Categories
ಚಿಕ್ಕಮಗಳೂರು

ಜು.27 ರಂದು ಶೃಂಗೇರಿಯಲ್ಲಿ ಉಚಿತ ನೇತ್ರ ತಪಾಸಣೆ ಮತ್ತು ಶಸ್ತ್ರಚಿಕಿತ್ಸಾ ಶಿಬಿರ

ಜು.27 ರಂದು ಶೃಂಗೇರಿಯಲ್ಲಿ ಉಚಿತ ನೇತ್ರ ತಪಾಸಣೆ ಮತ್ತು ಶಸ್ತ್ರಚಿಕಿತ್ಸಾ ಶಿಬಿರ

* ಶ್ರೀ ಅಭಿನವ ವಿದ್ಯಾತೀರ್ಥ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆ ಶೃಂಗೇರಿ ಇವರ ಆಶ್ರಯದಲ್ಲಿ
* ಶ್ರೀಶಾರದಾ ಕಣ್ಣು ಮತ್ತು ದಂತ ಚಿಕಿತ್ಸಾಲಯ ಬೆಂಗಳೂರು ಇವರ ಸಹಯೋಗದಲ್ಲಿ

NAMMMUR EXPRESS NEWS
ಶೃಂಗೇರಿ: ತಾಲೂಕಿನ ಶ್ರೀ ಅಭಿನವ ವಿದ್ಯಾತೀರ್ಥ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಶ್ರೀಶಾರದಾ ಕಣ್ಣು ಮತ್ತು ದಂತ ಚಿಕಿತ್ಸಾಲಯ,ಬೆಂಗಳೂರು ಮತ್ತು ಶ್ರೀಅಭಿನವ ವಿದ್ಯಾತೀರ್ಥ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆ,ಶೃಂಗೇರಿ ಇವರ ಸಂಯುಕ್ತಾಶ್ರಯದಲ್ಲಿ ಉಚಿತ ನೇತ್ರ ತಪಾಸಣೆ ಹಾಗೂ ಶಸ್ತ್ರಚಿಕಿತ್ಸಾ ಶಿಬಿರ ನಡೆಯಲಿದೆ.ಸಾರ್ವಜನಿಕರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶಿಬಿರದ ಸದುಪಯೋಗ ಪಡೆದುಕೊಳ್ಳುವಂತೆ ಆಸ್ಪತ್ರೆಯ ಆಡಳಿತ ಮಂಡಳಿ ಮನವಿ ಮಾಡಿದೆ.
ನೋಂದಣಿ ಸಮಯ:- ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಮಾತ್ರ

ವಿ.ಸೂ:- ಪ್ರತಿ ತಿಂಗಳ ಕೊನೆಯ ಶುಕ್ರವಾರ ಉಚಿತ ನೇತ್ರ ತಪಾಸಣೆ ಹಾಗೂ ಶಸ್ತ್ರಚಿಕಿತ್ಸೆ ನಡೆಸಲಾಗುವುದು.

* ನೇತ್ರ ತಪಾಸಣೆ ಹಾಗೂ ಶಸ್ತ್ರಚಿಕಿತ್ಸೆ ಸಲುವಾಗಿ ಸೂಚನೆಗಳು
1. ಶಸ್ತ್ರಚಿಕಿತ್ಸೆಗೆ ಆಯ್ಕೆಯಾದ ಫಲಾನುಭವಿಗಳು ಆಧಾರ್ ಕಾರ್ಡ್ ಮತ್ತು ರೇಷನ್ ಕಾರ್ಡ್ ಅಥವಾ ಮತದಾರರ ಗುರುತಿನ ಚೀಟಿ ನೀಡುವುದು.

2. ಶಸ್ತ್ರಚಿಕಿತ್ಸೆಗೆ ಆಯ್ಕೆಯಾದವರ ಸೇವೆಗೆ ಉತ್ತಮ ಸೌಲಭ್ಯ ಆಸ್ಪತ್ರೆಯಲ್ಲಿ ಇರುತ್ತದೆ. ಆದರೆ ತಮ್ಮ ಫೋನ್ ಮತ್ತು ಮೊಬೈಲ್ ನಂಬರನ್ನು ಜೊತೆಯಲ್ಲಿ ತರುವುದು ಹಾಗೂ ಶಿಬಿರಕ್ಕೆ ಬರುವವರು ಸ್ನಾನಮಾಡಿ ಸ್ವಚ್ಛವಾದ ಬಟ್ಟೆ ಧರಿಸಿ ಬರುವುದು.
3. ಬಿ.ಪಿ ಮತ್ತು ಸಕ್ಕರೆ ಖಾಯಿಲೆ ಇರುವ ರೋಗಿಗಳು ಔಷಧಿಯನ್ನು ಜೊತೆಯಲ್ಲಿ ತರಬೇಕು ಹಾಗೂ ಶಸ್ತ್ರ ಚಿಕಿತ್ಸೆಗೆ ಮೊದಲು ಬಿ.ಪಿ. ಮತ್ತು ಸಕ್ಕರೆ ಖಾಯಿಲೆ ಹತೋಟಿಯಲ್ಲಿರಬೇಕು.

4. ಶಸ್ತ್ರಚಿಕಿತ್ಸೆಯ ದಿನಾಂಕವನ್ನು ಪ್ರಕಟಿಸಲಾಗುವುದು.

ಹೆಚ್ಚಿನ ಮಾಹಿತಿಗಾಗಿ: 6364327544 ನ್ನು ಸಂಪರ್ಕಿಸಿ

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.