Categories
ಚಿಕ್ಕಮಗಳೂರು

ಸೆ.6 ಕ್ಕೆ ಕಾಫಿನಾಡಲ್ಲಿ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟ

ಸೆ.6 ಕ್ಕೆ ಕಾಫಿನಾಡಲ್ಲಿ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟ

* ಜಿಲ್ಲಾಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲು ಯಾರಿಗೆಲ್ಲಾ ಅರ್ಹತೆ
* ಪುರುಷರಿಗೆ ಹಾಗೂ ಮಹಿಳೆಯರಿಗೆ ಯಾವೆಲ್ಲಾ ಕ್ರೀಡೆಗಳನ್ನು ಆಯೋಜಿಸಿದೆ

NAMMMUR EXPRESS NEWS
ಚಿಕ್ಕಮಗಳೂರು : ಜಿಲ್ಲಾಡಳಿತ, ಜಿಲ್ಲಾಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಸೆ.6ರಂದು ಬೆಳಗ್ಗೆ 10 ಗಂಟೆಗೆ ನಗರದ ನೇತಾಜಿ ಸುಭಾಶ್ಚಂದ್ರ ಬೋಸ್‌ ಜಿಲ್ಲಾಆಟದ ಮೈದಾನ , ರಾಮನಹಳ್ಳಿಯ ಡಿಎಆರ್‌ ಪೊಲೀಸ್‌ ಆಟದ ಮೈದಾನ ಹಾಗೂ ಜಿಲ್ಲಾ ಶತಮಾನೋತ್ಸವ ಕ್ರೀಡಾಂಗಣದಲ್ಲಿ ಜಿಲ್ಲಾಮಟ್ಟದ ದಸರಾ ಕ್ರೀಡಾಕೂಟ ಹಮ್ಮಿಕೊಳ್ಳಲಾಗಿದೆ.
ತಾಲೂಕು ದಸರಾ ಕ್ರೀಡಾಕೂಟದಲ್ಲಿವೈಯಕ್ತಿಕ ಸ್ಪರ್ಧೆಗಳಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಹಾಗೂ ಗುಂಪು ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದವರು ಜಿಲ್ಲಾಮಟ್ಟದ ದಸರಾ ಕ್ರೀಡೆಯಲ್ಲಿ ಭಾಗವಹಿಸಲು ಅರ್ಹತೆ ಪಡೆದಿದ್ದಾರೆ.
ಕ್ರೀಡಾ ಸ್ಪರ್ಧೆಗಳಲ್ಲಿ ಪುರುಷರಿಗೆ ಅಥ್ಲೆಟಿಕ್ಸ್‌ ನಲ್ಲಿ 100 ಮೀ., 200 ಮೀ., 400 ಮೀ., 800 ಮೀ., 1500 ಮೀ., 5000 ಮೀ., 10,000 ಮೀ ಓಟ, ಉದ್ದ ಜಿಗಿತ, ಎತ್ತರ ಜಿಗಿತ, ಗುಂಡು ಎಸೆತ, ಟ್ರಿಪಲ್‌ ಜಂಪ್‌, ಜಾವಲಿನ್‌ ಎಸೆತ, ಡಿಸ್ಕಸ್‌ ಎಸೆತ, 110 ಮೀಟರ್‌ ಹರ್ಡಲ್ಸ್‌, 4್ಡ100 ಮೀ. ಮತ್ತು 4್ಡ400 ಮೀ. ರಿಲೇ ಹಾಗೂ ಗುಂಪು ಸ್ಪರ್ಧೆಯಲ್ಲಿವಾಲಿಬಾಲ್‌, ಕಬಡ್ಡಿ, ಖೋ ಖೋ, ಥ್ರೋಬಾಲ್‌, ಬಾಲ್‌ ಬ್ಯಾಡ್ಮಿಂಟನ್‌, ಷಟಲ್‌ ಬ್ಯಾಡ್ಮಿಂಟನ್‌, ಫುಟ್‌ಬಾಲ್‌, ಬಾಸ್ಕೆಟ್‌ ಬಾಲ್‌, ಕುಸ್ತಿ, ಹಾಕಿ, ಹ್ಯಾಂಡ್‌ ಬಾಲ್‌, ಟೇಬಲ್‌ ಟೆನಿಸ್‌ ಮತ್ತು ಯೋಗ- (ಪಾದ ಹಸ್ತಾಸನ, ಆಕರ್ಣ ಧನುರಾಸನ, ಊಧ್ರ್ವ ಧನುರಾಸನ) ಹಾಗೂ ಅರ್ಧ ಮಮತ್ಸೇಂದ್ರಾಸನ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.
ಮಹಿಳೆಯರಿಗೆ ಅಥ್ಲೆಟ್ಸ್‌ನಲ್ಲಿ 100 ಮೀ,200ಮೀ, 400 ಮೀ, 800 ಮೀ., 1500 ಮೀ., 5000 ಮೀ. 10 ಸಾವಿರ ಮೀಟರ್‌ ಓಟ, ಉದ್ದ ಜಿಗಿತ, ಎತ್ತರ ಜಿಗಿತ, ಗುಂಡು ಎಸೆತ, ಟ್ರಿಪಲ್‌ ಜಂಪ್‌, ಜಾವಲಿನ್‌ ಎಸೆತ, ಡಿಸ್ಕಸ್‌ ಎಸೆತ, 100 ಮೀ. ಹರ್ಡಲ್ಸ್‌, 4್ಡ100 ಮೀ. ಮತ್ತು 4್ಡ400 ಮೀ. ರಿಲೇ, ಗುಂಪು ಸ್ಪರ್ಧೆಯಲ್ಲಿ ವಾಲಿಬಾಲ್‌, ಕಬಡ್ಡಿ, ಖೋಖೋ, ಥ್ರೋಬಾಲ್‌, ಬಾಲ್‌ ಬ್ಯಾಡ್ಮಿಂಟನ್‌, ಷಟಲ್‌ ಬ್ಯಾಡ್ಮಿಂಟನ್‌, ಬಾಸ್ಕೆಟ್‌ಬಾಲ್‌, ಕುಸ್ತಿ, ಹಾಕಿ ಮತ್ತು ಹ್ಯಾಂಡ್‌ಬಾಲ್‌, ಟೇಬಲ್‌ ಟೆನಿಸ್‌ ಬಾಲ್‌ ಮತ್ತು ಯೋಗ-(ಪಾದ ಹಸ್ತಾಸನ, ಆಕರ್ಣ ಧನುರಾಸನ, ಊಧ್ರ್ವಾ ಧನುರಾಸನ ಹಾಗೂ ಅರ್ಧ ಮಮತ್ಸೇಂದ್ರಾಸನ) ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಪುರುಷರಿಗೆ ಮತ್ತು ಮಹಿಳೆಯರಿಗೆ ಟೆನಿಸ್‌, ನೆಟ್‌ಬಾಲ್‌ ಮತ್ತು ಈಜು ಸ್ಪರ್ಧೆಗಳನ್ನು ಜಿಲ್ಲಾಮಟ್ಟದಲ್ಲಿಆಯ್ಕೆ ಮಾಡಿ ವಿಭಾಗ ಮಟ್ಟಕ್ಕೆ ಕಳುಹಿಸಿಕೊಡಲಾಗುವುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.