Categories
ತೀರ್ಥಹಳ್ಳಿ

ಬಸವಾನಿ ಬಳಿ ಕಾಡಲ್ಲಿ 9ನೇ ಕ್ಲಾಸ್ ಹುಡುಗಿ ನೇಣಿಗೆ!

ಬಸವಾನಿ ಬಳಿ ಕಾಡಲ್ಲಿ 9ನೇ ಕ್ಲಾಸ್ ಹುಡುಗಿ ನೇಣಿಗೆ!
– ಶಾಲೆಗೆ ಹೋಗು ಎಂದು ತಿಳಿ ಹೇಳಿದಕ್ಕೆ ಆತ್ಮಹತ್ಯೆ
– ತೀರ್ಥಹಳ್ಳಿಯಲ್ಲಿ ದಿನೇ ದಿನೇ ಹೆಚ್ಚುತ್ತಿದೆ ಆತ್ಮಹತ್ಯೆ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಲ್ಲಿ ಆತ್ಮಹತ್ಯೆ ಸರಣಿ ಮುಂದುವರಿದಿದ್ದು, ಬಸವಾನಿ ಪಟ್ಟಣ ಸಮೀಪ ಕಾಡಲ್ಲಿ 9ನೇ ತರಗತಿ ವಿದ್ಯಾರ್ಥಿನಿ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಶವ ಸೋಮವಾರ ಪತ್ತೆಯಾಗಿದೆ. ಬಸವಾನಿ ಸಮೀಪದ ಶುಂಠಿಕಟ್ಟೆ ಪ್ರೌಢ ಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದ ವೆಂಕಟೇಶ್ ಅವರ ಪುತ್ರಿ ಪ್ರೀತಿ ಮೃತ ಬಾಲಕಿ. ಈಕೆ ಶಾಲೆಗೆ ಕಳೆದ 15 ದಿನಗಳಿಂದ ಹೋಗಿರಲಿಲ್ಲ. ಶಾಲೆಗೆ ಬರುವಂತೆ ತಿಳಿಸಲಾಗಿತ್ತು. ಆದರೆ ಸೋಮವಾರ ಬಾಲಕಿ ಬಸವಾನಿ ಬಳಿಯ ಪ್ಲಾಂಟೇಷನ್ ಕಾಡಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ತೀರ್ಥಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.