Categories
ತೀರ್ಥಹಳ್ಳಿ

ಅಂತೂ ಬಗೆ ಹರಿಯಿತು ಒಕ್ಕಲಿಗರ ಸಂಘದ ಸಮಸ್ಯೆ!

ಅಂತೂ ಬಗೆ ಹರಿಯಿತು ಒಕ್ಕಲಿಗರ ಸಂಘದ ಸಮಸ್ಯೆ!
– ತೀರ್ಥಹಳ್ಳಿ ಒಕ್ಕಲಿಗರ ಸಂಘದ ನೂತನ ಅಧ್ಯಕ್ಷರಾಗಿ ಕೂಳೂರು ಕೃಷ್ಣಮೂರ್ತಿ ಅವಿರೋಧ ಆಯ್ಕೆ
– ಉಪಾಧ್ಯಕ್ಷರಾಗಿ ಸರಳ ಲೋಕೇಶ್ ಆಯ್ಕೆ: ಶುಭಾಶಯಗಳು

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಒಕ್ಕಲಿಗರ ಸಂಘದ ನೂತನ ಅಧ್ಯಕ್ಷರಾಗಿ ಕೂಳೂರು ಕೃಷ್ಣಮೂರ್ತಿ ಅವಿರೋಧ ಆಯ್ಕೆ ಆಗಿದ್ದಾರೆ. ಉಪಾಧ್ಯಕ್ಷರಾಗಿ ಸರಳ ಲೋಕೇಶ್ ಆಯ್ಕೆ ಆಗಿದ್ದು, ಪ್ರಧಾನ ಕಾರ್ಯದರ್ಶಿಯಾಗಿ ಹೆಚ್.ಎಂ.ಆದರ್ಶ್, ಖಜಾಂಚಿಯಾಗಿ ಶಶಿಧರ್ ಎಂ.ಆರ್., ಸಹಕಾರ್ಯದರ್ಶಿಯಾಗಿ ಆಡಿನಸರ ಸುನೀಲ್ ಅವರುಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.
ಕಳೆದ ಎರಡು ವರ್ಷಗಳಿಂದ ತಾಲ್ಲೂಕು ಒಕ್ಕಲಿಗರ ಸಂಘದ ನಿರ್ದೇಶಕ ಮಂಡಳಿಯಲ್ಲಿ ಒಂದಷ್ಟು ಅಸಮಾಧಾನ ಕಂಡು ಬಂದಿತ್ತು. ಇತ್ತೀಚೆಗೆ ಸಮಾಜದ ಹಿರಿಯರೂ, ಒಕ್ಕಲಿಗರ ಸಂಘದ ಸಲಹಾ ಸಮಿತಿ ಮಾರ್ಗದರ್ಶಕರೂ ಆದ ಶಾಸಕ ಆರಗ ಜ್ಞಾನೇಂದ್ರ, ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹಾಗೂ ಸಮುದಾಯದ ಪ್ರಮುಖರ ಉಪಸ್ಥಿತಿಯಲ್ಲಿ ಸಭೆ ನಡೆಸಿ ಭಿನ್ನಾಭಿಪ್ರಾಯಗಳನ್ನು ಬದಿಗೆ ಸರಿಸಿ ನೂತನ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.
ಸಂಘದ ನೂತನ ಅಧ್ಯಕ್ಷರಾಗಿ ಕೂಳೂರು ಕೃಷ್ಣಮೂರ್ತಿ, ಉಪಾಧ್ಯಕ್ಷರಾಗಿ ಸರಳ ಲೋಕೇಶ್, ಪ್ರಧಾನ ಕಾರ್ಯದರ್ಶಿಯಾಗಿ ಹೆಚ್.ಎಂ.ಆದರ್ಶ್, ಖಜಾಂಚಿಯಾಗಿ ಶಶಿಧರ್ ಎಂ.ಆರ್., ಸಹಕಾರ್ಯದರ್ಶಿಯಾಗಿ ಆಡಿನಸರ ಸುನೀಲ್ ಅವರುಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.

ಹಿರಿಯರ ಸಮ್ಮುಖದಲ್ಲಿ ಸಭೆ

ತಾಲ್ಲೂಕು ಒಕ್ಕಲಿಗರ ಸಂಘದ ಕೆಟಿಕೆ ಕಲ್ಯಾಣ ಮಂದಿರದಲ್ಲಿ ನಮ್ಮ ಸಂಘದ ಪ್ರಮುಖರು ಹಾಗೂ ಸಲಹಾ ಸಮಿತಿಯ ಸದಸ್ಯರುಗಳಾದ ಮಾಜಿ ಗೃಹಮಂತ್ರಿಗಳು, ಶಾಸಕರಾದ ಶ್ರೀಯುತ ಆರಗ ಜ್ಞಾನೇಂದ್ರ ಅವರು ಹಾಗೂ ಮಾಜಿ ಶಿಕ್ಷಣ ಸಚಿವರಾದ ಶ್ರೀಯುತ ಕಿಮ್ಮನೆ ರತ್ನಾಕರ್ ಅವರು, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರಾದ ಶ್ರೀಯುತ ಸಿರಿಬೈಲ್ ಧರ್ಮೇಶ್ ಅವರು ಹಾಗೂ ಮಾಜಿ ಅಧ್ಯಕ್ಷರಾದ ಶ್ರೀಯುತ ಕಿರಣ್ ಪ್ರಭಾಕರ್ ಕುಣಜೆ ಇವರುಗಳ ಸಮ್ಮುಖದಲ್ಲಿ ಒಕ್ಕಲಿಗರ ಸಂಘದ ನಿರ್ದೇಶಕರುಗಳ ಸಭೆಯನ್ನು ಕರೆಯಲಾಗಿದ್ದು ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆದಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.