Categories
ತೀರ್ಥಹಳ್ಳಿ

ತೀರ್ಥಹಳ್ಳಿ ಗಾಂಜಾ ಕೇಸ್: ಐವರಿಗೆ 4 ವರ್ಷ ಜೈಲು!

ತೀರ್ಥಹಳ್ಳಿ ಗಾಂಜಾ ಕೇಸ್: ಐವರಿಗೆ 4 ವರ್ಷ ಜೈಲು!
– ತೀರ್ಥಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಪ್ರಕರಣ
– ಈಗಲೂ ನಡೀತಿದೆ ಗಾಂಜಾ ಸೇಲ್: ಯುವ ಜನರ ಬದುಕು ಫೇಲ್!

NAMMUR EXPRESS 
ತೀರ್ಥಹಳ್ಳಿ: ತೀರ್ಥಹಳ್ಳಿಯಲ್ಲಿ ನಡೆದಿದ್ದ ಗಾಂಜಾ ಕೇಸ್ ಬಗ್ಗೆ ಕೋರ್ಟ್ ಅಂತಿಮ ತೀರ್ಪು ನೀಡಿದ್ದು ಐವರಿಗೆ 4 ವರ್ಷ ಜೈಲು ಶಿಕ್ಷೆ ಆಗಿದೆ.
ತೀರ್ಥಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ವಿಠಲ ನಗರದಲ್ಲಿ ಮಾದಕ ವಸ್ತು ಗಾಂಜಾವನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ ಅಂದಿನ ಡಿವೈಎಸ್ಪಿ ಶಾಂತವೀರ ರವರು ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ದಾಳಿ ನಡೆಸಿ, ಆರೋಪಿತರಾದ 1) ಅಲೋಕ್ ಮಂಡಲ್, 34 ವರ್ಷ, ಸೆಂಟ್ರಿಂಗ್ ಕೆಲಸ, ವಾಸ ಟೆಂಗಾಬಾರ, ಗೊಂಗಾರಾಂಪುರ್ ಸ್ಟೇಷನ್, ದಕ್ಕಿನ್ ದಿನೇಸ್ ಪುರ್, ಮಾಲ್ಡ, ಪಶ್ಚಿಮ ಬಂಗಾಳ, 2) ಶ್ರೀಬಾಷ್ ಸರ್ಕಾರ್, 20 ವರ್ಷ, ಸೆಂಟ್ರಿಂಗ್ ಕೆಲಸ, ಸ್ವಂತ ವಿಳಾಸ : ಪುರ್ಬ ಭೋಗ್ದಾಬ್ರಿ, ಮಗ್ಪಲ, ಕೂಚ್ ಬೆಹರ್, ಪಶ್ಚಿಮ ಬಂಗಾಳ, 3) ಅಮ್ರಿತ್ ಮಂಡಲ್, 27 ವರ್ಷ, ಸೆಂಟ್ರಿಂಗ್ ಕೆಲಸ, ವಾಸ: ಉತ್ತರ್ ಸಿಂಗಿಮರಿ ಪಶ್ಚಿಮ ಬಂಗಾಳ, 4) ಸಂಕರ್ ಬ್ಯಾಪಾರಿ, 28 ವರ್ಷ, ಸೆಂಟ್ರಿಂಗ್ ಕೆಲಸ, ವಾಸ ಖಲಿಷ, ಗೊಸಾನಿಮರಿ, ಪಶ್ಚಿಮ ಬಂಗಾಳ ಮತ್ತು 5) ಹರಧನ್ ಮಂಡಲ್, 32 ವರ್ಷ, ವಾಸ : ದಿನ್ಹಟ, ಜಂಬರಿ, ಕೂಚ್ ಬೆಹರ್, ಗೊಸ್ಸಾನಿಮರಿ, ಪಶ್ಚಿಮ ಬಂಗಾಳ ರವರುಗಳನ್ನು ದಸ್ತಗಿರಿ ಮಾಡಿ, ಸದರಿಯವರಿಂದ 1 ಕೆಜಿ 564 ಗ್ರಾಂ ತೂಕದ ಮಾದಕ ವಸ್ತು ಗಾಂಜಾ, ರೂ 3550 /- ನಗದು, 05 ಮೊಬೈಲ್ ಫೋನ್ ಗಳನ್ನು ಅಮಾನತ್ತು ಪಡಿಸಿಕೊಂಡು, ಸದರಿಯವರ ವಿರುದ್ಧ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಕಾನೂನು ರೀತ್ಯಾ ಪ್ರಕರಣ ದಾಖಲಿಸಿರುತ್ತದೆ. ಪ್ರಕರಣದಲ್ಲಿ ತನಿಖಾಧಿಕಾರಿಗಳಾದ ಶ್ರೀ ಅಶ್ವತ್ ಗೌಡ, ಪಿ.ಐ ತೀರ್ಥಹಳ್ಳಿ ಪೊಲೀಸ್ ಠಾಣೆ ರವರು ಪ್ರಕರಣದ ತನಿಖೆ ಪೂರೈಸಿ, ಆರೋಪಿತರ ವಿರುದ್ಧ ಘನ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲ್ಲಿಸಿರುತ್ತಾರೆ. ಘನ ನ್ಯಾಯಾಲಯದಲ್ಲಿ ಸರ್ಕಾರದ ಪರವಾಗಿ ಶ್ರೀ ಸುರೇಶ್ ಕುಮಾರ್ ಎ. ಎಂ.ಸರ್ಕಾರಿ ಅಭಿಯೋಜಕರವರು, ಪ್ರಕರಣದ ವಾದ ಮಂಡಿಸಿದ್ದು, ಘನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶಿವಮೊಗ್ಗದಲ್ಲಿ ಪ್ರಕರಣದ ವಿಚಾರಣೆ ನಡೆದು, ಆರೋಪಿತರ ವಿರುದ್ದ ಆರೋಪ ದೃಡಪಟ್ಟ ಹಿನ್ನೆಲೆಯಲ್ಲಿ, ಮಾನ್ಯ ನ್ಯಾಯಾಧಿಶರಾದ ಶ್ರೀ ಮಂಜುನಾಥ್ ನಾಯಕ್ ರವರು ದಿನಾಂಕಃ 16-07-2025 ರಂದು ಆರೋಪಿತರಿಗೆ 4 ವರ್ಷ ಕಠಿಣ ಕಾರಾವಾಸ ಶಿಕ್ಷೆ ಮತ್ತು ರೂ 25,000/- ದಂಡ, ದಂಡ ಕಟ್ಟಲು ವಿಫಲನಾದಲ್ಲಿ ಹೆಚ್ಚುವರಿ 6 ತಿಂಗಳು ಸಾಧಾ ಕಾರಾವಾಸ ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ.
ಇನ್ನು ತೀರ್ಥಹಳ್ಳಿ ಭಾಗಕ್ಕೆ ಗಾಂಜಾ ಸಾಗಣೆ ಆಗುತ್ತಿದೆ. ಯುವ ಜನರು ಈ ನಶೆಗೆ ಬಲಿ ಆಗುತ್ತಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.