Categories
ಚಿಕ್ಕಮಗಳೂರು

ಚಿಕ್ಕಮಗಳೂರಿನಾದ್ಯಂತ ರಾತ್ರಿಯಿಡೀ ಜಿಟಿಜಿಟಿ ಮಳೆ

ಚಿಕ್ಕಮಗಳೂರಿನಾದ್ಯಂತ ರಾತ್ರಿಯಿಡೀ ಜಿಟಿಜಿಟಿ ಮಳೆ

* 14 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಿದ್ದ ಹವಾಮಾನ ಇಲಾಖೆ
* ಶೃಂಗೇರಿ,ಕೊಪ್ಪ, ಎನ್‌.ಆರ್ ಪುರ,ಕಳಸ,ಮೂಡಿಗೆರೆಯಲ್ಲಿ ಮಳೆಯಾದ ವರದಿ

NAMMMUR EXPRESS NEWS
ಚಿಕ್ಕಮಗಳೂರು: ಹವಾಮಾನ ಇಲಾಖೆಯಿಂದ ಮಳೆಯ ಮುನ್ಸೂಚನೆಯೊಂದಿಗೆ ರಾಜ್ಯದ 14 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆಯಾದ ಬೆನ್ನಲ್ಲೇ ನಿನ್ನೆ ಸಂಜೆಯಿಂದಲೇ ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆ ಶುರುವಾಗಿದ್ದು, ರಾತ್ರಿಯಿಡೀ ಒಂದೇ ಸಮನೇ ಬಿಡದೇ ಜಿಟಿ ಜಿಟಿ ಮಳೆಯಾಗುತ್ತಿದೆ. ಶೃಂಗೇರಿ,ಕೊಪ್ಪ,ಎನ್.ಆರ್ ಪುರ,ಕಳಸ,ಮೂಡಿಗೆರೆ ತಾಲೂಕುಗಳಲ್ಲಿ ಮಳೆಯಾದ ವರದಿಯಾಗಿದೆ.ಇಂದೂ ಕೂಡ ಬೆಳ್ಳಂಬೆಳಿಗ್ಗೆ‌ಯಿಂದ ಸುರಿಯುತ್ತಿರುವ ಮಳೆಯಿಂದ ಒಂಥರಾ ಮಳೆಗಾಲದ ವಾತಾವರಣ ನಿರ್ಮಾಣವಾಗಿದೆ, ಮಲೆನಾಡಿನಲ್ಲಿ ಮಳೆಗಾಲ ಪೂರ್ವದ ಕೆಲ ಕೆಲಸಗಳು ಅರ್ಧಕ್ಕೇ ನಿಂತಿವೆ,ಇನ್ನೊಂದೆಡೆ ಮಳೆಗಾಲವೇ ಶುರುವಾಯಿತು ಎಂದು ರೈತರು ಗದ್ದೆ,ತೋಟದ ಕಡೆ ಮುಖ ಮಾಡಿದ್ದಾರೆ.ಹಲವೆಡೆ ಈ ಅಕಾಲಿಕ ಮಳೆಯಿಂದಾಗಿ ರಸ್ತೆ,ಚರಂಡಿ ಕಾಮಾಗಾರಿಗಳು ಅಸ್ಥವ್ಯಸ್ಥಗೊಂಡಿದೆ. ಕಳೆದ ಬಾರಿಯ ಮಳೆಗೆ ಅಪಾರ ಹಾನಿ ಅನುಭವಿಸಿದ್ದ ಜನತೆ ಈ ಬಾರಿ ಮಳೆ ಇನ್ನು ಹೇಗಿರಲಿದೆ ಎಂದು ಯೋಚಿಸುತ್ತಿದ್ದಾರೆ. ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಪ್ರವಾಸಿಗರಿಂದ ತುಂಬಿರುವ ಕಾಫಿನಾಡಿನ ಎಲ್ಲಾ ತಾಲೂಕುಗಳು ಪ್ರವಾಸಿಗರಿಂದ ಉತ್ತಮ ವ್ಯಾಪಾರಗಳಿಸುತ್ತಿತ್ತು ಈಗ ಮಳೆಯಿಂದಾಗಿ ಪ್ರವಾಸಿಗರ ಸಂಖ್ಯೆಯಿದ್ದರೂ ವ್ಯಾಪಾರಕ್ಕೆ ಜನ ಬಾರದೇ ಸಣ್ಣಪುಟ್ಟ ವ್ಯಾಪಾರಸ್ಥರು ಯೋಚನೆ ಮಾಡುವಂತಾಗಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.