಲ್ಲಿ 30ಕ್ಕೂ ಹೆಚ್ಚು ಕೋರ್ಸ್‌ಗಳನ್ನು ಕಲಿಯಲು ಕೌಶಲ್ಯ ಆಕಾಂಕ್ಷಿಗಳಿಗೆ ಆನ್‌ಲೈನ್ ವೇದಿಕೆಯನ್ನು ಒದಗಿಸಲಾಗಿದೆ ಎಂದು ಹೇಳಿಕೊಂಡಿದೆ.

ಯುವಜನತೆ ಉದ್ಯೋಗಕ್ಕಾಗಿ ಏನೆಲ್ಲ ಕ್ರಮ?

*ಕರ್ನಾಟಕದಲ್ಲಿ ಅಂದಾಜು ಪ್ರತಿ ವರ್ಷ ಪಿ.ಯು.ಸಿ.ಯಲ್ಲಿ 932450, ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ 62437, ಪಾಲಿಟೆಕ್ನಿಕ್‌ನಲ್ಲಿ 48153, ಪದವಿಯಲ್ಲಿ 480000 ವಿದ್ಯಾರ್ಥಿಗಳು ತೇರ್ಗಡೆಯಾಗುತ್ತಿದ್ದಾರೆ.

*ಇವರಲ್ಲಿ ನಿರುದ್ಯೋಗದ ಶೇಕಡಾವಾರು ದರ ಪಿರಿಯೋಡಿಕ್ ಲೇಬರ್ ಫೋರ್ಸ್‌ ಸರ್ವೆ ಪ್ರಕಾರ ಶೇ. 2.4 ಇದೆ.

* ರಾಜ್ಯದಲ್ಲಿನ ನಿರುದ್ಯೋಗಿ ಯುವಜನತೆಗೆ ಸೂಕ್ತ ಉದ್ಯೋಗಾವಕಾಶ ಕಲ್ಪಿಸಿಕೊಡುವ ಮುಖೇನ ಇಂದಿನ ಯುವಜನತೆಗೆ ಉತ್ತಮ ಭವಿಷ್ಯ ಕಲ್ಪಿಸಿಕೊಡುವುದರೊಂದಿಗೆ ಕೌಶಲ್ಯಯುತ ಮಾನವ ಸಂಪನ್ಮೂಲನವನ್ನು ಒದಗಿಸುವ ಗುರಿಯನ್ನು ಹಾಕಿಕೊಳ್ಳಲಾಗಿದೆ.

* ರಾಜ್ಯದ ಯುವ ಜನತೆಗೆ ಉಚಿತ ಅಲ್ಪಾವಧಿ ಕೌಶಲ್ಯಾಧಾರಿತ ತರಬೇತಿಯೊಂದಿಗೆ ಉದ್ಯಮಶೀಲತೆಯ ನೆರವು ಹಾಗೂ ಜೀವನೋಪಾಯಕ್ಕೆ ಅಡಿಪಾಯವನ್ನು ರೂಪಿಸಿ ಮೌಲ್ಯಯುತ ಮಾನವ ಸಂಪನ್ಮೂಲನವನ್ನು ಒದಗಿಸುವ ಗುರಿ ಹೊಂದಲಾಗಿದೆ.

*ಈ ಉದ್ಯೋಗ ಮೇಳದಲ್ಲಿ 1,10,000ಕ್ಕೂ ಅಧಿಕ ಉದ್ಯೋಗವಕಾಶಗಳು ಇದ್ದು, 600ಕ್ಕೂ ಅಧಿಕ ಪ್ರತಿಷ್ಠಿತ ಖಾಸಗಿ ಕಂಪನಿಗಳು ಭಾಗವಹಿಸಿವೆ

*ಈ ಸರ್ಕಾರದ ಅವಧಿವರೆಗೆ ಕೌಶಲ್ಯಾಧಾರಿತ ತರಬೇತಿಯೊಂದಿಗೆ ಉದ್ಯೋಗ ಮೇಳಗಳನ್ನು ನಿರಂತರವಾಗಿ ಆಯೋಜಿಸುವ ಗುರಿಯನ್ನು ಹಾಕಿಕೊಳ್ಳಲಾಗಿದೆ.

*ಪ್ರಸ್ತುತ ರಾಜ್ಯ ಮಟ್ಟದ ಉದ್ಯೋಗ ಮೇಳವನ್ನು ವರ್ಷಕ್ಕೆ ಒಮ್ಮೆ ಆಯೋಜಿಸಲಾಗುವುದು. ಜತೆಗೆ ಜಿಲ್ಲಾ ಮಟ್ಟದಲ್ಲಿಯೂ ಆಯೋಜಿಸಲು ತೀರ್ಮಾನಿಸಲಾಗಿದೆ.

*ಈ ಬಜೆಟ್‌ನಲ್ಲಿ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ವತಿಯಿಂದ ಯುವನಿಧಿಗೆ ನೋಂದಣಿಯಾದ ಅಭ್ಯರ್ಥಿಗಳಲ್ಲಿ ಕನಿಷ್ಠ 25,000 ಅಭ್ಯರ್ಥಿಗಳಿಗೆ ಕೌಶಲ್ಯ ತರಬೇತಿಯೊಂದಿಗೆ ಉದ್ಯೋಗಾವಕಾಶ ಕಲ್ಪಿಸಲು ಘೋಷಣೆ ಮಾಡಲಾಗಿದೆ.

*ಅದರಂತೆ ಪ್ರತಿಷ್ಠಿತ ಕೈಗಾರಿಕಾ ಸಂಸ್ಥೆಗಳ ಮೂಲಕ ಕೌಶಲ್ಯಾಧಾರಿತ ತರಬೇತಿಯನ್ನು ನೀಡಿ ಉದ್ಯೋಗಾವಕಾಶವನ್ನು ಕಲ್ಪಿಸಲಾಗುವುದು. ಕಲಿಕೆ ಜತೆಗೆ ಕೌಶಲ್ಯ ಕಾರ್ಯಕ್ರಮ ಅನುಷ್ಠಾನಗೊಳಿಸಲು ಘೋಷಿಸಲಾಗಿದೆ.

*ರಾಜ್ಯದ ಆಯ್ದ 62 ಕಾಲೇಜುಗಳಲ್ಲಿನ ಬಿ.ಎ/ ಬಿ.ಕಾಂ/ ಬಿ.ಬಿ.ಎ/ ಬಿ.ಎಸ್.ಸಿ/ ಪದವಿಯ 5 & 6 ನೇ ಸೆಮಿಸ್ಟರ್‌ನಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗಾಗಿ 28 ವಿವಿಧ ಕೈಗಾರಿಕಾ ಬೇಡಿಕೆ ಆಧಾರಿತ ಅಲ್ಪಾವಧಿ ತರಬೇತಿ ನೀಡಲಾಗುವುದು.

*ನೇರವಾಗಿ ಕೈಗಾರಿಕೆ/ ಉದ್ಯಮಗಳ ಪ್ರಮಾಣಪತ್ರವನ್ನು ನೀಡುವ ಮುಖೇನ ಉದ್ಯೋಗಾವಕಾಶವನ್ನು ಕಲ್ಪಿಸಲು 102 ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ 150 ಉನ್ನತೀಕರಿಸಿದ ಸರ್ಕಾರಿ ಐಟಿಐ, 32 ಜಿಟಿಟಿಸಿ ಮತ್ತು 8 ಕೆಜಿಟಿಟಿಐಗಳ ಮೂಲಕ ತರಬೇತಿ ನೀಡಲು ಕ್ರಮ

*ಕರ್ನಾಟಕ ಕರಿಯರ್ ಪ್ಲಾನಿಂಗ್ ಕಾರ್ಯಕ್ರಮದಡಿ “ನನ್ನ ವೃತ್ತಿ, ನನ್ನ ಆಯ್ಕೆ” ಎಂಬ ಧೇಯವಾಕ್ಯದೊಂದಿಗೆ 8 ನೇತರಗತಿಯಿಂದ 12 ನೇ ತರಗತಿಯವರೆಗಿನ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗಾಗಿ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮವನ್ನು ಘೋಷಿಸಲಾಗಿದೆ. ಇದು 150 ಎನ್.ಎಸ್.ಕ್ಯೂ.ಎಫ್ ಶಾಲೆಗಳಲ್ಲಿ ಪ್ರಾಯೋಗಿಕವಾಗಿ ಅನುಷ್ಠಾನಗೊಳ್ಳುತ್ತಿದೆ.

*ಇ ಕೌಶಲ್ಯ ಲರ್ನಿಂಗ್ ಮ್ಯಾನೇಜ್ಮೆಂಟ್ ಸಿಸ್ಟಮ್ (ಎಲ್.ಎಂ.ಎಸ್) ಭವಿಷ್ಯದ ಕೌಶಲ್ಯಗಳು ಮತ್ತು ಉದಯೋನ್ಮುಖ ತಂತ್ರಜ್ಞಾನಗಳಲ್ಲಿ 30ಕ್ಕೂ ಹೆಚ್ಚು ಕೋರ್ಸ್‌ಗಳನ್ನು ಕಲಿಯಲು ಕೌಶಲ್ಯ ಆಕಾಂಕ್ಷಿಗಳಿಗೆ ಆನ್‌ಲೈನ್ ವೇದಿಕೆಯನ್ನು ಒದಗಿಸಲಾಗಿದೆ.

Categories
ಉದ್ಯೋಗ ಸುದ್ದಿ ಮಾಹಿತಿ ರಾಜ್ಯ

ಶಾಲೆಗಳಲ್ಲಿ ಮತ್ತಷ್ಟು ಉದ್ಯೋಗ ಅವಕಾಶ!?

ಶಾಲೆಗಳಲ್ಲಿ ಮತ್ತಷ್ಟು ಉದ್ಯೋಗ ಅವಕಾಶ!?
– ಸರಕಾರಿ, ಖಾಸಗಿ ಅನುದಾನಿತ ಶಾಲೆಗಳ ಖಾಲಿ ಹುದ್ದೆ ಶೀಘ್ರ ಭರ್ತಿ
– ಸರಕಾರಿ ಮತ್ತು ಖಾಸಗಿ ಶಾಲೆಗಳಿಗೆ ಒಂದೇ ಮಾನದಂಡ: ಮಧು ಬಂಗಾರಪ್ಪ

NAMMUR EXPRESS NEWS
ಸರಕಾರಿ ಹಾಗೂ ಖಾಸಗಿ ಅನುದಾನಿತ ಶಾಲೆಗಳ ಖಾಲಿ ಹುದ್ದೆ ಭರ್ತಿ ಕುರಿತು ಆದಷ್ಟು ಬೇಗ ಕ್ರಮ ಕೈಗೊಳ್ಳಲಾಗುತ್ತದೆ. ಹುದ್ದೆ ಭರ್ತಿ ವಿಚಾರದಲ್ಲಿ ಸರಕಾರಿ ಮತ್ತು ಖಾಸಗಿ ಶಾಲೆಗಳಿಗೆ ಮಾನದಂಡ ಅನುದಾನಿತ ಒಂದೇ ಅನುಸರಿಸಲಾಗುತ್ತದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ. ನೇಮಕಾತಿ ಪ್ರಕ್ರಿಯೆ ಸ್ಪೀಡಪ್ ಮಾಡಲು ನಾನು ಬದ್ಧನಿದ್ದೇನೆ. ಶೀಘ್ರವೇ ಭರ್ತಿ ಮಾಡುವ ಕೆಲಸ ಆಗಲಿದೆ. ಮಕ್ಕಳಿಗೆ ಶಿಕ್ಷಣ ಕೊಡುವ ಕೆಲಸಕ್ಕೆ ಬದ್ಧವಾಗಿದ್ದೇವೆ. ಕೋರ್ಟ್ ಆದೇಶದ ಮೂಲಕವೇ ನೇಮಕ ಆಗಬೇಕು. ಅದಕ್ಕೆ ನಾವು ಮಧ್ಯಪ್ರವೇಶ ಮಾಡೋದಿಲ್ಲ.

ವೇತನದಲ್ಲಿ ಕಡಿತ ಮಾಡಿ ಇನ್ಶೂರೆನ್ಸ್‌ ಮಾಡುವ ಪ್ರಕ್ರಿಯೆ ಬಗ್ಗೆ ಸಿಎಂ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುತ್ತದೆ” ಎಂದರು. ಪ್ರಶೋತ್ತರ ಅವಧಿಯಲ್ಲಿ ಸದಸ್ಯ ಮರಿತಿಬ್ಬೇಗೌಡ ಮತ್ತು ಎಸ್.ವಿ.ಸಂಕನೂರ ಪ್ರಶ್ನೆಗಳಿಗೆ ಉತ್ತರಿಸಿ, ಖಾಲಿ ಹುದ್ದೆಗಳನ್ನು ಭರ್ತಿ ಮಾಡುವಾಗ ಸರಕಾರಿ ಶಾಲೆಗಳ ಜತೆಗೆ ಅನುದಾನಿತ ಶಾಲೆಗಳನ್ನೂ ಪರಿಗಣಿಸುತ್ತೇವೆ. ಹಣಕಾಸು ಇಲಾಖೆ ಅನುಮತಿ ಪಡೆದು ಹುದ್ದೆಗಳನ್ನು ಭರ್ತಿ ಮಾಡುತ್ತೇವೆ. ಸರಕಾರಿ ಹಾಗೂ ಅನುದಾನಿತ ಶಾಲೆ ಎರಡಕ್ಕೂ ಒಂದೇ ಮಾನದಂಡ ಇರಲಿದೆ. ಈ ಬಗ್ಗೆ ಎಂಟು ತಿಂಗಳಿಂದ ಪ್ರಕ್ರಿಯೆ ನಡೆಯುತ್ತಿದೆ. ಮುಖ್ಯಮಂತ್ರಿಯವರ ಜತೆ ಚರ್ಚಿಸಿ ಶೀಘ್ರವೇ ನೇಮಕಾತಿ ಮಾಡುತ್ತೇವೆ. ನ್ಯಾಯಾಲಯದಲ್ಲಿರುವ ಪ್ರಕರಣದ ಬಗ್ಗೆಯೂ ಹೆಚ್ಚು ಗಮನ ಕೊಡುತ್ತೇವೆ ಎಂದರು.

Categories
ಉದ್ಯೋಗ ಸುದ್ದಿ ರಾಷ್ಟ್ರೀಯ ವಾರ್ತೆ

ಉದ್ಯೋಗಕ್ಕೆ ಕಾಯುತ್ತಿರುವವರಿಗೆ ಗುಡ್ ನ್ಯೂಸ್!

ಉದ್ಯೋಗಕ್ಕೆ ಕಾಯುತ್ತಿರುವವರಿಗೆ ಗುಡ್ ನ್ಯೂಸ್!
– ಐಟಿ ಕಂಪನಿಗಳಲ್ಲಿ 40 ಸಾವಿರಕ್ಕೂ ಹೆಚ್ಚು ಉದ್ಯೋಗ
– ಸ್ಕಿಲ್ ಇದ್ದವರಿಗೆ ಕೆಲಸ ನೀಡುವ ಕಂಪನಿಗಳು
– ರಿಟೇಲ್, ಹೆಲ್ತ್ ಕೇರ್, ಲಾಜಿಸ್ಟಿಕ್ ಕ್ಷೇತ್ರದಲ್ಲಿ ಅವಕಾಶ

NAMMUR EXPRESS NEWS
ನವ ದೆಹಲಿ: ದೇಶದಲ್ಲಿ ಮತ್ತೊಮ್ಮೆ ಬೃಹತ್ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿ ಆಗಲಿದೆ. ಮುಂಚೂಣಿಯಲ್ಲಿರುವ ಐಟಿ ಕಂಪನಿಗಳು ಈ ವರ್ಷ 40 ಸಾವಿರಕ್ಕೂ ಹೆಚ್ಚು ಹೊಸ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲು ಯೋಜಿಸಿವೆ ಎಂದು ಟೀಮ್‌ಲೀಸ್‌ ಎಡ್‌ಟೆಕ್‌ನ ಕರಿಯರ್‌ ಔಟ್‌ಲುಕ್‌ ರಿಪೋರ್ಟ್‌ ವರದಿ ಮಾಡಿದೆ. ಕೃತಕ ಬುದ್ಧಿಮತ್ತೆ ಹಾಗೂ ಕ್ಷಿಪ್ರಗತಿಯಲ್ಲಿ ದತ್ತಾಂಶಗಳ ಪರಿಷ್ಕರಣೆಗೆ ಬೇಡಿಕೆ ಹೆಚ್ಚುತ್ತಿದೆ. ಇದು ಐಟಿ ಉದ್ಯಮದ ಬೆಳವಣಿಗೆಗೆ ಬಲ ನೀಡುತ್ತಿದೆ ಎಂದು ನೇಮಕಾತಿ ಸಂಸ್ಥೆ ಟೀಮ್‌ಲೀಸ್‌ ಡಿಜಿಟಲ್‌ ವಿಶ್ಲೇಷಣೆ ಮಾಡಿದೆ. ನಿರ್ಮಾಣ ಕಂಪನಿಗಳು ಇದೇ ಜನವರಿಯಿಂದ ಜೂನ್‌ ಅವಧಿಯಲ್ಲಿ15ರಿಂದ 30 ಪರ್ಸೆಂಟ್‌ಗೂ ಹೆಚ್ಚು ಪದವೀಧರನ್ನು ನೇಮಿಸಿಕೊಳ್ಳಬಹುದು ಎಂದು ಇದೇ ಸಂಸ್ಥೆ ಅಂದಾಜು ಮಾಡಿದೆ.‘‘ಹೊಸಬರು ಎಐ ವ್ಯವಸ್ಥೆಗಳೊಂದಿಗೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಸಿದ್ಧರಾಗಿರಬೇಕು.

ಅಂಥವರಿಗೆ ಅವಕಾಶಗಳು ಸೃಷ್ಟಿಯಾಗುತ್ತಿವೆ,’’ ಎಂದು ಟೀಮ್‌ಲೀಸ್‌ ಎಡ್‌ಟೆಕ್‌ನ ಸಿಒಒ ಜೈದೀಪ್‌ ಕೇವಲ್‌ರಮಾನಿ ಹೇಳಿದ್ದಾರೆ. ನೇಮಕಾತಿ ಪ್ರಕ್ರಿಯೆ ಆರಂಭವಾಗುವ ಲಕ್ಷಣಗಳು ಕಾಣಿಸುತ್ತಿದ್ದರೂ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಹಣಕಾಸು ವರ್ಷದಲ್ಲಿನೇಮಕಾತಿ ಪ್ರಮಾಣ ಕಡಿಮೆ ಇದೆ. ಜಾಗತಿಕ ಆರ್ಥಿಕತೆಯ ವೇಗ ಕುಂಠಿತಗೊಂಡಿದೆ. ಆದರೂ ನಮ್ಮ ಇತ್ತೀಚಿನ ಸಮೀಕ್ಷೆಯು ಭಾರತದ ಬೆಳವಣಿಗೆಯ ಕತೆಯಲ್ಲಿ ಉದ್ಯೋಗದಾತರ ವಿಶ್ವಾಸ ಹೆಚ್ಚಿದೆ. ಉದ್ಯೋಗಿಗಳನ್ನು ನೇಮಿಸಿಕೊಳ್ಳುವ ಸಕಾರಾತ್ಮಕ ಅಂಶಗಳು ಕಾಣಿಸುತ್ತಿವೆ,’’ ಎಂದು ಟೀಮ್‌ಲೀಸ್‌ ಸಿಇಒ ಶಂತನು ರೂಜ್‌ ಹೇಳಿದ್ದಾರೆ.

ಯಾರಿಗೆ ಇದೆ ಬೇಡಿಕೆ?

ಪ್ರಸ್ತುತ ಕ್ಯಾಲೆಂಡರ್‌ ವರ್ಷದ ಮೊದಲಾರ್ಧದಲ್ಲಿಕೆಮಿಕಲ್‌ ಎಂಜಿನಿಯರ್‌, ಲೀಗಲ್‌ ಅಸೋಸಿಯೇಟ್‌, ಆರ್ಕಿಟೆಕ್ಟ್, ಗ್ರಾಫಿಕ್‌ ಡಿಸೈನರ್‌, ಮೈಕ್ರೋಬಯಾಲಜಿಸ್ಟ್‌, ಫೈನಾನ್ಷಿಯಲ್‌ ಅನಾಲಿಸ್ಟ್‌, ಕ್ಲಿನಿಕಲ್‌ ಡೇಟಾ ಅನಾಲಿಸ್ಟ್‌, ಜೂನಿಯರ್‌ ಪ್ರಾಡಕ್ಟ್ ಅನಾಲಿಸ್ಟ್‌, ಕ್ಲೌಡ್‌ ಸಪೋರ್ಟ್‌ ಎಂಜಿನಿಯರ್‌, ಡಿಜಿಟಲ್‌ ಮಾರ್ಕೆಟಿಂಗ್‌ ಎಕ್ಸಿಕ್ಯೂಟಿವ್‌, ಸಾಫ್ಟ್‌ವೇರ್‌ ಡೆವಲಪರ್ಸ್, ಮೆಡಿಕಲ್‌ ಕೋಡರ್‌, ಕಂಟೆಂಟ್‌ ಕ್ರಿಯೇಟರ್‌, ನೆಟ್‌ವರ್ಕ್ ಎಂಜಿನಿಯರ್‌ ಮತ್ತು ಇ-ಕಾಮರ್ಸ್‌ ಎಕ್ಸಿಕ್ಯೂಟಿವ್‌ ಉದ್ಯೋಗಗಳಲ್ಲಿಹೊಸಬರಿಗೆ ಅವಕಾಶಗಳಿವೆ ಎಂದು ಟೀಮ್‌ಲೀಸ್‌ ವಿಶ್ಲೇಷಣೆ ಮಾಡಿದೆ. ರಿಟೇಲ್‌ ವಲಯ ಶೇ.46,ಹೆಲ್ತ್‌ ಕೇರ್‌ ವಲಯ ಶೇ.44, ಲಾಜಿಸ್ಟಿಕ್ಸ್‌ ವಲಯ ಶೇ.32 ಹೆಚ್ಚು ಉದ್ಯೋಗ ಸೃಷ್ಟಿ ಮಾಡಲಿದೆ.

Categories
ಉದ್ಯೋಗ ಸುದ್ದಿ ರಾಜ್ಯ

ದಕ್ಷಿಣ ರೈಲ್ವೆಯಲ್ಲಿ ಉದ್ಯೋಗಾವಕಾಶ.

ದಕ್ಷಿಣ ರೈಲ್ವೆಯಲ್ಲಿ ಉದ್ಯೋಗಾವಕಾಶ.
– 2860 ಹುದ್ದೆಗಳ ಭರ್ತಿಗೆ ಅಧಿಸೂಚನೆ
– ಆನ್‌ಲೈನ್‌ ಅರ್ಜಿ ಆಹ್ವಾನ

NAMMUR EXPRESS NEWS
ದಕ್ಷಿಣ ರೈಲ್ವೆ ವಲಯದ, ರೈಲ್ವೆ ನೇಮಕಾತಿ ಕೋಶವು ವಲಯದ ಎಲ್ಲ ಡಿವಿಷನ್‌ಗಳಲ್ಲಿ ಅಗತ್ಯ ಹುದ್ದೆಗಳನ್ನು ಭರ್ತಿ ಮಾಡಲು ಉದ್ಯೋಗ ಪ್ರಕಟಣೆ ಹೊರಡಿಸಿದೆ. 1961 ರ ಅಪ್ರೆಂಟಿಸ್ ಕಾಯ್ದೆಯಡಿ, ಈ ಶಿಶಿಕ್ಷು ಹುದ್ದೆಗಳನ್ನು ಭರ್ತಿ ಮಾಡಲಿದ್ದು ಇಲ್ಲಿದೆ ಮಾಹಿತಿ ಅರ್ಜಿ ಸಲ್ಲಿಸಿ.

ಉದ್ಯೋಗ ರೈಲ್ವೆ ವಲಯ: ದಕ್ಷಿಣ ರೈಲ್ವೆ
ಹುದ್ದೆಗಳ ಹೆಸರು : ಅಪ್ರೆಂಟಿಸ್ (ತರಬೇತುದಾರರು)
ಹುದ್ದೆಗಳ ಸಂಖ್ಯೆ : 2860

ಫ್ರೆಶರ್‌ ಕೆಟಗರಿ ಅಡಿಯಲ್ಲಿ ಕೊಯಂಬತೂರು, ಪೆರಂಬೂರು ಡಿವಿಷನ್‌ಗಳ ವರ್ಕ್‌ಶಾಪ್‌ ಹಾಗೂ ಹಾಸ್ಪಿಟಲ್‌ಗಳಲ್ಲಿ ಅಪ್ರೆಂಟಿಸ್‌ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಮಾಜಿ- ಐಟಿಐ ಅಭ್ಯರ್ಥಿಗಳ ಕೆಟಗರಿ ಅಡಿಯಲ್ಲಿ ಸೇಲಂ, ಪಲಕ್ಕಾಡ್, ಪರೆಂಬೂರು, ಅರಕ್ಕೋನಂ, ಚೆನ್ನೈ ಡಿವಿಷನ್, ಅವಡಿ, ರೊಯಪುರಂ, ಪೊನ್ಮಲೈ, ಮಧುರೈ, ತಿರುಚನಾಪಲ್ಲಿ, ತಂಬರಂ, ಸೇರಿದಂತೆ ವಿವಿಧ ವರ್ಕ್‌ಶಾಪ್‌ ಹಾಗೂ ಡಿವಿಷನ್‌ಗಳಲ್ಲಿ ನೇಮಕ ಮಾಡಲಾಗುತ್ತದೆ.

ಅರ್ಹತೆಗಳು
ಅರ್ಜಿ ಸಲ್ಲಿಸಲು ಬಯಸುವವರು 10ನೇ ತರಗತಿ / ತತ್ಸಮಾನ ವಿದ್ಯಾರ್ಹತೆ ಜತೆಗೆ ಐಟಿಐ (ನ್ಯಾಷನಲ್ ಟ್ರೇಡ್ ಸರ್ಟಿಫಿಕೇಟ್) ಪಾಸ್ ಮಾಡಿರಬೇಕು. ವಿವಿಧ ಟ್ರೇಡ್‌ನಲ್ಲಿ ವ್ಯಾಸಂಗ ಮಾಡಿದವರು ಎನ್‌ಸಿವಿಟಿ / ಎಸ್‌ಸಿವಿಟಿ ಪ್ರಮಾಣ ಪತ್ರ ಹೊಂದಿದ್ದಲ್ಲಿ ಅರ್ಜಿ ಸಲ್ಲಿಸಬಹುದು. ಕಾರ್ಪೆಂಟರ್, ಮಷಿನಿಸ್ಟ್‌, ಪೇಂಟರ್, ಫಿಟ್ಟರ್, ವೆಲ್ಡರ್, ರೇಡಿಯಾಲಜಿ, ಎಂಎಂವಿ, ಇಲೆಕ್ಟ್ರೀಷಿಯನ್, ಟರ್ನರ್, ಅಡ್ವಾನ್ಸ್‌ಡ್ ವೆಲ್ಡರ್, ಇಲೆಕ್ಟ್ರಾನಿಕ್ ಮೆಕ್ಯಾನಿಕ್, ಪಾಸ್ಸಾ, ವೈಯರ್‌ಮನ್, ಕಾರ್ಪೆಂಟರ್ ಟ್ರೇಡ್‌ಗಳಲ್ಲಿ ಐಟಿಐ ಓದಿರಬೇಕು.

ಕನಿಷ್ಠ 15 ವರ್ಷ ಆಗಿರುವ, ಗರಿಷ್ಠ 24 ವರ್ಷ ಮೀರದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ವರ್ಗಾವಾರು ವಯೋಮಿತಿ ಸಡಿಲಿಕೆ ನಿಯಮ ಅನ್ವಯವಾಗಲಿದೆ.

ಒಬಿಸಿಗೆ 3 ವರ್ಷ, ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ, ವಯೋಮಿತಿ ಸಡಿಲಿಕೆ ನಿಯಮಗಳು ಅನ್ವಯವಾಗಲಿವೆ.
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 28-02-2024 ರ ಸಂಜೆ 05 ಗಂಟೆವರೆಗೆ.

ಆಯ್ಕೆ ವಿಧಾನ ಹೇಗಿರುತ್ತದೆ?
ಅಭ್ಯರ್ಥಿಗಳನ್ನು ಅವರು ಐಟಿಐ ಟ್ರೇಡ್‌ನಲ್ಲಿ ಗಳಿಸಿದ ಅಂಕಗಳ ಆಧಾರದಲ್ಲಿ ಶಾರ್ಟ್‌ ಲಿಸ್ಟ್‌ ಮಾಡಿ, ದಾಖಲೆಗಳ ಪರಿಶೀಲನೆ / ಮೆಡಿಕಲ್ ಟೆಸ್ಟ್‌ ನಡೆಸಿ ನೇಮಕ ಮಾಡಿಕೊಳ್ಳಲಾಗುತ್ತದೆ.

Categories
ಉದ್ಯೋಗ ಸುದ್ದಿ

ಸೇನೆ ಸೇರ ಬಯಸುವವರಿಗೆ ಗುಡ್ ನ್ಯೂಸ್!

ಸೇನೆ ಸೇರ ಬಯಸುವವರಿಗೆ ಗುಡ್ ನ್ಯೂಸ್!
ಸುವರ್ಣಾವಕಾಶ
– ಅಗ್ನಿವೀರ್‌ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ: ಮಾರ್ಚ್‌ 21 ಕೊನೆಯ ದಿನ

NAMMUR EXPRESS NEWS
ನವದೆಹಲಿ: ಭಾರತೀಯ ಸೇನೆಯ ಅಗ್ನಿವೀರ್‌ ನೇಮಕಾತಿ 2024ರ ಅಧಿಸೂಚನೆ ಫೆಬ್ರವರಿ 8 ಬಿಡುಗಡೆಯಾಗಲಿದೆ. ಅಗ್ನಿವೀರ್‌-ಜನರಲ್‌ ಡ್ಯೂಟಿ, ಟೆಕ್ನಿಕಲ್‌, ಕ್ಲರ್ಕ್‌ / ಸ್ಟೋರ್‌ ಕೀಪರ್‌ ಮತ್ತು ಟ್ರೇಡ್‌ ಮ್ಯಾನ್‌ ಹುದ್ದೆಗಳನ್ನು ಭರ್ತಿ ಮಾಡಲಾಗುವುದು. 8 / 10 / 12ನೇ ತರಗತಿ ತೇರ್ಗಡೆಯಾದವರು ಅರ್ಜಿ ಸಲ್ಲಿಸಬಹುದು. ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನ ಮಾರ್ಚ್‌ 21 .

ವಿದ್ಯಾರ್ಹತೆ
ಅಗ್ನಿವೀರ್‌ ಜನರಲ್‌ ಡ್ಯೂಟಿ: 10ನೇ ತರಗತಿಯಲ್ಲಿ ಪ್ರತಿ ವಿಷಯದಲ್ಲಿಯೂ ಶೇ. 45 ಅಂಕಗಳೊಂದಿಗೆ ತೇರ್ಗಡೆಯಾಗಿರಬೇಕು.

ಅಗ್ನಿವೀರ್‌ ಟೆಕ್ನಿಕಲ್‌: ಮಾನ್ಯತೆ ಪಡೆದ ಮಂಡಳಿಯಿಂದ 12ನೇ ತರಗತಿಯಲ್ಲಿ ಶೇ. 60 ಅಂಕಗಳೊಂದಿಗೆ ತೇರ್ಗಡೆಯಾಗಿರಬೇಕು.
ಅಗ್ನಿವೀರ್‌ ಕ್ಲರ್ಕ್‌ / ಸ್ಟೋರ್‌ ಕೀಪರ್‌: ಮಾನ್ಯತೆ ಪಡೆದ ಮಂಡಳಿಯಿಂದ 12ನೇ ತರಗತಿಯಲ್ಲಿ ಶೇ. 60 ಅಂಕಗಳೊಂದಿಗೆ ತೇರ್ಗಡೆಯಾಗಿರಬೇಕು.
ಅಗ್ನಿವೀರ್‌ ಟ್ರೇಡ್ಸ್‌ಮ್ಯಾನ್‌ (10ನೇ ತರಗತಿ): 10ನೇ ತರಗತಿಯಲ್ಲಿ ತೇರ್ಗಡೆಯಾಗಿರಬೇಕು. ಪ್ರತಿ ವಿಷಯದಲ್ಲಿಯೂ ಶೇ. 33ರಷ್ಟು ಅಂಕ ಕಡ್ಡಾಯ.
ಅಗ್ನಿವೀರ್‌ ಟ್ರೇಡ್ಸ್‌ಮ್ಯಾನ್‌ (8ನೇ ತರಗತಿ): 8ನೇ ತರಗತಿಯಲ್ಲಿ ತೇರ್ಗಡೆಯಾಗಿರಬೇಕು. ಪ್ರತಿ ವಿಷಯದಲ್ಲಿಯೂ ಶೇ. 33ರಷ್ಟು ಅಂಕ ಕಡ್ಡಾಯ.

ಪರೀಕ್ಷಾ ಶುಲ್ಕ ಮತ್ತು ವಯೋಮಿತಿ
ಅಭ್ಯರ್ಥಿಗಳು ಅರ್ಜಿ ಶುಲ್ಕವಾಗಿ 550 ರೂ. ಪಾವತಿಸಬೇಕು. ಅರ್ಜಿ ಸಲ್ಲಿಸುವವರ ಕನಿಷ್ಠ ವಯಸ್ಸು 17 ವರ್ಷ 6 ತಿಂಗಳು ಮತ್ತು ಗರಿಷ್ಠ ವಯಸ್ಸು 21 ವರ್ಷ.

ಆಯ್ಕೆ ವಿಧಾನ
ಮೂರು ಹಂತಗಳಲ್ಲಿ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಮೊದಲ ಹಂತ ಆನ್‌ಲೈನ್‌ ಪರೀಕ್ಷೆ. ಇದರಲ್ಲಿ ಟೈಪಿಂಗ್‌ ಟೆಸ್ಟ್‌ ಕೂಡ ಇರಲಿದೆ. ಎರಡನೇ ಹಂತದಲ್ಲಿ ನೇಮಕಾತಿ ರ‍್ಯಾಲಿ ನಡೆಯಲಿದೆ. ಇದರಲ್ಲಿ ತೇರಗಡೆಯಾದವರನ್ನು ಮೂರನೇ ಹಂತಕ್ಕೆ ಆಯ್ಕೆ ಮಾಡಲಾಗುತ್ತದೆ. ಇಲ್ಲಿ ದಾಖಲೆಗಳ ಪರೀಶೀಲನೆ, ವೈದ್ಯಕೀಯ ಪರೀಕ್ಷೆ ಮತ್ತು ಮೆರಿಟ್‌ ಲಿಸ್ಟ್‌ ತಯಾರಿಸಿ ಆಯ್ಕೆ ನಡೆಸಲಾಗುತ್ತದೆ.

ಅರ್ಜಿ ಸಲ್ಲಿಸುವ ವಿಧಾನ

ಆಸಕ್ತರು https://joinindianarmy.nic.in/ ವೆಬ್‌ಸೈಟ್‌ಗೆ ತೆರಳಿ ಹೆಸರು ನೋಂದಾಯಿಸಿ ಅರ್ಜಿ ಸಲ್ಲಿಸಬಹುದು.

Categories
ಉದ್ಯೋಗ ಸುದ್ದಿ ಬೆಂಗಳೂರು ರಾಜ್ಯ

ಬ್ಯಾಂಕ್‌ ಉದ್ಯೋಗ ಹುಡುಕುತ್ತಿದ್ದೀರಾ?

ಬ್ಯಾಂಕ್‌ ಉದ್ಯೋಗ ಹುಡುಕುತ್ತಿದ್ದೀರಾ?
-ಪಂಜಾಬ್ ನ್ಯಾಷನಲ್‌ ಬ್ಯಾಂಕ್‌ನಲ್ಲಿದೆ ಸುವರ್ಣಾವಕಾಶ
– 1,025 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ
-ಫೆಬ್ರವರಿ 25ರೊಳಗೆ ಅರ್ಜಿ ಸಲ್ಲಿಸಿ

NAMMUR EXPRESS NEWS
ಬೆಂಗಳೂರು: ಪಂಜಾಬ್ ನ್ಯಾಷನಲ್‌ ಬ್ಯಾಂಕ್ ನಿಮಗೆ ಸುವರ್ಣಾವಕಾಶ ಒದಗಿಸುತ್ತಿದೆ. ಪಂಜಾಬ್ ನ್ಯಾಷನಲ್‌ ಬ್ಯಾಂಕ್ ದೇಶದಾದ್ಯಂತ ತನ್ನ ವಿವಿಧ ಬ್ರ್ಯಾಂಚ್‌ಗಳಲ್ಲಿ ಖಾಲಿ ಇರುವ ವಿವಿಧ ಸ್ಪೆಷಲಿಸ್ಟ್‌ ಆಫೀಸರ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ . ಕ್ರೆಡಿಟ್ / ಮ್ಯಾನೇಜರ್ ಫಾರೆಕ್ಸ್, ಮ್ಯಾನೇಜರ್ ಸೈಬರ್ ಸೆಕ್ಯೂರಿಟಿ ಸೇರಿ ಬರೋಬ್ಬರಿ 1,025 ಹುದ್ದೆಗಳಿವೆ. ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕಿದ್ದು, ಕೊನೆಯ ದಿನಾಂಕ ಫೆಬ್ರವರಿ 25.

ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ

ಕ್ರೆಡಿಟ್‌ ಆಫೀಸರ್‌ – 1,000, ಮ್ಯಾನೇಜರ್‌-ಫಾರೆಕ್ಸ್‌ – 15, ಮ್ಯಾನೇಜರ್‌ – ಸೈಬರ್‌ ಸೆಕ್ಯುರಿಟಿ – 5, ಸೀನಿಯರ್‌ ಮ್ಯಾನೇಜರ್‌ ಸೈಬರ್‌ ಸೆಕ್ಯುರಿಟಿ- 5 ಹುದ್ದೆಗಳಿವೆ. ಹುದ್ದೆಗಳಿಗೆ ಸಂಬಂಧಿತ ವಿಷಯಗಳಲ್ಲಿ ಪದವಿ / ಸ್ನಾತಕೋತ್ತರ ಪದವಿ / ಸಿಎ / ಸಿಎಂಎ / ಐಡಿಡಬ್ಲ್ಯುಎ ತೇರ್ಗಡೆಯಾದವರು ಅರ್ಜಿ ಸಲ್ಲಿಸಲು ಅರ್ಹರು.

ವಯೋಮಿತಿ

ಮ್ಯಾನೇಜರ್‌ ಫಾರೆಕ್ಸ್‌- ಕನಿಷ್ಠ: 25 ವರ್ಷ, ಗರಿಷ್ಠ: 35 ವರ್ಷ
ಮ್ಯಾನೇಜರ್‌ ಸೈಬರ್‌ ಸೆಕ್ಯುರಿಟಿ- ಕನಿಷ್ಠ: 25 ವರ್ಷ, ಗರಿಷ್ಠ: 35
ಸೀನಿಯರ್‌ ಮ್ಯಾನೇಜರ್‌ ಸೈಬರ್‌ ಸೆಕ್ಯುರಿಟಿ- ಕನಿಷ್ಠ: 27 ವರ್ಷ, ಗರಿಷ್ಠ: 38
ಆಫೀಸರ್‌ ಕ್ರೆಡಿಟ್‌- ಕನಿಷ್ಠ: 21 ವರ್ಷ, ಗರಿಷ್ಠ: 28 ವರ್ಷ. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಲಭ್ಯ. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಪಿಡಬ್ಲ್ಯುಬಿಡಿ ಅಭ್ಯರ್ಥಿಗಳಿಗೆ 10 ವರ್ಷಗಳ ಸಡಿಲಿಕೆ ಇದೆ.

ಅರ್ಜಿ ಶುಲ್ಕ

ಸಾಮಾನ್ಯ ವಿಭಾಗ, ಇತರ ಹಿಂದುಳಿದ ವರ್ಗದ ಅಭ್ಯರ್ಥಿಗಳು 1,180 ರೂ. ಮತ್ತು ಎಸ್‌ಸಿ / ಎಸ್‌ಟಿ / ಪಿಡಬ್ಲ್ಯುಡಿ ಅಭ್ಯರ್ಥಿಗಳು 59 ರೂ. ಅರ್ಜಿ ಶುಲ್ಕವನ್ನು ಆನ್‌ಲೈನ್‌ ಮೂಲಕ ಪಾವತಿಸಬೇಕು.

ಆಯ್ಕೆ ವಿಧಾನ

ವಿವಿಧ ಹಂತಗಳ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಆರಂಭದಲ್ಲಿ ಆನ್‌ಲೈನ್‌ ಮೂಲಕ ಲಿಖಿತ ಪರೀಕ್ಷೆ ನಡೆಸಲಾಗುತ್ತದೆ. 200 ಅಂಕಗಳನ್ನು ಒಳಗೊಂಡ ಈ ಪರೀಕ್ಷೆಗೆ 2 ಗಂಟೆಗಳ ಸಮಯಾವಕಾಶ ಇರುತ್ತದೆ. ಇದರಲ್ಲಿ ಆಯ್ಕೆಯಾದವರನ್ನು ಸಂದರ್ಶನ ನಡೆಸಲಾಗುತ್ತದೆ. ಇದಕ್ಕೆ 50 ಅಂಕಗಳನ್ನು ನಿಗದಿ ಪಡಿಸಲಾಗಿದೆ. ಬಳಿಕ ಅಭ್ಯರ್ಥಿಗಳ ಡಾಕ್ಯುಮೆಂಟ್‌ ಪರಿಶೀಲಿಸಿ ಆಯ್ಕೆ ಮಾಡಲಾಗುತ್ತದೆ.