Categories
ಮಂಗಳೂರು

ಕಾದು ಕೆಂಡವಾಗಿರುವ ಮಂಗಳೂರು!

ಕಾದು ಕೆಂಡವಾಗಿರುವ ಮಂಗಳೂರು!

* ನಗರದಲ್ಲಿ ನೀರಿನ ಸಮಸ್ಯೆ, ಇನ್ನು ಕೆಲ ದಿನಗಳಲ್ಲಿ ಜನರಿಗೆ ಸಂಕಷ್ಟ
* ಮಂಗಳೂರಿನಲ್ಲಿ ಕಾರ್ಪೋರೇಟರ್ ಗಳೆ ಇಲ್ಲದ ಪರಿಸ್ಥಿತಿ

NAMMUR EXPRESS NEWS
ಮಂಗಳೂರು: ಬಂದರು ನಗರಿ ಮಂಗಳೂರು ಬಿಸಿಲಿನ ಧಗೆಗೆ ಕಾದ ಕೆಂಡದಂತಿದೆ. ಜೊತೆಗೆ ನಗರದಲ್ಲಿ ನೀರಿನ ಸಮಸ್ಯೆ ಇನ್ನು ಕೆಲ ದಿನಗಳಲ್ಲಿ ಜನರಿಗೆ ಸಂಕಷ್ಟವನ್ನು ತಂದೊಡ್ಡಲಿದೆ. ಜೂನಿನಲ್ಲಿ ಭಾರಿ ಮಳೆಯೂ ಬೀಳಲಿದೆ. ಆದರೆ, ಜನರಿಗಾಗುವ ಸಮಸ್ಯೆಯನ್ನು ಪರಿಹರಿಸಲು ಮಂಗಳೂರಿನಲ್ಲಿ ಕಾರ್ಪೋರೇಟರ್ಗಳೆ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ.
ಮಂಗಳೂರು ಮಹಾನಗರ ಪಾಲಿಕೆಯ ಐದು ವರ್ಷಗಳ ಅಧಿಕಾರಾವಧಿ ಫೆ. 27 ಕ್ಕೆ ಮುಕ್ತಾಯವಾಗಿದೆ. ಪಾಲಿಕೆ ಅವಧಿಯಲ್ಲಿ ನಗರದ 60 ವಾರ್ಡ್ನ ಚುನಾಯಿತ ಪ್ರತಿನಿಧಿಗಳಾದ ಕಾರ್ಪೋರೇಟರಗಳು ಜನರ ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನಿಸುತ್ತಿದ್ದರು. ಆದರೆ, ಇದೀಗ ಎಲ್ಲಾ ಕಾರ್ಪೋರೇಟರ್ಗಳು ಮಾಜಿಯಾಗಿದ್ದಾರೆ. ಈ ಕಾರಣದಿಂದ ಜನರ ಮತ್ತು ಪಾಲಿಕೆಯ ನಡುವಿನ ಕೊಂಡಿಯಾಗಬೇಕಿದ್ದ ಕಾರ್ಪೋರೇಟರ್ಗಳು ಇಲ್ಲದಿರುವುದು ಸದ್ಯದ ಪರಿಸ್ಥಿತಿಯಲ್ಲಿ ಸಮಸ್ಯೆಗೆ ಕಾರಣವಾಗಿದೆ.

* ಮಂಗಳೂರಲ್ಲಿ ಎಲ್ಲಾ ಮಾಜಿ ಕಾರ್ಪೋರೇಟರ್ ಗಳೇ!

ಮಂಗಳೂರು ನಗರಿ ಬಿರು ಬೇಸಿಗೆಗೆ ತತ್ತರಿಸುತ್ತಿದೆ. ಮಂಗಳೂರು ನಗರದಲ್ಲಿ ಬಿಸಿ ಗಾಳಿಯ ತೀವ್ರತೆಗೆ ಜನರು ಸಿಲುಕಿದ್ದಾರೆ. ಏಪ್ರಿಲ್- ಮೇ ತಿಂಗಳ ಸಂದರ್ಭದಲ್ಲಿ ಸಾಮಾನ್ಯವಾಗಿ ನೀರಿನ ಸಮಸ್ಯೆ ಎದುರಾಗಲಿದೆ. ಮಂಗಳೂರಿಗೆ ನೀರು ಪೂರೈಸುವ ತುಂಬೆ ಅಣೆಕಟ್ಟಿನಲ್ಲಿ ನೀರಿನ ಸಂಗ್ರಹದಲ್ಲಿ ತೊಂದರೆ ಇಲ್ಲದಿದ್ದರೂ ಮಂಗಳೂರು ನಗರದ ಹಲವು ಭಾಗಗಳಿಗೆ ಸರಿಯಾಗಿ ನೀರು ತಲುಪುವುದಿಲ್ಲ. ಇದಕ್ಕೆ ಕಾರಣ ಮಂಗಳೂರು ನಗರ ಗುಡ್ಡ, ತಗ್ಗು ಪ್ರದೇಶಗಳಲ್ಲಿ ಇರುವಂತಹದು, ಇಂತಹ ಸಮಸ್ಯೆ ಎದುರಾದಾಗ ಇದನ್ನು ಕಾರ್ಪೋರೇಟರ್ಗಳ ಗಮನಕ್ಕೆ ತಂದರೆ ಅವರು ಅದನ್ನು ಪಾಲಿಕೆ ಅಧಿಕಾರಿಗಳೊಂದಿಗೆ ಸಂವಹನ ಮಾಡಿ ಬಗೆಹರಿಸುತ್ತಾರೆ. ಆದರೆ, ಇದೀಗ ಪಾಲಿಕೆ ಅವಧಿ ಮುಗಿದಿರುವುದರಿಂದ ಕಾರ್ಪೋರೇಟರ್ಗಳು ಮಾಜಿಯಾಗಿದ್ದಾರೆ. ಈ ಕಾರಣದಿಂದ ಜನರು ಸಮಸ್ಯೆಯನ್ನು ಎದುರಿಸಲಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.