Categories
ರಾಜ್ಯ

ಅಪ್ಪು ಅಭಿಮಾನಿಗಳಿಗೆ ಇಲ್ಲಿದೆ ಗುಡ್ ನ್ಯೂಸ್..!!

ಅಪ್ಪು ಅಭಿಮಾನಿಗಳಿಗೆ ಇಲ್ಲಿದೆ ಗುಡ್ ನ್ಯೂಸ್..!!
– ಶೀಘ್ರ ಬಿಡುಗಡೆಯಾಗಲಿದೆ ಪುನೀತ್ ಜೀವನಚರಿತ್ರೆ
– ಪುನೀತ್​ ರಾಜ್​​ಕುಮಾರ್​ ಅವರ ವಿಚಾರವನ್ನೊಳಗೊಂಡ ಆ್ಯಪ್​ ಕೂಡಾ ಲಾಂಚ್​​​ ಆಗಲಿದೆ.

NAMMUR EXPRESS NEWS
ಕರುನಾಡಿನ ಹೆಸರಾಂತ ಕುಟುಂಬದಿಂದ ಬಂದಿದ್ದರೂ ತಮ್ಮ ಸರಳ ವ್ಯಕ್ತಿತ್ವದಿಂದ ಕೋಟ್ಯಂತರ ಜನಮನ ಗೆದ್ದ ಪುನೀತ್​ ರಾಜ್​​ಕುಮಾರ್​ ಅವರ ಜೀವನ ಚರಿತ್ರೆ ಅತಿ ಶೀಘ್ರದಲ್ಲೇ ಬರಲಿದೆ. ನಗುಮೊಗದ ಒಡೆಯನ 50ನೇ ಜನ್ಮದಿನದ ಸಂದರ್ಭ ಈ ಶುಭ ಸುದ್ದಿಯನ್ನು ತಂಡ ಹಂಚಿಕೊಂಡಿದೆ. ಪತ್ನಿ ಅಶ್ವಿನಿ ಪುನೀತ್​ ರಾಜ್​ಕುಮಾರ್​ ಅವರು ತಮ್ಮ ಅಧಿಕೃತ ಸೋಷಿಯಲ್​ ಮೀಡಿಯಾ ಪ್ಲ್ಯಾಟ್​ಫಾರ್ಮ್​ಗಳಲ್ಲಿ ಜೀವನ ಚರಿತ್ರೆಯ ಒಂದು ಫೋಟೋ ಹಂಚಿಕೊಂಡು ಮಾಹಿತಿ ಒದಗಿಸಿದ್ದಾರೆ. ಅಶ್ವಿನಿ ಪುನೀತ್​ ರಾಜ್​ಕುಮಾರ್ ಇಲ್ಲಿ ಲೇಖಕರಾಗಿರೋದು ವಿಶೇಷ. 1975ರ ಮಾರ್ಚ್​ 17ರಂದು ಚೆನ್ನೈನಲ್ಲಿ ಜನಿಸಿದ ಪುನೀತ್ ರಾಜ್‌ಕುಮಾರ್ ಮಗುವಾಗಿರುವಾಗಲೇ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ನಂತರ, ಬಾಲನಟನಾಗಿ ಹಲವು ಚಿತ್ರಗಳಲ್ಲಿ ಕಾಣಿಸಿಕೊಂಡರು. ನಟಸಾರ್ವಭೌಮನ ಕಿರಿಯ ಪುತ್ರನಿಗೆ ನಟನೆ ರಕ್ತದಲ್ಲೇ ಬಂದಿದೆ ಎಂಬುದು ಅಭಿಮಾನಿಗಳ ಪ್ರಶಂಸೆ. ಬಾಲನಟನಾಗಿ ಪ್ರತಿಷ್ಠಿತ ರಾಷ್ಟ್ರಪ್ರಶಸ್ತಿಯನ್ನೂ ಮುಡಿಗೇರಿಸಿಕೊಂಡರು. 2002ರಲ್ಲಿ ನಾಯಕ ನಟನಾಗಿ ವೃತ್ತಿಜೀವನ ಆರಂಭಿಸಿದ ಅಪ್ಪು ಅತಿ ಕಡಿಮೆ ಅವಧಿಯಲ್ಲೇ ಸಾಕಷ್ಟು ಜನಪ್ರಿಯತೆ ಗಳಿಸಿದರು. ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡರು. ಆದ್ರೆ 2021ರಲ್ಲಿ ಅವರ ಅಕಾಲಿಕ ನಿಧನದಿಂದ ಕರುನಾಡಿಗೆ ಬರಸಿಡಿಲು ಬಡಿದಂತಾಗಿತ್ತು.

2021ರ ಅಕ್ಟೋಬರ್​​ 29ರಂದು ಹೃದಯಾಘಾತದಿಂದ ಬೆಂಗಳೂರಿನಲ್ಲಿ ನಿಧನರಾದರು. ಕಳೆದ ದಿನ, ಮಾರ್ಚ್​ 17ರಂದು ಪವರ್​ ಸ್ಟಾರ್​​ನ 50ನೇ ಜನ್ಮದಿನವನ್ನು ಅಭಿಮಾನಿಗಳು ತಮ್ಮದೇ ಆದ ರೀತಿಯಲ್ಲಿ ಆಚರಿಸಿದ್ದಾರೆ. ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿರುವ ಪುನೀತ್​ ರಾಜ್​ಕುಮಾರ್ ಅವರ ಸಮಾಧಿಗೆ ವಿಶೇಷ ಪೂಜೆ ಸಲ್ಲಿಸಲಾಗಿದೆ. ರಾಜ್​​ ಕುಟುಂಬ ಮತ್ತು ಅಭಿಮಾನಿಗಳು ಸಮಾಧಿ ಬಳಿ ಆಗಮಿಸಿ ಅಪ್ಪುಗೆ ನಮನ ಸಲ್ಲಿಸಿದ್ದಾರೆ. ಮುಂಜಾನೆ, ಅಪ್ಪು ಅವರಿಗೆ ವಿಶೇಷವಾಗಿ ಶುಭ ಕೋರಿದ ಅಶ್ವಿನಿ ಪುನೀತ್ ರಾಜ್​ಕುಮಾರ್​​​, ಸಂಜೆ ಪುನೀತ್​ ರಾಜ್​​ಕುಮಾರ್​ ಅವರ ಆ್ಯಪ್​ ಶೀಘ್ರದಲ್ಲೇ ಲಾಂಚ್​ ಆಗಲಿದೆ ಎಂಬ ಗುಡ್​ ನ್ಯೂಸ್​​ ಕೊಟ್ಟರು. ಇದರ ಜೊತೆಗೆ, ಶೀಘ್ರದಲ್ಲೇ ‘ಅಪ್ಪು’-ಭಾವನಾತ್ಮಕ ಜೀವನಚರಿತ್ರೆ ಬರಲಿದೆ ಎಂಬ ಸಂತಸದ ವಿಚಾರವನ್ನೂ ಹಂಚಿಕೊಂಡಿದ್ದಾರೆ. ಅಶ್ವಿನಿ ಪುನೀತ್​ ರಾಜ್​ಕುಮಾರ್​ ತಮ್ಮ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅಪ್ಪು ಜೀವನಚರಿತ್ರೆ (ಬುಕ್​) ಯ ಒಂದು ನೋಟ ಇಲ್ಲಿ ಲಭ್ಯವಾಗಿದೆ. ಅಪ್ಪು ಜೀವನಚರಿತ್ರೆಯೊಂದಿಗೆ ತಮ್ಮ ಇಬ್ಬರು ಮಕ್ಕಳ ಜೊತೆ ನಿಂತು ಕ್ಲಿಕ್ಕಿಸಿಕೊಂಡಿರುವ ಫೋಟೋ ಇದಾಗಿದೆ. ಪೋಸ್ಟ್​ಗೆ, ”ಪ್ರಸ್ತುತಪಡಿಸುತ್ತಿದ್ದೇವೆ ‘ಅಪ್ಪು’ – ಅಪ್ಪುವಿನ ಭಾವನಾತ್ಮಕ ಜೀವನಚರಿತ್ರೆ” ಹೆಚ್ಚಿನ ಮಾಹಿತಿ ಶೀಘ್ರದಲ್ಲಿ ಎಂದು ಬರೆದುಕೊಂಡಿದ್ದಾರೆ. ಅಶ್ವಿನಿ ಪುನೀತ್​ ರಾಜ್​ಕುಮಾರ್​ ಮತ್ತು ಪ್ರಕೃತಿ ಎನ್​ ಬನವಾಸಿ ಈ ಬಯೋಪಿಕ್​ನ ಲೇಖಕರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.