ಶೃಂಗೇರಿ ತಾಲೂಕು ಕ ಸಾ ಪ ಯುವ ಘಟಕದ ರಚನೆ
* ತಾಲೂಕು ಅಧ್ಯಕ್ಷ ಶೃಂಗೇರಿ ಸುಬ್ಬಣ್ಣರಿಂದ ಘೋಷಣೆ
* ಸಚಿನ್ ಗುಬ್ಬಗೋಡು ಯುವ ಘಟಕದ ನೂತನ ಅಧ್ಯಕ್ಷ
NAMMMUR EXPRESS NEWS
ಶೃಂಗೇರಿ: ತಾಲೂಕು ಕನ್ನಡ ಸಾಹಿತ್ತ ಪರಿಷತ್ ತನ್ನ ನೂತನ ಯುವ ಘಟಕದ ಪದಾಧಿಕಾರಿಗಳನ್ನು ಆಯ್ಕೆಮಾಡಿದೆ. ಕಸಾಪ ತಾಲೂಕು ಅಧ್ಯಕ್ಷ ಶೃಂಗೇರಿ ಸುಬ್ಬಣ್ಣ ಅಧ್ಯಕ್ಷತೆಯಲ್ಲಿ ಬುಧವಾರ ಸಂಜೆ ಪಟ್ಟಣದ ಕನ್ನಡ ಭವನದಲ್ಲಿ ನಡೆದ ಸಭೆಯಲ್ಲಿ ಯುವ ಪತ್ರಕರ್ತ ಸಚಿನ್ ಗುಬ್ಬಗೋಡು ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ. ಉಳಿದಂತೆ ಗೌರವ ಕಾರ್ಯದರ್ಶಿಗಳಾಗಿ ಕಲಾವಿದ ಪ್ರೇರಿತ್ ಎಂ.ಬಿ ಮತ್ತು ಯುವ ಕವಯತ್ರಿ ಸಿ.ಚಂದನ,ಕೋಶಾಧ್ಯಕ್ಷರಾಗಿ ಶೃಂಗೇರಿ ಮೆಡಿಕಲ್ಸ್‌ನ ಮಾಲೀಕ ಕೆ.ದೀಕ್ಷಿತ್, ಪ್ರಧಾನ ಸಂಚಾಲಕರಾಗಿ ಕೆ.ಆದರ್ಶ್ ಕಾಂಚೀನಗರ,ಸಂಘಟನಾ ಕಾರ್ಯದರ್ಶಿಗಳಾಗಿ ಯುವ ವರ್ತಕ ಅನ್ವಿತ್ ಕಾಮತ್ ಹಾಗೂ ಕಲಾವಿದ ಅನಿಲ್ ಕುಮಾರ್ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.
ಸಭೆಯಲ್ಲಿ ಕ ಸಾ ಪ ಕಿಗ್ಗಾ ಹೋಬಳಿ ಘಟಕದ ಅಧ್ಯಕ್ಷ ಹೆಚ್.ಟಿ ಮಂಜುನಾಥ್ ನಾಯ್ಕ್, ಕಸಬಾ ಹೋಬಳಿ ಅಧ್ಯಕ್ಷ ಅಂಗುರುಡಿ ದಿನೇಶ್, ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ಸುಮಂಗಲ ಆನಂದಸ್ವಾಮಿ, ತಾ ಕ ಸಾ ಪ ಗೌರವ ಕಾರ್ಯದರ್ಶಿ ಶೂನ್ಯ ರಮೇಶ್,ಸಂಘಟನಾ ಕಾರ್ಯದರ್ಶಿ ಆನಂದಸ್ವಾಮಿ, ಪ್ರಧಾನ ಸಂಚಾಲಕರಾದ ಹೆಚ್ ಕೆ ಯೋಗಪ್ಪ, ರಾಜೇಶ್ ದುರ್ಗಾ ದೇವಸ್ಥಾನ, ಜಗದೀಶ್ ಎಸ್ ಹೆಚ್, ಚೇತನ್, ನಿಸಾರ್ ಅಹಮದ್, ನೇತ್ರಾವತಿ,ಶ್ರೀಧರ್ ರಾವ್ ಮತ್ತಿತರರು ಹಾಜರಿದ್ದರು
