Categories
ಚಿಕ್ಕಮಗಳೂರು

ಅಕ್ಷರ ಮಿತ್ರ 15ನೇ ವರ್ಷದ ಸಂಭ್ರಮಕ್ಕೆ ಶೃಂಗೇರಿ ಸಜ್ಜು!

ಅಕ್ಷರ ಮಿತ್ರ 15ನೇ ವರ್ಷದ ಸಂಭ್ರಮಕ್ಕೆ ಶೃಂಗೇರಿ ಸಜ್ಜು!
– ಹಲವು ಸ್ಟಾರ್ ಗಾಯಕರ ಆಗಮನ
– ಹಾಡು, ಡ್ಯಾನ್ಸ್, ಕಾಮಿಡಿ ಧಮಾಕಾ
– ನೀವು ಬನ್ನಿ ನಿಮ್ಮ ಸ್ನೇಹಿತರನ್ನು ಕರೆತನ್ನಿ

NAMMUR EXPRESS NEWS
ಶೃಂಗೇರಿ: ಖ್ಯಾತ ಕಲಾವಿದ ಪ್ರಾಣೇಶ್ ಕುಳೆಗದ್ದೆ ಅವರ ನೇತೃತ್ವದಲ್ಲಿ ಅಕ್ಷರ ಮಿತ್ರದ 15ನೇ ವರ್ಷದ ಸಂಭ್ರಮವು 24-02-2024 ಶನಿವಾರ ಸಂಜೆ 5:45 ಕ್ಕೆ ಆದಿ ಚುಂಚನಗಿರಿ ಆಟದ ಮೈದಾನ ಶೃಂಗೇರಿಯಲ್ಲಿ ನಡೆಯಲಿದೆ. ಶೃಂಗೇರಿಯಲ್ಲಿ ನಡೆಯುವ ಈ ಕಾರ್ಯಕ್ರಮಕ್ಕೆ ಚಲನಚಿತ್ರ ಹಿನ್ನೆಲೆ ಗಾಯಕ, ಕನ್ನಡ ಕೋಗಿಲೆ ಖ್ಯಾತಿಯ ಮತ್ತು ಬಿಗ್ ಬಾಸ್ ಸೀಸನ್ ಎಂಟರ ಸ್ಪರ್ಧಿಯಾದ ವಿಶ್ವನಾಥ್ ಹಾವೇರಿ, ಚಲನಚಿತ್ರ ಹಿನ್ನೆಲೆ ಗಾಯಕ, ಕನ್ನಡ ಕೋಗಿಲೆ ವಿನ್ನರ್ ಆಗಿರುವ ಕಾಸಿಂ ಅಲಿ, ಚಲನಚಿತ್ರ ಹಿನ್ನೆಲೆ ಗಾಯಕಿ ಮತ್ತು ಸರಿಗಮಪ ಖ್ಯಾತಿಯ ವರ್ಣ ಚೌವ್ಹಾಣ್.

ಚಲನಚಿತ್ರ ಹಿನ್ನೆಲೆ ಗಾಯಕಿ, ಎದೆ ತುಂಬಿ ಹಾಡುವೆನು, ಸರಿಗಮಪ ಖ್ಯಾತಿಯ ಭೂಮಿಕ, ಚಲನಚಿತ್ರ ಹಿನ್ನೆಲೆ ಗಾಯಕ, ಸರಿಗಮಪ ಖ್ಯಾತಿ, ಕನ್ನಡ ಕೋಗಿಲೆ ಖ್ಯಾತಿ, ತಮಿಳು ಸನ್ ಸಿಂಗರ್ ಖ್ಯಾತಿಯ ಮಾಸ್ಟರ್ ಅಕ್ಕಿತ್, ಖ್ಯಾತ ಹಿನ್ನೆಲೆ ಗಾಯಕ, ರಾಷ್ಟ್ರಪ್ರಶಸ್ತಿ ವಿಜೇತರೂ ಆದ ತನುಷ್ ರಾಜ್ ಆಗಮಿಸುತ್ತಿದ್ದು, ಈಟಿವಿ ಕನ್ನಡ ಖ್ಯಾತಿಯ ಹಾಗೂ ಕಲರ್ಸ್ ಕನ್ನಡ ಖ್ಯಾತಿಯ ಸ್ಟಾರ್ ನಿರೂಪಕಿ ಮುದ್ದು ಮೀನಾ ಆಗಮಿಸುತ್ತಿದ್ದಾರೆ. ರಾಜಕೀಯ, ಸಿನಿಮಾ, ಧಾರ್ಮಿಕ, ಕಿರುತೆರೆ ಕ್ಷೇತ್ರದ ಗಣ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮಕ್ಕೆ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಯಾಗಿಸಬೇಕಾಗಿ ಆಯೋಜಕರು ಸರ್ವರಿಗೂ ಆದರದ ಸ್ವಾಗತವನ್ನು ಕೋರಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.