ರಾಷ್ಟ್ರ ಮಟ್ಟದಲ್ಲಿ ಎಕ್ಸೆಲ್ ವಿದ್ಯಾರ್ಥಿಗಳು ಮಿಂಚಿಂಗ್!
– ಏರ್ ಕ್ರಾಫ್ಟ್ ಮೇಂಟೆನೆನ್ಸ್ ಎಂಜಿನಿಯರಿಂಗ್ ಪರೀಕ್ಷೆಯಲ್ಲಿ ರ್ಯಾಂಕ್ ಪಡೆದು ಸಾಧನೆ
– ರಾಷ್ಟ್ರಮಟ್ಟದ ಸ್ಕಾಲರ್ ಶಿಪ್ಗೆ ಅರ್ಹರಾಗಿರುವ ಎಕ್ಸೆಲ್ ವಿದ್ಯಾರ್ಥಿಗಳು
NAMMUR EXPRESS NEWS
ಬೆಳ್ತಂಗಡಿ: ಅಖಿಲ ಭಾರತ ಮಟ್ಟದಲ್ಲಿ ನಡೆಯುವ ಏರ್ ಕ್ರಾಫ್ಟ್ ಮೇಂಟೆನೆನ್ಸ್ ಎಂಜಿನಿಯರಿಂಗ್ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಗುರುವಾಯನಕೆರೆ
ಎಕ್ಸೆಲ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಸಾಧನೆ ಮಾಡಿ ಮಾದರಿ ವಿದ್ಯಾರ್ಥಿಗಳಾಗಿದ್ದಾರೆ.
ಹೌದು ಪರೀಕ್ಷೆ ಬರೆದ ವಿದ್ಯಾರ್ಥಿಗಳಾದ ಧ್ರುವ ಅನೂಪ್, ಮನ್ವಿತ್ ಎಂ.ಬಿ, ಗೌತಮ್ ಎಸ್, ಇಂಚರಾ ಟಿ.ಆರ್, ನೇಹನ್ ಯು, ವರ್ಷಿತಾ ಎಲ್.ಬಿ, ರೋಹಿತ್ ಎಂ, ಶ್ರೀಲಕ್ಷ್ಮೀ ಅವರು ರ್ಯಾಂಕ್ ಗಳಿಸಿ ರಾಷ್ಟ್ರಮಟ್ಟದ ಸ್ಕಾಲರ್ ಶಿಪ್ಗೆ ಅರ್ಹರಾಗಿದ್ದಾರೆ ಎಂದು ಎಕ್ಸೆಲ್ ವಿದ್ಯಾ ಸಂಸ್ಥೆಗಳ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಅವರು ತಿಳಿಸಿದ್ದಾರೆ.
