Categories
ರಾಷ್ಟ್ರೀಯ ವಾರ್ತೆ

19 ಲಕ್ಷ ವಿಡಿಯೋಗಳನ್ನು 3 ತಿಂಗಳಲ್ಲಿ ಡಿಲೀಟ್ ಮಾಡಿದ ಯೂಟ್ಯೂಬ್!

19 ಲಕ್ಷ ವಿಡಿಯೋಗಳನ್ನು 3 ತಿಂಗಳಲ್ಲಿ ಡಿಲೀಟ್ ಮಾಡಿದ ಯೂಟ್ಯೂಬ್!

NAMMUR EXPRESS :
ನವದೆಹಲಿ: ಗೂಗಲ್ ಒಡೆತನದ ಯೂಟ್ಯೂಬ್ 2023 ರ ಜನವರಿ ಮತ್ತು ಮಾರ್ಚ್ ನಡುವೆ ನಿಯಮ ಉಲ್ಲಂಘನೆಗಾಗಿ ಭಾರತದಲ್ಲಿ ತನ್ನ ಪ್ಲಾಟ್‌ಫಾರ್ಮ್‌ನಿಂದ 19 ಲಕ್ಷಕ್ಕೂ ಹೆಚ್ಚು ವಿಡಿಯೋಗಳನ್ನು ತೆಗೆದುಹಾಕಿದೆ. ಅದೇ ರೀತಿ ಜಾಗತಿಕವಾಗಿ ಯೂಟ್ಯೂಬ್ 64.8 ಲಕ್ಷ ವಿಡಿಯೋಗಳನ್ನು ತೆಗೆದುಹಾಕಿದೆ.

ಹಗರಣಗಳು, ದಾರಿತಪ್ಪಿಸುವ ಮೆಟಾಡೇಟಾ ಅಥವಾ ಥಂಬ್‌ನೇಲ್‌ಗಳು ಮತ್ತು ವಿಡಿಯೋ ಮತ್ತು ಕಾಮೆಂಟ್‌ಗಳ ಸ್ಪಾಮ್ ಸೇರಿದಂತೆ ಯೂಟ್ಯೂಬ್‌ನ ಸ್ಪಾಮ್ ನೀತಿಗಳನ್ನು ಉಲ್ಲಂಘಿಸಿದ್ದಕ್ಕಾಗಿ 87 ಲಕ್ಷಕ್ಕೂ ಹೆಚ್ಚು ಚಾನೆಲ್‌ಗಳನ್ನು ಕಂಪನಿಯು ಇದೇ ಅವಧಿಯಲ್ಲಿ ತೆಗೆದುಹಾಕಿದೆ.ಈ ವರ್ಷದ ಆರಂಭದ ಮೂರು ತಿಂಗಳಲ್ಲಿ ಯೂಟ್ಯೂಬ್ ತನ್ನ ಪ್ಲಾಟ್‌ಪಾರ್ಮ್‌ನಿಂದ 64 ಲಕ್ಷ ವಿಡಿಯೋಗಳನ್ನು ಡಿಲೀಟ್ ಮಾಡಿದೆ.

ಕಂಪನಿಯ ಪ್ರಕಾರ ಯೂಟ್ಯೂಬ್ ತೆಗೆದುಹಾಕಿದ ಶೇಕಡಾ 93 ಕ್ಕೂ ಹೆಚ್ಚು ವಿಡಿಯೋಗಳನ್ನು ಮಾನವರಿಗಿಂತ ಮೊದಲು ತಂತ್ರಜ್ಞಾನವೇ ಕಂಡುಹಿಡಿದಿದೆ. ತಂತ್ರಜ್ಞಾನದಿಂದ ಪತ್ತೆ ಮಾಡಲಾದ ವಿಡಿಯೋಗಳ ಪೈಕಿ 38 ಪ್ರತಿಶತದಷ್ಟು ವೀಡಿಯೊಗಳು ಒಂದೇ ಒಂದು ವೀಕ್ಷಣೆ ಪಡೆಯುವ ಮೊದಲೇ ತೆಗೆದುಹಾಕಲಾಗಿದೆ ಮತ್ತು ಒಂದರಿಂದ ಹತ್ತು ವೀಕ್ಷಣೆ ಪಡೆಯುವ ಮುನ್ನ 31 ಪ್ರತಿಶತದಷ್ಟು ವಿಡಿಯೋಗಳನ್ನು ತೆಗೆದುಹಾಕಲಾಗಿದೆ. ಅಂದರೆ ತಂತ್ರಜ್ಞಾನದಿಂದ ಮೊದಲಿಗೆ ಪತ್ತೆಯಾದ 69 ಪ್ರತಿಶತದಷ್ಟು ವೀಡಿಯೊಗಳು ಯೂಟ್ಯೂಬ್‌ನಿಂದ ತೆಗೆದುಹಾಕುವ ಮೊದಲು 10 ಕ್ಕಿಂತ ಕಡಿಮೆ ವೀಕ್ಷಣೆಗಳನ್ನು ಪಡೆದಿದ್ದವು.

“ಇಂದಿನಿಂದ ಕಂಟೆಂಟ್ ಕ್ರಿಯೇಟರ್‌ಗಳು ಸಮುದಾಯ ಮಾರ್ಗಸೂಚಿಗಳನ್ನು ಉಲ್ಲಂಘಿಸಿರುವ ಬಗ್ಗೆ ಎಚ್ಚರಿಕೆಯ ಸಂದೇಶ ಪಡೆದಾಗ ಅವರು ಶೈಕ್ಷಣಿಕ ತರಬೇತಿ ಕೋರ್ಸ್ ನೋಡುವ ಆಯ್ಕೆಯನ್ನು ಹೊಂದಿರುತ್ತಾರೆ. ಭವಿಷ್ಯದಲ್ಲಿ ನಮ್ಮ ನೀತಿಗಳನ್ನು ಉಲ್ಲಂಘಿಸುವ ಕಂಟೆಂಟ್ ಅನ್ನು ಅಪ್ಲೋಡ್ ಮಾಡುವುದನ್ನು ಹೇಗೆ ತಪ್ಪಿಸಬಹುದು ಎಂಬುದನ್ನು ಅರ್ಥಮಾಡಿಕೊಳ್ಳಲು ಕ್ರಿಯೇಟರ್‌ಗಳಿಗೆ ಈ ತರಬೇತಿ ವಿಡಿಯೋಗಳು ಹೊಸ ಮಾರ್ಗಗಳನ್ನು ಒದಗಿಸುತ್ತವೆ’ ಎಂದು ಯೂಟ್ಯೂಬ್ ಹೇಳಿದೆ.

2019 ರಲ್ಲಿ ಯೂಟ್ಯೂಬ್ ಮೊದಲ ಬಾರಿ ನಿಯಮ ಉಲ್ಲಂಘಿಸುವವರಿಗೆ ಒಂದು ಬಾರಿ ಎಚ್ಚರಿಕೆ ನೀಡುವ ಪರಿಪಾಠ ಆರಂಭಿಸಿತ್ತು. ಯೂಟ್ಯೂಬ್ ಮುಂದಿನ ಕ್ರಮ ಕೈಗೊಳ್ಳುವ ಮೊದಲು ತಾವೇನು ತಪ್ಪು ಮಾಡಿದ್ದೇವೆ ಎಂಬುದನ್ನು ಪರಿಶೀಲಿಸಲು ಕಂಟೆಂಟ್‌ ಕ್ರಿಯೇಟರ್‌ಗಳಿಗೆ ಈ ಮೂಲಕ ಒಂದು ಅವಕಾಶ ನೀಡಲಾಗಿತ್ತು. ಇದರ ಪರಿಣಾಮವಾಗಿ ಎಚ್ಚರಿಕೆಯ ಸಂದೇಶ ಪಡೆದ ಶೇಕಡಾ 80 ಕ್ಕೂ ಹೆಚ್ಚು ಕಂಟೆಂಟ್ ಕ್ರಿಯೇಟರ್‌ಗಳು ಮತ್ತೊಮ್ಮೆ ಕಂಪನಿಯ ನಿಯಮಗಳನ್ನು ಉಲ್ಲಂಘಿಸುತ್ತಿಲ್ಲ ಎಂದು ಕಂಪನಿ ಹೇಳಿದೆ.

ಇದರ ಜೊತೆಗೆ ಕಂಪನಿ 85.3 ಲಕ್ಷಕ್ಕೂ ಹೆಚ್ಚು ಕಾಮೆಂಟ್‌ಗಳನ್ನು ಸಹ ತೆಗೆದುಹಾಕಿದೆ. ಇದರಲ್ಲಿ ಹೆಚ್ಚಿನವು ಸ್ಪಾಮ್ ಆಗಿವೆ. ತೆಗೆದುಹಾಕಿದ ಕಾಮೆಂಟ್‌ಗಳಲ್ಲಿ ಶೇಕಡಾ 90 ಕ್ಕಿಂತ ಹೆಚ್ಚು ಸ್ವಯಂಚಾಲಿತವಾಗಿ ಹತ್ತೆಯಾಗಿದೆ. ‘ಕಳೆದ ಹಲವಾರು ವರ್ಷಗಳಿಂದ ಯೂಟ್ಯೂಬ್ ಸಮುದಾಯದ ಸುರಕ್ಷತೆಗಾಗಿ ಅಗತ್ಯ ನೀತಿಗಳು ಮತ್ತು ಉತ್ಪನ್ನಗಳನ್ನು ರೂಪಿಸಲು ಭಾರಿ ಹೂಡಿಕೆ ಮಾಡಿದೆ. ಇಂದು, ಬಹುಪಾಲು ಕಂಟೆಂಟ್‌ ಕ್ರಿಯೇಟರ್‌ಗಳು ಸದುದ್ದೇಶದಿಂದ ಕಂಟೆಂಟ್ ಗಳನ್ನು ಅಪ್ಲೋಡ್ ಮಾಡುತ್ತಿದ್ದಾರೆ ಮತ್ತು ಅವರು ನಮ್ಮ ನೀತಿಗಳನ್ನು ಉಲ್ಲಂಘಿಸುತ್ತಿಲ್ಲ. ನಮ್ಮ ನೀತಿಗಳನ್ನು ಉದ್ದೇಶಪೂರ್ವಕವಾಗಿ ಉಲ್ಲಂಘಿಸುವ ಕಂಟೆಂಟ್‌ ಕ್ರಿಯೇಟರ್‌ಗಳ ಸಂಖ್ಯೆಯನ್ನು ಕಡಿಮೆ ಮಾಡುವಲ್ಲಿ ಅವರಿಗೆ ತಿಳುವಳಿಕೆ ಮೂಡಿಸುವ ನಮ್ಮ ಪ್ರಯತ್ನಗಳು ಯಶಸ್ವಿಯಾಗುತ್ತವೆ ಎಂದು ನಾವು ನಂಬುತ್ತೇವೆ” ಎಂದು ಯೂಟ್ಯೂಬ್ ಬುಧವಾರ ಹೇಳಿದೆ.

ಇದನ್ನೂ ಓದಿ : ಶಿವಮೊಗ್ಗ ವಿಮಾನ: ಮೊದಲ ಟಿಕೆಟ್ ಕಿಮ್ಮನೆ ಜಯರಾಂರದ್ದು!

Categories
ರಾಷ್ಟ್ರೀಯ ವಾರ್ತೆ

ಸಿಲಿಂಡರ್ ಬೆಲೆ 200 ರೂ.ಇಳಿಕೆ!

ಸಿಲಿಂಡರ್ ಬೆಲೆ 200 ರೂ.ಇಳಿಕೆ!
– ಗೃಹಬಳಕೆಯ ಎಲ್‌ ಪಿಜಿ ಸಿಲಿಂಡರ್‌ ಬೆಲೆ 200 ರೂ. ಇಳಿಕೆ
– ಉಜ್ವಲ ಯೋಜನೆಯಡಿ 400 ರೂ ಇಳಿಕೆ
– ಯಾವುದಕ್ಕೆ ಎಷ್ಟು ಇಳಿಕೆ ಆಗಿದೆ ಇಲ್ಲಿದೆ ಮಾಹಿತಿ

NAMMUR EXPRESS NEWS
ನವ ದೆಹಲಿ: ಗೃಹಬಳಕೆಯ ಎಲ್‌ ಪಿಜಿ ಸಿಲಿಂಡರ್‌ ಬೆಲೆಯಲ್ಲಿ ಸಾಮಾನ್ಯ ಗ್ರಾಹಕರಿಗೆ 200 ಇಳಿಕೆ ಮಾಡಿದ್ದು, ಇದರಿಂದಾಗಿ ಪ್ರಧಾನಮಂತ್ರಿ ಉಜ್ವಲಾ ಸ್ಕೀಮ್‌ ಫಲಾನುಭವಿಗಳಿಗೆ ಪ್ರತಿ ಎಲ್‌ ಪಿಜಿ ಸಿಲಿಂಡರ್‌ ಬೆಲೆಯಲ್ಲಿ 400 ರೂಪಾಯಿ ಇಳಿಕೆ ಮಾಡಿರುವುದಾಗಿ ಘೋಷಿಸಿದೆ. ಪ್ರಧಾನಮಂತ್ರಿ ಉಜ್ವಲಾ ಯೋಜನೆಯಡಿ ಪ್ರತಿ ಎಲ್‌ ಪಿಜಿ ಸಿಲಿಂಡರ್‌ ಗೆ ಹೆಚ್ಚುವರಿಯಾಗಿ 200 ರೂಪಾಯಿ ಸಬ್ಸಿಡಿ ನೀಡಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿರುವುದಾಗಿ ಕೇಂದ್ರ ಸಚಿವ ಅನುರಾಗ್‌ ಠಾಕೂರ್‌ ತಿಳಿಸಿದ್ದಾರೆ. ಪ್ರಧಾನಮಂತ್ರಿ ಉಜ್ವಲಾ ಯೋಜನೇತರ ಗ್ರಾಹಕರಿಗೆ 14ಕೆಜಿಯ ಎಲ್‌ ಪಿಜಿ ಸಿಲಿಂಡರ್‌ ಬೆಲೆಯಲ್ಲಿ 200 ರೂಪಾಯಿ ಇಳಿಕೆಯಾಗಲಿದ್ದು,ಪ್ರತಿ ಸಿಲಿಂಡರ್‌ ಬೆಲೆ 900 ರೂಪಾಯಿ ಆಗಲಿದೆ. ಉಜ್ವಲಾ ಸ್ಕೀಮ್‌ ನ ನೋಂದಾಯಿತ ಗ್ರಾಹಕರಿಗೆ ಒಟ್ಟು 400 ರೂಪಾಯಿ ಸಬ್ಸಿಡಿ ದೊರೆಯುವ ಮೂಲಕ ಪ್ರತಿ ಸಿಲಿಂಡರ್‌ ಬೆಲೆ 700 ರೂಪಾಯಿ ಆಗಲಿದೆ. ಗೃಹ ಬಳಕೆಯ ಎಲ್‌ ಪಿಜಿ ಸಿಲಿಂಡರ್‌ ಗೆ 200 ರೂಪಾಯಿ ಸಬ್ಸಿಡಿ ನೀಡುವ ನಿರ್ಧಾರದಿಂದ ಕೇಂದ್ರ ಸರ್ಕಾರದ ಬೊಕ್ಕಸಕ್ಕೆ ಒಟ್ಟು 7,500 ಕೋಟಿ ರೂಪಾಯಿ ಹೊರೆಯಾಗಲಿದೆ ಎಂದು ಠಾಕೂರ್‌ ತಿಳಿಸಿದ್ದಾರೆ.

ರಕ್ಷಾ ಬಂಧನ್‌, ಓಣಂ ಹಬ್ಬದ ಸಂದರ್ಭದಲ್ಲಿ ಗೃಹಬಳಕೆಯ ಎಲ್‌ ಪಿಜಿ ಸಿಲಿಂಡರ್‌ ಬೆಲೆಯನ್ನು ಇಳಿಸಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಸುಮಾರು 73 ಲಕ್ಷ ಮಹಿಳಾ ಫಲಾನುಭವಿಗಳಿಗೆ ಅನುಕೂಲವಾಗುವಂತೆ ಉಜ್ವಲಾ ಸ್ಕೀಮ್‌ ಸಬ್ಸಿಡಿಯನ್ನು ಮುಂದುವರಿಸಲು ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ ಎಂದು ಸಚಿವ ಠಾಕೂರ್‌ ತಿಳಿಸಿದ್ದಾರೆ

ಇದನ್ನೂ ಓದಿ : ಬ್ಯಾಂಕಿಗೆ ಬಂದ ಮಹಿಳೆ ಮೈಮೇಲೆ ಬಂತು ದೇವರು!

Categories
ರಾಷ್ಟ್ರೀಯ ವಾರ್ತೆ

ಮಧುರೈ ರೈಲಿನಲ್ಲಿ ಅಗ್ನಿ ಅವಘಡಕ್ಕೆ 10 ಬಲಿ!

– ಮಧುರೈ ರೈಲಿನಲ್ಲಿ ಅಗ್ನಿ ಅವಘಡಕ್ಕೆ 10 ಬಲಿ!
– 20 ಮಂದಿ ಗಂಭೀರ ಗಾಯ: ರಕ್ಷಣಾ ಕಾರ್ಯಾಚರಣೆ
– ಕಂದಕಕ್ಕೆ ಬಿದ್ದ ಜೀಪ್: 9 ಮಂದಿ ಮಹಿಳೆಯರು ಸಾವು

NAMMUR EXPRESS NEWS
ಮಧುರೈ: ತಮಿಳುನಾಡಿನ ಮಧುರೈ ರೈಲ್ವೇ ಜಂಕ್ಷನ್‌ನಲ್ಲಿ ನಿಂತಿದ್ದ ಪ್ರವಾಸಿ ರೈಲಿಗೆ ಬೆಂಕಿ ತಗುಲಿ 10 ಮಂದಿ ಸಾವನ್ನಪ್ಪಿರುವ ಘಟನೆ ಶನಿವಾರ ಬೆಳಗಿನ ಜಾವ 5.15 ಕ್ಕೆ ಸಂಭವಿಸಿದೆ. ಉತ್ತರ ಪ್ರದೇಶದ ಲಖಿಂಪುರ ಖೇರಿಯಿಂದ ಪ್ರವಾಸಿಗರನ್ನು ಕರೆದುಕೊಂಡು ಹೋಗುತ್ತಿತ್ತು. ಮೊದಲು ಇಬ್ಬರು ಸಾವನ್ನಪ್ಪಿದರು. ಆದ್ರೆ, ಇದೀಗ ಆಸ್ಪತ್ರೆಗೆ ದಾಖಲಾದ 8 ಮಂದಿ ಚಿಕಿತ್ಸೆಗೆ ಫಲಿಸದೇ ಸಾವನ್ನಪ್ಪಿದ್ದಾರೆ. 20 ಕ್ಕೂ ಹೆಚ್ಚು ಮಂದಿ ಗಂಭೀರವಾದ ಸುಟ್ಟಗಾಯಗಳಿಗೆ ಒಳಗಾಗಿರುವುದರಿಂದ ಸಾವಿನ ಸಂಖ್ಯೆ ಹೆಚ್ಚಾಗಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬೆಂಕಿ ಅವಘಡದಲ್ಲಿ ಎರಡು ಬೋಗಿಗಳು ಸಂಪೂರ್ಣ ಸುಟ್ಟು ಭಸ್ಮವಾಗಿವೆ. ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಲಾಗಿದೆ. ಬೆಂಕಿ ಮತ್ತೆ ಹೊತ್ತಿಕೊಳ್ಳುವುದನ್ನು ತಡೆಯಲು ಅಗ್ನಿಶಾಮಕ ದಳದವರು ಸುಟ್ಟ ಕೋಚ್‌ಗಳನ್ನು ತಂಪಾಗಿಸುವ ಪ್ರಕ್ರಿಯೆಯಲ್ಲಿ ತೊಡಗಿದ್ದಾರೆ. ರೈಲಿನಲ್ಲಿದ್ದ ಪ್ರಯಾಣಿಕರು ಸಿಲಿಂಡರ್ ಬಳಸಿ ಅಡುಗೆ ಮಾಡುತ್ತಿದ್ದಾಗ ಗ್ಯಾಸ್ ಸೋರಿಕೆಯಾಗಿ ಸಿಲಿಂಡರ್ ಸ್ಪೋಟಗೊಂಡಿದೆ. ಈ ವೇಳೆ 2 ಬೋಗಿಗಳಲ್ಲಿ ಹಠಾತ್ ಬೆಂಕಿ ಕಾಣಿಸಿಕೊಂಡಿದೆ.

ಕಂದಕಕ್ಕೆ ಬಿದ್ದ ಜೀಪ್: 9 ಮಂದಿ ಮಹಿಳೆಯರು ಸಾವು

ಕೇರಳದ ವಯನಾಡು ಜಿಲ್ಲೆಯಲ್ಲಿ ಶುಕ್ರವಾರ ಮಧ್ಯಾಹ್ನ ಸಂಭವಿಸಿದ ಜೀಪ್ ಅಪಘಾತದಲ್ಲಿ 9 ಮಂದಿ ಕಾರ್ಮಿಕರು ಸಾವನ್ನಪ್ಪಿದ್ದಾರೆ. ಚಹಾ ತೋಟದ ಕಾರ್ಮಿಕರನ್ನು ಹೊತ್ತೊಯ್ಯುತ್ತಿದ್ದ ಜೀಪ್ ಕಂದಕಕ್ಕೆ ಬಿದ್ದು 9 ಜನರು ಮೃತಪಟ್ಟ ಘಟನೆ ಕೇರಳದ ವಯನಾಡು ಜಿಲ್ಲೆಯಲ್ಲಿ ಇಂದು ನಡೆದಿದೆ. ಅಪಘಾತಕ್ಕೀಡಾದ ಜೀಪ್ ಚಹಾ ತೋಟದ ಕಾರ್ಮಿಕರನ್ನು ಹೊತ್ತೊಯ್ಯುತ್ತಿತ್ತು. ಒಟ್ಟು 12 ಜನ ಮಹಿಳೆಯರು ಜೀಪ್ನಲ್ಲಿದ್ದರು. ಇವರು ಚಹಾ ತೋಟದ ಕೆಲಸ ಮುಗಿಸಿ ತಮ್ಮಮನೆಗಳಿಗೆ ಮರಳುತ್ತಿದ್ದರು. ಮಧ್ಯಾಹ್ನ 3:30ರ ಸುಮಾರಿಗೆ ಮಾರ್ಗ ಮಧ್ಯೆ 30 ಅಡಿ ಆಳದ ಕಂದಕಕ್ಕೆ ಜೀಪ್ ಉರುಳಿಬಿದ್ದಿದೆ.

ಇದನ್ನೂ ಓದಿ : ವಾಹನ ನಂಬರ್ ಪ್ಲೇಟ್ ನಿಯಮ ಬದಲು!

Categories
ರಾಷ್ಟ್ರೀಯ ವಾರ್ತೆ

ಮಂಗ, ನಾಯಿ ಗ್ಯಾಂಗ್ ವಾರ್! – 80 ನಾಯಿಗಳ ಸಾವು

ಸುದ್ದಿ ಅಂದ್ರೆ ಇದು..ಮಂಗ, ನಾಯಿ ಗ್ಯಾಂಗ್ ವಾರ್!
– 80 ನಾಯಿಗಳ ಸಾವು: ಮಹಾರಾಷ್ಟ್ರದ ಬೀಡ್ ಜಿಲ್ಲೆಯಲ್ಲಿ ಘಟನೆ

NAMMMUR EXPRESS : ಇದೊಂದು ಅಚ್ಚರಿ ಘಟನೆ!. ಬೀದಿ ನಾಯಿಗಳ ಮೇಲಿನ ಪ್ರತಿಕಾರದಿ೦ದಾಗಿ ಕೋತಿಗಳ ಗುಂಪು ಸಿಕ್ಕಸಿಕ್ಕ ನಾಯಿಮರಿಗಳನ್ನೆಲ್ಲಾ ಹೊತ್ತೊಯ್ದು ಎತ್ತರದ ಕಟ್ಟಡ ಅಥವಾ ಮರದಿಂದ ಕೈ ಬಿಟ್ಟು ಕೊಲ್ಲುತ್ತಿರುವ ಘಟನೆ ಮಹಾರಾಷ್ಟ್ರದ ಬೀಡ್ ಜಿಲ್ಲೆಯಲ್ಲಿ ನಡೆಯುತ್ತಿದೆ. ಸ್ಥಳೀಯರ ಪ್ರಕಾರ ಇಲ್ಲಿನ ಮಜಲ್‌ ಗಾವ್‌ ನಲ್ಲಿ ಕೆಲ ಸಮಯದ ಹಿಂದೆ ನಾಯಿಗಳು ಕೋತಿಯ ಮರಿಯ ಮೇಲೆ ದಾಳಿ ಮಾಡಿ ಕೊಂದಿದ್ದವು. ಆಗಿನಿಂದಲೂ ಕೋತಿಗಳ ಗುಂಪು ಕಂಡ ಕಂಡ ನಾಯಿಮರಿಗಳನ್ನೆಲ್ಲಾ ಹೊತ್ತೊಯ್ದು ಎತ್ತರದ ಮನೆ ಅಥವಾ ಮರದಿಂದ ಕೈ ಬಿಡುತ್ತಿವೆ. ಕೋತಿಗಳ ಕೃತ್ಯಕ್ಕೆ ಈಗಾಗಲೇ 80 ನಾಯಿ ಮರಿಗಳು ಬಲಿಯಾಗಿವೆ. ಇದೀಗ ನಿವಾಸಿಗಳು ಅರಣ್ಯ ಇಲಾಖೆಯ ಮೊರೆ ಹೋಗಿದ್ದಾರೆ. ಇಲಾಖೆಯು ಬಹುತೇಕ ಕೋತಿಗಳನ್ನು ಸೆರೆ ಹಿಡಿದಿದೆ.

ಇದನ್ನೂ ಓದಿ : ವಾಹನ ನಂಬರ್ ಪ್ಲೇಟ್ ನಿಯಮ ಬದಲು!

Categories
ರಾಷ್ಟ್ರೀಯ ವಾರ್ತೆ

ಸಾಲಗಾರರೇ ನಿಮಗಿದೋ ಸಿಹಿ ಸುದ್ದಿ!

ಸಾಲಗಾರರೇ ನಿಮಗಿದೋ ಸಿಹಿ ಸುದ್ದಿ!
– ಸಾಲದ ಮೇಲೆ ಹೆಚ್ಚುವರಿ ಬಡ್ಡಿ ವಿಧಿಸುವಂತಿಲ್ಲ
– ಹೊಸ ಮಾರ್ಗಸೂಚಿ ಬಿಡುಗಡೆಗೊಳಿಸಿದ ಆರ್ ಬಿಐ
– ಬ್ಯಾಂಕ್ ಸಾಲದ ಬಡ್ಡಿ ನಿಯಮ ಬದಲು: ಏನಿದು?

NAMMUR EXPRESS NEWS
ನವದೆಹಲಿ: ಸಾಲ ಖಾತೆಗಳ ಮೇಲೆ ಬ್ಯಾಂಕ್ ಗಳು ದಂಡ ವಿಧಿಸುವ ಪ್ರಕ್ರಿಯೆ ಕುರಿತು ಭಾರತೀಯ ರಿಸರ್ವ್ ಬ್ಯಾಂಕ್ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ. ಸಾಲಗಾರರು ಸಾಲ ಪಡೆಯುವ ಸಂದರ್ಭದಲ್ಲಿನ ಷರತ್ತುಗಳನ್ನು ಪಾಲಿಸದ ಸಂದರ್ಭದಲ್ಲಿ ಹಲವು ಬ್ಯಾಂಕ್ ಗಳು ನಿಗದಿತ ಬಡ್ಡಿದರದ ಮೇಲೆ ದಂಡದ ರೂಪದಲ್ಲಿ ಹೆಚ್ಚಿನ ಬಡ್ಡಿ (ಪೆನಲ್ ರೇಟ್ ಆಫ್ ಇಂಟರೆಸ್ಟ್) ವಿಧಿಸೋದನ್ನು ಗಮನಿಸಿರುವ ಆರ್ ಬಿಐ, ಇದರ ತಡೆಗೆ ಈ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.

ಯಾವಾಗ ಜಾರಿ?:

ಹೊಸ ಮಾರ್ಗಸೂಚಿಗಳು 2024ರ ಜನವರಿ 1ರಿಂದ ಜಾರಿಗೆ ಬರಲಿವೆ. ಇದರ ಅನ್ವಯ ಸಾಲ ಒಪ್ಪಂದದಲ್ಲಿನ ನಿಯಮಗಳು ಹಾಗೂ ಷರತ್ತುಗಳನ್ನು ಪಾಲಿಸದ ಸಂದರ್ಭದಲ್ಲಿ ಬ್ಯಾಂಕ್ ಗಳು ದಂಡ ವಿಧಿಸುವಾಗ ಅದನ್ನು ‘ದಂಡ ಶುಲ್ಕ’ ಎಂದು ಪರಿಗಣಿಸಬೇಕೇ ಹೊರತು ‘ದಂಡ ಬಡ್ಡಿ’ಯ ರೂಪದಲ್ಲಿ ವಿಧಿಸುವಂತಿಲ್ಲ. ಅಂದರೆ ಸಾಲದ ಬಡ್ಡಿದರಕ್ಕೆ ಈ ದಂಡ ಬಡ್ಡಿಯನ್ನು ಸೇರಿಸಿ ಸಾಲಗಾರರ ಮೇಲೆ ಹೆಚ್ಚಿನ ಹೊರೆ ವಿಧಿಸುವಂತಿಲ್ಲ ಎಂದು ಆರ್ ಬಿಐ ಈ ಮೂಲಕ ಬ್ಯಾಂಕ್ ಗಳಿಗೆ ಸೂಚನೆ ನೀಡಿದೆ.

ಸಾಲದ ಬಡ್ಡಿದರದ ಮೇಲೆ ಯಾವುದೇ ಹೆಚ್ಚುವರಿ ಮೊತ್ತವನ್ನು ವಿಧಿಸದೆ ಈ ಮಾರ್ಗಸೂಚಿಗಳನ್ನು ಕಾಗದ ಹಾಗೂ ಅನುಷ್ಠಾನ ಎರಡರಲ್ಲೂ ಪಾಲನೆ ಮಾಡುವಂತೆ ಬ್ಯಾಂಕ್ ಗಳಿಗೆ ಆರ್ ಬಿಐ ಸೂಚಿಸಿದೆ. ಸಾಲಗಳ ಮೇಲೆ ವಿಧಿಸುವ ದಂಡ ಶುಲ್ಕ ಅಥವಾ ಅದೇ ಮಾದರಿಯ ಶುಲ್ಕಗಳಿಗೆ ಸಂಬಂಧಿಸಿ ಬ್ಯಾಂಕ್ ಗಳು ಒಂದು ಮಂಡಳಿಯಿಂದ ಅನುಮೋದಿತಗೊಂಡಿರುವ ನೀತಿಗಳನ್ನು ರೂಪಿಸಿಕೊಂಡು ಅದನ್ನು ಪಾಲಿಸುವಂತೆ ಕೂಡ ಆರ್ ಬಿಐ ಸಲಹೆ ನೀಡಿದೆ.

ಬಡ್ಡಿ ಬೇಡ ಒಮ್ಮೆ ಶುಲ್ಕ ವಿಧಿಸಿ!

ಪ್ರಸ್ತುತ ಬ್ಯಾಂಕ್ ಗಳು ಸಾಲಗಾರರು ಇಎಂಐ ಅನ್ನು ನಿಗದಿತ ಸಮಯಕ್ಕೆ ಸರಿಯಾಗಿ ಪಾವತಿಸಲು ವಿಫಲರಾದ ಸಂದರ್ಭದಲ್ಲಿ ದಂಡ ಬಡ್ಡಿ ವಿಧಿಸುತ್ತವೆ. ಸಾಮಾನ್ಯವಾಗಿ ಶೇ.2ರಷ್ಟು ದಂಡ ಬಡ್ಡಿ ವಿಧಿಸಲಾಗುತ್ತದೆ. ಅಂದರೆ ಈ ದಂಡ ಬಡ್ಡಿಯನ್ನು ಸಾಲದ ಮೇಲಿನಬಡ್ಡಿಗೆ ಸೇರಿಸಲಾಗುತ್ತದೆ. ಉದಾಹರಣೆಗೆ ನಿಮ್ಮ ಸಾಲದ ಬಡ್ಡಿ ತಿಂಗಳಿಗೆ ಶೇ.10ರಷ್ಟಿದ್ದರೆ ಅದರ ಮೇಲೆ ಈ ಹೆಚ್ಚುವರಿ ಶೇ.2ರಷ್ಟು ಬಡ್ಡಿ ವಿಧಿಸಲಾಗುತ್ತದೆ. ಆಗ ನಿಮ್ಮ ಸಾಲದ ಒಟ್ಟು ಬಡ್ಡಿದರ ಶೇ.12ರಷ್ಟು ಆಗುತ್ತದೆ. ಇದು ಸಾಲಗಾರರ ಮೇಲಿನ ಬಡ್ಡಿ ಹೊರೆಯನ್ನು ಹೆಚ್ಚಿಸುತ್ತದೆ. ಇದೇ ಕಾರಣಕ್ಕೆ ಆರ್ ಬಿಐ ದಂಡ ಬಡ್ಡಿ ಬದಲು ದಂಡ ಶುಲ್ಕ ವಿಧಿಸುವಂತೆ ಸೂಚಿಸಿದೆ.

ದಂಡ ಶುಲ್ಕಗಳಿಗೆ ಸಂಬಂಧಿಸಿ ಆರ್ ಬಿಐ ಈ ವರ್ಷದ ಏಪ್ರಿಲ್ ನಲ್ಲಿ ದಂಡ ಶುಲ್ಕಗಳ ಕರಡು ಪ್ರತಿ ರಚಿಸಿತ್ತು. ಇನ್ನು ಆರ್ ಬಿಐ ಹೊಸ ಮಾರ್ಗಸೂಚಿಗಳ ಅನ್ವಯ ವೈಯಕ್ತಿಕ ಸಾಲಗಾರರಿಗೆ ಉದ್ಯಮ ಹೊರತುಪಡಿಸಿ ಇತರ ಉದ್ದೇಶಗಳಿಗೆ ನೀಡುವ ಸಾಲದ ಮೇಲೆ ವಿಧಿಸುವ ದಂಡ ಶುಲ್ಕ ಸಂಸ್ಥೆಗಳಿಗೆ ವಿಧಿಸುವ ದಂಡ ಶುಲ್ಕಕ್ಕಿಂತ ಜಾಸ್ತಿ ಇರಬಾರದು ಎಂದು ಹೇಳಿದೆ.
ದಂಡ ಶುಲ್ಕದ ಮೊತ್ತ ನ್ಯಾಯಸಮ್ಮತವಾಗಿರಬೇಕು ಹಾಗೂ ಸಾಲ ಒಪ್ಪಂದದ ನಿಯಮಗಳು ಹಾಗೂ ಷರತ್ತುಗಳಿಗೆ ತಕ್ಕದಾಗಿರಬೇಕು. ಇನ್ನು ಈ ಸಂಬಂಧ ಯಾವುದೇ ನಿರ್ದಿಷ್ಟ ಅಥವಾ ಉತ್ಪನ್ನ ವಿಭಾಗಕ್ಕೆ ಸಂಬಂಧಿಸಿ ತಾರತಮ್ಯ ಮಾಡಬಾರದು ಎಂದು ಆರ್ ಬಿಐ ಬ್ಯಾಂಕ್ ಗಳಿಗೆ ನಿರ್ದೇಶನ ನೀಡಿದೆ. ಇನ್ನು ದಂಡ ಶುಲ್ಕ ಯಾಕೆ ವಿಧಿಸಲಾಗುತ್ತಿದೆ ಎಂಬ ಮಾಹಿತಿಯನ್ನು ಬ್ಯಾಂಕ್ ಗಳು ಗ್ರಾಹಕರಿಗೆ ಸಾಲದ ಒಪ್ಪಂದಲ್ಲೇ ತಿಳಿಸಬೇಕು. ಇನ್ನು ಅತ್ಯಂತ ಪ್ರಮುಖವಾದ ನಿಯಮಗಳು ಹಾಗೂ ಷರತ್ತುಗಳು/ ಕೀ ಫ್ಯಾಕ್ಸ್ ಸ್ಟೇಟೆಂಟ್ ಗಳನ್ನು ಬ್ಯಾಂಕ್ ವೆಬ್ ಸೈಟ್ ನಲ್ಲಿ ಬಡ್ಡಿದರ ಹಾಗೂ ಸೇವಾ ಶುಲ್ಕಗಳ ಅಡಿಯಲ್ಲಿ ನಮೂದಿಸಬೇಕು.

ಇನ್ನು ಆರ್ ಬಿಐ ಪ್ರಕಾರ ಇಂಥ ಶುಲ್ಕಗಳನ್ನು ವಿಧಿಸೋದು ಗ್ರಾಹಕರಲ್ಲಿ ಆರ್ಥಿಕ ಶಿಸ್ತು ಮೂಡಿಸಲು ಅಗತ್ಯವಾಗಿದೆ. ಆದರೆ, ಈ ಶುಲ್ಕಗಳನ್ನು ಆದಾಯ ಹೆಚ್ಚಳದ ಸಾಧನವಾಗಿ ಬಳಸಬಾರದು ಎಂದು ಆರ್ ಬಿಐ ತಿಳಿಸಿದೆ. ಆರ್ ಬಿಐ ಹೊಸ ಮಾರ್ಗಸೂಚಿಗಳು ಎಲ್ಲ ವಾಣಿಜ್ಯ ಬ್ಯಾಂಕ್ ಗಳು, ಸಣ್ಣ ಹಣಕಾಸಿನ ಬ್ಯಾಂಕ್ ಗಳು (ಪೇಮೆಂಟ್ ಬ್ಯಾಂಕ್ ಗಳನ್ನು ಹೊರತುಪಡಿಸಿ), ಗೃಹ ಹಣಕಾಸು ಕಂಪನಿಗಳು ಹಾಗೂ ಎಸ್ ಐಡಿಬಿಐ, ಎಕ್ಸಿಂ ಬ್ಯಾಂಕ್ಸ್ ಮುಂತಾದ ಇತರ ಹಣಕಾಸು ಸಂಸ್ಥೆಗಳು ಸೇರಿದಂತೆ ಎನ್ ಬಿಎಫ್ ಸಿಗಳಿಗೆ ಅನ್ವಯಿಸುತ್ತದೆ.

ಇದನ್ನೂ ಓದಿ : ತೀರ್ಥಹಳ್ಳಿಯಲ್ಲಿ ಗಾಂಜಾ ಹೊಡೆದವರು ಅರೆಸ್ಟ್!?

[embedyt] https://www.youtube.com/watch?v=6xcRyzTIs_U%5B/embedyt%5D

Categories
ರಾಷ್ಟ್ರೀಯ ವಾರ್ತೆ

ಸಮುದ್ರದ ಆಳದಲ್ಲಿ ಹಾರಾಡಿದ ತ್ರಿವರ್ಣ ಧ್ವಜ!

ಸಮುದ್ರದ ಆಳದಲ್ಲಿ ಹಾರಾಡಿದ ತ್ರಿವರ್ಣ ಧ್ವಜ!
– ಭಾರತೀಯ ಕೋಸ್ಟ್ ಗಾರ್ಡ್ ವಿಶೇಷ ಧ್ವಜವಂದನೆ
– ಮೇರಾ ಭಾರತ್ ಮಹಾನ್..ವಂದೇ ಮಾತರಂ

NAMMUR EXPRESS NEWS
ಚೆನ್ನೈ: ಭಾರತದ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ, ಭಾರತೀಯ ಕೋಸ್ಟ್ ಗಾರ್ಡ್ ಸದಸ್ಯರು ನೀರಿನ ಅಡಿಯಲ್ಲಿ ರಾಷ್ಟ್ರಧ್ವಜವನ್ನು ಹಿಡಿದು ವಂದಿಸುವ ಮೂಲಕ ತಮ್ಮದೇಶಭಕ್ತಿಯ ಉತ್ಸಾಹವನ್ನು ಪ್ರದರ್ಶಿಸಿದರು. ತಮಿಳುನಾಡಿನ ರಾಮೇಶ್ವರಂ ಬಳಿ ಈ ಘಟನೆ ನಡೆದಿದ್ದು, ಈ ಮಹತ್ವದ ಕೃತ್ಯವನ್ನು ಸೆರೆಹಿಡಿಯುವ ವಿಡಿಯೋ ಆನ್‌ಲೈನ್‌ನಲ್ಲಿ ಜನಪ್ರಿಯತೆಯನ್ನು ಗಳಿಸಿದೆ.

ವೀಡಿಯೊದಲ್ಲಿ, ಧೈರ್ಯಶಾಲಿ ಭಾರತೀಯ ಕೋಸ್ಟ್ ಗಾರ್ಡ್‌ ಸಿಬ್ಬಂದಿ ನೀರಿನ ಅಡಿಯಲ್ಲಿ ನಿಂತಿರುವುದನ್ನು ಗಮನಿಸಬಹುದು. ಅದರಲ್ಲಿ ಅವರು ತ್ರಿವರ್ಣ ಧ್ವಜದ ಬಗ್ಗೆ ಅವರ ಗೌರವವನ್ನು ಪ್ರದರ್ಶಿಸಿದ್ದಾರೆ. ಏಳು ಸೆಕೆಂಡ್‌ಗಳ ವೀಡಿಯೊವು ನಾಲ್ಕು ಭಾರತೀಯ ಕೋಸ್ಟ್ ಗಾರ್ಡ್ ಸದಸ್ಯರ ಗುಂಪನ್ನು ಸಮುದ್ರದಆಳದಲ್ಲಿ ತೋರಿಸುತ್ತದೆ. ಅವರಲ್ಲಿ ಒಬ್ಬ ಗಾರ್ಡ್ ಭಾರತೀಯ ಧ್ವಜವನ್ನು ಹಿಡಿದಿರುವುದು ಕಂಡುಬಂದರೆ, ಉಳಿದ ಸದಸ್ಯರು ರಾಷ್ಟ್ರಧ್ವಜಕ್ಕೆ ವಂದನೆ ಸಲ್ಲಿಸುತ್ತಿದ್ದಾರೆ.

ಇದನ್ನೂ ಓದಿ : ರೇಷನ್ ಕಾರ್ಡ್‌ನಲ್ಲಿ ಮನೆ ಯಜಮಾನಿ ತಿದ್ದುಪಡಿಗೆ 4 ದಿನ ಅವಕಾಶ

Categories
ರಾಷ್ಟ್ರೀಯ ವಾರ್ತೆ

10ನೇ ಬಾರಿಗೆ ಧ್ವಜಾರೋಹಣ ಮಾಡಿದ ನಮೋ!

10ನೇ ಬಾರಿಗೆ ಧ್ವಜಾರೋಹಣ ಮಾಡಿದ ನಮೋ!
– ಕೆಂಪುಕೋಟೆ ಮೇಲೆ ಭಾರತ ಧ್ವಜ ಹಾರಿಸಿದ ಮೋದಿ!
– ಭಾರತ ವಿಶ್ವದಲ್ಲೇ ಅತ್ಯುತ್ತಮ ಸಾಧನೆ ಎಂದು ಬಣ್ಣನೆ
– ಇನ್ನು 5 ವರ್ಷದಲ್ಲಿ ಭಾರತ ವಿಶ್ವಕ್ಕೆ ನಂ.1 ಆಗುತ್ತೆ
– ಮೋದಿ ಹೇಳಿದ್ದೇನು..?, ಇಲ್ಲಿದೆ ಕಂಪ್ಲೀಟ್ ಭಾಷಣ

NAMMUR EXPRESS NEWS
ನವದೆಹಲಿ : ದೇಶಾದ್ಯಂತ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಗುತ್ತಿದ್ದು ಪ್ರಧಾನಿ ನರೇಂದ್ರ ಮೋದಿಯವರು ದೆಹಲಿಯ ಕೆಂಪುಕೋಟೆ ಮೇಲೆ ಸತತ 10ನೇ ಬಾರಿ ಕೆಂಪುಕೋಟೆಯಲ್ಲಿ ಧ್ವಜಾರೋಹಣ ಮಾಡಿ, ದೇಶವನ್ನು ಉದ್ದೇಶಿಸಿ ನಮೋ ಭಾಷಣ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾತಂತ್ರ್ಯ ದಿನದಂದು ಜನರಿಗೆ ಶುಭಾಶಯ ಕೋರಿದ್ದಾರೆ. ಸ್ವಾತಂತ್ರ್ಯ ದಿನದ ಶುಭಾಶಯಗಳು. ನಮ್ಮ ಮಹಾನ್ ಸ್ವಾತಂತ್ರ್ಯ ಹೋರಾಟಗಾರರಿಗೆ ನಾವು ಗೌರವ ಸಲ್ಲಿಸುತ್ತೇವೆ ಮತ್ತು ಅವರ ದೃಷ್ಟಿಯನ್ನು ಈಡೇರಿಸುವ ನಮ್ಮ ಬದ್ಧತೆಯನ್ನು ಪುನರುಚ್ಚರಿಸುತ್ತೇವೆ ಎಂದಿದ್ದಾರೆ.

ಮಣಿಪುರ ಶಾಂತಿಯತ್ತ, ಸಮಧಾನದಿಂದಿರಿ ಸರ್ಕಾರ ನಿಮ್ಮ ಜತೆಗಿದೆ

ದೇಶ 140 ಕೋಟಿ ನನ್ನ ಪರಿವಾರದ ಸಹೋದರ ಸಹೋದರಿಯರಿಗೆ ಶುಭಾಶಯಗಳನ್ನು ಕೋರುತ್ತಾ ಮಾತು ಆರಂಭಿಸಿದ ಅವರು, ದೇಶದ ಸ್ವಾತಂತ್ರ್ಯದ ಸಂಭ್ರಮಾಚರಣೆಗೆ ಕೊಡುಗೆ ನೀಡಿದ ಮತ್ತು ತ್ಯಾಗ, ಬಲಿದಾನವಾದ ಮಹನೀಯರಿಗೆ ನಾನು ವಂದಿಸುತ್ತೇನೆ ಮತ್ತು ಅಭಿನಂದಿಸುತ್ತೇನೆ ಎಂದಿದ್ದಾರೆ. ಮಣಿಪುರದಲ್ಲಿ ಕೆಲ ದಿನಗಳ ಹಿಂದೆ ಹಿಂಸಾಚಾರ ನಡೆದಿತ್ತು, ಹಲವು ಜನರು ಪ್ರಾಣ ಕಳೆದುಕೊಂಡಿದ್ದರು. ಆದರೆ ಇದೀಗ ಶಾಂತಿಯತ್ತ ಹೆಜ್ಜೆ ಹಾಕಿದೆ. ಶಾಂತಿ ಸಮಾಧಾನದಿಂದಿರಲು ಅವರು ಕರೆ ನೀಡಿದರು. ಸರ್ಕಾರ ಅದಾ ನಿಮ್ಮಜತೆ ಇರಲಿದೆ ಎನ್ನುವ ಅಭಯ ನೀಡಿ ವಿಶ್ವಾಸ ತುಂಬುವ ಕೆಲಸ ಮಾಡಿದರು.
ದೇಶ ಎಲ್ಲಾ ಕ್ಷೇತ್ರ ಗಳಲ್ಲಿ ಪ್ರಗತಿಯತ್ತ ಸಾಗ್ತಿದೆ. ಸಹಕಾರಿ ಸಂಸ್ಥೆಗಳಿಂದ ಬಡವರ ಕಲ್ಯಾಣ ಕಾರ್ಯ ನಡೆತಿದೆ. ಮೀನುಗಾರರ ಕಲ್ಯಾಣ, ನಾವು ಬಡವರ ಕಲ್ಯಾಣದಲ್ಲಿ ತೊಡಗಿಸಿಕೊಂಡಿದ್ದೇವೆ ಎಂದರು.

ಬಡವರ ಅಭಿವೃದ್ಧಿಗೆ ಹಲವು ಯೋಜನೆ

ರೈತರಿಗೆ ಯೂರಿಯಾವನ್ನು ಸುಲಭವಾಗಿ ಕಡಿಮೆ ದರದಲ್ಲಿ ದೊರೆಯುವಂತೆ ಮಾಡಿದೆ. ಮುದ್ರಾ ಯೋಜನೆಯ ಲಾಭವನ್ನು ಕೋಟ್ಯಂತರ ಜನ ಲಾಭ ಪಢದುಕೊಂಡಿದ್ದಾರೆ. ದೇಶದ ತಿಜೋರಿ ಜನತಾ ದರ್ಶನಕ್ಕಾಗಿ ಮೀಸಲಿಡಲಾಗಿದೆ. ಬಡವರ ಅಭಿವೃದ್ಧಿಗೆ ಸುಮಾರು 4 ಲಕ್ಷ ಕೋಟಿ ಖರ್ಚು ಮಾಡಲಾಗುತ್ತಿದೆ. ವ್ಯವಸಾಯಕ್ಕಾಗಿ 8 ಕೋಟಿ ರೈತರು ಯೋಜನೆಯ ಲಾಭವನ್ನು ಪಡೆದಿದ್ದಾರೆ.

1800 ಮಂದಿಗೆ ವಿಶೇಷ ಆಹ್ವಾನ

ವಿಶ್ವಕರ್ಮ ಯೋಜನೆ ನೂತನ ಯೋಜನ ಮೂಲಕ ಓಬಿಸಿ ಸಮಾಜಗಳ ಅಭಿವೃದ್ಧಿಗೆ ಮುಂದಾಗಿರುವದನ್ನು ಮೋದಿಜಿ ಈ ಸಂದರ್ಭದಲ್ಲಿ ತಿಳಿಸಿದರು.ಈ ಸಮಾರಂಭಕ್ಕೆ ದೇಶಾದ್ಯಂತ ವಿವಿಧ ವೃತ್ತಿಗೆ ಸೇರಿದ 1800 ಮಂದಿಯನ್ನು ತಮ್ಮ ಸಂಗಾತಿಗಳೊಂದಿಗೆ ವಿಶೇಷ ಅತಿಥಿಗಳಾಗಿ ಆಹ್ವಾನಿಸಲಾಗಿತ್ತು. 3 ಲಕ್ಷ ಕೋಟಿ ರಾಜ್ಯಗಳ ಅಭಿವೃದ್ಧಿಗೆ ಬಳಸಲಾಗುತ್ತಿದೆ. ಯೂರಿಯಾ ಸಬ್ಸಿಡಿ ಜಾಸ್ತಿ ಮಾಡಿದ್ದೇವೆ. ಆಯುಷ್ಮಾನ್ ಯೋಜನೆ ಕೋಟ್ಯಂತರ ಜನರ ಜೀವ ರಕ್ಷಣೆಗೆ ಮಾಡಿದೆ. ಆರೋಗ್ಯ ಸುಧಾರಿಸಿಕೊಳ್ಳಲು ಅನುಕೂಲ ಕಲ್ಪಿಸಿದೆ.

ಭಾಯಿಯೋ ಔರ್ ಬೆಹೆನೋ ಬಳಸಲಿಲ್ಲ!

ಪ್ರತಿ ಬಾರಿಯೂ ಪ್ರಧಾನಿ ಮೋದಿ ಭಾಷಣ ಆರಂಭಿಸುವಾಗ ಮಿತ್ರೋ, ಭಾಯಿಯೋ ಔರ್ ಬೆಹನೋ ಎಂದೇ ಸಂಬೋಧಿಸುತ್ತಿದ್ದರು. ಆದರೆ ಈ ಬಾರಿ ಆ ಈ ಪದಗಳನ್ನು ಬಳಕೆ ಮಾಡಿಲ್ಲ ಬದಲಾಗಿದೆ ‘ಪರಿವಾರ್‌ಜನ್’ ಎನ್ನುವ ಪದವನ್ನು ಬಳಕೆ ಮಾಡಿದ್ದಾರೆ

ಭಾರತದ ಹಳ್ಳಿಗಳ ಅಭಿವೃದ್ಧಿಗೆ ಪ್ಲಾನ್!

ಭಾರತೀಯ ಆರ್ಥಿಕತೆಯ ಬೆಳವಣಿಗೆ, ಸಾಮಾಜಿಕ ಕಲ್ಯಾಣ, ರಾಷ್ಟ್ರೀಯ ಭದ್ರತೆ ಮತ್ತು ಮಹಿಳಾ ಸಬಲೀಕರಣದಂತಹ ವಿಷಯಗಳ ಬಗ್ಗೆ ಪ್ರಸ್ತಾಪಿಸಿದರು. ಹಣದುಬ್ಬರ ತಗ್ಗಿಸುವ ಪ್ರಯತ್ನ ನನ್ನ ದೇಶದ ಜನರ ಮೇಲಿನ ಹಣದುಬ್ಬರದ ಹೊರೆಯನ್ನು ಕಡಿಮೆ ಮಾಡಲು ನಾನು ಈ ದಿಕ್ಕಿನಲ್ಲಿ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು. ನನ್ನ ಪ್ರಯತ್ನ ಮುಂದುವರಿಯುತ್ತದೆ. ಗ್ರಾಮದಿಂದ ಗ್ರಾಮಕ್ಕೆ ಕಾಂಕ್ರೀಟ್ ರಸ್ತೆಗಳನ್ನು ನಿರ್ಮಿಸಲಾಗುತ್ತಿದೆ, ಗ್ರಾಮದಿಂದ ಗ್ರಾಮಕ್ಕೆ ಕಾಂಕ್ರೀಟ್ ರಸ್ತೆಗಳನ್ನು ನಿರ್ಮಿಸಲಾಗುತ್ತಿದೆ, ಸರ್ಕಾರ ಯಾವ ಯೋಜನೆಗಳಿಗೆ ಅಡಿಗಲ್ಲು ಹಾಕುತ್ತದೋ ಅದು ನಮ್ಮ ಅವಧಿಯಲ್ಲಿಯೇ ಪೂರ್ಣಗೊಳ್ಳುತ್ತದೆ ಎಂದರು.

ಡಿಜಿಟಲ್ ಇಂಡಿಯಾ

ನಾವು ಭಾರತದ ಯುವ ಶಕ್ತಿಯಲ್ಲಿ ನಂಬಿಕೆ ಇಟ್ಟಿದ್ದೇವೆ. ಜಗತ್ತಿನ ಯುವಜನತೆ ಆಶ್ಚರ್ಯ ಪಡುತ್ತಿದ್ದಾರೆ. ಭಾರತ ಮಾಡಿದ ಅದ್ಭುತಗಳು ಕೇವಲ ದೆಹಲಿ, ಮುಂಬೈ ಮತ್ತು ಚೆನ್ನೈಗೆ ಮಾತ್ರ ಸೀಮಿತವಾಗಿಲ್ಲ.ಟೈರ್ || ಮತ್ತು ಟೈರ್ III ನಗರಗಳು ಸಹ ದಾಖಲೆಗಳನ್ನು ಸೃಷ್ಟಿಸುತ್ತಿವೆ. ನಮ್ಮ ಸಣ್ಣ ನಗರಗಳು ಗಾತ್ರ ಮತ್ತು ಜನಸಂಖ್ಯೆಯಲ್ಲಿ ಚಿಕ್ಕದಾಗಿರಬಹುದು. ಆದರೆ ಭರವಸೆ ಮತ್ತು ಆಕಾಂಕ್ಷೆ ಮತ್ತು ಪ್ರಯತ್ನ ಮತ್ತು ಪ್ರಭಾವ ಯಾವುದಕ್ಕೂ ಕಡಿಮೆ ಇಲ್ಲ. ಕೊರೊನಾ ನಂತರ ವಿಶ್ವ ಕ್ರಮವು ಬದಲಾಗುತ್ತಿದೆ ಇಂದು ದೇಶವು ಜಿ-20 ಶೃಂಗಸಭೆಯನ್ನು ಆಯೋಜಿಸುವ ಅವಕಾಶವನ್ನು ಪಡೆದುಕೊಂಡಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಕಳೆದ ಒಂದು ವರ್ಷದಿಂದ, ಜಿ 20ಯಂತಹ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ, ಇದು ದೇಶದ ಸಾಮರ್ಥ್ಯದ ಬಗ್ಗೆ ಜಗತ್ತಿಗೆ ಅರಿವು ಮೂಡಿಸಿದೆ ಎಂದರು.

ಇದನ್ನೂ ಓದಿ : ತೀರ್ಥಹಳ್ಳಿ ರೆಸಾರ್ಟ್ ಅಲ್ಲಿ ಸಿಕ್ತು ವಿದೇಶಿ ಮದ್ಯ, ಪ್ರಾಣಿಗಳ ಕೊಂಬು!

[embedyt] https://www.youtube.com/watch?v=rTGqP21dgrM%5B/embedyt%5D

HOW TO APPLY : NEET-UG COUNSELLING 2023

Categories
ರಾಷ್ಟ್ರೀಯ ವಾರ್ತೆ

ದೆಹಲಿ ಕೆಂಪುಕೋಟೆಯಲ್ಲಿ ಪ್ರಧಾನಿ ಧ್ವಜಾರೋಹಣ

76ನೇ ಸ್ವಾತಂತ್ರ್ಯ ಸಂಭ್ರಮ!
– ದೆಹಲಿ ಕೆಂಪುಕೋಟೆಯಲ್ಲಿ ಪ್ರಧಾನಿ ಧ್ವಜಾರೋಹಣ
– ಬೆಂಗಳೂರಲ್ಲಿ ಸಿದ್ದರಾಮಯ್ಯ ಧ್ವಜ ವಂದನೆ
– ಮನೆ ಮನೆ, ಹಳ್ಳಿ ಹಳ್ಳಿಯಲ್ಲೂ ಸ್ವಾತಂತ್ರ್ಯದ ಹಬ್ಬ
– ಸರ್ಕಾರಿ ಕಚೇರಿ, ಅಂಗಡಿ, ಕಚೇರಿಗಳಲ್ಲಿ ಹಾರಾಡಿದ ಭಾವುಟ

NAMMUR EXPRESS NEWS
ನವದೆಹಲಿ: ಜಗತ್ತಿನ ಅತೀ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ನಮ್ಮ ಭಾರತ. ದೇಶದ ಸ್ವಾತಂತ್ರ್ಯ ದಿನಾಚರಣೆಯನ್ನು ಇಡೀ ಭಾರತದ ಹಳ್ಳಿ ಹಳ್ಳಿಯಲ್ಲೂ ಜನತೆಗೆ ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಬೆಳಿಗ್ಗೆಯೇ ಪ್ರಧಾನಿ ಮೋದಿ ದೆಹಲಿಯ ಕೆಂಪುಕೋಟೆಯಲ್ಲಿ ಧ್ವಜಾರೋಹಣ ಮಾಡಿ ಜನರನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಇನ್ನು ಇಡೀ ದೇಶದ ಮನೆ ಮನೆ, ಸರ್ಕಾರಿ ಕಚೇರಿ, ಶಾಲಾ ಕಾಲೇಜುಗಳು, ಸಂಘ ಸಂಸ್ಥೆಗಳಲ್ಲಿ, ಖಾಸಗಿ ಅಂಗಡಿ, ಕಚೇರಿಗಳಲ್ಲಿ ಸ್ವಾತಂತ್ರ್ಯ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಣೆ ಮಾಡಲಾಗುತ್ತಿದೆ. ಧ್ವಜರೋಹಣ ಜತೆಗೆ ವಿವಿಧ ಕಾರ್ಯಕ್ರಮ ಕೂಡ ಆಯೋಜನೆ ಮಾಡಲಾಗಿದೆ. ದಿನಾಚರಣೆ ಪ್ರಯುಕ್ತ ಸಂಪ್ರದಾಯದಂತೆ ರಾಷ್ಟ್ರಪತಿ ದ್ರೌಪದಿ ಮುರ್ಮು ಸೋಮವಾರ (ಆಗಸ್ಟ್ 14) ದೇಶವನ್ನು ಉದ್ದೇಶಿಸಿ ಮಾತನಾಡಿದ್ದಾರೆ.

ಕರುನಾಡಲ್ಲಿ ಸ್ವಾತಂತ್ರ್ಯ ಸಡಗರ!

ದೇಶದಲ್ಲಿ ಎಲ್ಲೆಡೆ ಭಾರತ ಮಾತೆಯ ಪೂಜೆಯನ್ನು ಜನ ಸಂಭ್ರಮದಿಂದ ಆಚರಣೆ ಮಾಡುತ್ತಿದ್ದಾರೆ. ಇನ್ನು ಬೆಂಗಳೂರಿನ ಮಾಣಿಕ್ ಷಾ ಮೈದಾನದಲ್ಲಿ ಸಿದ್ದರಾಮಯ್ಯ ಧ್ವಜಾರೋಹಣ ನೆರವೇರಿಸಿದರು. ಬಳಿಕ ಜನರನ್ನು ಉದ್ದೇಶಿಸಿ ಮಾತನಾಡಿದರು. ಇಡೀ ಬೆಂಗಳೂರಲ್ಲಿ ಎಲ್ಲೆಡೆ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.

ಜಿಲ್ಲೆ, ತಾಲೂಕುಗಳಲ್ಲಿಯೂ ಆಚರಣೆ!

ರಾಜ್ಯದ ಎಲ್ಲಾ ಜಿಲ್ಲೆ, ತಾಲೂಕು, ಹಳ್ಳಿ ಹಳ್ಳಿಯಲ್ಲೂ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ ಕಂಡು ಬರುತ್ತಿದೆ. ಜಿಲ್ಲಾ ಉಸ್ತುವಾರಿ ಮಂತ್ರಿಗಳು, ಜಿಲ್ಲಾಧಿಕಾರಿಗಳು, ಆಯಾ ಕ್ಷೇತ್ರದ ಶಾಸಕರು, ಸ್ಥಳೀಯ ಜನಪ್ರತಿನಿಧಿಗಳು ಹಾಜರಿದ್ದರು.

ಇದನ್ನೂ ಓದಿ : ತೀರ್ಥಹಳ್ಳಿ ರೆಸಾರ್ಟ್ ಅಲ್ಲಿ ಸಿಕ್ತು ವಿದೇಶಿ ಮದ್ಯ, ಪ್ರಾಣಿಗಳ ಕೊಂಬು!

[embedyt] https://www.youtube.com/watch?v=rTGqP21dgrM%5B/embedyt%5D

HOW TO APPLY : NEET-UG COUNSELLING 2023

Categories
ರಾಷ್ಟ್ರೀಯ ವಾರ್ತೆ

ಸ್ವಾತಂತ್ರ್ಯ ಸಂಭ್ರಮಕ್ಕೆ ದೇಶ ಸಜ್ಜು!

ಸ್ವಾತಂತ್ರ್ಯ ಸಂಭ್ರಮಕ್ಕೆ ದೇಶ ಸಜ್ಜು!
– ಇಂದು ಸಂಜೆ ರಾಷ್ಟ್ರಪತಿ ಭಾಷಣ
– ದೆಹಲಿ ಕೆಂಪುಕೋಟೆಯಲ್ಲಿ ಪ್ರಧಾನಿ ಮೋದಿ ಭಾಷಣ

NAMMUR EXPRESS NEWS
ನವದೆಹಲಿ: ಜಗತ್ತಿನ ಅತೀ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಭಾರತ ಸ್ವಾತಂತ್ರೋತ್ಸವದ ಸಂಭ್ರಮದಲ್ಲಿದೆ. ಆಗಸ್ಟ್ 15 ರಂದು ಸ್ವಾತಂತ್ರ್ಯ ದಿನಾಚರಣೆ ಮಾಡಲು ಇಡೀ ದೇಶ ಸರ್ವ ಸನ್ನದ್ಧವಾಗಿದೆ. ಇಡೀ ದೇಶದಲ್ಲಿ ಎಲ್ಲೆಡೆ ಭಾರತ ಮಾತೆಯ ಪೂಜೆಗೆ ಜನ ಸಜ್ಜುಗೊಂಡಿದ್ದಾರೆ. ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಸಂಪ್ರದಾಯದಂತೆ ರಾಷ್ಟ್ರಪತಿ ದ್ರೌಪದಿ ಮುರ್ಮು ಸೋಮವಾರ (ಆಗಸ್ಟ್ 14) ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಸೋಮವಾರ ಸಂಜೆ 7 ಗಂಟೆಗೆ ರಾಷ್ಟ್ರಪತಿಗಳ ಸ್ವಾತಂತ್ರೋತ್ಸವ ಸಂದೇಶ ಭಾಷಣ ನಡೆಯಲಿದೆ. ಆಲ್ ಇಂಡಿಯಾ ರೇಡಿಯೋ ಮತ್ತು ದೂರದರ್ಶನದ ಎಲ್ಲಾ ಚಾನೆಲ್ ಗಳಲ್ಲಿ ರಾಷ್ಟ್ರಪತಿಯವರ ಭಾಷಣ ನೇರ ಪ್ರಸಾರವಾಗಲಿದೆ. ರಾಷ್ಟ್ರಪತಿ ಹಿಂದಿಯಲ್ಲಿ ಮಾತನಾಡಲಿದ್ದು, ನೇರ ಪ್ರಸಾರದ ಬಳಿಕ ಭಾಷಣ ಇಂಗ್ಲಿಷ್ ಭಾಷೆಯಲ್ಲಿ ಮರು ಪ್ರಸಾರವಾಗಲಿದೆ. ರಾಷ್ಟ್ರಪತಿಗಳ ಭಾಷಣ ಹಿಂದಿ, ಇಂಗ್ಲಿಷ್ ನಲ್ಲಿ ಪ್ರಸಾರವಾದ ಬಳಿಕ ಪ್ರಾದೇಶಿಕ ದೂರ ದರ್ಶನ ವಾಹಿನಿಗಳು ಮತ್ತು ಆಕಾಶವಾಣಿಯಲ್ಲಿ ರಾತ್ರಿ 9:30ಕ್ಕೆ ಪ್ರಾದೇಶಿಕ ಭಾಷೆಗಳಲ್ಲಿ ಪ್ರಸಾರಗೊಳ್ಳಲಿದೆ.

ಆಗಸ್ಟ್ 15 ಕ್ಕೆ ಪ್ರಧಾನಿಯಿಂದ ಭಾಷಣ!

ಆಗಸ್ಟ್ 15ಕ್ಕೆ ಪ್ರಧಾನಿ ನರೇಂದ್ರ ಮೋದಿ ದೆಹಲಿಯ ಕೆಂಪುಕೋಟೆಯಲ್ಲಿ ಭಾಷಣ ಮಾಡಲಿದ್ದಾರೆ. ಬೆಳಿಗ್ಗೆ 7 ಗಂಟೆಗೆ ಕೆಂಪುಕೋಟೆ ಮೇಲೆ ಧ್ವಜಾರೋಹಣ ಮಾಡಲಿರುವ ಪ್ರಧಾನಿ, ಬಳಿಕ ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ದೇಶದ ವಿವಿಧ ಭಾಗಗಳಿಂದ 1,800 ಜನರು ಈ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ರಕ್ಷಣಾ ಸಚಿವಾಲಯ ಭಾನುವಾರ ಪ್ರಕಟಣೆಯಲ್ಲಿ ತಿಳಿಸಿದೆ.

ಇದನ್ನೂ ಓದಿ : ತೀರ್ಥಹಳ್ಳಿ ರೆಸಾರ್ಟ್ ಅಲ್ಲಿ ಸಿಕ್ತು ವಿದೇಶಿ ಮದ್ಯ, ಪ್ರಾಣಿಗಳ ಕೊಂಬು!

[embedyt] https://www.youtube.com/watch?v=rTGqP21dgrM%5B/embedyt%5D

HOW TO APPLY : NEET-UG COUNSELLING 2023

Categories
ರಾಷ್ಟ್ರೀಯ ವಾರ್ತೆ

ನಕಲಿ ಔಷಧ ಅಕ್ರಮ ಮಾರಾಟಕ್ಕೆ ಬ್ರೇಕ್?

ನಕಲಿ ಔಷಧ ಅಕ್ರಮ ಮಾರಾಟಕ್ಕೆ ಬ್ರೇಕ್?
– ಕೇಂದ್ರ ಸರ್ಕಾರದಿಂದ ಮಹತ್ವದ ಕ್ರಮ
– ಶೀಘ್ರದಲ್ಲಿ ರಾಷ್ಟ್ರೀಯ ಔಷಧ ಪೋರ್ಟಲ್
– ಮೆಡಿಕಲ್ ಅಕ್ರಮ ಕಡಿವಾಣಕ್ಕೂ ಪ್ಲಾನ್?!

NAMMUR EXPRESS NEWS
ನವದೆಹಲಿ: ಇ-ಫಾರ್ಮಸಿಗಳು ಮತ್ತು ಇ-ಕಾಮರ್ಸ್ ಪ್ಲಾಟ್ ಫಾರ್ಮ್ ಗಳು ಪ್ರಿಸ್ಕ್ರಿಪ್ಶ್ ನ್ ಔಷಧಿಗಳ ಅಕ್ರಮ ಮಾರಾಟವನ್ನು ಪರಿಶೀಲಿಸುವ ಪ್ರಯತ್ನದಲ್ಲಿ ಮತ್ತು ಡೇಟಾ ದುರುಪಯೋಗದಂತಹ ಸಂಭಾವ್ಯ ಅಪಾಯಗಳನ್ನು ಪರಿಹರಿಸಲು, ಆನ್ ಲೈನ್ ಔಷಧಿಗಳ ಮಾರಾಟಕ್ಕಾಗಿ ರಾಷ್ಟ್ರೀಯ ಪೋರ್ಟಲ್ ಅನ್ನು ಪ್ರಾರಂಭಿಸಲು ಕೇಂದ್ರ ಯೋಜಿಸಿದೆ ಎನ್ನಲಾಗಿದೆ. ಇದರೊಂದಿಗೆ, ನಕಲಿ ಔಷಧಿಗಳ ಮಾರಾಟ, ವ್ಯಸನಕಾರಿ ಮಾದಕವಸ್ತುಗಳು ಮತ್ತು ಸಂಭಾವ್ಯ ರಾಷ್ಟ್ರೀಯ ಭದ್ರತಾ ಕಾಳಜಿಗಳಂತಹ ಅಪಾಯಗಳನ್ನು ತಗ್ಗಿಸುವ ಗುರಿಯನ್ನು ಸರ್ಕಾರ ಹೊಂದಿದೆ. ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು ಆನ್ ಲೈನ್ ಅಲ್ಲಿ ಔಷಧಿಗಳನ್ನು ಮಾರಾಟ ಮಾಡುವ ಅಸ್ತಿತ್ವದಲ್ಲಿರುವ ಮಾದರಿಯ ಬಗ್ಗೆ ಕಳವಳ ವ್ಯಕ್ತಪಡಿಸಿದರು, ಸುಧಾರಿತ ವಿಧಾನಗಳ ಅಗತ್ಯವನ್ನು ಎತ್ತಿ ತೋರಿಸಿದರು. ಟಾಟಾ 1ಎಂಜಿ, ನೆಟ್ ಮೆಡ್ಸ್, ಅಮೆಜಾನ್, ಪ್ಲಿಪ್ ಕಾರ್ಟ್, ಪ್ರಾಕ್ಟೊ, ಅಪೊಲೊ ಮತ್ತು ಫಾರ್ಮ್ ಈಸಿ ಸೇರಿದಂತೆ ಪ್ರಮುಖ ಕಂಪನಿಗಳು ಈ ಸಭೆಯಲ್ಲಿ ಭಾಗವಹಿಸಿದ್ದವು.

ಮೆಡಿಕಲ್ ಅಕ್ರಮ ಕಡಿವಾಣಕ್ಕೂ ಪ್ಲಾನ್?!

ದೇಶದ ಮೆಡಿಕಲ್ ಉದ್ಯಮ ಬೆಳೆಯುತ್ತಿದ್ದಂತೆ ಅನೇಕ ಮೆಡಿಸಿನ್ ನಕಲಿ ಅಥವಾ ಗುಣ ಮಟ್ಟದಲ್ಲಿ ಇಲ್ಲ ಎಂಬ ಆರೋಪ ಇದೆ. ಈ ಹಿನ್ನೆಲೆ ಮೆಡಿಕಲ್ ಅಕ್ರಮ ಕಡಿವಾಣಕ್ಕೂ ಸರ್ಕಾರ ಮುಂದಾಗಿದೆ ಎನ್ನಲಾಗಿದೆ.

ಇದನ್ನೂ ಓದಿ : ಭೂತಾನ್ ಅಡಿಕೆ ಬಂದ್ರೂ ತೊಂದರೆ ಇಲ್ಲ- ಆರಗ ಜ್ಞಾನೇಂದ್ರ

[embedyt] https://www.youtube.com/watch?v=rTGqP21dgrM%5B/embedyt%5D

HOW TO APPLY : NEET-UG COUNSELLING 2023