ಜೆಸಿಬಿಎಂ ಕಾಲೇಜಿನಲ್ಲಿ ಮಾದಕವಸ್ತು ವ್ಯಸನ ವಿರುದ್ಧ ಜಾಗೃತಿ ಬೀದಿ ನಾಟಕ
* ಪೊಲೀಸ್ ಅಧಿಕಾರಿ, ಸಿಬ್ಬಂದಿಗಳಿಂದ ಮಾದಕವಸ್ತುಗಳ ದುಷ್ಪರಿಣಾಮ ಕುರಿತು “ಬೀದಿ ನಾಟಕ”ಪ್ರದರ್ಶನ
* ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಭೋಧಿಸಿದ ಎಎಸ್ಐ ಡಾ.ಮೋಹನ್ ರಾಜಣ್ಣ
NAMMMUR EXPRESS NEWS
ಶೃಂಗೇರಿ : ತಾಲೂಕಿನ ಶ್ರೀಜೆಸಿಬಿಎಂ ಕಾಲೇಜಿನಲ್ಲಿ ಮಾದಕ ದ್ರವ್ಯ ಸೇವನೆಯ ದುಷ್ಪರಿಣಾಮಗಳ ಕುರಿತು ವಿದ್ಯಾರ್ಥಿಗಳಿಗೆ ಬೀದಿ ನಾಟಕದ ಮೂಲಕ ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಸಲಾಯಿತು. ನಾಟಕದ ನಿರ್ದೇಶನ ಮತ್ತು ರಚನೆಗಾರ ಹಾಗೂ ನಾಟಕ ಅಕಾಡಮಿ ಪ್ರಶಸ್ತಿ ಪುರಸ್ಕೃತ ಜಿ. ರವಿ ಕುಮಾರ್ ಮಾದಕ ವ್ಯಸನದ ದುಷ್ಪರಿಣಾಮಗಳ ಬಗ್ಗೆ ಮಾಹಿತಿ ನೀಡಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಶೃಂಗೇರಿ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಉಪನಿರೀಕ್ಷಕ ಡಾ.ಸಿ.
ಆರ್.ಮೋಹನ್ ಕುಮಾರ್ ಮಾತನಾಡಿ ಮಾದಕ ದ್ರವ್ಯ ದುರುಪಯೋಗದ ಕಾನೂನಾತ್ಮಕ ಅಂಶಗಳು ಪರಿಣಾಮ ಹಾಗೂ ಅಕ್ರಮ ಸಾಗಣೆ ತಡೆಗಟ್ಟುವ ಕಾನೂನಿನ ಕುರಿತು ಮಾತನಾಡಿ ವಿದ್ಯಾರ್ಥಿಗಳು ಮುಂದೆ ಸಮಾಜದಲ್ಲಿ ಬದಲಾವಣೆಯ ರೂವಾರಿಗಳಾಗಬೇಕೆಂದು ಪ್ರೇರೇಪಿಸಿ ನಂತರ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಭೋದಿಸಿದರು.
ಜಾಗೃತಿ ನಾಟಕವನ್ನು ಕರ್ನಾಟಕ ಸರ್ಕಾರ,ಜಿಲ್ಲಾ ಪೊಲೀಸ್ ಚಿಕ್ಕಮಗಳೂರು,ಕೊಪ್ಪ ಉಪವಿಭಾಗ,ಶೃಂಗೇರಿ ಪೊಲೀಸ್ ಸಹಭಾಗಿತ್ವದಲ್ಲಿ ಕರ್ತವ್ಯ ನಿರತ ಪೊಲೀಸ್ ಅಧಿಕಾರಿ ಸಿಬ್ಬಂದಿಗಳಿಂದ ಮಾದಕವಸ್ತುಗಳ ದುಷ್ಪರಿಣಾಮ ಕುರಿತು “ಬೀದಿ ನಾಟಕ”ಪ್ರದರ್ಶಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಡಾ.ಎಂ.ಸ್ವಾಮಿಯವರು ಮಾತನಾಡಿ ವಿದ್ಯಾರ್ಥಿಗಳು ಮಾದಕ ದ್ರವ್ಯ ಸೇವನೆ ತಡೆಗಟ್ಟುವಿಕೆ ಕ್ರಮಗಳು ವ್ಯಸನಿಗಳಿಗೆ ಚಟದಿಂದ ಹೊರ ಬರಲು ಈ ನಾಟಕ ಸಹಾಯ ಮಾಡುವ ಪ್ರಕ್ರಿಯೆಯಲ್ಲಿ ಭಾವನಾತ್ಮಕ ಸುಸ್ಥಿತಿ ಮಹತ್ವವನ್ನು ವಿವರಿಸಿದರು.
ಉಪನ್ಯಾಸಕ ಪ್ರಶಾಂತ್ ಹಾಗು ನಾಟಕ ನಿರ್ದೇಶಕ ಬಿ.ರವಿಕುಮಾರ್ ನಗರ ಪೊಲೀಸ್ ಠಾಣೆ,ಹಿನ್ನೆಲೆ ಸಂಗೀತ ಬ್ಯಾಂಡ್ – ಮೋಹನ್ ಕುಮಾರ್, ಅಣ್ಣನಾಯ್ಕ ಹಾಗೂ ಪಾತ್ರಧಾರಿಗಳಾಗಿ ದಿನೇಶ್,ಹೇಮರಾಜು,ಇಮ್ರಾನ್, ಮಂಜುನಾಥ್,ಶ್ರೀನಿಧಿಯವರುಗಳು ಭಾಗವಹಿಸಿದ್ದರು. ಕಾಲೇಜಿನ ಉಪನ್ಯಾಸಕ ವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
