Categories
ರಾಷ್ಟ್ರೀಯ ವಾರ್ತೆ

ವೈದ್ಯರು, ಪತ್ರಕರ್ತರ ದಿನ: ನಿಮಗಿದೋ ನಮಸ್ತೆ

ವೈದ್ಯರು, ಪತ್ರಕರ್ತರ ದಿನ: ನಿಮಗಿದೋ ನಮಸ್ತೆ

– ದೇಶದ, ಸಮಾಜದ ಅಭಿವೃದ್ಧಿಗೆ ಈ ಇಬ್ಬರ ಕೊಡುಗೆ ಅಪಾರ
– ನಿಮ್ಮ ಸೇವೆಗೆ ನಮ್ಮ ನಮನಗಳು

NAMMUR EXPRESS NEWS
ರಾಷ್ಟ್ರೀಯ ವೈದ್ಯರ ಹಾಗೂ ಪತ್ರಿಕಾ ದಿನ. ಸಮಾಜದ ವಿವಿಧ ವೃತ್ತಿಗಳು ಮತ್ತು ಅದರಲ್ಲಿ ತೊಡಗಿಸಿಕೊಂಡಿರುವವರಿಗೆ ಒಂದು ಗೌರವ ಮತ್ತು ಕೃತಜ್ಞತೆ ಅರ್ಪಿಸುವ ದೃಷ್ಟಿಯಿಂದ ಈ ವಿಭಾಗದಲ್ಲಿ ನಡೆದ ಮಹತ್ವದ ಘಟನೆಯ ದಿನವನ್ನು ನೆಪವಾಗಿ ಇಟ್ಟುಕೊಂಡು ಆಚರಿಸಲಾಗುತ್ತದೆ. ಈಗ ಕಣ್ಣಿಗೆ ಕಾಣುವ ದೇವರು ವೈದ್ಯರು, ಸಮಾಜ ಕಾಯುವ ಪತ್ರಕರ್ತರ ದಿನ. ಈ ದಿನದಂದು ಈ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಗೌರವಿಸೋಣ.

ಪತ್ರಕರ್ತರು ಸಮಾಜದ ಸ್ವಾಸ್ಥ್ಯ ಕಾಪಾಡುವ ಗುರುತರ ಜವಾಬ್ದಾರಿಯನ್ನು ಹೊತ್ತಿರುವ ವರ್ಗ. ಜನರಿಗೆ ಶಿಕ್ಷಣ ನೀಡಿ ಸಮಕಾಲೀನ ವಿದ್ಯಮಾನಗಳ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಮಾಧ್ಯಮಗಳ ಪಾತ್ರ ನಿರ್ಣಾಯಕವಾದುದು. ರಾಷ್ಟ್ರೀಯ ಪತ್ರಿಕಾ ದಿನವು ಭಾರತದಲ್ಲಿ ಮುಕ್ತ ಮತ್ತು ಸ್ವತಂತ್ರ ಪತ್ರಿಕಾ ಧರ್ಮವನ್ನು ಹೇಳುತ್ತದೆ.

ಎಲ್ಲಾ ವೈದ್ಯರು, ಪತ್ರಕರ್ತರಿಗೆ ಶುಭಾಶಯಗಳು

ನಿಮ್ಮ ಸೇವೆಗೆ ನಮ್ಮ ನಮನಗಳು

Categories
ರಾಷ್ಟ್ರೀಯ ವಾರ್ತೆ

ಜಿಯೋ ಗ್ರಾಹಕರಿಗೆ ಬೆಲೆ ಏರಿಕೆ ಶಾಕ್!

ಜಿಯೋ ಗ್ರಾಹಕರಿಗೆ ಬೆಲೆ ಏರಿಕೆ ಶಾಕ್!

– ಶೇ. 20ರಷ್ಟು ದರ ಏರಿಕೆ: ಯಾವುದಕ್ಕೆ ಎಷ್ಟು..?
– ಜಿಯೋ ಸಿಮ್ ದರ ಏರಿಕೆ.. ಜನರಿಗೆ ಸಿಮ್ ಸಂಕಟ!

NAMMUR EXPRESS NEWS
ನವ ದೆಹಲಿ: ರಿಲಯನ್ಸ್‌ ಜಿಯೋ ಗುರುವಾರ ತನ್ನ ಪ್ರಿಪೇಯ್ಡ್ ಯೋಜನೆಗಳಲ್ಲಿ 20% ಸುಂಕ ಹೆಚ್ಚಳವನ್ನು ಘೋಷಿಸಿದೆ. ಎರಡೂವರೆ ವರ್ಷಗಳಲ್ಲಿ ಮೊದಲ ಬಾರಿಗೆ ಬೆಲೆ ಹೆಚ್ಚಳವಾಗಿದೆ. ಈ ಮೂಲಕ ಜಿಯೋ ಸಿಮ್ ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ ತಟ್ಟಲಿದೆ.

ಇತ್ತೀಚೆಗೆ ಮುಕ್ತಾಯಗೊಂಡ ಹರಾಜಿನಲ್ಲಿ ಜಿಯೋ 1800 ಮೆಗಾಹರ್ಟ್ಸ್ ಬ್ಯಾಂಡ್ನಲ್ಲಿ 14.4 ಮೆಗಾಹರ್ಟ್ಸ್ ಸ್ಪೆಕ್ಟಮ್ ಅನ್ನು 973 ಕೋಟಿ ರೂ.ಗೆ ಸ್ವಾಧೀನಪಡಿಸಿಕೊಂಡ ಒಂದು ದಿನದ ನಂತರ ಈ ಪ್ರಕಟಣೆ ಬಂದಿದೆ. ಜಿಯೋ ಪ್ರೀಪೆಯ್ಡ್ ಗ್ರಾಹಕರಿಗೆ ಬಿಗ್ ಶಾಕ್ ಎನ್ನುವಂತೆ ಟ್ಯಾರಿಫ್‌ ದರ ಶೇ.20ರಷ್ಟು ಹೆಚ್ಚಳವಾಗಲಿದೆ.

ಪೋಸ್ಟ್ ಪೇಯ್ಡ್ ಯೋಜನೆಗಳು ಸಹ ಹೆಚ್ಚು ದುಬಾರಿಯಾಗಿವೆ. 30 ಜಿಬಿ ಡೇಟಾವನ್ನು ಒದಗಿಸುತ್ತಿದ್ದ 299 ರೂ.ಗಳ ಯೋಜನೆಯ ಬೆಲೆ ಈಗ ಬಿಲ್ಲಿಂಗ್ ಚಕ್ರಕ್ಕೆ 349 ರೂ. 75 ಜಿಬಿ ಡೇಟಾದೊಂದಿಗೆ 399 ರೂ.ಗಳ ಯೋಜನೆಯ ಬೆಲೆ ಈಗ 449 ರೂ.

ಜಿಯೋ ಎರಡು ಹೊಸ ಅಪ್ಲಿಕೇಶನ್ಗಳನ್ನು ಸಹ ಪ್ರಾರಂಭಿಸುತ್ತಿದೆ:

ಜಿಯೋಸೇಫ್‌: ಕರೆ, ಮೆಸೇಜಿಂಗ್ ಮತ್ತು ಫೈಲ್ ವರ್ಗಾವಣೆಗಾಗಿ ಕ್ವಾಂಟಮ್-ಸೆಕ್ಯೂರ್ ಸಂವಹನ ಅಪ್ಲಿಕೇಶನ್, ಇದರ ಬೆಲೆ ತಿಂಗಳಿಗೆ 199 . ಜಿಯೋ ಟ್ರಾನ್ಸೆಟ್: ಧ್ವನಿ ಕರೆಗಳು, ಸಂದೇಶಗಳು, ಪಠ್ಯ ಮತ್ತು ಚಿತ್ರಗಳನ್ನು ಭಾಷಾಂತರಿಸಲು ಎಐ ಚಾಲಿತ ಬಹುಭಾಷಾ ಸಂವಹನ ಅಪ್ಲಿಕೇಶನ್, ಇದರ ಬೆಲೆ ತಿಂಗಳಿಗೆ 99 ರೂ.

ಜಿಯೋ ಬಳಕೆದಾರರು ಈ ಅಪ್ಲಿಕೇಶನ್ಗಳನ್ನು ಒಂದು ವರ್ಷದವರೆಗೆ ಉಚಿತವಾಗಿ ಪಡೆಯಬಹುದು.
ಪ್ರಸ್ತುತ ಬೆಲೆ (ರೂ.) 15 ರೂ.ಗೆ ನೀಡಲಾಗುತ್ತಿದ್ದಂತ 1 ಜಿಪಿ ಡೇಟಾ ದರವನ್ನು ರೂ.19ಕ್ಕೆ ಏರಿಕೆಯ ಮಾಡಲಾಗುತ್ತಿದೆ. 25 ರೂ.ಗೆ ನೀಡಲಾಗುತ್ತಿದ್ದಂತ 2 ಜಿಪಿ ಡೇಟಾ ದರವನ್ನೂ ರೂ.29ಕ್ಕೆ ಏರಿಕೆ ಮಾಡಲಾಗುತ್ತಿದೆ. ಇನ್ನೂ ರೂ. 61ಕ್ಕೆ ನೀಡಲಾಗುತ್ತಿದ್ದಂತ 6 ಜಿಬಿ ಡೇಟಾ ದರವನ್ನು ರೂ.69ಕ್ಕೆ ಹೆಚ್ಚಳ ಮಾಡಲಾಗುತ್ತಿದೆ.

ಹೊಸ ಹೆಚ್ಚಳದ ಪ್ಲಾನ್ ದರಗಳ ಪಟ್ಟಿ

ರೂ.155ಗಳಿಗೆ ನೀಡಲಾಗುತ್ತಿದ್ದಂತ 28 ದಿನಗಳ ವ್ಯಾಲಿಡಿಟಿ ಹಾಗೂ 2 ಜಿಬಿ ಪ್ಲಾನ್ ಅನ್ನು ರೂ. 189ಕ್ಕೆ ಹೆಚ್ಚಳ ಮಾಡಲಾಗುತ್ತಿದೆ. ರೂ.209ರಿಂದ 249ಕ್ಕೆ 28 ದಿನಗಳ ಪ್ಲಾನ್ ದರ ಏರಿಕೆ ಮಾಡಿದ್ರೆ, ರೂ.239ರಿಂದ 299ಕ್ಕೆ ಏರಿಕೆ ಮಾಡಲಾಗುತ್ತಿದೆ. ರೂ.395ರ ಪ್ಲಾನ್ ಅನ್ನು ರೂ.449ಕ್ಕೆ ಏರಿಕೆ ಮಾಡಿ, 3 ಜಿಬಿ ಪ್ರತಿ ದಿನ ಡೇಟಾ, 28 ದಿನಗಳ ವ್ಯಾಲಿಡಿಟಿ ನೀಡಲಾಗುತ್ತಿದೆ. ರೂ.533ರ ದರವನ್ನು 629ಕ್ಕೆ ಹೆಚ್ಚಳ ಮಾಡಿ, 56 ದಿನಗಳ ವ್ಯಾಲಿಡಿಟಿ ನೀಡಲಾಗಿದೆ. 666ರೂ ದರವನ್ನು 799ಕ್ಕೆ ಹೆಚ್ಚಿಸಿ, ಪ್ರತಿ ದಿನ 1.5 ಜಿಪಿ ಡೇಟಾದಂತೆ 84 ದಿನಗಳ ವ್ಯಾಲಿಟಿಡಿ ನೀಡಲಾಗಿದೆ.

Categories
ರಾಷ್ಟ್ರೀಯ ವಾರ್ತೆ

ದೇಶದ ಹಿರಿಯ ನಾಗರಿಕರಿಗೆ ಭರ್ಜರಿ ಗುಡ್‌ ನ್ಯೂಸ್‌..!

ದೇಶದ ಹಿರಿಯ ನಾಗರಿಕರಿಗೆ ಭರ್ಜರಿ ಗುಡ್‌ ನ್ಯೂಸ್‌..!

– ಆಯುಷ್ಮಾನ್‌ ಯೋಜನೆ ಯಲ್ಲಿ ಸಿಗಲಿದೆ 5 ಲಕ್ಷ ರೂ.ವರೆಗೆ ಉಚಿತ ಚಿಕಿತ್ಸೆ

NAMMUR EXPRESS NEWS
ನವದೆಹಲಿ : 18 ನೇ ಲೋಕಸಭೆಯನ್ನುದ್ದೇಶಿಸಿ ಮಾತನಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ದೇಶದ ಹಿರಿಯರಿಗೆ ಸಿಹಿಸುದ್ದಿ ನೀಡಿದ್ದು, 70 ವರ್ಷ ದಾಟಿದ ಎಲ್ಲಾ ವೃದ್ಧರಿಗೆ ಆಯುಷ್ಮಾನ್ ಯೋಜನೆಯಡಿ ಚಿಕಿತ್ಸೆ ನೀಡಲಾಗುವುದು ಎಂದು ಅವರು ಘೋಷಿಸಿದ್ದಾರೆ. ಲೋಕಸಭಾ ಚುನಾವಣೆಯ ಸಮಯದಲ್ಲಿ ಬಿಡುಗಡೆ ಮಾಡಿದ ಪ್ರಣಾಳಿಕೆಯಲ್ಲಿ ಭಾರತೀಯ ಜನತಾ ಪಕ್ಷವು ಈ ಭರವಸೆ ನೀಡಿತ್ತು. ಜೂನ್ 24ರಿಂದ ಲೋಕಸಭಾ ಅಧಿವೇಶನ ಆರಂಭವಾಗಲಿದೆ. ಹೊಸ ಸರ್ಕಾರದಲ್ಲಿ, ನಾವು 70 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲಾ ಜನರಿಗೆ ಆಯುಷ್ಮಾನ್ ಪ್ರಯೋಜನವನ್ನು ನೀಡುತ್ತಿದ್ದೇವೆ ಎಂದು ರಾಷ್ಟ್ರಪತಿ ಮುರ್ಮು ಗುರುವಾರ ಸಂಸತ್ ಭವನದಲ್ಲಿ ಹೇಳಿದರು. ಅಷ್ಟೇ ಅಲ್ಲ, ಸರ್ಕಾರವು ರೈತರ ಬಗ್ಗೆ ನಿರಂತರವಾಗಿ ಕೆಲಸ ಮಾಡಿದೆ. 20,000 ಕೋಟಿ ರೂ.ಗಳನ್ನು ರೈತರಿಗೆ ವರ್ಗಾಯಿಸಲಾಗಿದೆ. ಇದರೊಂದಿಗೆ, ನಾವು ರೈತರನ್ನು ಹೆಚ್ಚು ಸ್ವಾವಲಂಬಿಗಳನ್ನಾಗಿ ಮಾಡಿದ್ದೇವೆ.

ಪ್ರಣಾಳಿಕೆಯನ್ನು ಬಿಡುಗಡೆ ಮಾಡುವಾಗ ಪ್ರಧಾನಿ ನರೇಂದ್ರ ಮೋದಿ ಅವರು 70 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಹಿರಿಯರನ್ನು ಉಲ್ಲೇಖಿಸಿದ್ದರು. ನಾವು ಆಯುಷ್ಮಾನ್ ಭಾರತ್ ಯೋಜನೆಯನ್ನು ವೃದ್ಧರನ್ನು ಒಳಗೊಳ್ಳಲು ಮತ್ತು ಅವರಿಗೆ ಉಚಿತ ಮತ್ತು ಉತ್ತಮ ಗುಣಮಟ್ಟದ ಆರೋಗ್ಯ ಸೇವೆಗಳನ್ನು ಒದಗಿಸಲು ವಿಸ್ತರಿಸುತ್ತೇವೆ. ಈ ಯೋಜನೆಯನ್ನು ಅಂದಿನ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು 2019 ರ ಹಣಕಾಸು ವರ್ಷದ ಬಜೆಟ್ನಲ್ಲಿ ಪ್ರಾರಂಭಿಸಿದರು. ಇದನ್ನು ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ ಎಂದೂ ಕರೆಯಲಾಗುತ್ತದೆ, ಇದರ ಅಡಿಯಲ್ಲಿ ಪ್ರಸ್ತುತ 5 ಲಕ್ಷ ರೂ.ಗಳ ರಕ್ಷಣೆ ಲಭ್ಯವಿದೆ.

ಈ ಸಂದರ್ಭದಲ್ಲಿ ರಾಷ್ಟ್ರಪತಿ ಮುರ್ಮು ಅವರು ಮೈ ಭಾರತ್ ಬಗ್ಗೆಯೂ ಪ್ರಸ್ತಾಪಿಸಿದರು. ರಾಷ್ಟ್ರ ನಿರ್ಮಾಣದಲ್ಲಿ ಯುವಕರ ಪಾಲ್ಗೊಳ್ಳುವಿಕೆಯನ್ನು ಮತ್ತಷ್ಟು ಹೆಚ್ಚಿಸಲು ಸರ್ಕಾರ ‘ಮೇರಾ ಯುವ ಭಾರತ್- ಮೈ ಭಾರತ್’ ಅಭಿಯಾನವನ್ನು ಪ್ರಾರಂಭಿಸಿದೆ ಎಂದು ಅವರು ಹೇಳಿದರು. ಈವರೆಗೆ 1.5 ಕೋಟಿಗೂ ಹೆಚ್ಚು ಯುವಕರು ಇದರಲ್ಲಿ ನೋಂದಾಯಿಸಿಕೊಂಡಿದ್ದಾರೆ ಎಂದು ಅವರು ಮಾಹಿತಿ ನೀಡಿದರು. ಡಿಜಿಟಲ್ ವಿಶ್ವವಿದ್ಯಾಲಯವನ್ನು ರಚಿಸುವ ನಿಟ್ಟಿನಲ್ಲಿ ಸರ್ಕಾರವೂ ಕೆಲಸ ಮಾಡುತ್ತಿದೆ ಎಂದು ಅವರು ಹೇಳಿದರು.

Categories
ರಾಷ್ಟ್ರೀಯ ವಾರ್ತೆ

ಮಾಜಿ ಉಪ ಪ್ರಧಾನಿ ಆಡ್ವಾಣಿ ಅಸ್ವಸ್ಥ

ಮಾಜಿ ಉಪ ಪ್ರಧಾನಿ ಆಡ್ವಾಣಿ ಅಸ್ವಸ್ಥ

– ನವದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ದಾಖಲು
– ವಯಸ್ಸಿಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆ

NAMMUR EXPRESS NEWS
ಹೊಸದಿಲ್ಲಿ: ಮಾಜಿ ಉಪ ಪ್ರಧಾನಿ , ಬಿಜೆಪಿಯ ಹಿರಿಯ ನಾಯಕ ಎಲ್‌.ಕೆ ಆಡ್ವಾಣಿ ಅವರು ಅಸ್ವಸ್ಥಗೊಂಡಿದ್ದು, ಅವರನ್ನು ನವದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ AIIMS ಗೆ ದಾಖಲಿಸಲಾಗಿದೆ. ಇದನ್ನು ಆಸ್ಪತ್ರೆಯ ಹೇಳಿಕೆ ದೃಢಪಡಿಸಿದೆ. “ಎಲ್‌.ಕೆ ಅಡ್ವಾಣಿ ಅವರು ನವದೆಹಲಿಯ ಏಮ್ಸ್‌ಗೆ ದಾಖಲಾಗಿದ್ದಾರೆ. ಅವರು ಸ್ಥಿರವಾಗಿದ್ದಾರೆ ಮತ್ತು ವೀಕ್ಷಣೆಯಲ್ಲಿದ್ದಾರೆ” ಎಂದು ಏಮ್ಸ್ ಹೇಳಿಕೆ ನೀಡಿದೆ. ಹಿರಿಯ ನಾಯಕನ ದೈಹಿಕ ಸ್ಥಿತಿಗತಿಯ ಬಗ್ಗೆ ಆಸ್ಪತ್ರೆಯು ಹೆಚ್ಚಿನ ವಿವರಗಳನ್ನು ನೀಡಿಲ್ಲ. ಆಡ್ವಾಣಿ ಅವರಿಗೆ ಈಗ 96 ವರ್ಷ. ಬುಧವಾರ ತಡರಾತ್ರಿ ಆಸ್ಪತ್ರೆಗೆ ದಾಖಲಿಸುವಾಗ ಅವರು ಪ್ರಜ್ಞಾವಸ್ಥೆಯಲ್ಲಿದ್ದರು ಹಾಗೂ ಮಾತನಾಡುತ್ತಿದ್ದರು. ಆಸ್ಪತ್ರೆಯಲ್ಲಿ ಹಿರಿಯ ನಾಗರಿಕರ ವಿಭಾಗದ ತಜ್ಞರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಯಸ್ಸಿಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳಿಂದ ಅವರು ಬಳಲುತ್ತಿದ್ದಾರೆ.

ಈ ತಿಂಗಳ ಆರಂಭದಲ್ಲಿ, ಸರ್ಕಾರ ರಚನೆಗೆ ಹಕ್ಕು ಸಾಧಿಸಿದ ನಂತರ, ಪ್ರಧಾನಿ ನರೇಂದ್ರ ಮೋದಿ ಅವರು ಆಡ್ವಾಣಿಯವರನ್ನು ಭೇಟಿ ಮಾಡಿದ್ದರು. ಗಾಂಧಿನಗರದ ಮಾಜಿ ಸಂಸದನಾದ ಆಡ್ವಾಣಿ, ಮೋದಿಯವರ ರಾಜಕೀಯ ಮಾರ್ಗದರ್ಶಕರಾಗಿದ್ದಾರೆ. ಆಡ್ವಾಣಿ ಅವರಿಗೆ ಈ ವರ್ಷದ ಮಾರ್ಚ್‌ನಲ್ಲಿ ಭಾರತ ರತ್ನ ಪ್ರಶಸ್ತಿಯನ್ನು ನೀಡಲಾಗಿತ್ತು. ಅವರ ನಿವಾಸದಲ್ಲಿಯೇ ಈ ಅತ್ಯುನ್ನತ ನಾಗರಿಕ ಗೌರವವನ್ನು ಸಲ್ಲಿಸಲಾಗಿತ್ತು. ರಾಷ್ಟ್ರಪತಿ ದ್ರೌಪದಿ ಮುರ್ಮು ಇದನ್ನು ಕೊಡಮಾಡಿದ್ದರು. ಔಪಚಾರಿಕ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಉಪರಾಷ್ಟ್ರಪತಿ ಜಗದೀಪ್ ಧಂಖರ್, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಗೃಹ ಸಚಿವ ಅಮಿತ್ ಶಾ ಮತ್ತು ಎಲ್ ಕೆ ಅಡ್ವಾಣಿ ಅವರ ಕುಟುಂಬ ಸದಸ್ಯರು ಉಪಸ್ಥಿತರಿದ್ದರು.
ಎಲ್‌ಕೆ ಆಡ್ವಾಣಿ ಅವರು ಜೂನ್ 2002ರಿಂದ ಮೇ 2004 ರವರೆಗೆ ಭಾರತದ ಉಪ ಪ್ರಧಾನ ಮಂತ್ರಿಯಾಗಿ, ಅಕ್ಟೋಬರ್ 1999 ರಿಂದ ಮೇ 2004 ರವರೆಗೆ ಕೇಂದ್ರ ಗೃಹ ಸಚಿವರಾಗಿ ಸೇವೆ ಸಲ್ಲಿಸಿದರು. ಅವರು 1986 ರಿಂದ 1990, 1993 ರಿಂದ 1998 ಮತ್ತು 2004 ರಿಂದ 2005 ರವರೆಗೆ ಬಿಜೆಪಿ ಅಧ್ಯಕ್ಷರಾಗಿದ್ದರು.

Categories
ರಾಷ್ಟ್ರೀಯ ವಾರ್ತೆ

ಅಮಿತ್ ಶಾ ಭೇಟಿಯಾದ ಬಿ.ವೈ. ವಿಜಯೇಂದ್ರ!

ಅಮಿತ್ ಶಾ ಭೇಟಿಯಾದ ಬಿ.ವೈ. ವಿಜಯೇಂದ್ರ!

– ಬಿಜೆಪಿ ಸಂಘಟನೆ, ವಿವಿಧ ತಂತ್ರಗಾರಿಕೆ ಬಗ್ಗೆ ಚರ್ಚೆ
– ರಾಜ್ಯ ರಾಜಕೀಯದಲ್ಲಿ ನಡೆಯುತ್ತಾ ಮ್ಯಾಜಿಕ್?

NAMMUR EXPRESS NEWS
ನವ ದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಕೇಂದ್ರ ಗೃಹಸಚಿವ ಅಮಿತ್‌ ಶಾ ಅವರನ್ನು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಮಾತುಕತೆ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿಲ್ಲ. ಅದರೆ ರಾಜ್ಯದಲ್ಲಿ ಮುಂದಿನ ರಾಜಕೀಯ ಕುರಿತಾಗಿ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಹೊಸದಿಲ್ಲಿಯಲ್ಲಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಭೇಟಿಯಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಸಂಪುಟಕ್ಕೆ ಮತ್ತೆ ಸೇರಿದ ಅಮಿತ್ ಶಾ ಅಭಿನಂದಿಸಿದ ರಾಜ್ಯಾಧ್ಯಕ್ಷ ಲೋಕಸಭಾ ಚುನಾವಣೆಯ ಫಲಿತಾಂಶದ ಬಗ್ಗೆ ಚರ್ಚೆ ಮಾಡಿದರು. ಈ ವೇಳೆ ಕರ್ನಾಟಕದ ಫಲಿತಾಂಶ ಕುರಿತು ಸಮಾಲೋಚನೆ ನಡೆದಿದೆ ಎನ್ನಲಾಗಿದೆ. ರಾಜ್ಯದ ರಾಜಕೀಯ ಸ್ಥಿತಿ ಮತ್ತು ಕಾಂಗ್ರೆಸ್ ಸರ್ಕಾರ ಎದುರಿಸಲು ಮಾಡಬೇಕಾದ ತಂತ್ರಗಾರಿಕೆ ಬಗ್ಗೆ ಚರ್ಚೆ ನಡೆದಿದೆ ಎನ್ನಲಾಗಿದೆ. ಮಾತುಕತೆಯ ಪೂರ್ಣ ವಿವರ ಲಭ್ಯವಾಗಿಲ್ಲವಾದರೂ ವಿಜಯೇಂದ್ರರವರಿಗೆ ಅಮಿತ್‌ ಶಾ ಅಭಿನಂದನೆ ಸಲ್ಲಿಸಿದ್ದಾರೆ ಎನ್ನಲಾಗಿದೆ.

Categories
ರಾಷ್ಟ್ರೀಯ ವಾರ್ತೆ

ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದ್ರೆ ಇನ್ಮುಂದೆ ಜೈಲು!

ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದ್ರೆ ಇನ್ಮುಂದೆ ಜೈಲು!

– ಕಾನೂನು ಜಾರಿ ಮಾಡಿದ ನರೇಂದ್ರ ಮೋದಿ ಸರ್ಕಾರ
– ಕನಿಷ್ಠ 3ರಿಂದ 5 ವರ್ಷ ಜೈಲು ಶಿಕ್ಷೆ, 10 ಲಕ್ಷ ರೂ. ದಂಡ

ನವ ದೆಹಲಿ: ದೇಶದ ವಿವಿಧ ಕಡೆ ವಿವಿಧ ಪರೀಕ್ಷೆಗಳ ಪ್ರಶ್ನೆ ಪತ್ರಿಕೆ ಸೋರಿಕೆ ಲಕ್ಷ ಲಕ್ಷ ಯುವ ಜನರ ಬದುಕನ್ನು ಕತ್ತಲೆಯಲ್ಲಿಟ್ಟಿದೆ.
ಇದೀಗ ಕೇಂದ್ರ ಸರ್ಕಾರ ಇಂತಹ ಅಕ್ರಮಗಳಿಗೆ ಕಡಿವಾಣ ಹಾಕಲು ಹೊಸ ಕಾಯ್ದೆ ಜಾರಿಗೆ ಮುಂದಾಗಿದೆ.
ಪ್ರಶ್ನೆ ಪತ್ರಿಕೆ ಸೋರಿಕೆ ಮಾಡುವ ತಪ್ಪಿತಸ್ಥರಿಗೆ ಕನಿಷ್ಠ 3ರಿಂದ 5 ವರ್ಷ ಜೈಲು ಶಿಕ್ಷೆ, 10 ಲಕ್ಷ ರೂ. ದಂಡವನ್ನು ಈ ಕಾಯ್ದೆಯು ಹೊಂದಿದೆ. ಯಾವುದೇ ವ್ಯಕ್ತಿ, ಗುಂಪು, ಸಂಸ್ಥೆ, ಪರೀಕ್ಷಾ ಅಧಿಕಾರಿಗಳು ಕೃತ್ಯವೆಸಗಿದಲ್ಲಿ ಕನಿಷ್ಠ 5-10 ವರ್ಷ ಜೈಲು, 1 ಕೋಟಿ ರೂ. ದಂಡ ವಿಧಿಸಲಾಗುತ್ತದೆ. ಕಾಯ್ದೆಯಲ್ಲಿ ಯುಪಿಎಸ್‌ಸಿ, ಎಸ್‌ಎಸ್‌ಸಿ, ರೈಲ್ವೇ, ಬ್ಯಾಂಕಿಂಗ್‌, ಎನ್‌ಟಿಎ ನಡೆಸುವ ಕಂಪ್ಯೂಟರ್‌ ಆಧಾರಿತ ಪರೀಕ್ಷೆಗಳು ಒಳಗೊಂಡಿವೆ.

Categories
ರಾಷ್ಟ್ರೀಯ ವಾರ್ತೆ

ಹೋಟೆಲ್ ಕಷ್ಟದ ಸ್ಟೋರಿ ಹೇಳಿದ ನಟ ಸುನಿಲ್ ಶೆಟ್ಟಿ!

ಹೋಟೆಲ್ ಕಷ್ಟದ ಸ್ಟೋರಿ ಹೇಳಿದ ನಟ ಸುನಿಲ್ ಶೆಟ್ಟಿ!

– ಕರಾವಳಿಗರಿಗೆ ಬದುಕು ನೀಡಿದ ಹೋಟೆಲ್ ಉದ್ಯಮ
– ಅಪ್ಪ ಕೆಲಸ ಮಾಡಿದ್ದ ಹೋಟೆಲ್ ಖರೀದಿ ಮಾಡಿದ ಸುನೀಲ್‌ ಶೆಟ್ಟಿ
– 9ನೇ ವಯಸ್ಸಿಗೆ ಮುಂಬೈಗೆ: ಸುನಿಲ್ ಶೆಟ್ಟಿ ತಂದೆ ರಿಯಲ್ ಹೀರೋ…!

NAMMUR EXPRESS NEWS
ಖ್ಯಾತ ಬಾಲಿವುಡ್ ನಟ ಮಂಗಳೂರು ಮೂಲದ ಸುನಿಲ್ ಶೆಟ್ಟಿ ತಮ್ಮ ತಂದೆ ಬದುಕಿಗಾಗಿ ತಮ್ಮ 9 ವರ್ಷಕ್ಕೆ ಮಂಗಳೂರು ಬಿಟ್ಟು ಮುಂಬೈ ಮಹಾನಗರಕ್ಕೆ ಬಂದು ಸಾಧನೆ ಮಾಡಿದ ಕಥೆಯನ್ನು ಇಂಟರ್ವ್ಯೂ ಒಂದರಲ್ಲಿ ಹೇಳಿಕೊಂಡಿದ್ದಾರೆ. ಅಲ್ಲದೆ ರಿಯಲ್ ಲೈಫ್ ಅಲ್ಲಿ ಅವರ ತಂದೆಯೇ ಹೀರೋ ಆಗಿದ್ದಾರೆ. ಜತೆಗೆ ಕರಾವಳಿ ಹೋಟೆಲ್ ಉದ್ಯಮದ ದಂತ ಕಥೆಯಾಗಿದ್ದಾರೆ.
ಸುನಿಲ್ ಶೆಟ್ಟಿ ಅವರ ತಂದೆ ವೀರಪ್ಪ ಶೆಟ್ಟಿ ಮಂಗಳೂರು ಮೂಲ್ಕಿ ಮೂಲದವರು. ಆಗ ಅವರ ವಯಸ್ಸು 9. ಚಿಕ್ಕ ವಯಸ್ಸಿನಲ್ಲಿ ಮಂಗಳೂರು ಬಿಟ್ಟು ಮುಂಬೈಗೆ ಓಡಿ ಬಂದ ನನ್ನ ಅಪ್ಪ ದಕ್ಷಿಣ ಭಾರತದ ಹೋಟೆಲ್ ವೊಂದರಲ್ಲಿ ಟೇಬಲ್ ಕ್ಲೀನರ್ ಆಗಿ ಕೆಲಸ ಆರಂಭಿಸಿದ್ದರು. ಆಗ ಅಪ್ಪ ಕೆಲಸ ಮಾಡಿದ್ದ ಮೂರು ಹೋಟೆಲ್‌ಗಳಿಗೆ ಈಗ ನಾನು ಮಾಲೀಕ ಎಂದು ಸುನಿಲ್ ಶೆಟ್ಟಿ ಹೆಮ್ಮೆಯೊಂದಿಗೆ ಹೇಳಿಕೊಂಡಿದ್ದಾರೆ.

ವೀರಪ್ಪ ಶೆಟ್ಟಿ ಅವರ ಬಗ್ಗೆ ಭಾವನಾತ್ಮಕವಾಗಿ ಸುನೀಲ್ ಶೆಟ್ಟಿ ಮಾತನಾಡಿ, ಚಿಕ್ಕ ವಯಸ್ಸಿನಲ್ಲೇ ನನ್ನ ಅಪ್ಪನ ತಂದೆ ಮರೆಯಾಗಿದ್ದು, ಕುಟುಂಬಕ್ಕೆ ಆಸರೆಯಾಗಿದ್ದರು. 9ನೇ ವಯಸ್ಸಿನಲ್ಲೇ ಮುಂಬೈಗೆ ಓಡಿ ಬಂದ ನನ್ನ ತಂದೆ ಮೊದಲಿಗೆ ದಕ್ಷಿಣ ಭಾರತದ ಹೋಟೆಲ್‌ ವೊಂದರಲ್ಲಿ ಟೇಬಲ್ ಕ್ಲೀನ‌ರ್ ಆಗಿ ಕೆಲಸಕ್ಕೆ ಸೇರಿಕೊಂಡರು. ನಮ್ಮ ಸಮುದಾಯದಲ್ಲಿ ಆಗ ಪರಸ್ಪರ ಒಬ್ಬರಿಗೊಬ್ಬರು ಆಗುತ್ತಿದ್ದರು. ಹೀಗಾಗಿ ಹೋಟೆಲ್‌ನಲ್ಲಿ ಕ್ಲೀನರ್ ಆಗಿ ಕೆಲಸ ಸಿಕ್ಕಿತ್ತು. ಹೋಟೆಲ್ ಕೆಲಸ ಅಲ್ಲೇ ಕೆಲಸ ಮುಗಿಸಿ ಗೋಣಿ ಚೀಲ ಹಾಸಿಕೊಂಡು ಮಲಗುತ್ತಿದ್ದರು. ಹೋಟೆಲ್ ಉದ್ಯಮದಲ್ಲೇ ಕ್ಲೀನರ್ ನಿಂದ ಹಂತ ಹಂತವಾಗಿ ಮೇಲೇರಿದ ನನ್ನ ತಂದೆ. ಬಳಿಕ ಆದೇ ಹೋಟೆಲ್‌ನ ಮ್ಯಾನೇಜರ್ ಆದರು. ಅಷ್ಟೇ ಅಲ್ಲ, ತಾವು ಕೆಲಸ ಮಾಡಿದ ಮೂರು ಹೊಟೇಲ್‌ಗಳ ಮಾಲೀಕರಾದರು. ಉಡುಪಿ ರೆಸ್ಟೋರೆಂಟ್ ಸೇರಿ ಎಲ್ಲವನ್ನು ಖರೀದಿ ಮಾಡಿದರು. ಈಗ ನಾನು ಈ ಮೂರು ಹೋಟೆಲ್‌ಗಳು ಮಾಲೀಕನಾಗಿದ್ದು, ಹಾಗೆಯೇ ಮುಂದುವರಿಸಿಕೊಂಡು ಹೋಗುತ್ತಿದ್ದೇನೆ ಎಂದಿದ್ದಾರೆ.

ಅಪ್ಪನ ಹೋಟೆಲ್ ನಡೆಸುತ್ತಿರುವ ಸುನಿಲ್ ಶೆಟ್ಟಿ!

ತುಳುನಾಡ ಕುಟುಂಬದಲ್ಲಿ 11 ಆಗಸ್ಟ್ 1961ರಲ್ಲಿ ಜನಿಸಿದ ಸುನಿಲ್ ಶೆಟ್ಟಿ ಭಾರತ ಚಿತ್ರರಂಗದ ಟಾಪ್ ನಟರಲ್ಲಿ ಒಬ್ಬರು. 30 ವರ್ಷಗಳ ಹಿಂದಿ ಸಿನಿಮಾ ಜರ್ನಿಯಲ್ಲಿ ಸುಮಾರು 100ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಒಂದು ಕಾಲಕ್ಕೆ ಮೇರು ನಟರಲ್ಲಿ ಒಬ್ಬರು. ಕನ್ನಡದ ಖ್ಯಾತಿಯನ್ನು ದೇಶದ ಉದ್ದಕ್ಕೂ ಪಸರಿಸಿದ ನಾಯಕ.
ಪತ್ನಿ ಮನ ಶೆಟ್ಟಿ, ಮಗಳು ಅತಿಯಾ ಶೆಟ್ಟಿ, ಮಗ ಅಹನ್ ಶೆಟ್ಟಿ ಕುಟುಂಬ. ಖ್ಯಾತ ಕ್ರಿಕೆಟ್ ಪಟು ಕೆ. ಎಲ್ ರಾಹುಲ್ ಅಳಿಯ.
ತಮ್ಮ ತಂದೆಯ ಉಡುಪಿ ರೆಸ್ಟೋರೆಂಟ್ ಅನ್ನು ಲಿಟಲ್ ಇಟಲಿ ಎಂಬ ರೆಸ್ಟೋರೆಂಟ್ ಆಗಿ ಪರಿವರ್ತಿಸಿದ್ದಾರೆ.

Categories
ರಾಷ್ಟ್ರೀಯ ವಾರ್ತೆ

ಜಿಯೋ ಸರ್ವರ್ ಡೌನ್…ಡೌನ್!

ಜಿಯೋ ಸರ್ವರ್ ಡೌನ್…ಡೌನ್!

– ನೆಟ್ವರ್ಕ್‌ ಸಿಗದೇ ಬಳಕೆದಾರರ ಪರದಾಟ
– ಗಂಟೆಗಳ ಕಾಲ ನೆಟ್ವರ್ಕ್ ಸಿಗದೆ ತೊಂದರೆ

NAMMUR EXPRESS NEWS
ನವದೆಹಲಿ: ನಂಬಿಕೆಯ ನೆಟ್ವರ್ಕ್ ಎಂಬ ಖ್ಯಾತಿಯ ಜಿಯೋ ಕೂಡ ಈಗ ಕೈಕೊಡುತ್ತಿದೆ.
ಮಂಗಳವಾರ ಮಧ್ಯಾಹ್ನ ದೇಶಾದ್ಯಂತ ಜಿಯೋ ಸರ್ವರ್ ಡೌನ್ ಆಗಿದೆ. ವಾಟ್ಸಾಪ್, ಇನ್ಸ್ಟಾಗ್ರಾಮ್, ಎಕ್ಸ್‌, ಸ್ನ್ಯಾಪ್ ಚಾಟ್ , ಯೂಟ್ಯೂಬ್ ಮತ್ತು ಗೂಗಲ್ ಸೇರಿದಂತೆ ಎಲ್ಲಾ ದೈನಂದಿನ ಬಳಕೆಯ ಅಪ್ಲಿಕೇಶನ್ಗಳನ್ನ ಪ್ರವೇಶಿಸಲು ಸಾಧ್ಯವಾಗದ ಕಾರಣ ದೇಶಾದ್ಯಂತ ಬಳಕೆದಾರರು ಜಿಯೋ ಸೇವೆಗಳು ಕಾರ್ಯನಿರ್ವಹಿಸುತ್ತಿಲ್ಲ ಎಂದು ದೂರುತ್ತಿದ್ದಾರೆ.
ಶೇಕಡಾ 54 ಕ್ಕೂ ಹೆಚ್ಚು ದೂರುದಾರರು ಮೊಬೈಲ್ ಇಂಟರ್ನೆಟ್, 38 ಪ್ರತಿಶತದಷ್ಟು ಜಿಯೋ ಫೈಬರ್ ಮತ್ತು 7 ಪ್ರತಿಶತದಷ್ಟು ಮೊಬೈಲ್ ನೆಟ್ವರ್ಕ್ಗಳೊಂದಿಗೆ ಅಡೆತಡೆಗಳನ್ನು ಎದುರಿಸುತ್ತಿದ್ದಾರೆ.
ಸ್ಥಗಿತದ ಬಗ್ಗೆ ಜಿಯೋ ಯಾವುದೇ ಅಧಿಕೃತ ಹೇಳಿಕೆ నిಡಿల్ల.

Categories
ಕೃಷಿ ರಾಷ್ಟ್ರೀಯ ವಾರ್ತೆ

ರೈತರಿಗೆ ಬರಲಿದೆ 20 ಸಾವಿರ ಹಣ!

ರೈತರಿಗೆ ಬರಲಿದೆ 20 ಸಾವಿರ ಹಣ!

– ಕಿಸಾನ್‌ ಸಮ್ಮಾನ್‌ ನಿಧಿಯ ಹಣ ನಿಮ್ಮ ಖಾತೆಗೆ
– ದೇಶದ ಸಣ್ಣ ಮತ್ತು ಅತಿ ಸಣ್ಣ ಕೃಷಿಕರಿಗೆ ನೆರವಾಗುವ ಉದ್ದೇಶ
– ಯಾರಿಗೆ ಸಿಗುತ್ತೆ ಹಣ…? ಇಲ್ಲಿದೆ ಮಾಹಿತಿ..!

NAMMUR EXPRESS NEWS
ನವದೆಹಲಿ: ದೇಶದ ಕೃಷಿಕರಿಗೆ ನೆರವಾಗುವ ಉದ್ದೇಶದಿಂದ ಕೇಂದ್ರ ಸರ್ಕಾರ ಜಾರಿಗೆ ತಂದ ಪ್ರಧಾನ್‌ ಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆ ಯ 17ನೇ ಕಂತಿನ ಹಣ ಜೂ.18ಕ್ಕೆ ಬಿಡುಗಡೆಯಾಗಲಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ವಾರಣಾಸಿಗೆ ಭೇಟಿ ನೀಡಲಿದ್ದು, ಈ ವೇಳೆ ಸುಮಾರು 9.3 ಕೋಟಿ ರೈತರ ಖಾತೆಗಳಿಗೆ 20,000 ರೂ. ಬಿಡುಗಡೆ ಮಾಡಲಿದ್ದಾರೆ. ಕೇಂದ್ರ ಸರ್ಕಾರ ಪ್ರಧಾನ್‌ ಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆಯನ್ನು 2೦19ರಲ್ಲಿ ಜಾರಿಗೆ ತಂದಿದೆ .

– ದೇಶದ ಸಣ್ಣ ಮತ್ತು ಅತಿ ಸಣ್ಣ ಕೃಷಿಕರಿಗೆ ನೆರವಾಗುವ ಉದ್ದೇಶ

ಪಿಎಂ-ಕಿಸಾನ್ ಸಮ್ಮಾನ್‌ ಯೋಜನೆಯ ಹಣವನ್ನು ನಾಲ್ಕು ತಿಂಗಳಿಗೊಮ್ಮೆ 2,000 ರೂ.ಗಳಂತೆ ವರ್ಷಕ್ಕೆ 3 ಬಾರಿ ಪಾವತಿಸಲಾಗುತ್ತದೆ. ಏಪ್ರಿಲ್-ಜುಲೈ, ಆಗಸ್ಟ್-ನವೆಂಬರ್ ಮತ್ತು ಡಿಸೆಂಬರ್-ಮಾರ್ಚ್ ಎಂಬ ಮೂರು ಕಂತುಗಳಲ್ಲಿ ಹಣವನ್ನು ಒದಗಿಸಲಾಗುತ್ತದೆ. ಹಣವನ್ನು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗುತ್ತದೆ. ದೇಶದ ಸಣ್ಣ ಮತ್ತು ಅತಿ ಸಣ್ಣ ಕೃಷಿಕರಿಗೆ ನೆರವಾಗುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೆ ತರಲಾಗಿದೆ.

– ಇ-ಕೆವೈಸಿ ಕಡ್ಡಾಯ

ಕಿಸಾನ್‌ ಸಮ್ಮಾನ್‌ ನಿಧಿಯ ಕಂತನ್ನು ಪಡೆಯಲು ಫಲಾನುಭವಿ ರೈತರು ಇ-ಕೆವೈಸಿ ಪೂರ್ಣಗೊಳಿಸುವುದನ್ನು ಸರ್ಕಾರ ಕಡ್ಡಾಯಗೊಳಿಸಿದೆ. ಇ-ಕೆವೈಸಿ ಮಾಡದ ರೈತರಿಗೆ ಖಾತೆಗೆ ಹಣ ಬಿಡುಗಡೆಯಾಗುವುದಿಲ್ಲ. ಒಟಿಪಿ ಆಧಾರಿತ ಇ-ಕೆವೈಸಿಯನ್ನು ಆನ್‌ಲೈನ್‌ ಮತ್ತು ಆಫ್‌ಲೈನ್‌ ಮೂಲಕ ಮಾಡಬಹುದು.

Categories
ರಾಷ್ಟ್ರೀಯ ವಾರ್ತೆ

ಆಫೀಸಿಗೆ ತಡವಾಗಿ ಬರುವ ನೌಕರರಿಗೆ ಇನ್ನು ಶಿಕ್ಷೆ!

ಆಫೀಸಿಗೆ ತಡವಾಗಿ ಬರುವ ನೌಕರರಿಗೆ ಇನ್ನು ಶಿಕ್ಷೆ!

– ಬಯೋಮೆಟ್ರಿಕ್ ಕಡ್ಡಾಯ ಜಾರಿ: ಕೇಂದ್ರ ಸರ್ಕಾರ ಎಚ್ಚರಿಕೆ
– ಇನ್ಮುಂದೆ ಸರ್ಕಾರಿ ನೌಕರರು ಕಳ್ಳಾಟ ಆಡಂಗಿಲ್ಲ!?

NAMMUR EXPRESS NEWS
ನವದೆಹಲಿ: ಸರ್ಕಾರಿ ಕಚೇರಿಗಳಿಗೆ ತಡವಾಗಿ ಬರುವ ತನ್ನ ಉದ್ಯೋಗಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಕೇಂದ್ರ ಎಚ್ಚರಿಸಿದೆ ಮತ್ತು ತಡವಾಗಿ ಹಾಜರಾಗುವುದು ಮತ್ತು ಕಚೇರಿಯಿಂದ ಬೇಗನೆ ಹೊರಡುವುದನ್ನು ಸಂಬಂಧಪಟ್ಟ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಬೇಕು ಎಂದು ಹೇಳಿದೆ.
ಆಧಾರ್ ಸಕ್ರಿಯಗೊಳಿಸಿದ ಬಯೋಮೆಟ್ರಿಕ್‌ ಹಾಜರಾತಿ ವ್ಯವಸ್ಥೆಯಲ್ಲಿ (ಎಇಬಿಎಎಸ್) ಹಲವಾರು ಉದ್ಯೋಗಿಗಳು ತಮ್ಮ ಹಾಜರಾತಿಯನ್ನು ನೋಂದಾಯಿಸುತ್ತಿಲ್ಲ ಮತ್ತು ಕೆಲವು ಉದ್ಯೋಗಿಗಳು ನಿಯಮಿತವಾಗಿ ತಡವಾಗಿ ಬರುತ್ತಿದ್ದಾರೆ’ ಎಂದು ಗಮನಿಸಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ.

ಸಿಬ್ಬಂದಿ ಸಚಿವಾಲಯವು ಆದೇಶದಲ್ಲಿ, ಮೊಬೈಲ್‌ ಫೋನ್ ಆಧಾರಿತ ಮುಖ ದೃಢೀಕರಣ ವ್ಯವಸ್ಥೆಯನ್ನು ಬಳಸಲು ಸೂಚಿಸಿದೆ, ಇದು ಲೈವ್ ಲೊಕೇಶನ್ ಡಿಟೆಕ್ಷನ್‌ ಮತ್ತು ಜಿಯೋ-ಟ್ಯಾಗಿಂಗ್ ಅನ್ನು ಒದಗಿಸುತ್ತದೆ.
ಎಇಬಿಎಎಸ್ನ ಕಟ್ಟುನಿಟ್ಟಾದ ಅನುಷ್ಠಾನದ ವಿಷಯವನ್ನು ಇತ್ತೀಚೆಗೆ ಪರಿಶೀಲಿಸಲಾಗಿದೆ ಮತ್ತು ಅದರ ಅನುಷ್ಠಾನದಲ್ಲಿನ ಸಡಿಲತೆಯನ್ನು ಗಂಭೀರವಾಗಿ ಪರಿಗಣಿಸಿ, ಎಲ್ಲಾ ಎಂಡಿಒಗಳು (ಸಚಿವಾಲಯ / ಇಲಾಖೆ / ಸಂಸ್ಥೆ) ಹಾಜರಾತಿ ವರದಿಗಳನ್ನು ನಿಯಮಿತವಾಗಿ ಮೇಲ್ವಿಚಾರಣೆ ಮಾಡುತ್ತಾರೆ ಎಂದು ಪುನರುಚ್ಚರಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಎಫ್‌ಎಐ ಇಲ್ಲದೆ ಎಇಬಿಎಎಸ್ ಬಳಸಿ ನೌಕರರು ತಮ್ಮ ಹಾಜರಾತಿಯನ್ನು ಗುರುತಿಸುವುದನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ಕೇಂದ್ರ ಸರ್ಕಾರಿ ಇಲಾಖೆಗಳಿಗೆ ಸೂಚಿಸಲಾಗಿದೆ.