Categories
ಚಿಕ್ಕಮಗಳೂರು

ಜನಪರ ನೇತಾರ ಹೆಚ್.ಟಿ ರಾಜೇಂದ್ರರವರಿಗೆ ನುಡಿನಮನ

ಜನಪರ ನೇತಾರ ಹೆಚ್.ಟಿ ರಾಜೇಂದ್ರರವರಿಗೆ ನುಡಿನಮನ

* ಆ.16 ರಂದು ಕೊಪ್ಪದಲ್ಲಿ ಕ್ಷೇತ್ರ ಮಟ್ಟದ ಕಾರ್ಯಕ್ರಮ
* ಕನ್ನಡ ಸಾಹಿತ್ಯ ಪರಿಷತ್ ಕೊಪ್ಪ ಸೇರಿದಂತೆ ಹಲವು ಸಂಸ್ಥೆಗಳಿಂದ ಕಾರ್ಯಕ್ರಮ ಆಯೋಜನೆ

NAMMMUR EXPRESS NEWS
ಶೃಂಗೇರಿ: ಕನ್ನಡ ಸಾಹಿತ್ಯ ಪರಿಷತ್ತು ಕೊಪ್ಪ,ಮಲೆನಾಡು ಕರಾವಳಿ ಜನಪರ ಒಕ್ಕೂಟ ಬೆಂಗಳೂರು,ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ಚಿಕ್ಕಮಗಳೂರು ಜಿಲ್ಲೆ,ನಾವಿಕ ಟ್ರಸ್ಟ್ ಕೊಪ್ಪ ಮತ್ತು ವರ್ತಕ ಸಂಘ ಕೊಪ್ಪ ಇವರ ವತಿಯಿಂದ ಮಲೆನಾಡಿನ ಹಿರಿಯ ಮುತ್ಸದ್ಧಿ,ಜನಪರ ನೇತಾರ,ಶಿಕ್ಷಣ ಪ್ರೇಮಿ ಹೆಚ್.ಟಿ ರಾಜೇಂದ್ರ‌ರವರಿಗೆ ನುಡಿನಮನ ಕಾರ್ಯಕ್ರಮವನ್ನು ಆಗಸ್ಟ್ 16 ರಂದು ಎಮ್ ಎಸ್ ದ್ಯಾವೇಗೌಡ ಸ್ಮಾರಕ ಒಕ್ಕಲಿಗರ ಸಮುದಾಯ ಭವನ ಬಾಳಗಡಿ,ಕೊಪ್ಪದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ನುಡಿ ನಮನ ಸಮಿತಿ ಅಧ್ಯಕ್ಷ ಹೆಚ್.ಜಿ ವೆಂಕಟೇಶ್ ತಿಳಿಸಿದರು.
ಅಗಲಿದ ಸ್ನೇಹ ಜೀವಿ,ಜನಪರ ಕಾಳಜಿ ಹೊಂದಿದ ಹಿರಿಯ ಮುತ್ಸದ್ಧಿಗೆ ನಮನ ಸಲ್ಲಿಸುವುದು ಎಲ್ಲರ ಕರ್ತವ್ಯ ಕೂಡ ಈ ನಿಟ್ಟಿನಲ್ಲಿ ಕೊಪ್ಪದಲ್ಲಿ ಹಮ್ಮಿಕೊಂಡಿರುವ ಕ್ಷೇತ್ರ ಮಟ್ಟದ ನುಡಿನಮನ ಕಾರ್ಯಕ್ರಮಕ್ಕೆ ಎಲ್ಲರೂ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿಬೇಕಾಗಿ ವಿನಂತಿಸಿದರು. ಇದೇ ಸಂದರ್ಭದಲ್ಲಿ ಕೊಪ್ಪದ ರಾಜೇಂದ್ರ ಅಭಿಮಾನಿಗಳಿಂದ ದತ್ತು ನಿಧಿ ಘೋಷಣೆ ಮಾಡಲಾಗುತ್ತದೆ ಎಂಬ ಮಾಹಿತಿ ನೀಡಿದರು.
ಹೆಚ್ ಟಿ ರಾಜೇಂದ್ರ ಅಭಿಮಾನಿಗಳಾದ ಭರತ್ ಗಿಣಕಲ್‌ ಶೃಂಗೇರಿಯಲ್ಲೂ ರಾಜೇಂದ್ರರವರ ಸ್ಮರಣಾರ್ಥ ದತ್ತು ನಿಧಿ ಘೋಷಣೆ ಮಾಡಬೇಕೆಂದು ವಿಷಯ ಪ್ರಸ್ತಾಪಿಸಿದರು ಸಭೆಯಲ್ಲಿ ಉಪಸ್ಥಿತರಿದ್ದ ರಾಜೇಂದ್ರ ಆಪ್ತ ವಲಯ ಹಾಗೂ ಅಭಿಮಾನಿಗಳು ಒಪ್ಪಿಗೆ ಸೂಚಿಸಿದರು.
ಪತ್ರಿಕಾಗೋಷ್ಠಿಯಲ್ಲಿ ನುಡಿನಮನ ಸಮಿತಿ ಅಧ್ಯಕ್ಷರಾದ ಹೆಚ್.ಜಿ ವೆಂಕಟೇಶ್, ನೆಂಪೆ ದೇವರಾಜ್,ವಿಠ್ಠಲ ಹೆಗ್ಡೆ ಶೃಂಗೇರಿ,ಕಚ್ಚೋಡಿ ಶ್ರೀನಿವಾಸ್,ಭರತ್ ಗಿಣಕಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.