Categories
ಚಿಕ್ಕಮಗಳೂರು

ಎನ್.ಆರ್.ಪುರದ ಮುತ್ತಿನಕೊಪ್ಪದಲ್ಲಿ ಆನೆ ದಾಳಿಗೆ ರೈತ ಬಲಿ!

ಎನ್.ಆರ್.ಪುರದ ಮುತ್ತಿನಕೊಪ್ಪದಲ್ಲಿ ಆನೆ ದಾಳಿಗೆ ರೈತ ಬಲಿ!
– ಒಂದು ತಿಂಗಳ ಅಂತರದಲ್ಲಿ ಇಬ್ಬರು ಕಾಡು ಆನೆ ದಾಳಿಯಿಂದ ಸಾವು
– ಮಲೆನಾಡಲ್ಲೂ ಹೆಚ್ಚಾಯ್ತು ಕಾಡು ಪ್ರಾಣಿಗಳ ಅಟ್ಟಹಾಸ

NAMMUR EXPRESS NEWS
ಚಿಕ್ಕಮಗಳೂರು: ಕಾಡಾನೆ ದಾಳಿಗೆ ಕಾಫಿ ನಾಡಲ್ಲಿ ಮತ್ತೊಂದು ಬಲಿಯಾಗಿದೆ. ಇದೀಗ ಅರಣ್ಯ ಅಧಿಕಾರಿಗಳ ವಿರುದ್ದ ಭಾರೀ ಆಕ್ರೋಶ ಕೇಳಿ ಬಂದಿದೆ.
ಎನ್.ಆರ್.ಪುರ ತಾಲೂಕಿನ ಮುತ್ತಿನಕೊಪ್ಪ ಗ್ರಾಮ ಪಂಚಾಯತಿ ವ್ಯಾಪ್ತಿಯ ಯಕ್ಕಡಬೈಲು ಗ್ರಾಮದ ಎಲಿಯಾಸ್‌ (60) ಎಂಬ ರೈತ ಕಾಡು ಆನೆ ದಾಳಿಗೆ ಸಿಲುಕಿ ಮೃತಪಟ್ಟಿದ್ದಾನೆ. ಕೊಪ್ಪ ತಾಲೂಕಿನ ಸೀತೂರು ಗ್ರಾಮ ಪಂಚಾಯಿತಿ ಹಿಂಭಾಗ ಕೆರೆಗದ್ದೆ ನಿವಾಸಿ ಉಮೇಶ್ ಎಂಬುವವರು ನ. 30ರಂದು ಕಾಡಾನೆ ದಾಳಿಗೆ ಬಲಿ ಆಗಿದ್ದರು.
ಇನ್ನು ಅಚ್ಚರಿ ಎಂದರೆ ಮನೆಯ ಹಿಂಭಾಗದ ಕಾಡಿಗೆ ಎಲಿಯಾಸ್ ಹಾಗೂ ಮಗ ವರ್ಗೀಸ್ ತೆರಳಿದ್ದ ವೇಳೆ ಏಕಾಏಕಿ ಕಾಡಾನೆ ದಾಳಿ ಮಾಡಿದೆ. ಇದರಿಂದ ಎಲಿಯಾಸ್ ಕಾಡಾನೆ ದಾಳಿಗೆ ಬಲಿಯಾಗಿದ್ದು, ಎಲಿಯಾಸ್ ಮಗ ವರ್ಗೀಸ್ ಕಾಡಾನೆ ದಾಳಿಯಿಂದ ಪಾರಾಗಿದ್ದಾನೆ. ಕೊಪ್ಪ ತಾಲೂಕಿನ ತಾಲೂಕಿನ ಸೀತೂರು ಗ್ರಾಮದ ಕೆರೆಗದ್ದೆ ಎಂಬಲ್ಲಿ ಉಮೇಶ್ (56) ಕಾಡು ಆನೆ ದಾಳಿಗೆ ಬಲಿಯಾಗಿದ್ದರು. ಸೀತೂರು ಗ್ರಾಮಕ್ಕೆ ಮೂರು ಕಾಡಾನೆಗಳು ಬಂದಿದ್ದು, ಹೊಲ-ಗದ್ದೆ-ತೋಟಗಳ ಮೇಲೆ ದಾಂಧಲೆ ಮಾಡುತ್ತಿದ್ದವು. ಆನೆ ಹಾವಳಿಯಿಂದ ಕಂಗಾಲದ ರೈತರು ಆನೆಗಳನ್ನ ಓಡಿಸಲು ಹೋದಾಗ ಈ ದುರ್ಘಟನೆ ಸಂಭವಿಸಿತ್ತು

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.