Categories
ತೀರ್ಥಹಳ್ಳಿ

ಯುವಕರಿಗೆ ಶೋಕಿ: ಜನರಿಗೆ ಕಿರಿಕಿರಿ..!

ಯುವಕರಿಗೆ ಶೋಕಿ: ಜನರಿಗೆ ಕಿರಿಕಿರಿ..!
* ತೀರ್ಥಹಳ್ಳಿಯಲ್ಲಿ ಟೂ ಸ್ಟ್ರೋಕ್ ಗಾಡಿಗಳ ಹಾವಳಿ
* ಯುವಕರ ಪುಂಡಾಟ: ಸಾರ್ವಜನಿಕರಿಗೆ ಪ್ರಾಣ ಸಂಕಟ!
* ದಾಖಲೆ ಇಲ್ಲದ ವಾಹನಗಳಿಗೆ ದಂಡ, ಹೆಲ್ಮೆಟ್ ಇಲ್ಲದಿದ್ರೆ ಕಷ್ಟ

NAMMUR EXPRESS NEWS
ತೀರ್ಥಹಳ್ಳಿ: ಮಲೆನಾಡು ಸುಂದರ ರಮಣೀಯ ಸ್ವಚ್ಛಂದ ಪರಿಸರವು ಸ್ವರ್ಗಕ್ಕೆ ಹೋಲುವ ತಾಣ. ಇದೀಗ ಪ್ರವಾಸೋದ್ಯಮ ಹಬ್ ಆಗಿ ಬೆಳೆಯುತ್ತಿದೆ.
ಹಾಗೆಯೇ ತೀರ್ಥಹಳ್ಳಿಯ ಪ್ರಕೃತಿ ಸೌಂದರ್ಯ ಅನೇಕ ಕವಿಗಳು ಪರಿಸರ ಪ್ರೇಮಿಗಳು, ದೊಡ್ಡ ದೊಡ್ಡ ಉದ್ಯಮಿಗಳು ಆಗಾಗ ಬಂದು ವಿಹರಿಸಿ ಕಾಲ ಕಳೆದು ಹೋಗುವಂತಹ ನೆಮ್ಮದಿಯ ತಾಣವಾಗಿದೆ.
ತೀರ್ಥಹಳ್ಳಿ ಪಟ್ಟಣ ಹಾಗೂ ಸುತ್ತಮುತ್ತ ಬೈಕ್ ಓಡಿಸುವ ಚಟ ಈಗ ಸಾರ್ವಜನಿಕರಿಗೆ ಕಿರಿಕಿರಿ ಮಾಡುತ್ತಿದೆ. ಸೈಲೆನ್ಸರ್ ಗಳಿಂದ ನಾನಾ ರೀತಿಯ ಕರ್ಕಶ ಶಬ್ದ ಬರುವಂತೆ ಮಾಡಿ ಶಬ್ದ ಮಾಲಿನ್ಯ ಮತ್ತು ವಾಯುಮಾಲಿನ್ಯ ಮಾಡುತ್ತಿದ್ದಾರೆ. ಎಂಬ ದೂರು ಕೇಳಿ ಬಂದಿದೆ. ಈ ಬಗ್ಗೆ ಪೊಲೀಸ್ ಇಲಾಖೆ ಖಡಕ್ ಕ್ರಮಕ್ಕೆ ಮುಂದಾಗಿದ್ದಾರೆ.
ಇನ್ನು ಪಟ್ಟಣದಲ್ಲಿ ತ್ರಿಬ್ಬಲ್ ರೈಡಿಂಗ್ ಮತ್ತು ವೇಗದ ಚಾಲನೆಗೂ ಪೊಲೀಸ್ ಇಲಾಖೆ ಬ್ರೇಕ್ ಹಾಕಲಿದೆ. ಈಗಾಗಲೇ ಪಟ್ಟಣದಲ್ಲಿ ಪ್ರತಿ ದಿನ ತಪಾಸಣಾ ಕಾರ್ಯವನ್ನು ಪೊಲೀಸರು ಮಾಡುತ್ತಿದ್ದಾರೆ.

ದಾಖಲೆ ಇಲ್ಲದ ವಾಹನಗಳಿಗೆ ದಂಡ, ಹೆಲ್ಮೆಟ್ ಇಲ್ಲದಿದ್ರೆ ಕಷ್ಟ 

ತೀರ್ಥಹಳ್ಳಿ ಪಟ್ಟಣ ಸೇರಿ ಹಳ್ಳಿಗಳಲ್ಲೂ ಪೊಲೀಸ್ ಇಲಾಖೆ ವಾಹನಗಳ ದಾಖಲೆ, ಹೆಲ್ಮೆಟ್ ರಹಿತ ಪ್ರಯಾಣದ ಮೇಲೆ ಕಣ್ಣು ಇಟ್ಟಿದೆ. ಪ್ರತಿ ದಿನ ಪೊಲೀಸರು ತಪಾಸಣೆ ನಡೆಸುತ್ತಿದ್ದಾರೆ. ದಾಖಲೆ ಬಗ್ಗೆ ಜಾಗೃತಿ ಇರಲಿ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.