ಮಾಜಿ ಶಾಸಕ ಡಿ.ಎನ್ ಜೀವರಾಜ್ ವಿರುದ್ಧ ಅವಹೇಳನಕಾರಿ ಪೋಸ್ಟ್, ದೂರು ದಾಖಲು
* ಈ ಹಿಂದೆ ಹಲವು ಬಾರಿ ದೂರು ನೀಡಿದರೂ ಪೊಲೀಸ್ ಇಲಾಖೆಯಿಂದ ಕ್ರಮವಿಲ್ಲ
* ಗಲಭೆಯಾದರೆ ಪೊಲೀಸರೇ ನೇರ ಹೊಣೆ,ಬಿಜೆಪಿ ಆರೋಪ
NAMMMUR EXPRESS NEWS
ಎನ್.ಆರ್ ಪುರ: ಹಲವು ದಿನಗಳಿಂದ ಮಾಜಿ ಶಾಸಕ ಡಿ.ಎನ್ ಜೀವರಾಜ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಸಂದೇಶ,ಪೋಸ್ಟ್ಗಳನ್ನು ಹಾಕಲಾಗುತ್ತಿದ್ದು ಈ ಕುರಿತು ಎನ್.ಆರ್ ಪುರ ತಾಲೂಕು ಬಿಜೆಪಿ ವತಿಯಿಂದ ಅಧ್ಯಕ್ಷ ನೀಲೇಶ್ರವರ ನೇತೃತ್ವದಲ್ಲಿ ತಾಲೂಕಿನ ಪೋಲಿಸ್ ಠಾಣೆಯಲ್ಲಿ ದೂರು ನೀಡಲಾಗಿದೆ.
ದೂರಿನಲ್ಲಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
* ಹಲವು ಬಾರಿ ದೂರು ನೀಡಿದರು ಕ್ರಮವಾಗಿಲ್ಲ
ಈ ಹಿಂದೆ ಕೂಡ ಹಲವು ಬಾರಿ ನಮ್ಮ ನಾಯಕರ ವಿರುದ್ಧ ಕಿಡಿಕೇಡಿಗಳು ಅವಹೇಳನಕಾರಿ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು ಈ ಸಮಯದಲ್ಲಿ ದೂರು ನೀಡಿದರೂ ಪೊಲೀಸ್ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ ಹೀಗೆ ಮುಂದುವರೆದು ನಾಳೆ ಗಲಭೆಗಳು ನಡೆದರೆ ಅದಕ್ಕೆ ಪೊಲೀಸ್ ಇಲಾಖೆಯೇ ನೇರ ಹೊಣೆಯಾಗುತ್ತದೆ ಎಂದು ಎಚ್ಚರಿಸಿದ್ದಾರೆ.
