Categories
ಚಿಕ್ಕಮಗಳೂರು

ಮನೆಯಲ್ಲೇ ಗೋವನ್ನು ಕಡಿದು ಮಾಂಸ ಮಾಡಿ ನೇತುಹಾಕಿದ್ದ ಗೋಕಳ್ಳ ಅರೆಸ್ಟ್

ಮನೆಯಲ್ಲೇ ಗೋವನ್ನು ಕಡಿದು ಮಾಂಸ ಮಾಡಿ ನೇತುಹಾಕಿದ್ದ ಗೋಕಳ್ಳ ಅರೆಸ್ಟ್

* ಹಲವು ದಿನಗಳಿಂದ ಗೋ ಕಳ್ಳತನ ಹಾಗೂ ಗೋಮಾಂಸ ಮಾಡುತ್ತಿದ್ದ ಆರೋಪ
* ಹಿಂದೂ ಸಂಘಟನೆ ಕಾರ್ಯಕರ್ತರಿಂದ ಪೊಲೀಸರಿಗೆ ಮಾಹಿತಿ

NAMMMUR EXPRESS NEWS
ಕೊಪ್ಪ: ಮಲೆನಾಡು ಭಾಗದಲ್ಲಿ ದಿನದಿಂದ ದಿನಕ್ಕೆ ಎಗ್ಗಿಲ್ಲದೇ ನಡೆಯುತ್ತಿರುವ ಗೋಕಳ್ಳತನ ಹಾಗೂ ಅಕ್ರಮ ಗೋಸಾಗಾಟ ಪ್ರಕರಣಗಳ ಮಧ್ಯೆ ಇಂದು ಗೋಕಳ್ಳತನ ಹಾಗೂ ಗೋಮಾಂಸ ಮಾಡುತ್ತಿದ್ದ ತಾಲೂಕಿನ ಹರಿಹರಪುರ ಹೋಬಳಿಯ ಕಾಳನಾಯಕನಕಟ್ಟೆಯ ನೂರುಲ್ಲಾ ಎಂಬುವನನ್ನು ಇಂದು ಹಿಂದೂಪರ ಸಂಘಟನೆ ಕಾರ್ಯಕರ್ತರ ಮಾಹಿತಿ ಮೇರೆಗೆ ದಾಳಿ ಮಾಡಿ ಪೊಲೀಸರು ರೆಡ್ ಹ್ಯಾಂಡ್ ಆಗಿ ಬಂಧಿಸಿದ್ದಾರೆ.
ಇಂದು ಬೆಳಿಗ್ಗೆ ತನ್ನ ಮನೆಯ ಹಿಂಬದಿಯಲ್ಲಿ ರಾಜಾರೋಷವಾಗಿ ಗೋವನ್ನು ಕಡಿದು ಮಾಂಸ ಮಾಡಿ ನೇತು ಹಾಕಿದ ಸಂದರ್ಭದಲ್ಲಿ ಹಿಂದೂಪರ ಸಂಘಟನೆ ಕಾರ್ಯಕರ್ತರು ನೀಡಿದ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಪೊಲೀಸರು ಆರೋಪಿ ನೂರುಲ್ಲಾನನ್ನು ವಶಕ್ಕೆ ಪಡೆದಿದ್ದಾರೆ. ಈ ಹಿಂದೆಯೂ ಕೂಡ ಈತನ ಮೇಲೆ ಅನೇಕ ಬಾರಿ ಗೋಕಳ್ಳತನ,ಸಾಗಾಟ,ಗೋಮಾಂಸ ಮಾಡಿದ ಆರೋಪ ಕೇಳಿಬಂದಿತ್ತು. ಸದ್ಯ ಆರೋಪಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

* ಪೊಲೀಸರು ಹಾಗೂ ಹಿಂದೂಪರ ಸಂಘಟನೆ ಕಾರ್ಯಕರ್ತರ ನಡುವೆ ವಾಗ್ವಾದ
ಘಟನಾ ಸ್ಥಳಕ್ಕಾಗಮಿಸಿದ ಪೊಲೀಸರು ಹಾಗೂ ಹಿಂದೂ ಸಂಘಟನೆಯ ಕಾರ್ಯಕರ್ತರ ನಡುವೆ ವಾಗ್ವಾದ ನಡೆಯಿತು. ಸಾಮಾಜದಲ್ಲಿ ಶಾಂತಿ ಕದಡುತ್ತಿರುವ ಖದೀಮ ನೂರುಲ್ಲಾನನ್ನು ತಕ್ಷಣ ಗಡಿಪಾರು ಮಾಡಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಪೊಲೀಸರು ರಾಜ ಮರ್ಯಾದೆಯಲ್ಲಿ ಆರೋಪಿಯನ್ನು ಕರೆದೊಯ್ಯುತ್ತಾರೆ ಆರೋಪಿಯೂ ಎರಡೇ ದಿನಕ್ಕೆ ಬೇಲ್ ಮೇಲೆ ಹೊರಬಂದು ಮತ್ತದೇ ಕೆಲಸ ಮಾಡುತ್ತಾನೆ ಆದ್ದರಿಂದ ಇವನ ಮೇಲೆ ರೌಡಿಶೀಟರ್ ಹಾಕಿ ಇಲ್ಲವೇ ಗಡಿಪಾರು ಮಾಡುವಂತೆ ಕಾರ್ಯಕರ್ತರು,ಸ್ಥಳೀಯರು ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.