Categories
ರಾಷ್ಟ್ರೀಯ ವಾರ್ತೆ

200ರೂಪಾಯಿ ನೋಟ್ ಬ್ಯಾನ್?

200ರೂಪಾಯಿ ನೋಟ್ ಬ್ಯಾನ್?

– 2,000 ರೂಪಾಯಿ ಹಿಂಪಡೆದ ರಿಸರ್ವ್ ಬ್ಯಾಂಕ್‌
– ಮಾರುಕಟ್ಟೆಯಿಂದ 200 ರೂ.ಮುಖಬೆಲೆ 137 ಕೋಟಿ ಹಣ ವಾಪಾಸ್

NAMMUR EXPRESS NEWS
ಮುಬೈ: ರಿಸರ್ವ್ ಬ್ಯಾಂಕ್‌ ಆಫ್ ಮುಂಬೈ 2,000 ರೂಪಾಯಿ ಮುಖಬೆಲೆಯ ನೋಟುಗಳನ್ನು ಹಿಂಪಡೆದುಕೊಂಡಿದೆ. ಎಲ್ಲಾ 2 ಸಾವಿರ ಮುಖಬೆಲೆ ನೋಟು ತಲುಪುವ ಮೊದಲೇ ಈಗ 200 ರೂ. ಮುಖಬೆಲೆ ನೋಟ್ ಹಿಂಪಡೆಯುವ ಕೆಲಸ ಆರ್‌ಬಿಐ ಮಾಡುತ್ತಿದೆ. ಕೆಲಗಳ ಪ್ರಕಾರ, ಆರ್‌ಬಿಐ ವರದಿ ಮಾರುಕಟ್ಟೆಯಿಂದ 200 ರೂ.
ಮುಖಬೆಲೆಯ ಅಂದಾಜು 137 ಕೋಟಿ ಮೌಲ್ಯದ ಹಣ ಹಿಂಪಡೆದುಕೊಂಡಿದೆ. ಕಳೆದ ಆರು ತಿಂಗಳಿನಿಂದಲೇ ಆರ್‌ಬಿಐ ಹಣ ಹಿಂಪಡೆಯುವ ನಿರೀಕ್ಷೆಯಿದೆ ಎಂದು ವರದಿಯಾಗಿದೆ.

ಆರ್‌ಬಿಐ ಹಣ ಹಿಂಪಡೆಯುವುದು ಯಾಕೆ?

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 200 ರೂ. ನೋಟುಗಳನ್ನು ಹಿಂಪಡೆಯುವ ಹಿಂದಿನ ಉದ್ದೇಶ ಬೇರೆಯಾಗಿದೆ. ಆರ್‌ಬಿಐ ನೋಟ್ ಬ್ಯಾನ್ ಮಾಡಲು ಹಣ ಹಿಂಪಡೆಯುತ್ತಿಲ್ಲ, ಬದಲಾಗಿ ನೋಟುಗಳ ಕಳಪೆ ಸ್ಥಿತಿಯಿಂದ ವಾಪಸ್‌ ಪಡೆಯುತ್ತಿದೆ. ಆರ್‌ಬಿಐ ತನ್ನ ಅರ್ಧ ವಾರ್ಷಿಕ ವರದಿಯಲ್ಲಿ 200 ರೂಪಾಯಿ ನೋಟುಗಳ ಗುಣಮಟ್ಟ ಇಳಿಕೆಯ ಪರಿಣಾಮ ಒಟ್ಟು 137 ಕೋಟಿಯನ್ನು ಮಾರುಕಟ್ಟೆಯಿಂದ ಹಿಂದಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದೆ.

ಕಳೆದ ವರ್ಷ ಭಾರತೀಯ ರಿಸರ್ವ್ ಬ್ಯಾಂಕ್ ಒಟ್ಟು 135 ಕೋಟಿ ನೋಟುಗಳನ್ನು ಮಾರುಕಟ್ಟೆಯಿಂದ ಹಿಂದಕ್ಕೆ ತೆಗೆದುಕೊಂಡಿತು. 200 ರೂ. ಮೌಲ್ಯದ ನೋಟುಗಳು ಹೆಚ್ಚು ಕೊಳಕು, ಹರಿದು ಡ್ಯಾಮೇಜ್ ಆಗಿವೆ. 500 ರೂಪಾಯಿ ಮೌಲ್ಯದ ನೋಟುಗಳೇ ಹೆಚ್ಚು ಹಾನಿಗೆ ಒಳಗಾಗಿವೆ. 200 ರೂಪಾಯಿ ನೋಟು ಬಂದ್ ಆದ ನಂತರ 200 ರೂ. ನೋಟ್ ಹೆಚ್ಚು ಚಲಾವಣೆಯಾಗುತ್ತಿರುವ ಕಾರಣ ನೋಟಿನ ಕಾಗದ ಹೆಚ್ಚು ಡ್ಯಾಮೇಜ್ ಆಗುತ್ತಿದೆ ಎಂದು ಬ್ಯಾಂಕಿಂಗ್ ತಜ್ಞರು ಹೇಳುತ್ತಾರೆ.

ರಿಸರ್ವ್ ಬ್ಯಾಂಕ್‌ ಆಫ್ ಇಂಡಿಯಾ ವರದಿ ಪ್ರಕಾರ, ಹಾಳಾದ ಅಥವಾ ಹರಿದ ನೋಟುಗಳಲ್ಲಿ ದೊಡ್ಡ ಮೌಲ್ಯದ ನೋಟುಗಳು ಜೊತೆಯಲ್ಲಿ ಕಡಿಮೆ ಮೌಲ್ಯದ ಕರೆನ್ಸಿಯೂ ಸೇರಿದೆ. 5 ರೂ. ಮೌಲ್ಯದ 3.7 ಕೋಟಿ, 10 ರೂ ಮೌಲ್ಯದ 234 ಕೋಟಿ, 20 ರೂ ಮೌಲ್ಯದ 139 ಕೋಟಿ, 50 ರೂ ಮೌಲ್ಯದ 190 ಕೋಟಿ, 100 ರೂ ಮೌಲ್ಯದ 602 ಕೋಟಿ ರೂಪಾಯಿ ಹಿಂಪಡೆದುಕೊಳ್ಳಲಾಗಿದೆ.

Categories
ರಾಷ್ಟ್ರೀಯ ವಾರ್ತೆ

ಕಾರ್ಗಿಲ್ ವಿಜಯೋತ್ಸವಕ್ಕೆ 25 ವರ್ಷ..!

ಕಾರ್ಗಿಲ್ ವಿಜಯೋತ್ಸವಕ್ಕೆ 25 ವರ್ಷ..!
– ದೇಶಕ್ಕಾಗಿ ಪ್ರಾಣ ಬಿಟ್ಟ ವೀರ ಯೋಧರಿಗೆ ನಮನ
– ದೇಶದೆಲ್ಲೆಡೆ ಕಾರ್ಗಿಲ್ ವಿಜಯ್ ದಿವಸ್ ಆಚರಣೆ
– ಯುದ್ಧದಲ್ಲಿ 527 ಮಂದಿ ಭಾರತೀಯ ಸೈನಿಕರ ವೀರ ಮರಣ

NAMMUR EXPRESS NEWS
ಭಾರತ-ಪಾಕಿಸ್ತಾನ ನಡುವಿನ ವೈರತ್ವ ಇಂದು ನಿನ್ನೆಯದಲ್ಲ. ದೇಶ ವಿಭಜನೆಯಾದಾಗಿನಿಂದ ಈ ವೈಮನಸ್ಸು ಮುಂದುವರಿದುಕೊಂಡು ಬಂದಿದೆ. ಆದರೆ 1999ರಲ್ಲಿ ಭಾರತ ಹಾಗೂ ಪಾಕಿಸ್ತಾನದ ನಡುವೆ ಭೀಕರ ಯುದ್ಧವಾಗಿತ್ತು. ಈ ಯುದ್ಧವು ಕಾರ್ಗಿಲ್ ಪ್ರಾಂತ್ಯದಲ್ಲಿ ನಡೆದ ಕಾರಣ ಇದಕ್ಕೆ ಕಾರ್ಗಿಲ್ ಯುದ್ಧ ಎಂದು ಹೆಸರಿಲಾಗಿದೆ. ಕಾರ್ಗಿಲ್‌ ಯುದ್ಧವು ಭಾರತಕ್ಕೆ ಜಯ ತಂದುಕೊಟ್ಟರೂ ಇದರಲ್ಲಿ ಹಲವು ಯೋಧರು ಹುತ್ಮಾತರಾಗಿದ್ದರು.
ಕಾರ್ಗಿಲ್ ಯುದ್ಧದ ಗೆಲುವನ್ನು ಸಂಭ್ರಮಿಸುವ ಹಾಗೂ ಹುತ್ಮಾತ ಯೋಧರಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಪ್ರತಿ ವರ್ಷ ಜುಲೈ 26 ರಂದು ಕಾರ್ಗಿಲ್ ವಿಜಯ್ ದಿವಸ್ ಎಂದು ಆಚರಿಸಲಾಗುತ್ತದೆ. ಕಾರ್ಗಿಲ್ ಯುದ್ಧ ನಡೆದು ಈ ವರ್ಷಕ್ಕೆ 25 ವರ್ಷಗಳಾಗಿವೆ.
1999ರ ಮೇ ಹಾಗೂ ಜುಲೈ ನಡುವೆ ಕಾಶ್ಮೀರದ ಕಾರ್ಗಿಲ್ ಪ್ರದೇಶದಲ್ಲಿ ಯುದ್ಧ ನಡೆದಿತ್ತು. ಕಾರ್ಗಿಲ್‌ ಯುದ್ಧದಲ್ಲಿ ಪಾಕಿಸ್ತಾನದ ಮೇಲೆ ಭಾರತೀಯ ಸಶಸ್ತ್ರ ಪಡೆಗಳ ವಿಜಯದ ಸ್ಮರಣಾರ್ಥ ಜುಲೈ 26 ಅನ್ನು ಕಾರ್ಗಿಲ್ ವಿಜಯ್ ದಿವಸ್‌ ಅಥವಾ ಕಾರ್ಗಿಲ್ ವಿಜಯ ದಿನ ಎಂದು ಆಚರಿಸಲಾಗುತ್ತದೆ.
ಕಾರ್ಗಿಲ್‌ ಯುದ್ಧವು ದೇಶದ ಮೊದಲ ಯುದ್ಧವಾಗಿದ್ದು, ಇದನ್ನು ಸುದ್ದಿ ವಾಹಿನಿಗಳು ನೇರ ಪ್ರಸಾರ ಮಾಡಿದ್ದವು. ಯುದ್ಧ ನಡೆದ ಕಾರ್ಗಿಲ್ ಜಿಲ್ಲೆಯು ಜಮ್ಮು ಮತ್ತು ಕಾಶ್ಮೀರದ ವಿವಾದಿತ ಪ್ರದೇಶದಲ್ಲಿದೆ. ಭಾರತ ಮತ್ತು ಪಾಕಿಸ್ತಾನದ ನಡುವಿನ ವಾಸ್ತವಿಕ ಗಡಿಯಾಗಿ ಕಾರ್ಯನಿರ್ವಹಿಸುವ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ಉದ್ದಕ್ಕೂ ಇದೆ.
ಎತ್ತರದ ಯುದ್ಧಭೂಮಿ: ಕಾರ್ಗಿಲ್ ಯುದ್ಧಭೂಮಿಯು ಅತ್ಯಂತ ಎತ್ತರದ ಯುದ್ಧಭೂಮಿಯಾಗಿತ್ತು. 18,000 ಅಡಿಗಳಷ್ಟು ಎತ್ತರದಲ್ಲೂ ಯುದ್ಧ ನಡೆದಿತ್ತು. ಹವಾಮಾನ ವೈಪರೀತ್ಯದ ನಡುವೆಯೂ ನಡೆದ ಭೀಕರ ಯುದ್ಧಕ್ಕೆ ಕಾರ್ಗಿಲ್ ಸಾಕ್ಷಿಯಾಗಿತ್ತು.
ಆಪರೇಷನ್‌ ವಿಜಯ್: ಭಾರತೀಯ ಸೇನೆಯು ತನ್ನ ಕಾರ್ಯಾಚರಣೆಗೆ ‘ಆಪರೇಷನ್‌ ವಿಜಯ್’ ಎಂಬ ಸಂಕೇತನಾಮವನ್ನು ನೀಡಿತ್ತು. ಪಾಕಿಸ್ತಾನವನ್ನು ಬಗ್ಗುಬಡಿದು ಕಾಶ್ಮೀರವನ್ನು ಉಳಿಸಿಕೊಳ್ಳುವ ಧೇಯ್ಯ ಹೊಂದಿತ್ತು ಆಪರೇಷನ್‌ ವಿಜಯ್.
ಪಾಕಿಸ್ತಾನದ ಉದ್ದೇಶ: ಲಡಾಖ್ ಮತ್ತು ಕಾಶ್ಮೀರ ನಡುವಿನ ಸಂಪರ್ಕವನ್ನು ತೊಡೆದು ಹಾಕುವುದು ಮತ್ತು ಭಾರತದ ಗಡಿಯಲ್ಲಿ ಉದ್ವಿಗ್ನತೆಯನ್ನು ಸೃಷ್ಟಿಸುವುದು ಪಾಕಿಸ್ತಾನದ ಪ್ರಮುಖ ಉದ್ದೇಶವಾಗಿತ್ತು.
ಕಾರ್ಗಿಲ್‌ನ ಇತಿಹಾಸ: ಕಾರ್ಗಿಲ್ 1947ರಲ್ಲಿ ಭಾರತದ ವಿಭಜನೆಯ ಮೊದಲು ಲಡಾಖ್‌ನ ಬಾಲ್ಟಿಸ್ತಾನ್ ಜಿಲ್ಲೆಯ ಭಾಗವಾಗಿತ್ತು ಮತ್ತು ಮೊದಲ ಕಾಶ್ಮೀರ ಯುದ್ಧದ ನಂತರ (1947-1948) LOC (ಗಡಿ ನಿಯಂತ್ರಣ ರೇಖೆ) ಯಿಂದ ಬೇರ್ಪಟ್ಟಿತು.
ಅವಧಿ: ಯುದ್ಧವು ಸರಿಸುಮಾರು ಮೂರು ತಿಂಗಳ ಕಾಲ, ಅಂದರೆ ಮೇ ನಿಂದ ಜುಲೈವರೆಗೆ ನಡೆಯಿತು.

ಮೊದಲ ಯುದ್ಧದಲ್ಲೇ ಭಾರತಕ್ಕೆ ಜಯ

ಭಾರತೀಯ ಸೇನೆಯು ಪಾಕಿಸ್ತಾನಿ ಪಡೆಗಳ ವಿರುದ್ಧ ಹೋರಾಡಿ ವಿರೋಚಿತ ಜಯಗಳಿಸಿತ್ತು. ಆಕ್ರಮಿತ ಪ್ರದೇಶಗಳನ್ನು ವಶಪಡಿಸಿಕೊಂಡಿದ್ದರಿಂದ ಈ ಯುದ್ಧವನ್ನು ಭಾರತಕ್ಕೆ ವಿಜಯವೆಂದು ಪರಿಗಣಿಸಲಾಗಿದೆ. 400 ರಿಂದ 4,000 ಪಾಕಿಸ್ತಾನಿ ಸೈನಿಕರು ಮತ್ತು ಉಗ್ರಗಾಮಿಗಳು ಈ ಯುದ್ಧದಲ್ಲಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತದೆ. ಯುದ್ಧದಲ್ಲಿ 527 ಮಂದಿ ಭಾರತೀಯ ಸೈನಿಕರು ವೀರ ಮರಣ ಹೊಂದಿದ್ದರು. ಸುಮಾರು 1,363 ಮಂದಿ ಗಾಯಗೊಂಡಿದ್ದರು.
ಏತನ್ಮಧ್ಯೆ, ಕಾರ್ಗಿಲ್ ವಿಜಯ್ ದಿವಸ್‌ನ 25 ನೇ ವಾರ್ಷಿಕೋತ್ಸವದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಜುಲೈ 26 ರಂದು ಲಡಾಖ್‌ನ ಡ್ರಾಸ್‌ಗೆ ಭೇಟಿ ನೀಡಲಿದ್ದಾರೆ.

Categories
ರಾಷ್ಟ್ರೀಯ ವಾರ್ತೆ

ನಿಮ್ಮ ಆಧಾರ್ ಅಂತೆ ಬರಲಿದೆ ಭೂಮಿಗೂ ಆಧಾರ್ ಕಾರ್ಡ್!

ನಿಮ್ಮ ಆಧಾರ್ ಅಂತೆ ಬರಲಿದೆ ಭೂಮಿಗೂ ಆಧಾರ್ ಕಾರ್ಡ್!

– ಜಮೀನುಗಳಿಗೂ ವಿಶೇಷ ಗುರುತಿನ ಸಂಖ್ಯೆ ಭೂ-ಆಧಾ‌ರ್ ಜಾರಿ
– ಆಸ್ತಿಗಳ ಡಿಜಿಟಲೀಕರಣ: ಭೂ ಆಕ್ರಮಗಳಿಗೆ ಕಡಿವಾಣ!

NAMMUR EXPRESS NEWS

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ ಮಂಡಿಸಿದ ಬಜೆಟ್ ನಲ್ಲಿ ಅನೇಕ ಭೂ ಸುಧಾರಣೆ ಕಾರ್ಯಕ್ರಮ ಘೋಷಣೆ ಮಾಡಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಭೂಮಿಗೆ ವಿಶಿಷ್ಟ ಗುರುತಿನ ಸಂಖ್ಯೆ ಅಥವಾ ಭೂ ಆಧಾ‌ರ್ ನೀಡಲಾಗುವುದು. ಎಲ್ಲಾ ನಗರ ಭೂ ದಾಖಲೆಗಳ ಡಿಜಟಲೀಕರಣ ಮಾಡಲಿದ್ದು, ಈ ಮೂಲಕ ಭೂ ಆಕ್ರಮಗಳಿಗೆ ಕಡಿವಾಣ ಹಾಕಲು ಕ್ರಮ ಕೈಗೊಳ್ಳಲಾಗಿದೆ. ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಭೂಸುಧಾರಣೆ ಕೈಗೊಳ್ಳಲು ಕೇಂದ್ರವು ರಾಜ್ಯಗಳೊಂದಿಗೆ ಕೆಲಸ ಮಾಡಲಿದೆ. ಮುಂದಿನ ಮೂರು ವರ್ಷಗಳಲ್ಲಿ ಈ ಸುಧಾರಣೆ ಪೂರ್ಣಗೊಳಿಸಲಾಗುವುದು. ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಭೂ ಸಂಬಂಧಿತ ಸುಧಾರಣೆಗಳು ಮತ್ತು ಕ್ರಮಗಳನ್ನು ಎರಡು ರೀತಿಯಲ್ಲಿ ಕೈಗೊಳ್ಳಲಾಗುವುದು.

ಒಂದು -ಭೂ ಆಡಳಿತ ಯೋಜನೆ ಮತ್ತು ನಿರ್ವಹಣೆ, ಎರಡು- ನಗರ ಯೋಜನೆ, ಬಳಕೆ ಮತ್ತು ಕಟ್ಟಡ ಬೈಲಾಗಳನ್ನು ಈ ಸುಧಾರಣಾ ಕ್ರಮಗಳು ಒಳಗೊಂಡಿದೆ. ಗ್ರಾಮೀಣ ಭೂಮಿ ಸಂಬಂಧಿತ ಕ್ರಮಗಳು ಎಲ್ಲಾ ಜಮೀನುಗಳಿಗೆ ಭೂ ಪಾರ್ಸೆಲ್ ಗುರುತಿನ ಸಂಖ್ಯೆ ಅಥವಾ ಭೂ ಆಧಾರ್ ಒಳಗೊಂಡಿರುತ್ತದೆ. ನಕ್ಷೆಗಳ ಪ್ರಸ್ತುತ ಮಾಲೀಕತ್ವದ ಪ್ರಕಾರ ನಕ್ಷೆ, ಉಪ ವಿಭಾಗಗಳ ಸಮೀಕ್ಷೆ, ಭೂ ನೋಂದಣಿ ರಚನೆ, ರೈತರ ನೋಂದಣಿಗೆ ಲಿಂಕ್ ಮಾಡುವುದು ಪ್ರಮುಖ ಕ್ರಮಗಳಾಗಿವೆ. ಈ ಕ್ರಮಗಳಿಂದ ಕೃಷಿ ಸೇವೆ, ಸಾಲ ನೀಡಿಕೆ ಸುಲಭವಾಗಲಿದೆ. ನಗರ ಪ್ರದೇಶಗಳ ಭೂದಾಖಲೆಗಳನ್ನು ಡಿಜಿಟಲೀಕರಣಗೊಳಿಸಲಾಗುವುದು. ಆಸ್ತಿ ದಾಖಲೆ ನಿರ್ವಹಣೆ, ನವೀಕರಣ, ತೆರಿಗೆ ಆಡಳಿತಕ್ಕೆ ಐಟಿ ಆಧಾರಿತ ವ್ಯವಸ್ಥೆ ಸ್ಥಾಪಿಸಲಾಗುವುದು. ಇದರಿಂದ ನಗರ ಸ್ಥಳೀಯ ಸಂಸ್ಥೆಗಳ ಆರ್ಥಿಕ ಸ್ಥಿತಿ ಸುಧಾರಣೆಗೆ ಅನುಕೂಲವಾಗುತ್ತದೆ ಎನ್ನಲಾಗಿದೆ.

Categories
ರಾಷ್ಟ್ರೀಯ ವಾರ್ತೆ

ಹೊಸ ತೆರಿಗೆ ಸ್ಲ್ಯಾಬ್: 17,500 ರೂ. ತೆರಿಗೆ ಉಳಿತಾಯ.!

ಹೊಸ ತೆರಿಗೆ ಸ್ಲ್ಯಾಬ್: 17,500 ರೂ. ತೆರಿಗೆ ಉಳಿತಾಯ.!

– ಕಸ್ಟಮ್ಸ್ ಸುಂಕ ಇಳಿಕೆ, ಚಿನ್ನ ಖರೀದಿಸುವವರಿಗೆ ಸಿಹಿ ಸುದ್ದಿ
– ತೆರಿಗೆ ಯಾರಿಗೆ ಏನು… ಇಲ್ಲಿದೆ ಮಾಹಿತಿ..!

NAMMUR EXPRESS NEWS

ನವದೆಹಲಿ: ಉದ್ಯೋಗಿಗಳಿಗೆ, ತೆರಿಗೆ ಪಾವತಿದಾರರಿಗೆ ಅನುಕೂಲವಾಗುವ ದಿಸೆಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಲವು ಕ್ರಮಗಳನ್ನು ಘೋಷಣೆ ಮಾಡಿದ್ದಾರೆ. ಸ್ಟ್ಯಾಂಡರ್ಡ್ ಡಿಡ ಕ್ಷನ್ ಮೊತ್ತವನ್ನು 50 ಸಾವಿರ ರೂ.ನಿಂದ 75 ಸಾವಿರ ರೂ.ಗೆ ಏರಿಕೆ ಮಾಡಿರುವುದು, ಹೊಸ ತೆರಿಗೆಯ ಪದ್ಧತಿಯ ಸ್ಥಾಬ್‌ಗಳಲ್ಲಿ ಬದಲಾವಣೆ ಮಾಡಿರುವ ಕಾರಣ 6-7 ಲಕ್ಷ ರೂ. ಹಾಗೂ 9-10 ಲಕ್ಷ ರೂ. ಆದಾಯ ಪಡೆಯುವವರು ವರ್ಷಕ್ಕೆ 17,500 ರೂ. ತೆರಿಗೆ ಉಳಿತಾಯ ಮಾಡಬಹುದಾಗಿದೆ. ಹಾಗಾದರೆ, ಇಷ್ಟು ತೆರಿಗೆ ಉಳಿತಾಯ ಮಾಡುವುದು ಹೇಗೆ? ಸ್ಲಾಬ್ ಹೇಗಿದೆ ಎಂಬುದರ ಮಾಹಿತಿ ಇಲ್ಲಿದೆ.

17,500 ರೂ. ಉಳಿತಾಯ ಹೇಗೆ?

ಸ್ಟಾಂಡರ್ಡ್ ಡಿಡಕ್ಷನ್ ಎಂಬುದು ತೆರಿಗೆ ವಿನಾಯಿತಿ ಆಗಿದ್ದು, ಇದಕ್ಕಾಗಿ ನೌಕರರು ಹೂಡಿಕೆ ಮಾಡಬೇಕಿಲ್ಲ. ತೆರಿಗೆ ಪಾವತಿಸಲು ಅರ್ಹವಿರುವವರು ಸ್ಟಾಂಡರ್ಡ್ ಡಿಡಕ್ಷನ್ ಮೊತ್ತದ ಅಡಿಯಲ್ಲಿ ವಿನಾಯಿತಿ ಪಡೆಯಲಿದ್ದಾರೆ. ಈ ಸ್ಟಾಂಡರ್ಡ್ ಡಿಡಕ್ಷನ್ ಮೊತ್ತವನ್ನು ಕೇಂದ್ರ ಸರ್ಕಾರವೀಗ 75 ಸಾವಿರ ರೂ.ಗೆ ಏರಿಕೆ ಮಾಡಿರುವುದರಿಂದ, ಇನ್ನು ಹೊಸ ತೆರಿಗೆಯ ಸ್ಲಾಬ್‌ಗಳ ಸ್ಟ್ರಕ್ಟ‌ರ್ ಬದಲಾವಣೆ ಮಾಡಿರುವುದರಿಂದ 6-7 ಲಕ್ಷ ರೂ. ಆದಾಯ ಗಳಿಸುವವರು ಶೇ.10ರಷ್ಟು ಬದಲು ಶೇ.5ರಷ್ಟು ತೆರಿಗೆ ಪಾವತಿಸುತ್ತಾರೆ. ಇನ್ನು, 9-10 ಲಕ್ಷ ರೂ. ಆದಾಯ ಗಳಿಸುವವರು ಶೇ.15ರ ಬದಲು ಶೇ.10ರಷ್ಟು ತೆರಿಗೆ ಪಾವತಿಸಲಿದ್ದಾರೆ.

ತೆರಿಗೆಯ ಹೊಸ ಸ್ಲಾಬ್ ಹೀಗಿದೆ…

ಆದಾಯ : ವಿಧಿಸುವ ತೆರಿಗೆ
0-3 ಲಕ್ಷ ರೂ. : ತೆರಿಗೆ ಇರಲ್ಲ
3-7 ಲಕ್ಷ ರೂ. : 5%
7-10 ಲಕ್ಷ ರೂ. : 10%
10-12 ಲಕ್ಷ ರೂ. : 15%
12-15 ಲಕ್ಷ ರೂ. : 20%
15 ಲಕ್ಷ ರೂ.ಗಿಂತ ಹೆಚ್ಚು : 30%

ಹೊಸ ತೆರಿಗೆ ಹಳೆಯ ಸ್ಲಾಬ್ ಹೀಗಿತ್ತು…

ಆದಾಯ : ವಿಧಿಸುವ ತೆರಿಗೆ
0-3 ಲಕ್ಷ ರೂ. : ತೆರಿಗೆ ಇರಲ್ಲ
3-6 ಲಕ್ಷ ರೂ. : 5%
6-9 ಲಕ್ಷ ರೂ. : 10%
9-12 ಲಕ್ಷ ರೂ. : 15%
12-15 ಲಕ್ಷ ರೂ. : 20%
15 ಲಕ್ಷ ರೂ.ಗಿಂತ ಹೆಚ್ಚು : 30%

ಹಳೆಯ ತೆರಿಗೆ ಪದ್ಧತಿಯ ಸ್ಲ್ಯಾಬ್

ಆದಾಯ : ವಿಧಿಸುವ ತೆರಿಗೆ
2.5 ಲಕ್ಷ ರೂ. : ತೆರಿಗೆ ಇರಲ್ಲ
2.5 ಲಕ್ಷ ರೂ. – 3 ಲಕ್ಷ ರೂ. : 5%
3 ಲಕ್ಷ ರೂ.- 5 ಲಕ್ಷ ರೂ. : 5%
5 ಲಕ್ಷ ರೂ.-10 ಲಕ್ಷ ರೂ. : 20%
10 ಲಕ್ಷ ರೂ.ಗಿಂತ ಹೆಚ್ಚು : 30%

ಕಸ್ಟಮ್ಸ್ ಸುಂಕ ಇಳಿಕೆ, ಚಿನ್ನ ಖರೀದಿಸುವವರಿಗೆ ಸಿಹಿ ಸುದ್ದಿ

ಚಿನ್ನ ಹಾಗೂ ಬೆಳ್ಳಿಯ ಮೇಲಿನ ಕಸ್ಟಮ್ಸ್ ಸುಂಕವನ್ನು ಶೇ.6ರಷ್ಟು ಇಳಿಕೆ ಮಾಡಲಾಗುವುದು ಎಂಬುದಾಗಿ ನಿರ್ಮಲಾ ಸೀತಾರಾಮನ್ ಅವರು ಘೋಷಣೆ ಮಾಡಿದ್ದಾರೆ. ಇದರಿಂದಾಗಿ ಚಿನ್ನದ ಬೆಲೆಯು ಇಳಿಕೆಯಾಗಲಿದೆ ಎಂದು ತಿಳಿದುಬಂದಿದೆ. ಪ್ಲಾಟಿನಮ್ ಮೇಲಿನ ಕಸ್ಟಮ್ ಸುಂಕವನ್ನು ಕೂಡ ಶೇ.6.4ರಷ್ಟು ಇಳಿಕೆ ಮಾಡಲಾಗಿದೆ. ಕಸ್ಟಮ್ಸ್ ಸುಂಕವನ್ನು ಇದಕ್ಕೂ ಮೊದಲು ಇಳಿಸಲಾಗಿದೆ. ಇನ್ನಷ್ಟು ಕಸ್ಟಮ್ಸ್ ಸುಂಕವನ್ನು ಇಳಿಸಲು ಪ್ರಸ್ತಾಪ ಇದೆ. ಅದರಂತೆ, ಔಷಧ, ಮೆಡಿಕಲ್ ಉಪಕರಣಗಳು, ಮೂರು ಕ್ಯಾನ್ಸರ್ ಔಷಧಿಗಳನ್ನು ಕಸ್ಟಮ್ಸ್ ಸುಂಕದಿಂದ ಮುಕ್ತಗೊಳಿಸಲಾಗಿದೆ. ಒಟ್ಟಾರೆಯಾಗಿ ಕೇಂದ್ರ ಸರ್ಕಾರವು ಶೇ.15ರಷ್ಟು ಕಸ್ಟಮ್ಸ್ ಸುಂಕವನ್ನು ಇಳಿಸಿದೆ.

Categories
ರಾಷ್ಟ್ರೀಯ ವಾರ್ತೆ

ಡಿಪ್ಲೋಮಾ, ಪದವೀಧರರಿಗೆ ಗುಡ್ ನ್ಯೂಸ್..!

ಡಿಪ್ಲೋಮಾ, ಪದವೀಧರರಿಗೆ ಗುಡ್ ನ್ಯೂಸ್..!

– ಭಾರತೀಯ ರೈಲ್ವೆ ಇಲಾಖೆಯಲ್ಲಿ 7,934 ಹುದ್ದೆಗಳ ನೇಮಕಾತಿ
– ಅರ್ಜಿ ಸಲ್ಲಿಸುವುದು ಹೇಗೆ? ಇಲ್ಲಿದೆ ಮಾಹಿತಿ

NAMMUR EXPRESS NEWS

ನವದೆಹಲಿ : ರೈಲ್ವೆ ನೇಮಕಾತಿ ಮಂಡಳಿ 7000 ಕ್ಕೂ ಹೆಚ್ಚು ಜೂನಿಯ‌ರ್ ಎಂಜಿನಿಯ‌ರ್ ಹುದ್ದೆಗಳ ನೇಮಕಾತಿಗೆ ಶಾರ್ಟ್ ನೋಟಿಸ್ ನೀಡಿದೆ. 7934 ಹುದ್ದೆಗಳಿಗೆ ಕೇಂದ್ರ ಉದ್ಯೋಗ ಅಧಿಸೂಚನೆ ಹೊರಡಿಸಲಾಗಿದೆ. ಇದರ ಅಡಿಯಲ್ಲಿ, ಅಭ್ಯರ್ಥಿಗಳನ್ನು ವಿವಿಧ ಇಲಾಖೆಗಳಲ್ಲಿ ಜೆಇ ಹುದ್ದೆಗಳಿಗೆ ನೇಮಕ ಮಾಡಲಾಗುತ್ತದೆ. ರೈಲ್ವೆ ನೇಮಕಾತಿ ಮಂಡಳಿಯ ಜೆಇ ಹುದ್ದೆಗಳಿಗೆ ಸಂಕ್ಷಿಪ್ತ ನೋಟಿಸ್‌ ಮಾತ್ರ ನೀಡಲಾಗಿದೆ. ಅರ್ಜಿ ಪ್ರಕ್ರಿಯೆಯು ಜುಲೈ 30, 2024 ರಂದು ಪ್ರಾರಂಭವಾಗಲಿದ್ದು, ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಆಗಸ್ಟ್ 29, 2024 ಆಗಿದೆ. ಅಭ್ಯರ್ಥಿಗಳು ಈ ದಿನಾಂಕಗಳನ್ನು ಬರೆದಿಟ್ಟುಕೊಳ್ಳಬೇಕು ಮತ್ತು ಅಪ್ಲಿಕೇಶನ್ ಲಿಂಕ್ ಸಕ್ರಿಯಗೊಳಿಸಿದ ಕೂಡಲೇ ಅರ್ಜಿ ಸಲ್ಲಿಸಬೇಕು. ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ ಆಗಸ್ಟ್ 29 ಆಗಿದೆ.

ಈ ವೆಬ್ ಸೈಟ್ ನಿಂದ ಅರ್ಜಿ ಸಲ್ಲಿಸಿ!

ಅರ್ಜಿ ಸಲ್ಲಿಸಲು, ಅಭ್ಯರ್ಥಿಗಳು ಆರ್‌ಆರ್ಬಿಯ ಅಧಿಕೃತ ವೆಬ್ ಸೈಟ್ ಹೋಗಬೇಕು, ಅದರ ವಿಳಾಸ – rrbapply.gov.in. ಫಾರ್ಮ್ ಅನ್ನು ಭರ್ತಿ ಮಾಡಬಹುದು. ಈ ಪೋಸ್ಟೈಳ ವಿವರಗಳು ಅಥವಾ ಇದರ ಬಗ್ಗೆ ಯಾವುದೇ ನವೀಕರಣಗಳನ್ನು ತಿಳಿಯಲು, ನೀವು ಆರ್‌ಆರ್ಬಿ ಮುಂಬೈನ ಅಧಿಕೃತ ವೆಬೈಟ್ಟೆ ಭೇಟಿ ನೀಡಬಹುದು, ಅದರ ವಿಳಾಸ – rrbmumbai.gov.in.

ಆಯ್ಕೆಯನ್ನು ಹೇಗೆ ಮಾಡಲಾಗುತ್ತದೆ?

ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಸಿಬಿಟಿ ಮೋಡ್ ಪರೀಕ್ಷೆ ಅಂದರೆ ಕಂಪ್ಯೂಟರ್ ಆಧಾರಿತ ಪರೀಕ್ಷೆಯ ಮೂಲಕ ಆಯ್ಕೆ ಮಾಡಲಾಗುತ್ತದೆ, ಅದರ ದಿನಾಂಕವನ್ನು ಇನ್ನೂ ನೀಡಲಾಗಿಲ್ಲ. ಯಶಸ್ವಿಯಾಗಿ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಪರೀಕ್ಷೆಯ ಪ್ರವೇಶ ಪತ್ರ ಬಿಡುಗಡೆಯ ದಿನಾಂಕ ಮತ್ತು ದಿನಾಂಕವನ್ನು ನಂತರ ತಿಳಿಸಲಾಗುವುದು. ನವೀಕರಣಗಳಿಗಾಗಿ ವೆಬೈಟ್ ಅನ್ನು ಪರಿಶೀಲಿಸುತ್ತಲೇ ಇರಿ.

ಎಷ್ಟು ಶುಲ್ಕ ವಿಧಿಸಲಾಗುತ್ತದೆ!

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 500 ರೂಪಾಯಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಇದು ಸಾಮಾನ್ಯ, ಒಬಿಸಿ ಮತ್ತು ಇಡಬ್ಲ್ಯೂಎಸ್ ವರ್ಗಗಳಿಗೆ ಅನ್ವಯಿಸುತ್ತದೆ. ಇದರಲ್ಲಿ 400 ರೂ.ಗಳನ್ನು ಸಿಬಿಟಿ ಸ್ಟೀಡ್ ಒನ್ ನಲ್ಲಿ ಕುಳಿತು ಮರುಪಾವತಿಸಲಾಗುತ್ತದೆ. ಮೀಸಲಾತಿ ವರ್ಗ ಮತ್ತು ಮಹಿಳಾ ಅಭ್ಯರ್ಥಿಗಳು ಮತ್ತು ಪಿಎಚ್‌ ವರ್ಗಕ್ಕೆ 250 ರೂ. ಇದನ್ನು ಸಂಪೂರ್ಣವಾಗಿ ಮರುಪಾವತಿಸಲಾಗುತ್ತದೆ. ಫಾರ್ಮ್ ಅನ್ನು ಸಂಪಾದಿಸಲು ಶುಲ್ಕ 250 ರೂ.

ಯಾರು ಅರ್ಜಿ ಸಲ್ಲಿಸಬಹುದು:

ಅರ್ಜಿ ಸಲ್ಲಿಸಲು, ಅಭ್ಯರ್ಥಿಯು ಸಂಬಂಧಿತ ಕ್ಷೇತ್ರದಲ್ಲಿ ಯಾವುದೇ ಎಂಜಿನಿಯರಿಂಗ್ ಪದವಿ ಅಥವಾ ಡಿಪ್ಲೊಮಾವನ್ನು ಹೊಂದಿರಬೇಕು, ಅಂದರೆ ಸಿವಿಲ್‌, ಮೆಕ್ಯಾನಿಕಲ್‌, ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್, ಟೆಲಿಕಮ್ಯುನಿಕೇಷನ್ ಇತ್ಯಾದಿ. ಕೆಲವು ಹುದ್ದೆಗಳಿಗೆ ಅರ್ಹತೆಯಲ್ಲಿ ವ್ಯತ್ಯಾಸವಿದೆ, ಅದನ್ನು ನೋಟಿಸ್‌ ನಿಂದ ಪರಿಶೀಲಿಸಬೇಕು. ವಯೋಮಿತಿ 18 ರಿಂದ 36 ವರ್ಷಗಳು.

Categories
ರಾಷ್ಟ್ರೀಯ ವಾರ್ತೆ

ಹೊಸ ಸರ್ಕಾರದ ಮೊದಲ ಕೇಂದ್ರ ಬಜೆಟ್!

ಹೊಸ ಸರ್ಕಾರದ ಮೊದಲ ಕೇಂದ್ರ ಬಜೆಟ್!

– ಪ್ರತಿ ತಿಂಗಳು 300 ಯುನಿಟ್ಗಳವರೆಗೆ ಉಚಿತ ವಿದ್ಯುತ್
– ಕ್ಯಾನ್ಸರ್ ಔಷಧಿಗೆ ಶುಲ್ಕ ವಿನಾಯಿತಿ
– – ಯಾವ ವಸ್ತು ದುಬಾರಿ, ಯಾವುದು ಅಗ್ಗ?

NAMMUR EXPRESS NEWS
ನವದೆಹಲಿ : ಸತತ 3ನೇ ಬಾರಿಗೆ ಅಧಿಕಾರಕ್ಕೆ ಬಂದಿರುವ ಎನ್ ಡಿಎ ಸರ್ಕಾರದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2024-25ನೇ ಹಣಕಾಸು ವರ್ಷದ ಕೇಂದ್ರ ಬಜೆಟ್ ಅನ್ನು ಮಂಡಿಸಿದ್ದಾರೆ. ಆ ಮೂಲಕ ಸೀತಾರಾಮನ್‌ ಅವರು ಸತತ 7ನೇ ಬಾರಿಗೆ ಬಜೆಟ್ ಮಂಡಿಸಿದ್ದಾರೆ. ಇದು ಮೋದಿ 3.0 ಸರ್ಕಾರದ ಮೊದಲ ಬಜೆಟ್.

ಪ್ರತಿ ತಿಂಗಳು 300 ಯುನಿಟ್ಗಳವರೆಗೆ ಉಚಿತ ವಿದ್ಯುತ್

ಕೃಷಿ ಮತ್ತು ಸಂಬಂಧಿತ ಕ್ಷೇತ್ರಗಳಿಗೆ 1.52 ಲಕ್ಷ ಕೋಟಿ ರೂ.ಗಳನ್ನು ಹಂಚಿಕೆ ಮಾಡಲಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಉಚಿತ ಸೌರ ವಿದ್ಯುತ್ ಯೋಜನೆಯ ಬಗ್ಗೆ ಮಾತನಾಡಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, “1 ಕೋಟಿ ಕುಟುಂಬಗಳಿಗೆ ಪ್ರತಿ ತಿಂಗಳು 300 ಯುನಿಟ್ಗಳವರೆಗೆ ಉಚಿತ ವಿದ್ಯುತ್‌ ಪಡೆಯಲು ಅನುವು ಮಾಡಿಕೊಡಲು ಮೇಲ್ಪಾವಣಿ ಸೌರ ಫಲಕಗಳನ್ನು ಸ್ಥಾಪಿಸಲು ಪಿಎಂ ಸೂರ್ಯಘರ್ ಮುಫ್ಟ್ ಬಿಜ್ಜಿ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಈ ಯೋಜನೆಯು ಅದನ್ನು ಮತ್ತಷ್ಟು ಉತ್ತೇಜಿಸುತ್ತದೆ ಅಂತ ಅವರು ಇದೇ ವೇಳೆ ತಿಳಿಸಿದರು.ವೀಕ್ಷಿತ್ ಭಾರತ್ 2047 ವಿಷನ್‌ಗೆ ಅನುಗುಣವಾಗಿ ಆರ್ಥಿಕತೆಯ ವಿವಿಧ ವಿಭಾಗಗಳಲ್ಲಿನ ಉಪಕ್ರಮಗಳಿಗೆ ಉತ್ತೇಜನ ನೀಡುವ ನಿರೀಕ್ಷೆಯಿದೆ.

ಸ್ಟ್ಯಾಂಡರ್ಡ್ ಡಿಡಕ್ಷನ್
ಸಂಬಳ ಪಡೆಯುವ ತೆರಿಗೆದಾರರಿಗೆ ಸ್ಟ್ಯಾಂಡರ್ಡ್ ಡಿಡಕ್ಷನ್ ಅನ್ನು 75 ಸಾವಿರಕ್ಕೆ ಹೆಚ್ಚಿಸಲಾಗಿದೆ.

ಕ್ಯಾನ್ಸರ್ ಔಷಧಿಗೆ ಶುಲ್ಕ ವಿನಾಯಿತಿ

ಆಮದು ಸುಂಕ ಎಂದರೆ ಆಮದು ಸುಂಕವು ಒಂದು ದೇಶದ ಕಸ್ಟಮ್ಸ್ ಅಧಿಕಾರಿಗಳು ಆಮದು ಮಾಡಿಕೊಳ್ಳುವ ಉತ್ಪನ್ನಗಳು ಅಥವಾ ಸೇವೆಗಳ ಮೇಲೆ ವಿಧಿಸುವ ಶುಲ್ಕವಾಗಿದೆ. 3 ಕ್ಯಾನ್ಸ‌ರ್ ಔಷಧಗಳಿಗೆ ಆಮದು ಸುಂಕಕ್ಕೆ ಸಂಪೂರ್ಣ ವಿನಾಯಿತಿ ನೀಡಲಾಗುತ್ತದೆ.

ಯಾವುದು ಅಗ್ಗ:

ಕ್ಯಾನ್ಸ‌ರ್ ಔಷಧ
ಪೆಟ್ರೋಲ್ ದರ 2 ರೂ. ಇಳಿಕೆ
ಮೊಬೈಲ್‌ ಫೋನ್
ಆಮದು ಚಿನ್ನ
ಆಮದು ಬೆಳ್ಳಿ
ಚರ್ಮದ ವಸ್ತು
ಸೀ ಫುಡ್
ವಿದ್ಯುತ್‌ ತಂತಿ
ಎಕ್ಸರೇ ಮೆಷಿನ್
ಸೋಲಾ‌ರ್ ಪ್ಯಾನಲ್

ಯಾವುದು ದುಬಾರಿ:

ವಿದ್ಯುತ್‌ ಉಪಕರಣ
ಪ್ಲಾಸ್ಟಿಕ್
ಬಟ್ಟೆ
ಮೊಬೈಲ್‌ ಟವ‌ರ್

Categories
ರಾಷ್ಟ್ರೀಯ ವಾರ್ತೆ

ದೇಶದಲ್ಲಿ ಮತ್ತೆ ಬಿ.ಎಸ್.ಎನ್.ಎಲ್ ಹವಾ?

ದೇಶದಲ್ಲಿ ಮತ್ತೆ ಬಿ.ಎಸ್.ಎನ್.ಎಲ್ ಹವಾ?

– ಒಂದೇ ದಿನಕ್ಕೆ 1 ಲಕ್ಷ ಸಿಮ್ ಬಿ.ಎಸ್.ಎನ್.ಎಲ್ ಪೋರ್ಟ್
– ಕಡಿಮೆ ಬೆಲೆಗೆ ಹೊಸ ರಿಚಾರ್ಜ್ ಪ್ಲಾನ್!
– ಮೊಬೈಲ್ ಕರೆ ದರ ಏರಿಕೆ ವಿರುದ್ಧ ಸಿಟ್ಟು

NAMMUR EXPRESS NEWS

ನವದೆಹಲಿ: ದೇಶದಲ್ಲಿ ಮತ್ತೆ ಬಿ.ಎಸ್.ಎನ್.ಎಲ್ ಹವಾ ಮತ್ತೆ ಶುರುವಾಗಿದೆ. ಒಂದೇ ದಿನಕ್ಕೆ 1 ಲಕ್ಷ ಸಿಮ್ ಬಿ.ಎಸ್.ಎನ್.ಎಲ್ ಕಡೆಗೆ ಪೋರ್ಟ್ ಆಗಿರುವ ಬಗ್ಗೆ ವರದಿ ಆಗಿದೆ. ಈ ನಡುವೆ ಕಡಿಮೆ ಬೆಲೆಗೆ ಹೊಸ ರಿಚಾರ್ಜ್ ಪ್ಲಾನ್ ಅನ್ನು ಬಿ.ಎಸ್.ಎನ್.ಎಲ್ ಘೋಷಣೆ ಮಾಡಿದೆ.

ಇತ್ತ ಮೊಬೈಲ್ ಕರೆ ದರ ಏರಿಕೆ ವಿರುದ್ಧ ಗ್ರಾಹಕರು ಸಿಟ್ಟಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಜಿಯೋ ಬಾಯ್ಕಟ್ ಅಭಿಯಾನ ಆರಂಭವಾಗಿದ್ದು, ಬಿಎಸ್‌ಎನ್‌ಎಲ್‌ ಘರ್ ವಾಪಸಿ ಅಂತ ಬರೆದುಕೊಂಡಿದ್ದಾರೆ. ಯಾವಾಗ ಅಭಿಯಾನ ಆರಂಭವಾಯ್ತೋ ಎಚ್ಚೆತ್ತುಕೊಂಡ ಬಿಎಸ್‌ಎನ್‌ಎಲ್‌ ಟ್ವೀಟ್ ಮಾಡಿ ತನ್ನ ಹೊಸ ಆಫರ್ ಘೋಷಿಸಿದೆ. ಇದರ ಜೊತೆಗೆ ಅಮರನಾಥ ಯಾತ್ರಿಕರಿಗೆ ವಿಶೇಷವಾಗಿ 196 ರೂಗಳಿಗೆ ಹೊಸ ಸಿಮ್ ನೀಡುವ ಘೋಷಣೆ ಮಾಡಿದೆ.

ಪ್ರಮುಖ ಟೆಲಿಕಾಂ ಆಪರೇಟರ್‌ಗಳಾದ Jio, Airtel ಮತ್ತು Vi ತಮ್ಮ ರೀಚಾರ್ಜ್ ಯೋಜನೆಗಳ ಬೆಲೆಗಳನ್ನು ಸರಾಸರಿ 15 ಪ್ರತಿಶತದಷ್ಟು ಹೆಚ್ಚಿಸಿವೆ. ಹೊಸ ದರಗಳು ಜಾರಿಗೆ ಬಂದಿರುವುದಕ್ಕೆ ದೇಶದಲ್ಲಿ ಸರ್ಕಾರಿ ಸ್ವಾಮ್ಯದ BSNL (ಭಾರತ್ ಸಂಚಾರ್ ನಿಗಮ್ ಲಿಮಿಟೆಡ್) ಗೆ ಹಿಂತಿರುಗಲು ಅಭಿಯಾನ ಆರಂಭವಾಗಿದೆ. ಅಭಿಯಾನದ ಭಾಗವಾಗಿ ಒಂದೇ ದಿನಕ್ಕೆ ಲಕ್ಷಕ್ಕೂ ಹೆಚ್ಚು ಮಂದಿ ಬಿಎಸ್‌ಎನ್‌ಎಲ್‌ಗೆ ತಮ್ಮ ಸಿಮ್‌ ಅನ್ನು ಪೋರ್ಟ್ ಮಾಡಿಕೊಂಡಿದ್ದಾರೆ. ಅದರಲ್ಲೂ ಹೆಚ್ಚಿನ ಮಂದಿ ರಿಲಾಯನ್ಸ್‌ ಜಿಯೋನಿಂದ ಬಿಎಸ್‌ಎನ್‌ಎಲ್‌ಗೆ ಬಂದಿದ್ದಾರೆ ಅನ್ನುವುದು ವಿಶೇಷ.

ಸದ್ಯ BSNL ನೆಟ್‌ವರ್ಕ್ 4G ನೆಟ್‌ವರ್ಕ್‌ಗಳಿಗೆ ಸೀಮಿತವಾಗಿದೆ. ಆದರೆ ಪ್ರತಿಸ್ಪರ್ಧಿಗಳು 5G ನೆಟ್‌ವರ್ಕ್‌ಗಳಿಗೆ ಸ್ಥಳಾಂತರಗೊಂಡಿದ್ದಾರೆ. ನಿಧಾನವಾಗಿ 5G ನೆಟ್‌ವರ್ಕ್‌ಗೆ ಬಿಎಸ್‌ಎನ್‌ಎಲ್‌ ಸ್ಥಳಾತರಗೊಳ್ಳಲು ಕೂಡ ಯೋಚಿಸುತ್ತಿದೆ. ಇದೆಲ್ಲದರ ನಡುವೆ ಬಿಎಸ್‌ಎನ್‌ಎಲ್ 199 ರೂ ಪ್ಯಾಕ್ ನ ಆಫರ್ ನೀಡಿದ್ದು, 30 ದಿನದ ವ್ಯಾಲಿಡಿಟಿಗೆ ಒಟ್ಟು 60 GB ಡೇಟಾ ದಿನಕ್ಕೆ 2 GB, 100 ಮೆಸೇಜ್, ಅನಿಯಮಿತ ಕರೆ ನೀಡುತ್ತಿದೆ.

ಮೊಬೈಲ್ ರೀಚಾರ್ಜ್ ದರ ಏರಿಕೆ: ಆಕ್ರೋಶ

ಮೂರು ಖಾಸಗಿ ಮೊಬೈಲ್ ಆಪರೇಟರ್ ಕಂಪನಿಗಳು ತಮ್ಮ ಟ್ಯಾರೀಫ್ ನಲ್ಲಿ ಭಾರೀ ಏರಿಕೆ ಮಾಡಿರುವುದಕ್ಕೆ ವಿರೋಧ ಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ. ನರೇಂದ್ರ ಮೋದಿ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿರುವ ವಿಪಕ್ಷಗಳು, ಯಾವುದೇ ಮೇಲ್ವಿಚಾರಣೆ ಮತ್ತು ನಿಯಂತ್ರಣವಿಲ್ಲದೆ ವಾರ್ಷಿಕವಾಗಿ ಬರೋಬ್ಬರಿ 34,824 ಕೋಟಿ ರೂ. ಶುಲ್ಕವನ್ನು ಹೆಚ್ಚಿಸಲಾಗಿದೆ ಎಂದು ತಿಳಿಸಿದ್ದಾರೆ.

ರಿಲಯನ್ಸ್ ಜಿಯೋ, ಏರ್ಟೆಲ್ ಮತ್ತು ವೊಡಾಫೋನ್ ಐಡಿಯಾ ಒಟ್ಟಾರೆಯಾಗಿ ಸರಾಸರಿ 15 ಪ್ರತಿಶತದಷ್ಟು ಸುಂಕವನ್ನು ಹೆಚ್ಚಿಸಿವೆ. ಹೆಚ್ಚಳವು 109 ಕೋಟಿ ಚಂದಾದಾರರ ಮೇಲೆ ಗಣನೀಯ ಪರಿಣಾಮ ಬೀರಲಿದ್ದು, ಅವರಿಗೆ ದೊಡ್ಡ ಆರ್ಥಿಕ ಹೊರೆಯಾಗಲಿದೆ.ಸಿಪಿಐ(ಎಂ) ಬೆಂಬಲಿತ ಸಿಐಟಿಯು ಕೂಡ ಕಳವಳ ವ್ಯಕ್ತಪಡಿಸಿದ್ದು, ಈ ದರ ಹೆಚ್ಚಳವು ನ್ಯಾಯಸಮ್ಮತವಲ್ಲ ಮತ್ತು ಸಾಮಾನ್ಯ ಜನರಿಗೆ ಅಸಮಾನವಾಗಿ ಹೊರೆಯಾಗುತ್ತದೆ ಎಂದು ಹೇಳಿದ್ದಾರೆ.
ರಿಲಯನ್ಸ್ ಜಿಯೊದ ದರ ಹೆಚ್ಚಳವು ಸರಾಸರಿ 20 ಪ್ರತಿಶತದಷ್ಟಿದೆ ಇದರಿಂದ ಪ್ರತಿ ಗ್ರಾಹಕನಿಗೆ ಮಾಸಿಕ ರೂ 30.51 ಗೆ ಹೆಚ್ಚುವರಿ ಹೊರೆ ಬೀಳಲಿದೆ. ಇದರಿಂದಾಗಿ ತಿಂಗಳಿಗೆ ಹೆಚ್ಚುವರಿ ರೂ. 1,464 ಕೋಟಿ ಅಥವಾ ಅದರ 48 ಕೋಟಿ ಚಂದಾದಾರರಿಂದ ವಾರ್ಷಿಕವಾಗಿ ರೂ 17,568 ಕೋಟಿಗಳನ್ನುಈ ಖಾಸಗಿ ಕಂಪನಿಗಳು ಉತ್ಪಾದಿಸುತ್ತದೆ ಎಂದು ಸುರ್ಜೆವಾಲ ಹೇಳಿದರು.

39 ಕೋಟಿ ಚಂದಾದಾರರನ್ನು ಹೊಂದಿರುವ ಏರ್ಟೆಲ್ ಶೇಕಡಾ 15 ರಷ್ಟು ದರ ಹೆಚ್ಚಳ ಮಾಡಿದೆ. ಇದರ ಪರಿಣಾಮವಾಗಿ ತಿಂಗಳಿಗೆ ಹೆಚ್ಚುವರಿ 892 ಕೋಟಿ ಅಥವಾ ವಾರ್ಷಿಕವಾಗಿ 10,704 ಕೋಟಿ ರೂ. ಅದೇ ರೀತಿ, ವೊಡಾಫೋನ್ ಐಡಿಯಾ ನ 16 ಪ್ರತಿಶತ ಹೆಚ್ಚಳವು ಅದರ 22.37 ಕೋಟಿ ಬಳಕೆದಾರರಿಂದ ಮಾಸಿಕ 546 ಕೋಟಿ ರೂಪಾಯಿ ಅಥವಾ ವಾರ್ಷಿಕ 6,552 ಕೋಟಿ ರೂಪಾಯಿಗಳನ್ನು ಹೆಚ್ಚುವರಿಯಾಗಿ ಸಿಗಲಿದೆ.

Categories
ಪ್ರಶಸ್ತಿ ರಾಷ್ಟ್ರೀಯ ವಾರ್ತೆ

ಭಾರತಕ್ಕೆ ಚಿನ್ನ ಗೆದ್ದ ಕಾರ್ಕಳದ ಹುಡುಗಿ!

ಭಾರತಕ್ಕೆ ಚಿನ್ನ ಗೆದ್ದ ಕಾರ್ಕಳದ ಹುಡುಗಿ!

– ಕಾರ್ಕಳದ ಅಕ್ಷತಾ ಪೂಜಾರಿ ಬೋಳ ಪವರ್‌ ಲಿಫ್ಟಿಂಗ್‌ನಲ್ಲಿ ಸಾಧನೆ
– 52 ಕೆಜಿ ಪವರ್‌ ಲಿಫ್ಟಿಂಗ್‌ನಲ್ಲಿ ಸ್ಪರ್ಧಿಸಿದ್ದ ಅಕ್ಷತಾ ಪೂಜಾರಿ

NAMMUR EXPRESS NEWS

ಕಾರ್ಕಳ: ಕಾರ್ಕಳದ ಅಕ್ಷತಾ ಪೂಜಾರಿ ಬೋಳ ಪವರ್‌ ಲಿಫ್ಟಿಂಗ್‌ನಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಪದಕ ಗಳಿಸುವ ಮೂಲಕ ಸಾಧನೆ ಮಾಡಿದ್ದಾರೆ.

ದಕ್ಷಿಣ ಆಫ್ರಿಕಾದ ಪೊಟೆಶೆಫಮ್‌ನಲ್ಲಿ ನಡೆದ ಏಷ್ಯಾ-ಪೆಸಿಫಿಕ್‌ ಆಫ್ರಿಕನ್‌ ಪವರ್‌ ಲಿಫ್ಟಿಂಗ್‌ ಮತ್ತು ಬೆಂಚ್‌ಪ್ರೆಸ್‌ ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಿರುವ ಕಾರ್ಕಳದ ಅಕ್ಷತಾ ಪೂಜಾರಿ ಬೋಳ ಅವರು ಚಿನ್ನದ ಪದಕ ಗೆದ್ದುಕೊಂಡಿದ್ದಾರೆ.

ಸೀನಿಯಸ್‌ ವಿಭಾಗದಲ್ಲಿ 52 ಕೆಜಿ ಪವರ್‌ ಲಿಫ್ಟಿಂಗ್‌ನಲ್ಲಿ ಸ್ಪರ್ಧಿಸಿದ್ದ ಅಕ್ಷತಾ ಪೂಜಾರಿ ಈ ಸಾಧನೆ ಮಾಡಿದ್ದಾರೆ.ಅಕ್ಷತಾ ಅವರು ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಬೋಳ ಗ್ರಾಮದವರು. ಪವರ್‌ ಲಿಫ್ಟಿಂಗ್‌ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿರುವ ಅಕ್ಷತಾ ಪೂಜಾರಿ ಅವರು ಹಲವಾರು ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದು ದೇಶಕ್ಕೆ ಕೀರ್ತಿ ತಂದಿದ್ದಾರೆ. ಅವರ ಈ ಸಾಧನೆಗೆ ಈಗಾಗಲೇ ಏಕಲವ್ಯ ಪ್ರಶಸ್ತಿ ಕೂಡ ಲಭಿಸಿದೆ.

Categories
ರಾಷ್ಟ್ರೀಯ ವಾರ್ತೆ

ಜು. 23ರಂದು ಹೊಸ ಸರ್ಕಾರದ ಮೊದಲ ಬಜೆಟ್

ಜು. 23ರಂದು ಹೊಸ ಸರ್ಕಾರದ ಮೊದಲ ಬಜೆಟ್

– ಸಾಮಾನ್ಯ ಜನರಿಗೆ ಏನಿದೆ ನಿರೀಕ್ಷೆ?
– ನಿರ್ಮಲಾ ಸೀತಾರಾಮ್ ಅವರಿಗೆ ದಾಖಲೆ ಬಜೆಟ್

NAMMUR EXPRESS NEWS

ನವದೆಹಲಿ: ದೇಶದ ಜನರಿಗೆ ಸಿಹಿ ಸುದ್ದಿ ನೀಡುವ ನಿರೀಕ್ಷೆ ಇರುವ ಕೇಂದ್ರ ಬಜೆಟ್‌ಗೆ ದಿನಾಂಕ ನಿಗದಿಯಾಗಿದೆ. ಜುಲೈ 22ರಿಂದ ಆಗಸ್ಟ್‌ 12ರವರೆಗೆ ಬಜೆಟ್‌ ಅಧಿವೇಶನ ನಡೆಯಲಿದ್ದು, ಜುಲೈ 23ರಂದು ನಿರ್ಮಲಾ ಸೀತಾರಾಮನ್‌ ಅವರು ದಾಖಲೆಯ ಏಳನೇ ಬಾರಿಗೆ ಬಜೆಟ್‌ ಮಂಡಿಸಲಿದ್ದಾರೆ.

ಬಜೆಟ್‌ನಲ್ಲಿ ತೆರಿಗೆ ವಿನಾಯಿತಿ, ಬಡ-ಮಧ್ಯಮ ವರ್ಗದವರಿಗೆ ಹಲವು ರೀತಿಯಲ್ಲಿ ಅನುಕೂಲವಾಗುವ ಯೋಜನೆಗಳ ಘೋಷಣೆ ಕುರಿತು ನಿರೀಕ್ಷೆ ಹೆಚ್ಚಾಗಿದೆ. ಕೇಂದ್ರ ಸಚಿವ ಕಿರಣ್‌ ರಿಜಿಜು ಅವರು ಬಜೆಟ್‌ ಅಧಿವೇಶನದ ಕುರಿತು ಮಾಹಿತಿ ನೀಡಿದ್ದಾರೆ. “ಜುಲೈ 22ರಿಂದ ಆಗಸ್ಟ್‌ 12ರವರೆಗೆ ಬಜೆಟ್‌ ಅಧಿವೇಶನ ನಡೆಯಲಿದೆ. ಜುಲೈ 23ರಂದು ಬಜೆಟ್‌ ಮಂಡಿಸಲಾಗುತ್ತದೆ” ಎಂಬುದಾಗಿ ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದಾರೆ. ಇದು ಎನ್‌ಡಿಎ ಸರ್ಕಾರದ ಮೂರನೇ ಅವಧಿಯ ಮೊದಲ ಮುಂಗಡಪತ್ರವಾಗಿದೆ.

ಏನೆಲ್ಲ ಇವೆ ನಿರೀಕ್ಷೆ?

“ಬಜೆಟ್‌ನಲ್ಲಿ ಕೇಂದ್ರ ಸರ್ಕಾರವು ಹೊಸ ತೆರಿಗೆ ಸ್ಲ್ಯಾಬ್‌ ಘೋಷಣೆ ಮಾಡುತ್ತದೆ. ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು 5 ಲಕ್ಷ ರೂ.ಗೆ ಏರಿಸುವ ಜತೆಗೆ, 15 ಲಕ್ಷ ರೂ.ಗಿಂತ ಹೆಚ್ಚಿನ ಆದಾಯ ಗಳಿಸುವವರಿಗೆ ಹಲವು ರೀತಿಯ ಡಿಡಕ್ಷನ್‌ಗಳ ಮೂಲಕ ತೆರಿಗೆ ಹೊರೆಯನ್ನು ಕಡಿಮೆ ಮಾಡಿಕೊಳ್ಳಬಹುದಾಗಿದೆ” ಎಂದು ಉನ್ನತ ಮೂಲಗಳು ತಿಳಿಸಿವೆ. ಅಷ್ಟೇ ಅಲ್ಲ, 15 ಲಕ್ಷ ರೂ.ಗಿಂತ ಹೆಚ್ಚಿನ ಆದಾಯ ಇರುವವರಿಗೆ ಈಗ ಇರುವ ಶೇ.30ರ ತೆರಿಗೆ ಬದಲು ಶೇ.25ರಷ್ಟು ತೆರಿಗೆ ವಿಧಿಸಲಾಗುತ್ತದೆ. ಇದು ಕೂಡ ಹೊಸ ಸ್ಲ್ಯಾಬ್‌ನಲ್ಲಿ ಇರಲಿದೆ ಎಂದು ಹೇಳಲಾಗುತ್ತಿದೆ.

ನಿರ್ಮಲಾ ಸೀತಾರಾಮನ್‌ ಅವರು ಫೆಬ್ರವರಿ 1ರಂದು ನರೇಂದ್ರ ಮೋದಿ ನೇತೃತ್ವದ ಎರಡನೇ ಅವಧಿಯ ಕೊನೆಯ ಬಜೆಟ್‌ ಮಂಡಿಸಿದ್ದರು. ಇದು ಮಧ್ಯಂತರ ಬಜೆಟ್‌ ಆದ ಕಾರಣ ಮಹತ್ವದ ಘೋಷಣೆಗಳನ್ನು ಮಾಡಿರಲಿಲ್ಲ. ಆದರೆ, ನೂತನ ಸರ್ಕಾರ ರಚನೆಯಾಗಿದ್ದು, ಪೂರ್ಣ ಪ್ರಮಾಣದ ಬಜೆಟ್‌ ಮಂಡಿಸಲಾಗುತ್ತದೆ. ಉದ್ಯೋಗ ಸೃಷ್ಟಿ, ಬಡವರು ಹಾಗೂ ಮಧ್ಯಮ ವರ್ಗದವರಿಗೆ ಕೊಡುಗೆ, ತೆರಿಗೆ ಹೊರೆ ಇಳಿಸುವುದು ಸೇರಿ ಹಲವು ಅಂಶಗಳು ಮೂರನೇ ಅವಧಿಯ ಸರ್ಕಾರದ ಮೊದಲ ಬಜೆಟ್‌ನ ಪ್ರಮುಖ ಅಂಶಗಳಾಗಿವೆ ಎಂದು ತಿಳಿದುಬಂದಿದೆ.

– ಹೊಸ ದಾಖಲೆ ಬರೆಯಲಿದ್ದಾರೆ ನಿರ್ಮಲಾ

ನಿರ್ಮಲಾ ಸೀತಾರಾಮನ್‌ ಅವರು ಇದೇ ತಿಂಗಳು ಪೂರ್ಣಪ್ರಮಾಣದ ಬಜೆಟ್‌ ಮಂಡಿಸಿದರೆ ಹೊಸ ದಾಖಲೆ ಬರೆಯಲಿದ್ದಾರೆ. ಇದುವರೆಗೆ ನಿರ್ಮಲಾ ಸೀತಾರಾಮನ್‌ ಅವರು ಹಣಕಾಸು ಸಚಿವೆಯಾಗಿ ಐದು ಪೂರ್ಣ ಪ್ರಮಾಣದ ಹಾಗೂ ಒಂದು ಮಧ್ಯಂತರ ಬಜೆಟ್‌ ಮಂಡಿಸಿದ್ದಾರೆ. ಈಗ ಏಳನೇ ಬಾರಿಗೆ ಬಜೆಟ್‌ ಮಂಡಿಸಿದರೆ, ದೇಶದ ಇತಿಹಾಸದಲ್ಲಿಯೇ ಅತಿ ಹೆಚ್ಚು ಬಾರಿ ಬಜೆಟ್‌ ಮಂಡಿಸಿದ ಖ್ಯಾತಿಗೆ ಭಾಜನರಾಗಲಿದ್ದಾರೆ. ಮೊರಾರ್ಜಿ ದೇಸಾಯಿ ಅವರು ಆರು ಬಾರಿ ಬಜೆಟ್‌ ಮಂಡಿಸಿದ ದಾಖಲೆ ಮಾಡಿದ್ದಾರೆ. ಇದನ್ನು ನಿರ್ಮಲಾ ಸೀತಾರಾಮನ್‌ ಅವರು ಮುರಿಯಲಿದ್ದಾರೆ.

Categories
ರಾಷ್ಟ್ರೀಯ ವಾರ್ತೆ

ಟಾಪ್ ನ್ಯೂಸ್

ಟಾಪ್ ನ್ಯೂಸ್

ಅಡ್ವಾಣಿ ಆರೋಗ್ಯದಲ್ಲಿ ಮತ್ತೆ ಏರುಪೇರು!
– ದೆಹಲಿಯಲ್ಲಿರುವ ಅಪೋಲೊ ಆಸ್ಪತ್ರೆಗೆ ದಾಖಲು
– ಕೆರೆಗೆ ಹಾರಿ ಯುವ ಪ್ರೇಮಿಗಳು ಆತ್ಮಹತ್ಯೆ
– ದರ್ಶನ್ ನ್ಯಾಯಾಂಗ ಬಂಧನ ಇಂದಿಗೆ ಅಂತ್ಯ

NAMMUR EXPRESS NEWS

ಉಡುಪಿ: ನವದೆಹಲಿ: ಮಾಜಿ ಉಪ ಪ್ರಧಾನಿ, ಬಿಜೆಪಿ ಹಿರಿಯ ನಾಯಕ ಎಲ್‌.ಕೆ.ಅಡ್ವಾಣಿ ಅವರ ಆರೋಗ್ಯದಲ್ಲಿ ಮತ್ತೆ ಏರುಪೇರು ಉಂಟಾಗಿದ್ದು, ದೆಹಲಿಯಲ್ಲಿರುವ ಅಪೋಲೊ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪೋಲೊ ಆಸ್ಪತ್ರೆಯ ವೈದ್ಯರು ಎಲ್‌.ಕೆ.ಅಡ್ವಾಣಿ ಅವರಿಗೆ ಚಿಕಿತ್ಸೆ ನೀಡುತ್ತಿದ್ದು, ಹೆಚ್ಚಿನ ನಿಗಾ ವಹಿಸಿದ್ದಾರೆ. ಆಸ್ಪತ್ರೆಯ ಮೂಲಗಳ ಪ್ರಕಾರ ಮಾಜಿ ಉಪ ಪ್ರಧಾನಿಯ ಆರೋಗ್ಯವು ಸ್ಥಿರವಾಗಿದೆ. ಯಾವುದೇ ಸಮಸ್ಯೆ ಇಲ್ಲ ಎಂದು ತಿಳಿದುಬಂದಿದೆ. ಬುಧವಾರ (ಜುಲೈ 3) ರಾತ್ರಿ 9 ಗಂಟೆ ಸುಮಾರಿಗೆ ಎಲ್‌.ಕೆ.ಅಡ್ವಾಣಿ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ. ಇದಾದ ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. 96 ವರ್ಷದ ಎಲ್‌.ಕೆ.ಅಡ್ವಾಣಿ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದಾರೆ. ಜೂನ್‌ 27ರಂದು ಕೂಡ ಅಡ್ವಾಣಿ ಅವರ ಆರೋಗ್ಯದಲ್ಲಿ ಏರುಪೇರು ಆಗಿತ್ತು. ಹಾಗಾಗಿ ಅವರನ್ನು ಅದೇ ರಾತ್ರಿ ದೆಹಲಿಯಲ್ಲಿರುವ ಏಮ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದಾದ ಕೆಲವೇ ಗಂಟೆಗಳಲ್ಲಿ ಅವರನ್ನು ಡಿಸ್‌ಚಾರ್ಜ್‌ ಮಾಡಲಾಗಿತ್ತು.

– ಕೆರೆಗೆ ಹಾರಿ ಯುವ ಪ್ರೇಮಿಗಳು ಆತ್ಮಹತ್ಯೆ

ಉಡುಪಿ: ಬೆಂಗಳೂರಿನ ಹೊರವಲಯದ ನೈಸ್ ರಸ್ತೆ ಸಮೀಪದ ಕೆರೆಗೆ ಹಾರಿ ಯುವ ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.ಕಾಲೇಜು ವಿದ್ಯಾರ್ಥಿನಿ ಅಂಜನಾ(20) ಮತ್ತು ಶ್ರೀಕಾಂತ್(25) ಸಾವನ್ನಪ್ಪಿರುವ ದುರ್ದೈವಿಗಳಾಗಿದ್ದಾರೆ. ಜುಲೈ 1ರಂದು ಪ್ರೇಮಿಗಳು ನಾಪತ್ತೆಯಾಗಿದ್ದರು. ಕಳೆದ ಕೆಲ ವರ್ಷಗಳಿಂದ ಇಬ್ಬರು ಪರಸ್ಪರ ಪ್ರೀತಿಸ್ತಿದ್ದರು. ಆದರೆ ಯುವಜೋಡಿಯ ಪ್ರೀತಿಗೆ ವಿದ್ಯಾರ್ಥಿನಿ ಪೋಷಕರಿಂದ ವಿರೋಧ ವ್ಯಕ್ತವಾಗಿತ್ತು. ವಿದ್ಯಾರ್ಥಿನಿ ತಲಘಟ್ಟಪುರ ಸಮೀಪದ ಅಂಜನಾಪುರ ಬಳಿ ವಾಸವಿದ್ದಳು. ಯುವಕ ಶ್ರೀಕಾಂತ್ ಕೋಣನಕುಂಟೆ ನಿವಾಸಿಯಾಗಿದ್ದ. ಇಬ್ಬರೂ ನಾಪತ್ತೆಯಾಗಿದ್ದರು. ನಾಪತ್ತೆ ಹಿನ್ನಲೆ ಎರಡೂ ಕಡೆಯವರ ಪೋಷಕರು ಕೋಣನಕುಂಟೆ ಮತ್ತು ತಲಘಟ್ಟಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಇದೀಗ ಇಬ್ಬರೂ ಶವವಾಗಿ ಪತ್ತೆಯಾಗಿದ್ದಾರೆ. ನಮ್ಮ ಸಾವಿಗೆ ನಾವೇ ಕಾರಣ ಎಂದು ಡೆತ್ ನೋಟ್ ಬರೆದಿಟ್ಟು ಜೋಡಿ ಆತ್ಮಹತ್ಯೆ ಮಾಡಿಕೊಂಡಿದೆ.

ಉಡುಪಿ: ಶ್ರೀಕಾಂತ್ ಗೆ ಬೇರೊಬ್ಬರ ಜೊತೆಗೆ ವಿವಾಹವಾಗಿದೆ. ಆದರೂ ಅಂಜನಾಳನ್ನ ಪ್ರೀತಿ ಮಾಡ್ತಿದ್ದ. ಇಬ್ಬರು ಒಟ್ಟಿಗೆ ಬದುಕಲು ಅವಕಾಶ ಇಲ್ಲ ಎಂದು ಸಾಯೋ ನಿರ್ಧಾರ ಮಾಡಿದ್ದಾರೆ. ಮೊದಲು ಶ್ರೀಕಾಂತ್ ಮೃತದೇಹ ಕೆರೆಯಲ್ಲಿ ಕಾಣಿಸಿದೆ. ಆತನನ್ನ ಮೇಲೆತ್ತಿದ್ದ ನಂತರ ಅಂಜನಾ ಮೃತದೇಹ ಕೂಡ ಮೇಲೆ ಬಂದಿದೆ. ಅಂಜನಾ ಮೃತದೇಹದ ಬಗ್ಗೆ ಪೊಲೀಸರಿಗೂ ಮಾಹಿತಿ ಇರುವುದಿಲ್ಲ. ಇಬ್ಬರು ಕೈಗೆ ಹಗ್ಗ ಕಟ್ಟಿಕೊಂಡಿದ್ದರಿಂದ ಇಬ್ಬರ ಮೃತದೇಹ ಒಟ್ಟಿಗೆ ಸಿಕ್ಕಿದೆ. ಮೊಬೈಲ್ ನಲ್ಲಿ ವೀಡಿಯೊ ಮಾಡಿರುವ ಯುವತಿ ಅಂಜನಾ ಅದನ್ನ ಆಟೋದಲ್ಲಿ ಬಿಟ್ಟು ಶ್ರೀಕಾಂತ್ ಜೊತೆಗೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ನಮ್ಮ ಸಾವಿಗೆ ಯಾರು ಕಾರಣ ಅಲ್ಲ. ನಾವಿಬ್ಬರು ಒಟ್ಟಿಗೆ ಬದುಕಲು ಆಗಲ್ಲ. ಹಾಗಾಗಿ ಸಾಯ್ತಿದ್ದೇವೆ ಎಂದು ವಿಡಿಯೋ ಮಾಡಿದ್ದಾಳೆ. ಮೊಬೈಲ್ ವಶಕ್ಕೆ ಪಡೆದುಕೊಂಡಿರೊ ತಲಘಟ್ಟಪುರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ದರ್ಶನ್ ನ್ಯಾಯಾಂಗ ಬಂಧನ ಇಂದಿಗೆ ಅಂತ್ಯ..!

ಉಡುಪಿ: ಬೆಂಗಳೂರು: ನಟ ದರ್ಶನ್ ಮತ್ತು ಗ್ಯಾಂಗ್‌ ಗೆ ವಿಧಿಸಿದ್ದ 14 ದಿನಗಳ ನ್ಯಾಯಾಂಗ ಬಂಧನ ಅಂತ್ಯಗೊಳ್ಳಲಿದೆ. ಹೀಗಾಗಿ ವಿಡಿಯೋ ಕಾನ್ಸರೆನ್ಸ್ ಮೂಲಕ ದರ್ಶನ್ ಹಾಗೂ ಇತರೆ ಆರೋಪಿಗಳನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಿಕ್ಕೆ ಸಿದ್ಧತೆ ಮಾಡಲಾಗಿದೆ. ಜೂನ್ 11 ರಂದು ರೇಣುಕಾಸ್ವಾಮಿ ಕೊಲೆ ಕೇಸ್ ಸಂಬಂಧ ದರ್ಶನ್​ರನ್ನು ಅರೆಸ್ಟ್ ಮಾಡಲಾಗಿತ್ತು. ಜೂನ್ 22 ರಂದು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿತ್ತು. ಇಂದು 14 ದಿನಗಳ ನ್ಯಾಯಾಂಗ ಬಂಧನ ಅವಧಿ ಮುಕ್ತಾಯ ಹಿನ್ನಲೆ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರು ಪಡಿಸಲಿಕ್ಕೆ ಸಿದ್ದತೆ ಮಾಡಲಾಗಿದೆ.

ಕಣ್ಣುಕುಕ್ಕುವ ಎಲ್‌ಇಡಿ ಲೈಟ್ ವಿರುದ್ಧ ಕಾರ್ಯಾಚರಣೆ

ಉಡುಪಿ: ಬೆಂಗಳೂರು: ಕಣ್ಣುಕುಕ್ಕುವ ಎಲ್‌ಇಡಿ ಲೈಟ್ ವಿರುದ್ಧ ಕಾರ್ಯಾಚರಣೆ ಶುರು ಮಾಡಿರುವ ಪೊಲೀಸರು ಕರ್ನಾಟಕದಾದ್ಯಂತ 1500ಕ್ಕೂ ಹೆಚ್ಚು ಪ್ರಕರಣ ದಾಖಲು ಮಾಡಿದ್ದಾರೆ. ಈ ಬಗ್ಗೆ ಹೆಚ್ಚುವರಿ ಪೊಲೀಸ್‌ ಮಹಾ ನಿರ್ದೇಶಕ (ಸಂಚಾರ ಮತ್ತು ರಸ್ತೆ ಸುರಕ್ಷತಾ ವಿಭಾಗ) ತಿಳಿಸಿದ್ದಾರೆ.

ಉಡುಪಿ: ತೀಕ್ಷ್ಯ ಬೆಳಕು ಸೂಸುವಂಥ ಎಲ್‌ಇಡಿ ಲೈಟ್‌ಗಳನ್ನು ಅಳವಡಿಸಿದ ಅತಿಹೆಚ್ಚು ಪ್ರಕರಣಗಳು ಬೆಂಗಳೂರಿನಲ್ಲಿ ವರದಿಯಾಗಿವೆ. ನಗರದಲ್ಲಿ 686 ಕೇಸ್ ದಾಖಲಿಸಲಾಗಿದೆ. ನಂತರದ ಸ್ಥಾನಗಳಲ್ಲಿ ಮಂಗಳೂರು ನಗರ (96) ಹಾಗೂ ರಾಯಚೂರು (93) ಇವೆ. ಕೊಪ್ಪಳ, ಕೆಜಿಎಫ್‌, ಕೋಲಾರ, ಚಿಕ್ಕಬಳ್ಳಾಪುರಗಳಲ್ಲಿ ಒಂದೇ ಒಂದು ಪ್ರಕರಣವೂ ದಾಖಲಾಗಿಲ್ಲ.ಬಿಸಿ ಮುಟ್ಟಿಸಲು ಶುರುಮಾಡಿದ್ದೇವೆ. ಕೇಂದ್ರ ಮೋಟಾರು ವಾಹನ ಕಾಯ್ದೆ ಉಲ್ಲಂಘಿಸಿ ತೀಕ್ಷ್ಯ ಬೆಳಕು ಸೂಸುವ ಎಲ್‌ಇಡಿ ಲೈಟ್ ಅಳವಡಿಸಿದ ಸಂಬಂಧ 1518 ಪ್ರಕರಣಗಳನ್ನು ದಾಖಲಿಸಲಾಗಿದೆ. ಕ್ರಮ ಕೈಗೊಂಡ ಅಧಿಕಾರಿಗಳಿಗೆ, ಸಿಬ್ಬಂದಿಗೆ ವಂದನೆಗಳು ಎಂದು ಅಲೋಕ್ ಕುಮಾರ್ ಎಕ್ಸ್ ಸಂದೇಶದಲ್ಲಿ ತಿಳಿಸಿದ್ದಾರೆ.