ಶೃಂಗೇರಿಯಲ್ಲಿ 41ನೇ ವರ್ಷದ ಜೆಸಿಐ ಸಪ್ತಾಹ -2025 ಆಯೋಜನೆ
* ಜೆಸಿಐ ಶೃಂಗೇರಿ ಘಟಕದ ವತಿಯಿಂದ ಕಾರ್ಯಕ್ರಮ
* ಸಾಮ್ರಾಟ್ ಜೆಸಿಐ ಸಪ್ತಾಹ -2025 ಶೀರ್ಷಿಕೆಯಡಿಯಲ್ಲಿ ಕಾರ್ಯಕ್ರಮ
NAMMMUR EXPRESS NEWS
ಶೃಂಗೇರಿ: ಜೆಸಿಐ ಶೃಂಗೇರಿ ಘಟಕದ ವತಿಯಿಂದ ಶೃಂಗೇರಿಯಲ್ಲಿ 41ನೇ ವರ್ಷದ ವರ್ಷದ ಜೆಸಿಐ ಸಪ್ತಾಹ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಈ ಸಂಬಂಧ ಶೃಂಗೇರಿ ಜೆಸಿಐ ಘಟಕದ ಅಧ್ಯಕ್ಷರಾದ ಹೆಚ್ಜಿಎಫ್ ಅಶೋಕ್ ವಿ ಎಸ್ ಅಧ್ಯಕ್ಷತೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಕಾರ್ಯಕ್ರಮದ ಆಹ್ವಾನ ಪತ್ರಿಕೆ ಬಿಡುಗಡೆಗೊಳಿಸಲಾಯಿತು.
ಕಾರ್ಯಕ್ರಮದ ಮಾಹಿತಿ ನೀಡಿದ ಹೆಚ್ಜಿಎಫ್ ಅಶೋಕ್ ಈ ಬಾರಿ ಸಾಮ್ರಾಟ್ ಜೆಸಿಐ ಸಪ್ತಾಹ -2025 ಎಂಬ ಶೀರ್ಷಿಕೆಯಡಿಯಲ್ಲಿ ನಡೆಯುವ ಕಾರ್ಯಕ್ರಮವು ಸೆ.9 ರಿಂದ ಸೆ.15 ರವರೆಗೆ ಏಳು ದಿನಕಾಲ ತಾಲೂಕಿನ ಭಾರತೀ ಬೀದಿಯಲ್ಲಿನ ಜಿ ಎಸ್ ಬಿ ಸಭಾ ಭವನದಲ್ಲಿ ನಡೆಯಲಿದ್ದು, ಪ್ರತಿದಿನವೂ ಸಾರ್ವಜನಿಕರಿಗೆ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿದೆ ಎಂದು ತಿಳಿಸಿ ಕಾರ್ಯಕ್ರಮದ ಮಾಹಿತಿ ನೀಡಿದರು.
* ಮಾದರಿ ಹೆಜ್ಜೆಯತ್ತ ಶೃಂಗೇರಿ ಜೆಸಿಐ ಘಟಕ-2025
40 ವರ್ಷಗಳಿಂದ ತಾಲೂಕಿನಲ್ಲಿ ಜೆಸಿಐ ಸಪ್ತಾಹ ಕಾರ್ಯಕ್ರಮದ ಜೊತೆಗೆ ಹಲವು ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದ ಜೆಸಿಐ ಶೃಂಗೇರಿ ಘಟಕ ತನ್ನ 41 ನೇ ವರ್ಷದ ಕಾರ್ಯಕ್ರಮದಲ್ಲಿ ಮತ್ತೊಂದು ಮಾದರಿ ಹೆಜ್ಜೆಯನ್ನಿಡುತ್ತಿದೆ. ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅಶೋಕ್ ಈ ಬಾರಿ ತಾಲೂಕಿನ 9 ಗ್ರಾ ಪಂ, ಒಂದು ಟೌನ್ ಪಂಚಾಯ್ತಿ ಸೇರಿದಂತೆ ತಾಲೂಕು ಸರ್ಕಾರಿ ಆಸ್ಪತ್ರೆ,ಮೆಸ್ಕಾಂ ಕಛೇರಿಯಲ್ಲಿ ಕಾರ್ಯನಿರ್ವಹಿಸುವ ಪೌರಕಾರ್ಮಿಕರು,ಸ್ವಚ್ಛತಾ ಸಿಬ್ಬಂದಿ ಸೇರಿದಂತೆ ಸುಮಾರು 250 ಜನರಿಗೆ “ಸೆಲ್ಯುಟ್ ದಿ ಸೈಲೆಂಟ್ ವರ್ಕರ್ಸ್” ಎಂಬ ಶೀರ್ಷಿಕೆಯಡಿಯಲ್ಲಿ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದಾಗಿ ತಿಳಿಸಿದರು.
* ಯಾವತ್ತು,ಏನು ಕಾರ್ಯಕ್ರಮ ಇಲ್ಲಿದೆ ಮಾಹಿತಿ
ಸೆ.9 ರಿಂದ ಸೆ.15 ರವರೆಗೆ ನಡೆಯುವ ಕಾರ್ಯಕ್ರಮದಲ್ಲಿ ಪ್ರತಿ ದಿನ ಸಾರ್ವಜನಿಕರಾಗಿ ವಿಶೇಷ ಕಾರ್ಯಕ್ರಮವನ್ನು ಶೃಂಗೇರಿ ಜೆಸಿಐ ಘಟಕ ಹಮ್ಮಿಕೊಂಡಿದೆ. ಅದರಂತೆ,
* ಸೆ.9 ರಂದು
1. (ಛದ್ಮವೇಷ ಸ್ಪರ್ಧೆ) ರಾಧಾ-ಕೃಷ್ಣ ವೇಷ : ಶಿಶುವಿಹಾರ ಮತ್ತು 1ನೇ ತರಗತಿ ಮಕ್ಕಳಿಗೆ
2. (ಛದ್ಮವೇಷ ಸ್ಪರ್ಧೆ) ರಾಧಾ-ಕೃಷ್ಣ ವೇಷ : 2ರಿಂದ 4ನೇ ತರಗತಿ ಮಕ್ಕಳಿಗೆ
3. ರಂಗೋಲಿ ಸ್ಪರ್ಧೆ (ಚುಕ್ಕಿ ರಂಗೋಲಿ) : ಸಾರ್ವಜನಿಕರಿಗೆ
4. ಶ್ಯಾವಿಗೆ ತಿನ್ನುವುದು : ಸಾರ್ವಜನಿಕರಿಗೆ (ಮೊದಲು ಹೆಸರು ನೊಂದಾಯಿಸಿದ 15 ಜನರಿಗೆ)
* ಸೆ.10 ರಂದು
1. (ಛದ್ಮವೇಷ ಸ್ಪರ್ಧೆ)ಗ್ರಾಮೀಣ ಪ್ರದೇಶದ ಜನರ ವೇಷಭೂಷಣ : ಶಿಶುವಿಹಾರ ಮತ್ತು 1ನೇ ತರಗತಿ ಮಕ್ಕಳಿಗೆ
2. (ಛದ್ಮವೇಷ ಸ್ಪರ್ಧೆ)ವಧುವರರ ವೇಷಭೂಷಣ : 2 ರಿಂದ 4 ನೇ ತರಗತಿ ಮಕ್ಕಳಿಗೆ
3. ಕವನ ವಾಚನ (ಕನ್ನಡ ಕವಿಗಳ ಕವನ) :5 ರಿಂದ 7 ನೇ ತರಗತಿ ಮಕ್ಕಳಿಗೆ
4. ಸಿನಿಮಾ ನೃತ್ಯ (ಸೋಲೋ): 8 ರಿಂದ 10 ನೇ ತರಗತಿ ಮಕ್ಕಳಿಗೆ
5. ಸಿನಿಮಾ ನೃತ್ಯ (ಗ್ರೂಪ್) : ಕಾಲೇಜು ವಿಭಾಗ
6. ತೋಲ್ಮೋಲ್ ಕೆ ಬೋಲ್ : ಸಾರ್ವಜನಿಕರಿಗೆ
7. ಸ್ಥಳದಲ್ಲೇ ಹೂದಾನಿ ತಯಾರಿಕೆ : ಸಾರ್ವಜನಿಕರಿಗೆ
* ಸೆ.11 ರಂದು
1. (ಛದ್ಮವೇಷ ಸ್ಪರ್ಧೆ)ರಾಮಾಯಣ ಪಾತ್ರಗಳ ವೇಷಭೂಣ : ಶಿಶುವಿಹಾರ ಹಾಗೂ 1ನೇ ತರಗತಿ ಮಕ್ಕಳಿಗೆ
2. ಸ್ಥಳದಲ್ಲೇ ಚಿತ್ರಕ್ಕೆ ಬಣ್ಣ ಹಚ್ಚುವುದು : 2 ರಿಂದ 4 ನೇ ತರಗತಿ ಮಕ್ಕಳಿಗೆ
3. ಸಮೂಹ ನೃತ್ಯ (3 ರಿಂದ 8 ಜನರ ತಂಡ) : 5 ರಿಂದ 7 ನೇ ತರಗತಿ ಮಕ್ಕಳಿಗೆ
4. ಪ್ರಬಂಧ ಬರೆಯುವುದು(ವಿಷಯ ಸ್ಥಳದಲ್ಲೇ ನೀಡಲಾಗುವುದು) : 8 ರಿಂದ 10 ನೇ ತರಗತಿ ಮಕ್ಕಳಿಗೆ
5. ಕವನ ರಚನೆ : ಕಾಲೇಜು ವಿಭಾಗ
6. ಇಡ್ಲಿ ತಿನ್ನುವ ಸ್ಪರ್ಧೆ (ಮೊದಲು ಹೆಸರು ನೊಂದಾಯಿಸಿದ 15 ಜನರಿಗೆ): ಸಾರ್ವಜನಿಕರಿಗೆ
* ಸೆ.12 ರಂದು
1. (ಛದ್ಮವೇಷ ಸ್ಪರ್ಧೆ)ರಾಷ್ಟ್ರೀಯ ನಾಯಕರ ವೇಷಭೂಷಣ : ಶಿಶುವಿಹಾರ ಮತ್ತು 1 ನೇ ತರಗತಿ ಮಕ್ಕಳಿಗೆ
2. (ಛದ್ಮವೇಷ ಸ್ಪರ್ಧೆ)ವಿವಿಧ ರಾಜ್ಯಗಳ ವೇಷಭೂಷಣ : 2 ರಿಂದ 4 ನೇ ತರಗತಿ ಮಕ್ಕಳಿಗೆ
3. ಪದಬಂಧ : 5 ರಿಂದ 7 ನೇ ತರಗತಿ ಮಕ್ಕಳಿಗೆ
4. ಆಶುಭಾಷಣ : 8 ರಿಂದ 10 ನೇ ತರಗತಿ ಮಕ್ಕಳಿಗೆ
5. ಸಿನಿಮಾ ನೃತ್ಯ(ಸೋಲೋ) : ಕಾಲೇಜು ವಿದ್ಯಾರ್ಥಿಗಳಿಗೆ
6. ಫ್ಯಾಷನ್ ಶೋ : ಸಾರ್ವಜನಿಕರಿಗೆ ( ಮಹಿಳೆ ಮತ್ತು ಪುರುಷರಿಗೆ ಪ್ರತ್ಯೇಕ)
* ಸೆ.13 ರಂದು
1. (ಛದ್ಮವೇಷ ಸ್ಪರ್ಧೆ)ಮಹಾಭಾರತದ ವೇಷಭೂಷಣ: ಶಿಶುವಿಹಾರ ಮತ್ತು 1 ನೇ ತರಗತಿ ಮಕ್ಕಳಿಗೆ
2. ಬೇಳೆಕಾಳುಗಳನ್ನು ಗುರುತಿಸುವುದು :2 ರಿಂದ 4 ನೇ ತರಗತಿ ಮಕ್ಕಳಿಗೆ
3. ಪೇಪರ್ ಕ್ರಾಫ್ಟ್ (ಸ್ಪರ್ಧಿಗಳೇ ಪರಿಕರಗಳನ್ನು ತರುವುದು): 5 ರಿಂದ 7 ನೇ ತರಗತಿ ಮಕ್ಕಳಿಗೆ
4. ಜನಪದ ನೃತ್ಯ (ಗ್ರೂಪ್) (3 ರಿಂದ 8 ಜನರ ತಂಡ): 8 ರಿಂದ 10 ನೇ ತರಗತಿ ಮಕ್ಕಳಿಗೆ
5. ಭಾವಗೀತೆ (ಸೊಲೊ): ಕಾಲೇಜು ವಿದ್ಯಾರ್ಥಿಗಳಿಗೆ
6. ತೋಲ್ಮೋಲ್ ಕೆ ಬೋಲ್ : ಸಾರ್ವಜನಿಕರಿಗೆ
* ಸೆ.14 ರಂದು
ಬೆಳಿಗ್ಗೆ 9:30 ರಿಂದ ಸರ್ಕಾರಿ ಪದವಿಪೂರ್ವ ಕಾಲೇಜು ಕ್ರೀಡಾಂಗಣದಲ್ಲಿ
1. 3 ಚಕ್ರದ ಸೈಕಲ್ ರೇಸ್: ಶಿಶುವಿಹಾರದ ಮಕ್ಕಳಿಗೆ
2. ಕಪ್ಪೆ ಓಟ : 1 ಮತ್ತು 2 ನೇ ತರಗತಿ ಮಕ್ಕಳಿಗೆ
3. ಸ್ಕಿಪ್ಪಿಂಗ್ :3 ರಿಂದ 4 ನೇ ತರಗತಿ ಮಕ್ಕಳಿಗೆ
4. ವಿಕೆಟ್ಗೆ ಬಾಲ್ ಎಸೆಯುವುದು : 5 ರಿಂದ 7 ನೇ ತರಗತಿ ವಿದ್ಯಾರ್ಥಿಗಳಿಗೆ
5. ಸ್ಲೋ ಸೈಕಲ್ ರೇಸ್: 8 ರಿಂದ 10 ನೇ ತರಗತಿ ವಿದ್ಯಾರ್ಥಿಗಳಿಗೆ
6. ಹಗ್ಗ ಜಗ್ಗಾಟ (6 ಜನರ ತಂಡ): ಸಾರ್ವಜನಿಕರಿಗೆ (ಮಹಿಳೆ ಮತ್ತು ಪುರುಷರಿಗೆ ಪ್ರತ್ಯೇಕ)
7. ಸ್ಟೋ ಬೈಕ್ ರೇಸ್: ಸಾರ್ವಜನಿಕರಿಗೆ (ಮಹಿಳೆ ಮತ್ತು ಪುರುಷರಿಗೆ ಪ್ರತ್ಯೇಕ)
8. ಆಟೋ ರಿವರ್ಸ್ ರೇಸ್: ಸಾರ್ವಜನಿಕರಿಗೆ
* ಸಂಜೆ 5:30 ರಿಂದ
1. (ಛದ್ಮವೇಷ ಸ್ಪರ್ಧೆ)ಶಾರದೆ ವೇಷಭೂಷಣ : ಶಿಶುವಿಹಾರ ಮತ್ತು 1 ನೇ ತರಗತಿ ಮಕ್ಕಳಿಗೆ
2. ನಾಣ್ಯ ಎಣಿಸುವುದು : 2 ರಿಂದ 4 ನೇ ತರಗತಿ ಮಕ್ಕಳಿಗೆ
3. ಜ್ಞಾಪಕ ಶಕ್ತಿ : 5 ರಿಂದ 7 ನೇ ತರಗತಿ ವಿದ್ಯಾರ್ಥಿಗಳಿಗೆ
4. ರಸಪ್ರಶ್ನೆ (2 ಜನರ ತಂಡ): 8 ರಿಂದ 10 ನೇ ತರಗತಿ ಮಕ್ಕಳಿಗೆ
5. ಜನಪದ ಗೀತೆ ಗಾಯನ(ಗ್ರೂಪ್) : ಕಾಲೇಜು ವಿದ್ಯಾರ್ಥಿಗಳಿಗೆ ( 3 ರಿಂದ 8 ಜನರ ತಂಡ)
6. ಮಂಡಕ್ಕಿ ತಿನ್ನುವುದು : ಸಾರ್ವಜನಿಕರಿಗೆ
* ಸೆ.15 ರಂದು
ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮ
ಸಂಜೆ 5:30 ರಿಂದ ಅಪ್ಸರ ಮ್ಯೂಸಿಕ್ ಶೃಂಗೇರಿ ಅರ್ಪಿಸುವ, ಸರಿಗಮಪ ಖ್ಯಾತಿಯ ಕಲಾವಿದರಿಂದ “ವಿ ಎಸ್ ಎ ರಿದಂ ಲೈವ್ ಆರ್ಕೆಸ್ಟ್ರಾ” ಕಾರ್ಯಕ್ರಮವಿರಲಿದೆ.
ಸೆ.11 ರ ಗುರುವಾರ ಬೆಳಿಗ್ಗೆ 9:30 ರಿಂದ 12 ರವರೆಗೆ ವೆರಿಕೋಸ್ ಮುಕ್ತ ಶೃಂಗೇರಿ ಶೀರ್ಷಿಕೆಯಡಿ ಡಾ. ಎಂ ವಿ ಉರಾಳ್ರವರಿಂದ ಮಾಹಿತಿ ಹಾಗೂ ಉಚಿತ ತಪಾಸಣಾ ಶಿಬಿರ ನಡೆಯಲಿದೆ.
ಸೆ.14 ರ ಭಾನುವಾರ ಬೆಳಿಗ್ಗೆ 7 ಗಂಟೆಗೆ ಶೃಂಗೇರಿ ಶ್ರೀಮಠದ ಮುಂಭಾಗದಿಂದ ತಾಲೂಕಿನ ದೊಡ್ಡಹೊನ್ನೆ ಗಣಪತಿ ದೇವಸ್ಥಾನದ ವರೆಗೆ ಮ್ಯಾರಥಾನ್ ನಡೆಯಲಿದೆ. ಇದನ್ನು ಶೃಂಗೇರಿ ಶ್ರೀಮಠದ ಆಡಳಿತಾಧಿಕಾರಿಗಳಾದ ಶ್ರೀ ಪಿ.ಮುರುಳಿಯವರು ಉದ್ಘಾಟಿಸಲಿದ್ದಾರೆ.
ಈ ಎಲ್ಲಾ ಕಾರ್ಯಕ್ರಮಗಳಲ್ಲಿ ತಾಲೂಕಿನ ಎಲ್ಲಾ ಸಾರ್ವಜನಿಕರು ಭಾಗವಹಿಸಿ,ಆಯೋಜಿಸಿದ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಈ ಏಳು ದಿನಗಳ ಸಂಭ್ರಮದ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಜೆಸಿಐ ಶೃಂಗೇರಿ ಘಟಕ ಎಲ್ಲರನ್ನೂ ಸ್ವಾಗತಿಸಿದೆ.
