ಪೊಲೀಸ್ ಲೇಔಟ್‌ನಲ್ಲೇ ₹50 ಲಕ್ಷದ ಚಿನ್ನ ಕದ್ದ ಖದೀಮರು..!
* ನಿವೃತ್ತ ಪೊಲೀಸ್ ಸಿಬ್ಬಂದಿಗಳಿರುವ ಬಡಾವಣೆ
* ಸಿಸಿಟಿವಿಯಲ್ಲಿ ಅನುಮಾನಾಸ್ಪದ ಗುಂಪು ಪತ್ತೆ!
NAMMMUR EXPRESS NEWS
ಚಿಕ್ಕಮಗಳೂರು: ನಗರದ ಪೊಲೀಸ್ ಲೇಔಟ್‌ನ ಮನೆಯೊಂದರಲ್ಲಿ ಕಳ್ಳತನ ನಡೆದಿದ್ದು, ಸುಮಾರು ₹50 ಲಕ್ಷ ಮೌಲ್ಯದ ಚಿನ್ನಾಭರಣ ಕಳುವಾಗಿರುವ ಘಟನೆ ಬೆಳಕಿಗೆ ಬಂದಿದೆ. ಪೊಲೀಸ್ ಲೇಔಟ್ ನಿವಾಸಿ ಪುಪ್ಪೇಗೌಡ ಅವರು ತಮ್ಮ ಕುಟುಂಬದ ಸಮೇತರಾಗಿ ಬೇರೆ ಊರಿಗೆ ಹೋಗಿದ್ದ ಸಂದರ್ಭದಲ್ಲಿ ಅವರ ಮನೆಯಲ್ಲಿ ಕಳ್ಳತನ ನಡೆದಿದ್ದು, ಸುಮಾರು 490 ಗ್ರಾಂ ಚಿನ್ನಾಭರಣ ಕಳುವು ಮಾಡಲಾಗಿದೆ. ಈ ಸಂಬಂಧ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಾಲಿ ಸೇವೆಯಲ್ಲಿರುವ ಹಾಗೂ ನಿವೃತ್ತ ಪೊಲೀಸರು ಈ ಬಡಾವಣೆಯಲ್ಲಿ ವಾಸವಾಗಿದ್ದಾರೆ.
ಪೊಲೀಸ್ ಬಡಾವಣೆಗೆ ಕಳ್ಳರು ಬಂದು ಕಳುವು ಮಾಡಿರುವುದು ಇಲಾಖೆಗೆ ಸಾರ್ವಜನಿಕವಾಗಿ ಮುಜುಗರವನ್ನುಂಟು ಮಾಡಿದೆ. ಪುಟ್ಟೇಗೌಡರ ಮನೆಯಲ್ಲಿ ಕಳುವು ಆಗಿ ಎರಡೇ ದಿನಕ್ಕೆ ಅಂದರೆ ಜೂನ್ 21ರ ರಾತ್ರಿ ಆರು ಮಂದಿಯ ಗ್ಯಾಂಗ್‌ವೊಂದು ರಾತ್ರಿ ವೇಳೆಯಲ್ಲಿ ಓಡಾಡುತ್ತಿರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.