ಚಿಕ್ಕಮಗಳೂರು ಟಾಪ್ ನ್ಯೂಸ್ !!
* ಸರ್ಕಾರದ ಆದೇಶಕ್ಕೂ ಡೋಂಟ್ ಕೇರ್ ಎನ್ನುತ್ತಿರುವ ಮೆಸ್ಕಾಂ ಆಫೀಸರ್ಸ್
* ಘನತ್ಯಾಜ್ಯ ವಿಲೇವಾರಿ ಖಂಡಿಸಿ ಸಾಣೆಹಳ್ಳಿ ಶ್ರೀಗಳ ನೇತೃತ್ವದಲ್ಲಿ ಇಂದಿನಿಂದ ಅನಿರ್ದಿಷ್ಠಾವಧಿ ಪ್ರತಿಭಟನೆ
* ಖತರ್ನಾಕ್ ಬೈಕ್ ಕಳ್ಳನ ಬಂಧನ 11 ಬೈಕ್ ಗಳು ವಶಕ್ಕೆ
* ತಾಲೂಕು ಕಚೇರಿ ಸುತ್ತ ಕಸದ ರಾಶಿ ಅಧಿಕಾರಿಗಳು ಡೋಂಟ್ ಕೇರ್
NAMMUR EXPRESS NEWS
* ಸರ್ಕಾರದ ಆದೇಶಕ್ಕೂ ಡೋಂಟ್ ಕೇರ್ ಎನ್ನುತ್ತಿರುವ ಮೆಸ್ಕಾಂ ಆಫೀಸರ್ಸ್ !!
ಚಿಕ್ಕಮಗಳೂರು : ಕಾಫಿನಾಡು ಚಿಕ್ಕಮಗಳೂರು ಅಂದ್ರೆ ಪ್ರವಾಸಿಗರ ಸ್ವರ್ಗ ವೀಕೆಂಡ್ ಬಂದ್ರೆ ಸಾಕು ಸಿಲಿಕಾನ್ ಸಿಟಿಯ ಜನರು ಕಾಫಿನಾಡಿನ ಕಡೆಗೆ ಮುಖ ಮಾಡ್ತಾರೆ. ಇದೆ ಪ್ರವಾಸಿಗರನ್ನು ನೆಚ್ಚಿಕೊಂಡು ಒಂದೂವರೆ ಸಾವಿರಕ್ಕೂ ಹೆಚ್ಚು ಹೋಮ್ ಸ್ಟೇಗಳು ಕಾಫಿನಾಡಿನಲ್ಲಿ ತಲೆ ಎತ್ತಿವೆ.
ಹೋಮ್ ಸ್ಟೇ ಅಂದ್ರೆ ಮನೆಯಲ್ಲಿದ್ದವರೇ ಬಂದ ಗೆಸ್ಟ್ಗಳಿಗೆ ಊಟ, ವಸತಿ ನೀಡೋದು ಇಂತಹ ಹೋಮ್ ಸ್ಟೇಗಳು ವಾಣಿಜ್ಯ ಉದ್ದೇಶಕ್ಕೆ ಒಳಪಡಲ್ಲ, ಇಂತಹ ಹೋಂ ಸ್ಟೇಗಳಿಗೆ ಡೋಮೆಸ್ಟಿಕ್ ವಿದ್ಯುತ್ ಸಂಪರ್ಕ ನೀಡಬೇಕು ಅಂತಾ ಸರ್ಕಾರ 2011ರಲ್ಲೇ ಆದೇಶ ಹೊರಡಿಸಿದೆ. ಇದು ಕೊಡಗು ಜಿಲ್ಲೆಯಲ್ಲಿ ಚಾಲ್ತಿಯಲ್ಲಿದೆ, ಆದರೆ ಚಿಕ್ಕಮಗಳೂರಿನಲ್ಲಿ ಮಾತ್ರ ಮೆಸ್ಕಾಂ ಅಧಿಕಾರಿಗಳು ಹೋಂ ಸ್ಟೇ ಅಂದ್ರೆ ಕಮರ್ಷಿಯಲ್ ಅಂತಾ ಮಾಲೀಕರಿಗೆ ದಂಡ ಹಾಕ್ತಿದ್ದಾರಂತೆ. ಹೀಗಾಗಿ ಹೋಂ ಸ್ಟೇ ಮಾಲೀಕರು ಮೆಸ್ಕಾಂ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
* ಘನ ತ್ಯಾಜ್ಯ ವಿಲೇವಾರಿ ಖಂಡಿಸಿ ಸಾಣೆಹಳ್ಳಿ ಶ್ರೀಗಳ ನೇತೃತ್ವದಲ್ಲಿ ಇಂದಿನಿಂದ ಅನಿರ್ದಿಷ್ಠಾವಧಿ ಪ್ರತಿಭಟನೆ
ಅಜ್ಜಂಪುರ: ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರದ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಸಂಗ್ರಹಿಸುವ ಘನ ತ್ಯಾಜ್ಯ ವಸ್ತುಗಳನ್ನು ಸೊಲ್ಲಾಪುರ ಗ್ರಾಮ ಪಂಚಾಯತಿಯ ಸೌತನಹಳ್ಳಿ ಗ್ರಾಮದಲ್ಲಿ ವಿಲೇವಾರಿ ಮಾಡಲು ತೀರ್ಮಾನ ಮಾಡಿರುವುದನ್ನು ವಿರೋಧಿಸಿ ಸಾಣೆಹಳ್ಳಿ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಮ್ಮುಖದಲ್ಲಿ ಗ್ರಾಮಸ್ಥರು ಸಭೆ ನಡೆಸಿದ್ದು, ಗುರುಗಳ ನೇತೃತ್ವದಲ್ಲಿ ಇಂದು ಬೆಳಿಗ್ಗೆ 9 ಗಂಟೆಯಿಂದ ಅನಿರ್ದಿಷ್ಠಾವಧಿ ಮುಷ್ಕರ ನಡೆಸಲಿದ್ದಾರೆ.
ಸಭೆಯಲ್ಲಿ ತೀರ್ಮಾನಿಸಿದಂತೆ ಸುತ್ತಮುತ್ತಲಿನ ಗ್ರಾಮಗಳಾದ ಬೇಗೂರು, ಅಸಂದಿ, ಮುಗುಳಿ, ಚಿಣ್ಣಪುರ, ಸೊಲ್ಲಾಪುರ, ಸೌತನಹಳ್ಳಿ, ಗ್ರಾಮಸ್ಥರು ಕಡ್ಡಾಯವಾಗಿ ಮುಷ್ಕರದಲ್ಲಿ ಭಾಗವಹಿಸಲು ಶ್ರೀಗಳು ತಿಳಿಸಿದ್ದಾರೆ. ಗ್ರಾಮಸ್ಥರೆಲ್ಲರೂ ಮುಷ್ಕರದಲ್ಲಿ ಭಾಗವಹಿಸಿ ಸ್ಥಳಕ್ಕೆ ಜಿಲ್ಲಾಡಳಿತದ ಪ್ರಮುಖರು ಖುದ್ದಾಗಿ ಬಂದು ಘನ ತ್ಯಾಜ್ಯ ವಿಲಾರಿ ಘಟಕವನ್ನು ಸ್ಥಗಿತಗೊಳಿಸಿ ಗೋಮಾಳಕ್ಕೆ ಜಾಗವನ್ನು ಬಿಟ್ಟು ಕೊಡುವವರೆಗೆ ಮುಷ್ಕರವನ್ನು ಹಿಂಪಡೆಯದೆ ಇರಲು ನಿರ್ಧರಿಸಲಾಗಿದೆ.
* ಖತರ್ನಾಕ್ ಬೈಕ್ ಕಳ್ಳನ ಬಂಧನ, 11 ಬೈಕ್ ಗಳು ವಶಕ್ಕೆ
ಚಿಕ್ಕಮಗಳೂರು: ಬೈಕ್ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿ ಆತನಿಂದ 10.50ಲಕ್ಷ ರೂ. ಮೌಲ್ಯದ 11 ಬೈಕ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಚಿಕ್ಕಮಗಳೂರು ನಗರದ ನಯಾಜ್ ಪಾಷ ಎಂಬುವವರ ಬೈಕ್ ಕಳ್ಳತನವಾಗಿದ್ದು ಕುರಿತು ನೀಡಿದ ದೂರಿನನ್ವಯ ಕಾರ್ಯಪ್ರವೃತ್ತರಾದ ಪೊಲೀಸರು ಹಾಸನ ಹುಣಸಿನಕೆರೆ ನಿವಾಸಿ ಸೈಯದ್ ಇಮ್ಹಾದ್ (23) ಈತನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಹನ್ನೊಂದು ಬೈಕ್ಗಳನ್ನು ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.
ಬಂಧಿತನಿಂದ ಕಳ್ಳತನವಾಗಿದ್ದ ಹನ್ನೊಂದು ಮೊಪೇಡ್ಗಳನ್ನು ವಶಕ್ಕೆ ಪಡೆದುಕೊಂಡಿದ್ದು, ಇವುಗಳ ಪೈಕಿ ಆರು ಬೈಕ್ಗಳು ಚಿಕ್ಕಮಗಳೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೈಕ್ ಕಳ್ಳತನ ದೂರು ದಾಖಲಾಗಿದ್ದು ಅವುಗಳಿಗೆ ಸಂಬಂಧಿಸಿದ್ದಾಗಿವೆ.
ಒಂದು ಬೈಕ್ಗಳು ಬೆಂಗಳೂರು ಶೇಷಾದ್ರಿಪುರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದ್ದಾಗಿದೆ.ಉಳಿದಂತೆ ನಾಲ್ಕು ಬೈಕ್ಗಳು ಬೆಂಗಳೂರು ಒಂದು ಮೈಸೂರು ಒಂದು, ಹಾಸನ ಹೊಳೆನರಸೀಪುರ ಪಟ್ಟಣ ವ್ಯಾಪ್ತಿಯ ಒಂದು,ಒಂದು ಬೈಕ್ ಬೇಲೂರು ನಗರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದ್ದಾಗಿದೆ.
* ತಾಲೂಕು ಕಚೇರಿ ಸುತ್ತ ಕಸದ ರಾಶಿ ಅಧಿಕಾರಿಗಳು ಡೋಂಟ್ ಕೇರ್
ಮೂಡಿಗೆರೆ: ಪ್ಲಾಸ್ಟಿಕ್ ತ್ಯಾಜ್ಯದಿಂದ ಉಂಟಾಗುತ್ತಿರುವ ಸಮಸ್ಯೆಯ ಕುರಿತು ಕಾಫಿ ನಾಡು ಚಿಕ್ಕಮಗಳೂರಿನಲ್ಲಿ ಇತ್ತೀಚಿಗೆ ಜನಜಾಗೃತಿ ಅಭಿಯಾನ ಆರಂಭಗೊಂಡಿದೆ. ಆದರೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಆಡಳಿತಸೌಧದ ಸುತ್ತಮುತ್ತ ಪ್ಲಾಸ್ಟಿಕ್ ಕಸದ ರಾಶಿ ತುಂಬಿದ್ದು, ಅಧಿಕಾರಿಗಳು ನಮಗೂ ಇದಕ್ಕೂ ಸಂಬಂಧವಿಲ್ಲ ಎಂಬಂತೆ ಕಣ್ಣುಮುಚ್ಚಿ ಕುಳಿತಿದ್ದಾರೆ.
ಜನಸಾಮಾನ್ಯರು ಪ್ರತಿನಿತ್ಯ ಆಡಳಿತ ಸೌಧಕ್ಕೆ ಭೇಟಿ ನೀಡುತ್ತಾರೆ ಆದರೂ ಅಧಿಕಾರಿಗಳು ನಾವು ಆಯಿತು ನಮ್ಮ ಕೆಲಸ ಆಯಿತು ಎಂಬಂತೆ ಅಧಿಕಾರಿಗಳು ಸುಮ್ಮನಾಗಿದ್ದಾರೆ. ಹೀಗಾಗಿ ಕಚೇರಿಯ ಸುತ್ತಮುತ್ತ ಸ್ವಚ್ಛತೆ ಕಾಪಾಡಿಕೊಳ್ಳದ ಅಧಿಕಾರಿಗಳ ವಿರುದ್ಧ ಪರಿಸರ ಆಸಕ್ತರು ಅಸಮಾಧಾನ ಹೊರಹಾಕಿದ್ದಾರೆ. ಇದು ಮುಂದೆ ಹೀಗೆ ಮುಂದುವರೆದರೆ ತಾಲೂಕು ಕಚೇರಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ವಿರುದ್ಧ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ.