Categories
ಚಿಕ್ಕಮಗಳೂರು

ಕನ್ನಡ ಜಾನಪದ ಪರಿಷತ್‌ನಿಂದ ಜಾನಪದ ಗೀತ ಗಾಯನ ಸ್ಪರ್ಧೆ

ಕನ್ನಡ ಜಾನಪದ ಪರಿಷತ್‌ನಿಂದ ಜಾನಪದ ಗೀತ ಗಾಯನ ಸ್ಪರ್ಧೆ

* ವಿದ್ಯಾರ್ಥಿಗಳಿಗೆ ಬ್ಯಾಗ್,ನೋಟ್ ಬುಕ್ ವಿತರಣೆ
* ತಾಲೂಕು ಅಧ್ಯಕ್ಷ ಆಶಿಶ್ ದೇವಾಡಿಗ ನೇತೃತ್ವದಲ್ಲಿ ಕಾರ್ಯಕ್ರಮ

NAMMMUR EXPRESS NEWS
ಶೃಂಗೇರಿ: ತಾಲೂಕಿನ ಸ‌.ಕಿ.ಪ್ರಾ ಶಾಲೆ ಕೂತುಗೋಡಿನಲ್ಲಿ ಕನ್ನಡ ಜಾನಪದ ಪರಿಷತ್ ಶೃಂಗೇರಿ ತಾಲೂಕು ಇದರ ವತಿಯಿಂದ ಶಾಲಾ ವಿದ್ಯಾರ್ಥಿಗಳಿಗೆ ಜಾನಪದ ಗೀತ ಗಾಯನ ಸ್ಪರ್ಧೆ ಏರ್ಪಡಿಸಲಾಗಿತ್ತು ಹಾಗೂ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೂ ಬ್ಯಾಗ್,ನೋಟ್ ಬುಕ್ ವಿತರಿಸಲಾಯಿತು.
ತಾಲೂಕು ಜಾನಪದ ಸಾಹಿತ್ಯ ಅಧ್ಯಕ್ಷ ಆಶಿಶ್ ದೇವಾಡಿಗ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ತಾಲೂಕು ಜೆಸಿಐ ಅಧ್ಯಕ್ಷರಾದ ಅಶೋಕ್ ಬಿ.ಎಸ್ ಭಾಗವಹಿಸಿದ್ದರು. ತಾಲೂಕಿನಾದ್ಯಂತ ಈ ರೀತಿಯ ಕಾರ್ಯಕ್ರಮ ನಡೆಸಿ ಮಕ್ಕಳಲ್ಲಿ ಜಾನಪದ ಕಲೆಯ ಬಗ್ಗೆ ಆಸಕ್ತಿ ಮೂಡಿಸುವ ಕಾರ್ಯ ಮಾಡಲಾಗುವುದು ಎಂದು ಆಶಿಶ್ ದೇವಾಡಿಗ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.