Categories
ಚಿಕ್ಕಮಗಳೂರು

ಚಾಲಕನ ನಿಯಂತ್ರಣ ತಪ್ಪಿ ಕಾಫಿ ಬೀಜ ತುಂಬಿದ ಲಾರಿ ಕಂದಕಕ್ಕೆ

ಚಾಲಕನ ನಿಯಂತ್ರತಪ್ಪಿ ಕಾಫಿ ಬೀಜ ತುಂಬಿದ ಲಾರಿ ಕಂದಕಕ್ಕೆ 

* ಕೊಪ್ಪ ತಾಲೂಕಿನ ಹೆಗ್ಗಾರುಕೊಡಿಗೆಯಲ್ಲಿ ಘಟನೆ
* ಮಂಗಳೂರಿಗೆ ಹೊರಟಿದ್ದ ಕಾಫೀ ಬೀಜ ತುಂಬಿದ ಲಾರಿ

NAMMMUR EXPRESS NEWS
ಕೊಪ್ಪ: ಚಾಲಕ ನಿಯಂತ್ರಣ ತಪ್ಪಿ ಕಾಫಿ ಬೀಜ ತುಂಬಿದ ಲಾರಿಯೊಂದು ಕಂದಕಕ್ಕೆ ಉರುಳಿದೆ.
ಮಂಗಳೂರಿಗೆ ಹೊರಟಿದ್ದ ಕಾಫಿ ಮೂಟೆ ತುಂಬಿದ ಲಾರಿ ತಾಲೂಕಿನ ಹೆಗ್ಗಾರುಕೊಡಿಗೆ ಸಮೀಪ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಸುಮಾರು 40 ಅಡಿ ಆಳದ ಕಂದಕಕ್ಕೆ ಉರುಳಿದೆ. ದೃಷ್ಟವಶಾತ್ ಲಾರಿ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಸಣ್ಣ ಪುಟ್ಟ ಗಾಯಗಳಾಗಿದ್ದು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಲಾರಿ ಉರುಳಿಬಿದ್ದ ಪರಿಣಾಮ ಲಾರಿಯಲ್ಲಿದ್ದ ಕಾಫಿ ಬೀಜದ ಮೂಟೆಗಳು ಚಲ್ಲಾಪಿಲ್ಲೆಯಾಗಿವೆ. ಘಟನೆಯು ಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲಿಸಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.