Categories
ಕಾರ್ಕಳ

ಕಂಪೆನಿ ಸೆಕ್ರೆಟರಿ ಅರ್ಹತಾ ಪರೀಕ್ಷೆಯಲ್ಲಿ ಸಾಧನೆ

ಕಂಪೆನಿ ಸೆಕ್ರೆಟರಿ ಅರ್ಹತಾ ಪರೀಕ್ಷೆಯಲ್ಲಿ ಸಾಧನೆ
– ಕಾರ್ಕಳ ಕ್ರಿಯೇಟಿವ್ ಕಾಲೇಜಿನ ವಿದ್ಯಾರ್ಥಿಗಳು ತೇರ್ಗಡೆ
– ಕಾಲೇಜಿನ ಆಡಳಿತ ಮಂಡಳಿ, ಬೋಧಕರ ಅಭಿನಂದನೆ

NAMMUR EXPRESS NEWS
ಕಾರ್ಕಳ: ಕಾರ್ಕಳ ಕ್ರಿಯೇಟಿವ್‌ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಂದ ಸಿ.ಎಸ್‌ (ಕಂಪೆನಿ ಸೆಕ್ರೆಟರಿ) ಪರೀಕ್ಷೆಯಲ್ಲೂ ಉತ್ತಮ ಸಾಧನೆ ಆಗಿದೆ. ಕಂಪೆನಿ ಸೆಕ್ರೆಟರಿ ಸಂಸ್ಥೆಗಳಿಗೆ ನಡೆದ ಸ್ಪರ್ಧಾತ್ಮಕ ಅರ್ಹತಾ ಪರೀಕ್ಷೆಯಲ್ಲಿ ಕ್ರಿಯೇಟಿವ್‌ ಕಾಲೇಜಿನ ವಿದ್ಯಾರ್ಥಿಗಳಾದ ಪ್ರಜ್ವಲ್‌, ಮಂಜುನಾಥ ಭಟ್‌, ಶ್ರೀಯಾ ಕೆ ಎಸ್‌, ಶ್ರಾವ್ಯ ಭಟ್‌ ಎಸ್‌, ಪ್ರಣೀತಾ, ಧನುಷ್‌ ಡಿ ಡಿ ಮುಂದಿನ ಹಂತಕ್ಕೆ ತೇರ್ಗಡೆ ಹೊಂದಿದ್ದಾರೆ. ವಿದ್ಯಾರ್ಥಿಗಳ ಕಠಿಣ ಪರಿಶ್ರಮ, ಅನುಭವಿ ಉಪನ್ಯಾಸಕರ ತಂಡದೊಂದಿಗೆ ಕಾರ್ಯ ಪ್ರವೃತ್ತವಾಗಿರುವ ಸಂಸ್ಥೆ ತನ್ನ ಮೊದಲ ದಿನಗಳಿಂದಲೂ ವಾಣಿಜ್ಯ ವಿಭಾಗದಲ್ಲಿ ಸಿ.ಎ, ಸಿ.ಎಸ್‌ ಮತ್ತು ಬ್ಯಾಂಕಿಂಗ್‌ ಪರೀಕ್ಷೆಗಳಿಗೆ ವಿಶೇಷ ತರಗತಿ ಮತ್ತು ತರಬೇತಿ ನೀಡುತ್ತಾ ಬಂದಿದ್ದು ಅತ್ಯುತ್ತಮ ಫಲಿತಾಂಶವೂ ದಾಖಲಾಗಿರುವುದನ್ನು ಸ್ಮರಿಸಬಹುದಾಗಿದೆ. ವಿದ್ಯಾರ್ಥಿಗಳ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಉಪನ್ಯಾಸಕ ವರ್ಗದವರು ಸಂಯೋಜಕರು ಹರ್ಷ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ.

ಇದನ್ನೂ ಓದಿ : ಭೂತಾನ್ ಅಡಿಕೆ ಬಂದ್ರೂ ತೊಂದರೆ ಇಲ್ಲ- ಆರಗ ಜ್ಞಾನೇಂದ್ರ

[embedyt] https://www.youtube.com/watch?v=rTGqP21dgrM%5B/embedyt%5D

HOW TO APPLY : NEET-UG COUNSELLING 2023

Categories
ಕಾರ್ಕಳ

ಬ್ಯಾಂಕ್ ದಿಗ್ಗಜ ಜಯರಾಂ ಭಟ್ ಇನ್ನಿಲ್ಲ!

ಬ್ಯಾಂಕ್ ದಿಗ್ಗಜ ಜಯರಾಂ ಭಟ್ ಇನ್ನಿಲ್ಲ!
– ಮಂಗಳೂರು ವಿಮಾನ ನಿಲ್ದಾಣದಲ್ಲೇ ಕುಸಿದು ಆಸ್ಪತ್ರೆಯಲ್ಲಿ ವಿಧಿವಶ
– ರಾಜ್ಯದಲ್ಲಿ ಹೃದಯಾಘಾತಕ್ಕೆ ಮತ್ತೊಬ್ಬರು ಬಲಿ!

NAMMUR EXPRESS NEWS
ಕಾರ್ಕಳ: ರಾಜ್ಯದ ಬ್ಯಾಂಕಿಂಗ್ ಕ್ಷೇತ್ರದ ದಿಗ್ಗಜರಲ್ಲಿ ಒಬ್ಬರಾದ ಕರ್ಣಾಟಕ ಬ್ಯಾಂಕ್ ನಿವೃತ್ತ ವ್ಯವಸ್ಥಾಪಕ ನಿರ್ದೇಶಕ ಪೊಳಲಿ ಜಯರಾಂ ಭಟ್ (71) ಅವರು ಆ. 9 ರಂದು ನಿಧನ ಹೊಂದಿದ್ದಾರೆ. ಆ.9ರಂದು ಮಧ್ಯಾಹ್ನ ಮಂಗಳೂರು ವಿಮಾನ ನಿಲ್ದಾಣದಲ್ಲಿ ಹೃದಯಾಘಾತದಿಂದ ಕುಸಿದಿದ್ದರು. ಅವರನ್ನು ಚಿಕಿತ್ಸೆಗಾಗಿ ನಗರದ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ನಿಧನ ಹೊಂದಿದ್ದಾರೆ. ಅವರು ಮುಂಬಯಿನಲ್ಲಿ ಯುನಿವರ್ಸಲ್ ಸೋಂಪೋ ವಿಮಾ ಕಂಪನಿಯ ಮಂಡಳಿ ಸಭೆಯಲ್ಲಿ ಭಾಗವಹಿಸಿ, ಊರಿಗೆ ಮರಳುತ್ತಿದ್ದರು ಎಂದು ತಿಳಿದು ಬಂದಿದೆ. ಮೃತರು ಪತ್ನಿ ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.

ಜಯರಾಂ ಭಟ್ ಅವರು ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲ್ಲೂಕು ಪೊಳಲಿಯ ಅವರು, ಮೈಸೂರು ವಿಶ್ವವಿದ್ಯಾಲಯದಲ್ಲಿ ಎಂ.ಎಸ್ಸಿ ಸ್ನಾತಕೋತ್ತರ ಪದವಿಯಲ್ಲಿ ಪ್ರಥಮ ಬ್ಯಾಂಕ್ ಗಳಿಸಿದ್ದರು. 1973ರಲ್ಲಿ ಪ್ರೊಬೇಷನರಿ ಅಧಿಕಾರಿಯಾಗಿ ಕರ್ಣಾಟಕ ಬ್ಯಾಂಕ್ ಸೇರಿದ್ದ ಅವರು, 1975ರಲ್ಲಿ ಶಾಖಾ ವ್ಯವಸ್ಥಾಪಕರಾಗಿ, ನಂತರ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿ 2005ರಲ್ಲಿ ಪ್ರಧಾನ ವ್ಯವಸ್ಥಾಪಕರಾಗಿ ನೇಮಕಗೊಂಡಿದ್ದರು. 2009ರಲ್ಲಿ ಅವರಿಗೆ ಕರ್ಣಾಟಕ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ಹುದ್ದೆ ಒಲಿಯಿತು. 2017ರಲ್ಲಿ ಬ್ಯಾಂಕ್‌ನ ಅಧ್ಯಕ್ಷರಾದ ಅವಧಿಯಲ್ಲಿ ಇ-ಲಾಬಿ, ಮೊಬೈಲ್ ಬ್ಯಾಂಕಿಂಗ್, ಪಿಒಎಸ್ ಅನ್‌ಲೈನ್ ಟ್ರೇಡಿಂಗ್ ಅಕೌಂಟ್, ಟ್ರಾವೆಲ್ ಕಾರ್ಡ್, ಇನ್ನೂ ಅನೇಕ ಯೋಜನೆಗಳನ್ನು ಪರಿಚಯಿಸಿ, ಗ್ರಾಹಕರ ಮೆಚ್ಚುಗೆ ಗಳಿಸಿದರು.

ಬ್ಯಾಂಕಿಂಗ್ ಕ್ಷೇತ್ರದಲ್ಲಿ ಐದು ದಶಕಗಳ ಅನುಭವ ಹೊಂದಿದ್ದ ಅವರಿಗೆ 20ಕ್ಕೂ ಹೆಚ್ಚು ಪ್ರಶಸ್ತಿಗಳು ಲಭಿಸಿದ್ದವು.
ಆ.10 ರಂದು ಬೆಳಿಗ್ಗೆ 8ರಿಂದ 9 ಗಂಟೆಯವರೆಗೆ ಮಂಗಳೂರಿನ ಎ.ಜೆ. ಆಸ್ಪತ್ರೆಯಲ್ಲಿ ಮೃತರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು.

ಇದನ್ನೂ ಓದಿ : ಜಲಪಾತ ಸಿನಿಮಾಕ್ಕೆ ವಿಜಯಪ್ರಕಾಶ್ ಎಂಟ್ರಿ!

HOW TO APPLY : NEET-UG COUNSELLING 2023

Categories
ಕರಾವಳಿ ಕಾರ್ಕಳ

ಸಿಎ ಅರ್ಹತಾ ಪರೀಕ್ಷೆಯಲ್ಲಿ ಕ್ರಿಯೇಟಿವ್‌ ಕಾಲೇಜು ಸಾಧನೆ

ಸಿಎ ಅರ್ಹತಾ ಪರೀಕ್ಷೆಯಲ್ಲಿ ಕ್ರಿಯೇಟಿವ್‌ ಕಾಲೇಜು ಸಾಧನೆ
– ಪಿಯು ಕಾಲೇಜಿನ ವಿದ್ಯಾರ್ಥಿಗಳ ಅತ್ಯುತ್ತಮ ಸಾಧನೆ
– ಪ್ರಥಮ ಪಿಯುಸಿಯಿಂದಲೇ ವಿಶೇಷ ತರಬೇತಿ ನೀಡುತ್ತಿರುವ ಸಂಸ್ಥೆ

NAMMUR EXPRESS NEWS
ಇನ್ಸ್ಟಿಟ್ಯೂಟ್‌ ಆಫ್‌ ಚಾರ್ಟೆರ್ಡ್‌ ಅಕೌಂಟೆಂಟ್‌ ಆಫ್‌ ಇಂಡಿಯಾ ಸಂಸ್ಥೆಯವರು ನಡೆಸಿದ ಸಿಎ (CA) ಮೊದಲ ಹಂತದ ಅರ್ಹತಾ ಪರೀಕ್ಷೆಯಲ್ಲಿ ಕ್ರಿಯೇಟಿವ್‌ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ. ಕ್ರಿಯೇಟಿವ್ ಕಾಲೇಜಿನ ವಿದ್ಯಾರ್ಥಿಗಳಾದ ಸುದೀಪ್‌ ಕೆ, ಸುಮಾ, ಸುಚಿತಾ ಬಿ ಸಿ, ಅನಘಾ, ಬಿ ಸಿದ್ದಾರ್ಥ್‌ ಪೈ, ಹೆಗ್ಡೆ ಅನಿರುದ್ಧ್‌ ರಮೇಶ್‌, ಅಭಿಷೇಕ್‌ ಪಿ ಎಸ್‌, ವಿಂದ್ಯಾ ವಿನಯ್‌ ಹೆಗಡೆ, ಎಸ್‌ ಅನುರಾಜ್‌ ಇವರು ಸಿ ಎ ಫೌಂಡೇಶನ್‌ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಸಿ ಎ ಇಂಟರ್‌ ಮೀಡಿಯೆಟ್‌ ಗೆ ಅರ್ಹತೆ ಗಳಿಸಿದ್ದಾರೆ. ಸುದೀಪ್‌ ಕೆ 261 ಅಂಕ, ಸುಮಾ 250 ಅಂಕ, ಸುಚಿತಾ ಬಿ ಸಿ 223 ಅಂಕ, ಅನಘಾ 219 ಅಂಕ, ಬಿ ಸಿದ್ದಾರ್ಥ್‌ ಪೈ 214 ಅಂಕ, ಹೆಗ್ಡೆ ಅನಿರುದ್ಧ್‌ ರಮೇಶ್‌ 210 ಅಂಕ, ಅಭಿಷೇಕ್‌ ಪಿ ಎಸ್‌ 209 ಅಂಕ, ವಿಂದ್ಯಾ ವಿನಯ್‌ ಹೆಗಡೆ 203 ಅಂಕ, , ಎಸ್‌ ಅನುರಾಜ್‌ 200 ಅಂಕವನ್ನು ಗಳಿಸುವ ಮೂಲಕ ಅಮೋಘ ಸಾಧನೆಗೈದಿದ್ದಾರೆ.

ಪ್ರಥಮ ಪಿಯುಸಿಯಿಂದಲೇ ವಿಶೇಷ ತರಬೇತಿ ನೀಡುತ್ತಿರುವ ಸಂಸ್ಥೆ

ಕಾರ್ಕಳ ಕ್ರಿಯೇಟಿವ್‌ ಕಾಲೇಜಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪ್ರಥಮ ಪಿಯುಸಿಯಿಂದಲೇ ವಿಶೇಷ ತರಬೇತಿಯನ್ನೂ ಅತ್ಯಂತ ಕಡಿಮೆ ಶುಲ್ಕದೊಂದಿಗೆ ನುರಿತ ಉಪನ್ಯಾಸಕರಿಂದ ನೀಡಲಾಗುತ್ತಿದೆ. ಸಂಸ್ಥೆಯ ಹೆಮ್ಮೆಯ ಸಾಧಕ ವಿದ್ಯಾರ್ಥಿಗಳನ್ನು ಕ್ರಿಯೇಟಿವ್‌ ಶಿಕ್ಷಣ ಪ್ರತಿಷ್ಠಾನದ ಆಡಳಿತ ಮಂಡಳಿ, ಪ್ರಾಂಶುಪಾಲರು, ವಾಣಿಜ್ಯ ವಿಭಾಗದ ಎಲ್ಲ ಉಪನ್ಯಾಸಕರು ಸಂಯೋಜಕರು ಅಭಿನಂದಿಸಿದ್ದಾರೆ.

ಇದನ್ನೂ ಓದಿ : ಅಡಿಕೆ ಮಾರುಕಟ್ಟೆ: ಎಷ್ಟಿದೆ ದರ?

HOW TO APPLY : NEET-UG COUNSELLING 2023

Categories
ಕರಾವಳಿ ಕಾರ್ಕಳ ಮಂಗಳೂರು

ಕಾರ್ಕಳ ಕೆನರಾ ಬ್ಯಾಂಕ್ ನಲ್ಲಿ ಬೆಂಕಿ: ತಪ್ಪಿತು ದುರಂತ!

ಕಾರ್ಕಳ ಕೆನರಾ ಬ್ಯಾಂಕ್ ನಲ್ಲಿ ಬೆಂಕಿ: ತಪ್ಪಿತು ದುರಂತ!
– ಕಾರ್ಕಳದಲ್ಲಿ ವೈದ್ಯರು, ಪ್ರೊಫೆಸರ್ ಅಡ್ಡಗಟ್ಟಿ ಬೆದರಿಕೆ

NAMMUR EXPRESS NEWS
ಕಾರ್ಕಳ: ( Karkala ) ಕಾರ್ಕಳ ನಗರದ ಬಸ್ ನಿಲ್ದಾಣ ಸಮೀಪದಲ್ಲಿನ ಕೆನರಾ ಬ್ಯಾಂಕ್‌ನಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ಕಾಣಿಸಿಕೊಂಡು ಕೆಲಕಾಲ ಆತಂಕ ಸೃಷ್ಟಿ ಮಾಡಿದ ಘಟನೆ ಆ. 3ರ ಬೆಳಿಗ್ಗೆ ಸಂಭವಿಸಿದೆ. ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ದೊಡ್ಡ ದುರಂತ ತಪ್ಪಿದೆ. ಘಟನೆ ನಡೆದ ತಕ್ಷಣವೇ ಬ್ಯಾಂಕ್ ಸಿಬ್ಬಂದಿ ಅಗ್ನಿ ಶಾಮಕ ದಳಕ್ಕೆ ಮಾಹಿತಿ ನೀಡಿದ್ದು ಘಟನಾ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಾರ್ಯಚರಣೆಯಲ್ಲಿ ಅಗ್ನಿಶಾಮಕ ಠಾಣೆಯ ಠಾಣಾಧಿಕಾರಿ ಆಲ್ಬರ್ಟ್‌ ಮೋನಿಸ್, ಸಿಬ್ಬಂದಿ ರವೀಂದ್ರ, ರೂಪೇಶ್, ಹರಿಪ್ರಸಾದ್, ಕೇಶವ್, ಹಸನ್ ಹಾಗೂ ರವಿಚಂದ್ರ ಪಾಲ್ಗೊಂಡಿದ್ದರು.

ಕಾರ್ಕಳದಲ್ಲಿ ವೈದ್ಯರು, ಪ್ರೊಫೆಸರ್ ಅಡ್ಡಗಟ್ಟಿ ಬೆದರಿಕೆ

ಮಂಗಳೂರಿನ ಹೆಸರಾಂತ ಕಾಲೇಜ್‌ವೊಂದರ ನಾಲ್ವರು ವೈದ್ಯರು ಹಾಗೂ ಅದೇ ಕಾಲೇಜಿನ ಇಬ್ಬರು ಮಹಿಳಾ ಪ್ರೊಫೆಸರ್ ಅವರೊಂದಿಗೆ ಒಂದೇ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಹಿಂದೂ ಸಂಘಟನೆ ಹೆಸರಲ್ಲಿ ಅನೇಕರು ನೈತಿಕ ಪೊಲೀಸ್ ಗಿರಿ ನಡೆಸಿದ ಘಟನೆ ಕಾರ್ಕಳದಲ್ಲಿ ನಡೆದಿದೆ. ಮಾಳ ಎಸ್ ಕೆ ಬಾರ್ಡರ್ ಬಳಿಯಿಂದ ಇವರ ಕಾರನ್ನು ಹಿಂಬಾಲಿಸಿ ಮತ್ತೊಂದು ಕಾರಿನಲ್ಲಿ ಕಾರ್ಕಳದ ಕುಂಟಲ್ಪಾಡಿ ಎಂಬಲ್ಲಿ ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಒಡ್ಡಿದ್ದರು. ಕಾರಿನಲ್ಲಿದ್ದ ಮಹಿಳೆಯರು ತಕ್ಷಣ 112ಗೆ ಕರೆ ಮಾಡಿ ಘಟನೆಯ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.ಒಂದೇ ಕಾರಿನಲ್ಲಿ ಮಂಗಳೂರಿನಿಂದ ಶೃಂಗೇರಿ ತೆರಳಿ ಕಾರ್ಕಳದ ಕುಂಟಲ್ಪಾಡಿ ಮಾರ್ಗವಾಗಿ ಮಂಗಳೂರಿಗೆ ತೆರಳುತ್ತಿರುವರು ವಿಭಿನ್ನ ಕೋಮಿನವರು ಎಂದು ತಿಳಿದು ಹಿಂದು ಜಾಗರಣಾ ವೇದಿಕೆ ಕಾರ್ಯಕರ್ತರು ಕಾರನ್ನು ಹಿಂಬಾಲಿಸಿ ಅಡ್ಡಗಟ್ಟಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.ಬಂಧಿತರಾದ ಸಂತೋಷ್ ನಂದಳಿಕೆ, ಕಾರ್ತಿಕ್ ಪೂಜಾರಿ, ಸುನೀಲ್ ಮೂಲ್ಯ ಮಿಯ್ಯಾರು, ಸಂದೀಪ್ ಪೂಜಾರಿ ಮಿಯ್ಯಾರು, ಸುಜಿತ್ ಸಫಲಿಗ ತೆಳ್ಳಾರು ಇವರನ್ನು ನ್ಯಾಯಾಧೀಶರ ಮುಂದೆ ಪೊಲೀಸರು ಹಾಜರುಪಡಿಸಿದ್ದಾರೆ.

ವಿಟ್ಲದಲ್ಲಿ ವೃದ್ಧನ ಮೇಲೆ ಹಲ್ಲೆಗೆ ಯತ್ನ, ಮನೆಗೆ ಕಲ್ಲು ತೂರಾಟ

ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ವೃದ್ಧನ ಮೇಲೆ ತಂಡವೊಂದು ಹಲ್ಲೆಗೆ ಯತ್ನಿಸಿದ ಘಟನೆ ವಿಟ್ಲ ಠಾಣಾ ವ್ಯಾಪ್ತಿಯ ಕೊಳ್ಳಾಡು ಗ್ರಾಮದ ನಾರ್ಶ ಅಲದಡಿ ಎಂಬಲ್ಲಿ ನಡೆದಿದೆ. ವೃದ್ಧ ಇಸ್ಮಾಯಿಲ್ ಮತ್ತು ಆತನ ಪುತ್ರನ ಮೇಲೆ ನಾರ್ಶ ನಿವಾಸಿ ಈಚು ಯಾನೆ ಇಸುಬು ಮತ್ತು ಆತನ ಕುಟುಂಬದವರು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆಗೆ ಯತ್ನ ನಡೆಸಿದ್ದಲ್ಲದೇ, ಮನೆಗೆ ಕಲ್ಲು ತೂರಾಟ ನಡೆಸಿ ಜೀವಬೆದರಿಕೆಯೊಡ್ಡಿದ್ದಾರೆ. ಈ ಪ್ರಕರಣ ವಿಟ್ಲ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಇದನ್ನೂ ಓದಿ : ಖರ್ಗೆ ಮೈಬಣ್ಣದ ವಿವಾದ: ಜ್ಞಾನೇಂದ್ರ ಕ್ಷಮೆಗೆ ಕಾಂಗ್ರೆಸ್ ಪಟ್ಟು!

HOW TO APPLY : NEET-UG COUNSELLING 2023

Categories
ಕರಾವಳಿ ಕಾರ್ಕಳ

ಕಾರ್ಕಳದ ಕ್ವಾರೆಯಲ್ಲಿ ಸ್ಫೋಟ: ಕಾರ್ಮಿಕ ಸಾವು!

ಕಾರ್ಕಳದ ಕ್ವಾರೆಯಲ್ಲಿ ಸ್ಫೋಟ: ಕಾರ್ಮಿಕ ಸಾವು!
– ನಿಟ್ಟೆ ಗುಂಡ್ಯಡ್ಕ ಕಲಿಕಲ್ಲಿನ ಕ್ವಾರೆಯಲ್ಲಿ ಸ್ಪೋಟ
– ಕಾರ್ಕಳದಲ್ಲಿ ಗಾಂಜಾ ಮಾರಾಟ ಜಾಲ: ಅರೆಸ್ಟ್

NAMMUR EXPRESS NEWS
ಕಾರ್ಕಳ: ( Karkala ) ಕಾರ್ಕಳ ತಾಲೂಕು ನಿಟ್ಟೆ ಗುಂಡ್ಯಡ್ಕದ ಕರಿಕಲ್ಲಿನ ಕ್ವಾರೆಯಲ್ಲಿ ಸಂಭವಿಸಿದ ಸ್ಫೋಟದಲ್ಲಿ ಕಾರ್ಮಿಕನೊಬ್ಬ ಗಂಭೀರ ಸ್ವರೂಪದಲ್ಲಿ ಗಾಯಗೊಂಡು ಸಾವಿಗೀಡಾದ ಘಟನೆ ಸಂಭವಿಸಿದೆ. ಸಾವಿಗೀಡಾದ ವ್ಯಕ್ತಿಯನ್ನು ಬಾಗಲಕೋಟೆಯ ವೆಂಕಟೇಶ್ (32) ಎಂದು ಗುರುತಿಸಲಾಗಿದೆ. ಕ್ವಾರೆಯಲ್ಲಿ ಬಂಡೆ ಸಿಡಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ ಎಂದು ಸ್ಥಳೀಯ ಮೂಲಗಳಿಂದ ತಿಳಿದಿಬಂದಿದೆ. ಕ್ವಾರೆಯಲ್ಲಿ ದುಡಿಯುತ್ತಿದ್ದ ಸಂಭವಿಸಿದ ಸ್ಪೋಟದಿಂದ ವೆಂಕಟೇಶ್ ಸ್ಥಳದಲ್ಲಿ ಕುಸಿದು ಬಿದ್ದು ಗಂಭೀರ ರೀತಿಯಲ್ಲಿ ಗಾಯಗೊಂಡಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ. ಘಟನಾ ಸ್ಥಳಕ್ಕೆ ಗ್ರಾಮಾಂತರ ಪೊಲೀಸರು ಭೇಟಿ ನೀಡಿದ್ದಾರೆ.

ಕಾರ್ಕಳದಲ್ಲಿ ಗಾಂಜಾ ಮಾರಾಟ ಜಾಲ!

ಕಾರ್ಕಳ ತಾಲೂಕು ವ್ಯಾಪ್ತಿಯಲ್ಲಿ ರಾಜಾರೋಷವಾಗಿ ಗಾಂಜಾ ಮಾರಾಟವಾಗುತ್ತಿದ್ದು, ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಖಚಿತ ವರ್ತಮಾನದ ಮೇರೆಗೆ ಕಾರ್ಕಳ ನಗರ ಠಾಣಾ ಪೊಲೀಸರು ಮಿಯ್ಯಾರು ಗ್ರಾಮದ ಕಾರೋಲ್‌ಗುಡ್ಡೆ ಪರಿಸರದಲ್ಲಿ ಕಾರ್ಯಚರಣೆ ನಡೆಸಿದ್ದಾರೆ. ಕಲೋಲ್ ಗುಡ್ಡೆಯ ನರೇಂದ್ರ(40), ಪುರಿ ಮಸೀದಿ ಬಳಿಯ ಸಿರಾಜ್(21), ತೆಳ್ಳಾರು ಮೇಲಿನಪಲೆಯ ಅಬ್ದುಲ್ ಆರೀಫ್(26), ಬೈಲೂರು ಬಾಣಾಲು ಜೀವನ್ (25) ಎಂಬವರನ್ನು ಪೋಲಿಸರು ಬಂಧಿಸಿದ್ದಾರೆ.
ಜು.31ರ ಮಧ್ಯಾಹ್ನ 3:00 ಗಂಟೆಗೆ ಆರೋಪಿಗಳು ಮಿಯ್ಯಾರು ಗ್ರಾಮದ ಕಾರೋಲ್‌ಗುಡ್ಡೆ 5 ಸೆಂಟ್ಸ್‌ನಲ್ಲಿರುವ ಕಲ್ಲು ಕೆತ್ತುವ ಸ್ಥಳದ ಬಳಿ ಹಣ ಪಡೆದು ಅಮಲು ಪದಾರ್ಥವಾದ ಗಾಂಜಾವನ್ನು ಮಾರಾಟ ಮಾಡುತ್ತಿದ್ದರು.

ಘಟನಾ ಸ್ಥಳದಲ್ಲಿ ಕಾರ್ಯಚರಣೆ ನಡೆಸಿದ ಪೊಲೀಸರು 1ನೇ ಆರೋಪಿಯ ವಶದಲ್ಲಿದ್ದ ಸಣ್ಣ ಪ್ಲಾಸ್ಟಿಕ್ ಚೀಲದಲ್ಲಿ 182 ಗ್ರಾಂ ಮಾದಕವಸ್ತು ಗಾಂಜಾದ ಹಸಿ ಹೂವುಗಳು, ತೆನೆಗಳು, ಬೀಜ, ಎಲೆಗಳು, ಗಾಂಜಾ ಮಾರಾಟ ಮಾಡಿದ ನಗದು ಹಣ, ಮೋಟಾರ್ ಸೈಕಲ್, 2ರಿಂದ 4 ನೇ ಅಪಾದಿತರ ವಶದಿಂದ ಪ್ಲಾಸ್ಟಿಕ್ ಚೀಲ ಸಹಿತ ತಲಾ 12 ಗ್ರಾಮ್ ಮಾದಕ ವಸ್ತು ಗಾಂಜಾದ ಹಸಿ ಹೂವುಗಳು, ತೆನೆಗಳು, ಬೀಜ, ಎಲೆಗಳನ್ನು, ತಲಾ ರೂ. 100ನ್ನು ಸ್ವಾಧೀನಪಡಿಸಿ ಅಪಾದಿತರನ್ನು ದಸ್ತಗಿರಿ ಮಾಡಿದ್ದು ಸ್ವಾಧೀನಪಡಿಸಿದ ಗಾಂಜಾದ ಮೌಲ್ಯ ರೂ 10,500 ನಗದು ರೂ 1,800 ಹಾಗೂ ರೂ 50,000ಮೌಲ್ಯದ ಮೋಟಾರ್ ಸೈಕಲನ್ನು
ಸ್ವಾಧೀನಪಡಿಸಿಕೊಂಡಿದ್ದಾರೆ.

ಇದನ್ನೂ ಓದಿ : ಕಾಳುಮೆಣಸು ಬೆಳೆಗಾರರಿಗೆ ಬಂಪರ್!

HOW TO APPLY : NEET-UG COUNSELLING 2023

Categories
ಕಾರ್ಕಳ

ದೇಶದಲ್ಲೇ ಈಗ ಕ್ರಿಯೇಟಿವ್‌ ಕಾಲೇಜು ಹೆಸರು!

ದೇಶದಲ್ಲೇ ಈಗ ಕ್ರಿಯೇಟಿವ್‌ ಕಾಲೇಜು ಹೆಸರು!
– ಜಾಗೃತಿ ಕೆ.ಪಿ ದೇಶದ ಪ್ರತಿಷ್ಠಿತ ವೈದ್ಯಕೀಯ ಶಿಕ್ಷಣ ಸಂಸ್ಥೆ ಜಿಪ್ಮರ್‌ (JIPMER)ಗೆ, ಉದ್ಭವ್‌ ಎಂ.ಆರ್‌ AIIMSಗೆ ಆಯ್ಕೆ
– ವಿದ್ಯಾರ್ಥಿಗಳ ಸಾಧನೆಗೆ ಅಭಿನಂದನೆ

NAMMUR EXPRESS NEWS
ಕಾರ್ಕಳ: ( Karkala ) ಕಳೆದ ಮೇ ತಿಂಗಳಿನಲ್ಲಿ ನಡೆದ ನೀಟ್‌ ಪರೀಕ್ಷೆಯಲ್ಲಿ ವೈದ್ಯಕೀಯ ಮಹಾವಿದ್ಯಾಲಯಗಳಿಗೆ ಪ್ರವೇಶ ಆರಂಭಗೊಂಡಿದ್ದು ಕಾರ್ಕಳದ ಕ್ರಿಯೇಟಿವ್‌ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಜಾಗೃತಿ ಕೆ ಪಿ ದೇಶದ ಪ್ರತಿಷ್ಠಿತ ವೈದ್ಯಕೀಯ ವಿದ್ಯಾಲಯ ಪುದುಚೆರಿಯ ಜಿಪ್ಮರ್‌ ಸಂಸ್ಥೆಯಲ್ಲಿ ಪ್ರವೇಶ ಪಡೆದುಕೊಂಡಿದ್ದಾರೆ. ದೇಶಾದ್ಯಂತ ಇಪ್ಪತ್ತು ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಬರೆದ ನೀಟ್‌ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಿ (JIPMER) ನಲ್ಲಿ ಪ್ರವೇಶ ಪಡೆಯುವುದು ಅಸಾಮಾನ್ಯ ಸಾಧನೆಯಾಗಿದೆ. ಕು.ಜಾಗೃತಿ ಕೆ ಪಿ ನೀಟ್‌ ಪರೀಕ್ಷೆಯಲ್ಲಿ 661 ಅಂಕ ಗಳಿಸುವುದರ ಮೂಲಕ ಜಿಪ್ಮರ್‌ (JIPMER) ನಂತಹ ಉನ್ನತ ವಿದ್ಯಾಲಯದಲ್ಲಿ ದೇಶದಲ್ಲಿಯೇ ಕೇವಲ 243 ಸೀಟ್‌ಗಳನ್ನು ಹೊಂದಿರುವ ಸಂಸ್ಥೆಯಲ್ಲಿ ಪ್ರವೇಶ ಪಡೆದಿರುವುದು ಹೆಮ್ಮೆಯ ಸಂಗತಿಯಾಗಿದೆ. ಕ್ರಿಯೇಟಿವ್‌ ಕಾಲೇಜಿನ ಇನ್ನೋರ್ವ ಪ್ರತಿಭಾವಂತ ವಿದ್ಯಾರ್ಥಿ ಉದ್ಭವ್‌ ಎಂ ಆರ್‌ ದೇಶದ ಪ್ರತಿಷ್ಠಿತ ವೈದ್ಯಕೀಯ ವಿದ್ಯಾ ಸಂಸ್ಥೆಯಾದ ಏಮ್ಸ್‌ (AIIMS) ನಾಗ್ಪುರದಲ್ಲಿ ಪ್ರವೇಶ ಪಡೆದುಕೊಂಡಿದ್ದಾರೆ. ದೇಶಾದ್ಯಂತ ಒಟ್ಟು 2046 ಸೀಟ್‌ ಗಳಿರುವ ಏಮ್ಸ್‌ ನಲ್ಲಿಯೂ ಪ್ರವೇಶ ಪಡೆದುಕೊಂಡಿರುವುದು ಅಪ್ರತಿಮ ಸಾಧನೆಯಾಗಿದೆ.

ಪ್ರಥಮ ಪ್ರಯತ್ನದಲ್ಲೇ ವೈದ್ಯಕೀಯ ಸೀಟು!

ಕ್ರಿಯೇಟಿವ್‌ ಶಿಕ್ಷಣ ಪ್ರತಿಷ್ಠಾನದಲ್ಲಿ ನಿರಂತರವಾಗಿ ನಡೆಯುವ ನೀಟ್‌ ತರಬೇತಿ ಪಡೆದ ಸಂಸ್ಥೆಯ ಅನೇಕ ವಿದ್ಯಾರ್ಥಿಗಳು ತಮ್ಮ ಪ್ರಥಮ ಪ್ರಯತ್ನದಲ್ಲಿಯೇ ದೇಶದ ಇನ್ನೂ ಅನೇಕ ವೈದ್ಯಕೀಯ ವಿದ್ಯಾಲಯಗಳಲ್ಲಿ ಪ್ರವೇಶ ಪಡೆಯಲು ಅರ್ಹತೆ ಗಳಿಸಿದ್ದಾರೆ. ಬೆಂಗಳೂರು, ಮೈಸೂರು, ಧಾರವಾಡ, ಗುಲ್ಬರ್ಗಾಗಳ ವೈದ್ಯಕೀಯ ವಿದ್ಯಾಲಯಗಳಲ್ಲಿ ಸೀಟು ಪಡೆಯಲು ಕ್ರಿಯೇಟಿವ್‌ ನ ಅನೇಕ ವಿದ್ಯಾರ್ಥಿಗಳು ಪ್ರಥಮ ಹಂತದ ಕೌನ್ಸ್‌ಲಿಂಗ್‌ ನಲ್ಲಿದ್ದಾರೆ. ಕಳೆದ ವರ್ಷವೂ ಸಂಸ್ಥೆಯ ಹಲವಾರು ವಿದ್ಯಾರ್ಥಿಗಳು ಪ್ರತಿಷ್ಠಿತ ವೈದ್ಯಕೀಯ ವಿದ್ಯಾಲಯಗಳಲ್ಲಿ ಪ್ರವೇಶ ಪಡೆದಿರುತ್ತಾರೆ.

ವಿದ್ಯಾರ್ಥಿಗಳ ಸಾಧನೆಗೆ ಅಭಿನಂದನೆ

ಕಾರ್ಕಳ ಕ್ರಿಯೇಟಿವ್ ಕಾಲೇಜು ಪ್ರಾರಂಭವಾದ ಎರಡೇ ವರ್ಷಗಳಲ್ಲಿ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿಯೂ ಅತ್ಯುತ್ತಮ ಸಾಧನೆಗೈದಿದೆ. ವಿದ್ಯಾರ್ಥಿಗಳ ಈ ಅತ್ಯುತ್ತಮ ಸಾಧನೆಗಾಗಿ ಕ್ರಿಯೇಟಿವ್‌ ಶಿಕ್ಷಣ ಪ್ರತಿಷ್ಠಾನದ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕ ವರ್ಗದವರು, ಸಂಯೋಜಕರಾದಲೋಹಿತ್‌ ಎಸ್‌ ಕೆ ಅಭಿನಂದಿಸಿದ್ದಾರೆ.

ಇದನ್ನೂ ಓದಿ : ಅಡಿಕೆ ದರ ಎಷ್ಟಿದೆ…ಹೆಚ್ಚಾಯ್ತಾ..? ಕಡಿಮೆ ಆಯ್ತಾ?

HOW TO APPLY : NEET-UG COUNSELLING 2023

Categories
ಕಾರ್ಕಳ

ಕೊಳಚೆ ನಗರ ಆಗ್ತಿದೆಯಾ ಕಾರ್ಕಳ!?

ಕೊಳಚೆ ನಗರ ಆಗ್ತಿದೆಯಾ ಕಾರ್ಕಳ!?
– ಒಳ ಚರಂಡಿ ಸಮಸ್ಯೆಗೆ ಪರಿಹಾರ ಇಲ್ವಾ?
– ವಾಹನ ಸವಾರರು, ಜನತೆಯ ಪೀಕಲಾಟ

NAMMUR EXPRESS NEWS
ಕಾರ್ಕಳ: ( Karkala ) ನೆಲದೊಳಗೆ ಒಳ ಚರಂಡಿ ನೀರು ಸೋರಿಕೆಯಾಗಿ ಕಾರ್ಕಳದಲ್ಲಿ ಸಮಸ್ಯೆ ಸೃಷ್ಟಿ ಆಗಿದೆ.
ಕಾರ್ಕಳದ ಬಂಡಿ ಮಠ ಬಸ್ ನಿಲ್ದಾಣದ ಮುಂಭಾಗದ ರಸ್ತೆಯ ಒಳಚರಂಡಿ ಚೇಂಬರ್ ನಲ್ಲಿ ಮೇಲಿನ ನೀರು ಸೋರಿಕೆಯಾಗಿ ಸಮಸ್ಯೆ ಸೃಷ್ಟಿಸಿದೆ. ಇಲ್ಲಿ ಕೊಳಚೆ ನೀರು ಸೋರಿಕೆ ಕಂಡು ಹೊರ ಚಿಮ್ಮಿ ಹರಿಯುತ್ತಿರುವುದಲ್ಲದೆ ಅವೆಲ್ಲ ರಸ್ತೆ ಮೇಲೆಯೇ ಹರಿದು ಪರಿಸರ ಮಲಿನಗೊಂಡಿರುವುದಲ್ಲದೆ ಪರಿಸರ ಗಬ್ಬೆದ್ದು ನಾರುತ್ತಿದೆ. ಪುರಸಭೆ ವ್ಯಾಪ್ತಿಯ 3 ಮಾರ್ಗದಿಂದ ಬಂಡಿಮಠ ತನಕ ಯುಜಿಡಿ ಕೊಳವೆ ಮಾರ್ಗ ಎಲ್ಲೋ ಒಂದು ಕಡೆ ಬಂದ್ ಆಗಿ, ಮ್ಯಾನ್ ಹೋಲ್ ಗಳ ಮೂಲಕ ಕೊಳಚೆ ನೀರು ರಸ್ತೆ ಮೇಲೆ ಉಕ್ಕಿ ಹರಿಯುತ್ತಿರುವುದು ಮಳೆಗಾಲದಲ್ಲಿ ಸರ್ವೇಸಾಮಾನ್ಯವಾಗಿದೆ.

ಕಾರ್ಕಳ ನಗರದ ಪ್ರಮುಖ ರಸ್ತೆಗಳ ಒಳಚರಂಡಿ ಚೇಂಬರ್ ಗಳು ಸೋರಿಕೆ ಕಂಡಿದ್ದು ಪುರಸಭೆ ಸಿಬ್ಬಂದಿ ಆಗಾಗ ಸಕಿಂಗ್ ಯಂತ್ರದ ಮೂಲಕ ಸೋರಿಕೆ ತಡೆಯುವ ಪ್ರಯತ್ನ ನಡೆಸುತ್ತಲೇ ಇದ್ದಾರೆ. ಇದರ ಮಧ್ಯೆ ಬಂಡಿಮಠ ಬಸ್ ನಿಲ್ದಾಣ ಮುಂಭಾಗದ ಹೆದ್ದಾರಿಯಲ್ಲಿ ಎರಡು ಕಡೆ ಒಳಚರಂಡಿ ಚೇಂಬರ್ ನಿಂದ ನೀರು ಸೋರಿಕೆಯಾಗುತ್ತಿದೆ. ಕೊಳಚೆ ನೀರು ರಸ್ತೆ ಮೇಲೆ ಹರಿದು ಪರಿಸರ ಗಬ್ಬೆದ್ದು ನಾರುತಿದೆ. ಹೆದ್ದಾರಿಯಲ್ಲಿ ಸಹಸ್ರಾರು ವಾಹನಗಳು ನಿತ್ಯ ಓಡಾಟ ನಡೆಸುತ್ತಿವೆ. ಅವಾಗೆಲ್ಲ ಕೊಳಚೆ ನೀರಿನ ಮೇಲೆಯೇ ಅವುಗಳು ಸಾಗುತ್ತಿವೆ. ಈ ಜಾಗದಲ್ಲಿ ವಾಹನಗಳು ಒಂದನ್ನೊಂದು ಓವರ್ ಟೆಕ್ ಮಾಡುವಾಗ ಆಟೋರಿಕ್ಷಾ ದ್ವಿಚಕ್ರ ವಾಹನಗಳ ಸವಾರರ ಮೇಲೆ ಮೇಲಿನ ನೀರು ಎರಚಲ್ಪಟ್ಟು ಸಮಸ್ಯೆ ಸೃಷ್ಟಿಯಾಗುತ್ತಿದೆ. ಮೇಲಿನ ನೀರು ಮಳೆ ನೀರಿನ ಜೊತೆ ಸೇರಿ ಹರಿದು ಅಲ್ಲೇ ಪಕ್ಕದಲ್ಲಿ ಸಂಗ್ರಹ ಗೊಳ್ಳುತ್ತಿದೆ. ಇಲ್ಲಿ ಆಟೋರಿಕ್ಷ ನಿಲ್ದಾಣ,ಅಂಗಡಿಗಳು ಇದ್ದು ಅಲ್ಲಿದ್ದವರೆಲ್ಲ ಮೂಗು ಮುಚ್ಚಿಕೊಂಡು ದಿನ ಕಳೆಯುವ ಸ್ಥಿತಿ ಇದೆ.

ಬಸ್ ನಿಲ್ದಾಣದ ಸಮೀಪವೇ ಈ ಸಮಸ್ಯೆ ತಲೆದೂರಿದ್ದು ಮೇಲಿನ ನೀರು ಸಂಗ್ರಹವಾಗುವ ಜಾಗದಲ್ಲೇ ಬಸ್ ಗಾಗಿ ಕಾದು ನಿಲ್ಲುವ ಪ್ರಯಾಣಿಕರು ಕೊಳಚೆ ನೀರಿನಾ ದುರ್ವಾಸನೆ ತಡೆಯಲು ಸಾಧ್ಯವಿಲ್ಲ ಮೂಗಿಗೆ ಬೆರಳು ಹಿಡಿದುಕೊಂಡೆ ನಿಂತಿರುವ ದೃಶ್ಯಗಳು ಮಾಮೂಲಿಯಾಗಿದೆ.

ಇದನ್ನೂ ಓದಿ : ರಾಜ್ಯದಲ್ಲಿ ಮತ್ತೆ ಸುದ್ದಿ ಮಾಡಿದ ತೀರ್ಥಹಳ್ಳಿ ಪ್ರತೀಕ್ ಗೌಡ ಕೇಸ್!

HOW TO APPLY : NEET-UG COUNSELLING 2023

Categories
ಕಾರ್ಕಳ

ಸಿ.ಎ, ಸಿ.ಎಸ್‌.ಇ.ಇ.ಟಿಯಲ್ಲಿ ವಿಫುಲ ಅವಕಾಶ

ಸಿ.ಎ, ಸಿ.ಎಸ್‌.ಇ.ಇ.ಟಿಯಲ್ಲಿ ವಿಫುಲ ಅವಕಾಶ
– ಕ್ರಿಯೇಟಿವ್‌ ಪಿ.ಯು ಕಾಲೇಜಿನ ವಾಣಿಜ್ಯ ವಿದ್ಯಾರ್ಥಿಗಳಿಗಾಗಿ ಸಿ.ಎ, ಸಿ.ಎಸ್‌.ಇ.ಇ.ಟಿ ಮಾಹಿತಿ ಕಾರ್ಯಗಾರ

NAMMUR EXPRESS NEWS
ಕಾರ್ಕಳ: ಕಾರ್ಕಳದ ಕ್ರಿಯೇಟಿವ್‌ ಪಿಯು ಕಾಲೇಜಿನ ವಾಣಿಜ್ಯ ವಿದ್ಯಾರ್ಥಿಗಳಿಗಾಗಿ ನಡೆದ ಸಿ.ಎ, ಸಿ.ಎಸ್‌.ಇ.ಇ.ಟಿ ಮಾಹಿತಿ ಕಾರ್ಯಗಾರದಲ್ಲಿ ವಿದ್ಯಾರ್ಥಿಗಳಿಗೆ ಭವಿಷ್ಯದ ಹಲವು ಅವಕಾಶಗಳ ಬಗ್ಗೆ ಮಾಹಿತಿ ನೀಡಲಾಯಿತು.
17.07.2023 ಮತ್ತು 19.07.2023ರಂದು ನಡೆದ ಸಿ.ಎ ಕಾರ್ಯಗಾರದಲ್ಲಿ ಮುಖ್ಯ ಸಂಪನ್ಮೂಲ ವ್ಯಕ್ತಿಗಳಾಗಿ ಪ್ರೋಫೆಸರ್‌ ರಾಜ್‌ ಗಣೇಶ್‌ ಕಾಮತ್‌ ಆಗಮಿಸಿ, ಪ್ರಸ್ತುತ ವಿದ್ಯಮಾನದಲ್ಲಿ ಚಾರ್ಟರ್ಡ್‌ ಅಕೌಂಟ್‌ ಕೋರ್ಸ್‌ ಗೆ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ವಿಫುಲ ಅವಕಾಶಗಳಿದ್ದು ವಿದ್ಯಾರ್ಥಿಗಳು ಕಾಲೇಜುನಲ್ಲಿ ಒದಗಿಸುವ ಈ ಕೋರ್ಸ್‌ ಅನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದರು.

ಸಿ.ಎಸ್.ಇ.ಇ.ಟಿ ಬಗ್ಗೆ ಖ್ಯಾತ ಕಂಪೆನಿ ಸೆಕ್ರೇಟರಿ ಸಂತೋಷ ಪ್ರಭು ವಿದ್ಯಾರ್ಥಿಗಳಿಗೆ ಕಂಪೆನಿ ಸೆಕ್ರೇಟಿಯ ಕಾರ್ಯವೈಖರಿ ಹಾಗೂ ಅಗತ್ಯತೆಗಳ ಬಗ್ಗೆ ವಿವರಿಸಿದರು. ಸಂಸ್ಥೆಯ ಸಂಸ್ಥಾಪಕರದ ಅಶ್ವತ್ ಎಸ್.ಎಲ್‌ ಹಾಗೂ ಗಣಪತಿ ಭಟ್‌ ಕೆ.ಎಸ್‌ ವಿದ್ಯಾರ್ಥಿಗಳಿಗೆ ಕೋರ್ಸ್‌ ನ ಮಹತ್ವವನ್ನು ನೀಡಿ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ರಾಘವೇಂದ್ರ ಬಿ.ರಾವ್‌, ಉಮೇಶ್‌, ಚಂದ್ರಕಾಂತ್‌ , ಜ್ಞಾನೇಶ್‌ ಕೋಟ್ಯಾನ್‌ ಮತ್ತಿತರಿದ್ದರು. ವಿದ್ಯಾರ್ಥಿನಿ ಸಾನ್ವಿ ಎಸ್‌.ರಾವ್‌ ಕಾರ್ಯಕ್ರಮ ನಿರೂಪಿಸಿದರು ಹಾಗೂ ನಮನ್‌ ವಂದಿಸಿದರು.

ಇದನ್ನೂ ಓದಿ : ಛೇ.. ಎಂಥಾ ನೀಚ ಕೃತ್ಯ…ಇಬ್ಬರು ಮಹಿಳೆಯರ ಬೆತ್ತಲೆ ಮೆರವಣಿಗೆ ಮಾಡಿ ಗ್ಯಾಂಗ್ ರೇಪ್!

HOW TO APPLY : NEET-UG COUNSELLING 2023

Categories
ಕಾರ್ಕಳ

ಅಪಾರ ಪ್ರಯತ್ನಕ್ಕೆ ಅಪರಿಮಿತ ಫಲವಿದೆ…

ಅಪಾರ ಪ್ರಯತ್ನಕ್ಕೆ ಅಪರಿಮಿತ ಫಲವಿದೆ…
– ಕಾರ್ಕಳ ಕ್ರಿಯೇಟಿವ್‌ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಸಾಹಿತ್ಯ-ಸಾಂಗತ್ಯ ಸರಣಿ ಕಾರ್ಯಕ್ರಮದಲ್ಲಿ
ಎಚ್‌. ಎಂ ನಾಗರಾಜ ರಾವ್‌ ಕಲ್ಕಟ್ಟೆ

NAMMUR EXPRESS NEWS
ಕಾರ್ಕಳ: ಯಶಸ್ಸಿಗಾಗಿ ನಿರೀಕ್ಷೆಗಳಿರುತ್ತವೆ. ನಿರೀಕ್ಷೆಯೇ ಪ್ರಧಾನವಾಗಬಾರದು. ಪ್ರತೀ ಸಲವೂ ಪ್ರಯತ್ನ ಪಡುವ ಮೂಲಕ ಯಶಸ್ಸು ಗಳಿಸಲು ಸಾಧ್ಯವಿದೆ. ಅಪಾರ ಪ್ರಯತ್ನಕ್ಕೆ ಅಪರಿಮಿತ ಫಲವಿದೆ ಎಂದು ಎಂದು ಕಳಸಾಪುರ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಎಚ್‌. ಎಂ ನಾಗರಾಜ ರಾವ್‌ ಕಲ್ಕಟ್ಟೆ ನುಡಿದರು.
ಕಾರ್ಕಳ ಕ್ರಿಯೇಟಿವ್‌ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಸಾಹಿತ್ಯ-ಸಾಂಗತ್ಯ ಸರಣಿ ಕಾರ್ಯಕ್ರಮ-7 ರಲ್ಲಿ ಪಾಲ್ಗೊಂಡು “ಸಾಹಿತ್ಯ ಸಹವಾಸ ವ್ಯಕ್ತಿತ್ವ ವಿಕಸನ” ಎಂಬ ವಿಚಾರದ ಕುರಿತು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಉಪನ್ಯಾಸ ನೀಡಿ, ಭಾಷೆ ಎಂಬುದು ಜ್ಞಾನದ ವಾಹಿನಿ. ಅದು ಜ್ಞಾನವೇ ಆಗಿರಬೇಕಿಲ್ಲ. ಸಂವಹನದಲ್ಲೂ ಸಾಹಿತ್ಯವಿದೆ. ಅದು ಹೃದಯದ ಭಾಷೆಯೇ ಆದಾಗ ಸರಳ ಸಾಹಿತ್ಯವಾಗುತ್ತದೆ. ಯಾವ ಮಾಧ್ಯಮದಲ್ಲಿ ಕಲಿತರೂ ಜ್ಞಾನಕ್ಕಾಗಿ ಕಲಿಯಬೇಕೇ ಹೊರತು ಹೊಟ್ಟೆಪಾಡಿಗಲ್ಲ. ಹಾಗೆಯೇ ಸಾಹಿತ್ಯವೆಂದರೆ ಮನಸ್ಸಿನ ತುಡಿತಗಳನ್ನು ಪ್ರತಿಬಿಂಬಿಸುವ ಮಾಧ್ಯಮ.

ಸಂತೋಷಕ್ಕಾಗಿ ಸಾಹಿತ್ಯ ಓದಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಪ್ರಾಂಶುಪಾಲರಾದ ವಿದ್ವಾನ್‌ ಗಣಪತಿ ಭಟ್‌, ಸಂಸ್ಥಾಪಕರಾದ ಅಶ್ವತ್‌ ಎಸ್‌. ಎಲ್, ಗಣಪತಿ ಭಟ್‌ ಕೆ. ಎಸ್‌ ಉಪನ್ಯಾಸಕ ವರ್ಗದವರು ಉಪಸ್ಥಿತರಿದ್ದರು. ಅಶ್ವತ್‌ ಎಸ್. ಎಲ್‌ ಪ್ರಸ್ತಾವನೆ ಮಾಡಿದರು, ಉಪನ್ಯಾಸಕಿ ಪ್ರಿಯಾಂಕ ಅತಿಥಿಗಳನ್ನು ಪರಿಚಯಿಸಿದರು. ಉಪನ್ಯಾಸಕ ರಾಮಕೃಷ್ಣ ಹೆಗಡೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಇದನ್ನೂ ಓದಿ : ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆ ತಯಾರಿ!

HOW TO APPLY : NEET-UG COUNSELLING 2023

Categories
ಕರಾವಳಿ ಕಾರ್ಕಳ

ನಾಟಾ ಪರೀಕ್ಷೆಯಲ್ಲೂ ಕ್ರಿಯೇಟಿವ್‌ ಕಾಲೇಜಿನ ಸಾಧನೆ!

ನಾಟಾ ಪರೀಕ್ಷೆಯಲ್ಲೂ ಕ್ರಿಯೇಟಿವ್‌ ಕಾಲೇಜಿನ ಸಾಧನೆ!
– ರಾಜ್ಯಕ್ಕೆ 28ನೇ ರ‍್ಯಾಂಕ್‌ ಪಡೆದ ಪ್ರಣವ್‌ ಪಿ ಸಂಜಿ
– ಪರೀಕ್ಷೆಗೆ ಹಾಜರಾದ ಎಲ್ಲಾ ವಿದ್ಯಾರ್ಥಿಗಳೂ ರಾಜ್ಯ ಮಟ್ಟದ 700ರ ಒಳಗಿನ ರ‍್ಯಾಂಕ್‌ ಗಳಿಕೆ

NAMMUR EXPRESS NEWS
ಕಾರ್ಕಳ: ದೇಶಾದಾದ್ಯಂತ ಆರ್ಕಿಟೆಕ್ಚರ್ ಕೋರ್ಸಿಗೆ ಸೇರ ಬಯಸುವ ವಿದ್ಯಾರ್ಥಿಗಳಿಗೆ ನಡೆಸಲಾದ ನಾಟಾ (NATA) ಪರೀಕ್ಷೆಯಲ್ಲಿ ಕಾರ್ಕಳ ಕ್ರಿಯೇಟಿವ್ ಪಿಯು ಕಾಲೇಜು ಉತ್ತಮ ಸಾಧನೆ ಮಾಡಿದೆ. ಕಾಲೇಜಿನ ವಿದ್ಯಾರ್ಥಿಯಾದ ಪ್ರಣವ್‌ ಪಿ ಸಂಜಿ ಇವರಿಗೆ ರಾಜ್ಯ ಮಟ್ಟದ 28 ನೇ ರ‍್ಯಾಂಕ್‌, ದೀಕ್ಷಾ ಪಾಂಡು 42 ನೇ ರ‍್ಯಾಂಕ್‌, ವರುಣ್‌ ಜಿ ನಾಯಕ್‌ 67 ನೇ ರ‍್ಯಾಂಕ್‌
ಲಭಿಸಿದೆ.

ಉಳಿದಂತೆ ಸಹನಾ ಎನ್‌ ಸಿ 104 ನೇ ರ‍್ಯಾಂಕ್‌, ನಾಗಮನಸ್ವಿನಿ ಕೆ 134 ನೇ ರ‍್ಯಾಂಕ್‌, ಧರಿನಾಥ್‌ ಬಸವರಾಜ್‌ ಕುಂಬಾರ್‌ 138 ನೇ
ರ‍್ಯಾಂಕ್‌, ದೀಪಕ್‌ ಕೆ ಎಸ್‌ 171 ನೇ ರ‍್ಯಾಂಕ್‌, ಸಂತೃಪ್ತಿ 209 ನೇ ರ‍್ಯಾಂಕ್‌, ಶ್ರವಣ್‌ ಎಸ್‌ 212 ನೇ ರ‍್ಯಾಂಕ್‌, ಅನ್ವಿತಾ ಕೆ 227 ನೇ ರ‍್ಯಾಂಕ್‌, ಹೇಮಂತ್‌ ಗೌಡ ಎಸ್‌ ಆರ್‌ 229 ನೇ ರ‍್ಯಾಂಕ್‌, ಸ್ಪರ್ಶ ಪಾರ್ಶ್ವನಾಥ್‌ 235 ನೇ ರ‍್ಯಾಂಕ್‌, ಅನುಷಾ ಐನಾಪುರ್‌ 254 ನೇ
ರ‍್ಯಾಂಕ್‌, ಕುಶಾಲ್‌ ಸೂರ್ಯ ಹೆಚ್‌ ಎಂ 259 ನೇ ರ‍್ಯಾಂಕ್‌, ಸ್ವಸ್ತಿಕ್‌ ಕೃಷ್ಣಮೂರ್ತಿ ಭಟ್‌ 273 ನೇ ರ‍್ಯಾಂಕ್‌, ಪೂಜಾ ಟಿ ಎಸ್‌ 274 ನೇ ರ‍್ಯಾಂಕ್‌, ಕಶಿಶ್‌ ಎಸ್‌ ಪಿ 292 ನೇ ರ‍್ಯಾಂಕ್‌, ಗುರುಲಿಂಗಯ್ಯ ಸುರೇಶ್‌ ಕಂಬಲಿಮತ್‌ 300 ನೇ ರ‍್ಯಾಂಕ್‌, ಚಿರಾಗ್‌ ವಾಸು ಶೆಟ್ಟಿ 332 ನೇ ರ‍್ಯಾಂಕ್‌, ಸಂಜಯ್‌ ಎಸ್‌ 335 ನೇ ರ‍್ಯಾಂಕ್‌, ಮುಕ್ತಿ ಜಿ 376 ನೇ ರ‍್ಯಾಂಕ್‌, ಬೆನೇಶ್‌ ಗೌಡ ಕೆ ಎ 391 ನೇ ರ‍್ಯಾಂಕ್‌, ತನುಶ್ರೀ ಜೆ ವಿ 434 ನೇ ರ‍್ಯಾಂಕ್‌, ಪಂಕಜ್‌ ಜೈ ಪ್ರಸಾದ್‌ 447 ನೇ ರ‍್ಯಾಂಕ್‌, ರಕ್ಷಿತಾ ಹೆಚ್‌ ಎಸ್‌ 457 ನೇ ರ‍್ಯಾಂಕ್‌, ಹರಿಪ್ರಸಾದ್‌ ಡಿ ಎಂ 470 ನೇ ರ‍್ಯಾಂಕ್‌, ದೀಕ್ಷಾ ಹೆಚ್ ಬಿ 480 ನೇ ರ‍್ಯಾಂಕ್‌, ಪನ್ವಿತ್‌ ಜಿ ಎನ್‌ 549 ನೇ ರ‍್ಯಾಂಕ್‌, ನೇಹಾ ಮಯ್ಯಾ 553 ನೇ ರ‍್ಯಾಂಕ್‌, ಚಿನ್ಮಯ್‌ ಸುರೇಶ್‌ ಶೆಟ್ಟಿ 585 ನೇ ರ‍್ಯಾಂಕ್‌ ಮತ್ತು ಯಶವಂತ್‌ ಆರ್‌ ಗೌಡ 696 ನೇ ರ‍್ಯಾಂಕ್‌ ಗಳಿಸಿರುತ್ತಾರೆ.

NATA ಪರೀಕ್ಷೆಗೆ ಹಾಜರಾದ ಎಲ್ಲಾ 31 ವಿದ್ಯಾರ್ಥಿಗಳೂ ತೇರ್ಗಡೆಯಾಗುವುದರ ಜೊತೆಗೆ ರಾಜ್ಯ ಮಟ್ಟದ 700 ರ ಒಳಗಿನ ರ‍್ಯಾಂಕ್‌ ಗಳಿಸಿರುವುದುವಿಶೇಷ. ಉತ್ತಮ ಅಂಕ ಗಳಿಸಿ ತೇರ್ಗಡೆಯಾದ ಸಾಧಕ ವಿದ್ಯಾರ್ಥಿಗಳನ್ನು ಕ್ರಿಯೇಟಿವ್‌ ವಿದ್ಯಾ ಸಂಸ್ಥೆಯ ಆಡಳಿತ ಮಂಡಳಿ, ಸಿಬ್ಬಂದಿ ವರ್ಗದವರು ಹಾಗೂ NATA ಸಂಯೋಜಕರಾದ ರಕ್ಷಿತ್‌, ಸುಮಂತ್‌ ದಾಮ್ಲೆ ಹರ್ಷ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ

ಇದನ್ನೂ ಓದಿ : ಆಗುಂಬೆ ಘಾಟಿ ಮೇಲೆ ನಿಂತಿದ್ದವನಿಗೆ ಗುದ್ದಿದ ಟ್ರಾಕ್ಟರ್

HOW TO APPLY : NEET-UG COUNSELLING 2023