Categories
ರಾಷ್ಟ್ರೀಯ ವಾರ್ತೆ

ಪ್ರಧಾನ ಮಂತ್ರಿ ಯಶಸ್ವಿ ವಿದ್ಯಾರ್ಥಿ ಯೋಜನೆ ಅರ್ಜಿಗೆ ಇಂದೇ ಕೊನೆ ದಿನ

ಪ್ರಧಾನ ಮಂತ್ರಿ ಯಶಸ್ವಿ ವಿದ್ಯಾರ್ಥಿ ಯೋಜನೆ ಅರ್ಜಿಗೆ ಇಂದೇ ಕೊನೆ ದಿನ
– 9 ರಿಂದ 12 ವರೆಗಿನ ವಿದ್ಯಾರ್ಥಿಗೆ ವಾರ್ಷಿಕ ವಿದ್ಯಾರ್ಥಿ ವೇತನ
– ಸೆ.29ರಂದು ವಿವಿಧ ಕೇಂದ್ರದಲ್ಲಿ ಪರೀಕ್ಷೆ
– ಯಾರು ಯಾರು ಅರ್ಜಿ ಸಲ್ಲಿಸಬಹುದು… ಇಲ್ಲಿದೆ ಡೀಟೇಲ್ಸ್!

NAMMUR EXPRESS NEWS
ನವ ದೆಹಲಿ: ರಾಷ್ಟ್ರೀಯ ಪರೀಕ್ಷಣ ಸಂಸ್ಥೆ ಪ್ರಧಾನ ಮಂತ್ರಿ ಯಶಸ್ವಿ ವಿದ್ಯಾರ್ಥಿ ಯೋಜನೆ 2023 ಅಧಿಸೂಚನೆ ಜಾರಿಗೊಂಡಿದೆ. ಭಾರತದ ಯಶಸ್ವಿ ವಿದ್ಯಾರ್ಥಿ ಅನುದಾನ ಪ್ರಶಸ್ತಿ ಯೋಜನೆಗೆ ಪ್ರಧಾನ ಮಂತ್ರಿ ಯಶಸ್ವಿ ವಿದ್ಯಾರ್ಥಿ ಯೋಜನೆ 2023 ತರಗತಿ 9 ರಿಂದ 12 ವರೆಗಿನ ವಿದ್ಯಾರ್ಥಿಗೆ ವಾರ್ಷಿಕ ಮೌಲ್ಯ ರೂಪಾಯಿ 75,000 ರಿಂದ 1,25,000 ವರೆಗಿನ 15,000 ಯಶಸ್ವಿ ವಿದ್ಯಾರ್ಥಿ ಅನುದಾನಗಳನ್ನು ಭಾರತ ಸರ್ಕಾರ ನೀಡುತ್ತದೆ. yet.nta.ac.in Registration 2023 ಅಧಿಕಾರಿಗಳ ಅಧಿಕೃತ ವೆಬ್ಸೈಟ್ ಮೂಲಕ 11 ಜುಲೈ ರಿಂದ 10 ಆಗಸ್ಟ್ 2023 ರವರೆಗೂ (ರಾತ್ರಿ 11:50 ಗಂಟೆಗೆ) ನಡೆಯಲಿದೆ.

ಪ್ರಧಾನ ಮಂತ್ರಿ ಯಶಸ್ವಿ ವಿದ್ಯಾರ್ಥಿ ಪರೀಕ್ಷೆ 2023 ದಿನಾಂಕ: 29 ಸೆಪ್ಟೆಂಬರ್ 2023 (ಶುಕ್ರವಾರ) ಪೆನ್ ಪೇಪರ್ OMR ಆಧಾರಿತ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದೆ. ಅಭಿಯಾಂತರೀತ ಅರ್ಜಿದಾರರು PM ಯಶಸ್ವಿ ವಿದ್ಯಾರ್ಥಿ ಯೋಜನೆ 2023 ಅಧಿಕಾರಿಗಳ ಅಧಿಕೃತ ವೆಬ್ಸೈಟ್ ಪರಿಶೀಲಿಸಬಹುದು. ವೆಬ್ ಲಿಂಕ್: yet.nta.ac.in Registration

ಇದನ್ನೂ ಓದಿ : ಅಡಿಕೆ ಮಾರುಕಟ್ಟೆ: ಎಷ್ಟಿದೆ ದರ?

HOW TO APPLY : NEET-UG COUNSELLING 2023

Categories
ರಾಷ್ಟ್ರೀಯ ವಾರ್ತೆ

ಮನೆ ಕಟ್ಟುವವರಿಗೆ ಗುಡ್‌ನ್ಯೂಸ್..!

ಮನೆ ಕಟ್ಟುವವರಿಗೆ ಗುಡ್‌ನ್ಯೂಸ್..!
– ಸಿಮೆಂಟ್ ಬೆಲೆಯಲ್ಲಿ ಕೊಂಚ ಇಳಿಕೆ ಸಾಧ್ಯತೆ
– ಬೇಡಿಕೆ ಕಡಿಮೆ ಹಿನ್ನೆಲೆಯಲ್ಲಿ ಸಿಮೆಂಟ್ ಬೆಲೆ ಇಳಿಕೆ

NAMMUR EXPRESS NEWS
ದೇಶದಲ್ಲಿ ಸಿಮೆಂಟ್ ಬೆಲೆಯಲ್ಲಿ ಇಳಿಕೆಯಾಗುವ ಸಾಧ್ಯತೆ ಇರುವುದರಿಂದ ಈಗ ಮನೆ ಕಟ್ಟುವುದು ಸ್ವಲ್ಪ ಅಗ್ಗವಾಗಬಹುದು. ಮುಂಬರುವ ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು, ದೇಶದಲ್ಲಿ ನಿರ್ಮಾಣ ಚಟುವಟಿಕೆಗಳಲ್ಲಿ ಬಿರುಸು ಉಂಟಾಗಲಿದೆ ಮತ್ತು ಅದರ ಪರಿಣಾಮವು ಸಿಮೆಂಟ್‌ಗೆ ಹೆಚ್ಚುತ್ತಿರುವ ಬೇಡಿಕೆಯ ರೂಪದಲ್ಲಿ ಕಂಡುಬರುತ್ತದೆ. ಆದಾಗ್ಯೂ, ಅದರ ಬೆಲೆಗಳು ಪ್ರಸ್ತುತ ತಿಂಗಳು ಮತ್ತು ಮುಂಬರುವ ಎರಡು ತಿಂಗಳಲ್ಲಿ ಕಡಿಮೆಯಾಗುವುದನ್ನು ಕಾಣಬಹುದು.

ಕಳೆದ ಕೆಲವು ತಿಂಗಳುಗಳಲ್ಲಿ, ದೇಶದಲ್ಲಿ ಸಿಮೆಂಟ್‌ನ ಬೇಡಿಕೆಯಲ್ಲಿ ಏರಿಕೆ ಕಂಡುಬಂದಿದೆ ಮತ್ತು ಇದರ ಹೊರತಾಗಿಯೂ ಅದರ ಬೆಲೆಯಲ್ಲಿ ಯಾವುದೇ ಜಿಗಿತ ಕಂಡುಬಂದಿಲ್ಲ. ಈ ವಲಯದ ಹೂಡಿಕೆದಾರರಿಗೆ ಇದು ಆತಂಕದ ವಿಷಯವಾದರೂ, ಮನೆ ನಿರ್ಮಿಸುವವರು ಮತ್ತು ನಿರ್ಮಾಣ ಕಂಪನಿಗಳಿಗೆ ಇದು ಪರಿಹಾರದ ವಿಷಯವೆಂದು ಪರಿಗಣಿಸಬಹುದು.
ಸಿಮೆಂಟ್ ಬೆಲೆ ಏಕೆ ಕಡಿಮೆಯಾಗುತ್ತದೆ: ವರದಿಯ ಪ್ರಕಾರ, ಪ್ರಸ್ತುತ ದೇಶದಲ್ಲಿ ಮಾನ್ಸೂನ್ ಸೀಸನ್ ಮುಂದುವರೆದಿದೆ. ಈ ಸಮಯದಲ್ಲಿ ನಿರ್ಮಾಣ ಚಟುವಟಿಕೆಗಳು ಕಡಿಮೆಯಾಗುತ್ತವೆ. ಗಮನಾರ್ಹವಾಗಿ, ಮಳೆಯಿಂದಾಗಿ, ಈ 3-4 ತಿಂಗಳುಗಳು ಸಿಮೆಂಟ್ ಕ್ಷೇತ್ರಕ್ಕೆ ಸ್ವಲ್ಪ ನಿಧಾನವಾಗಿರುತ್ತವೆ ಮತ್ತು ಈ ಅವಧಿಯಲ್ಲಿ ಪ್ರತಿ ವರ್ಷ ಸಿಮೆಂಟ್ ಬೆಲೆಯಲ್ಲಿ ಕುಸಿತವನ್ನು ಕಾಣಬಹುದು. ಇದಲ್ಲದೇ ಹಬ್ಬ ಹರಿದಿನಗಳಿಗೂ ಮುನ್ನವೇ ಕಟ್ಟಡ ನಿರ್ಮಾಣ ಕಾಮಗಾರಿಯಲ್ಲಿ ಇಳಿಕೆಯಾಗಿದ್ದು, ಇದರ ಪರಿಣಾಮ ಸಿಮೆಂಟ್ ಬೆಲೆಯಲ್ಲಿ ಕುಸಿತ ಕಾಣಬಹುದಾಗಿದೆ.

ಇದನ್ನೂ ಓದಿ : ರೈತರಿಗೆ ಖುಷ್: ಕಾಳು ಮೆಣಸು ದರ ಏರಿಕೆ!

HOW TO APPLY : NEET-UG COUNSELLING 2023

Categories
ರಾಷ್ಟ್ರೀಯ ವಾರ್ತೆ

ಅಯೋಧ್ಯೆ ಶ್ರೀ ರಾಮನಿಗೆ 400 ಕೆ.ಜಿ ಬೀಗ!

ಅಯೋಧ್ಯೆ ಶ್ರೀ ರಾಮನಿಗೆ 400 ಕೆ.ಜಿ ಬೀಗ!
– ಕೈಯಿಂದ ತಯಾರಾದ ಜಗತ್ತಿನ ದೊಡ್ಡ ಬೀಗ
– ರಾಮನ ಭಕ್ತನಿಂದ ಕೈಯಲ್ಲೇ ತಯಾರಿ
– ಆನ್ ಲೈನಲ್ಲೇ ಭಾರತದ ಯುವಕ, ಪಾಕ್ ಯುವತಿ ಮದುವೆ!
– ಪಾಕ್ ಉಗ್ರರ ಎದೆಗೆ ಗುಂಡಿಕ್ಕಿದ ಯೋಧರು
– ಇನ್ನು ಭಾರತದಲ್ಲೇ ತಯಾರಾಗಲಿದೆ ಲ್ಯಾಪ್ ಟಾಪ್ , ಕಂಪ್ಯೂಟರ್

NAMMUR EXPRESS NEWS
ನವ ದೆಹಲಿ: ಅಯೋಧ್ಯೆ ರಾಮಮಂದಿರಕ್ಕೆ ರಾಮ ಭಕ್ತನೊಬ್ಬ 400 ಕೆ.ಜಿ ಬೀಗ ತಯಾರಿಸಿದ್ದಾನೆ.
ಅಲಿಗಢದ ಸತ್ಯ ಪ್ರಕಾಶ ಶರ್ಮ ಎಂಬುವವರು ಒಂದು ತಿಂಗಳ ಅವಧಿಯಲ್ಲಿ ಈ ಬೀಗವನ್ನು ತಯಾರಿಸಿದ್ದಾರೆ.
ಹಿರಿಯ ಕುಶಲಕರ್ಮಿಯೊಬ್ಬರು ಕೈಯಿಂದಲೇ 400 ಕೆ.ಜಿ ತೂಕದ ಬೀಗವನ್ನು ತಯಾರಿಸಿದ್ದಾರೆ. ಇದು ಕೈಯಿಂದ ತಯಾರಿಸಿದ ಜಗತ್ತಿನ ಅತಿದೊಡ್ಡ ಬೀಗ ಎಂದು ಹೇಳಲಾಗಿದ್ದು, ರಾಮ ಮಂದಿರ ದೇವಸ್ಥಾನಕ್ಕೆ ಉಡುಗೊರೆಯಾಗಿ ನೀಡಲಿದ್ದಾರೆ. ರಾಮ ಮಂದಿರವನ್ನು ಗಮನದಲ್ಲಿಟ್ಟುಕೊಂಡು 10 ಅಡಿ ಎತ್ತರ, 4.5 ಅಡಿ ಅಗಲ ಮತ್ತು 9.5 ಇಂಚು ದಪ್ಪವಿರುವ ಬೀಗವನ್ನು ನಾಲ್ಕು ಅಡಿ ಕೀಲಿಯೊಂದಿಗೆ ಸ್ವಂತ ಹಣದಿಂದ ತಯಾರಿಸಿದ್ದಾರೆ. ಬೀಗವನ್ನು ತಯಾರಿಸಲು ಸುಮಾರು 2 ಲಕ್ಷ ರೂಪಾಯಿ ವೆಚ್ಚವಾಗಿದೆ ಎಂದು ಶರ್ಮಾ ಹೇಳಿದ್ದಾರೆ.

‘ಸತ್ಯ ಪ್ರಕಾಶ್ ಶರ್ಮಾ ಅವರಿಂದ ಬೀಗವನ್ನು ಪಡೆದು, ಯಾವ ಜಾಗಕ್ಕೆ ಅಳವಡಿಸಬಹುದು ಎಂದು ನಿರ್ಧರಿಸಲಾಗುವುದು” ಎಂದು ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಅಧಿಕಾರಿಗಳು ತಿಳಿಸಿದ್ದಾರೆ. ಮುಂದಿನ ವರ್ಷ ಜನವರಿ 21, 22, ಮತ್ತು 23 ರಂದು ರಾಮಮಂದಿರದಲ್ಲಿ ಮಹಾಮಸ್ತಕಾಭಿಷೇಕ ಸಮಾರಂಭವನ್ನುನಡೆಸಲು ದೇವಾಲಯದ ಟ್ರಸ್ಟ್ ನಿರ್ಧರಿಸಿದ್ದು, ಈ ವೇಳೆ ಬೀಗವನ್ನು ಪಡೆಯಲು ಸಿದ್ಧತೆ ನಡೆದಿದೆ.

ಆನ್ ಲೈನಲ್ಲೇ ಭಾರತದ ಯುವಕ, ಪಾಕ್ ಯುವತಿ ಮದುವೆ!

ರಾಜಸ್ಥಾನದ ಜೋದ್‌ಪುರ ಮೂಲದ ಅರ್ಬಾಜ್ ಹಾಗೂ ಪಾಕಿಸ್ತಾನದ ಮೂಲದ ವಧು ಅಮೀನಾ ವರ್ಚುವಲ್ ಮೂಲಕ ಮದ್ವೆ ಆಗಿದ್ದಾರೆ. ಅರ್ಬಾಜ್ ಹಾಗೂ ಅಮೀನಾ ಕುಟುಂಬ ಸಂಬಂಧಿಗಳಾಗಿದ್ದಾರೆ. ಈ ಹಿಂದೆ ಅರ್ಬಾಜ್ ಕುಟುಂಬದ ವ್ಯಕ್ತಿಯೊಬ್ಬರು ಪಾಕಿಸ್ತಾನದಲ್ಲಿರುವ ಅಮೀನಾ ಕುಟುಂಬದ ಯುವತಿಯನ್ನು ಮದುವೆಯಾಗಿದ್ದಾರೆ. ಈ ಹಿನ್ನೆಲೆ ಎರಡು ಕುಟುಂಬದ ನಡುವೆ ಮದುವೆ ಮಾತುಕತೆ ನಡೆದು, ವಿಡಿಯೋ ಕಾಲ್ ನಲ್ಲೇ ವಿವಾಹ ನಡೆದುಹೋಗಿದೆ.
ಅರ್ಬಾಜ್ ಮದುವೆ ದಿಬ್ಬಣ ಜೋದ್‌ಪುರದ ಓಸ್ವಾಲ್ ಸಮಾಜ ಭವನಕ್ಕೆ ತೆರಳಿ, ಅಲ್ಲಿ ವರ್ಚುವಲ್ ಮೂಲಕ ಪಾಕಿಸ್ತಾನದಲ್ಲಿರುವ ವಧು ಅಮೀನಾರೊಂದಿಗೆ ವಿವಾಹವಾಗಿದ್ದಾರೆ. ಅತ್ತ ಕಡೆಯ ಮೌಲ್ವಿ, ಇತ್ತ ಗಂಡಿನ ಕಡೆಯ ಮೌಲ್ವಿಗಳು ವಿವಾಹವನ್ನು ನೆರವೇರಿಸಿದ್ದಾರೆ.

ಈ ವರ್ಚುವಲ್ ಮದುವೆಗೂ ಮುನ್ನ ಅಮೀನಾ ವೀಸಾಕ್ಕಾಗಿ ಸರ್ಜಿ ಸಲ್ಲಿಸಿದ್ದರು. ಆದರೆ ಅದು ವಿಫಲವಾದ ಕಾರಣ, ವರ್ಚುವಲ್ ವಿವಾಹ ನೆರವೇರಿದೆ. ಪಾಕಿಸ್ತಾನಕ್ಕೆ ತೆರಳಿ ವಿವಾಹವಾಗಿಲ್ಲ. ಹಾಗೆ ಮಾಡಿದ್ದರೆ ಅದು ಮಾನ್ಯ ಆಗುತ್ತಿರಲಿಲ್ಲ. ನಮ್ಮ ವಿವಾಹದ ಪ್ರಮಾಣ ಪತ್ರವನ್ನು ಮೌಲ್ವಿಗಳಿಂದ ಪಡೆದುಕೊಂಡಿದ್ದೇವೆ. ಅಮೀನಾ ಅವರ ಭಾರತೀಯ ವೀಸಾ ಆದ ಬಳಿಕ ನಾವು ಮತ್ತೆ ಮರುಮದುವೆ ಆಗಲಿದ್ದೇವೆ ಎಂದು ಅರ್ಬಾಜ್ ಹೇಳಿದ್ದಾರೆ.

ಇಬ್ಬರು ಉಗ್ರರು ಸೇನೆ ಗುಂಡಿಗೆ ಬಲಿ!

ಜಮ್ಮುಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಗಡಿ ನಿಯಂತ್ರಣ ರೇಖೆಯಲ್ಲಿ ಕಾವಲು ಕಾಯುತ್ತಿರುವ ಸೇನಾ ಪಡೆಗಳು ಸೋಮವಾರ ಗಡಿಯಾಚೆಯಿಂದ ಒಳನುಸುಳುವಿಕೆ ಯತ್ನವನ್ನು ವಿಫಲಗೊಳಿಸಿ ಗುಂಡಿನ ಚಕಮಕಿಯಲ್ಲಿ ಇಬ್ಬರು ಭಯೋತ್ಪಾದಕರನ್ನು ಹೊಡೆದುರುಳಿಸಿದ್ದಾರೆ. ದಗ್ವಾರ್ ಸೆಕ್ಟರ್‌ನಲ್ಲಿ ಕೆಲವು ಭಯೋತ್ಪಾದಕರು ನುಸುಳಲು ಪ್ರಯತ್ನಿಸುತ್ತಿರುವುದನ್ನು ಗಮನಿಸಿದ ಭದ್ರತಾ ಪಡೆಗಳು ಎನ್‌ಕೌಂಟರ್ ನಡೆಸಿದ್ದು, ಇಬ್ಬರು ಉಗ್ರರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಮುಂಜಾನೆ 2 ಗಂಟೆ ಸುಮಾರಿಗೆ ಭಯೋತ್ಪಾದಕರ ಬಗ್ಗೆ ಸುಳಿವು ಸಿಕ್ಕಿ ಗುಂಡಿನ ದಾಳಿ ನಡೆಸಿರುವುದಾಗಿ ರಕ್ಷಣಾ ಪಿಆರ್‌ಒ ಲೆಫ್ಟಿನೆಂಟ್ ಕರ್ನಲ್ ಸುನೀಲ್ ಬರ್ತ್ವಾಲ್ ತಿಳಿಸಿದ್ದಾರೆ. ಇಡೀ ಪ್ರದೇಶವನ್ನು ಸೇನೆ ಸುತ್ತುವರಿದಿದ್ದು ಶೋಧ ಕಾರ್ಯಾಚರಣೆ ನಡೆಯುತ್ತಿದೆ.

ದೇಶದಲ್ಲೇ ಸಿದ್ಧಗೊಳ್ಳಲಿವೆ ಲ್ಯಾಪ್‌ಟಾಪ್, ಕಂಪ್ಯೂಟರ್

ಮುಂದಿನ ಕೆಲವೇ ವರ್ಷಗಳಲ್ಲಿ ಜಗತ್ತಿನ ಪ್ರಮುಖ ಕಂಪೆನಿಗಳ ಪರ್ಸನಲ್ ಕಂಪ್ಯೂಟರ್, ಟ್ಯಾಬ್ಲೆಟ್, ಲ್ಯಾಪ್ ಟಾಪ್ ದೇಶದಲ್ಲೇ ಉತ್ಪಾದನೆಯಾಗಲಿದೆ. ಲೆನೊವೋ, ಎಚ್‌ ಪಿ, ಡೆಲ್, ಆ್ಯಪಲ್ ಸೇರಿದಂತೆ 44 ಸಂಸ್ಥೆಗಳು ದೇಶದಲ್ಲಿ ಉತ್ಪನ್ನಗಳನ್ನು ತಯಾರಿಸಲು ನೋಂದಾಯಿಸಿಕೊಂಡಿವೆ ಎಂದು ಸರಕಾರಿ ಮೂಲಗಳು ಮಾಹಿತಿ ನೀಡಿವೆ.
ಕೇಂದ್ರ ಸರಕಾರದ 17 ಸಾವಿರ ಕೋಟಿ ರೂ. ಮೌಲ್ಯದ ಉತ್ಪನ್ನ ಆಧರಿತ ಪ್ರೋತ್ಸಾಹ ಯೋಜನೆ ಇದಾಗಿದೆ. (ಪಿಎಲ್‌ ಐ) ಅನ್ವಯ ಈ ಕಂಪೆನಿಗಳು ನೋಂದಣಿ ಮಾಡಿಕೊಂಡಿವೆ. ಹಲವಾರು ಮೊಬೈಲ್ ತಯಾರಿಕ ಸಂಸ್ಥೆಗಳು ಕ್ಷೇತ್ರದಲ್ಲಿ ಯಶಸ್ಸನ್ನು ದಾಖಲಿಸಿವೆ. ಇದೇ ಮಾದರಿಯಲ್ಲಿ ಐಟಿ ಹಾರ್ಡ್ ವೇರ್ ಗಳ ತಯಾರಿಕೆಯಲ್ಲೂ ಯಶಸ್ಸು ಗಳಿಸುವ ಉದ್ದೇಶದಿಂದ ಹಲವಾರು ಸಂಸ್ಥೆಗಳು ತಮ್ಮ ಹಾರ್ಡ್‌ ವೇರ್ ಉತ್ಪನ್ನಗಳ ತಯಾರಿಕಾ ಘಟಕಗಳನ್ನು ಸ್ಥಾಪಿಸಲು ಕೋರಿ ನೋಂದಣಿ ಮಾಡಿಕೊಂಡಿವೆ. ಅದಕ್ಕೆ ಆ.30 ಕೊನೆಯ ನೋಂದಣಿ ಮಾಡಿಕೊಂಡಿರುವ ಸಂಸ್ಥೆಗಳ ದೇಶದಲ್ಲಿ ಪೈಕಿ, ಕೆಲವು ಸಂಸ್ಥೆಗಳು ಕೇವಲ ಅನುಮತಿಗಾಗಿ ಕಾಯುತ್ತಿದ್ದು, ಯಾವುದೇ ಸಮಯದಲ್ಲೂ ಉತ್ಪಾದನಾ ಘಟಕ ತೆರೆಯಲು ತಯಾರಾಗಿವೆ. ಇದು ದೇಶದಲ್ಲಿ ಉದ್ಯೋಗ ಸೃಷ್ಟಿ ಮಾಡುವುದಷ್ಟೇ ಅಲ್ಲದೆ ವಿದೇಶಗಳಿಂದ ಅವುಗಳನ್ನು ಆಮದು ಮಾಡಿಕೊಳ್ಳುವ ಅಗತ್ಯವೂ ತಪ್ಪಲಿದೆ ಎಂದು ವಿಶ್ಲೇಷಿಸಲಾಗಿದೆ.

ಇದನ್ನೂ ಓದಿ : ರೈತರಿಗೆ ಖುಷ್: ಕಾಳು ಮೆಣಸು ದರ ಏರಿಕೆ!

HOW TO APPLY : NEET-UG COUNSELLING 2023

Categories
ರಾಷ್ಟ್ರೀಯ ವಾರ್ತೆ

ರಾಹುಲ್ ಗಾಂಧಿ ಲೋಕ ಸಭೆಗೆ ರೀ ಎಂಟ್ರಿ!

ರಾಹುಲ್ ಗಾಂಧಿ ಲೋಕ ಸಭೆಗೆ ರೀ ಎಂಟ್ರಿ!
– ಗಾಂಧಿ ಪ್ರತಿಮೆಗೆ ನಮಸ್ಕರಿಸಿ ಲೋಕ ಸಭೆಗೆ
– ಕಾನೂನು ಸಮರದಲ್ಲಿ ಗೆಲುವಿನ ವಿಜಯೋತ್ಸವ

NAMMUR EXPRESS NEWS
ಹೊಸದಿಲ್ಲಿ: ಕಾನೂನು ಸಮರದ ಬಳಿಕ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಲೋಕ ಸಭೆಗೆ ಗ್ರಾಂಡ್ ಎಂಟ್ರಿ ಪಡೆದಿದ್ದಾರೆ.
ಸೋಮವಾರ ಲೋಕ ಸಭೆಯ ಅವರಣದಲ್ಲಿ ಗಾಂಧಿ ಪ್ರತಿಮೆಗೆ ನಮಸ್ಕರಿಸಿ ಬಳಿಕ ಲೋಕ ಸಭೆಗೆ ಹಾಜರ್ ಆಗಿದ್ದಾರೆ.
ಮೋದಿ ಉಪನಾಮ ಟೀಕೆ ಪ್ರಕರಣಕ್ಕೆ ಸಂಬಂಧಿಸಿ ಸೂರತ್ ನ್ಯಾಯಾಲಯ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರಿಗೆ ವಿಧಿಸಿದ್ದ 2 ವರ್ಷಗಳ ಜೈಲು ಶಿಕ್ಷೆಗೆ ಸುಪ್ರಿಂಕೋರ್ಟ್‌ ತಡೆಯಾಜ್ಞೆ ವಿಧಿಸಿದ ಬೆನ್ನಲ್ಲೇ, ರಾಹುಲ್ ಗಾಂಧಿಯ ಸಂಸತ್ ಸದಸ್ಯತ್ವವನ್ನು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಪುನಸ್ಥಾಪಿಸಿದ್ದಾರೆ.

ಕೋರ್ಟ್‌ ಆದೇಶ ಪ್ರತಿಯೊಂದಿಗೆ ಶುಕ್ರವಾರವೇ ಲೋಕಸಭಾ ಕಾರ್ಯದರ್ಶಿ ಭೇಟಿ ಮಾಡಿದ್ದ ಕಾಂಗ್ರೆಸ್ ನಾಯಕರು, ರಾಹುಲ್ ಅನರ್ಹತೆ ಆದೇಶ ರದ್ದು ಮಾಡುವಂತೆ ಮನವಿ ಮಾಡಿದ್ದರು. ಆ.8 ಹಾಗೂ 9 ರಂದು ಕಾಂಗ್ರೆಸ್ ಮಂಡಿಸಿರುವ ಕೇಂದ್ರದ ವಿರುದ್ಧ ಅವಿಶ್ವಾಸ ನಿಲುವಳಿ ಮೇಲಿನ ಚರ್ಚೆ ನಡೆಯಲಿದೆ. ಈ ಚರ್ಚೆಯಲ್ಲಿ ರಾಹುಲ್ ಗಾಂಧಿಯವರು ಭಾಗವಹಿಸಬೇಕೆಂಬುದು ಕಾಂಗ್ರೆಸ್ ನಾಯಕರ ಬಯಕೆ ಆಗಿತ್ತು. ಮಾನನಷ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್‌ನ ಸೂರತ್ ಮ್ಯಾಜಿಸ್ಟ್ರೇಟ್ ವಿಧಿಸಿರುವ ಶಿಕ್ಷೆಗೆ ತಡೆ ನೀಡಲು ನಿರಾಕರಿಸಿದ್ದ ಗುಜರಾತ್ ಹೈಕೋರ್ಟ್‌ ಆದೇಶ ಪ್ರಶ್ನಿಸಿ ರಾಹುಲ್ ಗಾಂಧಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ, ಪಿ.ಎಸ್. ನರಸಿಂಹ ಮತ್ತು ಸಂಜಯ್ ಕುಮಾರ್ ಅವರನ್ನೊಳಗೊಂಡ ಪೀ ಶುಕ್ರವಾರ ಪ್ರಕರಣದ ವಿಚಾರಣೆ ನಡೆಸಿ ಸೂರತ್ ನ್ಯಾಯಾಲಯದ ಆದೇಶಕ್ಕೆ ತಡೆ ನೀಡಿತ್ತು. ರಾಹುಲ್ ಅವರು 2019ರ ಏಪ್ರಿಲ್ 13 ರಂದು ಕೋಲಾರದಲ್ಲಿ ನಡೆದ ಲೋಕಸಭಾ ಚುಣಾವಣಾ ಪ್ರಚಾರ ಸಭೆಯಲ್ಲಿ ಎಲ್ಲ ಕಳ್ಳರಿಗೆ ಮೋದಿ ಎಂಬ ಉಪನಾಮ ಏಕಿದೆ ಎಂದು ಪ್ರಶ್ನಿಸಿದ್ದರು.ಈ ಬಗ್ಗೆ ಗುಜರಾತ್ ಶಾಸಕ ಪೂರ್ಣೇಶ್ ಮೋದಿ ಅವರು, ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಈ ಪ್ರಕರಣದಲ್ಲಿ ರಾಹುಲ್ ಅವರು, ಎರಡು ವರ್ಷ ಶಿಕ್ಷೆಗೆ ಗುರಿಯಾಗಿ ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಂಡಿದ್ದರು.

ಇದನ್ನೂ ಓದಿ : ರೈತರಿಗೆ ಖುಷ್: ಕಾಳು ಮೆಣಸು ದರ ಏರಿಕೆ!

HOW TO APPLY : NEET-UG COUNSELLING 2023

Categories
ರಾಷ್ಟ್ರೀಯ ವಾರ್ತೆ

ಬೆಲೆ ಏರಿಕೆಯಿಂದ ತತ್ತರ: ಜನರಿಗೆ ಗುಡ್ ನ್ಯೂಸ್!

ಬೆಲೆ ಏರಿಕೆಯಿಂದ ತತ್ತರ: ಜನರಿಗೆ ಗುಡ್ ನ್ಯೂಸ್!
– ಅಗತ್ಯ ವಸ್ತುಗಳ ಬೆಲೆ ನಿಯಂತ್ರಿಸಲು ಕೇಂದ್ರದ ಹೆಜ್ಜೆ
– ಗೋಧಿ, ಬೇಳೆಕಾಳು ದರ ನಿಯಂತ್ರಣಕ್ಕೆ ಪ್ಲಾನ್

NAMMUR EXPRESS NEWS
ನವದೆಹಲಿ: ದೇಶದಲ್ಲಿ ಬೆಲೆ ಏರಿಕೆಯಿಂದ ತತ್ತರಿಸಿರುವ ಜನಸಾಮಾನ್ಯರಿಗೆ ಕೇಂದ್ರ ಸರ್ಕಾರ ನೆಮ್ಮದಿಯ ಸುದ್ದಿಯೊಂದು ನೀಡಿದ್ದು, ಅಗತ್ಯ ವಸ್ತುಗಳ ಬೆಲೆ ನಿಯಂತ್ರಿಸಲು ಕೇಂದ್ರ ಸರ್ಕಾರ ಮಹತ್ವದ ಕ್ರಮ ಕೈಗೊಳ್ಳುತ್ತಿದೆ ಎಂದು ಆಹಾರ ಕಾರ್ಯದರ್ಶಿ ಸಂಜೀವ್ ಚೋಪ್ರಾ ಹೇಳಿದ್ದಾರೆ. ಬೇಳೆಕಾಳುಗಳಿಂದ ಹಿಡಿದು ತರಕಾರಿಗಳವರೆಗೆ ಬೆಲೆಗಳು ಗಗನಕ್ಕೇರುತ್ತಿವೆ. ಬೆಲೆ ಏರಿಕೆಯಿಂದಾಗಿ ಜನರು ತೀವ್ರ ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಇದಲ್ಲದೆ, ಅಗತ್ಯ ವಸ್ತುಗಳ ಜೊತೆಗೆ ಗೋಧಿಯ ಬೆಲೆಯೂ ಏರುತ್ತಿದೆ. ಬೆಲೆಗಳನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ಕ್ರಮಗಳನ್ನು ಕೈಗೊಂಡಿದೆ. ಗೋಧಿ ಬೆಲೆಯನ್ನು ಅಗ್ಗವಾಗಿಸಲು ಕೇಂದ್ರ ಸರ್ಕಾರ ಹಲವಾರು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಹೇಳಿದ್ದಾರೆ.

ಗೋಧಿ ಬೆಲೆ ಏರಿಕೆಯನ್ನು ನಿಯಂತ್ರಿಸಲು ಆಮದು ಸುಂಕವನ್ನು ಕಡಿಮೆ ಮಾಡುವುದು ಸೇರಿದಂತೆ ಇತರ ಎಲ್ಲಾ ಆಯ್ಕೆಗಳನ್ನು ಸರ್ಕಾರ ಪರಿಗಣಿಸುತ್ತಿದೆ. ಅಕ್ಕಿಗೆ ಸಂಬಂಧಿಸಿದಂತೆ, ಭೂತಾನ್ ನಿಂದ ಇದುವರೆಗೆ 80,000 ಟನ್ ಅಕ್ಕಿಯನ್ನು ಪೂರೈಸಲು ಭಾರತವು ಸರ್ಕಾರದ ಮಟ್ಟದಲ್ಲಿ ಜ್ಞಾಪಕ ಪತ್ರವನ್ನು ಸ್ವೀಕರಿಸಿದೆ ಎಂದು ಅವರು ಹೇಳಿದರು.
ದೇಶೀಯ ಲಭ್ಯತೆ ಮತ್ತು ಚಿಲ್ಲರೆ ಮಾರುಕಟ್ಟೆಗಳಲ್ಲಿ ಹೆಚ್ಚುತ್ತಿರುವ ಬೆಲೆಗಳನ್ನು ನಿಯಂತ್ರಿಸಲು ಕಳೆದ ವರ್ಷ ಸರ್ಕಾರ ಗೋಧಿ ರಫ್ತನ್ನು ನಿಷೇಧಿಸಿತ್ತು. ಗೋಧಿ ಮತ್ತು ಹಿಟ್ಟಿನ ಬೆಲೆಗಳನ್ನು ನಿಯಂತ್ರಿಸಲು ಸರ್ಕಾರವು ಮುಕ್ತ ಮಾರುಕಟ್ಟೆಯಲ್ಲಿ ಗೋಧಿ ದಾಸ್ತಾನುಗಳನ್ನು ಹಿಟ್ಟಿನ ಗಿರಣಿಗಳು ಮತ್ತು ಇತರ ವ್ಯಾಪಾರಿಗಳಿಗೆ ಮಾರಾಟ ಮಾಡುತ್ತಿದೆ.

ಇದನ್ನೂ ಓದಿ : ರೈತರಿಗೆ ಖುಷ್: ಕಾಳು ಮೆಣಸು ದರ ಏರಿಕೆ!

HOW TO APPLY : NEET-UG COUNSELLING 2023

Categories
ಅಡಿಕೆ-ದರ ರಾಷ್ಟ್ರೀಯ ವಾರ್ತೆ

ಮತ್ತೆ ಭೂತಾನ್ ಭೂತ: ಅಡಿಕೆಗೆ ಕುತ್ತು ಬರುತ್ತಾ?

ಮತ್ತೆ ಭೂತಾನ್ ಭೂತ: ಅಡಿಕೆಗೆ ಕುತ್ತು ಬರುತ್ತಾ?
– ಕರ್ನಾಟಕ ಅಡಿಕೆ ಬೆಳೆದ ರೈತರಿಗೆ ದೊಡ್ಡ ಹೊಡೆತ
– ಅಡಿಕೆ ದರ ಇಳಿಯುತ್ತಾ…?,ಕೇಂದ್ರದ ನಿರ್ಧಾರ ಏನು?

NAMMUR EXPRESS NEWS
ನವ ದೆಹಲಿ: ಅಡಿಕೆಗೆ ಮತ್ತೆ ಕುತ್ತು ಬರುವ ಸಾಧ್ಯತೆಗಳು ಹೆಚ್ಚಾಗಿದೆ. ಭೂತಾನ್‌ನಿಂದ ಪ್ರತಿವರ್ಷ 17 ಸಾವಿರ ಟನ್‌ ತಾಜಾ ಅಡಿಕೆ ಆಮದು ಮಾಡಿಕೊಳ್ಳಲು ಕೇಂದ್ರ ವಾಣಿಜ್ಯ ಹಾಗೂ ಕೈಗಾರಿಕಾ ಸಚಿವಾಲಯ ಒಪ್ಪಿಗೆ ನೀಡಿದೆ. ಇದು ದೇಶಿಯ ಮಾರುಕಟ್ಟೆಗೆ ದೊಡ್ಡ ಪೆಟ್ಟು ನೀಡುವ ಸಾಧ್ಯತೆ ಇದೆ. ಲೋಕಸಭೆಯಲ್ಲಿ ಸದಸ್ಯರ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಇಲಾಖೆಯ ರಾಜ್ಯ ಸಚಿವೆ ಅನುಪ್ರಿಯಾ ಪಟೇಲ್, ಕಳೆದ ನಾಲ್ಕು ವರ್ಷಗಳಿಂದ ಭೂತಾನ್‌ನಿಂದ ಅಡಿಕೆ ಆಮದು ಆಗಿರಲಿಲ್ಲ. ಕನಿಷ್ಠ ಬೆಂಬಲ ಬೆಲೆಯ ಯಾವುದೇ ಷರತ್ತುಗಳನ್ನು ವಿಧಿಸದೆ ಪ್ರತಿವರ್ಷ ತಾಜಾ ಅಡಿಕೆ ಅಮದು ಮಾಡಿಕೊಳ್ಳಲು ಜುಲೈ 3ರಂದು ಅಧಿಸೂಚನೆ ಹೊರಡಿಸಲಾಗಿದೆ. ಆಮದನ್ನು ಪಶ್ಚಿಮ ಬಂಗಾಳದ ಜೈಗಾನ್ ಬಂದರು ಹಾಗೂ ಚಾಮುರ್ಚಿ ಬಂದರು ಮೂಲಕವೇ ಮಾಡಬೇಕು ಎಂದು ಷರತ್ತು ವಿಧಿಸಲಾಗಿದೆ. ಅಂತಹ ಅಮದುಗಳು ಡೈರೆಕ್ಟರೇಟ್ ಜನರಲ್ ಆಫ್ ಫಾರಿನ್ ಟ್ರೇಡ್ ನೀಡಿದ ಬಂದರು ನೋಂದಣಿ ಪ್ರಮಾಣ- ಪತ್ರಕ್ಕೆ ಒಳಪಟ್ಟಿರುತ್ತದೆ’ ಎಂದು ತಿಳಿಸಿದ್ದಾರೆ. ಇದು ಭಾರತ, ಅದರಲ್ಲೂ ಕರ್ನಾಟಕ ರೈತರಿಗೆ ದೊಡ್ಡ ಹೊಡೆತ ನೀಡಲಿದೆ ಎನ್ನಲಾಗಿದೆ.

ಮ್ಯಾನ್ಮಾರ್, ಶ್ರೀಲಂಕಾ, ಇಂಡೊನೇಷ್ಯಾದಿಂದ ಅಡಿಕೆ ಆಮದು!

ಕಳೆದ ಎರಡು ವರ್ಷಗಳಿಂದ ಮ್ಯಾನ್ಮಾರ್, ಶ್ರೀಲಂಕಾ ಹಾಗೂ ಇಂಡೊನೇಷ್ಯಾದಿಂದ ಅಡಿಕೆ ಆಮದು ಹೆಚ್ಚಾಗಿದೆ ಎಂದೂ ಅವರು ಮಾಹಿತಿ ನೀಡಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಅಡಿಕೆ ಆಮದು ಪ್ರಮಾಣ ಹೆಚ್ಚಳ ಗಮನಿಸಿದ ಸಚಿವಾಲಯವು, ಅಡಿಕೆಯ ಅಮದಿನ ಕನಿಷ್ಠ ದರವನ್ನು ಪ್ರತಿ ಕೆ.ಜಿ.ಗೆ 7251ಯಿಂದ 7351ಕ್ಕೆ ಹೆಚ್ಚಿಸಿ ಈ ವರ್ಷದ ಫೆಬ್ರುವರಿ 14ರಂದು ಅಧಿಸೂಚನೆ ಹೊರಡಿಸಿತ್ತು, ನಮ್ಮ ರೈತರ ಹಿತರಕ್ಷಣೆ ಮಾಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿ ತ್ತು. ಜತೆಗೆ, ಸುಪಾರಿಯ ಆಮದು ನೀತಿಯನ್ನು ಉಚಿತದಿಂದ ನಿಷೇಧಿತ ಎಂದೂ ಪರಿಷ್ಕರಿಸ ಲಾಗಿತ್ತು’ ಎಂದು ಅವರು ಹೇಳಿದ್ದಾರೆ.

ಸ್ಥಳೀಯ ಅಡಿಕೆ ದರ ಕುಸಿತ ಸಾಧ್ಯತೆ!

ಅಡಿಕೆಯ ಅಮದಿನಿಂದ ದೇಶೀಯ ಅಡಿಕೆಯ ಬೆಲೆ ಕುಸಿತವಾಗುತ್ತಿದ್ದು, ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ರೈತರು ಹಾಗೂ ರೈತ ಸಂಘಟನೆಗಳು ಇಲಾಖೆಗೆ ಮನವಿ ಸಲ್ಲಿಸಿದ್ದವು. ಅಡಿಕೆಯ ಅಡೆತಡೆ ಇಲ್ಲದ ಅಮದು ನಿಯಂತ್ರಿಸಲು ಹಾಗೂ ಕಳಪೆ ಗುಣಮಟ್ಟದ ಅಡಿಕೆ ಮಾರುಕಟ್ಟೆಗೆ ಬರುವುದನ್ನು ತಪ್ಪಿಸಲು ಸಚಿವಾಲಯವು ಅನೇಕ ಉಪಕ್ರಮಗಳನ್ನು ಕೈಗೊಂಡಿದೆ ಎಂದೂ ಅವರು ತಿಳಿಸಿದ್ದಾರೆ.

ಮಲೆನಾಡಿಗೆ ಬದುಕಿಗೆ ಪೆಟ್ಟು!

ಅಡಿಕೆ ಆಮದು ಈಗಾಗಲೇ ಎಲೆ ಚುಕ್ಕಿ, ಬೇರುಳ, ತುಂಡೆ ರೋಗ ಸೇರಿ ಅನೇಕ ರೋಗಗಳಿಂದ ತತ್ತರವಾಗಿರುವ ಮಲೆನಾಡ ರೈತರ ಬದುಕು ಆತಂಕದಲ್ಲಿದೆ. ಈಗ ಅಡಿಕೆ ಅಮದಿನಿಂದ ಬೆಲೆ ಇಳಿಕೆಯಾದರೆ ರೈತರ ಬದುಕು ತೊಂದರೆಗೆ ಒಳಗಾಗಲಿದೆ.

ಇದನ್ನೂ ಓದಿ : ರೈತರಿಗೆ ಖುಷ್: ಕಾಳು ಮೆಣಸು ದರ ಏರಿಕೆ!

HOW TO APPLY : NEET-UG COUNSELLING 2023

Categories
ರಾಷ್ಟ್ರೀಯ ವಾರ್ತೆ

ದೇವಿಗೆ 11 ಲಕ್ಷ ರೂ. ನೋಟುಗಳ ಅಲಂಕಾರ!

ದೇವಿಗೆ 11 ಲಕ್ಷ ರೂ. ನೋಟುಗಳ ಅಲಂಕಾರ!
– ಕೊಯಮತ್ತೂರು ದೇವಸ್ಥಾನದಲ್ಲಿ ವಿಶೇಷ ಪೂಜೆ
– ನೋಟೇ ಹಾರ, ತೋರಣ, ಅಲಂಕಾರಿಕ ಚಕ್ರವೇ ನೋಟು
– ಭಕ್ತರಿಂದ ಹಣ ಸಂಗ್ರಹಣೆ, ಆಮೇಲೆ ವಾಪಾಸ್

NAMMUR EXPRESS NEWS
ದೇವಿಗೆ 11 ಲಕ್ಷ ರೂ. ನೋಟುಗಳ ಅಲಂಕಾರ. ಮಾಡಿರುವ ಘಟನೆ ಕೊಯಮತ್ತೂರು ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆದಿದೆ.
ಆದಿ ಮಾಸದ ಮೂರನೇ ಶುಕ್ರವಾರದ ಅಂಗವಾಗಿ ವಿಶೇಷ ಪೂಜೆಗಾಗಿ ತಮಿಳುನಾಡಿನ ಕೊಯಮತ್ತೂರಿನ ದೇವಾಲಯವೊಂದರ ಗರ್ಭಗುಡಿ ಮತ್ತು ದೇವತೆಯನ್ನು 11 ಲಕ್ಷ ರೂ.ಗಳ ನೋಟುಗಳಿಂದ ಅಲಂಕರಿಸಲಾಗಿತ್ತು.
ಕೊಯಮತ್ತೂರಿನ ಗೌಂಡಪಾಳ್ಯಂ ಬಳಿಯ ಪರಂಜ್ಯೋತಿ ಮಾರಿಯಮ್ಮನ್ ದೇವಾಲಯದ ಗರ್ಭಗುಡಿಯೊಳಗೆ ಆಲಂಕಾರವನ್ನು ಹಾಕಲು ವಿವಿಧ ಮುಖಬೆಲೆಯ ನೋಟುಗಳನ್ನು ಒಟ್ಟಿಗೆ ಜೋಡಿಸಲಾಗಿತ್ತು. ನೋಟುಗಳನ್ನು ಹಾರಗಳು, ತೋರಣಗಳು ಮತ್ತು ಅಲಂಕಾರಿಕ ಚಕ್ರಗಳಾಗಿಯೂ ಬಳಸಲಾಗಿತ್ತು.
ದೇವಾಲಯದ ವ್ಯವಸ್ಥಾಪಕರಲ್ಲಿ ಒಬ್ಬರಾದ ಕೃಷ್ಣಸ್ವಾಮಿ ಅವರ ಪ್ರಕಾರ, ವಿಶೇಷ ದಿನದಂದು ದೇವಾಲಯವನ್ನು ಅಲಂಕರಿಸಲು ಸ್ಥಳೀಯ ಭಕ್ತರಿಂದ ಹಣವನ್ನು ಸಂಗ್ರಹಿಸಲಾಗಿದೆ. ಅಲಂಕಾರವನ್ನು ಒಂದು ದಿನ ಇಡಲಾಗಿತ್ತು. ಒಮ್ಮೆ ತೆಗೆದುಹಾಕಿದ ನಂತರ, ಅದನ್ನು ನೀಡಿದವರಿಗೆ ಹಣವನ್ನು ಹಿಂತಿರುಗಿಸಲಾಯಿತು ಎಂದು ಅವರು ಹೇಳಿದರು.

ಹಲವಾರು ವರ್ಷಗಳಿಂದ ಇಂತಹ ಅಲಂಕಾರಗಳನ್ನು ಮಾಡುತ್ತಿದ್ದಾರೆ ಎಂದು ಕೃಷ್ಣಸ್ವಾಮಿ ಹೇಳಿದ್ದಾರೆ. ಸಂಪ್ರದಾಯದ ಹಿಂದಿನ ಕಾರಣವನ್ನು ವಿವರಿಸಿದ ಕೃಷ್ಣಸ್ವಾಮಿ, ಇದು ದೇವರ ಮೇಲಿನ ಅವರ ನಂಬಿಕೆ ಮತ್ತು ಪ್ರೀತಿಯ ಅಭಿವ್ಯಕ್ತಿಯಾಗಿದೆ ಎಂದು ಹೇಳಿದರು. ದೇವಾಲಯದಲ್ಲಿ ವಿಶೇಷ ದೀಪ ಪೂಜೆಯೂ ನಡೆಯಿತು, ಇದರಲ್ಲಿ 200ಕ್ಕೂ ಹೆಚ್ಚು ಮಹಿಳೆಯರು ಭಾಗವಹಿಸಿದ್ದರು.

ಇದನ್ನೂ ಓದಿ : ನಾನು ಬದುಕಿರುವುದೇ ಕಿಮ್ಮನೆಗೆ ಸಹಿಸಲಾಗುತ್ತಿಲ್ಲ

HOW TO APPLY : NEET-UG COUNSELLING 2023

Categories
ರಾಷ್ಟ್ರೀಯ ವಾರ್ತೆ

ಕ್ರಾಂತಿಕಾರಿ ಕವಿ ‘ಗದ್ದರ್’ ಇನ್ನಿಲ್ಲ!

ಕ್ರಾಂತಿಕಾರಿ ಕವಿ ‘ಗದ್ದರ್’ ಇನ್ನಿಲ್ಲ!
– ‘ನಕ್ಸಲಿಸಂ ಚಳವಳಿ’ಯಲ್ಲಿ ಭಾಗಿಯಾಗಿದ್ದ ಹೋರಾಟಗಾರ
– ರಾಜಕೀಯ ಪಾರ್ಟಿ ಕಟ್ಟಲು ಸಿದ್ಧತೆಯಲ್ಲಿರುವಾಗಲೇ ವಿಧಿವಶ

NAMMUR EXPRESS NEWS
ದೇಶದ ಇತಿಹಾಸದಲ್ಲಿ ಜಾನಪದ ಕಲೆ ಮೂಲಕ ಹೋರಾಟಗಾರನಾಗಿ ಹಲವು ಕ್ರಾಂತಿಗೆ ಕಾರಣವಾಗಿದ್ದ ತೆಲಂಗಾಣದ ‘ಗದ್ದರ್’ ಎಂದೇ ಹೆಸರುವಾಸಿಯಾದ ಖ್ಯಾತ ಜಾನಪದ ಕಲಾವಿದ ಗುಮ್ಮಡಿ ವಿಠಲ್ ರಾವ್ (77) ಇಹಲೋಕ ತ್ಯಜಿಸಿದ್ದಾರೆ.
ತೀವ್ರ ಅನಾರೋಗ್ಯದಿಂದ ಭಾನುವಾರ ಹೈದರಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.1949ರಲ್ಲಿ ತೆಲಂಗಾಣದ ತುಪಾನ್‌ನಲ್ಲಿ ಜನಿಸಿದ ಗದ್ದರ್ ಅವರು ತಮ್ಮ ಕ್ರಾಂತಿಕಾರಿ ಕವಿತೆ ಮತ್ತು ಗಾಯನದ ಮೂಲಕ ಖ್ಯಾತಿ ಪಡೆದಿದ್ದರು. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇತ್ತೀಚೆಗೆ ಹೈದರಾಬಾದ್‌ನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ದೇಶದ ಗಟ್ಟಿ ದನಿ ನಿಂತು ಹೋಗಿದೆ.

ತೆಲಂಗಾಣ ಪ್ರತ್ಯೇಕ ರಾಜ್ಯ ಹೋರಾಟದಲ್ಲಿ ಪ್ರಮುಖ ಪಾತ್ರ!

ತೆಲಂಗಾಣ ಪ್ರತ್ಯೇಕ ರಾಜ್ಯ ಹೋರಾಟದಲ್ಲಿ ಗದ್ದ‌ ಪ್ರಮುಖ ಪಾತ್ರ ವಹಿಸಿದ್ದರು. ತಮ್ಮ ಕ್ರಾಂತಿಕಾರಿ ಸಾಹಿತ್ಯ ಮತ್ತು ಗಾಯನದ ಮೂಲಕ ‘ತೆಲಂಗಾಣ ಚಳವಳಿಗೆ’ ಹೊಸ ಹುರುಪನ್ನೇ ನೀಡಿದ್ದರು. 2010ರವೆರೆಗೂ ‘ನಕ್ಸಲಿಸಂ ಚಳವಳಿ’ಯಲ್ಲಿ ಗುರುತಿಸಿಕೊಂಡಿದ್ದ ಗದ್ದರ್, ತೆಲಂಗಾಣ ಪ್ರತ್ಯೇಕ ರಾಜ್ಯವಾದ ಮೂರು ವರ್ಷದ ಬಳಿಕ ಮಾವೋವಾದಿಗಳ ಸಂಪರ್ಕವನ್ನು ಸಂಪೂರ್ಣವಾಗಿ ತ್ಯಜಿಸಿದ್ದರು.2018ರ ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಗದ್ದ‌ ಬೆಂಬಲಿಸಿದ್ದರು. ಭಾರತ್ ಜೋಡೊ ಯಾತ್ರೆ ಸಂದರ್ಭ ರಾಹುಲ್ ಗಾಂಧಿಯವರನ್ನೂ ಭೇಟಿ ಮಾಡಿದ್ದರು.

ಚುನಾವಣೆ ಸ್ಪರ್ಧೆ ಕನಸು ನನಸು ಆಗಲಿಲ್ಲ!

ಅನಾರೋಗ್ಯಕ್ಕೂ ಮೊದಲು ಚುನಾವಣಾ ಅಖಾಡಕ್ಕೆ ಇಳಿಯುವ ಕನಸನ್ನು ಕಂಡಿದ್ದ ಗದ್ದರ್ ಅವರು ‘ಗದ್ದರ್ ಪ್ರಜಾ ಪಾರ್ಟಿ’ ಎಂಬ ಹೊಸ ಪಕ್ಷ ಸ್ಥಾಪನೆಗೂ ಹೊರಟಿದ್ದರು. ಭವಿಷ್ಯದ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿಯೂ ಅವರುಹೇಳಿಕೊಂಡಿದ್ದರು. ಆದರೆ ಅವರ ರಾಜಕೀಯ ಕನಸು ಕನಸಾಗಿಯೇ ಉಳಿದಿದೆ.

ಇದನ್ನೂ ಓದಿ : ನಾನು ಬದುಕಿರುವುದೇ ಕಿಮ್ಮನೆಗೆ ಸಹಿಸಲಾಗುತ್ತಿಲ್ಲ

HOW TO APPLY : NEET-UG COUNSELLING 2023

Categories
ರಾಷ್ಟ್ರೀಯ ವಾರ್ತೆ

ಅಯೋಧ್ಯೆಯಲ್ಲಿ ಮೊಳಗಲಿದೆ ಸಂಭ್ರಮ!

ಅಯೋಧ್ಯೆಯಲ್ಲಿ ಮೊಳಗಲಿದೆ ಸಂಭ್ರಮ!
– ರಾಮಲಲ್ಲಾ ಪ್ರತಿಷ್ಠಾಪನೆ ಮುಹೂರ್ತ ನಿಗದಿ
– ಜ 21 ರಿಂದ ಮೂರು ದಿನ ಅದ್ದೂರಿ ಕಾರ್ಯಕ್ರಮ
– ಪ್ರಧಾನಿ ಸಹಿತ ಅನೇಕ ನಾಯಕರು ಭಾಗಿ: 25,000ಕ್ಕೂ ಅಧಿಕ ಹಿಂದು ಮುಖಂಡರು ಹಾಜರ್

NAMMUR EXPRESS NEWS
ಅಯೋಧ್ಯೆ : ಭವ್ಯ ರಾಮಮಂದಿರದಲ್ಲಿ ಬಹು ನಿರೀಕ್ಷಿತ ರಾಮಲಲ್ಲ ಮೂರ್ತಿ ಪ್ರತಿಷ್ಠಾಪನೆಯನ್ನು 2024ರ ಜನವರಿ 21, 22 ಅಥವಾ 23 ರಂದು ಪ್ರತಿಷ್ಠಾಪನೆ ನೆರವೇರಿಸಲು ನಿರ್ಧರಿಸಲಾಗಿದೆ. ಕಾರ್ಯಕ್ರಮದಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಧಿಕೃತ ಆಹ್ವಾನ ಕಳುಹಿಸಲಾಗಿದ್ದು, ಅವರು ಪಾಲ್ಗೊಳ್ಳುವುದು ಬಹುತೇಕ ಖಚಿತವಾಗಿದೆ. ಆದರೆ ಮೂರು ದಿನಗಳ ಕಾರ್ಯಕ್ರಮಗಳಲ್ಲೂ ಅವರು ಭಾಗಿಯಾಗಲಿದ್ದಾರೆಯೇ ಎಂಬುದು ಇನ್ನೂ ದೃಢಪಟ್ಟಿಲ್ಲ. ಪ್ರಮುಖ ಸಾಧುಗಳು ಮತ್ತು ಇತರ ಗಣ್ಯರು ಭಾಗವಹಿಸಲಿದ್ದಾರೆ ಎಂದು ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ತಿಳಿಸಿದ್ದಾರೆ.
ಮುಖ್ಯ ಕಾರ್ಯಕ್ರಮವನ್ನು ರಾಜಕೀಯೇತರವಾಗಿ ಇರಿಸಲಾಗುವುದು. ವಿವಿಧ ರಾಜಕೀಯ ಪಕ್ಷಗಳ ಅತಿಥಿಗಳನ್ನು ಸಹ ಆಹ್ವಾನಿಸಲಾಗುವುದು. ಮೂರ್ತಿ ಪ್ರತಿಷ್ಠಾಪನೆಯ ಧಾರ್ಮಿಕ ಕಾರ್ಯಕ್ರಮದ ಸಂದರ್ಭದಲ್ಲಿ ವೇದಿಕೆ ಅಥವಾ ಸಾರ್ವಜನಿಕ ಸಭೆ ಇರುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

ಅದ್ದೂರಿ ಕಾರ್ಯಕ್ರಮಕ್ಕೆ ಸಿದ್ಧತೆ :

ಕೋವಿಡ್ 19 ಮಾರ್ಗಸೂಚಿಗಳ ಕಾರಣದಿಂದಾಗಿ ದೇವಾಲಯದ ಭೂಮಿ ಪೂಜೆ ಕಾರ್ಯಕ್ರಮವನ್ನು 2020ರ ಆಗಸ್ಟ್ 5 ರಂದು ಸೀಮಿತ ಪ್ರಮಾಣದಲ್ಲಿ ನಡೆಸಲಾಗಿತ್ತು. ಈಗ ರಾಮಲಲ್ಲಾ ಗರ್ಭಗುಡಿ ಪೂರ್ಣಗೊಳ್ಳುವ ಹಂತದಲ್ಲಿದೆ. ಜನವರಿ ತಿಂಗಳಲ್ಲಿ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಯೋಜಿಸಲಾಗುವುದು. ಇದಕ್ಕೆ ಭರದ ಸಿದ್ಧತೆ ಸಾಗುತ್ತಿದೆ ಎಂದು ದೇವಸ್ಥಾನದ ಟ್ರಸ್ಟ್ ಸದಸ್ಯ ಅನಿಲ್ ಮಿಶ್ರ ಹೇಳಿದ್ದಾರೆ.

25,000ಕ್ಕೂ ಅಧಿಕ ಹಿಂದೂ ಮುಖಂಡರು ಹಾಜರ್

ಸಮಾರಂಭಕ್ಕೆ 136 ಸನಾತನ ಸಂಪ್ರದಾಯಗಳ 25,000ಕ್ಕೂ ಹೆಚ್ಚು ಹಿಂದೂ ಧಾರ್ಮಿಕ ಮುಖಂಡರನ್ನು ಆಹ್ವಾನಿಸಲು ಟ್ರಸ್ಟ್ ಯೋಜಿಸಿದೆ. ಸಂತರ ಪಟ್ಟಿಯನ್ನು ದೇವಾಲಯದ ಟ್ರಸ್ಟ್ ಸಿದ್ದಪಡಿಸುತ್ತಿದೆ. ಶೀಘ್ರದಲ್ಲೇ ಟ್ರಸ್ಟ್ ಅಧ್ಯಕ್ಷ ಮಹಂತ್ ನೃತ್ಯ ಗೋಪಾಲ್ ದಾಸ್ ಅವರ ಸಹಿಯೊಂದಿಗೆ ಆಹ್ವಾನ ಪತ್ರಿಕೆಯನ್ನು ಕಳುಹಿಸಲಾಗುವುದು ಎಂದು ಸಂಪತ್ ರಾಯ್ ತಿಳಿಸಿದ್ದಾರೆ. ಅಯೋಧ್ಯೆಯ ದೊಡ್ಡ ಮಟ್ಟಗಳಲ್ಲಿ ಎಲ್ಲಾ ಪ್ರಮುಖ ಸಂತರಿಗೆ ಉಳಿದುಕೊಳ್ಳುವ ಅವಕಾಶ ಕಲ್ಪಿಸಲು ಟ್ರಸ್ಟ್ ಯೋಜಿಸಿದೆ. 25000 ಸಂತರು 10000 ವಿಶೇಷ ಅತಿಥಿಗಳು ಸಮಾರಂಭ ವೀಕ್ಷಣೆ ಮಾಡಲಿದ್ದಾರೆ.

ಇದನ್ನೂ ಓದಿ : ನಾನು ಬದುಕಿರುವುದೇ ಕಿಮ್ಮನೆಗೆ ಸಹಿಸಲಾಗುತ್ತಿಲ್ಲ

HOW TO APPLY : NEET-UG COUNSELLING 2023

Categories
ರಾಷ್ಟ್ರೀಯ ವಾರ್ತೆ

ಟೊಮೆಟೊ ಆಯ್ತು, ಈರುಳ್ಳಿ ದುಬಾರಿ!?

ಟೊಮೆಟೊ ಆಯ್ತು, ಈರುಳ್ಳಿ ದುಬಾರಿ!?
– ಆಲೂ, ಬೆಳೆ, ಅಕ್ಕಿ ಎಲ್ಲವೂ ಹೆಚ್ಚಾಯ್ತು
– ದೇಶದಲ್ಲಿ ಈಗ ಜನರಿಗೆ ಬೆಲೆ ಏರಿಕೆ ಬರೆ
– ಈರುಳ್ಳಿ ಕೆಜಿಗೆ 70 ರೂ. ಆಗುವ ಸಾಧ್ಯತೆ

NAMMUR EXPRESS NEWS
ಹೊಸದಿಲ್ಲಿ: ದೇಶದಲ್ಲಿ ಟೊಮೆಟೊ ಮಾತ್ರವಲ್ಲ, ಆಲೂಗಡ್ಡೆ ಹೊರತಾಗಿ ಅಡುಗೆ ಮನೆಯ ಬಹುತೇಕ ಆಹಾರ ಪದಾರ್ಥಗಳ ದರ ಗಣನೀಯವಾಗಿ ಏರಿಕೆಯಾಗಿದೆ. ಇದರಿಂದ ಜನರ ಊಟವೂ ದುಬಾರಿ ಆಗಿದೆ.
ಯಾವುದು ಹೆಚ್ಚಳ?: ಕಳೆದ ವರ್ಷಕ್ಕೆ ಹೋಲಿಸಿದರೆ ತೊಗರಿ ಬೇಳೆ ದರ ಶೇ.28ರಷ್ಟು ಹೆಚ್ಚಾಗಿದ್ದರೆ, ಅಕ್ಕಿ ದರ ಶೇ. 10.5ರಷ್ಟು ಏರಿಕೆ ಕಂಡಿದೆ. ಉದ್ದಿನ ಬೇಳೆ ಮತ್ತು ಗೋಧಿ ಹಿಟ್ಟಿನ ದರ ತಲಾ ಶೇ. 8ರಷ್ಟು ಹೆಚ್ಚಳವಾಗಿದೆ. ಬೆಲೆ ಏರಿಕೆ ಕುರಿತಾಗಿ ಸಂಸತ್ತಿಗೆ ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರ ಸಚಿವಾಲಯವು ಈ ವಿವರ ನೀಡಿದೆ. ವರ್ಷದ ಹಿಂದೆ ಅಕ್ಕಿ ಚಿಲ್ಲರೆ ದರ ಸರಾಸರಿ 37 ರೂಪಾಯಿ ಇತ್ತು. ಈಗ ಇದೇ ಅಕ್ಕಿ ದರ 41 ರೂಪಾಯಿಗೆ ಏರಿಕೆಯಾಗಿದೆ. ಕಳೆದ ವರ್ಷ ತೊಗರಿ ಬೇಳೆ ದರ ಕೆ.ಜಿಗೆ 106.5 ರೂ. ಇದ್ದರೆ, ಈಗ 136 ರೂ.ಗೆ ಏರಿಕೆ ಕಂಡಿದೆ. ಉದ್ದಿನ ಬೇಳೆ ದರ ಕಳೆದ ವರ್ಷ 106.5 ರೂ. ಇತ್ತು. ಅದೀಗ 114 ರೂ.ಗೆ ಏರಿಕೆಯಾಗಿದೆ. ಈರುಳ್ಳಿ ದರವೂ ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 5ರಷ್ಟು ಹೆಚ್ಚಾಗಿದೆ.
ಮಳೆಯ ಅತಿವೃಷ್ಟಿ – ಅನಾವೃಷ್ಟಿಗಳು ದೇಶೀಯ ಉತ್ಪಾದನೆಯ ಮೇಲೆ ಪರಿಣಾಮ ಬೀರಿವೆ. ತೊಗರಿ ಇಳುವರಿ ಕಡಿಮೆಯಾಗಿದ್ದು, ಇದರಿಂದಾಗಿ ಬೆಲೆ ಏರಿಕೆಯಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಈರುಳ್ಳಿ ಕಣ್ಣೀರು ತರಿಸುತ್ತೆ!

ಆಗಸ್ಟ್ ಅಂತ್ಯದ ವೇಳೆಗೆ ಚಿಲ್ಲರೆ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಏರಿಕೆ ಪ್ರಾರಂಭವಾಗುವ ಸಾಧ್ಯತೆಯಿದೆ. ಮುಂದಿನ ತಿಂಗಳು ಸರಬರಾಜು ಮತ್ತು ಪೂರೈಕೆಯಲ್ಲಿನ ಅಸಮತೋಲನದಿಂದ ಪ್ರತಿ ಕೆಜಿ ಈರುಳ್ಳಿಗೆ 60 ರಿಂದ 70 ರೂಪಾಯಿಗೆ ಏರುವ ಸಾಧ್ಯತೆಯಿದೆ ಎಂದು ಆಗಸ್ಟ್ 4 ರಂದು ವರದಿಯೊಂದು ತಿಳಿಸಿದೆ. ಆದರೂ, ಬೆಲೆಗಳು 2020 ರಲ್ಲಿ ಏರಿಕೆಯಾಗಿದ್ದಕ್ಕಿಂತ ಕಡಿಮೆ ಇರಲಿದೆ ಎಂದು ತಿಳಿಸಿದೆ. “ಸರಬರಾಜು ಮತ್ತು ಬೇಡಿಕೆ ಅಸಮತೋಲನದಿಂದಾಗಿ ಆಗಸ್ಟ್ ಅಂತ್ಯದ ವೇಳೆಗೆ ಈರುಳ್ಳಿ ಬೆಲೆಯಲ್ಲಿ ಏರಿಕೆಯಾಗುವ ನಿರೀಕ್ಷೆಯಿದೆ. ನಮ್ಮ ಅಂದಾಜಿನ ಪ್ರಕಾರ, ಚಿಲ್ಲರೆ ಮಾರುಕಟ್ಟೆಯಲ್ಲಿ ಸೆಪ್ಟೆಂಬರ್ ಆರಂಭದಿಂದ ಬೆಲೆಗಳು ಗಮನಾರ್ಹ ಏರಿಕೆಯನ್ನು ತೋರಿಸುತ್ತಿವೆ. ಕಡಿಮೆ ಎಂದರೆ ಪ್ರತಿ ಕೆಜಿಗೆ 60 ರಿಂದ 70 ರೂಪಾಯಿಗೆ ತಲುಪುತ್ತದೆ.

ಇದನ್ನೂ ಓದಿ : ನಾನು ಬದುಕಿರುವುದೇ ಕಿಮ್ಮನೆಗೆ ಸಹಿಸಲಾಗುತ್ತಿಲ್ಲ

HOW TO APPLY : NEET-UG COUNSELLING 2023