ತೀರ್ಥಹಳ್ಳಿ ಗಾಯತ್ರಿ ಜ್ಯುವೆಲ್ಲರ್ಸ್ ಅಲ್ಲಿ ಶಿಕ್ಷಕರಿಗೆ ನಮನ
– ತಾಲೂಕಲ್ಲಿ ಪ್ರಶಸ್ತಿ ಪುರಸ್ಕೃತ ಶಿಕ್ಷಕರಿಗೆ ಸನ್ಮಾನದ ಗೌರವ
– ಶಿಕ್ಷಕರ ಕುಟುಂಬದ ಜತೆಗೆ ಶಿಕ್ಷಕರ ದಿನಾಚರಣೆ ಸಂಭ್ರಮ
NAMMUR EXPRESS NEWS
ತೀರ್ಥಹಳ್ಳಿ: ಮಲೆನಾಡಿನ ಪ್ರತಿಷ್ಠಿತ ಜ್ಯುವೆಲ್ಲರಿ ತೀರ್ಥಹಳ್ಳಿಯ ಗಾಯತ್ರಿ ಜ್ಯುವೆಲ್ಲರ್ಸ್ ಅಲ್ಲಿ ಶಿಕ್ಷಕರ ದಿನಾಚರಣೆಯ ಅಂಗವಾಗಿ ಶಿಕ್ಷಕರಿಗೆ ನಮನ ಕಾರ್ಯಕ್ರಮ ನಡೆಯಿತು. ತಾಲೂಕು ಪ್ರಶಸ್ತಿ ಪುರಸ್ಕೃತ ಪ್ರಾಥಮಿಕ ಹಾಗೂ ಪ್ರೌಢ ಶಾಲೆ ಶಿಕ್ಷಕರಿಗೆ ಸನ್ಮಾನದ ಗೌರವ ನೀಡಲಾಯಿತು.ಶಿಕ್ಷಕರ ಕುಟುಂಬದ ಜತೆಗೆ ಶಿಕ್ಷಕರ ದಿನಾಚರಣೆ ಆಚರಣೆ ಮಾಡಿದ್ದು ವಿಶೇಷ ಎನ್ನಿಸಿತು.
ಸನ್ಮಾನ ಸ್ವೀಕರಿಸಿದ ಶಿಕ್ಷಕರು ಕಾರ್ಯಕ್ರಮದ ಉದ್ದೇಶಿಸಿ ಮಾತನಾಡಿ, ಶಿಕ್ಷಕರ ಸೇವೆಗೆ ಖಾಸಗಿ ಸಂಸ್ಥೆ ಗೌರವ ನೀಡಿದ್ದು ಖುಷಿ ಆಗಿದೆ. ಇದು ಒಂದು ಮಾದರಿ ಕಾರ್ಯಕ್ರಮ ಎಂದು ತಮ್ಮ ಮನದಾಳದ ಮಾತುಗಳನ್ನು ಮುಕ್ತವಾಗಿ ಹಂಚಿಕೊಂಡರು.
ಗಾಯತ್ರಿ ಜ್ಯುವೆಲ್ಲರ್ಸ್ ಮಾಲೀಕರಾದ ಅನಂತ ಪದ್ಮನಾಭ ಆಚಾರ್ಯ ಮಾತನಾಡಿ, ಇನ್ನು ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಶಿಕ್ಷಕರನ್ನು ಗುರುತಿಸುವ ಹಾಗೂ ಸನ್ಮಾನಿಸುವ ಪ್ರಯತ್ನ ಮಾಡುತ್ತೇವೆ. ಶಿಕ್ಷಕರನ್ನು ಗೌರವಿಸಿರುವುದು ನಮ್ಮ ಸಂಸ್ಥೆಗೆ ಹೆಮ್ಮೆ ಎಂದರು. ಬಿ.ಇ.ಓ ಗಣೇಶ್ ಸೇರಿ ಸಂಸ್ಥೆಯ ಸಿಬ್ಬಂದಿ ಹಾಜರಿದ್ದರು.
ಶಿಕ್ಷಣ ಸೇವಕರಿಗೆ ಸನ್ಮಾನದ ಗೌರವ
ಶ್ರೀ ವೀರೇಶ್, ಸರ್ಕಾರಿ ಪ್ರೌಢಶಾಲೆ ಮಂಡಗದ್ದೆ, ಶ್ರೀಮತಿ ಜ್ಯೋತಿ ಮರಿಯಾ(ಇಂಗ್ಲಿಷ್) ಸರ್ಕಾರಿ ಪ್ರೌಢಶಾಲೆ ಕುಡುಮಲ್ಲಿಗೆ, ಶ್ರೀಮತಿ ಮಂಗಳ ಬಿ ಗೌಡ್ರು (ಹಿಂದಿ), ಸರ್ಕಾರಿ ಪ್ರೌಢಶಾಲೆ ಕೊಂಡ್ಲೂರು, ಶ್ರೀ ರಂಗಪ್ಪ (ಗಣಿತ), ಸರ್ಕಾರಿ ಪ್ರೌಢಶಾಲೆ ಕಟ್ಟೆ ಹಕ್ಲು, ಶ್ರೀಮತಿ ನಿಶಾಕಾನಿಟ್ಕರ್,ಸರ್ಕಾರಿ ಪದವಿ ಪೂರ್ವ ಕಾಲೇಜು (ಪ್ರೌ.ಶಾ.ವಿ) ಮಾಳೂರು, ಶ್ರೀ ಪ್ರಶಾಂತ ಕೆ.ಆರ್ ಸರ್ಕಾರಿ ಪ್ರೌಢಶಾಲೆ ಕೋಡ್ಲು, ಶ್ರೀ ರಂಗನಾಥ ರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪತ್ರಕಟ್ಟೆ ಶ್ರೀಮತಿ ಹೇಮಾವತಿಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅರಗ, ಶ್ರೀಮತಿ ಪ್ರೇಮಾ ಖಾಸನೀಸ್, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬೇಗುವಳ್ಳಿ, ಶ್ರೀಮತಿ ಶಿಲ್ಪ ಎನ್ ಎಸ್, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹೊನ್ನೇತಾಳು(ಕೆಂದಾಳುಬೈಲು), ಶ್ರೀ ಆನಂದ ಕುಮಾರ್ ಎನ್. ಆರ್, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ತೀರ್ಥಹಳ್ಳಿ ಬಿ. ಇ. ಓ ಗಣೇಶ್, ಜಿಲ್ಲಾ ವಿಶೇಷ ಶಿಕ್ಷಕ ಪ್ರಶಸ್ತಿ ಪಡೆದ ಅರವಿಂದ್ ಅವರನ್ನು ಗೌರವಿಸಲಾಯಿತು.
