ಅಡಿಕೆಗೆ ಔಷಧಿ: ಅಡಿಕೆ ಬೆಳೆಗಾರನಿಗೆ ಆತಂಕ!
– ರೈತರಿಗೆ ಸಾಕಷ್ಟು ಗೊಂದಲ: ಈ ಸಲ ಫಸಲು ಏನಾಗುತ್ತೆ?
– ಅಡಿಕೆಗೆ ಔಷಧಿ ಹೊಡೆಯದೆ ಇದ್ದರೆ ಅನೇಕ ರೋಗಭಾದೆ
– ಏನು ಮಾಡುತ್ತಿವೆ ಅಡಿಕೆ ಸಂಶೋಧನಾ ಕೇಂದ್ರಗಳು..?
NAMMUR EXPRESS NEWS
ಮಲೆನಾಡು: ಅಡಿಕೆ ಮಲೆನಾಡಿನ ಪ್ರಮುಖವಾದ ಆದಾಯದ ಬೆಳೆ. ಅಡಿಕೆಯಿಂದ ರೈತರಿಗೆ ಸಾಕಷ್ಟು ಅನುಕೂಲ ಉಂಟಾಗುತ್ತಿದೆ. ಮಲೆನಾಡು ಬೆಳೆಯುತ್ತಿದೆ. ಆದ್ರೆ ಅಡಿಕೆಗೆ ಇತ್ತೀಚಿನ ದಿನಗಳಲ್ಲಿರೋಗಗಳು ಉಂಟಾಗುತ್ತಿದ್ದು ಅವುಗಳನ್ನು ದೂರ ಮಾಡಲು ಸಾಧ್ಯ ಇಲ್ಲದಂತಹ ಪರಿಸ್ಥಿತಿಗಳು ಬಂದಿದೆ. ಇದು ರೈತನಲ್ಲಿ ಆತಂಕ ಸೃಷ್ಟಿ ಮಾಡಿದೆ.
ಈಗ ಮಲೆನಾಡಿನಲ್ಲಿ ಅಡಿಕೆಗೆ ಔಷಧಿ ಹೊಡೆಯಲು ಸಮಯ ಆಗಿದೆ. ಆದರೆ ಅತಿ ಹೆಚ್ಚು ಮಳೆ ಇರುವುದರಿಂದ ರೈತರಿಗೆ ಇದರಿಂದ ಸಾಕಷ್ಟು ಸಮಸ್ಯೆ ಉಂಟಾಗುತ್ತಿದೆ. ಮಳೆಯ ನಡುವೆಯೂ ಕೂಡ ಕೆಲವೊಂದಿಷ್ಟು ರೈತರು ಅಡಿಕೆಗೆ ಔಷಧಿ ಹೊಡೆಯಲು ಸಿದ್ಧತೆಯನ್ನು ಕೂಡ ಮಾಡಿಕೊಂಡಿದ್ದಾರೆ. ಈ ಬಾರಿ ಉತ್ತಮ ದರ ಸಿಕ್ಕಿದೆ. ಅದರೆ ಫಸಲು ಅರ್ಧಕರ್ಧ ಕಡಿಮೆ.
ರೋಗ ಬಾಧೆಗೆ ಸರ್ಕಾರದ ಮದ್ದು ಇನ್ನು ಸಿಗಲಿಲ್ಲ. ಜತೆಗೆ ರೈತರೇ ಶಾಶ್ವತ ಪರಿಹಾರಕ್ಕಾಗಿ ಒದ್ದಾಡುತ್ತಿದ್ದಾರೆ. ಆದರೂ ವರ್ಷದಿಂದ ವರ್ಷಕ್ಕೆ ಅಡಿಕೆ ತೋಟಗಳು ನಾಶ ಆಗುತ್ತಿವೆ. ಈ ಬಗ್ಗೆ ಸಂಶೋಧನಾ ಕೇಂದ್ರಗಳು ಗಂಭೀರವಾಗಿ ಯೋಚನೆ ಮಾಡಬೇಕಿದೆ.
