Categories
ಶಿವಮೊಗ್ಗ

ಶಿವಮೊಗ್ಗ: ಕುಡಿದ ಮತ್ತಿನಲ್ಲಿ ಸ್ನೇಹಿತರ ನಡುವೆ ಗಲಾಟೆ ಕೊಲೆಯಲ್ಲಿ ಅಂತ್ಯ..!!

ಟಾಪ್ 3 ನ್ಯೂಸ್

ಶಿವಮೊಗ್ಗ: ಕುಡಿದ ಮತ್ತಿನಲ್ಲಿ ಸ್ನೇಹಿತರ ನಡುವೆ ಗಲಾಟೆ ಕೊಲೆಯಲ್ಲಿ ಅಂತ್ಯ..!!
– ಹೊಸನಗರ : ವಿಟಮಿನ್ ಡ್ರಾಪ್ ಯಡವಟ್ಟಿನಿಂದ ಮಕ್ಕಳು ಅಸ್ವಸ್ಥ ಪ್ರಕರಣ
– ಶಿವಮೊಗ್ಗ : ಜನರಿಗೆ ತೊಂದರೆ ಮಾಡುತ್ತಿದ್ದ ಕರಡಿ ಬೋನಿಗೆ ಸೆರೆ.!

NAMMUR EXPRESS NEWS
ಶಿವಮೊಗ್ಗ: ಸ್ನೇಹಿತರ ಎಣ್ಣೆ ಪಾರ್ಟಿ ವೇಳೆ ಕಿರಿಕ್- ಕೊಲೆಯಲ್ಲಿ ಅಂತ್ಯವಾಗಿದೆ. ಶಿವಮೊಗ್ಗದ ಬೊಮ್ಮನಕಟ್ಟೆ ಇ-ಬ್ಲಾಕ್ ನಲ್ಲಿ ನಡೆದ ಘಟನೆ ನಡೆದಿದೆ. ಪವನ್ (28) ಎಂಬ ಯುವಕನನ್ನ ಬರ್ಬರವಾಗಿ ಕೊಲೆಯಾಗಿದೆ. ಶಿವಕುಮಾರ್ ಎಂಬುವರ ಮನೆಯಲ್ಲೇ ಈ ಘಟನೆ ನಡೆದಿದೆ. ಬೊಮ್ಮನಕಟ್ಟೆಯ ಇ-ಬ್ಲಾಕ್ ನಲ್ಲಿರುವ ಶಿವಕುಮಾರ್ ಮನೆಗೆ ಪವನ್ ತೆರಳಿದ್ದನು. ಕುಡಿದ ನಂತರದಲ್ಲಿ ಸ್ನೇಹಿತರ ನಡುವೆ ಗಲಾಟೆ- ಕೊಲೆಯಲ್ಲಿ ಅಂತ್ಯವಾಗಿದೆ ಎಂದು ಹೇಳಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿ ಶಿವಕುಮಾರ್ ನನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಿನೋಬನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಘಟನಾ ಸ್ಥಳಕ್ಕೆ ಎಸ್ಪಿ ಜಿ.ಕೆ.ಮಿಥುನ್ ಕುಮಾರ್, ಶಿವಮೊಗ್ಗ ಸಬ್ ಡಿವಿಜನ್-2 ಡಿವೈಎಸ್ಪಿ ಸಂಜೀವ್ ಕುಮಾರ್ ಭೇಟಿ ನೀಡಿದ್ದಾರೆ. ವಿನೋಬನಗರ ಇನ್ಸ್ಪೆಕ್ಟರ್ ಡಿ.ಕೆ.ಸಂತೋಷ್ ಕುಮಾರ್ ರಿಂದ ಎಸ್ಪಿ ಮಾಹಿತಿ ಪಡೆದಿದ್ದಾರೆ. ಶಿವಮೊಗ್ಗದ ಬೊಮ್ಮನಕಟ್ಟೆ ಯಲ್ಲಿ ಪವನ್ ಮರ್ಡರ್ ಪ್ರಕರಣ.ಸ್ಥಳಕ್ಕೆ ಬೆರಳಚ್ಚು ಮತ್ತು ಫಾರೆನ್ಸಿಕ್ ತಜ್ಞರ ಭೇಟಿ ನೀಡಿದ್ದಾರೆ. ಕೊಲೆಯಾದ ಸ್ಥಳದಲ್ಲಿ ಮಾಹಿತಿಯನ್ನ ತಂಡ ಕಲೆಹಾಕಿದೆ. ಇವಿಷ್ಟು ಪ್ರಾಥಮಿಕ ಮಾಹಿತಿಗಳಾಗಿವೆ.

– ಹೊಸನಗರ : ವಿಟಮಿನ್ ಡ್ರಾಪ್ ಯಡವಟ್ಟಿನಿಂದ ಮಕ್ಕಳು ಅಸ್ವಸ್ಥ ಪ್ರಕರಣ

ಹೊಸನಗರ: ತಾಲೂಕಿನ ಬೆಳ್ಳೂರು ಗ್ರಾಪಂ ವ್ಯಾಪ್ತಿಯ ಹಿರೇಸಾನಿ ಗ್ರಾಮದ ಅಂಗನವಾಡಿಯ 10ಕ್ಕೂ ಹೆಚ್ಚು ಮಕ್ಕಳು ವಾಂತಿ ಹಾಗೂ ಹೊಟ್ಟೆ ನೋವಿನಿಂದ ಅಸ್ವಸ್ಥರಾಗಿ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಾಲಾ ಮಕ್ಕಳನ್ನು ಶಾಸಕ ಬೇಳೂರು ಗೋಪಾಲಕೃಷ್ಣ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. ಹೊಸನಗರ ತಾಲೂಕಿನ ಬೆಳ್ಳೂರು ಗ್ರಾಪಂ ವ್ಯಾಪ್ತಿಯ ಹಿರೇಸಾನಿ ಗ್ರಾಮದ ಅಂಗನವಾಡಿಯ ಮಕ್ಕಳು ವಿಟಮಿನ್ ಡ್ರಾಪ್ ಯಡವಟ್ಟಿನಿಂದ ವಾಂತಿ ಹಾಗೂ ಹೊಟ್ಟೆ ನೋವಿಂದ ಬಳಲುತ್ತಿದ್ದು ರಿಪ್ಪನ್ ಪೇಟೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದರು ಅವರನ್ನು ಹೆಚ್ಚಿನ ಚಿಕಿತ್ಸೆಗೆ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. 13 ಮಕ್ಕಳು ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಶಾಸಕ ಬೇಳೂರು ಗೋಪಾಲಕೃಷ್ಣ ಮಕ್ಕಳ ಯೋಗ ಕ್ಷೇಮ ವಿಚಾರಿಸಿ ಪೋಷಕರಿಗೆ ಧೈರ್ಯ ತುಂಬಿದರು. ವಿದ್ಯಾರ್ಥಿಗಳು ಅಸ್ವಸ್ಥರಾಗಲು ಕಾರಣ ಏನು ಎಂದು ಅಧಿಕಾರಿಗಳಿಂದ ಮಾಹಿತಿ ಪಡೆದ ಶಾಸಕರು ಸಂಬಂಧಪಟ್ಟ ಮಾತ್ರೆ ಹಾಗೂ ಔಷಧಿ ನಿಮ್ಮಲ್ಲಿ ಲಭ್ಯವಿಲ್ಲದಿದ್ದರೇ ಬೇರೆ ಕಡೆಯಿಂದ ತರಿಸಿಕೊಡಬೇಕು , ಏನು ತೊಂದರೆಯಾಗದಂತೆ ನೋಡಿಕೊಳ್ಳುವಂತೆ ಆಸ್ಪತ್ರೆ ಅಡಳಿತ ವೈದ್ಯಾಧಿಕಾರಿ ಅವರಿಗೆ ಸೂಚನೆ ನೀಡಿದರು. ಅಲ್ಲದೇ, ಘಟನೆ ಕುರಿತು ಮಾಹಿತಿ ಪಡೆದು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

– ಶಿವಮೊಗ್ಗ : ಜನರಿಗೆ ತೊಂದರೆ ಮಾಡುತ್ತಿದ್ದ ಕರಡಿ ಬೋನಿಗೆ ಸೆರೆ.!

ಶಿವಮೊಗ್ಗ : ಹೊಳಲೂರಿನಲ್ಲಿ ಜನರಿಗೆ ಹಾವಳಿಯಿಟ್ಟಿದ್ದ ಐದಾರು ಕರಡಿಗಳಲ್ಲಿ ಒಂದು ಕರಡಿ ಇಂದು ಬೋನಿಗೆ ಬಿದ್ದಿದೆ. ಹೊಲ, ತೋಟಗಳಲ್ಲಿ ಕೆಲಸ ಮಾಡುವಾಗ ಜನರಿಗೆ ಕಾಣಿಸಿಕೊಂಡು ಭಯ ಹುಟ್ಟಿಸಿದ್ದ ಕರಡಿ ಕೊನೆಗೂ ಬೋನಿಗೆ ಬಿದ್ದಿದೆ. ಶಿವಮೊಗ್ಗದ ಗ್ರಾಮಾಂತರ ಭಾಗವಾದ ಹೊಳಲೂರಿನಲ್ಲಿ ಕಳೆದ ಒಂದು ವಾರದಿಂದ ಬೋನಿಟ್ಟಿದ್ದರು. ನಿನ್ನೆ ರಾತ್ರಿ ಕರಡಿ ಬೋನಿಗೆ ಬಿದ್ದಿದೆ. ಬೋನಿಗೆ ಬಿದ್ದ ಕರಡಿಯನ್ನ ನೋಡಲು ಗ್ರಾಮಸ್ಥರು ಮುಗಿಬಿದ್ದಿದ್ದಾರೆ. ಕರಡಿಯನ್ನ ಸಫಾರಿಗೆ ಕರೆದೊಯ್ಯುವ ಸಾಧ್ಯತೆಯಿದೆ. ಹೊಳಲೂರು ಹೋಬಳಿ ಸುತ್ತಮುತ್ತ ಸಾರ್ವಜನಿಕ ಸ್ಥಳಗಳಲ್ಲಿ ಸಂಚರಿಸುತ್ತಿದ್ದ ಕರಡಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಸೆರೆ ಹಿಡಿದಿದ್ದಾರೆ, ಬೋನಿಗೆ ಬಿದ್ದ ಕರಡಿಯನ್ನು ಲಯನ್ ಸಫಾರಿ ಗೆ ತೆಗೆದುಕೊಂಡು ಹೋಗಿ ಸೂಕ್ತ ಚಿಕಿತ್ಸೆ ನೀಡಿ ಸಂರಕ್ಷಣೆ ಮಾಡಲಾಗುವುದು. ಅರಣ್ಯ ಅಧಿಕಾರಿಗಳು ಮಾನವ ವನ್ಯಜೀವಿ ಸಂಘರ್ಷವನ್ನು ತಗ್ಗಿಸಲು ಸ್ಥಳೀಯರು ಸಹಕರಿಸಬೇಕಾಗಿ ಕೋರಿದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.