Categories
ಚಿಕ್ಕಮಗಳೂರು

ಜಿಂಕೆ ಬೇಟೆಯಾಡಿ ಮಾಂಸ ಬೇಯಿಸುತ್ತಿದ್ದಾಗ ಅರಣ್ಯಾಧಿಕಾರಿಗಳ ದಾಳಿ

ಚಿಕ್ಕಮಗಳೂರು ಟಾಪ್ ನ್ಯೂಸ್

* ಜಿಂಕೆ ಬೇಟೆಯಾಡಿ ಮಾಂಸ ಬೇಯಿಸುತ್ತಿದ್ದಾಗ ಅರಣ್ಯಾಧಿಕಾರಿಗಳ ದಾಳಿ
* ಹೈ-ಟೆನ್ಷನ್ ವಿದ್ಯುತ್ ಕಂಬ ಏರಿ ಹೆದ್ದಾರಿ ಪ್ರಾಧಿಕಾರದ ವಿರುದ್ಧ ರೈತನಿಂದ ಪ್ರತಿಭಟನೆ
* ಪ್ರಧಾನಿ ಮೋದಿಯವರ 11 ವರ್ಷಗಳಲ್ಲಿನ ಸಾಧನೆ ಸರ್ವ ವ್ಯಾಪಿ – ಸರ್ವ ಸ್ಪರ್ಶಿ

NAMMMUR EXPRESS NEWS
* ಜಿಂಕೆ ಬೇಟೆಯಾಡಿ ಮಾಂಸ ಬೇಯಿಸುತ್ತಿದ್ದಾಗ ಅರಣ್ಯಾಧಿಕಾರಿಗಳ ದಾಳಿ
ಎನ್ ಆರ್ ಪುರ : ಚುಕ್ಕೆ ಜಿಂಕೆ ಬೇಟೆಯಾಡಿ ಮಾಂಸವನ್ನು ಪಾಲು ಮಾಡಿ ಬೇಯಿಸುತ್ತಿದ್ದ ವೇಳೆ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.ತಾಲೂಕಿನ ಆರಂಬಳ್ಳಿ ಮೀಸಲು ಅರಣ್ಯದ ಕುಸುಬೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಜಿಂಕೆ ಬೇಟೆಯಾಡಿ ಮನೆಯಲ್ಲಿಯೇ ಮಾಂಸವನ್ನು ಪಾಲು ಮಾಡಿ ಬೇಯಿಸುತ್ತಿದ್ದಾಗ ದಾಳಿ ನಡೆಸಿದ ಅರಣ್ಯ ಇಲಾಖೆಯ ಅಧಿಕಾರಿಗಳ ತಂಡ ಲೋಕೇಶ್, ಚಿನ್ನಯ್ಯ ಎಂಬ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಅನ್ವಯ 1972 ಮತ್ತು 3 2022, 9,39 R/W 2(16), 2(36), 50, ಮತ್ತು 55 ರ ಮೇಲೆ ಆರೋಪಿಗಳ ಮೇಲೆ ಪ್ರಕರಣ ದಾಖಲಿಸಲಾಗಿದೆ. ಕೊಪ್ಪ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ನಂದಿಶ್ ನೇತೃತ್ವದಲ್ಲಿ ಕೊಪ್ಪ ವಿಭಾಗದ ಅರಣ್ಯ ಅಧಿಕಾರಿಗಳಾದ ಬಾಬು ರಾಜೇಂದ್ರ ಪ್ರಸಾದ್, ಎನ್.ಆ‌ರ್ ಪುರ ವಲಯ ಅರಣ್ಯಾಧಿಕಾರಿ ಪ್ರವೀಣ್ ಕುಮಾರ್ ಹಾಗೂ ಮುತ್ತಿನಕೊಪ್ಪ ವಲಯದ ಸಿಬ್ಬಂದಿಗಳಾದ ಅರುಣ್ ಬಾರಂಗಿ ಕುಸುಬುರು, ನವೀನ್ ಕುಮಾ‌ರ್, ರಾಘವೇಂದ್ರ, ವಿಕಾಸ್ ಸುದೀಪ್ ಈ ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದರು.

* ಹೈ-ಟೆನ್ಷನ್ ವಿದ್ಯುತ್ ಕಂಬ ಏರಿ ಹೆದ್ದಾರಿ ಪ್ರಾಧಿಕಾರದ ವಿರುದ್ಧ ರೈತನಿಂದ ಪ್ರತಿಭಟನೆ
ತರೀಕೆರೆ: ತಾಲೂಕಿನ ಹಳಿಯೂರು ಗ್ರಾಮದಲ್ಲಿ ಹೆದ್ದಾರಿ ಪ್ರಾಧಿಕಾರದ ವಿರುದ್ಧ ರೈತನೋರ್ವ ಹೈ-ಟೆನ್ಷನ್ ವಿದ್ಯುತ್ ಕಂಬ ಏರಿ ಏಕಾಂಗಿಯಾಗಿ ಪ್ರತಿಭಟನೆ ನಡೆಸಿದ್ದಾರೆ.
ಹಳಿಯೂರು ಗ್ರಾಮದಲ್ಲಿ 22 ರೈತರಿಂದ ಸುಮಾರು 3 ಎಕರೆ 30 ಗುಂಟೆ ತೋಟ ರಸ್ತೆಗೆಂದು ಪ್ರಾಧಿಕಾರವು ವಶಪಡಿಸಿಕೊಂಡಿದೆ. ಈ ಭೂಮಿಯಲ್ಲಿ ರೈತರು ಶ್ರೀಗಂಧದ ಮರಗಳನ್ನು ಬೆಳೆದಿದ್ದರು. ಇದಕ್ಕೆ ನೀಡಬೇಕಾದ ಪರಿಹಾರದ ಮೊತ್ತ 62 ಕೋಟಿ ಎಂದು ನಮೂದಿಸುವ ಬದಲು ಒಂದೂವರೆ ಕೋಟಿ ಎಂದು ನಮೂದಿಸಿದ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಮತ್ತು ಅರಣ್ಯ ಇಲಾಖೆಯ ವಿರುದ್ಧ ರೈತರು ಪ್ರತಿಭಟನೆ ನಡೆಸಿದ್ದಾರೆ.
ರೈತರ ಪ್ರತಿಭಟನೆ ವೇಳೆ ಸ್ಥಳಕ್ಕಾಗಮಿಸಿದ ಪೊಲೀಸರು ರೈತರ ಬ್ಯಾನರ್ ಕಿತ್ತುಕೊಂಡು ಹೋಗಿದ್ದಾರೆಂದು ಆರೋಪಿಸಿ ಮತ್ತು ಸೂಕ್ತ ಪರಿಹಾರ ನೀಡುವಂತೆ,ಪೊಲೀಸರ ದೌರ್ಜನ್ಯ ತಡೆಯುವಂತೆ ಒತ್ತಾಯಿಸಿ ರೈತನೋರ್ವ ಏಕಾಂಗಿಯಾಗಿ ಹೈ-ಟೆನ್ಷನ್ ವಿದ್ಯುತ್ ಕಂಬ ಏರಿ ಪ್ರತಿಭಟನೆ ನಡೆಸಿದ್ದಾರೆ.

* ಪ್ರಧಾನಿ ಮೋದಿಯವರ 11 ವರ್ಷಗಳಲ್ಲಿನ ಸಾಧನೆ ಸರ್ವ ವ್ಯಾಪಿ – ಸರ್ವ ಸ್ಪರ್ಶಿ
ಚಿಕ್ಕಮಗಳೂರು: ಪ್ರಧಾನಿ ಮೋದಿಯವರ 11 ವರ್ಷಗಳಲ್ಲಿನ ಸಾಧನೆ ಸರ್ವ ವ್ಯಾಪಿ-ಸರ್ವ ಸ್ಪರ್ಶಿಯಾಗಿ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ತಲುವಂತಹ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ ಎಂದು ವಿಧಾನ ಪರಿಷತ್ ಉಪ ಸಭಾಪತಿ ಎಂ.ಕೆ ಪ್ರಾಣೇಶ್ ಹೇಳಿದ್ದಾರೆ.
ನಗರದ ಬಿಜೆಪಿ ಕಚೇರಿ ಪಾಂಚಜನ್ಯದಲ್ಲಿ ಏರ್ಪಡಿಸಿದ್ದ ಪ್ರಧಾನಿ ಮೋದಿಯವರ 11 ವರ್ಷಗಳ ಅಭಿವೃದ್ಧಿ ಕುರಿತ ವಿಕಸಿತ ಭಾರತದ ಜಿಲ್ಲಾ ಮಟ್ಟದ ಕಾರ್ಯಾಗಾರವನ್ನು ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಚಾಲನೆ ನೀಡಲಾಯಿತು.
ಇದಕ್ಕೂ ಮೋದಲು ಗಿಡ ನೆಡುವ ಮೂಲಕ ಪರಿಸರ ದಿನಾಚರಣೆ ಆಚರಿಸಲಾಯಿತು.
ಮೋದಿಯವರ 11 ವರ್ಷಗಳ ಸಾಧನೆಯನ್ನು ಸುವರ್ಣ ನ್ಯೂಸ್ ಅಕ್ಷರದಲ್ಲಿ ಬರೆದಿಡಬೇಕು,ದೇಶದ ಕಟ್ಟ ಕಡೆಯ ಜನರಿಗೂ ತಲುಪುವ ಯೋಜನೆಗಳು ಜಾರಿಯಾಗಿವೆ ಇವುಗಳನ್ನು ಎಲ್ಲರಿಗೂ ತಿಳಿಸುವ ಕೆಲಸ ಆಗಬೇಕಾಗಿದೆ ಎಂದರು. ಕಾರ್ಯಾಗಾರದಲ್ಲಿ ಜಿಲ್ಲಾಧ್ಯಕ್ಷ ಎಂ.ಆರ್ ದೇವರಾಜ್ ಶೆಟ್ಟಿ, ರೈತ ಮೋರ್ಚಾ ರಾಜ್ಯ ಕಾರ್ಯದರ್ಶಿ ಕಲ್ಮುರುಡಪ್ಪ ಸೇರಿದಂತೆ ಪಕ್ಷದ ಎಲ್ಲಾ ತಾಲೂಕಿನ ಮುಖಂಡರು,ಕಾರ್ಯಕರ್ತರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.