Categories
ಚಿಕ್ಕಮಗಳೂರು

ಚಿಕ್ಕಮಗಳೂರು ಟಾಪ್ ನ್ಯೂಸ್ !!

ಚಿಕ್ಕಮಗಳೂರು ಟಾಪ್ ನ್ಯೂಸ್ !!

* ನಡು ರಸ್ತೆಯಲ್ಲಿ ಕಾಡಾನೆಯ ಬಿಂದಾಸ್ ಓಡಾಟ
* ಗಂಡನ ಯಶಸ್ಸಿನ ಹಿಂದೆ ಹೆಣ್ಣಿನ ಶಕ್ತಿ ಅಗಾಧವಾಗಿದೆ -ನ್ಯಾಯಾಧೀಶೆ ಭಾನುಮತಿ
* ವಸತಿ ಶಾಲೆಯಿಂದ ಇಬ್ಬರು ವಿದ್ಯಾರ್ಥಿಗಳು ನಾಪತ್ತೆ

NAMMUR EXPRESS NEWS

* ನಡು ರಸ್ತೆಯಲ್ಲಿ ಕಾಡಾನೆಯ ಬಿಂದಾಸ್ ಓಡಾಟ
ಮೂಡಿಗೆರೆ : ಕಾಫಿನಾಡು ಚಿಕ್ಕಮಗಳೂರಿನಲ್ಲಿ ಕಾಡಾನೆಗಳ ಉಪಟಳ ನಿಲ್ಲುವ ಲಕ್ಷಣಗಳು ಗೋಚರಿಸುತ್ತಿಲ್ಲ ಬೇಲೂರು ಭಾಗದಿಂದ ಮೂಡಿಗೆರೆ ಕಡೆಗೆ ಒಂಟಿ ಆನೆಗಳು ಪದೇ ಪದೇ ದಾಳಿ ಇಡುತ್ತಿದ್ದು ಜನರು ಆತಂಕ ಪಡುವಂತಾಗಿದೆ.
ನಿನ್ನೆ ರಾತ್ರಿ ಬೇಲೂರು – ಮೂಡಿಗೆರೆ ಗಡಿ ಗ್ರಾಮದ ರಸ್ತೆಯಲ್ಲಿ ಪುಂಡಾನೆಯೊಂದು ನಡು ರಸ್ತೆಯಲ್ಲಿ ಓಡಾಟ ನಡೆಸಿದೆ. ಬೇಲೂರು ಭಾಗಗಳಿಂದ ಆನೆಗಳು ಪ್ರತಿನಿತ್ಯ ಮೂಡಿಗೆರೆ ಭಾಗಕ್ಕೆ ಒಂದಲ್ಲ ಒಂದು ಆನೆಗಳು ಆಗಮಿಸಿ ಬೆಳೆ ಹಾನಿ ಮಾಡುತ್ತಿವೆ ಹೀಗಾಗಿ ಸುತ್ತಮುತ್ತಲಿನ ಗ್ರಾಮಸ್ಥರು ಮನೆಯಿಂದ ಹೊರಬರಲು ಆತಂಕ ಪಡುವಂತಾಗಿದೆ.

* ಗಂಡನ ಯಶಸ್ಸಿನ ಹಿಂದೆ ಹೆಣ್ಣಿನ ಶಕ್ತಿ ಅಗಾಧವಾಗಿದೆ -ನ್ಯಾಯಾಧೀಶೆ ಭಾನುಮತಿ

ಚಿಕ್ಕಮಗಳೂರು : ಸ್ವಾಭಿಮಾನದಿಂದ ಜೀವಿಸುವ ಎಲ್ಲರಂತೆ ಸಮಾಜದಲ್ಲಿ ಕಾರ್ಯ ನಿರ್ವಹಿಸುವ ಹೆಣ್ಣು ದುರ್ಬಲಳಲ್ಲ. ಜೊತೆಗೆ ಗಂಡಿನ ಯಶಸ್ಸಿನ ಹಿಂದೆ ಹೆಣ್ಣಿನ ಶಕ್ತಿ ಅಗಾಧವಾಗಿದೆ ಎಂದು ಪ್ರಭಾರ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಭಾನುಮತಿ ಹೇಳಿದರು.
ನಗರದ ಟಿ.ಎಂ.ಎಸ್‌ ಶಾಲೆಯ ಸಭಾಂಗಣದಲ್ಲಿ ಚಿಕ್ಕಮಗಳೂರು ವಕೀಲರ ಸಂಘದಿಂದ ಏರ್ಪಡಿಸಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಕ್ರೀಡಾ ವಿಜೇತರಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು. ಸಮಾಜದ ಬಹುತೇಕ ಕ್ಷೇತ್ರಗಳಲ್ಲಿ ಸಾಧನೆಗೈದಿರುವ ಹೆಣ್ಣು. ಮಡದಿ, ತಾಯಿ ಹಾಗೂ ಅಕ್ಕತಂಗಿಯರ ಬಾಂಧವ್ಯ ನಿಭಾಯಿಸುವ ಶಕ್ತಿ ಹೊಂದಿದ್ದಾಳೆ. ಅಲ್ಲದೇ ಶಿಕ್ಷಕಿ, ಗಾಯನ ಹಾಗೂ ನ್ಯಾಯಾಧೀಶರಾಗಿ ನೊಂದವರ ಬಾಳಿಗೆ ನ್ಯಾಯ ಒದಗಿಸುವ ಮೂಲಕ ಬಡವರ ಪಾಲಿಗೆ ಆಶಾದಾಯಕವಾಗಿದ್ದಾಳೆ ಎಂದರು.
ಕುಟುಂಬದ ಸದಸ್ಯರಲ್ಲಿ ಅನಾರೋಗ್ಯ ಕಂಡುಬಂದಲ್ಲಿ ಕುಟುಂಬದ ಸದಸ್ಯರಲ್ಲಿ ಅನಾರೋಗ್ಯ ಕಂಡುಬಂದಲ್ಲಿ ಮೊದಲು ಆರೈಕೆಯ ಗುಣ ಮಹಿಳೆಯರು ಬೆಳೆಸಿಕೊಂಡಿದ್ದಾರೆ. ರೋಗ ಗುಣಮುಖವಾಗಲು ಹಲವಾರು ಪ್ರಯತ್ನಗಳು ನಡೆಸಿ ಸುರಕ್ಷತೆಯಿಂದ ಕುಟುಂಬವನ್ನು ಕಾಪಾಡುವ ಜವಾಬ್ದಾರಿ ಹೊತ್ತಿರುವ ಹೆಣ್ಣು ಕರುಣಾಮಯಿ ಎಂದು ತಿಳಿಸಿದರು.

* ವಸತಿ ಶಾಲೆಯಿಂದ ಇಬ್ಬರು ವಿದ್ಯಾರ್ಥಿಗಳು ನಾಪತ್ತೆ

ಚಿಕ್ಕಮಗಳೂರು: ಮಂಗಳೂರು ಬಾಲಕ ನಾಪತ್ತೆ ಪ್ರಕರಣ ಮಾಸುವ ಮುನ್ನವೇ ಕಾಫಿನಾಡು ಚಿಕ್ಕಮಗಳೂರು ಹೊರವಲಯದ ತೇಗೂರಿನ ಎ.ಪಿ.ಜೆ.ಅಬ್ದುಲ್ ಕಲಾಂ ವಸತಿ ಶಾಲೆಯಿಂದ ಇಬ್ಬರು ಬಾಲಕರು ನಾಪತ್ತೆಯಾಗಿದ್ದಾರೆ. ತರುಣ್ ಹಾಗೂ ಯಶ್ವಿತ್‌ ಸಾಲಿಯಾನ್ ಎಂಬ 9ನೇ ತರಗತಿ ಇಬ್ಬರು ಬಾಲಕರು ನಾಪತ್ತೆಯಾಗಿದ್ದಾರೆ. ಕಳೆದ 10 ದಿನಗಳ ಹಿಂದೆ ಮಧ್ಯರಾತ್ರಿ ಶಾಲೆಯಿಂದ ನಾಪತ್ತೆಯಾಗಿರೋ ಮಾಹಿತಿ ಇದೀಗ ಲಭ್ಯವಾಗಿದೆ.
ನಾಪತ್ತೆಯಾಗಿರೋ ಬಾಲಕರಿಗಾಗಿ ಶಾಲೆಯ ಸಿಬ್ಬಂದಿಗಳು ಹುಡುಕಾಟ ನಡೆಸಿದ್ದಾರೆ. ಆದರೆ ಈವರೆಗೂ ಬಾಲಕರು ಮನೆಗೂ ಹೋಗಿಲ್ಲ. ವಸತಿ ಶಾಲೆಯಲ್ಲಿ ಇರಲ್ಲ ಎಂದು ಈ ಹಿಂದೆಯೂ ಎರಡು ಬಾರಿ ವಸತಿ ಶಾಲೆಯಿಂದ ಓಡಿ ಹೋಗಿರುವ ಕುರಿತು ಶಾಲೆಯಿಂದ ಮಾಹಿತಿ ಸಿಕ್ಕಿದೆ. ಮಕ್ಕಳು ಪತ್ತೆಯಾಗದ ಕಾರಣ ಶಾಲಾ ಆಡಳಿತ ಮಂಡಳಿಯಿಂದ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.