ಚಿಕ್ಕಮಗಳೂರು ಟಾಪ್ ನ್ಯೂಸ್
* ಕಳ್ಳತನ ಮಾಡಲು ಗೂಗಲ್ ಟ್ರೈನಿಂಗ್,ಕಳ್ಳರು ಅಂದರ್
* ಗಬ್ಬದ ಹಸು ಕೊಂದ ಅಸ್ಸಾಂ ಕಾರ್ಮಿಕರು, ಆರೋಪಿಗಳು ಅರೆಸ್ಟ್
NAMMMUR EXPRESS NEWS
ಬಿರೂರು: ಗೂಗಲ್ನಲ್ಲಿ ಕಳ್ಳತನ ಮಾಡುವುದು ಹೇಗೆಂದು ಸರ್ಚ್ ಮಾಡಿ ಬಳಿಕ ಖದೀಮರು ಕಳ್ಳತನಕ್ಕೆ ಇಳಿದಿರುವಂತಹ ವಿಭಿನ್ನ ಪ್ರಕರಣ ಒಂದು ಬೆಳಕಿಗೆ ಬಂದಿದೆ. ಒಂದೇ ದಿನ ಮೂರು ಮಹಿಳೆಯರ ಮಾಂಗಲ್ಯ ಸರ ಕಳ್ಳತನ ಮಾಡಿದ್ದ ಮೂವರ ಖತರ್ನಾಕ್ ಗ್ಯಾಂಗ್ ಅನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ.
ಬೀರೂರು ಠಾಣೆಯ ಪೊಲೀಸರಿಂದ ಬೆಳಗಾವಿ ಜಿಲ್ಲೆಯ ಯವಕನಮರಡಿ ಗ್ರಾಮದ ಕಲ್ಲೇಶ್, ರಾಜು ಮತ್ತು ಬಸವರಾಜ್ ಎಂಬುವವರನ್ನು ಬಂಧಿಸಲಾಗಿದೆ. ಬಂಧಿತ ಮೂವರಿಂದ 68 ಗ್ರಾಂ ಚಿನ್ನ ಮತ್ತು ಬೈಕ್ ವಶಕ್ಕೆ ಪಡೆಯಲಾಗಿದೆ.
ಕಡೂರಿಗೆ ಕೆಲಸಕ್ಕೆ ಬಂದಿದ್ದ ಈ ಮೂವರು, ಹಬ್ಬದ ಖರ್ಚಿಗೆ ಹಣವಿಲ್ಲ ಎಂದು ಸರಗಳ್ಳತನಕ್ಕೆ ನಿರ್ಧರಿಸಿದ್ದಾರೆ. ಹಾಗಾಗಿ ಕಳ್ಳತನ ಮಾಡುವುದು ಹೇಗೆ, ಬಳಿಕ ಗುರುತು ಸಿಗದಂತೆ ಎಸ್ಕೇಪ್ ಆಗುವುದು ಹೇಗೆ ಎಂದು ಗೂಗಲ್ನಲ್ಲಿ ಸರ್ಚ್ ಮಾಡಿ ಮಾಹಿತಿ ಪಡೆದು, ಅದರಂತೆ ಪ್ಲ್ಯಾನ್ ಕೂಡ ಮಾಡಿದ್ದಾರೆ.
ಮಹಿಳೆಯರನ್ನು ಟಾರ್ಗೆಟ್ ಮಾಡಿದ ಗ್ಯಾಂಗ್, ಕಣ್ಣಿಗೆ ಕಾರದಪುಡಿ ಎರಚಿ ಮಾಂಗಲ್ಯ ಸರ ಕಸಿದು ಪಲ್ಸರ್ ಬೈಕ್ನಲ್ಲಿ ಪರಾರಿ ಆಗಿದ್ದಾರೆ. ಕಡೂರು, ಬೀರೂರು ಮತ್ತು ಸಿಂಗಟಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದೇ ದಿನ, ಒಂದು ಗಂಟೆಯಲ್ಲಿ ಮೂರು ಕಡೆ, ಮೂರು ಮಹಿಳೆಯರ ಮಾಂಗಲ್ಯ ಸರ ಕಳ್ಳತನ ಮಾಡಿದ್ದಾರೆ.
ಇನ್ನು ಈ ಖತರ್ನಾಕ್ ಗ್ಯಾಂಗ್ ಸರಗಳ್ಳತನ ಮಾಡಲು ಮೂರು ಬಾರಿ ಬಟ್ಟೆ ಬದಲಾಯಿಸಿದ್ದಾರೆ. ಬಳಿಕ ಕೃತ್ಯಕ್ಕೆ ಬಳಸಿದ್ದ ಬೈಕ್ ಅನ್ನು ಬಾವಿಗೆ ತಳ್ಳಿದ್ದಾರೆ. ಸಿಸಿ ಕ್ಯಾಮರಾದಲ್ಲಿ ಕಳ್ಳರ ಕೈಚಳಕ ಮತ್ತು ವೈನ್ ಶಾಪ್‌ನಲ್ಲಿ ಬಟ್ಟೆ ಬದಲಾಯಿಸುವ ದೃಶ್ಯ ಎಲ್ಲವು ಸೆರೆಯಾಗಿದೆ. ಬೆಳಗಾವಿ ಜಿಲ್ಲೆಯ ಯವಕನಮರಡಿ ಗ್ರಾಮದಲ್ಲಿ ತಲೆಮರೆಸಿಕೊಂಡಿದ್ದ ಮೂವರನ್ನ ಈಗ ಬೀರೂರು ಪೊಲೀಸರು ಬಂಧಿಸಿದ್ದಾರೆ.
* ಗಬ್ಬದ ಹಸು ಕೊಂದ ಅಸ್ಸಾಂ ಕಾರ್ಮಿಕರು, ಆರೋಪಿಗಳು ಅರೆಸ್ಟ್
ಮೂಡಿಗೆರೆ: ತಾಲೂಕಿನ ಬಾಳುರು ಹೋಬಳಿ ಮರ್ಕಲ್ ಗ್ರಾಮದಲ್ಲಿ ಮನಕಲಕುವ ಘಟನೆಯೊಂದು ನೆನ್ನೆ ನಡೆದಿದೆ.
ಮರ್ಕಲ್ ಗ್ರಾಮದ ಮಂಜುನಾಥ್ ಎಂಬುವವರ ಕೊಟ್ಟಿಗೆಯಲ್ಲಿ ಕಟ್ಟಿಹಾಕಿದ್ದ ಇನ್ನೇನು ಕೆಲವೇ ದಿನದಲ್ಲಿ ಕರುವಿಗೆ ಜನ್ಮ ನೀಡಬೇಕಿದ್ದ ಹಸುವನ್ನು ಇದೆ ಗ್ರಾಮದ ಮರ್ಕಲ್ ಎಸ್ಟೇಟ್‌ಗೆ ಕೆಲಸಕ್ಕೆ ಬಂದಿದ್ದ ಅಸ್ಸಾಂನ ಕೂಲಿ ಕಾರ್ಮಿಕರು ಹಗ್ಗವನ್ನು ಕತ್ತರಿಸಿ ಕಳ್ಳತನ ಮಾಡಿ ತೋಟದ ಒಳಗೆ ಮಾಂಸ ಮಾಡಿದ ಕ್ರೂರ ಘಟನೆ ನಡೆದಿದೆ.
ವಿಷಯ ತಿಳಿದ ಕೂಡಲೆ ಬಾಳೂರು ಪೊಲೀಸ್ ಠಾಣೆಯ ಪಿಎಸ್ಐ ದಿಲೀಪ್ ಕುಮಾರ್ ಅವರು ಸ್ಥಳಕ್ಕೆ ಭೇಟಿಕ್ಕೊಟ್ಟು ಈ ಕೃತ್ಯ ನಡೆಸಿದ ಅಸ್ಸಾಂನ ಆರು ಕಾರ್ಮಿಕರ ಮೇಲೆ ಪ್ರಕರಣ ದಾಖಲು ಮಾಡಿ ಬಂಧಿಸಿದ್ದಾರೆ.
ಮಲೆನಾಡಿನಲ್ಲಿ ಅಸ್ಸಾಂ ಕಾರ್ಮಿಕರ ಇಂತಹ ಹಲವಾರು ಪ್ರಕರಣಗಳು ದಾಖಲಾಗಿದ್ದು ಇದಕ್ಕೆ ಕಡಿವಾಣ ಹಾಕಬೇಕು ಇಲ್ಲವಾದರೆ ಮುಂದೊಂದು ದಿನ ಉಗ್ರಹೋರಾಟ ಮಾಡಲಾಗುಹುದು ಎಂದು ಹಿಂದೂ ಸಂಘಟನೆಯ ಮುಖಂಡರು ಎಚ್ಚರಿಕೆ ನೀಡಿದ್ದಾರೆ.